Tag: ಬೀರಲಿಂಗೇಶ್ವರ

  • ದಾವಣಗೆರೆ ಬೀರಲಿಂಗೇಶ್ವರ ದೇಗುಲ ಪೂಜೆ ವಿವಾದ – ಬೇರೆ ಪೂಜಾರಿ ಬೇಡವೆಂದ ಹಳೆ ಪೂಜಾರಿ

    ದಾವಣಗೆರೆ ಬೀರಲಿಂಗೇಶ್ವರ ದೇಗುಲ ಪೂಜೆ ವಿವಾದ – ಬೇರೆ ಪೂಜಾರಿ ಬೇಡವೆಂದ ಹಳೆ ಪೂಜಾರಿ

    ದಾವಣಗೆರೆ: ಇಲ್ಲಿನ ಬೀರಲಿಂಗೇಶ್ವರ ದೇಗುಲದ ಪೂಜೆ ವಿವಾದ ಸದ್ಯ ಮುನ್ನೆಲೆಗೆ ಬಂದಿದ್ದು, ಹೊಸ ಪೂಜಾರಿ ಬೇಡ ಹಳೆ ಪೂಜಾರಿಯಿಂದಲೇ ಪೂಜೆ ಆರಂಭಿಸಬೇಕು ಎಂದು ಪಟ್ಟು ಹಿಡಿಯಲಾಗಿದೆ.

    ದೇವಸ್ಥಾನದ ಆಸ್ತಿ ವಿಚಾರವಾಗಿ ಹೈಕೋರ್ಟ್‍ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಬೀಗ ಜಡಿಯಲಾಗಿತ್ತು. ಇದೀಗ ಬೇರೆ ಪೂಜಾರಿಯ ತಂದು ಪೂಜೆ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ನಿರ್ಧಾರಕ್ಕೆ ಹಳೇ ಪೂಜಾರಿ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ದೇವಸ್ಥಾನದ ಎದುರು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

    ದಾವಣಗೆರೆ ನಗರದ ಪಿಬಿ ರಸ್ತೆ ಬಳಿ ಇರುವ ಈ ದೇವಸ್ಥಾನದಲ್ಲಿ ಪೂಜೆ ಆರಂಭಿಸುವಂತೆ ದೇವಸ್ಥಾನದ ಸಮಿತಿಯಿಂದ ಆಗ್ರಹಿಸಿದೆ. ಆದರೆ ಬೇರೆ ಪೂಜಾರಿಗಳಿಂದ ಪೂಜೆ ಬೇಡ ಎಂದು ಹಳೇ ಪೂಜಾರಿ ಆಗ್ರಹ ಮಾಡಿದ್ದಾರೆ. ಎರಡು ಗುಂಪುಗಳಿಂದ ದೇವಸ್ಥಾನದ ಎದುರು ಧರಣಿ ನಡೆಸಲಾಗುತ್ತಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದಾರೆ. ಜಿಲ್ಲಾಡಳಿತ ಕೂಡ ದೇವಸ್ಥಾನದ ಬೀಗ ತೆಗೆಯದೇ ಕಾಯ್ದು ಕುಳಿತಿದೆ.

    ಈ ಮಧ್ಯೆ ಪೊಲೀಸರ ಎದುರೇ ಎರಡು ಗುಂಪುಗಳ ಗಲಾಟೆ ಏರ್ಪಟ್ಟಿದ್ದು, ಎರಡು ಗುಂಪುಗಳ ನೂಕಾಟ ತಳ್ಳಾಟ ನಡೆದಿದೆ. ಪೂಜೆಗೆ ಅವಕಾಶ ನೀಡದಂತೆ ಪೂಜಾರಿಗಳು ಪಟ್ಟು ಹಿಡಿದಿದ್ದಾರೆ. ಸದ್ಯ ಎರಡು ಗುಂಪುಗಳನ್ನು ಪೊಲೀಸರು ಸಮಾಧಾನ ಪಡಿಸಿದ್ದಾರೆ.

