Tag: ಬೂರ್ಕಾ

  • ಕಬ್ಬಿನ ಹಾಲಿನ ಯಂತ್ರಕ್ಕೆ ಸಿಲುಕಿದ ಬುರ್ಕಾ – ಮಹಿಳೆ ಸಾವು

    ಕಬ್ಬಿನ ಹಾಲಿನ ಯಂತ್ರಕ್ಕೆ ಸಿಲುಕಿದ ಬುರ್ಕಾ – ಮಹಿಳೆ ಸಾವು

    ಕೋಲಾರ: ಕಬ್ಬಿನ ಹಾಲು ತೆಗೆಯುವ ಯಂತ್ರಕ್ಕೆ ಬುರ್ಕಾ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್‍ಸನ್ ಪೇಟೆಯ 3ನೇ ಅಡ್ಡ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿ ಬಳಿ ಈ ಘಟನೆ ನಡೆದಿದ್ದು, ಕೌಸರ್ ಬೇಗ್(37) ಮೃತ ಮಹಿಳೆ. ಕೌಸರ್ ಬೇಗ್ ಮಂಗಳವಾರ ಮುಂಜಾನೆ ತಮ್ಮದೆ ಕಬ್ಬಿನ ಹಾಲು ಮಾರಾಟ ಮಾಡುವ ಅಂಗಡಿಗೆ ಬಂದಿದ್ದಳು. ಈ ವೇಳೆ ಕೌಸರ್ ಬೇಗ್ ಧರಿಸಿದ್ದ ಬುರ್ಕಾ ಕಬ್ಬಿನ ಯಂತ್ರಕ್ಕೆ ಸಿಲುಕಿದ್ದು, ಅದನ್ನು ತೆಗೆಯಲಾದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಗುರೂಜಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ – ಪೊಲೀಸ್ ಆಯುಕ್ತ ಲಾಭೂರಾಮ್

    ಸ್ಥಳಕ್ಕೆ ರಾಬರ್ಟ್‍ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಹಿಜಬ್ ವಿವಾದ: ಬುರ್ಕಾನೇ ಮುಖ್ಯ, ಸಿಂಧೂರ ತೆಗೆಸಿ ಎಂದ ವಿದ್ಯಾರ್ಥಿನಿಯರು!

    ಕೋಲಾರ: ಹಿಜಬ್ ವಿವಾದ ಕೋಲಾರದಲ್ಲಿ 2ನೇ ದಿನವೂ ಮುಂದುವರೆದಿದ್ದು, ಹಿಜಬ್ ಧರಿಸಿ ಬಂದ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಅನುಮತಿ ನೀಡದ ಹಿನ್ನೆಲೆ ವಿದ್ಯಾರ್ಥಿಗಳು ವಾಪಸ್ ಆದ ಸನ್ನಿವೇಶ ನಡೆಯಿತು.

    ಕೋಲಾರ ನಗರದ ಸರ್ಕಾರಿ ಜೂನಿಯರ್ ಕಾಲೇಜಿಗೆ ಹಿಜಬ್ ತೆಗೆಯದೆ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತಡೆದು ವಾಪಸ್ಸು ಕಳುಹಿಸಿದರು. ಈ ವೇಳೆ ಕಾಲೇಜಿನ ಹೊರ ನಡೆದ ಮೂರು ವಿದ್ಯಾರ್ಥಿನಿಯರು ಹಿಜಬ್ ತೆಗೆಯಲು ನಿರಾಕರಸಿ ಕಾಲೇಜಿನಿಂದ ಮನೆಯತ್ತ ತೆರಳಿದ್ರು. ನಮಗೆ ಧರ್ಮ ಮತ್ತು ಹಿಜಬ್ ಮುಖ್ಯವಾಗಿದೆ ಎಂದು ವಾದ ಮಾಡಿದರು. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ

    ಒಂದು ವೇಳೆ ಕೋರ್ಟ್ ಆದೇಶ ಬಂದ್ರೆ ಅದಕ್ಕೆ ತಲೆ ಭಾಗುವೆ. ಆದ್ರೆ ನಾವು ನಮ್ಮ ಧರ್ಮದಂತೆ ಹಿಜಬ್ ಹಾಗೂ ಬುರ್ಕಾ ಧರಿಸಿ ಬರುತ್ತಿದ್ದೇವೆ. ನಮಗೆ ಬುರ್ಕಾ ತೆಗೆಯಲು ತಿಳಿಸಿದ್ರೆ, ಹಿಂದೂ ವಿದ್ಯಾರ್ಥಿನಿಯರು ಸಹ ಸಿಂಧೂರ, ಮೂಗುತಿ ಬಿಚ್ಚಿಟ್ಟು ಕಾಲೇಜಿಗೆ ಬರಲಿ. ನಮಗೊಂದು ಅವರಿಗೊಂದು ನ್ಯಾಯ ಎಂದು ವಿದ್ಯಾರ್ಥಿನಿ ಒತ್ತಾಯಿಸಿದರು.

    ವಿನಾಕಾರಣ ಸರ್ಕಾರ ಹಿಜಬ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ನಮ್ಮ ಧರ್ಮದ ಪದ್ಧತಿಯಂತೆ ನಾವು ಮುಂದುವರಿಸಿಕೊಂಡು ಹೋಗಬೇಕು ಎಂದು ಪೋಷಕರು ಒತ್ತಾಯಿಸಿದ್ರು. 2ನೇ ದಿನವಾದ ಇಂದು ಸಹ ವಿದ್ಯಾರ್ಥಿಗಳು ನಮಗೆ ಹಿಜಬ್ ಮುಖ್ಯ, ಹಿಜಬ್ ಇಲ್ಲವಾದಲ್ಲಿ ನಾವು ಕಾಲೇಜಿಗೆ ಬರಲ್ಲ ಎಂದು ವಾಪಸ್ ತೆರಳಿದರು. ಇದನ್ನೂ ಓದಿ: ಈಶ್ವರಪ್ಪ ರಾಜೀನಾಮೆಗೆ ಆಗ್ರಹ – ವಿಧಾನಸಭೆಯಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ!