Tag: ಬುರುಡೆ

  • ತಿಮರೋಡಿ ತೋಟದಲ್ಲಿ ಸಿಕ್ತಾ ಚಿನ್ನಯ್ಯ ತಂದ ಬುರುಡೆ?

    ತಿಮರೋಡಿ ತೋಟದಲ್ಲಿ ಸಿಕ್ತಾ ಚಿನ್ನಯ್ಯ ತಂದ ಬುರುಡೆ?

    ಮಂಗಳೂರು: ಧರ್ಮಸ್ಥಳದ (Dharmasthala) ಶವ ಹೂತ ಪ್ರಕರಣದಲ್ಲಿ ದೊಡ್ಡ ಸದ್ದು ಮಾಡಿದ್ದ ತಲೆ ಬುರುಡೆಯನ್ನು (Skull) ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ತೋಟದಿಂದ ತರಲಾಗಿದ್ಯಾ ಎಂಬ ಪ್ರಶ್ನೆ ಎದ್ದಿದೆ.

    ಹೌದು. ಶವ ಹೂತ ಪ್ರಕರಣಕ್ಕೆ ಸಂಬಂಧಿಸಿಂತೆ ವಿಶೇಷ ತನಿಖಾ ತಂಡ ರಚನೆಯಾಗಲು ಕಾರಣವಾಗಿರುವ ಬುರುಡೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೆಗೆ ಎಸ್‌ಐಟಿ ಉತ್ತರ ಹುಡುಕಲು ಮುಂದಾಗುತ್ತಿದ್ದು ಈಗ ತಿಮರೋಡಿ ತೋಟದಿಂದ ಬುರುಡೆ ತಂದು ನ್ಯಾಯಾಲಯಕ್ಕೆ ನೀಡಿರುವ ಅನುಮಾನ ವ್ಯಕ್ತವಾಗಿದೆ.

    ಈ ಅನುಮಾನ ವ್ಯಕ್ತವಾಗಲು ಕಾರಣ ಸಹ ಇದೆ. ಕೋರ್ಟ್‌ಗೆ (Court) ಹಾಜರುಪಡಿಸಿದ ಬುರುಡೆ ಜೊತೆ ಇದ್ದ ಮಣ್ಣುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದರು. ಎಫ್‌ಎಸ್‌ಎಲ್‌ ಲ್ಯಾಬ್‌ನಲ್ಲಿ ಧರ್ಮಸ್ಥಳದ ಅಸುಪಾಸಿನಲ್ಲಿ ಇರುವ ಮಣ್ಣಿಗೂ ಬುರುಡೆಯಲ್ಲಿರುವ ಮಣ್ಣಿನ pHಗೂ (ಪಿಹೆಚ್‌ ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆ ಅಳತೆಯಾಗಿದೆ) ಸಾಮ್ಯತೆ ಇಲ್ಲ ಎಂಬ ವಿಚಾರ ದೃಢಪಟ್ಟಿತ್ತು. ಇದನ್ನೂ ಓದಿ: ಷಡ್ಯಂತ್ರ ಬಯಲಾದ ಬೆನ್ನಲ್ಲೇ ತಿಮರೋಡಿ ಮನೆಗೆ ಸುಜಾತ ಭಟ್‌ಗೆ ಇಲ್ಲ ಪ್ರವೇಶ

    ಎಫ್‌ಎಸ್‌ಎಲ್‌ನಿಂದ ಬುರುಡೆ ಸತ್ಯ ರಿವೀಲ್‌ ಆದ ಬೆನ್ನಲ್ಲೇ ಎಸ್‌ಐಟಿ ಪೊಲೀಸರು ಚಿನ್ನಯ್ಯನನ್ನು (Chinnayya) ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡು ಷಡ್ಯಂತ್ರದ ಭಾಗವಾಗಿ ಬುರುಡೆ ತರಲಾಗಿತ್ತು ಎಂದಿದ್ದ. ಮತ್ತಷ್ಟು ವಿಚಾರಣೆ ನಡೆಸಿದಾಗ ಚಿನ್ನಯ್ಯ ತಿಮರೋಡಿ ತೋಟದಿಂದ ಬುರುಡೆ ತಂದಿರುವುದಾಗಿ ಹೇಳಿದ್ದ.

    ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ತಿಮರೋಡಿ ನಿವಾಸಕ್ಕೆ ಮಹಜರು ಮಾಡಲು ಬಂದಿದ್ದಾಗ ಚಿನ್ನಯ್ಯ ರಬ್ಬರ್‌ ತೋಟದ ಒಂದು ಜಾಗವನ್ನು ತೋರಿಸಿ ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದ. ಈತನ ಹೇಳಿಕೆಯಂತೆ ಪೊಲೀಸರು ರಬ್ಬರ್‌ ತೋಟದಿಂದ ಮಣ್ಣುಗಳನ್ನು ತೆಗೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್‌ ಟಿವಿಗೆ ತಿಳಿಸಿವೆ.

    ಲ್ಯಾಬ್‌ ಪರೀಕ್ಷೆಯಲ್ಲಿ ಬುರುಡೆಯಲ್ಲಿರುವ ಮಣ್ಣಿಗೂ ತಿಮರೋಡಿ ತೋಟದಲ್ಲಿರುವ ಮಣ್ಣಿಗೂ ಸಾಮ್ಯತೆ ಕಂಡು ಬಂದರೆ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಗುವ ಸಾಧ್ಯತೆಯಿದೆ.

    ತಿಮರೋಡಿ ತೋಟದಿಂದ ಬುರುಡೆ ತಂದದ್ದು ಸಾಬೀತಾದರೆ ಮತ್ತೆ ಹಲವು ಪ್ರಶ್ನೆಗಳು ಏಳುತ್ತದೆ. ಈ ಬುರುಡೆ ತಿಮರೋಡಿ ತೋಟದಲ್ಲಿ ಮೊದಲೇ ಇತ್ತಾ? ಮೊದಲೇ ತೋಟದಲ್ಲಿ ಇದ್ದರೆ ಹಾಗಾದರೆ ಯಾರದ್ದೂ ಎಂಬ ಪ್ರಶ್ನೆ ಏಳುತ್ತದೆ. ಒಂದು ವೇಳೆ ಪ್ರಕರಣ ಆರಂಭಿಸಲು ಲ್ಯಾಬ್‌ ಅಥವಾ ಬೇರೆ ಯಾವುದೋ ಜಾಗದಿಂದ ಬುರುಡೆ ತಂದು ಈ ಮಣ್ಣಿನಲ್ಲಿ ಹೂತು ಬಳಿಕ ಎತ್ತಿದ್ದಾರೋ ಎಂಬ ಪ್ರಶ್ನೆಯೂ ಎದ್ದಿದೆ.

    ಎಸ್‌ಐಟಿ ತನಿಖೆ ಆರಂಭಿಸುವಾಗಲೇ ಹಲವು ಕಾನೂನು ತಜ್ಞರು ತನಿಖೆಯ ರೀತಿಯನ್ನು ಪ್ರಶ್ನಿಸಿದ್ದರು. ಎಸ್‌ಐಟಿ ಮೊದಲು ಗುಂಡಿ ತೋಡಲು ಜಾಗಗಳನ್ನು ಗುರುತು ಮಾಡುವ ಮೊದಲು ಬುರುಡೆ ಸಿಕ್ಕಿದ ಜಾಗಕ್ಕೆ ಗುರುತು ಹಾಕಿ ಶೋಧ ಆರಂಭಿಸಬೇಕಿತ್ತು. ಬುರುಡೆ ಸಿಕ್ಕಿದರೆ ಅದರ ಮೂಳೆಗಳು ಸಿಗುತ್ತದೆ. ಮೊದಲು ಈ ಜಾಗದಿಂದ ಆರಂಭಿಸದೇ ಬೇರೆ ಜಾಗಗಳನ್ನು ಗುರುತು ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಎತ್ತಿದ್ದರು.

     

  • ಎಲ್ಲಿಂದಲೋ ಬುರುಡೆ ತಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ!

    ಎಲ್ಲಿಂದಲೋ ಬುರುಡೆ ತಂದು ಬುರುಡೆ ಬಿಟ್ಟಿದ್ದ ಚೆನ್ನಯ್ಯ!

    – ಎಫ್‌ಎಸ್‌ಎಲ್‌ನಲ್ಲಿ ಬುರುಡೆ ರಹಸ್ಯ ಬಯಲು

    ಬೆಂಗಳೂರು: ಚೆನ್ನಯ್ಯ ತಂದುಕೊಟ್ಟ ಬುರುಡೆ ಎಲ್ಲಿಯದ್ದು ಎನ್ನುವುದೇ ಈಗ ದೊಡ್ಡ ಪ್ರಶ್ನೆ.

    ಹೌದು. ಧರ್ಮಸ್ಥಳದಲ್ಲಿ (Dharmasthala) ಸಾವಿರಾರು ಮೃತದೇಹಗಳನ್ನು ನಾನು ಹೂತಿದ್ದೇನೆ ಎಂದು ಬುರುಡೆ (Skeleton) ಬಿಟ್ಟಿದ್ದ ಚೆನ್ನಯ್ಯ ತನ್ನ ಎಲ್ಲಾ ಆರೋಪಗಳಿಗೆ ಸಾಕ್ಷ್ಯ ಒದಗಿಸಿದ್ದು ಯಾವುದು ಎಂದರೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದ ಬುರುಡೆ.

    ಈ ಬುರುಡೆಯನ್ನು ಇಟ್ಟುಕೊಂಡು ನ್ಯಾಯಾಲಯದಿಂದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಭದ್ರತೆ ಪಡೆದುಕೊಂಡಿದ್ದ. ಹೀಗಾಗಿ ಎಸ್‌ಐಟಿ (SIT) ಸಹ ಆತ ಹೇಳಿದಂತೆ ಕೇಳುತ್ತಿತ್ತು. ಇದನ್ನೂ ಓದಿ: ಸೌಜನ್ಯ ತಾಯಿ ಷಡ್ಯಂತ್ರಕ್ಕೆ ಬಲಿಯಾಗಿರುವ ಸಾಧ್ಯತೆಯಿದೆ, ಅವರನ್ನು ವಿಚಾರಣೆ ಒಳಪಡಿಸಬೇಕು: ಸೂಲಿಬೆಲೆ

    ಆತ ಹೇಳಿದ್ದ 17 ಜಾಗಗಳಲ್ಲಿ ಗುಂಡಿ ತೋಡಿದ ಬಳಿಕ ಮೂಲ ಬುರುಡೆಯ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆತ ಒಂದೊಂದು ಜಾಗದ ಹೆಸರನ್ನು ಹೇಳಿದ್ದಾನೆ. ಒಮ್ಮೆ ಬೋಳಿಯಾರ್‌ ಮತ್ತೊಮ್ಮೆ ಕಲ್ಲೇರಿ ಇನ್ನೊಮ್ಮೆ ಇನ್ಯಾವುದೋ ಜಾಗವನ್ನು ಹೇಳಿದ್ದಾನೆ.

    ಈ ಮಧ್ಯೆ ಬುರುಡೆಯಲ್ಲಿದ್ದ ಮಣ್ಣು ಧರ್ಮಸ್ಥಳ ಪರಿಸರದ್ದೇ ಅಲ್ಲ ಎನ್ನುವುದು ವಿಧಿವಿಜ್ಞಾನ ಪ್ರಾಯೋಗಾಲಯದಲ್ಲಿ ದೃಢಪಟ್ಟಿತ್ತು. ಇದು ಪಕ್ಕಾ ಆಗುತ್ತಿದ್ದಂತೆ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆತ ಬೇರೆ ಜಾಗದಿಂದ ಈ ಬುರುಡೆ ತಂದಿದ್ದೇನೆ. ಬೇರೆಯವರು ಹೇಳಿದಂತೆ ನಾನು ಈ ಪ್ರಕರಣಕ್ಕೆ ಬಂದಿದ್ದೇನೆ ಎಂದು ಬಾಯಿಬಿಟ್ಟಿದ್ದ.

    ಚೆನ್ನಯ್ಯ ಈ ಮಾತನ್ನು ಹೇಳುವುದು ಸುಳ್ಳು ಎನ್ನುವುದು ತಿಳಿಯುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

  • ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ

    ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ

    ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಗುಂಡಿ ಅಗೆಯುವ ಕೆಲಸಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ.

    ಧರ್ಮಸ್ಥಳ, ಬೆಳ್ತಂಗಡಿ, ವೇಣೂರು ಜೊತೆ ಉತ್ತರ ಭಾರತದ ಕಾರ್ಮಿಕರು ಮೂಳೆ ಹುಡುಕುವ ಕೆಲಸ ಮಾಡಿದ್ದರು. 17 ಜಾಗದಲ್ಲಿ ಗುಂಡಿ ತೆಗೆದ ಕಾರ್ಮಿಕರನ್ನು ಇಂದು ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ಠಾಣೆಗೆ (Belthangady Police Station) ಕರೆಯಿಸಿಕೊಂಡಿತ್ತು.

    ಇಂದು ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಮಹತ್ವದ ಸಭೆಯ ಬೆನ್ನಲ್ಲೇ ಎಸ್‌ಐಟಿ ಪೊಲೀಸರು ಎಲ್ಲಾ ಕಾರ್ಮಿಕರನ್ನು ಕರೆಸಿ ಸಹಿ ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಕರೆಸುತ್ತೇವೆ ಎಂದು ಹೇಳಿದ ಎಸ್‌ಐಟಿ ಪೊಲೀಸರು ಎಲ್ಲಾ ಕಾರ್ಮಿಕರಿಂದ ಸಹಿ ಪಡೆದು ಕಳುಹಿಸಿದರು.

    ಅನಾಮಿಕನ ವಿಚಾರಣೆ:
    ಇಂದು ಬೆಳ್ತಂಗಡಿ ಎಸ್‌ಐಟಿ ಠಾಣೆಗೆ ಬಂದ ಮುಸುಕುಧಾರಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಧ್ಯಾಹ್ನ 3 ಗಂಟೆಯ ವೇಳೆಗೆ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಸದ್ಯ ಸಾಕ್ಷಿದಾರ ವ್ಯಕ್ತಿ ಬೆಳ್ತಂಗಡಿಯ ಗೌಪ್ಯ ಸ್ಥಳದಲ್ಲಿ ವಾಸವಾಗಿದ್ದಾನೆ.

  • ಹೆಣ ಹೂತಿದ್ದು ಈತನಲ್ಲ, ಈತನೇ ಹೆಣ ಹೂತಿದ್ದು – ಇಬ್ಬರು ದೂರುದಾರರ ಹೇಳಿಕೆಯಿಂದ ಎಸ್‌ಐಟಿಗೆ ಗೊಂದಲ

    ಹೆಣ ಹೂತಿದ್ದು ಈತನಲ್ಲ, ಈತನೇ ಹೆಣ ಹೂತಿದ್ದು – ಇಬ್ಬರು ದೂರುದಾರರ ಹೇಳಿಕೆಯಿಂದ ಎಸ್‌ಐಟಿಗೆ ಗೊಂದಲ

    ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ (Dharmasthala Burial Case) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಈಗ ಇಬ್ಬರ ಹೇಳಿಕೆಯಿಂದ ಗೊಂದಲ ಉಂಟಾಗಿದೆ.

    ಹೌದು,  ಈಗಾಗಲೇ ನಡೆದಿರುವ ಕಾರ್ಯಾಚರಣೆ ಬಗ್ಗೆ ಸಾಕ್ಷಿ ಹೇಳಲು ಇಂದು  ಇಬ್ಬರು ಸಾಕ್ಷಿದಾರರು ಬೆಳ್ತಂಗಡಿಯ (Belthangady) ಎಸ್‌ಐಟಿ ಕಚೇರಿ ಮುಂದೆ ಬಂದಿದ್ದಾರೆ. ಈ ಪೈಕಿ ಒಬ್ಬರು ಅನಾಮಿಕ ವ್ಯಕ್ತಿಯೇ ಹೆಣಗಳನ್ನು ಹೂತು ಹಾಕಿದ್ದಾನೆ ಎಂದು ಹೇಳಿದ್ದರೆ ಮತ್ತೊಬ್ಬ ವ್ಯಕ್ತಿ ಹೆಣ ಹೂತು ಹಾಕಿದ ವ್ಯಕ್ತಿಯೇ ಬೇರೆ, ಈ ವ್ಯಕ್ತಿಯೇ ಬೇರೆ ಎಂಂದು ದೂರು ನೀಡಿದ್ದಾರೆ. ಈ ಇಬ್ಬರ ದೂರುಗಳನ್ನು ಸ್ವೀಕರಿಸಿದ ಬಳಿಕ ಎಸ್‌ಐಟಿ ಅಧಿಕಾರಿಗಳು ಈಗ ಗೊಂದಲಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡೋರನ್ನ ಗುಂಡಿಕ್ಕಿ ಕೊಲ್ಲಿ: ರೇಣುಕಾಚಾರ್ಯ

    ತುಕಾರಾಂ ಗೌಡ ಅವರು ಮಾತನಾಡಿ, ಅನಾಮಿಕ ವ್ಯಕ್ತಿಯ ಪರಿಚಯವೇ ಇಲ್ಲ. ಹೆಣ ಹೂತು ಹಾಕಿದ ವ್ಯಕ್ತಿಗಳು ಬೇರೆ. ಈ ವ್ಯಕ್ತಿಯೇ ಬೇರೆ. ನಾನು ಹೆಣ ಹೂತು ಹಾಕುವುದನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ. ಬೇರೆ ಪಾಯಿಂಟ್‌ಗಳಲ್ಲಿ ಹೆಣ ಹೂತಿರೋದಕ್ಕೆ ನಾನೇ ಸಾಕ್ಷಿ ಎಂದಿದ್ದಾರೆ.

    ಪುರಂದರ ಗೌಡ ಮಾತನಾಡಿ, ನಾನು ಅಂಗಡಿಯಲ್ಲಿ ಕುಳಿತಿದ್ದಾಗ ಪಾಯಿಂಟ್ ನಂಬರ್ 1 ಹಾಗೂ 13 ರಲ್ಲಿ ಹೆಣ ಹೂತಾಕುವುದನ್ನು ನಾನು ನೋಡಿದ್ದೇನೆ. ಈ ಅನಾಮಿಕ ವ್ಯಕ್ತಿಯೇ ಅಂದು ಹೆಣ ಹೂತು ಹಾಕಿದ್ದಾನೆ ಎಂದು ಹೇಳಿದ್ದಾರೆ.

    ಈ ಇಬ್ಬರ ಹೇಳಿಕೆಯಿಂದ ಎಸ್‌ಐಟಿ ಅಧಿಕಾರಿಗಳಿಗೆ ಗೊಂದಲವಾಗಿದ್ದು ಅಗತ್ಯ ಬಿದ್ದರೆ ವಾಪಸ್‌ ಕರೆಸಿಕೊಳ್ಳುತ್ತೇವೆ ಎಂದು  ಹೇಳಿ ಇಬ್ಬರನ್ನು ಕಳುಹಿಸಿದ್ದಾರೆ.

  • ಧರ್ಮಸ್ಥಳ ಬುರುಡೆ ರಹಸ್ಯ| ಕಗ್ಗಂಟಾಗಿದೆ 13ನೇ ಪಾಯಿಂಟ್ – ಸವಾಲುಗಳ ಮಧ್ಯೆ ಉತ್ಖನನಕ್ಕೆ ರೆಡಿಯಾದ ಎಸ್‌ಐಟಿ

    ಧರ್ಮಸ್ಥಳ ಬುರುಡೆ ರಹಸ್ಯ| ಕಗ್ಗಂಟಾಗಿದೆ 13ನೇ ಪಾಯಿಂಟ್ – ಸವಾಲುಗಳ ಮಧ್ಯೆ ಉತ್ಖನನಕ್ಕೆ ರೆಡಿಯಾದ ಎಸ್‌ಐಟಿ

    ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ (Dharmasthala Mass Burial Case) ಶವಗಳನ್ನು ಹೂತಿಟ್ಟ ಪ್ರಕರಣದ ಉತ್ಖನನ ಕಾರ್ಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಕೊನೆಯ ಪಾಯಿಂಟ್ ಆಗಿರುವ 13ನೇ ಜಾಗದ ಉತ್ಖನನ ವಿಶೇಷ ತನಿಖಾ ತಂಡ(SIT) ಕಗ್ಗಂಟಾಗಿದ್ದು ಇಂದು ಶೋಧ ನಡೆಯಲಿದೆ.

    ದೂರುದಾರ ತೋರಿಸಿದ 13 ಕಡೆಗಳಲ್ಲೂ ಭೂಮಿ ಅಗೆದು ಹುಡುಕಿದರೂ ಪಾಯಿಂಟ್‌ ಸಂಖ್ಯೆ 6 ಹೊರತು ಪಡಿಸಿ ಬೇರೆ ಕಡೆ ಏನೂ ಸಿಗಲಿಲ್ಲ. ನೂರಾರು ಶವ ಹೂತಿಟ್ಟಿದ್ದೇನೆ ಎಂದಿದ್ದ ದೂರುದಾರನೂ ಇದೀಗ ಪಾಯಿಂಟ್ ನಂಬರ್ 13ರಲ್ಲಿ ರಾಶಿ ರಾಶಿ ಹೆಣಗಳಿದೆ ಎಂದು ಹೇಳಿದ್ದಾನೆ. ಈ ಕಾರಣಕ್ಕೆ ಸಾಕಷ್ಟು ಉದ್ದ ಅಗಲಕ್ಕೆ ಮಾರ್ಕ್ ಮಾಡಲಾಗಿದೆ. ಅದರೆ ಈ ಪಾಯಿಂಟ್ ಎಸ್‌ಐಟಿ ಅಧಿಕಾರಿಗಳಿಗೆ ಕಗ್ಗಂಟಾಗಿದೆ.

    ಬುಧವಾರ ಉತ್ಖನನ ಮಾಡಿ ಮುಗಿಸಬೇಕಿದ್ದ ಈ 13ನೇ ಪಾಯಿಂಟ್ ಅಗೆಯದೇ 14 ನೇ ಪಾಯಿಂಟ್ ಉತ್ಖನನ ನಡೆಸಿದ್ದರು. ಈ 13ನೇ ಪಾಯಿಂಟ್‌ನ ಮಧ್ಯಭಾಗದಲ್ಲೇ ಎರಡು ವಿದ್ಯುತ್ ಕಂಬಗಳಿದೆ. ಅಷ್ಟೇ ಅಲ್ಲದೇ ಪಕ್ಕದಲ್ಲೇ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಸಣ್ಣ ಅಣೆಕಟ್ಟು ಇದೆ. ಪಾಯಿಂಟ್ ಪಕ್ಕದಲ್ಲೇ ಸಾರ್ವಜನಿಕ ರಸ್ತೆ ಇದೆ. ಹೀಗಾಗಿ ಈ ಎಲ್ಲಾ ಸವಾಲು ಸರಿಪಡಿಸಲು ಒಂದು ದಿನ ಉತ್ಖನನವನ್ನು ಮುಂದೂಡಿದ್ದರು.  ಇದನ್ನೂ ಓದಿ: ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ ಸಿಡಿದ ಧರ್ಮಸ್ಥಳದ ಭಕ್ತರು

     

    ಈ ಜಾಗವನ್ನು ಉತ್ಖನನ ಮಾಡಲು ಎಸ್‌ಐಟಿ ಸಿದ್ಧತೆ ಮಾಡಿದ್ದು, ಧರ್ಮಸ್ಥಳ ಗ್ರಾಮಪಂಚಾಯತ್, ನೀರಾವರಿ ಇಲಾಖೆ, ಮೆಸ್ಕಾಂ ಇಲಾಖೆ ಜೊತೆ ಸಭೆ ನಡೆಸಿದ್ದಾರೆ. ಕಿರು ಅಣೆಕಟ್ಟು ಪಕ್ಕದಲ್ಲಿ ನೆಲ ಅಗೆಯುವುದು ಹೇಗೆ? ವಿದ್ಯುತ್ ಕಂಬಗಳಿರುವ ಜಾಗದಲ್ಲಿ ಏನ್ ಮಾಡಬೇಕು ಎಂಬ ಬಗ್ಗೆ ತಜ್ಞರ ಅಭಿಪ್ರಾಯವನ್ನು ಎಸ್‌ಐಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ.   ಇದನ್ನೂ ಓದಿ: ಧರ್ಮಸ್ಥಳ ಕೇಸ್; 2 ಗುಂಪುಗಳ ನಡುವೆ ಮಾರಾಮಾರಿ ವರದಿಗೆ ಹೋದ ಖಾಸಗಿ ವಾಹಿನಿ ವರದಿಗಾರ, ಕ್ಯಾಮೆರಾಮ್ಯಾನ್ ಮೇಲೆ ಹಲ್ಲೆ

    ಈ ಹಿನ್ನಲೆಯಲ್ಲೇ ಇಂದು ಉತ್ಖನನ ನಡೆಸಲು ಎಸ್‌ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಈ ನಡುವೆ 13 ಕಡೆ ಭೂಮಿ ಅಗೆದರೂ ಏನೂ ಸಿಗದೇ ಇರುವ ಕಾರಣ ಮುಸುಕುಧಾರಿ ಅನಾಮಿಕ ಹೇಳುತ್ತಿರುವುದು ಸುಳ್ಳಾ ಎಂಬ ಪ್ರಶ್ನೆಯೂ ಎದ್ದಿದೆ. ಆತ ಹೇಳಿದ ಯಾವ ಪಾಯಿಂಟ್‌ನಲ್ಲೂ ಕಳೇಬರಗಳೇ ಸಿಗದೇ ಇದ್ದು ಹೊಸ ದಿಕ್ಕಿನಲ್ಲೂ ಹುಡುಕಿದರೂ ಯಾವುದೇ ಕುರುಹುಗಳು ಸಿಕ್ಕಿಲ್ಲ. ಹೀಗಾಗಿ ಮುಸುಕುಧಾರಿ ಅನಾಮಿಕನ ವಿರುದ್ಧವೇ ರಿವರ್ಸ್ ತನಿಖೆ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

    ದಿನದಿಂದ ದಿನಕ್ಕೆ ಕುತೂಹಲ ಹುಟ್ಟಿಸಿದ ಈ ತಲೆ ಬುರುಡೆ ಕಥೆಯನ್ನು ಅನಾಮಿಕ ವ್ಯಕ್ತಿ ಬುರುಡೆ ಬಿಟ್ಟಿದ್ದಾನಾ ಎಂಬ ಮಾತುಗಳು ಈಗ ಹರಿದಾಡಲು ಆರಂಭವಾಗಿದೆ. ಆತ ಎಸ್‌ಐಟಿ ಸೇರಿದಂತೆ ಎಲ್ಲರ ದಿಕ್ಕು ತಪ್ಪಿಸಿದ್ದಾನಾ ಎಂಬ ಅನುಮಾನವೂ ಹೆಚ್ಚಾಗಿದೆ. ಒಟ್ಟಿನಲ್ಲಿ ಇಂದು ಉತ್ಖನನ ಮಾಡುವ ಪಾಯಿಂಟ್‌ನಲ್ಲಿ ಏನಾಗುತ್ತದೆ ಎಂಬ ನಿರೀಕ್ಷೆ, ಕುತೂಹಲ ಎಲ್ಲರಲ್ಲಿದೆ.