Tag: ಬೀಸ್ಟ್ ಸಿನಿಮಾ

  • `ಕೆಜಿಎಫ್ 2′ ಮುಂದೆ ಮುಗ್ಗರಿಸಿದ್ದ ʻಬೀಸ್ಟ್‌ʼ ಚಿತ್ರಕ್ಕೆ ಮತ್ತೆ ಗೆಲುವು

    `ಕೆಜಿಎಫ್ 2′ ಮುಂದೆ ಮುಗ್ಗರಿಸಿದ್ದ ʻಬೀಸ್ಟ್‌ʼ ಚಿತ್ರಕ್ಕೆ ಮತ್ತೆ ಗೆಲುವು

    ಭಾರತೀಯ ಚಿತ್ರರಂಗದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ `ಕೆಜಿಎಫ್ 2′ (Kgf 2)   ಮುಂದೆ ಬೀಸ್ಟ್ ಸಿನಿಮಾ ಮುಗ್ಗರಿಸಿತ್ತು. ಯಶ್ ಚಿತ್ರದ ಮುಂದೆ ಥಳಪತಿ ವಿಜಯ್ ಸಿನಿಮಾ ಮಕಾಡೆ ಮಲಗಿತ್ತು. ಇದೀಗ ಆದರೆ ವಿಕ್ರಮ್ ಚಿತ್ರದ ಮುಂದೆ ʻಬೀಸ್ಟ್ʼ(Beast Film) ಗೆಲುವು ಸಾಧಿಸಿದೆ.

    `ಕೆಜಿಎಫ್ 2′ ಮತ್ತು ಬೀಸ್ಟ್ ಸಿನಿಮಾ ಒಂದು ದಿನದ ಅಂತರದಲ್ಲಿ ತೆರೆಕಂಡಿತ್ತು. ಯಶ್ (Yash) ನಟನೆಯ `ಕೆಜಿಎಫ್ 2′ 1000 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಬೀಸ್ಟ್ ಹೀನಾಯವಾಗಿ ಸೋತಿತ್ತು. ಆದರೆ `ಬೀಸ್ಟ್’ ಚಿತ್ರದ ನಸೀಬು ಬದಲಾಗಿದೆ. ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ಮುಂದೆ ಗೆದ್ದು ಬೀಗಿದೆ. ಇದನ್ನೂ ಓದಿ:ನಟನೆಯತ್ತ ʻಕಾಂತಾರʼ ಹೀರೋ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

    ದೀಪಾವಳಿ ಹಬ್ಬಕ್ಕೆ(Deepavali Festival) `ಬೀಸ್ಟ್’ ಮತ್ತು `ವಿಕ್ರಮ್'(Vikram) ಸಿನಿಮಾ ಟಿವಿಯಲ್ಲಿ ಪ್ರೀಮಿಯರ್ ಆಗಿತ್ತು. ಥಿಯೇಟರ್‌ನಲ್ಲಿ 426 ಕೋಟಿ ರೂ. ಲೂಟಿ ಮಾಡಿದ್ದ ವಿಕ್ರಮ್ ಸಿನಿಮಾ ಮುಂದೆ ಈಗ ಬೀಸ್ಟ್ ಗೆದ್ದಿದೆ. ವಾಹಿನಿಯ ಟಿಆರ್‌ಪಿ ರೇಟಿಂಗ್ ಪ್ರಕಾರ ಬೀಸ್ಟ್ 12.62 ರೇಟಿಂಗ್ ಸಿಕ್ಕಿದೆ. ವಿಕ್ರಮ್‌ಗೆ 4.42 ರೇಟಿಂಗ್ ಸಿಕ್ಕಿದೆ. ಈ ಮೂಲಕ ವಿಕ್ರಮ್ ಮುಂದೆ ಬೀಸ್ಟ್ ಗೆಲುವು ಸಾಧಿಸಿದೆ.

    `ಕೆಜಿಎಫ್ 2′ ಮುಂದೆ ಶೇಕ್ ಆಗಿದ್ದ ಬೀಸ್ಟ್ ಸಿನಿಮಾಗೆ ಇದೀಗ ಕಿರುತೆರೆಯ ಮೂಲಕ ಸಕ್ಸಸ್ ತಂದು ಕೊಟ್ಟಿದೆ. ಥಳಪತಿ ವಿಜಯ್ ಚಿತ್ರಕ್ಕೆ ಫ್ಯಾನ್ಸ್ ಮನಗೆದ್ದಿದೆ.

    Live Tv
    [brid partner=56869869 player=32851 video=960834 autoplay=true]

  • `ಬೀಸ್ಟ್’ ಸೋಲಿನ ಹಿನ್ನೆಲೆ `ತಲೈವರ್ 169′ ಚಿತ್ರಕ್ಕೆ ಹೊಸ ನಿರ್ದೇಶಕರ ಹುಡುಕಾಟದಲ್ಲಿ ತಲೈವಾ!

    `ಬೀಸ್ಟ್’ ಸೋಲಿನ ಹಿನ್ನೆಲೆ `ತಲೈವರ್ 169′ ಚಿತ್ರಕ್ಕೆ ಹೊಸ ನಿರ್ದೇಶಕರ ಹುಡುಕಾಟದಲ್ಲಿ ತಲೈವಾ!

    ಕಾಲಿವುಡ್ ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್‌ನಲ್ಲಿ `ತಲೈವರ್ 169′ ಚಿತ್ರ ಅನೌನ್ಸ್ ಆಗಿತ್ತು. ಆದರೆ ರಜನೀಕಾಂತ್ ತಮ್ಮ ಚಿತ್ರ ನಿರ್ದೇಶಕನನ್ನು ಬದಲಾವಣೆ ಮಾಡುವ ಯೋಜನೆಯಲ್ಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬೀಸ್ಟ್ ಚಿತ್ರ ಇತ್ತೀಚಿಗೆ ರಿಲೀಸ್ ಆಗಿತ್ತು. ಚಿತ್ರಕ್ಕೆ ಪ್ರತಿಕ್ರಿಯೆ ವ್ಯಕ್ತವಾಗ್ತಿರೋ ಹಿನ್ನೆಲೆಯಲ್ಲಿ, `ತಲೈವರ್ 169′ ಚಿತ್ರಕ್ಕೆ ನಿರ್ದೇಶಕ ಬದಲಿಸುವ ಪ್ಲ್ಯಾನ್‌ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ `ಕೆಜಿಎಫ್ 2′ ಚಿತ್ರವನ್ನ ಕನ್ನಡದಲ್ಲೇ ನೋಡಿ ಸೂಪರ್ ಸ್ಟಾರ್ ರಜನೀಕಾಂತ್ ಮೆಚ್ಚುಗೆ ಸೂಚಿಸಿದ್ದರು. ಆದರೆ ಬೀಸ್ಟ್ ಚಿತ್ರದ ಬಗ್ಗೆ ಯಾವುದೇ ಅಭಿಪ್ರಾಯ ತಿಳಿಸಿರಲಿಲ್ಲ. ಹಾಗಾಗಿ ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ.

    ಈ ಹಿಂದೆ `ತಲೈವರ್ 169′ ಚಿತ್ರದ ಅಧಿಕೃತ ಟೀಸರ್ ಲುಕ್‌ನ್ನ ರಜನೀಕಾಂತ್ ಅವರು ಟ್ವಿಟರ್ ಕವರ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದರು ಈಗ ಆ ಪೋಸ್ಟ್ ಇಲ್ಲದೇ ಇರುವುದು ಹಲವಾರು ವದಂತಿಗೆ ದಾರಿ ಮಾಡಿಕೊಟ್ಟಿದೆ. ಚಿತ್ರತಂಡದವರಾಗಲಿ, ಸ್ವತಃ ರಜನೀಕಾಂತ್ ಅವರು ಕೂಡ ಈ ವದಂತಿಯ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ:`ಕೆಜಿಎಫ್ 2′ ಚಿತ್ರ ನೋಡಿ ಮಾಸ್ಟರ್ ಪೀಸ್ ಎಂದು ಹೊಗಳಿದ ರಿಯಲ್ ಸ್ಟಾರ್ ಉಪೇಂದ್ರ

    ದಳಪತಿ ವಿಜಯ್ ಮತ್ತು ಪೂಜಾ ಹೆಗ್ಡೆ ನಟನೆಯ ʻಬೀಸ್ಟ್‌ʼ ಚಿತ್ರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡದೇ ಇರೋದು ನಿರ್ದೇಶಕ ನೆಲ್ಸನ್ ಕೆರಿಯರ್‌ಗೆ ಎಫೆಕ್ಟ್ ಆಯ್ತಾ ಅಥವಾ ನಿಜಕ್ಕೂ ರಜನೀಕಾಂತ್ ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರಾ ಅಂತಾ ಕಾದು ನೋಡಬೇಕಿದೆ.

  • ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್

    ರ್ನಾಟಕ ಮೂಲದ ದಕ್ಷಿಣದ ಚೆಲುವೆ ಪೂಜಾ ಹೆಗ್ಡೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಬರೋಬ್ಬರಿ ಒಂದು ಕೋಟಿ ಸಂಭಾವನೆ ಪಡೆದುಕೊಂಡ ವಿಚಾರ ವಾರದಿಂದ ಸಿನಿಮಾ ರಂಗದಲ್ಲಿ ಗಿರಿಕಿ ಹೊಡೆಯುತ್ತಿದೆ. ಸಾಲು ಸಾಲು ಸೋಲುಗಳನ್ನೇ ಉಂಡಿರುವ ಪೂಜಾ, ನಿಜಕ್ಕೂ ಅಷ್ಟೊಂದು ಸಂಭಾವನೆ ಪಡೆದರಾ ಅನ್ನುವ ಅನುಮಾನ ಕೂಡ ಮೂಡಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪೂಜಾ, ತಮ್ಮ ಪಾಡಿಗೆ ತಾವು ಒಪ್ಪಿಕೊಂಡಿರುವ ಹಾಡಿಗೆ ಹೆಜ್ಜೆ ಹಾಕಿ ಬಂದಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಹೌದು, ಪೂಜಾ ಇದೀಗ ‘ಎಫ್ 3’ ಹೆಸರಿನ ಸಿನಿಮಾವೊಂದರಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿನ್ನೆಯಷ್ಟೇ ಆ ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದೆ. ದಟ್ಟ ಪಿಂಕ್ ಬಣ್ಣದ ತುಂಡುಡುಗೆಯಲ್ಲಿ ಪೂಜಾ ಸೊಂಟ ಬಳುಕಿಸಿದ್ದಾರೆ. ಇದೊಂದು ಪಾರ್ಟಿ ಸಾಂಗ್ ಆಗಿದ್ದು, ಪಡ್ಡೆಗಳಿಗೆ ಕಿಕ್ ಏರಿಸುವಂತಹ ಸಾಹಿತ್ಯ ಈ ಹಾಡಿನಲ್ಲಿ ಇದೆಯಂತೆ. ಇದನ್ನೂ ಓದಿ : ಹನುಮ ಜಯಂತಿ : ದೂರದ ಬೆಟ್ಟ ಸಿನಿಮಾದಲ್ಲಿಯ ಡಾ.ರಾಜ್ ಅವರ ಹನುಮನ ಪಾತ್ರ ಏನಾಯಿತು?

    ‘ಎಫ್ 3’ ಅಂದರೆ ಏನು? ಅನ್ನುವುದರ ಕುರಿತು ಸಿನಿಮಾ ರಂಗವು ಈವರೆಗೂ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಫೋಸ್ಟರ್ ನಲ್ಲಿ ಇರುವಂತೆ ‘ಎಫ್’ ಅಂದರೆ ಫನ್, ‘ಎಫ್’ ಅಂದರೆ ಫ್ರಸ್ಟ್ರೇಷನ್. ಇವೆರಡರ ಸಂಗಮವೇ ಈ ಸಿನಿಮಾ ಎನ್ನಬಹುದು. ವಿಕ್ಟರಿ ವೆಂಕಟೇಶ್ ಮತ್ತು ವರುಣ್ ತೇಜ್ ಕಾಂಬಿನೇಷನ್ ನ ಈ ಸಿನಿಮಾಗೆ ಅನಿಲ್ ರವಿಪುಡಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರೇ ಪೂಜಾ ಡ್ಯಾನ್ಸ್ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಹಸೆಮಣೆ ಏರಿದ ಆಲಿಯಾ-ರಣಬೀರ್‌ಗೆ ಜೋಡಿ ಕುದುರೆ ಉಡುಗೊರೆ

    ಪೂಜಾ ಹೆಗ್ಡೆ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಅಂದುಕೊಂಡಷ್ಟು ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಪ್ರಭಾಸ್ ಜತೆ ನಟಿಸಿದ್ದ ರಾಧೆ ಶ್ಯಾಮ್ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿದೆ ಎಂದು ನಂಬಲಾಗಿತ್ತು. ಆ ನಂಬಿಕೆ ಹುಸಿ ಆಯಿತು. ಅಲ್ಲದೇ, ಮೊನ್ನೆಯಷ್ಟೇ ರಿಲೀಸ್ ಆಗಿರುವ ದಳಪತಿ ವಿಜಯ್ ಅವರ ಬೀಸ್ಟ್ ನಲ್ಲೂ ಪೂಜಾ ನಟಿಸಿದ್ದಾರೆ. ಈ ಸಿನಿಮಾ ಕೂಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಹಿಂದೆ ಬಿದ್ದಿದೆ.

  • ರಾಜಕೀಯ ಪ್ರವೇಶದ ಸೂಚನೆ ಕೊಟ್ಟ ಖ್ಯಾತನಟ ದಳಪತಿ ವಿಜಯ್

    ರಾಜಕೀಯ ಪ್ರವೇಶದ ಸೂಚನೆ ಕೊಟ್ಟ ಖ್ಯಾತನಟ ದಳಪತಿ ವಿಜಯ್

    ನಾಳೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ‘ಬೀಸ್ಟ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ವಿಜಯ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇನು ಸಿನಿಮಾ ತೆರೆಗೆ ಬರಬೇಕಿದೆ. ಅದಕ್ಕೂ ಎರಡು ದಿನ ಮುನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿ, ಸಂಚಲನ ಸೃಷ್ಟಿಸಿದ್ದಾರೆ ವಿಜಯ್. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ವಿಜಯ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಹಲವು ವರ್ಷಗಳಿಂದ ತಮಿಳುನಾಡಿನಲ್ಲಿ ಹರಿದಾಡುತ್ತಲೇ ಇದೆ. ವಿಜಯ್ ಹೆಸರಿನಲ್ಲೇ ಪಕ್ಷವೊಂದನ್ನು ಅವರ ತಂದೆ ಸ್ಥಾಪಿಸಿದ್ದರು. ಆ ಪಕ್ಷದಲ್ಲಿ ನಾನು ಸಕ್ರೀಯನಾಗಿಲ್ಲ ಎಂದು ವಿಜಯ್ ಹೇಳಿದ್ದರೂ, ಅವರ ಹೆಸರಿನಲ್ಲಿಯೇ ಅನೇಕ ಚಟುವಟಿಕೆಗಳು ಆ ಪಕ್ಷದಲ್ಲಿ ನಡೆದಿವೆ. ಅಲ್ಲದೇ, ಕಳೆದ ಬಾರಿ ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ವಿಜಯ್ ಅವರ ತಂದೆಯ ಪಕ್ಷ ಸ್ಪರ್ಧಿಸಿತ್ತು. ಆ ವೇಳೆ ತಮ್ಮ ಫೋಟೋವನ್ನು ಬಳಸಿಕೊಳ್ಳಲು ವಿಜಯ್ ಅನುಮತಿ ಕೊಟ್ಟಿದ್ದರು. ಈಗ ತಾವೂ ರಾಜಕೀಯ ಪ್ರವೇಶ ಮಾಡುವ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ‘ಬೀಸ್ಟ್’ ಸಿನಿಮಾಗೆ ಸಂಬಂಧಿಸಿದ ಸಂದರ್ಶನದಲ್ಲಿ ಮಾತನಾಡಿರುವ ವಿಜಯ್, ‘ನಾನು ರಾಜಕೀಯ ರಂಗಕ್ಕೆ ಬರಬೇಕು ಎನ್ನುವುದು ನನ್ನ ಅಭಿಮಾನಿಗಳಿಗೆ ಆಸೆಯಿದೆ. ಹಲವು ಬಾರಿ ಅವರು ನನ್ನನ್ನು ಒತ್ತಾಯಿಸಿದ್ದಾರೆ. ಅವರು ಆಸೆ ಪಟ್ಟರೆ ಖಂಡಿತಾ ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆ’ ಎಂದು ಹೇಳುವ ಮೂಲಕ ಮುಂದಿನ ದಿನಗಳಲ್ಲಿ ರಾಜಕಾರಣಿ ಆಗುತ್ತೇನೆ ಎಂದು ಪರೋಕ್ಷವಾಗಿ ಮಾತನಾಡಿದ್ದಾರೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    ವಿಜಯ್ ಈಗಾಗಲೇ ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾನಾ ಪಕ್ಷಗಳ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಪೆಟ್ರೊಲ್, ಡಿಸೈಲ್ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಸೈಕಲ್ ಮೇಲೆ ಸವಾರಿ ಮಾಡಿ ಮತದಾನ ಮಾಡಿದ್ದರು ವಿಜಯ್, ಅವರ ಈ ನಡೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ, ನಾಡು, ನುಡಿಗೆ ತೊಂದರೆ ಆದಾಗಲೂ ಅವರು ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಹೀಗಾಗಿ ವಿಜಯ್ ಅವರು ರಾಜಕೀಯ ಪ್ರವೇಶ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿದೆ. ಮುಂದಿನ ದಿನಗಳಲ್ಲಿ ಅವರು ಈಡೇರಿಸುವುದರಲ್ಲಿ ಅಚ್ಚರಿಯಿಲ್ಲ.