Tag: ಬೆಂಕಿ

  • ಮೊರಾದಾಬಾದ್ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ – ಓರ್ವ ಮಹಿಳೆ ಸಾವು, ಆರು ಮಂದಿಗೆ ಗಾಯ

    ಮೊರಾದಾಬಾದ್ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ – ಓರ್ವ ಮಹಿಳೆ ಸಾವು, ಆರು ಮಂದಿಗೆ ಗಾಯ

    ಲಕ್ನೋ: ಉತ್ತರಪ್ರದೇಶದ ಮೊರಾದಾಬಾದ್‌ನ (Moradabad) ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ (Fire) ಅವಘಡ ಸಂಭವಿಸಿ, ಓರ್ವ ಮಹಿಳೆ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

    ಮಾಯಾ (56) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೊರಾದಾಬಾದ್‌ನ ಶ್ರೀರಾಂಪುರ ರೋಡ್ ಬಳಿಯಿರುವ 5 ಅಂತಸ್ತಿನ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನೆಲ ಮಹಡಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು. ಪರಿಣಾಮ 4 ಸಿಲಿಂಡರ್‌ಗಳು ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆಯು ಇತರ ಇತರ ಮಹಡಿಗಳಿಗೆ ಹರಡಿತ್ತು. ಇದನ್ನೂ ಓದಿ: CJI ಗವಾಯಿ ಮೇಲೆ ಶೂ ಎಸೆದ ಕೇಸ್ – ಆರೋಪಿ ರಾಕೇಶ್‌ಗೆ ನೋಟಿಸ್ ನೀಡಲು ನಿರಾಕರಿಸಿದ ಸುಪ್ರೀಂ

    ಈ ಬಗ್ಗೆ ಮೊರಾದಾಬಾದ್ ಸಿಎಫ್‌ಒ ರಾಜೀವ್ ಕುಮಾರ್ ಪಾಂಡೆ ಮಾತನಾಡಿ, ರಾತ್ರಿ 10 ಗಂಟೆಗೆ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಕರೆ ಬಂದಿತ್ತು. ಬೆಂಕಿಯ ತೀವ್ರಗೆ ಸುಮಾರು ನಾಲ್ಕು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿತ್ತು. ರೆಸ್ಟೋರೆಂಟ್‌ನಲ್ಲಿದ್ದ ಸುಮಾರು 16 ಜನರನ್ನು ರಕ್ಷಿಸಿದ್ದೇವೆ. ಇದರಲ್ಲಿ ನಾಲ್ಕು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ, ಒಂದು ನಾಯಿಯ ರಕ್ಷಣೆ ಮಾಡಿದ್ದೇವೆ. ಬೆಂಕಿಯ ನಿಖರ ಕಾರಣ ತಿಳಿದುಬಂದಿಲ್ಲ ಎಂದಿದ್ದಾರೆ.

    ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯ ತುರ್ತು ವೈದ್ಯಕೀಯ ಅಧಿಕಾರಿ ಡಾ. ಜುನೈದ್ ಅಸಾರಿ ಅವರು ಮಾತನಾಡಿ, ಒಟ್ಟು ಏಳು ರೋಗಿಗಳನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅವರಲ್ಲಿ ಒಬ್ಬರಾದ 56 ವರ್ಷ ವಯಸ್ಸಿನ ಮಾಯಾ ಮೃತಪಟ್ಟಿದ್ದಾರೆ. ಉಳಿದ ರೋಗಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

  • ಬೈಕ್‌ ಡಿಕ್ಕಿ, ಧಗಧಗಿಸಿದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು – 20ಕ್ಕೂ ಹೆಚ್ಚು ಮಂದಿ ಸಜೀವ ದಹನ

    ಬೈಕ್‌ ಡಿಕ್ಕಿ, ಧಗಧಗಿಸಿದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು – 20ಕ್ಕೂ ಹೆಚ್ಚು ಮಂದಿ ಸಜೀವ ದಹನ

    – ಕರ್ನೂಲ್‌ ಬಳಿಯ ಚಿನ್ನಟೇಕೂರು ಬಳಿ ದುರಂತ
    – ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವೋಲ್ವೋ ಬಸ್ಸು

    ಹೈದರಾಬಾದ್‌: ಆಂಧ್ರದ ಕರ್ನೂಲ್‌ (Kurnool) ಬಳಿಯ ಚಿನ್ನಟೇಕೂರು ಬಳಿ ಘನಘೋರ ದುರಂತ ಸಂಭವಿಸಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ (Hydearbad-Bengaluru) ಬರುತ್ತಿದ್ದ ಖಾಸಗಿ ಬಸ್ಸು ಹೊತ್ತಿ ಉರಿದು ಕನಿಷ್ಠ 20ಕ್ಕೂ ಹೆಚ್ಚು ಜನ ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ.

