Tag: ಬೃಂದಾವನ ಸೀರಿಯಲ್‌

  • ವರುಣ್ ಆರಾಧ್ಯ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌: ಸುಳ್ಳು ಸುದ್ದಿ ಎಂದು ವರಸೆ ಬದಲಿಸಿದ ಯುವತಿ

    ವರುಣ್ ಆರಾಧ್ಯ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌: ಸುಳ್ಳು ಸುದ್ದಿ ಎಂದು ವರಸೆ ಬದಲಿಸಿದ ಯುವತಿ

    ‘ಬೃಂದಾವನ’ (Brundavana Serial) ಸೀರಿಯಲ್ ನಟ ವರುಣ್ ಆರಾಧ್ಯ (Varun Aradya) ವಿರುದ್ಧ ಮಾಜಿ ಪ್ರೇಯಸಿ ಎಫ್‌ಐಆರ್ ದಾಖಲಿಸಿದ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ 3 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಹೊಸ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀಲೀಲಾ

    ಸಾಮಾಜಿಕ ಜಾಲತಾಣದಲ್ಲಿ ನೀವು ನೋಡುತ್ತಿರುವುದು ಸುಳ್ಳು ಸುದ್ದಿ. ನಾನು ದೂರು ನೀಡಿರುವುದು ನಮ್ಮ ರೀಲ್ಸ್ ಮತ್ತು ಫೋಟೋಗಳನ್ನು ಗೂಗಲ್‌ನಿಂದ ಡಿಲೀಟ್ ಮಾಡುವುದಕ್ಕೆ. ದಯವಿಟ್ಟು ಫೇಕ್ ನ್ಯೂಸ್ ಹರಡಿಬೇಡಿ ಎಂದು ಯುವತಿ ಬರೆದುಕೊಂಡಿದ್ದಾರೆ. ಯಾರೆಲ್ಲಾ ಹರಿದಾಡುತ್ತಿರುವ ನ್ಯೂಸ್ ನೋಡಿಕೊಂಡು ಕಾಮೆಂಟ್ ಮಾಡುತ್ತಿದ್ದೀರಿ ದಯವಿಟ್ಟು ಮೂರು ದಿನಗಳ ಕಾಯಬೇಕಿದೆ. ಈ ಬಗ್ಗೆ ಕ್ಲ್ಯಾರಿಟಿ ಕೊಡಲು ನಿಮ್ಮ ಮುಂದೆ ಬರುತ್ತೀನಿ ಎಂದು ಯುವತಿ ಹೇಳಿದ್ದಾರೆ. ವರುಣ್ ಆರಾಧ್ಯ ವಿರುದ್ಧ ನೆಟ್ಟಿಗರು ತಿರುಗಿಬಿದ್ದ ಕಾರಣ ಯುವತಿ ಉಲ್ಟಾ ಹೊಡೆದ್ರಾ? ಅಸಲಿಗೆ ಎನಾಗಿದೆ ಎಂಬುದನ್ನು ಕಾಯಬೇಕಿದೆ.

    ಅಂದಹಾಗೆ, ನಟ ವರುಣ್ ಆರಾಧ್ಯ ವಿರುದ್ಧ ಸೆ.7ರಂದು ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೂರಿನ ಅನ್ವಯ, ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ವತಃ ಮಾಜಿ ಪ್ರೇಯಸಿಯೇ ವರುಣ್ ಆರಾಧ್ಯ ವಿರುದ್ಧ ದೂರು ದಾಖಲಿಸಿದ್ದರು. ದಾಖಲಾಗಿರುವ ದೂರಿನಲ್ಲಿ ಖಾಸಗಿ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿರೋ ಆರೋಪವನ್ನು ಉಲ್ಲೇಖಿಸಿದ್ದರು.

