Tag: ಬೀಳಗಿ

  • ಅಂತರ್ ರಾಜ್ಯ ವರ್ತಕರ ಹಾವಳಿ | ಸ್ಥಳೀಯ ವ್ಯಾಪಾರಿಗಳ ಆಕ್ರೋಶ – ಡಿ.16ಕ್ಕೆ ಬೀಳಗಿ ಬಂದ್‌ಗೆ ಕರೆ

    ಅಂತರ್ ರಾಜ್ಯ ವರ್ತಕರ ಹಾವಳಿ | ಸ್ಥಳೀಯ ವ್ಯಾಪಾರಿಗಳ ಆಕ್ರೋಶ – ಡಿ.16ಕ್ಕೆ ಬೀಳಗಿ ಬಂದ್‌ಗೆ ಕರೆ

    ಬಾಗಲಕೋಟೆ: ಅನ್ಯ ರಾಜ್ಯದ ವರ್ತಕರ  ಹಾವಳಿ ತಡೆಯಲು ಹಾಗೂ ಅವರಿಗೆ ನಿರ್ಬಂಧ ಹೇರಲು ಆಗ್ರಹಿಸಿ ಸ್ಥಳೀಯ ವ್ಯಾಪಾರಸ್ಥರು ಸೋಮವಾರ ಬಾಗಲಕೋಟೆ (Bagalkote) ಜಿಲ್ಲೆಯ ಬೀಳಗಿ (Bilagi) ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ.

    ಬೀಳಗಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ಥಳೀಯ ವ್ಯಾಪಾರಸ್ಥರು, ಬೀಳಗಿ ಪಟ್ಟಣದಲ್ಲಿ ಬೇರೆ ರಾಜ್ಯಗಳಿಂದ ವಲಸೆ ಬಂದು ಇಲ್ಲಿ ನೆಲೆಸಿ, ಎಲ್ಲ ರೀತಿಯ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಿಗಳ ವ್ಯವಹಾರಕ್ಕೆ ಸಮಸ್ಯೆ ಆಗುತ್ತಿದೆ. ಬಂದ್ ಕರೆಗೆ ಸ್ಥಳೀಯ ವ್ಯಾಪಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

    ಮುಖಂಡ ಪ್ರವೀಣ್ ಗೌಡ ಪಾಟೀಲ್ ಮಾತನಾಡಿ, ಬೀಳಗಿ ಪಟ್ಟಣ ಹಿಂದುಳಿದ ತಾಲೂಕಾಗಿದ್ದು, ಪಟ್ಟಣದಲ್ಲಿ ಬಟ್ಟೆ, ಮೊಬೈಲ್ , ಹೋಟೆಲ್, ಕಿರಾಣಿ ಅಂಗಡಿ, ಹಾರ್ಡ್‌ವೇರ್‌, ಸ್ಟೀಲ್‌ ಸೇರಿದಂತೆ ಬಹುತೇಕ ಅಂಗಡಿಗಳನ್ನು ಅನ್ಯ ರಾಜ್ಯದವರೇ ಆಕ್ರಮಿಸಿದ್ದಾರೆ ಎಂದು ದೂರಿದರು.

    ರಾಜಸ್ಥಾನ (Rajasthan) ಮತ್ತು ಕೇರಳದ (Kerala) ವ್ಯಾಪಾರಿಗಳು ಇಲ್ಲಿಗೆ ಬಂದು ಅತೀ ಹೆಚ್ಚು ಬಾಡಿಗೆ ಮತ್ತು ಡೆಪಾಸಿಟ್ ನೀಡಿ ಮಳಿಗೆಗಳನ್ನು ಪಡೆಯುತ್ತಾರೆ. ಇದರಿಂದಾಗಿ ಸ್ಥಳೀಯ ವ್ಯಾಪಾರಿಗಳಿಗೆ ಪೆಟ್ಟು ಬೀಳುತ್ತಿದೆ. ಅಷ್ಟೇ ಅಲ್ಲದೇ ಸ್ಥಳೀಯರು ಉದ್ಯೋಗ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಗುಳೆ ಹೋಗುವ ಪರಿಸ್ಥಿತಿ ಬಂದಿದೆ. ಹೀಗಾಗಿ ಸೋಮವಾರ ಬೀಳಗಿ ಕ್ರಾಸ್ ನಿಂದ ಬಸವೇಶ್ವರ ವೃತ್ತದವರೆಗೆ ಎಲ್ಲಾ ಅಂಗಡಿ ಮುಗ್ಗಟ್ಟುಗಳ ವ್ಯಾಪಾರ ವಹಿವಾಟು ಬಂದ್ ಮಾಡಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