    ಕಾವೇರಿ ಹೆಸರಿನ ವೋಲ್ವೋ ಬಸ್ಸಿನಲ್ಲಿ 44 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶುಕ್ರವಾರ ಬಳಗಿನ ಜಾವ 3 ಗಂಟೆಯ ವೇಳೆಗೆ ವೇಗವಾಗಿ ಬಂದ ಬೈಕ್‌ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.  ಡಿಕ್ಕಿ ಹೊಡೆದ ನಂತರ ಬೈಕ್‌ ಬಸ್ಸಿನ ಕೆಳಗಡೆಯಿಂದ ಮುಂದಕ್ಕೆ ಹೋಗಿ ಇಂಧನ ಟ್ಯಾಂಕ್‌ಗೆ ಬಡಿದಿದೆ. ಹಿಂಭಾಗದಲ್ಲಿರುವ ಇಂಧನ ಟ್ಯಾಂಕ್‌ಗೆ ಬೈಕ್‌ ಡಿಕ್ಕಿ ಬಡಿದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷದಲ್ಲಿ ಬೆಂಕಿ ಇಡೀ ಬಸ್ಸನ್ನು ಆವರಿಸಿದೆ.

    ಬಸ್ಸಿನಲ್ಲಿದ್ದ 12 ಮಂದಿ ಪ್ರಯಾಣಿಕರು ಪಾರಾದರೂ ಕನಿಷ್ಠ 25 ಮಂದಿ ಜೀವಂತವಾಗಿ ಸುಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಪ್ರಯಾಣಿಕರನ್ನು ಕರ್ನೂಲ್ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

    ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿದವು.  ರಕ್ಷಣಾ ತಂಡಗಳು ಸ್ಥಳಕ್ಕೆ ಬರುವಷ್ಟರಲ್ಲಿ ಬಸ್ಸು ಬಹುತೇಕ ಸುಟ್ಟುಹೋಗಿತ್ತು. ಈಗ ಅಧಿಕಾರಿಗಳು ಮೃತ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕೆಲಸ ಆರಂಭಿಸಿದ್ದಾರೆ.

    ಸ್ಲೀಪರ್‌ ಕೋಚ್‌ ಬಸ್ಸು ಆಗಿದ್ದ ಕಾರಣ ಪ್ರಯಾಣಿಕರು ನಿದ್ದೆ ಮಾಡುತ್ತಿದ್ದರು. ಸಾಧಾರಣವಾಗಿ ವೋಲ್ವೋ ಬಸ್ಸಿನಲ್ಲಿ ಕಿಟಕಿಯ ಗಾಜುಗಳು ಸಂಪೂರ್ಣವಾಗಿ ಲಾಕ್‌ ಆಗಿರುತ್ತದೆ. ಹೀಗಿದ್ದರೂ ಬೆಂಕಿ ಕಾಣಿಸಿದ ಕೂಡಲೇ ಕೆಲ ಪ್ರಯಾಣಿಕರು ಗಾಜನ್ನು ಒಡೆದು ಕೆಳಗೆ ಹಾರಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

  • ದೆಹಲಿಯಲ್ಲಿ ರಾಜ್ಯಸಭಾ ಸಂಸದರಿಗೆ ಹಂಚಲಾಗಿದ್ದ ಅಪಾರ್ಟ್‌ಮೆಂಟ್‌ಗಳಲ್ಲಿ ಭಾರಿ ಬೆಂಕಿ ಅವಘಡ

    ದೆಹಲಿಯಲ್ಲಿ ರಾಜ್ಯಸಭಾ ಸಂಸದರಿಗೆ ಹಂಚಲಾಗಿದ್ದ ಅಪಾರ್ಟ್‌ಮೆಂಟ್‌ಗಳಲ್ಲಿ ಭಾರಿ ಬೆಂಕಿ ಅವಘಡ

    ನವದೆಹಲಿ: ದೆಹಲಿಯಲ್ಲಿ (Delhi) ಸಂಸತ್ ಸದಸ್ಯರಿಗೆ ಹಂಚಿಕೆಯಾದ ಫ್ಲ್ಯಾಟ್‌ಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

    ಬಿಡಿ ಮಾರ್ಗದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ಗಳಿಂದ ಹೊಗೆ ಮೇಲೇರುತ್ತಿರುವ ದೃಶ್ಯ ಕಂಡುಬಂದಿದೆ. ಅದನ್ನು ಈಗ ನಂದಿಸಲಾಗಿದೆ. ರಾಜಧಾನಿಯ ಬಿಶಂಭರ್ ದಾಸ್ ಮಾರ್ಗದಲ್ಲಿರುವ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ಗಳು ರಾಜ್ಯಸಭಾ ಸಂಸದರ ವಸತಿ ಸಂಕೀರ್ಣವಾಗಿದೆ. ಇದನ್ನೂ ಓದಿ: ಪಂಜಾಬ್‌ | ಗರೀಬ್ ರಥ ಎಕ್ಸ್‌ಪ್ರೆಸ್ ರೈಲು ಬೋಗಿಗೆ ಬೆಂಕಿ – ಧಗಧಗಿಸಿದ ಜ್ವಾಲೆ; ಪ್ರಯಾಣಿಕರು ಸೇಫ್‌

    ಮಧ್ಯಾಹ್ನ 1:20 ಕ್ಕೆ ಅಗ್ನಿಶಾಮಕ ಇಲಾಖೆಗೆ ಬೆಂಕಿಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಆರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

    ಅಪಾರ್ಟ್ಮೆಂಟ್‌ನಲ್ಲಿರುವ ಅಗ್ನಿಶಾಮಕ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಟ್ಯಾಂಕ್ ಮತ್ತು ಪೈಪ್‌ಲೈನ್‌ಗಳಲ್ಲಿ ನೀರಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬೆಂಕಿಯಿಂದ ಅಪಾರ್ಟ್‌ಮೆಂಟ್‌ ಕೆಳಗಿನ ಎರಡು ಮಹಡಿಗಳಿಗೆ ಭಾರಿ ಹಾನಿಯಾಗಿದೆ. ಇದನ್ನೂ ಓದಿ: ಕದನ ವಿರಾಮ ಉಲ್ಲಂಘಿಸಿ ಪಾಕ್ ಏರ್‌ಸ್ಟ್ರೈಕ್‌ – ಮೂವರು ಅಫ್ಘಾನ್‌ ಕ್ರಿಕೆಟಿಗರು ಸಾವು; ರಶೀದ್‌ ಖಾನ್‌ ಖಂಡನೆ

  • ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್ – 19 ಪ್ರಯಾಣಿಕರು ಸಜೀವ ದಹನ

    ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ ಹೊತ್ತಿ ಉರಿದ ಬಸ್ – 19 ಪ್ರಯಾಣಿಕರು ಸಜೀವ ದಹನ

    ಜೈಪುರ: ಚಲಿಸುತ್ತಿದ್ದ ಖಾಸಗಿ ಬಸ್ಸಿನಲ್ಲಿ (Bus) ಬೆಂಕಿ ಕಾಣಿಸಿಕೊಂಡ ಪರಿಣಾಮ 19 ಮಂದಿ ಪ್ರಯಾಣಿಕರು ಸಜೀವ ದಹನವಾಗಿರುವ ಘಟನೆ ಜೈಸಲ್ಮೇರ್-ಜೋಧಪುರ ಹೆದ್ದಾರಿಯಲ್ಲಿ (Jaisalmer–Jodhpur Highway) ನಡೆದಿದೆ.

    ಒಟ್ಟು 57 ಮಂದಿ ಪ್ರಯಾಣಿಕರನ್ನು ಜೈಸಲ್ಮೇರ್‌ನಿಂದ ಜೋಧಪುರಕ್ಕೆ ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಬಸ್ ಅನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದಾನೆ. ಅಷ್ಟುಹೊತ್ತಿಗಾಗಲೇ ಬೆಂಕಿ ಸಂಪೂರ್ಣ ಬಸ್ ಅನ್ನು ಆವರಿಸಿಕೊಂಡಿದ್ದು, 19 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಟ್ರಂಪ್‌ಗೆ ಗೂಗಲ್‌ ಟಕ್ಕರ್‌| ವಿಶಾಖಪಟ್ಟಣದಲ್ಲಿ ಎಐ-ಹಬ್‌ಗಾಗಿ 1500 ಕೋಟಿ ಡಾಲರ್‌ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ

    ಘಟನೆ ನಡೆದ ತಕ್ಷಣವೇ ಸ್ಥಳೀಯರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಅಲ್ಲದೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಜೈಸಲ್ಮೇರ್‌ನ ಜವಾಹರ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: Udupi | ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲು

    ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಜೈಸಲ್ಮೇರ್ ಜಿಲ್ಲಾಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಿದೆ. ಇದನ್ನೂ ಓದಿ: ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ – ಸ್ಪೀಕರ್‌ಗೆ ಕೊಟ್ಟಿಲ್ಲ ಟಿಕೆಟ್

    ಗಾಯಾಳುಗಳಿಗೆ ತಕ್ಷಣ ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೇ ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ. ಮಾಹಿತಿ ತಿಳಿದ ತಕ್ಷಣ ಸಿಎಂ ಭಜನ್‌ಲಾಲ್ ಶರ್ಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಇದನ್ನೂ ಓದಿ: ಅ.22 ರಂದು ಶಬರಿಮಲೆಗೆ ದ್ರೌಪದಿ ಮುರ್ಮು ಭೇಟಿ

    ರಾಜ್ಯಪಾಲ ಹರಿಭಾವು ಬಗಾಡೆ, ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ಮತ್ತು ಇತರ ನಾಯಕರು ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಮೀನಿಗೆ ತೆಂಗಿನಕಾಯಿ ಕೀಳಲು ಹೋಗಿದ್ದಾಗ ಅವಘಡ – ಅಕ್ರಮ ವಿದ್ಯುತ್ ಪ್ರವಹಿಸಿ ಇಬ್ಬರು ಸಾವು

  • Kolar | ಕಿಡಿಗೇಡಿಗಳಿಂದ ಮನೆಗೆ ಬೆಂಕಿ – 4 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ

    Kolar | ಕಿಡಿಗೇಡಿಗಳಿಂದ ಮನೆಗೆ ಬೆಂಕಿ – 4 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ

    ಕೋಲಾರ: ಕಿಡಿಗೇಡಿಗಳು ಮನೆಗೆ ಬೆಂಕಿ (Fire) ಹಾಕಿದ ಪರಿಣಾಮ ಮನೆಯಲ್ಲಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚೀಟಿಂವಾರಪಲ್ಲಿ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ. ಚೀಟಿಂವಾರಪಲ್ಲಿ ಗ್ರಾಮದ ರೈತ ಜಯರಾಮ್ ಎಂಬವರಿಗೆ ಸೇರಿದ ಮನೆಗೆ ದುಷ್ಕರ್ಮಿಗಳು ಬೆಂಕಿ ಹಾಕಿದ ಹಿನ್ನೆಲೆ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಜಯರಾಮ್ ಅವರು ಊರಿನಲ್ಲಿ ಮನೆ ಕೆಲಸ ಮಾಡಿಸುತ್ತಿರುವ ಕಾರಣ ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ತೋಟದ ಮನೆಯಲ್ಲಿಡಲಾಗಿತ್ತು. ಇದನ್ನೂ ಓದಿ: ‘ಐ ಲವ್ ಮುಹಮ್ಮದ್’ ಅಭಿಯಾನಕ್ಕೆ 5 ದಿನಗಳ ಪ್ಲ್ಯಾನಿಂಗ್ – ಯುಪಿ ಪೊಲೀಸರ ತನಿಖೆಯಲ್ಲಿ ಬಯಲು

    ಬೆಂಕಿಯಿಂದ ಮನೆಯಲ್ಲಿದ್ದ ರಸಗೊಬ್ಬರ, ಮನೆ ಸಾಮಾನುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸುಮಾರು 4 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬೆಂಕಿಯಿಟ್ಟಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಸಮಸ್ಯೆಗಳ ನಡ್ವೆ ನಾಯಿಗಳ ಭಯ; ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಗೆ ಜರ್ಮನ್ ಶೆಫರ್ಡ್ ನಾಯಿ ಕಡಿತ!

  • Kolar | ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿಗೆ ಬೆಂಕಿ – 25 ಲಕ್ಷ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ

    Kolar | ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿಗೆ ಬೆಂಕಿ – 25 ಲಕ್ಷ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿ

    ಕೋಲಾರ: ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿ (Textile Shop) ಬೆಂಕಿಗೆ ಆಹುತಿಯಾಗಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಕೋಲಾರದ ಎಂ.ಜಿ.ರಸ್ತೆಯಲ್ಲಿರುವ ಬ್ರಾಂಡೆಡ್ ಫ್ಯಾಕ್ಟರಿ ಅಂಗಡಿಗೆ ಬೆಂಕಿ ಬಿದ್ದು ಅಂಗಡಿಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿದೆ. ಬಟ್ಟೆ ವ್ಯಾಪಾರಿ ಹಾಗೂ ಮಾಲೀಕ ಇಕ್ರಂ ಪಾಷಾ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಮಧ್ಯಾಹ್ನ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಯಲ್ಲಿದ್ದ 20ರಿಂದ 25 ಲಕ್ಷ ರೂ. ಮೌಲ್ಯದ ಬಟ್ಟೆಗಳು ಹಾಗೂ ಕೆಲ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ತರಾತುರಿ ಜಾತಿಗಣತಿ, ಜಾತಿಗಳ ಜೊತೆ ಕ್ರಿಶ್ಚಿಯನ್ ಧರ್ಮ ಸೇರಿಸುವುದು ಬೇಡ: ನಿರ್ಮಲಾನಂದ ಶ್ರೀಗಳ ಎಚ್ಚರಿಕೆ

    ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಕಿ ಧಗಧಗವೆಂದು ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಕಟ್ಟಡಗಳಿಗೆ ಆವರಿಸುವ ಮೂಲಕ ಆತಂಕ ಮನೆಮಾಡಿತ್ತು. ಅಲ್ಲದೆ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಕೆಲ ಕಾಲ ಹರಸಾಹಸ ಪಡಬೇಕಾಗಿತ್ತು. ಇನ್ನು ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಸಿಎಂ ಆಗೋಕೆ ಹೆಲಿಕಾಪ್ಟರ್ ಖರೀದಿಸಿದ್ದಾರೆ ಅನ್ನೋದು ತಪ್ಪು ಕಲ್ಪನೆ – ಸತೀಶ್ ಜಾರಕಿಹೊಳಿ ಪರ ಬೋಸರಾಜು ಬ್ಯಾಟಿಂಗ್

  • ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಕಾರು – ಯುವಕ ಸಜೀವ ದಹನ

    ಆಕಸ್ಮಿಕ ಬೆಂಕಿಯಿಂದ ಹೊತ್ತಿ ಉರಿದ ಕಾರು – ಯುವಕ ಸಜೀವ ದಹನ

    ಚಿತ್ರದುರ್ಗ: ಕಾರಿನಲ್ಲಿ (Car) ಆಕಸ್ಮಿಕವಾಗಿ ಬೆಂಕಿ (Fire) ಕಾಣಿಸಿಕೊಂಡು ಹೊತ್ತಿ ಉರಿದ ಪರಿಣಾಮ ಕಾರಿನಲ್ಲಿದ್ದ ಯುವಕನೋರ್ವ ಸಜೀವ ದಹನವಾಗಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕಿನ ಅರಳೀಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಅರಳೀಕಟ್ಟೆ ಗ್ರಾಮದ ಸಿದ್ದೇಶ್ವರ್ (35) ಮೃತ ದುರ್ದೈವಿ. ಸಿದ್ದೇಶ್ವರ್ ಟಾಟಾ ನೆಕ್ಸಾನ್ ಕಾರಿನಲ್ಲಿ ಹಿರಿಯೂರಿನಿಂದ ಅರಳೀಕಟ್ಟೆಗೆ ಮರಳುತ್ತಿದ್ದರು. ಈ ವೇಳೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ. ಇದನ್ನೂ ಓದಿ: ವಿಜಯಪುರ| SBI ಬ್ಯಾಂಕ್‌ ದರೋಡೆ – ಪಿಸ್ತೂಲ್‌ ತೋರಿಸಿ 8 ಕೋಟಿ ನಗದು, 50 ಕೆಜಿ ಚಿನ್ನದೊಂದಿಗೆ ಪರಾರಿ

    ಬೆಂಕಿಯ ಕೆನ್ನಾಲಿಗೆ ಸಿಲುಕಿ ಕಾರಿನಲ್ಲಿದ್ದ ಸಿದ್ದೇಶ್ವರ್ ಸಂಪೂರ್ಣ ಸುಟ್ಟು ಹೋಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್, ಸಿಪಿಐ ಗುಡ್ಡಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಥಿನ್ನರ್ ಬಾಟಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ – ಗಂಭೀರ ಸ್ಥಿತಿಯಲ್ಲಿದ್ದ ತಂದೆಯೂ ಸಾವು

    ಥಿನ್ನರ್ ಬಾಟಲಿ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣ – ಗಂಭೀರ ಸ್ಥಿತಿಯಲ್ಲಿದ್ದ ತಂದೆಯೂ ಸಾವು

    ಧಾರವಾಡ: ಥಿನ್ನರ್ ಬಾಟಲಿ ಜಾರಿ ಬಿದ್ದು ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ತಂದೆಯೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಂದು ಮೃತಪಟ್ಟಿದ್ದಾರೆ.

    ಚಂದ್ರಕಾಂತ್ ಮಾಶ್ಯಾಳ ಮೃತ ದುರ್ದೈವಿ. ಧಾರವಾಡದ (Dharwad) ಸಂತೋಷ್ ನಗರದಲ್ಲಿ ಮನೆಯಲ್ಲಿ ಕಳೆದ ಶುಕ್ರವಾರ (ಆ.15) ಬೆಂಕಿ ಕಾಯಿಸಿಕೊಳ್ಳಲೆಂದು ಕುಪ್ಪಡಿ ಇಡಲಾಗಿತ್ತು. ಈ ವೇಳೆ ಅಲ್ಲೇ ಆಟವಾಡುತ್ತಿದ್ದ 4 ವರ್ಷದ ಅಗಸ್ತ್ಯ ಥಿನ್ನರ್ ಬಾಟಲಿಯನ್ನು ಕೆಡವಿದ್ದ. ಈ ವೇಳೆ ಥಿನ್ನರ್‌ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಬಾಲಕನ ದೇಹ ಸುಟ್ಟು ಹೋಗಿತ್ತು. ಮಗನನ್ನು ಕಾಪಾಡಲು ಹೋಗಿದ್ದ ಚಂದ್ರಕಾಂತ್‌ಗೆ ಸಹ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಕೂಡಲೆ ಮನೆಯವರು ತಂದೆ, ಮಗನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ – 4 ವರ್ಷದ ಬಾಲಕ ಸಾವು

    ಅಷ್ಟರಲ್ಲಾಗಲೇ ಬಾಲಕ ಅಗಸ್ತ್ಯ ಮೃತಪಟ್ಟಿದ್ದ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಕಾಂತ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದೀಗ ತಂದೆ, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

  • ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ – 4 ವರ್ಷದ ಬಾಲಕ ಸಾವು

    ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ – 4 ವರ್ಷದ ಬಾಲಕ ಸಾವು

    ಧಾರವಾಡ: ಮನೆಯಲ್ಲಿ ಇಟ್ಟಿದ್ದ ಥಿನ್ನರ್ ಬಾಟಲಿ ಉರುಳಿ ಬಿದ್ದು ಬೆಂಕಿ ಹತ್ತಿಕೊಂಡು ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಧಾರವಾಡದ (Dharwad) ಕೆಲಗೇರಿಯ (Kelageri) ಸಂತೋಷ ನಗರದಲ್ಲಿ ನಡೆದಿದೆ.

    ಅಗಸ್ತ್ಯ ಮಾಶಾಳ್ (4) ಮೃತ ಬಾಲಕನೆಂದು ಗುರುತಿಸಲಾಗಿದೆ. ಮನೆಯಲ್ಲಿ ಬೆಂಕಿ ಕಾಯಿಸಿಕೊಳ್ಳಲೆಂದು ಕುಪ್ಪಡಿಗೆ ಇಡಲಾಗಿತ್ತು. ಅದರ ಪಕ್ಕದಲ್ಲೇ ಥಿನ್ನರ್ ಬಾಟಲಿ (Tinner Bottle) ಕೂಡ ಇತ್ತು. ಬಾಲಕ ಅಗಸ್ತ್ಯ ಆಟವಾಡುತ್ತ ಆ ಥಿನ್ನರ್ ಬಾಟಲಿಯ ಹತ್ತಿರ ಹೋಗಿ ಅದನ್ನು ಕೆಡವಿದ್ದಾನೆ. ತಕ್ಷಣವೇ ಥಿನ್ನರ್‌ಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಬಾಲಕನ ದೇಹ ಸುಟ್ಟು ಹೋಗಿತ್ತು. ಇದನ್ನೂ ಓದಿ: ಬಲವಂತದ ಮತಾಂತರ, ಮೋಸದ ಮದ್ವೆ – ಪಾಕಿಸ್ತಾನದ ವ್ಯಕ್ತಿ ಹೈದರಾಬಾದ್‌ನಲ್ಲಿ ಅರೆಸ್ಟ್

    ಈ ಘಟನೆಯಲ್ಲಿ ಬಾಲಕನನ್ನು ಉಳಿಸಲು ಹೋದ ತಂದೆಗೂ ಗಾಯವಾಗಿದೆ. ಕೂಡಲೇ ಇಬ್ಬರನ್ನೂ ಕಿಮ್ಸ್ಗೆ ರವಾನಿಸಲಾಗಿತ್ತು. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

    ಬೆಂಕಿ ಹತ್ತಿದ್ದ ವೇಳೆ ಮನೆಯಲ್ಲಿದ್ದವರು ಚೀರಾಡುತ್ತಿದ್ದ ಹಾಗೂ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಗಾಯಗೊಂಡಿರುವ ಬಾಲಕ ತಂದೆಗೆ ಚಿಕಿತ್ಸೆ ಮುಂದುವರೆದಿದೆ. ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • Tumakuru | ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

    Tumakuru | ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು

    ತುಮಕೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು (Car) ಹೊತ್ತಿ ಉರಿದ ಘಟನೆ ತುಮಕೂರು (Tumakuru) ಜಿಲ್ಲೆ ಗುಬ್ಬಿ (Gubbi) ತಾಲೂಕಿನ ಯಲ್ಲಾಪುರ ಗೇಟ್ ಬಳಿ ನಡೆದಿದೆ.

    ತುಮಕೂರಿನಿಂದ ಹೊಸದುರ್ಗದ ಕಡೆ ಸಾಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಿಂದ ಚಾಲಕ ಇಳಿದಿದ್ದಾರೆ. ಬಳಿಕ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಷ್ಟರಲ್ಲಿ ಕಾರು ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಡಿಕೆಶಿ ಭರವಸೆ ನೀಡಿದ್ದಾರೆ, ನಾನೇ ಮುಂದಿನ KMF ಅಧ್ಯಕ್ಷ: ನಂಜೇಗೌಡ

    ಹೇಮಂತ್ ಎಂಬವರಿಗೆ ಸೇರಿದ ಡಸ್ಟರ್ ಕಾರು ಬೆಂಕಿಗಾಹುತಿಯಾಗಿದೆ. ತುಮಕೂರು ಕಡೆಯಿಂದ ಹೊಸದುರ್ಗದ ಬಳಿಯ ಮನೆಗೆ ತೆರಳುವಾಗ ಘಟನೆ ನಡೆದಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ವ್ಯವಸ್ಥೆ ಸರಿಪಡಿಸಲು ಕರ್ನಾಟಕ ಸಿಎಸ್‌ಗೆ ಸೂಚಿಸಿ – ಕೇಂದ್ರಕ್ಕೆ ಡಾ.ಕೆ.ಸುಧಾಕರ್ ಆಗ್ರಹ