Tag: ಬುಟ್ಟ ಬೊಮ್ಮ

  • ಸೂಪರ್ ಹಿಟ್ ಹಾಡಷ್ಟೇ ಅಲ್ಲ ಜಾನಪದ ಕಲೆಯಲ್ಲೂ ಫೇಮಸ್ ‘ಬುಟ್ಟ ಬೊಮ್ಮ’

    ಸೂಪರ್ ಹಿಟ್ ಹಾಡಷ್ಟೇ ಅಲ್ಲ ಜಾನಪದ ಕಲೆಯಲ್ಲೂ ಫೇಮಸ್ ‘ಬುಟ್ಟ ಬೊಮ್ಮ’

    ಹೈದರಾಬಾದ್: ಒಂದು ಸಿನಿಮಾ ಹಿಟ್ ಆಗಲು ಕಲಾವಿದರ ನಟನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸಿನಿಮಾದ ಹಾಡುಗಳು. ಕೆಲವೊಂದು ಸಿನಿಮಾಗಳು ಹಾಡಿನಿಂದಲೇ ಹಿಟ್ ಆಗಿರುವ ಉದಾಹರಣಗಳೂ ಇವೆ. ಸಾಮಾನ್ಯವಾಗಿ ಒಂದು ಹಾಡು ಹಿಟ್ ಆದರೆ ಅದು ಭಾಷೆಗಳ ಗಡಿಯನ್ನು ಮೀರಿ ಸಂಗೀತ ಪ್ರಿಯರನ್ನು ಸೆಳೆಯುತ್ತದೆ. ಇದಕ್ಕೆ ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಅಲಾ ವೈಕುಂಟಪುರಮುಲೋ’ ಚಿತ್ರದ ‘ಬುಟ್ಟ ಬೊಮ್ಮ’ ಹಾಡು ಬೆಸ್ಟ್ ಉದಾಹರಣೆಯಾಗಿದೆ.

    ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಲೀಡ್ ರೋಲ್‍ನಲ್ಲಿ ಕಾಣಿಸಿಕೊಂಡ ಈ ಚಿತ್ರವಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಎಲ್ಲಾ ಹಾಡು ಅಭಿಮಾನಿಗಳ ಮನ ಗೆದ್ದಿದೆ. ಆದರೆ ‘ಬುಟ್ಟ ಬೊಮ್ಮ’ ಹಾಡು ಮಾತ್ರ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಈ ಹಾಡಿಗೆ ಎಸ್ ತಮನ್ ಸಂಗೀತ ನೀಡಿದ್ದು, ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ. ಅರ್ಮಾನ್ ಮಲಿಕ್‍ರ ಸುಮಧುರ ಧ್ವನಿಯಲ್ಲಿ ಹಾಡು ಮೂಡಿಬಂದಿದೆ.

    ಈ ಹಾಡಿನಲ್ಲಿ ಬಳಸಿರುವ ‘ಬುಟ್ಟ ಬೊಮ್ಮ’ ಪದ ಹಾಡಿನಷ್ಟೇ ಫೆಮಸ್ ಆಗಿದೆ. ‘ಬುಟ್ಟ ಬೊಮ್ಮ’ ಎಂದರೆ ಆಂಧ್ರಪ್ರದೇಶದ ಜಾನಪದ ಕಲೆಯಲ್ಲಿ ಬಳಸುವ ಗೊಂಬೆಗಳ ಹೆಸರು. ಈ ಗೊಂಬೆಗಳು ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳನ್ನೇ ಹೋಲುತ್ತವೆ. ‘ಬುಟ್ಟ’ ಎಂದರೆ ಬುಟ್ಟಿ ಹಾಗೂ ‘ಬೊಮ್ಮ’ ಎಂದರೆ ಗೊಂಬೆ ಎಂದರ್ಥ. ಈ ಗೊಂಬೆ ಜೋರಾಗಿ ತಿರುಗಿದಾಗ ಅದರ ಬಟ್ಟೆ ಬುಟ್ಟಿಯಂತೆ ಕಾಣಿಸುತ್ತದೆ. ಹೀಗಾಗಿ ಇದನ್ನು ‘ಬುಟ್ಟ ಬೊಮ್ಮ’ ಎನ್ನುತ್ತಾರೆ.

    ಸುಮಧುರ ಸಂಗೀತ, ಸಾಹಿತ್ಯದ ಜೊತೆಗೆ ‘ಬುಟ್ಟ ಬೊಮ್ಮ’ ಹಾಡಿಗೆ ಪ್ಲಸ್ ಪಾಯಿಂಟ್ ಆಗಿದ್ದು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಡ್ಯಾನ್ಸ್. ಹೌದು ನಟನೆ ಜೊತೆಗೆ ಅದ್ಭುತವಾಗಿ ಡ್ಯಾನ್ಸ್ ಮಾಡುವ ಬನ್ನಿಗೆ ಕೇವಲ ಸೌತ್ ಸಿನಿಪ್ರಿಯರು ಮಾತ್ರವಲ್ಲ ಬಾಲಿವುಡ್ ಮಂದಿ ಕೂಡ ಫ್ಯಾನ್ ಆಗಿದ್ದಾರೆ.

    https://www.instagram.com/p/B_mLzfnhdDe/?utm_source=ig_embed

    ‘ಬುಟ್ಟ ಬೊಮ್ಮ’ ಹಾಡಿಗೆ ಅಲ್ಲು ಜಭರ್ದಸ್ತ್ ಡ್ಯಾನ್ಸ್ ಮಾಡಿ ಮೋಡಿಮಾಡಿದ್ದಾರೆ. ಬಾಲಿವುಡ್ ನಟಿ ದಿಶಾ ಪಠಾಣಿ ಕೂಡ ಹಾಡಿಗೆ ಫಿದಾ ಆಗಿಬಿಟ್ಟಿದ್ದರು. ಇತ್ತೀಚಿಗೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ‘ಬುಟ್ಟ ಬೊಮ್ಮ’ ಹಾಡಿಗೆ ಫಿದಾ ಆಗಿ, ಟಿಕ್‍ಟಾಕ್ ವಿಡಿಯೋ ಮಾಡಿ ಕುಣಿದು ಖುಷಿ ಪಟ್ಟಿದ್ದರು. ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಹಾಡಿಗೆ, ಅಲ್ಲು ಡ್ಯಾನ್ಸ್ ಗೆ ಮನಸೋತಿದ್ದರು. ಅಭಿಮಾನಿಗಳಂತೂ ಈ ಹಾಡಿಗೆ ಹೆಜ್ಜೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು.