    2019ರಿಂದ ವರುಣ್ ಮತ್ತು ಯುವತಿ ಪ್ರೀತಿಸುತ್ತಿದ್ದರು. ಬೇರೇ ಯುವತಿ ಜೊತೆಗಿನ ಅಫೇರ್ ತಿಳಿದು 2023ರಲ್ಲಿ ವರುಣ್ ಜೊತೆ ಮಾಜಿ ಪ್ರೇಯಸಿ ಬ್ರೇಕಪ್ ಮಾಡಿಕೊಂಡರು. ಪದೇ ಪದೇ ಫೋನ್ ಮಾಡಿ ನಿನ್ನ ಖಾಸಗಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡುತ್ತೀನಿ, ನೀನು ಮತ್ತೊಬ್ಬರನ್ನು ಇಷ್ಟಪಟ್ಟರೆ ಕೊಲೆ ಮಾಡುತ್ತೀನಿ ನೀನು ಯಾರನ್ನು ಮದುವೆ ಆಗಬಾರದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರು ದಾಖಲಿಸಿದ್ದರು.

  • ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ FIR ದಾಖಲು

    ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ FIR ದಾಖಲು

    ‘ಬೃಂದಾವನ’ ಸೀರಿಯಲ್ ನಟ ವರುಣ್ ಆರಾಧ್ಯ (Varun Aradhya) ವಿರುದ್ಧ FIR ದಾಖಲಾಗಿದೆ. ಯುವತಿಯೊಬ್ಬರಿಂದ ಬಸವೇಶ್ವರ ಸೆನ್ ಪೊಲೀಸ್ ಠಾಣೆಯಲ್ಲಿ ವರುಣ್‌ ವಿರುದ್ಧ ಕೇಸ್‌ ದಾಖಲಾಗಿದೆ. ಇದನ್ನೂ ಓದಿ:ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ

    ಖಾಸಗಿ ವಿಡಿಯೋ ಮತ್ತು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಮಾಡೋದಾಗಿ ಬೆದರಿಕೆಯ ಆರೋಪದಡಿ ವರುಣ್ ಆರಾಧ್ಯ ವಿರುದ್ಧ ಯುವತಿ ದೂರು ನೀಡಿದ್ದಾರೆ. ಯುವತಿ ಜೊತೆ ಎಂಗೇಜ್ ಆಗಿದ್ದಾಗಲೇ ಬೇರೆ ಅವರೊಂದಿಗೆ ವರುಣ್ ಅಫೇರ್ ಹೊಂದಿದ್ದರು. ಅದನ್ನು ಪ್ರಶ್ನಿಸಿದ ಯುವತಿಗೆ ಖಾಸಗಿ ಫೋಟೋ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ವರುಣ್ ಬೆದರಿಸಿದ್ದ. ಮುಂದೆ ಬೇರೆಯವರನ್ನು ಮದುವೆಯಾದರೆ, ಅವನನ್ನು ಸಾಯಿಸಿ ನಿನ್ನನ್ನು ಸಾಯಿಸುತ್ತೇನೆ ಬೆದರಿಸಿದ್ದಾರೆ. ವಾಟ್ಸ್‌ಆಪ್‌ಗೆ ಖಾಸಗಿ ಫೋಟೋ ಕಳುಹಿಸಿ ಅವಾಚ್ಯ ಪದಗಳಿಂದ ವರುಣ್‌ ನಿಂದಿಸಿರೋದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಅಂದಹಾಗೆ, ಓರ್ವ ಯುವತಿ ಮತ್ತು ವರುಣ್ ಆರಾಧ್ಯ 2019ರಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ಇಬ್ಬರೂ ಬ್ರೇಕಪ್ ಮಾಡಿಕೊಂಡರು.

  • ಶೋಲ್ಡರ್ ಲೆಸ್ ಟಾಪ್, ತುಂಡು ಜೀನ್ಸ್‌ನಲ್ಲಿ ‘ಬೃಂದಾವನ’ ನಟಿ- ದಂಗಾದ ಫ್ಯಾನ್ಸ್

    ಶೋಲ್ಡರ್ ಲೆಸ್ ಟಾಪ್, ತುಂಡು ಜೀನ್ಸ್‌ನಲ್ಲಿ ‘ಬೃಂದಾವನ’ ನಟಿ- ದಂಗಾದ ಫ್ಯಾನ್ಸ್

    ಕಿರುತೆರೆಯಲ್ಲಿ ಸಂಪ್ರದಾಯ ಪಾತ್ರಗಳಲ್ಲಿ ನಟಿಸಿದ್ದ ಬೃಂದಾವನ ನಟಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಶಾಕ್‌ ಕೊಟ್ಟಿದ್ದಾರೆ. ಪುಷ್ಪ ಪಾತ್ರಧಾರಿ ಅವರೇನಾ ಇವರು ಎಂದು ದಂಗಾಗಿ ನೋಡ್ತಿದ್ದಾರೆ ಅಭಿಮಾನಿಗಳು. ‘ಬೃಂದಾವನ’ (Brundhavan Serial) ಸೀರಿಯಲ್ ಪುಷ್ಪ ನಟಿ ಹಾಟ್‌ ಆಗಿ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ. ಇದನ್ನೂ ಓದಿ:ತಲೆಗೆ ಸೆರಗು ಸುತ್ತಿಕೊಂಡು ಘಾಟಿಗೆ ಹೊರಟ ಅನುಷ್ಕಾ ಶೆಟ್ಟಿ

    ಅಮೂಲ್ಯ ಭಾರಧ್ವಜ್ ಅವರು ಸದ್ಯ ಸೀರಿಯಲ್‌ನಲ್ಲಿ ಮೋಡಿ ಮಾಡುತ್ತಿರುವ ಚೆಲುವೆ. ಸೀರೆಯುಟ್ಟು ಮುಗ್ಧೆಯಾಗಿ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಆರಾಧ್ಯಗೆ (Varun Aradhya) ಜೋಡಿಯಾಗಿ ಅಮೂಲ್ಯ ಕಾಣಿಸಿಕೊಂಡಿದ್ದಾರೆ.

    ಸದಾ ಸೀರೆಯುಟ್ಟು ಕ್ಯಾಮೆರಾ ಮುಂದೆ ಬರುವ ಹುಡುಗಿ ‘ಪುಷ್ಪ’ (Pushpa) ಈಗ ಶೋಲ್ಡರ್ ಲೆಸ್ ಟಾಪ್ ಮತ್ತು ತುಂಡು ಜೀನ್ಸ್ ಧರಿಸಿ ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಅವತಾರ ನೋಡಿ ಇದು ಬೃಂದಾವನ ಸೀರಿಯಲ್ ನಟಿ ಪುಷ್ಪನೇನಾ? ಅಂತ ಶಾಕ್ ಆಗಿ ಫೋಟೋ ನೋಡ್ತಿದ್ದಾರೆ. ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.

    ರೀಲ್ ಬೇರೆ ರಿಯಲ್ ಬೇರೆ ಅಲ್ಲವೇ? ನಿಜ ಜೀವನದಲ್ಲಿ ನಟಿ ಅಮೂಲ್ಯ (Amulya Bharadwaj) ಸಿಕ್ಕಾಪಟ್ಟೆ ಸ್ಟೈಲೀಶ್ ಆಗಿದ್ದಾರೆ. ರೀಲ್ ಪುಷ್ಪ ಜೊತೆ ಅಮೂಲ್ಯರನ್ನು ಹೋಲಿಕೆ ಮಾಡೋಕೆ ಆಗಲ್ಲ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ ಟ್ರಾವೆಲ್ ಮೂಡ್‌ಗೆ ನಟಿ ಜಾರಿದ್ದಾರೆ.

    ಕಡಲ ತೀರದಲ್ಲಿ ಸ್ಟೈಲೀಶ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಅಮೂಲ್ಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.‌ ಇದನ್ನೂ ಓದಿ:ಜಾಹೀರಾತಿನಲ್ಲಿ ನಟಿಸಲು 50 ಸೆಕೆಂಡಿಗೆ 5 ಕೋಟಿ ಸಂಭಾವನೆ ಪಡೆದ ನಯನತಾರಾ

    ಈ ಹಿಂದೆ ‘ದಾಸಪುರಂದರ’ ಎಂಬ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಅಮೂಲ್ಯ ನಟಿಸಿದ್ದರು. ಈಗ ಬೃಂದಾವನ ಸೀರಿಯಲ್‌ನಲ್ಲಿ ವರುಣ್ ಆರಾಧ್ಯ ಪತ್ನಿಯ ಪಾತ್ರದಲ್ಲಿ ಅಮೂಲ್ಯ ನಟಿಸುತ್ತಿದ್ದಾರೆ.

  • ಕಡೆಗೂ ಬ್ರೇಕಪ್ ಬಗ್ಗೆ ಮೌನ ಮುರಿದ ‘ಬೃಂದಾವನ’ ಹೀರೋ

    ಕಡೆಗೂ ಬ್ರೇಕಪ್ ಬಗ್ಗೆ ಮೌನ ಮುರಿದ ‘ಬೃಂದಾವನ’ ಹೀರೋ

    ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ವರುಣ್ ಆರಾಧ್ಯ (Varun Aradhya) ಅವರು ‘ಬೃಂದಾವನ’ (Brundavana) ಸೀರಿಯಲ್ ಹೀರೋ ಆಗಿ ಮಿಂಚ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ವರ್ಷಾ ಕಾವೇರಿ ಜೊತೆಗಿನ ತಮ್ಮ ಬ್ರೇಕಪ್ ಬಗ್ಗೆ ವರುಣ್ ಮೌನ ಮುರಿದಿದ್ದಾರೆ.

    ಯೂಟ್ಯೂಬ್ ಸ್ಟಾರ್ ವರ್ಷಾ ಮತ್ತು ವರುಣ್ ಅವರು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದರು. ಕಳೆದ ವರ್ಷ ಇಬ್ಬರು ಬ್ರೇಕಪ್ ಬಗ್ಗೆ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇಬ್ಬರು ಬಿಗ್ ಬಾಸ್‌ಗೆ ಹೋಗಲು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದೇ ಸುದ್ದಿಯಾಗಿದ್ದರು. ಆದರೆ ದೊಡ್ಮನೆ ಆಟ ಶುರುವಾದ ಮೇಲೆ ಗಾಸಿಪ್‌ಗೆ ಬ್ರೇಕ್ ಬಿದ್ದಿತ್ತು.

    ವರ್ಷಾ (Varsha Kaveri) ಮತ್ತು ವರುಣ್ ಆರಾಧ್ಯ ಬ್ರೇಕಪ್ ವಿಚಾರ ತಿಳಿದಿತ್ತು. ಆದರೆ ಬ್ರೇಕಪ್ (Breakup) ಯಾಕೆ ಆಯ್ತು ಎಂಬ ಅಸಲಿ ವಿಚಾರ ಎಲ್ಲೂ ರಿವೀಲ್ ಆಗಿರಲಿಲ್ಲ. ಈಗ ಮೊದಲ ಬಾರಿಗೆ ವರುಣ್ ಪ್ರತಿಕ್ರಿಯೆ ನೀಡಿದ್ದಾರೆ. ಬ್ರೇಕಪ್ ಬಗ್ಗೆ ಪ್ರಶ್ನೆ ಮಾಡಿದಾಗ ‘ಕಾಲಾಯ ತಸ್ಮೈ ನಮಃ’ ಎಂದು ಹೇಳಿದ್ದಾರೆ. ಇದನ್ನೂ ಓದಿ:Ramayana: ಶೂರ್ಪನಖಿ ಪಾತ್ರಕ್ಕೆ ಆಯ್ಕೆಯಾದ ಕನ್ನಡದ ‘ಗಿಲ್ಲಿ’ ನಟಿ

    ಬ್ರೇಕಪ್ ಆಗಬೇಕು ಅಂತಿತ್ತು ಕಾಣುತ್ತೆ, ಬ್ರೇಕಪ್ ಆಯ್ತು. ಅದರ ಬಗ್ಗೆ ಮತ್ತೇನು ಮಾತು ಬೇಡ ಎಂದು ವರುಣ್ ಮಾತನಾಡಿದ್ದಾರೆ.