Tag: ಬುಕ್ ಮೈ ಶೋ

  • 1 ಕೋಟಿ ಟಿಕೆಟ್‌ ಮಾರಾಟ – ಹಿಂದಿಯಲ್ಲಿ ಕಾಂತಾರ 130+ ಕೋಟಿ ಗಳಿಕೆ

    1 ಕೋಟಿ ಟಿಕೆಟ್‌ ಮಾರಾಟ – ಹಿಂದಿಯಲ್ಲಿ ಕಾಂತಾರ 130+ ಕೋಟಿ ಗಳಿಕೆ

    ರಿಷಬ್‌ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಕಾಂತಾರ: ಚಾಪ್ಟರ್ 1 (Kantara: Chapter 1) ಟಿಕೆಟ್‌ ಬುಕ್ಕಿಂಗ್‌ ಮಾಡುವ ಬುಕ್‌ಮೈಶೋದಲ್ಲಿ (BookMyShow) 1 ಕೋಟಿ ಟಿಕೆಟ್‌ ಮಾರಾಟವಾಗಿದೆ.

    ಅಕ್ಟೋಬರ್‌ 2 ರಂದು ಕಾಂತಾರ ಬಿಡುಗಡೆಯಾಗಿದ್ದು ಈಗಲೂ ಪ್ರೇಕ್ಷಕರಿಂದ ಬೇಡಿಕೆ ವ್ಯಕ್ತವಾಗುತ್ತಿದೆ. ಶನಿವಾರ ಭಾನುವಾರ ಬಹುತೇಕ ಥಿಯೇಟರ್‌ಗಳು ಭರ್ತಿಯಾಗುತ್ತಿವೆ. ಟಯರ್‌ 2 ಮತ್ತು ಟಯರ್‌ 3 ನಗರಗಳಲ್ಲಿ ಥಿಯೇಟರ್‌ ಈಗಲೂ ಭರ್ತಿಯಾಗುತ್ತಿರುವುದು ಚಿತ್ರ ಉತ್ತಮ ಕಲೆಕ್ಷನ್‌ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಮೊದಲ ದಿನವೇ ಬುಕ್‌ಮೈಶೋದಲ್ಲಿ ದಾಖಲೆ ಬರೆದ ಕಾಂತಾರ


    ಆರಂಭದಲ್ಲಿ ಹಿಂದಿ ಕಲೆಕ್ಷನ್‌ ಕಡಿಮೆ ಇತ್ತು. ಆದರೆ ಈಗ ಹಿಂದಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದರಿಂದಾಗಿ ಹಿಂದಿ ಕಲೆಕ್ಷನ್‌ 100 ಕೋಟಿ ರೂ. ಗಡಿ ದಾಟಿದೆ. ಶುಕ್ರವಾರ 7.10 ಕೋಟಿ ರೂ. ಶನಿವಾರ 14.37 ಕೋಟಿ ರೂ. ಗಳಿಸುವ ಮೂಲಕ ಒಟ್ಟು 131.57 ಕೋಟಿ ರೂ. ಗಳಿಸಿದೆ. ಇದನ್ನೂ ಓದಿ:  ಹಿಂದಿ ಬಿಗ್ ಶೋನಲ್ಲಿ ರಿಷಬ್ ಶೆಟ್ಟಿ – ಬಿಗ್‌ಬಿಗೆ ವಿಶ್ ಮಾಡಿದ ಡಿವೈನ್ ಸ್ಟಾರ್

  • ಕನ್ನಡ ಸಿನಿಮಾಗಳಿಗೆ ಬುಕ್‍ಮೈಶೋದಿಂದ ಅನ್ಯಾಯ: ಕೆ ಮಂಜು ವಾಗ್ದಾಳಿ

    ಕನ್ನಡ ಸಿನಿಮಾಗಳಿಗೆ ಬುಕ್‍ಮೈಶೋದಿಂದ ಅನ್ಯಾಯ: ಕೆ ಮಂಜು ವಾಗ್ದಾಳಿ

    ಬೆಂಗಳೂರು: ಬುಕ್ ಮೈ ಶೋ ಹಣವನ್ನು ಪಡೆದು ಪರಭಾಷಾ ಸಿನಿಮಾಗಳಿಗೆ ಪ್ರಚಾರ ನೀಡಿ ಕನ್ನಡ ಚಿತ್ರಗಳನ್ನು ತುಳಿಯುತ್ತಿದೆ ಎಂದು ಸತ್ಯ ಹರಿಶ್ಚಂದ್ರ ಚಿತ್ರದ ನಿರ್ಮಾಪಕ ಕೆ ಮಂಜು ಆರೋಪಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಸಿನಿಮಾಗಳು ಚೆನ್ನಾಗಿದ್ದರೂ, ಉತ್ತಮ ಸಿನಿಮಾ ಅಂತ ಕನ್ನಡ ಚಿತ್ರಗಳಿಗೆ ಪ್ರಚಾರ ನೀಡುವುದಿಲ್ಲ. ಹೀಗಾಗಿ ಪರಭಾಷೆ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಬುಕ್‍ಮೈ ಶೋ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ನೀಡೋದಾಗಿ ಹೇಳಿದರು.

    ಹಣ ಪಡೆದು ಬೇರೆ ಭಾಷೆಯ ಸಿನಿಮಾಗಳಿಗೆ ಬುಕ್ ಮೈ ಶೋ ಪ್ರಚಾರ ನೀಡುತ್ತಿದೆ. ನಾನು ಬುಕ್ ಮೈ ಶೋ ನವರನ್ನು ಇಲ್ಲಿಗೆ ಬಿಡುವುದಿಲ್ಲ, ಬುಕ್ ಮೈ ಶೋ ಪರ್ಸೆಂಟೇಜ್ ನಿಂದಾಗಿ ಕನ್ನಡ ಸಿನಿಮಾಗಳಿಗೆ ಹೊಡೆತವಾಗುತ್ತಿದೆ. ಹೀಗಾದರೆ ಕನ್ನಡ ಚಿತ್ರಗಳ ನಿರ್ಮಾಪಕರ ಗತಿಯೇನು? ಒಳ್ಳೆ ಸಿನಿಮಾಗಳು ಇದ್ದರೂ ಸಹ ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಬೆಂಬಲ ಇಲ್ಲ. ಮಾಫಿಯಾ ಗ್ಯಾಂಗ್ ನಿಯಂತ್ರಿಸುತ್ತಿದ್ದು, ನಮ್ಮ ಕನ್ನಡ ಸಿನಿಮಾಗಳಿಗೆ ಮಾರ್ಕ್ಸ್ ಕೊಡೋದಕ್ಕೆ ಇವರು ಯಾರು ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.