    ಅಷ್ಟೇ ಯಾಕೆ ಕ್ರಿಕೆಟಿಗ, ಆಸ್ಟ್ರೇಲಿಯಾ ತಂಡದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಕೂಡ ಈ ಹಾಡಿಗೆ ಫಿದಾ ಆಗಿ ಬುಟ್ಟ ಬೊಮ್ಮ ಎಂದು ಪತ್ನಿ ಹಾಗೂ ಮಗಳ ಜೊತೆ ಡ್ಯಾನ್ಸ್ ಮಾಡಿ, ವಿಡಿಯೋ ಹಂಚಿಕೊಂಡಿದ್ದರು.

  • ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ ವಿಕಲಚೇತನ ಅಭಿಮಾನಿಗಳು – ಮನಸೋತ ಅಲ್ಲು ಅರ್ಜುನ್

    ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕಿದ ವಿಕಲಚೇತನ ಅಭಿಮಾನಿಗಳು – ಮನಸೋತ ಅಲ್ಲು ಅರ್ಜುನ್

    ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ‘ಅಲ ವೈಕುಂಠಪುರಂ ಲೋ’ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದ್ದು, ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅದರಲ್ಲೂ ‘ಬುಟ್ಟ ಬೊಮ್ಮ’ ಹಾಡಿನ ಸಿಗ್ನೇಚರ್ ಸ್ಟೆಪ್ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿಗೆ ವಿಕಲಚೇತನ ಅಭಿಮಾನಿಗಳು ಹೆಜ್ಜೆ ಹಾಕಿರುವ ವಿಡಿಯೋ ನೋಡಿ ಸ್ವತಃ ಅಲ್ಲು ಅರ್ಜುನ್ ಅವರೇ ಫಿದಾ ಆಗಿದ್ದಾರೆ.

    ‘ಬುಟ್ಟ ಬೊಮ್ಮ’ ಹಾಡಿನ ಕ್ರೇಜ್ ಎಷ್ಟರ ಮಟ್ಟಿಗೆ ಹೆಚ್ಚಿದೆ ಅಂದರೆ ಇತ್ತೀಚೆಗೆ ಕರಾವಳಿ ಬೆಡಗಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ ಹೆಜ್ಜೆ ಹಾಕಿದ ವಿಡಿಯೋ ಸಖತ್ ವೈರಲ್ ಆಗಿತ್ತು. ಅದರಲ್ಲೂ ಟಿಕ್‍ಟಾಕ್‍ನಲ್ಲಿ ಈ ಹಾಡು ಸಖತ್ ಕ್ರೇಜ್ ಹುಟ್ಟಿಸಿದ್ದು, ಟಿಕ್‍ಟಾಕ್ ಬಳಕೆದಾರರು ‘ಬುಟ್ಟ ಬೊಮ್ಮ’ ಹಾಡಿಗೆ ಹೆಜ್ಜೆ ಹಾಕಿ ವಿಡಿಯೋ ಮಾಡುತ್ತಿದ್ದಾರೆ. ಆದರೆ ವಿಕಲಚೇತನ ಯುವತಿ ಹಾಗೂ ಯುವಕ ಈ ಹಾಡಿಗೆ ಹೆಜ್ಜೆ ಹಾಕಿರುವುದನ್ನ ನೋಡಿ ಅಲ್ಲು ಅರ್ಜುನ್ ಮನಸೋತಿದ್ದು, ಇಬ್ಬರ ವಿಡಿಯೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    https://twitter.com/fans_hyderabad/status/1226900078700331010

    ವಿಡಿಯೋ ಹಂಚಿಕೊಂಡ ಸ್ಟೈಲಿಷ್ ಸ್ಟಾರ್, ‘ಬುಟ್ಟ ಬೊಮ್ಮ’ ವಿಡಿಯೋಗಳಲ್ಲಿ ಇದೊಂದು ಹೃದಯ ಸ್ಪರ್ಶಿ ವಿಡಿಯೋ, ಈ ಸಂಗೀತ ನಮ್ಮ ನಿರೀಕ್ಷೆಗೂ ಮೀರಿ, ನಮ್ಮನ್ನು ಹೆಚ್ಚು ದೂರಕ್ಕೆ ಕರೆದೊಯ್ಯುತ್ತಿರುವುದನ್ನು ನೋಡಿ ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ ಎಂದು ಬರೆದು, ವಿಡಿಯೋ ಟ್ವೀಟ್ ಮಾಡಿದ್ದಾರೆ.

    ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಇಮ್ಮಡಿಗೊಳಿಸಿದ್ದ ‘ಅಲ ವೈಕುಂಠಪುರಂ ಲೋ’ ಸಿನಿಮಾ ಜನವರಿ 12ರಂದು ಬಿಡುಗಡೆಗೊಂಡಿತ್ತು. ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು, ನಿರ್ದೇಶಕ ತ್ರಿವಿಕ್ರಮ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ.

    ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ.