Tag: ಬೀಸ್ಟ್

  • ‘ಮಂಜುಮ್ಮೆಲ್ ಬಾಯ್ಸ್’ ನಟನ ಜೊತೆ ಅಪರ್ಣಾ ದಾಸ್ ಮದುವೆ

    ‘ಮಂಜುಮ್ಮೆಲ್ ಬಾಯ್ಸ್’ ನಟನ ಜೊತೆ ಅಪರ್ಣಾ ದಾಸ್ ಮದುವೆ

    ‘ಮಂಜುಮ್ಮೆಲ್ ಬಾಯ್ಸ್’ ಖ್ಯಾತಿಯ ದೀಪಕ್ ಪರಂಬೆಲ್ (Deepak Parambol) ಜೊತೆ ‘ಬೀಸ್ಟ್’ (Beast Film) ನಟಿ ಅಪರ್ಣಾ ದಾಸ್ (Aparna Das) ದಾಂಪತ್ಯ ಜೀವನಕ್ಕೆ (Wedding)  ಕಾಲಿಟ್ಟಿದ್ದಾರೆ. ಕೇರಳದ ದೇವಸ್ಥಾನವೊಂದರಲ್ಲಿ ಈ ಜೋಡಿ ಸರಳವಾಗಿ ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದು, ನವಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

    ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಈ ಮದುವೆ ಜರುಗಿದ್ದು, ದೀಪಕ್- ಅಪರ್ಣಾ ಬಾದಮಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇಬ್ಬರೂ ಕುಟುಂಬದ ಸದಸ್ಯರು, ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ:ತೆಲುಗಿನ ಸಂಗೀತ ನಿರ್ದೇಶಕ ತಮನ್‌ರನ್ನು ಭೇಟಿಯಾದ ಸುದೀಪ್ ಪುತ್ರಿ

    ಕೆಲದಿನಗಳ ಹಿಂದೆ ಇಬ್ಬರ ಮದುವೆ ಬಗ್ಗೆ ಭಾರೀ ಸುದ್ದಿಯಾಗಿತ್ತು. ಮದುವೆ ಸಜ್ಜಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇಬ್ಬರೂ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಮದುವೆ ಫೋಟೋ ಶೇರ್ ಮಾಡಿ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

    ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ಅಪರ್ಣಾ ದಾಸ್ 2022ರಲ್ಲಿ ತೆರೆಕಂಡ ಬೀಸ್ಟ್ ಸಿನಿಮಾದಲ್ಲಿ ವಿಜಯ್ ಜೊತೆ ನಟಿಸಿದ್ದರು.

  • ಉಡುಪಿಯ ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪೂಜಾ ಹೆಗ್ಡೆ

    ಉಡುಪಿಯ ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪೂಜಾ ಹೆಗ್ಡೆ

    ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಯ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಪೂಜಾ ಹೆಗ್ಡೆ ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

    ಮಂಗಳವಾರದಂದು ಶುಭದಿನದಂದು ದೇವಿಯ ಸನ್ನಿಧಾನದಲ್ಲಿ ನಡೆಯುವ ಪೂಜೆಯಲ್ಲಿ ತಮ್ಮ ಕುಟುಂಬದವರೊಂದಿಗೆ ನಟಿ ಪೂಜಾ ಹೆಗ್ಡೆ ಭಾಗಿಯಾಗಿದ್ದರು. ದೇವರ ಕಾಪು ಮಾರಿಗುಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಆರ್ಶೀವಾದ ಪಡೆದರು. ಈ ಹಿಂದೆಯೂ ಸಾಕಷ್ಟು ಬಾರಿ ಮಾರಿಗುಡಿಗೆ ಬಂದಿದ್ದ ಪೂಜಾ ಹೆಗ್ಡೆ ತಮಗಿರುವ ಅಗಾಧ ಭಕ್ತಿ ಮತ್ತು ದೇವಿಯ ಮೇಲಿರುವ ನಂಬಿಕೆಯನ್ನು ವ್ಯಕ್ತಪಡಿಸಿದರು.

    ಕುಟುಂಬದ ಸದಸ್ಯರೊಂದಿಗೆ ಕುಟುಂಬದ ಆವರಣದಲ್ಲಿ ಕೆಲ ಕಾಲ ಕಳೆದರು. ಭೇಟಿಯ ವೇಳೆ ಸ್ಥಳೀಯರೊಂದಿಗೆ ಪೂಜಾ ತುಳು ಭಾಷೆನಲ್ಲೇ ಮಾತಾಡಿದರು. ಬಾಲಿವುಡ್ ಮತ್ತು ಟಾಲಿವುಡ್ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿರೋ ಪೂಜಾ ಹೆಗ್ಡೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರಾಗಿದ್ದಾರೆ. ಇದನ್ನೂ ಓದಿ: ‘ಟಕ್ಕರ್’ ಮೂಲಕ ಪ್ರೇಕ್ಷಕರ ಮನಗೆಲ್ಲೋಕೆ ರೆಡಿಯಾದ ಮನೋಜ್ ಕುಮಾರ್

    ಸಾಕಷ್ಟು ಸಿನಿಮಾಗಳ ಮೂಲಕ ಸಕ್ಸಸ್ ಕಂಡಿದ್ದ ನಟಿ, ಇತ್ತೀಚೆಗೆ ರಿಲೀಸ್ ಆಗಿದ್ದ ಮೂರು ಚಿತ್ರಗಳು ಗಳಿಕೆಯಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈಗ ಪೂಜಾ ತವರಿಗೆ ಮರಳಿ ದೇವರ ದರ್ಶನ ಪಡೆದಿರುವುದರು ಕುತೂಹಲ ಮೂಡಿಸಿದೆ.

  • ಪೂಜಾ ಹೆಗ್ಡೆಗೆ ಬೆನ್ನಬಿಡದ ಸೋಲು: ಸತತ ಮೂರು ಸಿನಿಮಾಗಳು ಫ್ಲಾಪ್

    ಪೂಜಾ ಹೆಗ್ಡೆಗೆ ಬೆನ್ನಬಿಡದ ಸೋಲು: ಸತತ ಮೂರು ಸಿನಿಮಾಗಳು ಫ್ಲಾಪ್

    ಸೌತ್ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಿರೋ ನಟಿ ಪೂಜಾ ಹೆಗ್ಡೆ, ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿರೋ ನಟಿ ಪೂಜಾ, ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳು ಬಾಕ್ಸ್ಆಫೀಸ್‌ನಲ್ಲಿ ಸೋಲಿನ ರುಚಿ ಕಂಡಿದೆ.

    ತಮಿಳಿನ `ಮುಗಮುಡಿ’ ಚಿತ್ರದ ಮೂಲಕ ಕಾಲಿವುಡ್‌ಗೆ ಲಗ್ಗೆಯಿಟ್ಟ ನಟಿ ಪೂಜಾ, ನಂತರ 2016ರಲ್ಲಿ `ಮೊಹೆಂಜೊ ದಾರೋ’ ಚಿತ್ರದಲ್ಲಿ ಹೃತಿಕ್ ರೋಷನ್‌ಗೆ ನಾಯಕಿಯಾಗುವ ಮೂಲಕ ಬಾಲಿವುಡ್‌ನಲ್ಲೂ ಗುರುತಿಸಿಕೊಂಡ್ರು. ಬಳಿಕ 2020ರಲ್ಲಿ `ಅಲ್ಲಾ ವೈಕುಂಠಪುರಮುಲೋ’ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಸೈ ಎನಿಸಿಕೊಂಡ್ರು. ಈ ಚಿತ್ರದ ಮೂಲಕ ಪೂಜಾ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿತ್ತು. ಆದರೆ `ರಾಧೆ ಶ್ಯಾಮ್’,`ಬೀಸ್ಟ್’, `ಆಚಾರ್ಯ’ ಸಾಲು ಸಾಲು ಸಿನಿಮಾ ಬಾಕ್ಸ್ಆಫೀಸ್‌ನಲ್ಲಿ ಮಕಾಡೆ ಮಲಗಿದೆ.

    ಪ್ರಭಾಸ್ ಮತ್ತು ಪೂಜಾ ನಟನೆಯ `ರಾಧೆ ಶ್ಯಾಮ್’ ಮಾರ್ಚ್ 11ರಂದು ತೆರೆ ಕಂಡಿತ್ತು. ಚಿತ್ರದಲ್ಲಿ ಪೂಜಾ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆಯಿತ್ತು. ಆದರೆ ಚಿತ್ರಮಂದಿರದಲ್ಲಿ ಮೋಡಿ ಮಾಡೋದ್ರಲ್ಲಿ ಸೋತಿತ್ತು. `ಬೀಸ್ಟ್’ ಚಿತ್ರ ರಿಲೀಸ್‌ಗೂ ಮುನ್ನ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. `ಬೀಸ್ಟ್’ ಚಿತ್ರನು ಕೂಡ ಪ್ರೇಕ್ಷಕರಿಗೆ ನಿರಾಸೆ ಮಾಡಿದೆ. `ಆಚಾರ್ಯ’ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಲ್ಕು ದೃಶ್ಯಗಳಿಗೆ ಅಷ್ಟೇ ಸೀಮಿತವಾಗಿದ್ದು, ಈ ಚಿತ್ರ ಕೂಡ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸೋತಿದೆ. ಇದನ್ನೂ ಓದಿ: `ಪುಷ್ಪ’ ಬೆಡಗಿ ರಶ್ಮಿಕಾ ಒಂದೇ ದಿನ ಏನೆಲ್ಲಾ ತಿಂತಾರೆ ಗೊತ್ತಾ? ರಶ್ಮು ವಿಡಿಯೋ ವೈರಲ್

    ಹೀಗೆ ಕರಾವಳಿ ಬ್ಯೂಟಿ ಪೂಜಾ ನಟನೆಯ ಸತತ ಮೂರು ಸಿನಿಮಾಗಳು ಸೋತಿದೆ. ಪೂಜಾ ಕೆರಿಯರ್‌ಗೆ ಬಿಗ್ ಬ್ರೇಕ್ ಬೇಕಾಗಿದೆ. ಸದ್ಯ ಪೂಜಾ ಕೈಯಲ್ಲಿ `ಸರ್ಕಸ್’ ಮತ್ತು ಮಹೇಶ್ ಬಾಬು ಮತ್ತು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಗಳಿಂದಾದರೂ ಸಕ್ಸಸ್ ಸಿಗಲಿದೆಯಾ ಕಾದು ನೋಡಬೇಕಿದೆ.

     

     

  • ಮುನಿಸು ಮರೆತು ಮಗನ ಪರ ನಿಂತುಕೊಂಡ ದಳಪತಿ ವಿಜಯ್ ತಂದೆ

    ಮುನಿಸು ಮರೆತು ಮಗನ ಪರ ನಿಂತುಕೊಂಡ ದಳಪತಿ ವಿಜಯ್ ತಂದೆ

    ಮಿಳಿನ ನಾಡಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಅವರಿಗೂ ಮತ್ತು ತಂದೆ ಎಸ್.ಎ.ಚಂದ್ರಶೇಖರ್ ಅವರಿಗೂ ಅಷ್ಟಕಷ್ಟೇ. ಮಗನ ಹೆಸರಿನಲ್ಲಿ ಚಂದ್ರಶೇಖರ್ ರಾಜಕಾರಣಕ್ಕೆ ಇಳಿದಾಗ ಸ್ವತಃ ವಿಜಯ್ ಅವರೇ ತಂದೆಯ ಮೇಲೆ ಅಸಮಾಧಾನಗೊಂಡಿದ್ದರು. ತಮ್ಮ ಹೆಸರಿನಲ್ಲಿ ಇರುವ ರಾಜಕೀಯ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯೇ ಚಂದ್ರಶೇಖರ್ ಮತ್ತು ವಿಜಯ್ ನಡುವೆ ಸಣ್ಣದೊಂದು ಬಿರುಕಿಗೂ ಕಾರಣವಾಗಿತ್ತು. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ

    ಇದೀಗ ವಿಜಯ್ ಅವರ ಬೀಸ್ಟ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವತಃ ವಿಜಯ್ ಅವರ ಅಭಿಮಾನಿಗಳಿಗೆ ಸಿನಿಮಾ ಚೆನ್ನಾಗಿಲ್ಲವೆಂದು ಹೇಳುತ್ತಿದ್ದಾರೆ. ಹೀಗಾಗಿ ವಿಜಯ್ ಅವರ ತಂದೆ ಚಂದ್ರೇಶೇಖರ್ ಚಿತ್ರದ ನಿರ್ದೇಶಕ ನೆಲ್ಸನ್ ವಿರುದ್ದ ಹರಿಹಾಯ್ದಿದ್ದಾರೆ. ಅಂತಾರಾಷ್ಟ್ರೀಯ ಭಯೋತ್ಪಾದನೆ ಬಗ್ಗೆ ಸಿನಿಮಾ ತೆಗೆದಿರುವ ನಿರ್ದೇಶಕರು, ಕಥೆ ಹೇಳುವ ಕ್ರಮದಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿಯೇ ಯೋಚಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ

    ವಿಶ್ವ ಮಟ್ಟದ ಸಮಸ್ಯೆಯನ್ನು ತಗೆದುಕೊಂಡು ಅದನ್ನು ಒಂದು ಮಾಲ್‍ ಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಒಬ್ಬ ಸ್ಟಾರ್ ನಟ ಜೊತೆಯಿದ್ದಾರೆ ಅನ್ನುವುದನ್ನು ಮರೆತು ನಿರ್ದೇಶಕರು ಸಿನಿಮಾ ಮಾಡಬೇಕು. ಸ್ಟಾರ್ ಇದ್ದಾರೆ ಅಂದ ಮಾತ್ರಕ್ಕೆ ಕಥೆ ಮರೆಯುವುದಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ವಿಜಯ್ ತಂದೆ. ಇದನ್ನೂ ಓದಿ: ತಾಯಿಯಾಗುತ್ತಿದ್ದಾರೆ ಚಂದ್ರನ ರಾಣಿ ಶ್ರಿಯಾ ಸರನ್ 

    ವಿಜಯ್ ಮತ್ತು ನೆಲ್ಸನ್ ಕಾಂಬಿನೇಷನ್ ನ ಬೀಸ್ಟ್ ಚಿತ್ರ ನಾನಾ ಭಾಷೆಗಳಲ್ಲಿ ರಿಲೀಸ್ ಆಗಿದ್ದರೂ, ಹಲವು ಕಡೆ ನಿರೀಕ್ಷಿತ ಮಟ್ಟದಲ್ಲಿ ಹಣ ಹರಿದು ಬಂದಿಲ್ಲ. ಈ ಬಾರಿ ಸೋಷಿಯಲ್ ಮೀಡಿಯಾದಲ್ಲೂ ಚಿತ್ರದ ಬಗ್ಗೆ ನೆಗೆಟಿವ್ ರಿವಿವ್ಯು ಸಿಕ್ಕಿದೆ. ಹೀಗಾಗಿ ನಿರ್ದೇಶಕರ ಬಗ್ಗೆ ವಿಜಯ್ ತಂದೆಗೆ ಅಸಮಾಧಾನ ಮೂಡಿದೆ.

  • ಪೂಜಾ ಹೆಗ್ಡೆಗೆ ಐರೆನ್ ಲೆಗ್ ಅಂತಾ ಕರೆದ ದಳಪತಿ ವಿಜಯ್ ಫ್ಯಾನ್ಸ್!

    ಪೂಜಾ ಹೆಗ್ಡೆಗೆ ಐರೆನ್ ಲೆಗ್ ಅಂತಾ ಕರೆದ ದಳಪತಿ ವಿಜಯ್ ಫ್ಯಾನ್ಸ್!

    ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಲಕ್ಕಿ ಚಾರ್ಮ್ ಎಂದೇ ಫೇಮಸ್ ಆಗಿರೋ ಪೂಜಾ ಹೆಗ್ಡೆ ಇದೀಗ ಸಿನಿಮಾಗಳಿಗಿಂತ ಟ್ರೋಲ್ ವಿಚಾರವಾಗಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ದಳಪತಿ ವಿಜಯ್ ಫ್ಯಾನ್ಸ್ ಅದ್ಯಾಕೋ ಪೂಜಾ ಹೆಗ್ಡೆ ಮೇಲೆ ಕಿಡಿಕಾರಿದ್ದಾರೆ. ಈ ನಟಿಯನ್ನ ಐರೆನ್ ಲೆಗ್ ಅಂತಾ ಕರೆದು ಟ್ರೋಲ್ ಮಾಡ್ತಿದ್ದಾರೆ.

    ಕರಾವಳಿ ಬ್ಯೂಟಿ ಪೂಜಾ ಅಭಿನಯಿಸಿರುವ `ಅರವಿಂದ ಸಮೇತ ವೀರ ರಾಘವ’, ʻಅಲ್ಲಾ ವೈಕುಂಠಪುರಂಮುಲೋʼ, ʻಮಹರ್ಷಿʼ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆದರೆ ಈಗ ಪೂಜಾ ನಟನೆಯ `ರಾಧೆ ಶ್ಯಾಮ್’ ಮತ್ತು `ಬೀಸ್ಟ್’ ಚಿತ್ರಗಳು ಗಲ್ಲಾಪೆಟ್ಟಿಗೆಯ ಕಲೆಕ್ಷನ್ ಮಾಡೋದರಲ್ಲಿ ಸೋತಿದೆ. ಹಾಗಾಗಿ ದಳಪತಿ ವಿಜಯ್ ಫ್ಯಾನ್ಸ್ ಪೂಜಾ ಮೇಲೆ ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    ʻರಾಧೆ ಶ್ಯಾಮ್‌ʼ ಮತ್ತು ʻಬೀಸ್ಟ್‌ʼ ಚಿತ್ರದ ಸೋಲಿಗೆ ಪೂಜಾರನ್ನ ಹೊಣೆ ಮಾಡ್ತಿದ್ದು, ವಿಜಯ್‌  ಅಭಿಮಾನಿಗಳು ಪೂಜಾರನ್ನು ಐರೆನ್ ಲೆಗ್ ಎಂದು ಟ್ರೋಲ್ ಮಾಡ್ತಿದ್ದಾರೆ.  ಇವರ ಜತೆಗೆ ಪ್ರಭಾಸ್ ಫ್ಯಾನ್ಸ್ ಕೂಡ ಸೇರಿಕೊಂಡಿದ್ದಾರೆ. ಸದ್ಯ ಸಾಲು ಸಾಲು ಸ್ಟಾರ್ ಸಿನಿಮಾಗಳಿಗೆ ನಾಯಕಿಯಾಗಿ ನಟಿಸುತ್ತಿರೋ ಪೂಜಾಗೆ ಬೇಡಿಕೆ ಕಮ್ಮಿಯಾಗಿಲ್ಲ. ಪೂಜಾ ನಟನೆಯ ಮುಂದಿನ ಚಿತ್ರಗಳ ಸಕ್ಸಸ್ ಟ್ರೋಲಿಗರಿಗೆ ಉತ್ತರವಾಗುತ್ತಾ ಅಂತಾ ಕಾದುನೋಡಬೇಕಿದೆ.

  • ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾ ಗುರುವಾರ ರಾಷ್ಟ್ರಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ತಮಿಳುನಾಡು, ಕೇರಳ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ಕೆಜಿಎಫ್-2 ಸಿನಿಮಾ ಅಬ್ಬರಿಸುತ್ತಿದೆ. ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿರುವ ಯಶ್ ಇದೀಗಾ ಇತರೆ ರಾಜ್ಯಗಳ ಸ್ಟಾರ್ ನಟರ ಸಿನಿಮಾಗಳಿಗೂ ಸೆಡ್ಡು ಹೊಡೆದಿದ್ದಾರೆ.

    ಹೌದು, ಕಾಲಿವುಡ್ ನಟ ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಏಪ್ರಿಲ್ 13ರಂದು ಬಿಡುಗಡೆಯಾಗಿತ್ತು. ಇದೀಗ ಬೀಸ್ಟ್ ಸಿನಿಮಾ ಕೆಜಿಎಫ್-2 ಸಿನಿಮಾದ ಮುಂದೆ ಮಕ್ಕಾಡೆಯಾಗಿ ಮಲಗಿದೆ. ಹೆಚ್ಚಾಗಿ ತಮಿಳಿಗರೇ ಇರುವ ಮಲೇಷ್ಯಾದಲ್ಲಿ ಬೀಸ್ಟ್ ಸಿನಿಮಾವನ್ನು ಬದಿಗೊತ್ತಿ ಕೆಜಿಎಫ್-2 ಟಾಪ್ 1 ಪಟ್ಟವನ್ನು ಅಲಂಕರಿಸಿದೆ. ಇನ್ನೂ ಬೀಸ್ಟ್ ಸಿನಿಮಾ 3ನೇ ಸ್ಥಾನಕ್ಕೆ ಇಳಿದಿದೆ. ಇದನ್ನೂ ಓದಿ: ಅಮೆರಿಕಾದಲ್ಲೂ ರಾಕಿಭಾಯ್ ಹವಾ:`ಕೆಜಿಎಫ್ 2′ ಟಿಕೆಟ್ ಸೋಲ್ಡ್ ಔಟ್

    ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿಬಂದಿರುವ ಕೆಜಿಎಫ್-2 ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಗಿದ್ದು, ಇದೀಗ ತಮಿಳು ನಾಡು ಸೇರಿದಂತೆ ಭಾರತಾದ್ಯಂತ ಈ ಸಿನಿಮಾ ಟಾಪ್-1 ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ನಿರೀಕ್ಷೆಗೂ ಮೀರಿದಂತೆ ಬಾಕ್ಸ್ಆಫೀಸ್ ಕಲೆಕ್ಷನ್ ಆಗಿದೆ. ಅಲ್ಲದೇ ಟಿಕೆಟ್ ಕೊರತೆಯಿಂದಾಗಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೂ ಕೆಜಿಎಫ್-2 ಸ್ಪೆಷಲ್ ಶೋ ಏರ್ಪಡಿಸಲಾಗಿದೆ. ಇದನ್ನೂ ಓದಿ: ಹಾಸನದಲ್ಲಿ ‘ಕೆಜಿಎಫ್ 2’ ಸಿನಿಮಾ ವೀಕ್ಷಿಸಿದ ಯಶ್ ತಂದೆ

    ಮತ್ತೊಂದೆಡೆ ಕೇರಳದಲ್ಲಿ ಮೊದಲ ದಿನವೇ ಇದೇ ಮೊದಲ ಬಾರಿಗೆ ಭರ್ಜರಿ ಓಪನಿಂಗ್ ಪಡೆದ ಸಿನಿಮಾ ಕೆಜಿಎಫ್-2 ಆಗಿದ್ದು, ಮೊದಲ ದಿನವೇ ಗಲ್ಲಾ ಪಟ್ಟಿಗೆಯಲ್ಲಿ ಭಾರೀ ಸದ್ದು ಮಾಡಿದೆ. ಒಟ್ಟಾರೆ ರಾಕಿ ಭಾಯ್ ಅಭಿನಯಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಫುಲ್ ಮಾಕ್ರ್ಸ್ ಕೊಟ್ಟಿದ್ದು, ಸಿನಿಮಾಕ್ಕೆ ಎಲ್ಲೆಡೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಕುವೈತ್‌ನಲ್ಲಿ ದಳಪತಿ ವಿಜಯ್ ನಟನೆಯ `ಬೀಸ್ಟ್’ ಸಿನಿಮಾ ಬ್ಯಾನ್

    ಕುವೈತ್‌ನಲ್ಲಿ ದಳಪತಿ ವಿಜಯ್ ನಟನೆಯ `ಬೀಸ್ಟ್’ ಸಿನಿಮಾ ಬ್ಯಾನ್

    ಕಾಲಿವುಡ್‌ನ ಸೂಪರ್‌ಸ್ಟಾರ್ ದಳಪತಿ ವಿಜಯ್ ನಟನೆಯ `ಬೀಸ್ಟ್’ ಇದೇ ಏಪ್ರಿಲ್ 13ಕ್ಕೆ ತೆರೆಯಲ್ಲಿ ಅಬ್ಬರಿಸಲು ಸಿದ್ದವಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಮೂಲಕ ಸಿಕ್ಕಾಪಟ್ಟೆ ಹೈಪ್ ಕ್ರಿಯೆಟ್ ಮಾಡಿದೆ. ರಿಲೀಸ್‌ಗೂ ಮುಂಚೆನೇ ಒಂದಲ್ಲ ಒಂದು ವಿಚಾರವಾಗಿ ಸೌಂಡ್ ಮಾಡ್ತಿರೋ `ಬೀಸ್ಟ್’ ಇದೀ ಮತ್ತೊಂದು ಕಾರಣಕ್ಕಾಗಿ ಸುದ್ದಿ ಆಗಿದೆ. ಈಗ `ಬೀಸ್ಟ್’ ಚಿತ್ರಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದ್ದು, ಕುವೈತ್‌ನಲ್ಲಿ ವಿಜಯ್ ನಟನೆಯ `ಬೀಸ್ಟ್’ ಚಿತ್ರದ ರಿಲೀಸ್ ಅನ್ನು ಬ್ಯಾನ್ ಮಾಡಲಾಗಿದೆ.

    ಇತ್ತೀಚಿಗಷ್ಟೇ `ಬೀಸ್ಟ್’ ಚಿತ್ರದ ಟ್ರೇಲರ್‌ ರಿಲೀಸ್ ಆಗಿತ್ತು. ಕಥೆಯ ಕುರಿತು ಚಿತ್ರತಂಡ ಒಂದಿಷ್ಟು ಹಿಂಟ್ ಬಿಟ್ಟುಕೊಟ್ಟಿತ್ತು. ಭಯೋತ್ಪಾದಕರು ಮಾಲ್ ಒಂದನ್ನು ಹೈಜಾಕ್ ಮಾಡುತ್ತಾರೆ. ನಾಯಕ ಮಾಲ್ ಒಳಗಡೆಯಿರುತ್ತಾನೆ. ಹೇಗೆ ಅಲ್ಲಿನ ಜನರನ್ನು ರಕ್ಷಿಸುತ್ತಾನೆ ಅನ್ನುವುದು ಚಿತ್ರದ ತಿರುಳು. ಇದೇ ವಿಚಾರವಾಗಿ ಕುವೈತ್ `ಬೀಸ್ಟ್’ ಸಿನಿಮಾವನ್ನು ಬ್ಯಾನ್ ಮಾಡಿದೆ.

    ಚಿತ್ರದಲ್ಲಿ ಪಾಕಿಸ್ತಾನ ಕುರಿತ ವಿಚಾರಗಳು, ಭಯೋತ್ವಾದನೆಯ ಚಿತ್ರಣ `ಬೀಸ್ಟ್’ನಲ್ಲಿದೆ. ಹಾಗಾಗಿಯೇ ಕುವೈತ್ ಮಾಹಿತಿ ಸಚಿವಾಲಯ ಈ ಚಿತ್ರವನ್ನು ನಿಷೇಧ ಮಾಡಿದೆ. ಕುವೈತ್‌ನಲ್ಲಿ ಬ್ಯಾನ್ ಆಗಿರೋ ಚಿತ್ರಗಳಲ್ಲಿ `ಕುರುಪ್’ ಮತ್ತು `ಎಫ್‌ಐಆರ್’ ಚಿತ್ರಗಳು ಬ್ಯಾನ್ ಆಗಿವೆ. ಕುವೈತ್ ಸೆನ್ಸಾರ್ ಮಂಡಳಿ ಚಿತ್ರಗಳ ವಿಚಾರದಲ್ಲಿ ಕಠಿಣ ಹೆಜ್ಜೆ ಇಟ್ಟಿದೆ. ಭಯೋತ್ಪಾದನೆ ಚಿತ್ರಕಥೆಯಿರೋ ಚಿತ್ರಗಳನ್ನು ಕುವೈತ್ ಪ್ರೋತ್ಸಾಹಿಸೋದಿಲ್ಲ. ಇದನ್ನು ಓದಿ: ತೆರೆ ಮೇಲೆ ಮತ್ತೆ ಒಂದಾಗಲಿದ್ದಾರಂತೆ ಸಮಂತಾ-ನಾಗಚೈತನ್ಯ ಜೋಡಿ!

    ದಳಪತಿ ವಿಜಯ್‌ಗೆ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಹಾಗೆಯೇ ಕುವೈತ್‌ಯಲ್ಲೂ ಕೂಡ. `ಬೀಸ್ಟ್’ ಸಿನಿಮಾವನ್ನ ನೋಡಬೇಕು ಅಂತಾ ಕಾತರದಿಂದ ಕಾಯುತ್ತಿದ ಕುವೈತ್ ಸಿನಿರಸಿಕರಿಗೆ ನಿರಾಸೆಯಾಗಿದೆ.

  • ದಳಪತಿಯ ಬೀಸ್ಟ್ ಎದುರಿಗೆ ಯಶ್ ನಟನೆ ಕೆಜಿಎಫ್ 2

    ದಳಪತಿಯ ಬೀಸ್ಟ್ ಎದುರಿಗೆ ಯಶ್ ನಟನೆ ಕೆಜಿಎಫ್ 2

    ಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಹಾಗೂ ಖ್ಯಾತ ನಟಿ ಪೂಜಾ ಹೆಗ್ಡೆ ಅಭಿನಯದ `ಬೀಸ್ಟ್’ ಸಿನಿಮಾವು ಇದೇ ಏಪ್ರಿಲ್ 13ರಂದು ತೆರೆಗೆ ಬರುತ್ತಿದೆ.

    ದಳಪತಿ ವಿಜಯ್ ಅವರ ಈ ಹಿಂದಿನ ಚಿತ್ರ `ಮಾಸ್ಟರ್’ ಇತ್ತೀಚೆಗಷ್ಟೇ ಭಾರಿ ಸದ್ದು ಮಾಡಿತ್ತು. ಅಪರಾಧ ಚಟುವಟಿಕೆಗಳಿಕೆ ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಉತ್ತಮ ಸಂದೇಶ ನೀಡಿದ ಈ ಚಿತ್ರವು ಬಾಕ್ಸ್ ಆಫೀಸ್‍ನಲ್ಲೂ ಸದ್ದು ಮಾಡಿತ್ತು. ಕೋವಿಡ್ ಕಾರಣದಿಂದಾಗಿ ಶೇ.50ರಷ್ಟು ಸಿನಿಮಾ ಪ್ರದರ್ಶನಕ್ಕೆ ಅವಕಾಶವಿದ್ದ ಸಂದರ್ಭದಲ್ಲೂ ಈ ಸಿನಿಮಾ ದೊಡ್ಡ ಹೆಜ್ಜೆಯನ್ನಿರಿಸಿತ್ತು. ಇದೀಗ ಬಹುನಿರೀಕ್ಷಿತ ಚಿತ್ರ `ಬೀಸ್ಟ್’ನೊಂದಿಗೆ ತೆರೆಯ ಮೇಲೆ ಬರಲು ದಳಪತಿ ಸಿದ್ಧರಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಡಿಸೆಂಬರ್‌ನಲ್ಲಿ ಎಕ್ಸೈಟಿಂಗ್ ಪೋಸ್ಟರ್ ಬಿಡುಗಡೆ ಮಾಡಿದ್ದ ಬೀಸ್ಟ್ ಚಿತ್ರತಂಡವು ಏಪ್ರಿಲ್‍ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಈ ಸಿನಿಮಾ ಏಪ್ರಿಲ್ 2ನೇ ವಾರದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎಂದು ವರದಿಯಾಗಿತ್ತು. ಕೇರಳದಲ್ಲಿ ಏ.14 ರಂದು ಹೊಸ ವರ್ಷ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 13ರಂದೇ ಚಿತ್ರತಂಡವು ಬೀಸ್ಟ್ ಅನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದೆ.

    ಈಗಾಗಲೇ ಚಿತ್ರತಂಡವು ಬೀಸ್ಟ್ ಸಿನಿಮಾದ ಹೊಸ ಬಗೆಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಆದರೆ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರವು ಏಪ್ರಿಲ್ 14ರಂದು ತೆರೆಗೆ ಬರುತ್ತಿರುವುದು ಬೀಸ್ಟ್ ತಂಡಕ್ಕೆ ಭಾರಿ ಸವಾಲು ಎದುರಾಗಲಿದೆ ಎನ್ನುವುದೇ ಪ್ರಶ್ನೆಯಾಗಿದೆ.

  • ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ಮಾರ್ಚ್ ನಲ್ಲಿ ರಿಲೀಸ್ ಆಗಲಿರುವ ಬಿಗ್ ಬಜೆಟ್ ಸಿನಿಮಾಗಳಿಗೆ ಮತ್ತೆ ಸಂಕಷ್ಟ

    ರಡೂವರೆ ವರ್ಷಗಳಿಂದ ಕೊರೋನಾ ಹಾವಳಿಗೆ ತತ್ತರಿಸಿರುವ ಭಾರತೀಯ ಸಿನಿಮಾ ರಂಗ, ಚೇತರಿಸಿಕೊಳ್ಳಲು ಇನ್ನೂ ಹರಸಾಹಸ ಪಡುತ್ತಿದೆ. ಅಷ್ಟರಲ್ಲಿ ಚಿತ್ರರಂಗಕ್ಕೆ ಕ್ರಿಕೆಟ್ ಎಂಬ ಗುಮ್ಮ ಎದುರಾಗಿದೆ. ಇದನ್ನೂ ಓದಿ : ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಕೋವಿಡ್  ಕಾರಣದಿಂದಾಗಿ ಬಿಗ್ ಬಜೆಟ್ ನ ಸಾಕಷ್ಟು ಚಿತ್ರಗಳು ಮಾರ್ಚ್ ನಲ್ಲಿ ರಿಲೀಸ್ ಆಗಲು ಪ್ಲ್ಯಾನ್ ಆಗಿದ್ದವು. ಅದರಲ್ಲೂ ಮಾರ್ಚ್ ಎರಡನೇ ವಾರದ ನಂತರ ಕನ್ನಡದ ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ನಿಂದ ಶುರುವಾಗುತ್ತಿದ್ದ ಈ ಬಿಡುಗಡೆಯ ಜೈತ್ರ ಯಾತ್ರೆ ಕೆಜಿಎಫ್ 2, ತೆಲುಗಿನ ಆರ್.ಆರ್.ಆರ್, ರಾಧೆ ಶ್ಯಾಮ್, ದಳಪತಿ ವಿಜಯ್ ಅವರ ‘ಬೀಸ್ಟ್’, ಮೆಗಾ ಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಸೇರಿದಂತೆ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು. ಈಗ ಸರಿಯಾಗಿ ಥಿಯೇಟರ್ ಗೆ ಪೆಟ್ಟುಕೊಡುವಂತೆ ಮಾರ್ಚ್ 27 ರಿಂದ ಮೇ 28 ರವರೆಗೆ. ಬರೋಬ್ಬರು ಒಂದು ತಿಂಗಳ ಕಾಲ ಭಾರತದ ಹೆಸರಾಂತ ಐಪಿಎಲ್ ಪಂದ್ಯಾವಳಿ ಆರಂಭವಾಗಲಿವೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ಒಂದು ತಿಂಗಳ ಕಾಲ ನಿರಂತರವಾಗಿ, ಅದರಲ್ಲೂ ವೀಕೆಂಡ್ ನಲ್ಲೂ ಈ ಕ್ರಿಕೆಟ್ ಹಾವಳಿ ಇರುವುದರಿಂದ, ಜನರು ಚಿತ್ರಮಂದಿರಗಳತ್ತ ಬರುವುದು ಅನುಮಾನ. ಈ ಹಿಂದೆಯೂ ಐಪಿಎಲ್ ಮತ್ತು ಸಾಕಷ್ಟು ಕ್ರಿಕೆಟ್ ಪಂದ್ಯಾವಳಿಗಳು ಸಿನಿಮಾಗಳ ಬಾಕ್ಸ್ ಆಫೀಸಿಗೆ ಭಾರೀ ಹೊಡೆತ ಕೊಟ್ಟಿವೆ. ಹಾಗಾಗಿ ಭಾರೀ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು, ಐಪಿಎಲ್ ಗೆ ಹಿಡಿಶಾಪ ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಕೇವಲ ಸಿನಿಮಾಗಳಿಗೆ ಮಾತ್ರವಲ್ಲ, ಮನರಂಜನಾ ಮಾಧ್ಯಮಕ್ಕೂ ಐಪಿಎಲ್ ಸಾಕಷ್ಟು ತೊಂದರೆ ಮಾಡಿದೆ. ಹಾಗಾಗಿ ಈ ವೇಳೆಯಲ್ಲಿ ಹೊಸ ಧಾರಾವಾಹಿಗಳಾಗಲಿ, ಹೊಸ ಹೊಸ ಶೋಗಳಾಗಲಿ ಪ್ರಾರಂಭವಾಗುತ್ತಿಲ್ಲ. ಐಪಿಎಲ್ ನಂತರವೇ ಹೊಸ ಹೊಸ ಕಾರ್ಯಕ್ರಮಗಳಿಗೆ ಪ್ಲ್ಯಾನ್ ಮಾಡಲಿವೆಯಂತೆ ಮನರಂಜನಾ ವಾಹಿನಿಗಳು.

    ಅದ್ಧೂರಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಚಿತ್ರಗಳ ನಿರ್ಮಾಪಕರು ಐಪಿಎಲ್ ಎದುರು ಹಾಕಿಕೊಂಡು ಸಿನಿಮಾ ಬಿಡುಗಡೆ ಮಾಡಬಹುದಾ? ಅಥವಾ ಐಪಿಎಲ್ ನಂತರ ರಿಲೀಸ್ ಮಾಡಬೇಕಾ ಎನ್ನುವ ಗೊಂದಲದಲ್ಲಿದ್ದಾರೆ. ಒಂದು ವೇಳೆ ಸಿನಿಮಾಗಳನ್ನು ಮುಂದು ಹಾಕಿದರೆ, ಅದರಿಂದ ಬೇರೆ ಬೇರೆ ರೀತಿಯಲ್ಲಿ ನಿರ್ಮಾಪಕರಿಗೆ ತೊಂದರೆ ಆಗಲಿದೆ. ಹಾಗಾಗಿ ಬಹುತೇಕ ಭಾರತೀಯ ಸಿನಿಮಾ ರಂಗಕ್ಕೆ ಆಘಾತಕ್ಕೆ ಒಳಗಾಗಿದೆ.

  • ಮಾಸ್ಟರ್ ವಿಜಯ್‍ರೊಂದಿಗೆ ಕಾಣಿಸಿಕೊಂಡ ಬ್ಲಾಸ್ಟರ್ ಧೋನಿ

    ಮಾಸ್ಟರ್ ವಿಜಯ್‍ರೊಂದಿಗೆ ಕಾಣಿಸಿಕೊಂಡ ಬ್ಲಾಸ್ಟರ್ ಧೋನಿ

    ಚೆನ್ನೈ: ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ತಮಿಳು ಚಿತ್ರರಂಗದ ದಳಪತಿ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಇದೀಗ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ವೈರಲ್ ಆಗುತ್ತಿದೆ.

    ಧೋನಿ ಕ್ರಿಕೆಟ್ ಕಂಡ ದಿಗ್ಗಜ ಆಟಗಾರನಾದರೆ, ವಿಜಯ್ ತಮಿಳು ಚಿತ್ರರಂಗದ ದಿಗ್ಗಜ ನಟ. ಇವರಿಬ್ಬರು ಕೂಡ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಾಸ್ಟರ್ ಮತ್ತು ಬ್ಲಾಸ್ಟರ್ ಜೊತೆಗೆ ಎಂದು ಬರೆದುಕೊಂಡಿದೆ.

    2021ರ ಜನವರಿಯಲ್ಲಿ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ತೆರೆಕಂಡು ಉತ್ತಮ ಪ್ರದರ್ಶನ ಕಂಡಿತ್ತು. ಧೋನಿ ಕ್ರಿಕೆಟ್‍ನಲ್ಲಿ ಹೊಡೆಯುವ ಆಕರ್ಷಕ ಹೊಡೆತಗಳಿಗಾಗಿ ಅವರ ಅಭಿಮಾನಿಗಳು ಬ್ಲಾಸ್ಟರ್ ಎಂದು ಪ್ರೀತಿಯಿಂದ ಕರೆದಿದ್ದಾರೆ. ಇದೀಗ ಇಬ್ಬರು ಕೂಡ ಒಟ್ಟಿಗೆ ಫೋಟೋಗೆ ಫೋಸ್ ನೀಡಿದ್ದಾರೆ.

     

    View this post on Instagram

     

    A post shared by Chennai Super Kings (@chennaiipl)

    ವಿಜಯ್ ‘ಬೀಸ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಆಕ್ಷ್ಯನ್ ಥ್ರಿಲ್ಲರ್ ಚಿತ್ರದ ಚಿತ್ರೀಕರಣ ಚಿನ್ನೈನ ಗೋಕುಲಂ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಈ ವೇಳೆ ಅದೇ ಸ್ಟುಡಿಯೋದಲ್ಲಿ ಧೋನಿ ಜಾಹೀರಾತು ಒಂದರ ಶೂಟಿಂಗ್‍ಗಾಗಿ ಹೋಗಿದ್ದರು. ಈ ವೇಳೆ ಇಬ್ಬರು ಪರಸ್ಪರ ಭೇಟಿ ಆಗಿದ್ದಾರೆ ಧೋನಿ, ವಿಜಯ್ ಜೊತೆ ಕೆಲಹೊತ್ತು ಕಾಲ ಕಳೆದು ಬಳಿಕ ತೆರಳಿದ್ದರು. ಈ ಸಂದರ್ಭ ತೆಗೆಸಿಕೊಂಡ ಫೋಟೋ ಇದೀಗ ಸಖತ್ ಸುದ್ದಿ ಮಾಡುತ್ತಿದ್ದು, ಈಗಾಗಲೇ 4 ಲಕ್ಷಕ್ಕೂ ಅಧಿಕ ಲೈಕ್ ಬಂದಿದೆ.

    ಐಪಿಎಲ್‍ನಲ್ಲಿ ಚೆನ್ನೈ ತಂಡದ ಪರ ಧೋನಿ ನಾಯಕನಾಗಿ ಆಡುತ್ತಿದ್ದಾರೆ. ಈ ಹಿಂದೆ 2008ರಲ್ಲಿ ಚೆನ್ನೈ ತಂಡದ ರಾಯಭಾರಿಯಾಗಿ ವಿಜಯ್ ಧೋನಿ ಜೊತೆಗೆ ಕಾಣಿಸಿಕೊಂಡಿದ್ದರು. ಆದಾದ ಬಳಿಕ ಇದೀಗ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‍ಗೂ ಮುನ್ನ ಡ್ಯಾಶಿಂಗ್ ಲುಕ್‍ನಲ್ಲಿ ಕಾಣಿಸಿಕೊಂಡ ಧೋನಿ

    ಧೋನಿ ಸೆಪ್ಟೆಂಬರ್‍ ನಲ್ಲಿ ಯುಎಇಯಲ್ಲಿ ಆರಂಭವಾಗಲಿರುವ ಐಪಿಎಲ್‍ಗಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರೆ, ವಿಜಯ್ ಬೀಸ್ಟ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ.