Tag: ಬೃಹತ್ ಮರ

  • ಬೆಂಗಳೂರಲ್ಲಿ ಧರೆಗೆ ಉರುಳಿದ ಬೃಹತ್ ಮರದ ಕೊಂಬೆ – ನಾಲ್ವರು ಜಸ್ಟ್ ಮಿಸ್!

    ಬೆಂಗಳೂರಲ್ಲಿ ಧರೆಗೆ ಉರುಳಿದ ಬೃಹತ್ ಮರದ ಕೊಂಬೆ – ನಾಲ್ವರು ಜಸ್ಟ್ ಮಿಸ್!

    ಬೆಂಗಳೂರು: ಬೃಹತ್ ಮರದ ಕೊಂಬೆಯೊಂದು ಧರೆಗುರುಳಿದ್ದು, ನಾಲ್ವರು ಕ್ಷಣಾರ್ಧದಲ್ಲಿ ಪಾರಾಗಿರುವ ಘಟನೆ ಬೆಂಗಳೂರಿನ (Bengaluru) ಮೈಸೂರು ಬ್ಯಾಂಕ್ (Mysuru Bank) ಸರ್ಕಲ್ ಬಳಿಯ ಪ್ಯಾಲೇಸ್ ರೋಡ್‌ನ (Palace Road) ಅಂಡರ್‌ಪಾಸ್ ಬಳಿ ನಡೆದಿದೆ.

    ನಿನ್ನೆ (ಡಿ.06) ರಾತ್ರಿ 11:20ರ ಸುಮಾರಿಗೆ ಈ ಅವಘಡ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರದ ಕೊಂಬೆಯೊಂದು ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಚಾಲಕ ಕಾರ್ತಿಕ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.ಇದನ್ನೂ ಓದಿ: ಗೇಮಿಂಗ್ ಆಪ್‍ನಲ್ಲಿ 3 ಕೋಟಿ ಹಣ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ

    ಮಗು ಸೇರಿದಂತೆ ನಾಲ್ವರು ಕಾರಿನಲ್ಲಿ ಆರ್.ಟಿ ನಗರ (RT Nagar) ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪ್ಯಾಲೇಸ್ ರೋಡ್‌ನ ಅಂಡರ್‌ಪಾಸ್ ಬಳಿ ಮರದ ಕೊಂಬೆ ಕಾರಿನ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಂಡರ್‌ಪಾಸ್‌ನ ತಡೆಗೋಡೆಯಿಂದಾಗಿ ನಾಲ್ವರ ಜೀವ ಉಳಿದಿದೆ.

    ಕಾರು ರೋಡಿನ ಮಧ್ಯ ಭಾಗದಲ್ಲಿದ್ದ ಕಾರಣ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದು ಟ್ರಾಫಿಕ್ ಕ್ಲಿಯರ್ ಮಾಡಿದರು. ತಡರಾತ್ರಿ 1 ಗಂಟೆ ಸುಮಾರಿಗೆ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದ್ದಾರೆ.ಇದನ್ನೂ ಓದಿ: ಸೈಕ್ಲೋನ್ ಎಫೆಕ್ಟ್; ತರಕಾರಿ ಬೆಲೆ ಗಗನಕ್ಕೆ – ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

  • 100 ವರ್ಷದ ಹಳೆಯ ಮರ ಶೆಡ್ ಮೇಲೆ ಬಿದ್ದು 7 ಮಂದಿ ದಾರುಣ ಸಾವು

    100 ವರ್ಷದ ಹಳೆಯ ಮರ ಶೆಡ್ ಮೇಲೆ ಬಿದ್ದು 7 ಮಂದಿ ದಾರುಣ ಸಾವು

    ಮುಂಬೈ: ಮಹಾರಾಷ್ಟ್ರ (Maharastra) ದಲ್ಲಿ ಸುರಿದ ಭಾರೀ ಮಳೆ (Rain) ಗೆ 100 ವರ್ಷ ಹಳೆಯ ಬೃಹತ್ ಮರವೊಂದು ಉರುಳಿ ಶೆಡ್ (Tree Falls On Shed) ಮೇಲೆ ಬಿದ್ದಿದೆ. ಪರಿಣಾಮ ಕನಿಷ್ಠ 7 ಮಂದಿ ಮೃತಪಟ್ಟು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಈ ಘಟನೆ ಮಹಾರಾಷ್ಟ್ರದ ಅಕೋಲಾ (Akola) ದಲ್ಲಿ ನಡೆದಿದೆ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ದೇಗುಲವೊಂದರ ಮುಂಭಾಗದಲ್ಲಿ ಧಾರ್ಮಿಕ ಸಮಾರಂಭ ನಡೆಯುತ್ತಿತ್ತು. ಭಾರೀ ಮಳೆ ಹಾಗೂ ಗಾಳಿ ಹಿನ್ನೆಲೆಯಲ್ಲಿ ಭಕ್ತರು ಶೆಡ್ ಅಡಿಯಲ್ಲಿ ನಿಂತಿದ್ದರು. ಈ ವೇಳೆ ಬೃಹತ್ ಬೇವಿನ ಮರ ಶೆಡ್ ಮೇಲೆ ಬಿದ್ದಿದೆ. ಇದನ್ನೂ ಓದಿ: ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ

    ಸುಮಾರು 40 ಮಂದಿ ಶೆಡ್ ಅಡಿಯಲ್ಲಿ ನಿಂತಿದ್ದು, ಮರ ಬಿದ್ದ ಪರಿಣಾಮ ಅದರಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. 5 ಮಂದಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಅಕೋಲಾದ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ದುರ್ಘಟನೆ ನಡೆಯುತ್ತಿದ್ದಂತೆಯೇ ಮಾಹಿತಿ ಅರಿತ ಪೊಲೀಸರ ತಂಡ ಹಾಗೂ ಅಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ನಡೆಸಿತು. ಜೆಸಿಬಿಯನ್ನು ಕೂಡ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು.

    ಘಟನೆ ಸಂಬಂಧ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಸಂತಾಪ ಸೂಚಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಏಕನಾಥ್ ಶಿಂಧೆ (Eknath Shinde) ನೇತೃತ್ವದ ಮಹಾರಾಷ್ಟ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಹೇಳಿದ್ದಾರೆ.

  • ಧರೆಗುರುಳಿದ ಬೃಹತ್ ಆಲದ ಮರ- ಶತಮಾನಗಳ ಇತಿಹಾಸವುಳ್ಳ ದೇಗುಲ ಜಖಂ

    ಧರೆಗುರುಳಿದ ಬೃಹತ್ ಆಲದ ಮರ- ಶತಮಾನಗಳ ಇತಿಹಾಸವುಳ್ಳ ದೇಗುಲ ಜಖಂ

    ದಾವಣಗೆರೆ: ಗಾಳಿ ಮಳೆಯಿಂದಾಗಿ ಹಳೆಯ ಆಲದ ಮರ ಪುರಾತನ ಗುಡಿಯ ಮೇಲೆ ಬಿದ್ದು, ದೇಗುಲದ ಮೇಲ್ಛಾವಣಿಗೆ ಧಕ್ಕೆಯಾದ ಘಟನೆ ತಾಲೂಕಿನ ಅಣಜಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

    ಅಣಜಿ ಗ್ರಾಮಕ್ಕೆ ಹೊಂದಿಕೊಂಡಿರುವ 2-3 ಶತಮಾನಗಳಷ್ಟು ಹಳೆಯದಾದ ಕೆರೆ ಹೊನ್ನಮ್ಮ ದೇವಿ ದೇವಸ್ಥಾನದ ಮೇಲೆ ದೈತ್ಯ ಆಲದ ಮರ ಉರುಳಿ ಬಿದ್ದಿದೆ. ಅಣಜಿಯ ಕೆರೆ ಹೊನ್ನಮ್ಮ ದೇವಿ ದೇಗುವ ಈ ಭಾಗದಲ್ಲಿ ಪ್ರಸಿದ್ಧವಾಗಿದ್ದು, ಇಲ್ಲಿ ನಡೆಯುವ ಜಾತ್ರೆಗೆ ಸಾವಿರಾರು ಮಂದಿ ಸೇರುತ್ತಾರೆ. ಒಂದು ಭಾಗದಲ್ಲಿ ಕೆರೆ ಇದ್ದರೆ ಮತ್ತೊಂದು ಭಾಗದಲ್ಲಿ ಈ ಗುಡಿ ಇದೆ. ಆದ್ದರಿಂದ ಈ ಗುಡಿ ಖ್ಯಾತಿ ಪಡೆದುಕೊಂಡಿದೆ.

    ಇದರ ಜೊತೆಗೆ ಸುಮಾರು 130 ವರ್ಷಗಳ ಇತಿಹಾಸವಿದ್ದ ಆಲದ ಮರ, ದೇಗುಲಕ್ಕೆ ಮತ್ತಷ್ಟು ಕಳೆ ತಂದಿತ್ತು. ದೈತ್ಯ ಆಲದ ಮರ ಸತತ ಮಳೆಯಿಂದಾಗಿ ಹಾಗೂ ಹಳೆಯ ಮರವಾಗಿದ್ದರಿಂದ ಅದರ ಒಳಗೊಳಗೆ ನೀರು ತುಂಬಿತ್ತು.

    ಈ ಮರದ ಮಧ್ಯೆ ಇರುವ ಪೊಟರೆಗಳಲ್ಲಿ ನೀರು ನಿಂತು ಬೇರುಗಳು ಹಾಳಾಗಿದ್ದವು. ಹೀಗಾಗಿ ಗಾಳಿ ಬೀಸಿದಾಗ ಮರ ವಾಲುತ್ತಲೇ ಇತ್ತು. ಸದ್ಯ ಈ ಇತಿಹಾಸವುಳ್ಳ ಆಲದ ಮರ ಶನಿವಾರ ಸುರಿದ ಗಾಳಿ, ಮಳೆಗೆ ಧರೆಗುರುಳಿದೆ. ಪರಿಣಾಮ ಅದರ ಪಕ್ಕದಲ್ಲಿದ್ದ ದೇವಸ್ಥಾನ ಜಖಂಗೊಂಡಿದೆ. ದೇವಸ್ಥಾನದ ಮೇಲ್ಛಾವಣಿ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ.