Tag: ಬುಚಾ

  • ಯುವತಿಯರು, ಮಹಿಳೆಯರನ್ನು 25 ದಿನ ಬೇಸ್ಮೆಂಟ್‌ನಲ್ಲಿಟ್ಟು ರಷ್ಯಾ ಸೈನಿಕರಿಂದ ಅತ್ಯಾಚಾರ

    ಯುವತಿಯರು, ಮಹಿಳೆಯರನ್ನು 25 ದಿನ ಬೇಸ್ಮೆಂಟ್‌ನಲ್ಲಿಟ್ಟು ರಷ್ಯಾ ಸೈನಿಕರಿಂದ ಅತ್ಯಾಚಾರ

    ಲಂಡನ್: ಯುದ್ಧದ ನಡುವೆ ರಷ್ಯಾ ಸೈನಿಕರು ಉಕ್ರೇನ್‌ನ ಮಹಿಳೆಯರೊಂದಿಗೆ ಅತ್ಯಾಚಾರಿಗಳಿಗಿಂತಲೂ ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಉಕ್ರೇನ್ ಮಹಿಳೆಯರು ಹಾಗೂ ಯುವತಿಯರು ನರಕ ಅನುಭವಿಸುವಂತಾಗಿದೆ.

    ಯಾವುದೇ ಯುದ್ಧಗಳು ನಡೆದಾಗ ಸಂತ್ರಸ್ತ ರಾಷ್ಟ್ರದ ಹೆಣ್ಣುಮಕ್ಕಳನ್ನು ಭೋಗದ ವಸ್ತುಗಳಾಗಿ ಉಪಯೋಗಿಸುತ್ತಾರೆ. ಇಂತಹದ್ದೇ ಅಮಾನವೀಯ ಘಟನೆಗೆ ಉಕ್ರೇನ್ ಸಾಕ್ಷಿಯಾಗಿದೆ. ಯುವತಿಯರೂ, ಬಾಲಕಿಯರನ್ನೂ 25 ದಿನಗಳ ಕಾಲ ಬೇಸ್ಮೆಂಟ್‌ನಲ್ಲಿ ಇಟ್ಟುಕೊಂಡಿದ್ದ ರಷ್ಯಾ ಸೈನಿಕರು, ನಿರಂತರ ಅತ್ಯಾಚಾರ ಎಸಗಿದ್ದಾರೆ. ಇಂಥದ್ದೊಂದು ಬೆಚ್ಚಿ ಬೀಳಿಸುವ ಸಂಗತಿ ಉಕ್ರೇನ್‌ನಿಂದ ಹೊರಬಿದ್ದಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಭೀಕರ ಚಂಡಮಾರುತಕ್ಕೆ 58 ಮಂದಿ ಸಾವು – ಫಿಲಿಪೈನ್ಸ್‌ನಲ್ಲಿ ಬಿಡುವಿಲ್ಲದೇ ನಡೀತಿದೆ ಕಾರ್ಯಾಚರಣೆ

    russia ukraine

    ಬುಚಾ ನಗರದ ಮನೆಯೊಂದರ ನೆಲಮಾಳಿಗೆಯಲ್ಲಿ ರಷ್ಯಾದ ಸೈನಿಕರು ಉಕ್ರೇನ್‌ನ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದರಲ್ಲಿ 14 ರಿಂದ 24 ವರ್ಷ ವಯಸ್ಸಿನ ಸುಮಾರು 25 ಮಂದಿ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

    ಉಕ್ರೇನ್‌ನ ಗ್ರಾಮೀಣ ಭಾಗವೊಂದರಲ್ಲಿ 50 ವರ್ಷದ ಮಹಿಳೆಯೊಬ್ಬರಿಗೆ ಗನ್ ತೋರಿಸಿ ಅತ್ಯಾಚಾರ ಎಸಗಿದ್ದಾರೆ. ಮಹಿಳೆಯರನ್ನು ರಕ್ಷಿಸಲು ಬಂದವರನ್ನೂ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಮಾನವ ಹಕ್ಕುಗಳ ಆಯೋಗದ ಓಂಬುಡ್ಸ್ಮನ್ ಲ್ಯುಡ್ಮಿಲಾ ಡೆನಿಸೋವಾ ತಿಳಿಸಿದ್ದಾರೆ. ಇದನ್ನೂ ಓದಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ತ್ಯಾಗ ಮುಂದಿನ ಪೀಳಿಗೆಗೆ ಪ್ರೇರಣೆ: ಮೋದಿ

    RUSSIA

    ಅತ್ಯಂತ ಕ್ರೂರವಾಗಿ ನಡೆದುಕೊಂಡಿರುವ ರಷ್ಯಾದ ಸೈನಿಕರು ಮುಂದೆ ಯಾವುದೇ ಪುರುಷನೊಂದಿಗೆ ಅವರು ಲೈಂಗಿಕ ಸಂಪರ್ಕ ಬೆಳೆಸಲು ಸಾಧ್ಯವಾಗದ ಮಟ್ಟಿಗೆ ಅತ್ಯಾಚಾರ ನಡೆಸಿದ್ದಾರೆ. ಆದರೆ, ಮಹಿಳೆಯರು ತಮಗೆ ಏನಾಯಿತೆಂದು ಹೇಳಲು ಸಿದ್ಧವಿಲ್ಲ. ಅವರಲ್ಲಿ ಹೆಚ್ಚಿನವರಿಗೆ ಮಾನಸಿಕವಾಗಿ ಧೈರ್ಯ ತುಂಬುವವರು ಬೇಕಾಗಿದ್ದಾರೆ. ಅವರು ನಮಗೆ ಸಾಷ್ಟ್ಯನೀಡದೇ ಅಪರಾಧಿಗಳಿಂದು ಗುರುತಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

  • ಯುದ್ಧ ನಿಲ್ಲಿಸಲು ಉಳಿದಿರುವುದು ಒಂದೇ ಉಪಾಯ: ಝೆಲೆನ್ಸ್ಕಿ

    ಯುದ್ಧ ನಿಲ್ಲಿಸಲು ಉಳಿದಿರುವುದು ಒಂದೇ ಉಪಾಯ: ಝೆಲೆನ್ಸ್ಕಿ

    ಕೀವ್: ಉಕ್ರೇನ್‌ನ ಬುಚಾ ನಗರದಲ್ಲಿ ನಡೆಯುತ್ತಿರುವ ಘಟನೆಗಳು ಕ್ಷಮಿಸಲಾಗದವು. ಆದರೂ ಉಕ್ರೇನ್ ಮತ್ತು ರಷ್ಯಾ ಮಾತುಕತೆ ಮುಂದುವರಿಸುವಂತಹ ಕಠಿಣ ಆಯ್ಕೆಯನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

    ಉಕ್ರೇನ್ ಅಧ್ಯಕ್ಷ ಮಂಗಳವಾರ ಯುದ್ಧವನ್ನು ಕೊನೆಗೊಳಿಸಲು ರಷ್ಯಾದೊಂದಿಗೆ ಮಾತುಕತೆ ನಡೆಸುವುದನ್ನು ಬಿಟ್ಟು ಉಕ್ರೇನ್‌ಗೆ ಬೇರೆ ಯಾವುದೇ ದಾರಿಯಿಲ್ಲ. ಆದರೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವೈಯಕ್ತಿಕವಾಗಿ ಮಾತುಕತೆ ನಡೆಸಲು ಒಪ್ಪುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು- ಅಧಿಕಾರ ವಹಿಸಿಕೊಂಡ ಒಂದೇ ದಿನಕ್ಕೆ ಹಣಕಾಸು ಸಚಿವ ರಾಜೀನಾಮೆ

    ಉಕ್ರೇನ್‌ನ ಬುಚಾ ನಗರದಲ್ಲಿ ಇದೀಗ ರಷ್ಯಾವನ್ನು ಕ್ಷಮಿಸಲಾರದಂತಹ ಹತ್ಯಾಕಾಂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಝೆಲೆನ್ಸ್ಕಿ ಮಾತುಕತೆ ನಡೆಸಿ ಯುದ್ಧವನ್ನು ನಿಲ್ಲಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಅಮೆರಿಕದ ಟೈಮ್ಸ್‌ ಸ್ಕ್ವೇರ್‌ನಲ್ಲಿ ಮೊದಲ ಬಾರಿಗೆ ನಮಾಜ್- ಇಸ್ಲಾಂ ಬಗ್ಗೆ ತಪ್ಪು ಕಲ್ಪನೆಗಳಿವೆ ಎಂದ ಮುಸ್ಲಿಮರು

    ಉಕ್ರೇನ್ ರಾಜಧಾನಿ ಕೀವ್ ಸುತ್ತಲಿನ ನಗರಗಳಲ್ಲಿ ಇತ್ತೀಚೆಗೆ ನೂರಾರು ಶವಗಳು ಬೀದಿ ಬೀದಿಗಳಲ್ಲಿ ಕಂಡುಬಂದಿದ್ದು ಈ ಮೂಲಕ ರಷ್ಯಾ ಸೈನಿಕರ ಕ್ರೂರತೆ ಬಯಲಾಗಿದೆ. ಜನರ ಕೈಗಳನ್ನು ಕಟ್ಟಿಹಾಕಿ, ಬಾಯಿಗೆ ಗುಂಡು ಹೊಡೆದು ಕ್ರೂರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.