Tag: ಬುಟ್ಟಬೊಮ್ಮ

  • ಸ್ಟೈಲಿಶ್ ಸ್ಟಾರ್ ಡ್ಯಾನ್ಸ್‌ಗೆ ಮನಸೋತ ದಿಶಾ ಪಠಾಣಿ

    ಸ್ಟೈಲಿಶ್ ಸ್ಟಾರ್ ಡ್ಯಾನ್ಸ್‌ಗೆ ಮನಸೋತ ದಿಶಾ ಪಠಾಣಿ

    ಮುಂಬೈ: ಟಾಲಿವುಡ್ ಸ್ಟಾರ್ ನಟ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಡ್ಯಾನ್ಸ್‌ಗೆ ಮನಸೋಲದ ಅಭಿಮಾನಿಗಳಿಲ್ಲ. ನಟನೆ ಜೊತೆಗೆ ಅದ್ಭುತವಾಗಿ ಡ್ಯಾನ್ಸ್ ಮಾಡುವ ಬನ್ನಿಗೆ ಕೇವಲ ಸೌತ್ ಸಿನಿಪ್ರಿಯರು ಮಾತ್ರವಲ್ಲ ಬಾಲಿವುಡ್ ಮಂದಿ ಕೂಡ ಫ್ಯಾನ್ ಆಗಿದ್ದಾರೆ.

    ಇತ್ತೀಚೆಗೆ ತೆರೆಕಂಡ ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಅಲಾ ವೈಕುಂಠಪುರಂಲೋ’ ಚಿತ್ರದಲ್ಲಿ ಅಲ್ಲು ಜಭರ್ದಸ್ತ್ ಡ್ಯಾನ್ಸ್ ಮಾಡಿ ಮೋಡಿಮಾಡಿದ್ದಾರೆ. ಈ ಚಿತ್ರದಲ್ಲಿ ಸ್ಟೈಲಿಶ್ ಸ್ಟಾರ್ ಗೆ ಪೂಜಾ ಹೆಗ್ಡೆ ನಾಯಕಿಯಾಗಿ ಸಾಥ್ ಕೊಟ್ಟಿದ್ದು, ಸಿನಿಮಾದ ಬುಟ್ಟಬೊಮ್ಮ ಹಾಡಂತೂ ಸಖತ್ ಫೇಮಸ್ ಆಗಿದೆ. ಅದರಲ್ಲೂ ಹಾಡಿನಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ಎಲ್ಲರ ಮನಗೆದ್ದಿದ್ದು, ಬಾಲಿವುಡ್ ನಟಿ ದಿಶಾ ಪಠಾಣಿ ಕೂಡ ಫಿದಾ ಆಗಿಬಿಟ್ಟಿದ್ದಾರೆ.

    ಬನ್ನಿ ಡ್ಯಾನ್ಸ್‌ಗೆ ಮನಸೋತಿರುವ ದಿಶಾ ಸಾಮಾಜಿಕ ಜಾಲತಾಣಗಳಲ್ಲಿ ಬುಟ್ಟಬೊಮ್ಮ ಹಾಡಿನ ವಿಡಿಯೋ ಕ್ಲಿಪ್ ಶೇರ್ ಮಾಡಿ “ಹೇಗೆ ಡ್ಯಾನ್ಸ್ ಮಾಡುತ್ತೀರಿ ಅಲ್ಲು ಅರ್ಜುನ್” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟೈಲಿಶ್ ಸ್ಟಾರ್, ನನಗೆ ಸಂಗೀತ ತುಂಬಾ ಇಷ್ಟ. ಉತ್ತಮ ಸಂಗೀತ ನೃತ್ಯಮಾಡಿಸುತ್ತೆ. ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ ಎಂದಿದ್ದಾರೆ.

    ದಿಶಾ ಪಠಾಣಿ ಮಾತ್ರವಲ್ಲ ಇತ್ತೀಚಿಗೆ ಬಾಲಿವುಡ್‍ನ ನಟಿ ಶಿಲ್ಪಾ ಶೆಟ್ಟಿ ಕೂಡ ಬುಟ್ಟಬೊಮ್ಮ ಹಾಡಿಗೆ ಫಿದಾ ಆಗಿದ್ದರು. ಅಷ್ಟೇ ಅಲ್ಲದೇ ಈ ಹಾಡಿಗೆ ಟಿಕ್‍ಟಾಕ್ ವಿಡಿಯೋ ಮಾಡಿ ಶೇರ್ ಮಾಡಿದ್ದರು. ಇತ್ತೀಚಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಅಲ್ಲು ಡ್ಯಾನ್ಸ್ ಬಗ್ಗೆ ಹಾಡಿಹೊಗಳಿದ್ದರು.

    https://www.instagram.com/p/B8TZnJ5hAcM/

    ‘ಅಲಾ ವೈಕುಂಠಪುರಂಲೋ’ ಸಕ್ಸಸ್ ಖುಷಿಯನ್ನು ಅಲ್ಲು ಸದ್ಯ ನಿರ್ದೇಶಕ ಸುಕುಮಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‍ಗೆ ನಟಿ ರಶ್ಮಿರಾ ಮಂದಣ್ಣ ನಾಯಕಿಯಾಗಿ ಸಾಥ್ ನೀಡಲಿದ್ದಾರೆ ಎನ್ನಲಾಗಿದೆ.