Tag: ಬುಲೇರೋ

  • ಬೀದರ್‌ನಲ್ಲಿ 1 ಕೋಟಿ 50 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

    ಬೀದರ್‌ನಲ್ಲಿ 1 ಕೋಟಿ 50 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

    ಬೀದರ್: ತೆಲಂಗಾಣದಿಂದ (Telangana) ಮಹಾರಾಷ್ಟ್ರಕ್ಕೆ (Maharashtra) ಕಾನೂನು ಬಾಹಿರವಾಗಿ ಸಾಗಾಟ ಮಾಡುತ್ತಿದ್ದ 150 ಕೆಜಿ ಗಾಂಜಾ (Ganja) ಜಪ್ತಿ ಮಾಡಿ ಮೂವರು ಗಾಂಜಾಕೋರರನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬೀದರ್ (Bidar) ಜಿಲ್ಲೆಯ ಔರಾದ್ ತಾಲೂಕಿನ ಎಕಂಬಾ ಚೆಕ್ ಪೋಸ್ಟ್‌ನಲ್ಲಿ 1 ಕೋಟಿ 50 ಲಕ್ಷ ರೂ. ಬೆಲೆ ಬಾಳುವ 130 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಬೊಲೆರೋ (Bolero) ಕಾರಿನ ಸೀಕ್ರೆಟ್ ಲಾಕರ್ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಬೀದರ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಭೇಟೆ – ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ 

    ಅಷ್ಟೇ ಅಲ್ಲದೇ ತೆಲಂಗಾಣದಿಂದ ಬಸ್‌ನಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದಾಗ ಬೀದರ್ ಜಿಲ್ಲೆಯ ಹುಮ್ನಾಬಾದ್ (Humnabad) ಪಟ್ಟಣದಲ್ಲಿ ಪೊಲೀಸರು 20 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ತೆಲಂಗಾಣದಿಂದ ಬೀದರ್‌ಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ (Arrest) ಹುಮ್ನಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: 100 ವರ್ಷದ ಹಳೆಯ ಮರ ಶೆಡ್ ಮೇಲೆ ಬಿದ್ದು 7 ಮಂದಿ ದಾರುಣ ಸಾವು

    ಕಳೆದ ಮೂರು ದಿನಗಳಲ್ಲಿ ಒಟ್ಟು 2 ಕೋಟಿ 55 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿ ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ರಾಜ್ಯದ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಪೊಲೀಸರ ಬಂಧನದಿಂದ ಎಸ್ಕೇಪ್ ಆಗಿದ್ದ ಅಮೃತ್‌ಪಾಲ್ ಸಿಂಗ್‌ನ ಆಪ್ತ ಸಹಾಯಕ ಅರೆಸ್ಟ್

  • ಟೆಲಿಕಾಂ ಅಂಗಡಿಗೆ ನುಗ್ಗಿದ ಬೊಲೆರೋ- ಅಪಾಯದಿಂದ ಬಾಲಕ ಪಾರು

    ಟೆಲಿಕಾಂ ಅಂಗಡಿಗೆ ನುಗ್ಗಿದ ಬೊಲೆರೋ- ಅಪಾಯದಿಂದ ಬಾಲಕ ಪಾರು

    ಬೆಂಗಳೂರು: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೊಲೆರೋ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಟೆಲಿಕಾಂ ಅಂಗಡಿಗೆ ನುಗ್ಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸುಧಾನಗರದ ಸತ್ಯಂ ಹೋಟೆಲ್ ಬಳಿ ನಡೆದಿದೆ. ಜೀಪ್ ಚಾಲಕ ಪಾನಮತ್ತನಾಗಿ ಹಾಗೂ ಗಾಂಜಾ ನಶೆಯಲ್ಲಿದ್ದ ಎನ್ನಲಾಗಿದೆ.

    ಎಸ್.ಎಸ್ ಶೀಟ್‍ಗಳನ್ನು ತುಂಬಿಕೊಂಡು ಬಂದಿದ್ದ ಜೀಪ್, ರಸ್ತೆಯಿಂದ ಏಕಾಏಕಿ ಅಂಗಡಿಗೆ ನುಗ್ಗಿದೆ. ಪರಿಣಾಮ ಒಂದು ಬೈಕ್, ಸೈಕಲ್, ಕಾರು ಹಾಗೂ ಅಂಗಡಿ ಜಖಂ ಆಗಿದೆ. ಈ ಜೀಪ್ ಸುಮಾರು ಹೆದ್ದಾರಿ ರಸ್ತೆಯಿಂದ 150 ಮೀಟರ್ ಅಂಗಡಿಯ ಒಳಗೆ ನುಗ್ಗಿದೆ ಎನ್ನಲಾಗಿದೆ.

    ಅದೃಷ್ಟವಶಾತ್ ಅಲ್ಲಿಯೇ ಇದ್ದ ವೇಣುಗೋಪಾಲ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ರಸ್ತೆ ಅಪಘಾತ – ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದ 5 ಮಂದಿ ಸಾವು

    ರಸ್ತೆ ಅಪಘಾತ – ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದ 5 ಮಂದಿ ಸಾವು

    ಹೈದರಾಬಾದ್: ಬೊಲೆರೋ ಐಚರ್ ಗೆ ಬೊಲೆರೋ ವಾಹನ ಡಿಕ್ಕಿಯಾಗಿ 5 ಜನ ಸ್ಥಳದಲ್ಲೇ ಮೃತಪಟ್ಟು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಸಮೀಪದ ಮಂಡೂರು ಬಳಿ ನಡೆದಿದೆ.

    ಬೊಲೆರೋ ತಿರುಪತಿಯಿಂದ ಮಹಾರಾಷ್ಟ್ರ ಕಡೆ ಹೊರಟಿದ್ದಾಗ ರಸ್ತೆಗೆ ವೈಟ್ ಲೈನ್ ಪೈಂಟ್ ಮಾಡುತ್ತಿದ್ದ ಐಚರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

    ಸ್ಥಳಕ್ಕೆ ರೇಣುಗುಂಟ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.