     

  • ಪ್ರೇಮಿ ಮದುವೆಗೆ ನಿರಾಕರಿಸಿದ ಆರೋಪ- ಯುವತಿ ಆತ್ಮಹತ್ಯೆಗೆ ಶರಣು

    ಪ್ರೇಮಿ ಮದುವೆಗೆ ನಿರಾಕರಿಸಿದ ಆರೋಪ- ಯುವತಿ ಆತ್ಮಹತ್ಯೆಗೆ ಶರಣು

    ಬಾಗಲಕೋಟೆ: ಪ್ರೇಮಿಯೊಬ್ಬ ಪ್ರಿಯತಮೆಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಮನೆಯವರು ಆರೋಪಿಸಿರುವ ಘಟನೆ ಬೀಳಗಿ (Beelagi) ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

    ರುಕ್ಕವ್ವ (19) ವಡವಾಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಅ.02 ರಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಯುವತಿಯ ತಂದೆ ರುದ್ರಪ್ಪ ನನ್ನ ಮಗಳ ಸಾವಿಗೆ ಪ್ರೀತಿಸಿ ಕೈಕೊಟ್ಟ ಶಂಕ್ರಪ್ಪ ಪತ್ತಾರ ಕಾರಣ ಎಂದು ಆರೋಪಿಸಿ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇಲ್ಲಿಯವರೆಗೆ ಬೀಳಗಿ ಪೊಲೀಸರು ಆತನನ್ನ ಬಂಧಿಸಿಲ್ಲ ಎಂದು ಆರೋಪಿಸಿ ಯುವತಿಯ ತಂದೆ ಸೋಮವಾರ ಬಾಗಲಕೋಟೆ ಎಸ್‌ಪಿ ಕಚೇರಿಯ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಸಮಾಜ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ, ರಾಷ್ಟ್ರೀಯ ಶತ್ರುಗಳ ವಿರುದ್ಧ ಹೋರಾಡಬೇಕಿದೆ – ಮೋದಿ ವಾಗ್ದಾಳಿ

    ಸುಮಾರು ವರ್ಷಗಳಿಂದ ಯುವಕ ಶಂಕ್ರಪ್ಪ ಪತ್ತಾರ ನನ್ನ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಮದುವೆ ಆಗಲು ನಿರಾಕರಿಸಿದ್ದ. ನನ್ನ ಮಗಳ ಸಾವಿಗೆ ಶಂಕ್ರಪ್ಪ ಮಾಡಿದ ನಿರಾಕರಣೆಯೇ ಕಾರಣ ಎಂದು ಪ್ರಿಯಕರ ಮಾಡಿದ ವಾಟ್ಸಪ್ ಮೆಸೇಜ್, ಫೋಟೋಗಳನ್ನ ಸಾಕ್ಷಿಯಾಗಿ ಇಟ್ಟುಕೊಂಡು ದೂರು ನೀಡಲು ಯುವತಿಯ ತಂದೆ ಮುಂದಾಗಿದ್ದಾರೆ. ಇದನ್ನೂ ಓದಿ: ದೆಹಲಿ, ಮುಂಬೈನಲ್ಲಿ ಈರುಳ್ಳಿ ದರ ಕೆ.ಜಿ. 80 ರೂ.ಗೆ ಏರಿಕೆ – 5 ವರ್ಷಗಳಲ್ಲೇ ಗರಿಷ್ಠ

    ಪ್ರಕರಣ ದಾಖಲಾಗಿ ಒಂದು ತಿಂಗಳು ಕಳೆದರೂ ಆರೋಪಿ ಶಂಕ್ರಪ್ಪನನ್ನ ಬೀಳಗಿ ಪೊಲೀಸರು ಬಂಧಿಸಿಲ್ಲ. ಬದಲಾಗಿ ಆರೋಪಿಗಳಿಗೆ ಪೊಲೀಸರು ಸಹಕಾರ ನೀಡಿದ್ದಾರೆ. ಆತನಿಗೆ ಜಾಮೀನು ಸಿಗುವಂತೆ ಮಾಡಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಸುವರ್ಣಯುಗ ಆಡಳಿತಕ್ಕೆ ಬರಲಿದೆ, ಅದಕ್ಕಾಗಿ ನಿಖಿಲ್‌ ಗೆಲ್ಲಿಸಿ: ಹೆಚ್‌ಡಿಕೆ ಮನವಿ

    ಹೀಗೆ ಆರೋಪಿಗಳು ಜಾಮೀನು ಪಡೆದು ಓಡಾಡುತ್ತಿರುವುದನ್ನ ಕಂಡ ರುದ್ರಪ್ಪ, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಎಸ್ಪಿ ಅಮರನಾಥ್ ರೆಡ್ಡಿಗೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿಗೆ ಮತ್ತೆ ಸಂಕಷ್ಟ – FIR ದಾಖಲಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

  • ಎತ್ತಿಗೆ ಸ್ನಾನ ಮಾಡಿಸಲು ಹೋದಾಗ ಮೊಸಳೆ ದಾಳಿ – ಮಾಲೀಕನ ಜೀವ ಉಳಿಸಿದ ಎತ್ತು

    ಎತ್ತಿಗೆ ಸ್ನಾನ ಮಾಡಿಸಲು ಹೋದಾಗ ಮೊಸಳೆ ದಾಳಿ – ಮಾಲೀಕನ ಜೀವ ಉಳಿಸಿದ ಎತ್ತು

    ಬಾಗಲಕೋಟೆ: ಎತ್ತಿನ ಮೈ ತೊಳೆಯಲು ಹೋಗಿದ್ದಾಗ ರೈತನ ಮೇಲೆ ಮೊಸಳೆ ದಾಳಿ ನಡೆಸಿದ್ದು, ಸಾಕಿದ ಎತ್ತು ರೈತನ ಜೀವ ಉಳಿಸಿರುವ ರೋಚಕ ಘಟನೆ ಜಿಲ್ಲೆಯ ಬೀಳಗಿ ( Bilagi) ತಾಲ್ಲೂಕಿನ ಹೊನ್ಯಾಳ ಗ್ರಾಮದ ಬಳಿ ಆಲಮಟ್ಟಿ (Almatti) ಜಲಾಶಯದ ಹಿನ್ನೀರಲ್ಲಿ ನಡೆದಿದೆ.

    ದಾಳಿಗೊಳಗಾದ ರೈತನನ್ನು ಹೊನ್ಯಾಳ (Honyal)  ಗ್ರಾಮದ ನಿವಾಸಿ ಧರಿಯಪ್ಪ ಮೇಟಿ(32) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ – ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ

    ಹೊನ್ಯಾಳ ಗ್ರಾಮದ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ರೈತ ಎತ್ತಿನ ಮೈ ತೊಳೆಯಲು ಹೋಗಿದ್ದ. ಆ ವೇಳೆ ರೈತನ ಮೇಲೆ ಮೊಸಳೆ ದಾಳಿ ನಡೆಸಿದ್ದು, ಆತನ ಬಲಗೈಗೆ ಬಾಯಿಹಾಕಿದೆ. ಗಾಬರಿಯಲ್ಲಿ ಏನೂ ತೋಚದೇ ಪಕ್ಕದಲ್ಲಿದ್ದ ಎತ್ತಿನ ಹಗ್ಗವನ್ನು ತನ್ನ ಎಡಗೈಯಿಂದ ಹಿಡಿದುಕೊಂಡಿದ್ದಾನೆ. ಹಗ್ಗ ಹಿಡಿದಿದ್ದನ್ನು ಕಂಡ ಎತ್ತು ತನ್ನ ಮಾಲೀಕನನ್ನು ನೀರಿನಿಂದ ಹೊರಗೆ ಎಳೆದಿದೆ. ಆತನನ್ನು ಎತ್ತು ಹೊರಕ್ಕೆ ಎಳೆದಾಗ ಮೊಸಳೆ ಓಡಿಹೋಗಿದ್ದು, ರೈತನ ಬಲಗೈ ಕತ್ತರಿಸಿದೆ. ಆದರೆ ಸಾಕಿದ ಎತ್ತು ತನ್ನ ಮಾಲೀಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದೆ.

    ಗಾಯಳು ಧರಿಯಪ್ಪನನ್ನು ಬಾಗಲಕೋಟೆ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿ ಬೀಳಗಿ ಶಾಸಕ ಜೆಟಿ ಪಾಟೀಲ್ (JT Patil) ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳ ಜೊತೆ ದೂರವಾಣಿ ಕರೆಯ ಮೂಲಕ ಮಾತನಾಡಿ, ಸೂಕ್ತ ಪರಿಹಾರ ಕೊಡಬೇಕು ಹಾಗೂ ಎಲ್ಲ ದಾಖಲೆಗಳನ್ನು ಕಲೆ ಹಾಕಿ ಪರಿಹಾರಕ್ಕೆ ಪ್ರಕ್ರಿಯೆ ನಡೆಸಲು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಆಯುಧ ಪೂಜೆಯ ದಿನದಂದೇ ಸಿಹಿಸುದ್ದಿ ಕೊಟ್ಟ ಯುವ- ಚಿತ್ರದ ಪೋಸ್ಟರ್‌ ಔಟ್

  • ಬೀಳಗಿಯಲ್ಲಿ ನಿರಾಣಿಗೆ ಹೀನಾಯ ಸೋಲು

    ಬೀಳಗಿಯಲ್ಲಿ ನಿರಾಣಿಗೆ ಹೀನಾಯ ಸೋಲು

    ಬಾಗಲಕೋಟೆ: ಬೀಳಗಿ (Bilgi) ಕ್ಷೇತ್ರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಮುರಗೇಶ್ ನಿರಾಣಿ (Murugesh Nirani) ಸೋಲು ಕಂಡಿದ್ದಾರೆ. ಕೈಗಾರಿಕಾ ಸಚಿವರಾಗಿರುವ ನಿರಾಣಿಯವರು ಸೋಲು ಕಂಡಿದ್ದು ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.

    ಕಾಂಗ್ರೆಸ್ (Congress) ಅಭ್ಯರ್ಥಿ ಜೆ.ಟಿ. ಪಾಟೀಲ್ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಮೂರು ಬಾರಿ ಕಾಂಗ್ರೆಸ್‍ನಿಂದ ಬಿಳಗಿಯ ಶಾಸಕರಾಗಿದ್ದರು. ಅವರು ಪ್ರಸ್ತುತ ಯಾವುದೇ ಕ್ರಿಮಿನಲ್ ಕೇಸ್ ಹೊಂದಿರಲಿಲ್ಲ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 135, ಬಿಜೆಪಿ 65, ಜೆಡಿಎಸ್‌ 20 ಮುನ್ನಡೆ LIVE Updates

    ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಬಿಜೆಪಿ 62, ಕಾಂಗ್ರೆಸ್ 137, ಜೆಡಿಎಸ್ 21, ಇತರರು 4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಇದನ್ನೂ ಓದಿ: ರಾಜ್ಯದ ಚುನಾವಣಾ ಫಲಿತಾಂಶ ಲೋಕಸಭೆಗೆ ದಿಕ್ಸೂಚಿ ಅಲ್ಲ: ಬಿಎಸ್‍ವೈ

  • ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ  ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು

    ಕನ್ನಡದ ಕೋಟ್ಯಧಿಪತಿ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಆತ್ಮಹತ್ಯೆ : ಅನುಮಾನ ವ್ಯಕ್ತ ಪಡಿಸಿದ ಸ್ನೇಹಿತರು

    ಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತು ಟಿಕ್ ಟಾಕ್, ಸಂಗೀತದ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಭೀಮಪ್ಪ ಗುರಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಇಂದು ಅವರ ಹೊಸ ಮನೆ ಗೃಹಪ್ರವೇಶ ಆಗಬೇಕಿತ್ತು. ಅದಕ್ಕೂ ಎರಡು ದಿನ ಮುನ್ನವೇ ಅನುಮಾನಾಸ್ಪದವಾಗಿ 27 ವರ್ಷದ ತಿಮ್ಮಣ್ಣನ ಮೃತದೇಹ ಸಿಕ್ಕಿದೆ.

    ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮದಲ್ಲಿ ಈ ದುರಂತ ನಡೆದಿದ್ದು,  ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶಂಕಿಸಲಾಗಿದೆ. ಅಮಲಝರಿ ಗ್ರಾಮದ ಹೊರವಲಯದಲ್ಲಿರುವ ಮುಧೋಳ ತಾಲೂಕಿನ ಮಂಟೂರು ಗ್ರಾಮ ವ್ಯಾಪ್ತಿಯ  ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೂಲತಃ ಅಮಲಝರಿ ಗ್ರಾಮದ ತಿಮ್ಮಣ್ಣ ಎಸ್ಸೆಸ್ಸೆಲ್ಸಿವರೆಗೂ ವ್ಯಾಸಂಗ ಮಾಡಿದ್ರಲ್ಲದೇ, ಈ ಹಿಂದೆ ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೊಟ್ಯಾದಿಪತಿ ಸೀಜನ್ 3 ರಲ್ಲಿ ಭಾಗವಹಿಸಿ 6.40 ಲಕ್ಷ ರೂ ಗೆದ್ದಿದ್ದರು. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ

    ಹಾಸ್ಯ, ಸಂಗೀತದ ಮೂಲಕ ರಂಜಿಸಿ ಟಿಕ್‌ಟಾಕ್‌ನಲ್ಲಿ ಅಭಿಮಾನಿಗಳನ್ನ ಸಹ ಹೊಂದಿದ್ದರು. ಖೋ ಖೋ ಕ್ರೀಡಾಪಟು ಸಹ ಆಗಿದ್ದಂತಹ ತಿಮ್ಮಣ್ಣ ಗ್ರಾಮದ ಮಕ್ಕಳಿಗೆ ತರಬೇತಿ ಕೊಡ್ತಿದ್ದರು ಎನ್ನಲಾಗಿದೆ. ಇನ್ನು ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗಾಗಿ ಮತ್ತು ಹೊಸ ಕಟ್ಟಿಸುವ ಸಲುವಾಗಿ 16 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಹೀಗಾಗಿ ಸಾಲ ತೀರಿಸಲಾಗದೇ ಮೂರು ದಿನಗಳ ಹಿಂದೆ ತಿಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು

    ದುರ್ದೈವದ ಸಂಗತಿ ಅಂದ್ರೆ ತಿಮ್ಮಣ್ಣ ತಾನು ದುಡಿದು, ಸಾಲ ಮಾಡಿ ನಿರ್ಮಿಸಿದ್ದ ಹೊಸ ಮನೆ ಗೃಹ ಪ್ರವೇಶ ಇವತ್ತು ನಡೆಯಬೇಕಿತ್ತು. ಮನೆ ಗೃಹಪ್ರವೇಶಕ್ಕಾಗಿ ಬಬಲಾದಿ ಸ್ವಾಮೀಜಿಗೂ ಸಹ ಆವ್ಹಾನಿಸಲಾಗಿತ್ತಂತೆ. ಆದ್ರೆ ಹೊಸಮನೆ ಪ್ರವೇಶಕ್ಕೂ ಮುನ್ನವೇ ತಿಮ್ಮಣ್ಣ ಆತ್ಮಹತ್ಯೆಗೆ ಶರಣಾಗಿದ್ದು ಅವ್ರ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಇನ್ನು ಸರ್ಕಾರಿ ನೌಕರಿಯಲ್ಲಿದ್ದ ತಿಮ್ಮಣ್ಣಗೆ, ಒಳ್ಳೆ ಸ್ಯಾಲರಿ ಇತ್ತು‌. ನೌಕರಿ ಮೇಲೆ 16 ಲಕ್ಷ ಸಾಲ ಮಾಡಿ ಒಟ್ಟು 18 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದ. ಆತನಿಗೆ ಯಾವುದೇ ದುಡ್ಡಿನ ಸಮಸ್ಯೆ ಇರಲಿಲ್ಲ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ

    ಆತ್ಮಹತ್ಯೆ ಮಾಡಿಕೊಳ್ಳುವ ದಿನ ಅಂದ್ರೆ ನಿನ್ನೆ ರಾತ್ರಿ 10 ಗಂಟೆಗೆ ಅಮಲಝರಿ ಗ್ರಾಮದ ಸ್ನೇಹಿತನ ಪಾನ್ ಶಾಪ್‌ಗೆ ಹೋಗಿ ಮನೆ ಓಪನಿಂಗ್ ಬಗ್ಗೆ ಚರ್ಚಿಸಿದ್ದನಂತೆ. ಹೀಗಾಗಿ ತಿಮ್ಮಣ್ಣ ಆತ್ಮಹತ್ಯೆಯ ಘಟನೆ ಆತನ ಸ್ನೇಹಿತರು, ಸಂಬಂಧಿಕರಲ್ಲಿ ಆಶ್ಚರ್ಯ ತರಿಸಿದೆ. ಗೃಹ ಪ್ರವೇಶಕ್ಕೆ ಅನೇಕ ಸ್ನೇಹಿತರನ್ನು ಆಹ್ವಾನಿಸಿದ್ದ ತಿಮ್ಮಣ್ಣ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ ಎನ್ನುತ್ತಿದ್ದಾರೆ ಅವರ ಸ್ನೇಹಿತರು.

  • ಬರಿದಾದ ಕೃಷ್ಣೆಯ ಒಡಲು: 24 ಗಂಟೆಯಲ್ಲಿ ಮೂರು ಮೊಸಳೆಗಳ ಸಾವು

    ಬರಿದಾದ ಕೃಷ್ಣೆಯ ಒಡಲು: 24 ಗಂಟೆಯಲ್ಲಿ ಮೂರು ಮೊಸಳೆಗಳ ಸಾವು

    ಬಾಗಲಕೋಟೆ: ಭೀಕರ ಬರಗಾಲದಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, 24 ಗಂಟೆಯಲ್ಲಿ ಮೂರು ಮೊಸಳೆಗಳು ಸಾವನ್ನಪ್ಪಿವೆ.

    ಜಿಲ್ಲೆಯ ಬೀಳಗಿ ತಾಲೂಕಿನ ಯಡಹಳ್ಳಿ ಹಾಗು ಗುಡಿದಿನ್ನಿ ಗ್ರಾಮದ ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು, ಜಲಚರಗಳು ಜೀವವನ್ನು ಕಳೆದುಕೊಳ್ಳುತ್ತಿವೆ. ಶುಕ್ರವಾರ ಸಂಜೆಯಿಂದ ಈವರೆಗೆ ಮೂರು ಮೊಸಳೆಗಳು ಸಾವನ್ನಪ್ಪಿವೆ. ಇದುವರೆಗೂ ನೀರಿಲ್ಲದೇ ಐದು ಮೊಸಳೆಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಮಣ್ಣಲ್ಲಿ ಸಿಲುಕಿದ್ದ 8 ಮೊಸಳೆಗಳನ್ನು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಪಶು ವೈದ್ಯಕೀಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ವೈದ್ಯಾಧಿಕಾರಿಗಳು ಸಾವನ್ನಪ್ಪಿದ ಮೊಸಳೆಗಳ ಶವ ಪರೀಕ್ಷೆ ನಡೆಸಿದ್ದಾರೆ. ಶವ ಪರೀಕ್ಷೆಯ ನಂತರ ಮೊಸಳೆಗಳ ಅಂತ್ಯಕ್ರಿಯೆ ಮಡಲಾಗಿದೆ.

    ಇದನ್ನೂ ಓದಿ: ಬರಿದಾದ ಕೃಷ್ಣೆಯ ಒಡಲು: ಬಾಗಲಕೋಟೆಯಲ್ಲಿ ಆಹಾರವಿಲ್ಲದೇ ಮೃತಪಟ್ಟ ಮೊಸಳೆ 

     

  • ಹೆಂಡ್ತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಣ್ಣನ ಮಗನನ್ನ ಕೊಂದ ಚಿಕ್ಕಪ್ಪ

    ಹೆಂಡ್ತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಅಣ್ಣನ ಮಗನನ್ನ ಕೊಂದ ಚಿಕ್ಕಪ್ಪ

    ಬಾಗಲಕೋಟೆ: ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಹೋದರನ ಮಗನನ್ನ ಚಿಕ್ಕಪ್ಪನೇ ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೋವಳ್ಳಿ ಗ್ರಾಮದಲ್ಲಿ ನಡೆದಿದೆ.

    25 ವರ್ಷದ ಪರುಶುರಾಮ ಮಾಳಗಿ ಕೊಲೆಯಾದ ವ್ಯಕ್ತಿ. ಮೃತ ಪರಶುರಾಮ ಚಿಕ್ಕಪ್ಪ ಕರಿಯಪ್ಪನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದನು. ಅಲ್ಲದೇ ಪರಶುರಾಮನಿಗೆ ಮದುವೆಯಾಗಿ ಮಕ್ಕಳಾದ್ರೂ, ಚಿಕ್ಕಮ್ಮಳೊಂದಿಗಿನ ಅಕ್ರಮ ಸಂಬಂಧ ಬಿಟ್ಟಿರಲಿಲ್ಲ. ಈ ವಿಷಯ ಚಿಕ್ಕಪ್ಪನಾದ ಕರಿಯಪ್ಪನಿಗೆ ಇರಿಸುಮುರಿಸು ಉಂಟುಮಾಡಿತ್ತು.

    ಇದನ್ನೂ ಓದಿ: ಅತ್ತಿಗೆ ಮೇಲಿನ ಆಸೆಗಾಗಿ ತಲಾಖ್ ನೀಡುವಂತೆ ಹೆಂಡತಿಗೆ ಕಿರುಕುಳ

    ಭಾನುವಾರ ರಾತ್ರಿ ಪರಶುರಾಮ ಮಲಗಿರುವ ವೇಳೆಯಲ್ಲಿ ಕರಿಯಪ್ಪ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಜಮಖಂಡಿ ಡಿವೈಎಸ್‍ಪಿ ರಾಮನಗೌಡ ಹಟ್ಟಿ ಭೇಟಿ ನೀಡಿದ್ದು, ಆರೋಪಿ ಕರಿಯಪ್ಪ ಮಾಳಗಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಪ್ರೀತ್ಸೋ ಎಂದು ಬೆನ್ನು ಬಿದ್ದ ಯುವತಿಯ ಕಾಟಕ್ಕೆ ಸುಸ್ತಾದ ಟೆಕ್ಕಿ!- ಪೊಲೀಸ್ ಠಾಣೆಯಲ್ಲಿ ದೂರು