  • ಬೀರಲಿಂಗೇಶ್ವರ ಕಾರ್ತಿಕೋತ್ಸವದಲ್ಲೊಂದು ಪವಾಡ

    ಬೀರಲಿಂಗೇಶ್ವರ ಕಾರ್ತಿಕೋತ್ಸವದಲ್ಲೊಂದು ಪವಾಡ

    ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿ ಗ್ರಾಮದಲ್ಲಿ ಬೀರಲಿಂಗೇಶ್ವರ ಕಾರ್ತಿಕೋತ್ಸದ ಹಿನ್ನೆಲೆಯಲ್ಲಿ ಲೋಳೆಸರಕ್ಕೆ ಎರಡು ಕುಡುಗೋಲು ಹಾಕಿ ಅದಕ್ಕೆ 50 ಕೆಜಿ ತೂಕದ ಕಲ್ಲು ಕಟ್ಟಿ ತೂಗಿಬಿಡಲಾಗುತ್ತದೆ.

    ಗ್ರಾಮದಲ್ಲಿ ಪ್ರತಿ ಕಾರ್ತಿಕಾ ಮಾಸದಲ್ಲಿ ಹುಣ್ಣಿಮೆಗಿಂತ ಮೊದಲು ಈ ಕಾರ್ತಿಕೋತ್ಸವ ನಡೆಯುತ್ತದೆ. ಈ ಕಾರ್ತಿಕೋತ್ಸವದಲ್ಲಿ ಪವಾಡವೇ ಪ್ರಮುಖವಾದ ಕಾರ್ಯಕ್ರಮ. ಬೀರಲಿಂಗೇಶ್ವರ ದೇವಾಲಯದಲ್ಲಿ ಒಂದು ಲೋಳೆಸರ (ಅಲೋವೆರಾ)ಕ್ಕೆ ಎರಡು ಕುಡುಗೋಲನ್ನು ಹಾಕಿ, ಅದಕ್ಕೆ 50 ಕೆ.ಜಿ ತೂಕದ ಕಲ್ಲಿನ ಗುಂಡನ್ನು ತೂಗುಬಿಡುತ್ತಾರೆ. ಸಾಮಾನ್ಯವಾದ ಲೋಳೆಸರಕ್ಕೆ 50 ಕೆಜಿ ತೂಕದ ಕಲ್ಲಿನ ಗುಂಡನ್ನು ತೂಗಿ ಹಾಕಿದ್ದರೂ ತಡೆದುಕೊಳ್ಳುವ ಶಕ್ತಿ ಇದೆ ಎನ್ನುವುದೇ ಇಲ್ಲಿನ ಪವಾಡವಾಗಿದೆ.

    ಕಾರ್ತಿಕ ಮಾಸದಲ್ಲಿ ಬೀರಲಿಂಗೇಶ್ವರ ದೇವಾಲಯದ ಆರ್ಚಕರು ಉಪವಾಸವಿದ್ದು ಈ ಪವಾಡ ನಡೆಸುತ್ತಾರೆ. ಈ ಪವಾಡವನ್ನು ನೋಡಿ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಬೆಳ್ಳೂಡಿ ಗ್ರಾಮ ಬೀರಲಿಂಗೇಶ್ವರ ದೇವಸ್ಥಾನದ ಪೂಜಾರಿಗಳಿಂದ ಪವಾಡ ನಡೆಯುತ್ತಿದ್ದು, ಪ್ರತಿ ವರ್ಷ ಪವಾಡವನ್ನು ನೋಡಲು ದೂರದೂರಿನಿಂದ ಜನರು ಆಗಮಿಸಿ ಅಪರೂಪದ ಸನ್ನಿವೇಶವನ್ನು ನೋಡಿ ಆಶ್ಚರ್ಯ ಪಡುತ್ತಾರೆ.

    ಪ್ರತಿ ವರ್ಷವೂ ಇದೇ ರೀತಿಯಾದಂತಹ ಪವಾಡ ನಡೆಯುತ್ತಿದ್ದು, ಸಂಜೆ ವೇಳೆ ತುಂಬಿದ ಕೊಡಕ್ಕೆ ಪೂಜಿಸಿದ ಬಟ್ಟೆ ಕಟ್ಟಿ ಅದನ್ನು ಉಲ್ಟಾ ಮಾಡಿ ನೇತು ಹಾಕುತ್ತಾರೆ. ತುಂಬಿದ ಕೊಡದಿಂದ ಒಂದು ಹನಿ ನೀರು ಸಹ ಹೊರ ಬರುವುದಿಲ್ಲ. ಇದೆಲ್ಲ ಬೀರಲಿಂಗೇಶ್ವರ ದೇವರ ಪವಾಡ ಎಂದು ಅರ್ಚಕರು ಹೇಳುತ್ತಾರೆ