Tag: ಬುದ್ಧಿಮಾಂದ್ಯ

  • ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ- 2 ವರ್ಷದ ಬಳಿಕ ಆರೋಪಿ ಬಂಧನ

    ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ- 2 ವರ್ಷದ ಬಳಿಕ ಆರೋಪಿ ಬಂಧನ

    – ಮೊಬೈಲ್ ಬಳಸಿ ಸಿಕ್ಕಾಕ್ಕೊಂಡ ಆರೋಪಿ

    ಮುಂಬೈ: ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಎರಡು ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ.

    ಮುಂಬೈನ ಟಾರ್ಡಿಯೋದಲ್ಲಿ ಅಕ್ಟೋಬರ್ 2018ರಂದು ಪ್ರಕರಣ ನಡೆದಿದ್ದು, ಕೃತ್ಯ ಎಸಗಿ ಆರೋಪಿ ನೇಪಾಳಕ್ಕೆ ಪರಾರಿಯಾಗಿದ್ದ. ಹೀಗಾಗಿ ಬಂಧನದಿಂದ ತಪ್ಪಿಸಿಕೊಂಡಿದ್ದ. ಕಳೆದ ವಾರ ಪಾಟ್ನಾದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮನೋಜ್ ಸಹಾ ಎಂದು ಗುರುತಿಸಲಾಗಿದ್ದು, ಶೀಘ್ರದಲ್ಲೇ ಚಾರ್ಜ್‍ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಆರಂಭದಲ್ಲಿ ಮೂವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಹೇಳಿಕೆ ನೀಡಿದ್ದಳು. ಬಳಿಕ ಹೇಳಿಕೆ ಬದಲಿಸಿದ್ದಳು. ಈ ಹಿನ್ನೆಲೆ ಆರೋಪಿ ವಿರುದ್ಧ ಅತ್ಯಾಚಾರ ಆರೋಪವನ್ನು ಕೈಬಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಅಕ್ಟೋಬರ್ 10, 2018ರಂದು ತನ್ನ ಸಹೋದರಿಯೊಂದಿಗೆ ಜಗಳ ಮಾಡಿಕೊಂಡು ಯುವತಿ ಮನೆ ತೊರೆದಿದ್ದಳು. ಬಳಿಕ ಮುಂಬೈ ಸೆಂಟ್ರಲ್ ರೈಲು ಹತ್ತಿ ತೆರಳಿದ್ದಳು. ಟಾರ್ಡಿಯೊದಲ್ಲಿ ರಸ್ತೆಯ ಮೇಲೆ ಮಲಗಿದ್ದಳು. ಈ ವೇಳೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಮರುದಿನ ಯುವತಿ ಮನೆಗೆ ಬಂದಿದ್ದು, ಆಕೆಯ ನಡವಳಿಕೆಯಲ್ಲಿ ಬದಲಾವಣೆಯಾಗಿರುವುದನ್ನು ಕಟುಂಬಸ್ಥರು ಗಮನಿಸಿದ್ದಾರೆ. ಬಳಿಕ ತಂದೆಯ ಬಳಿ ಘಟನೆ ಕುರಿತು ವಿವರಿಸಿದ್ದಾಳೆ.

    ಇದೀಗ ಯುವತಿಗೆ 20 ವರ್ಷಗಳಾಗಿದ್ದು, ಆರಂಭದಲ್ಲಿ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದಳು. ಬಳಿಕ ಹೇಳಿಕೆ ಬದಲಾಯಿಸಿದ್ದಳು. ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿತ್ತು. ಬಳಿಕ ಆರೋಪಿ ಸಹಾನನ್ನು ಗುರುತಿಸಲಾಗಿದ್ದು, ಈತ ಬಿಹಾರದ ಸೀತಾಮರಿ ಜಿಲ್ಲೆಗೆ ಪರಾರಿಯಾಗಿದ್ದ. ಇದಕ್ಕೂ ಮೊದಲು ನೇಪಾಳಕ್ಕೆ ತೆರಳಿ ತನ್ನ ಸಹೋದರಿಯ ಮನೆಯಲ್ಲಿ ಆಶ್ರಯ ಪಡೆದಿದ್ದ ಎಂದು ಪೊಲಿಸರು ತಿಳಿಸಿದ್ದಾರೆ.

    ಆರೋಪಿ ಮೊಬೈಲ್ ಬಳಸುವುದನ್ನು ನಿಲ್ಲಿಸಿದ್ದ. ಆದರೆ ತನ್ನ ಸ್ನೇಹಿತನೊಂದಿಗೆ ಸಂಪರ್ಕದಲ್ಲಿದ್ದ. ಈ ತನಿಖೆಯ ಬೆಳವಣಿಗೆ ಕುರಿತು ಮಾಹಿತಿ ನೀಡುತ್ತಿದ್ದ. ಈ ವೇಳೆ ಆರೋಪಿ ನೇಪಾಳದಿಂದ ಬಿಹಾರಕ್ಕೆ ಆಗಮಿಸಿದ್ದ. ಇತ್ತೀಚೆಗೆ ತನ್ನ ಸ್ನೇಹಿತನಿಗೆ ಕರೆ ಮಾಡುವ ಮೂಲಕ ಆರೋಪಿ ತನ್ನ ಲೊಕೇಶನ್ ರಿವೀಲ್ ಮಾಡಿದ್ದ. ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.

  • ಚಳಿ ಕಾಯಿಸಲು ಹೋಗಿ ಬೆಂಕಿಗಾಹುತಿಯಾದ ಯುವಕ!

    ಚಳಿ ಕಾಯಿಸಲು ಹೋಗಿ ಬೆಂಕಿಗಾಹುತಿಯಾದ ಯುವಕ!

    ಬೆಂಗಳೂರು: ಚಳಿ ಕಾಯಿಸಲು ಹೋದ ಯುವಕನೋರ್ವ ಬೆಂಕಿಗಾಹುತಿಯಾದ ಘಟನೆಯೊಂದು ನಡೆದಿದೆ.

    ಆನೇಕಲ್ ತಾಲೂಕಿನ ಅತ್ತಿಬೆಲೆಯ ಟಿವಿಎಸ್ ರಸ್ತೆ ಬಳಿ ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಮೃತ ಯುವಕನನ್ನು 5 ವರ್ಷಗಳಿಂದ ಅತ್ತಿಬೆಲೆಯಲ್ಲಿ ಅಲೆದಾಡುತ್ತಿದ್ದ ಸುಮಾರು 29 ವರ್ಷ ವಯಸ್ಸಿನ ಬುದ್ಧಿಮಾಂದ್ಯ ಎನ್ನಲಾಗಿದೆ.

    ಇಂದು ಬೆಳಿಗ್ಗೆ ಚಳಿ ಹೆಚ್ಚಿದ್ದ ಕಾರಣ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸಕ್ಕೆ ಬೆಂಕಿ ಹಚ್ಚುತ್ತಿದ್ದಾಗ ಯುವಕನ ಬಟ್ಟೆಗೆ ಹತ್ತಿಕೊಂಡಿದೆ. ಪರಿಣಾಮ ಒಂದರ ಮೇಲೆ ಒಂದರಂತೆ ಐದಾರು ಬಟ್ಟೆ ಧರಿಸಿದ್ದ ಯುವಕನ ಬಟ್ಟೆಗೆ ಬೆಂಕಿ ಹತ್ತಿಕೊಂಡಿದೆ. ಹೀಗಾಗಿ ಬೆಂಕಿ ಆರಿಸಲಾಗದೇ ಯುವಕ ಅಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

    ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 7 ಮಕ್ಕಳಲ್ಲಿ ಐವರನ್ನು ಕಳೆದುಕೊಂಡ ದಂಪತಿ- ಬದುಕಿರುವ ಇಬ್ಬರೂ ಮಕ್ಕಳಿಗೆ ಬೇಕಿದೆ ಚಿಕಿತ್ಸೆ

    7 ಮಕ್ಕಳಲ್ಲಿ ಐವರನ್ನು ಕಳೆದುಕೊಂಡ ದಂಪತಿ- ಬದುಕಿರುವ ಇಬ್ಬರೂ ಮಕ್ಕಳಿಗೆ ಬೇಕಿದೆ ಚಿಕಿತ್ಸೆ

    ಯಾದಗಿರಿ: ಕಡು ಬಡತನದಲ್ಲಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ವಾಸವಾಗಿರುವ ಸಂಗಮ್ಮ ಮತ್ತು ಸಾಯಿಬಣ್ಣ ದಂಪತಿಗೆ 7 ಮಕ್ಕಳು. ಏಳೂ ಮಕ್ಕಳು ಹುಟ್ಟುತ್ತಲೇ ವಿಕಲಾಂಗತೆ ಮತ್ತು ಬುದ್ಧಿಮಾಂದ್ಯತೆ. ಈಗಾಗಲೇ ವಿಧಿಯಾಟಕ್ಕೆ ಐದು ಮಕ್ಕಳು ಸಾವನ್ನಪ್ಪಿವೆ.

    ಗುನ್ನಮ್ಮ(12) & ಪರಶುರಾಮ್(10) ಇವರಿಬ್ಬರೂ ಮನೆಯಲ್ಲಿ ಜೀವಂತ ಶವದಂತೆ ಬದುಕುತ್ತಿದ್ದಾರೆ. ಮಾತನಾಡಲೂ ಕೂಡ ಬಾರದ ಈ ಮಕ್ಕಳ ಎಲ್ಲಾ ನಿತ್ಯ ಕರ್ಮಗಳು ಹಾಸಿಗೆಯಲ್ಲೇ. ಹಸಿವು, ದಾಹ ಈ ಯಾವುದರ ಪರಿವು ಇಲ್ಲದ ಈ ಮಕ್ಕಳಿಗೆ ತಾಯಿಯೇ ಸರ್ವಸ್ವ. ಹೆತ್ತ ಕಂದಮ್ಮಗಳ ಸ್ಥಿತಿ ಕಂಡು ಈ ತಾಯಿ ಮಮ್ಮಲ ಮರಗುತ್ತಿದ್ದಾರೆ.

    ಸಾಯಿಬಣ್ಣಾ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಎರಡು ಮಕ್ಕಳಾದ ಗುನ್ನಮ್ಮ, ಪರಶುರಾಮ್ ಪಾಲನೆ ಪೋಷಣೆಯಲ್ಲಿ ಹೆಂಡತಿಯ ಕಷ್ಟ ನೋಡಲಾರದೆ ಪತ್ನಿ ಜೊತೆ ಮಕ್ಕಳ ಪಾಲನೆ ಮಾಡುತ್ತಿದ್ದಾರೆ. ತುಂಬಾ ಬಡತನವಿದ್ರೂ, ಸಾಲ ಸೂಲವನ್ನು ಮಾಡಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಸರಿಪಡಿಸಬೇಕು ಅಂತಾ ಓಡಾಡಿದ್ರು ಪ್ರಯೋಜನವಾಗಿಲ್ಲ. ಬುದ್ಧಿಮಾಂದ್ಯತೆಯಿಂದ ಇರುವ ಮಕ್ಕಳಿಗೆ ಕೆಲವೊಮ್ಮ ಪಿಡ್ಸ್ ಕಾಯಿಲೆ ಕೂಡ ಬರುತ್ತದೆ. ಸದ್ಯ ಸಾಯಿಬಣ್ಣರಿಗೆ ಸ್ವಂತ ಸೂರಿಲ್ಲದ ಕಾರಣ ರಕ್ತ ಸಂಬಂಧಿಗಳ ಮನೆಯಲ್ಲಿ ಆಸರೆ ಪಡೆಯುತ್ತಿದ್ದಾರೆ. ಇದೀಗ ಜೀವನದ ಬಂಡಿ ಸಾಗಿಸಲು ಸಹಾಯ ಮಾಡಿ ಅಂತಾ ಪಬ್ಲಿಕ್ ಟಿವಿಯತ್ತ ಮುಖ ಮಾಡಿದ್ದಾರೆ.

    7 ಮಕ್ಕಳು ಬುದ್ಧಿಮಾಂದ್ಯತೆಯಿಂದ ಹುಟ್ಟಿದ್ರು ಧೃತಿಗೆಡದೆ ಉಳಿದ 2 ಮಕ್ಕಳನ್ನು ಕಷ್ಟಪಟ್ಟು ಪೋಷಣೆ ಮಾಡುತ್ತಿರುವುದು ನಿಜಕ್ಕೂ ಗ್ರೇಟ್. ಕಿತ್ತು ತಿನ್ನುವ ಬಡತನದಲ್ಲಿ ನರಕ ಯಾತನೆ ಅನುಭವಿಸುತ್ತಿರುವ ಈ ಕುಟುಂಬಕ್ಕೆ ಸ್ವಾಭಿಮಾನದಿಂದ ಬದುಕಲು ಸರ್ಕಾರದಿಂದ ಅಗತ್ಯ ನೆರವು ಕೊಡಿಸಬೇಕಾಗಿದೆ.

    https://www.youtube.com/watch?v=udD-dKG-4yE

  • ಅತ್ಯಾಚಾರದಿಂದ 7 ತಿಂಗ್ಳ ಗರ್ಭಿಣಿಯಾದ ಬುದ್ಧಿಮಾಂದ್ಯ ಯುವತಿ!

    ಅತ್ಯಾಚಾರದಿಂದ 7 ತಿಂಗ್ಳ ಗರ್ಭಿಣಿಯಾದ ಬುದ್ಧಿಮಾಂದ್ಯ ಯುವತಿ!

    ಬೆಳಗಾವಿ: ಅತ್ಯಾಚಾರವೆಸಗಿದ್ದರಿಂದ ಬುದ್ಧಿಮಾಂದ್ಯ ಯವತಿಯೊಬ್ಬರು ಇದೀಗ 7 ತಿಂಗಳ ಗರ್ಭಿಣಿಯಾಗಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಬೆಳಗಾವಿ ತಾಲೂಕಿನ ಕೆ ಕೆ ಕೊಪ್ಪ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಈ ಹೀನ ಕೃತ್ಯ ಮಾಡಿದ ಆರೋಪಿ ಯಾರು ಎಂಬುದು ಗೊತ್ತಾಗಿಲ್ಲ.

    ಸಂತ್ರಸ್ಥೆ 7 ತಿಂಗಳು ಗರ್ಭಿಣಿಯಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಬುದ್ಧಿಮಾಂದ್ಯ ಯುವತಿಯರನ್ನು ಟಾರ್ಗೇಟ್ ಮಾಡಿ ಅವರ ಮೇಲೆ ಅತ್ಯಾಚಾರ ಮಾಡಿ ಅವರಿಗೆ ಜನಿಸಿದ ಮಕ್ಕಳನ್ನು ಮಾರಾಟ ಮಾಡುವ ಜಾಲ ಬೆಳಗಾವಿ ಜಿಲ್ಲೆಯಲ್ಲಿ ಸಕ್ರೀಯವಾಗಿ ನಡೆಯುತ್ತಿದೆ ಎಂದು ಈ ಹಿಂದೆ ಪಬ್ಲಿಕ್ ಟಿವಿ ವರದಿ ಮಾಡಿತ್ತು.

     

     

     

  • ಆಧಾರ್‍ನಿಂದ 2 ವರ್ಷಗಳ ನಂತರ ಹೆತ್ತವರನ್ನ ಮತ್ತೆ ಸೇರಿದ 9ರ ಬುದ್ಧಿಮಾಂದ್ಯ ಬಾಲಕ

    ಆಧಾರ್‍ನಿಂದ 2 ವರ್ಷಗಳ ನಂತರ ಹೆತ್ತವರನ್ನ ಮತ್ತೆ ಸೇರಿದ 9ರ ಬುದ್ಧಿಮಾಂದ್ಯ ಬಾಲಕ

     

    ನವದೆಹಲಿ: ಕುಟುಂಬದಿಂದ ಬೇರ್ಪಟ್ಟಿದ್ದ ಬುದ್ಧಿಮಾಂದ್ಯ ಬಾಲಕನೊಬ್ಬ ಆಧಾರ್ ನೆರವಿನಿಂದ ಸೋಮವಾರದಂದು ಮತ್ತೆ ಹರಿಯಾಣದ ಪಾಣಿಪತ್‍ನಲ್ಲಿರುವ ತನ್ನ ಪೋಷಕರ ಮಡಿಲು ಸೇರಿದ್ದಾನೆ.

    9 ವರ್ಷದ ಗೌರವ್ ಎರಡು ವರ್ಷಗಳ ಬಳಿಕ ತನ್ನ ಪೋಷಕರನ್ನ ಭೇಟಿಯಾಗಿದ್ದಾನೆ. ಮಕ್ಕಳ ಆಶ್ರಯ ಗೃಹದಲ್ಲಿ ಅಧಿಕಾರಿಗಳು ಆಧಾರ್ ನೋಂದಣಿಗಾಗಿ ಎಲ್ಲಾ ಹುಡುಗರ ಬಯೋಮೆಟ್ರಿಕ್ ವಿವರಗಳನ್ನ ಪಡೆದಿದ್ರು. ಆದ್ರೆ ಒಬ್ಬ ಹುಡುಗನ ವಿವರವನ್ನ ಮಾತ್ರ ನೊಂದಾಯಿಸಲು ಆಗಿರಲಿಲ್ಲ. ಯಾಕಂದ್ರೆ ಆತನ ಹೆಸರು ಅದಾಗಲೇ ನೋಂದಣಿಯಾಗಿತ್ತು. ಬಳಿಕ ದಹಲಿ ಮಹಿಳಾ ಆಯೋಗ ನಡೆಸುತ್ತಿದ್ದ ಸರ್ಕಾರೇತರ ಸಂಸ್ಥೆ ಪಾಲ್ನಾ ದಲ್ಲಿದ್ದ ಬಾಲಕ ಗೌರವ್‍ನನ್ನ ಸಲಾಮ್ ಬಾಲಕ್ ಟ್ರಸ್ಟ್‍ಗೆ ಕಳಿಸಲಾಗಿತ್ತು.

    ಪಾಲ್ನಾದಲ್ಲಿ 8 ವರ್ಷ ವಯಸ್ಸಿನವರೆಗಿನ ಮಕ್ಕಳನ್ನ ಮಾತ್ರ ನೋಡಿಕೊಳ್ಳಲಾಗುತ್ತದೆ. ಆದ್ದರಿಂದ ಗೌರವ್‍ನನ್ನು ಇಲ್ಲಿಗೆ ವರ್ಗಾಯಿಸಲಾಯ್ತು. ನಿಯಮಿತವಾಗಿ ನಡೆಸಲಾಗುವ ಆರೋಗ್ಯ ಪರೀಕ್ಷೆ ವೇಳೆ ಬಾಲಕ ಎಡಿಎಸ್‍ಪಿ(ಆಲ್ಝಿಮರ್ಸ್ ಡಿಸೀಸ್ ಸೀಕ್ವೆನ್ಸಿಂಗ್ ಪ್ರಾಜೆಕ್ಟ್) ನಿಂದ ಬಳಲುತ್ತಿದ್ದಾನೆ ಎಂದು ಗೊತ್ತಾಯಿತು. ಆದ್ದರಿಂದ ಆತನಿಗೆ ತನ್ನ ಹಾಗೂ ಪೋಷಕರ ಹೆಸರು ಬಿಟ್ಟರೆ ಬೇರೆ ಯಾವುದೂ ನೆನಪಿರಲಿಲ್ಲ ಅಂತ ಟ್ರಸ್ಟ್‍ನ ಕೋ-ಆರ್ಡಿನೇಟರ್ ಸಂಜಯ್ ದುಬೇ ಹೇಳಿದ್ದಾರೆ.

    ಬಯೋಮೆಟ್ರಿಕ್ ಪರಿಶೀಲನೆ ವೇಳೆ ಬಾಲಕನ ವಿವರಗಳು ಪಾಣಿಪತ್‍ನಲ್ಲಿದ್ದ ಆತನ ಪೋಷಕರೊಂದಿಗೆ ಹೊಂದಿಕೆ ಆಗಿತ್ತು. ಇದನ್ನ ಬೆನ್ನತ್ತಿ ಆತನ ಪೋಷಕರನ್ನು ದೆಹಲಿಗೆ ಕರೆಸಲಾಗಿತ್ತು. ಈ ಮೂಲಕ ಬುದ್ಧಿಮಾಂದ್ಯ ಬಾಲಕ ಕೊನೆಗೂ ತನ್ನ ಪೋಷಕರನ್ನ ಸೇರುವಂತಾಯ್ತು ಎಂದು ಅವರು ಹೇಳಿದ್ದಾರೆ. 2 ವರ್ಷಗಳ ನಂತರ ಮಗ ಸಿಕ್ಕಿದ್ದಕ್ಕೆ ಗೌರವ್ ತಂದೆ ವಿಕಾಸ್ ಸಂತೋಷಗೊಂಡಿದ್ದಾರೆ.

    ನನಗೆ ನೆನಪಿದೆ, ಅಂದು 2015ರ ಭಾನುವಾರ. ಮನೆಯ ಹೊರಗಡೆ ಆಟವಾಡ್ತಿದ್ದ ಗೌರವ್ ಕಾಣೆಯಾಗಿದ್ದ. ನಾವು ಆತನಿಗಾಗಿ ಎಲ್ಲಾ ಕಡೆ ಹುಡುಕಾಡಿದೆವು. ಕೊನೆಗೆ ಪೊಲೀಸ್ ಠಾಣೆಗೂ ದೂರು ಕೊಟ್ಟೆವು. ಟಿವಿ, ನ್ಯೂಸ್‍ಪೇಪರ್‍ಗಳಲ್ಲಿ ಜಾಹಿರಾತು ಕೊಟ್ಟರೂ ನಮ್ಮ ಮಗನನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ರೆ ನಮ್ಮ ನಂಬಿಕೆ ಕುಗ್ಗಿರಲಿಲ್ಲ. ಅಂತೂ ಆಧಾರ್‍ನಿಂದ ನಮ್ಮ ದೊಡ್ಡ ಮಗ ಮತ್ತೆ ನಮಗೆ ಸಿಕ್ಕಿದ್ದಾನೆ ಅಂತ ತಂದ ವಿಕಾಸ್ ಸಂತೋಷ ವ್ಯಕ್ತಪಡಿಸಿದ್ದಾರೆ.

  • ಪೋಷಕರು ಬಿಟ್ಟು ಹೋದ ಬುದ್ಧಿಮಾಂದ್ಯ ಮೊಮ್ಮಗನನ್ನು ಕೂಲಿ ಮಾಡಿ ಸಾಕ್ತಿರೋ ಅಜ್ಜಿ- ಚಿಕಿತ್ಸೆಗೆ ಬೇಕಿದೆ ನೆರವು

    ಪೋಷಕರು ಬಿಟ್ಟು ಹೋದ ಬುದ್ಧಿಮಾಂದ್ಯ ಮೊಮ್ಮಗನನ್ನು ಕೂಲಿ ಮಾಡಿ ಸಾಕ್ತಿರೋ ಅಜ್ಜಿ- ಚಿಕಿತ್ಸೆಗೆ ಬೇಕಿದೆ ನೆರವು

    ವಿಜಯಪುರ: ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು ಅಂತಾರೆ. ತಂದೆ ತಾಯಿಗೆ ಮಕ್ಕಳು ಹೇಗಿದ್ದರೂ ಅವರೇ ಸರ್ವಸ್ವವಿದ್ದಂತೆ. ಆದ್ರೆ ಮಗಿನಿಗೆ ಫಿಟ್ಸ್ ಇದೆ, ಬುದ್ಧಿಮಾಂದ್ಯನಾಗಿದ್ದಾನೆ ಅಂತಾ ಅಜ್ಜಿ ಹತ್ತಿರ ಮಗನನ್ನು ಬಿಟ್ಟು ತಂದೆ ತಾಯಿ ನಾಪ್ತೆಯಾಗಿದ್ದಾರೆ. ಈಗ ಈ ಬುದ್ಧಿಮಾಂದ್ಯ ಮಗುವಿಗೆ ಅಜ್ಜಿಯೇ ಎಲ್ಲಾ. ಆದ್ರೆ ಆ ಅಜ್ಜಿಯ ಪಾಡು ಮಾತ್ರ ಶೋಚನೀಯ.

    ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಚಿಮ್ಲಗಿ ಬಿ1 ಪುನರ್ವಸತಿ ಕೇಂದ್ರದಲ್ಲಿರೋ ಬಾಲಕನ ಹೆಸರು ಬಸವರಾಜ. ಇವನು ಹುಟ್ಟಿದ ನಾಲ್ಕು ವರ್ಷಗಳವರೆಗೆ ಎಲ್ಲರಂತೆ ಚೆನ್ನಾಗಿದ್ದ. ಆದ್ರೆ ತದನಂತರ ಇವನಿಗೆ ಫೀಟ್ಸ್ ಬರಲು ಆರಂಭಿಸಿತಂತೆ. ಇದೇ ರೀತಿ ಒಂದು ಬಾರಿ ಫಿಟ್ಸ್ ಬಂದಾಗ ಕೆಳಗೆ ಬಿದ್ದ ನಂತರ ಇವನ ಮೆದುಳಿಗೆ ಪೆಟ್ಟು ಬಿದ್ದಿದ್ದು, ಆಗಿನಿಂದ ಇವನು ಬುದ್ಧಿಮಾಂದ್ಯನಾಗಿದ್ದಾನೆ ಅಂತಾರೆ ಬಸವರಾಜ ಅಜ್ಜಿ ಶಾಂತಾಬಾಯಿ.

    ಬಸವರಾಜ ಶಾಂತಾಬಾಯಿಯ ಮಗಳ ಮಗನಾಗಿದ್ದು, ಮಗ ಬುದ್ಧಿಮಾಂದ್ಯನಾದ ನಂತರ ಬಸವರಾಜನ ತಂದೆ ತಾಯಿ ಇಬ್ಬರೂ ಅಜ್ಜಿ ಹತ್ತಿರ ಬಿಟ್ಟು ನಾಪತ್ತೆಯಾಗಿದ್ದಾರೆ. ತಂದೆ ತಾಯಿ ಬಿಟ್ಟು ಹೋದ ಮೇಲೆ ಬಸವರಾಜನನ್ನು ಅಜ್ಜಿ ಶಾಂತಾಬಾಯಿ ಸಾಕಿ ಸಲಹುತ್ತಿದ್ದು, ಬಸವರಾಜನ ದಿನನಿತ್ಯದ ಎಲ್ಲ ಕರ್ಮಾದಿಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದ್ರೆ ಶಾಂತಾಬಾಯಿ ಕೂಲಿ ಕಾರ್ಮಿಕರಾಗಿದ್ದು, ಪ್ರತಿನಿತ್ಯ ಕೂಲಿ ಮಾಡಿ ಬಂದರೆ ಇವರ ಜೀವನ ಸಾಗುತ್ತದೆ. ಆದ್ರೆ ಮನೆಯಲ್ಲಿ ಶಾಂತಾಬಾಯಿ ಬಿಟ್ಟರೆ ಬೇರೆ ಯಾರೂ ಇಲ್ಲದ ಕಾರಣ ಕೆಲಸಕ್ಕೆ ಹೋಗುವಾಗ ಮನೆಯ ಹೊರಗಡೆ ಇರುವ ಗಿಡಕ್ಕೆ ಬಸವರಾಜನ ಕಾಲನ್ನ ಸರಪಳಿ ಹಾಕಿ ಕಟ್ಟಿ ಹೋಗುತ್ತಾರೆ. ಕೆಲಸದಿಂದ ಮರಳಿ ಬರುವವರೆಗೂ ಅಕ್ಕಪಕ್ಕದವರಿಗೆ ನೋಡುತ್ತಿರಲು ಹೇಳಿ ಹೋಗುತ್ತಾರೆ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಬಸವರಾಜನಿಗೆ ಚಿಕಿತ್ಸೆ ಕೊಡಿಸಲಾಗದೆ ಪರದಾಡುತ್ತಿದ್ದಾರೆ ಅನ್ನೋದು ಸ್ಥಳೀಯರ ಮಾತು.

    ಬಸವರಾಜನಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಲ್ಲಿ ಗುಣಮುಖನಾಗಬಹುದೆಂಬುದು ಸ್ಥಳೀಯರ ಅಭಿಪ್ರಾಯ. ಇನ್ನು ಶಾಂತಾಬಾಯಿಗೂ ವಯಸ್ಸಾಗಿದ್ದು, ನಾನು ಇಲ್ಲದೆ ಹೋದರೆ ಬಸವರಾಜನ ಗತಿ ಏನು ಅಂತಾ ಚಿಂತಿಸುತ್ತಿದ್ದಾರೆ. ಬೆಳಕು ಕಾರ್ಯಕ್ರಮದಿಂದಾದರು ಬಸವರಾಜನ ಬಾಳಲ್ಲಿ ಬೆಳಕು ಮರಳಿ ಬರಲಿ ಅನ್ನೋದು ಸ್ಥಳೀಯರ ಆಶಯ.

    https://www.youtube.com/watch?v=Drx0lVtn_zw