Tag: ಬೀಯರ್

  • ಬೈಕ್‌ನಲ್ಲಿ ಬಿಯರ್‌ ಕುಡಿದು ಹುಚ್ಚಾಟ – ಆರೋಪಿ ಅರೆಸ್ಟ್‌

    ಬೈಕ್‌ನಲ್ಲಿ ಬಿಯರ್‌ ಕುಡಿದು ಹುಚ್ಚಾಟ – ಆರೋಪಿ ಅರೆಸ್ಟ್‌

    ಬಳ್ಳಾರಿ: ಚಲಿಸುತ್ತಿರುವ ಬೈಕ್ (Bike) ಹಿಂಬದಿ ಕುಳಿತು ಯುವಕನೊಬ್ಬ ಬಿಯರ್ (Beer) ಕುಡಿದ ವಿಡಿಯೋ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಬಳ್ಳಾರಿ ಸಂಚಾರಿ ಠಾಣೆ ಪೊಲೀಸರು ಬೈಕ್ ಸಮೇತ ಆರೋಪಿಯನ್ನ ಬಂಧಿಸಿದ್ದಾರೆ.

    ಬಳ್ಳಾರಿಯ (Ballari) ಕರ್ಚೇಡು ಗ್ರಾಮದ ಕೇಶವ ಬಂಧಿತ ಆರೋಪಿ. ನಗರದ ರೈಲ್ವೇ ಫಸ್ಟ್ ಗೇಟ್ ಬಳಿ ಬೈಕಿನ ಹಿಂಬದಿಯಲ್ಲಿ ಕುಳಿತು ಕೇಶವ ಬಿಯರ್‌ ಕುಡಿದಿದ್ದ.  ಇದನ್ನೂ ಓದಿ: ಕಾವೇರಿ ನದಿಗೆ ಹಾರಿ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ – 3 ದಿನಗಳ ಬಳಿಕ ಶವ ಪತ್ತೆ

     

    ಬಿಯರ್‌ ಕುಡಿಯುತ್ತಿದ್ದ ದೃಶ್ಯವನ್ನ ಸಾರ್ವಜನಿಕರು ಸೆರೆ ಹಿಡಿದಿದ್ದರು. ವಿಷಯ ಗಮನಕ್ಕೆ ಬರುತ್ತಲೇ ಕಾರ್ಯಪ್ರವೃತ್ತರಾಗಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲು

  • ಮದ್ಯಪ್ರಿಯರಿಗೆ ಬಿಗ್ ಶಾಕ್ – ಬಜೆಟ್‌ಗೆ ಮೊದಲೇ ದರ ಏರಿಕೆ!

    ಮದ್ಯಪ್ರಿಯರಿಗೆ ಬಿಗ್ ಶಾಕ್ – ಬಜೆಟ್‌ಗೆ ಮೊದಲೇ ದರ ಏರಿಕೆ!

    ಬೆಂಗಳೂರು: ಮದ್ಯಪ್ರಿಯರಿಗೆ ಬಿಗ್ ಶಾಕ್. ಬಜೆಟ್‌ಗೆ (Karnataka) ಮೊದಲೇ ಮದ್ಯದ ದರ (Alcohol Price) ಏರಿಕೆಯಾಗುವ ಸಾಧ್ಯತೆಯಿದೆ.

    ಸಾಧಾರಣವಾಗಿ ಬಜೆಟ್‌ನಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ಹಾಕಲಾಗುತ್ತದೆ. ಆದರೆ ಈ ಬಾರಿ ಬಜೆಟ್‌ ಮಂಡನೆಯಾಗುವ ಮೊದಲೇ ದರ ಏರಲಿದೆ.

    ಜನವರಿ 20 ರಿಂದಲೇ ಕೆಲ ಬಿಯರ್ ದರ (Beer Price) ಏರಿಕೆಯಾಗುವ ಸಾಧ್ಯತೆಯಿದೆ. ದರ ಏರಿಕೆ ಬಗ್ಗೆ ಅಬಕಾರಿ ಇಲಾಖೆಯ (Excise Department) ಮೂಲಗಳು ಪಬ್ಲಿಕ್‌ ಟಿವಿಗೆ ಮಾಹಿತಿ ನೀಡಿವೆ. ಶೀಘ್ರವೇ ದರ ಏರಿಕೆಯ ಬಗ್ಗೆ ಅಬಾಕರಿ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ. ಕನಿಷ್ಠ 10 ರಿಂದ 45 ರೂ. ದರ ಏರಿಕೆಯಾಗಲಿದೆ.

    ದುಬಾರಿ ಬೆಲೆಯ ಬಿಯರ್‌ ದರ ಏರಿಕೆಯಾಗುವುದಿಲ್ಲ. ಬದಲಾಗಿ 300 ರೂ. ಒಳಗಡೆ ಇರುವ ಮದ್ಯದ ಏರಿಸಲು ಅಬಕಾರಿ ಇಲಾಖೆ ಸಿದ್ಧತೆ ನಡೆಸಿದೆ.  ಇದನ್ನೂ ಓದಿ: ಡಿನ್ನರ್‌ಗೆ ಬ್ರೇಕ್‌, ಕಾಂಗ್ರೆಸ್‌ ಭಿನ್ನಮತ ತಾರಕಕ್ಕೆ – ಸಿಎಲ್‌ಪಿಯಲ್ಲಿ ಶಕ್ತಿ ಪ್ರದರ್ಶನ?

    ಯಾವ ಬ್ರಾಂಡ್‌ ಬೀಯರ್‌ ದರ ಎಷ್ಟು ಏರಿಕೆ?
    ಆವರಣದ ಒಳಗಡೆ ನೀಡಿರುವುದು ಹಳೆ ದರ
    ಲೆಜೆಂಡ್‌ – 145(100)
    ಪವರ್‌ ಕೂಲ್‌ -155(130)
    ಬ್ಲ್ಯಾಕ್‌ ಫೋರ್ಟ್‌ -160(145)
    ಹಂಟರ್‌ -190 (180)
    ವುಡ್‌ಪೆಕರ್‌ ಕ್ರೆಸ್ಟ್‌ – 250(240)
    ವುಡ್‌ಪೆಕರ್‌ ಗ್ಲೈಡ್‌ -240(230)

     

  • ಮುಂದಿನ ದಿನಗಳಲ್ಲಿ ಬೀಯರ್ ಪ್ರಿಯರಿಗೆ ಕಾದಿದೆ ಶಾಕಿಂಗ್ ನ್ಯೂಸ್!

    ಮುಂದಿನ ದಿನಗಳಲ್ಲಿ ಬೀಯರ್ ಪ್ರಿಯರಿಗೆ ಕಾದಿದೆ ಶಾಕಿಂಗ್ ನ್ಯೂಸ್!

    ವಾಷಿಂಗ್ಟನ್: ಬೀಯರ್ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಜಾಗತಿಕ ತಾಪಮಾನ ಏರಿಕೆಯಾದರೆ ಮುಂದಿನ ದಿನಗಳಲ್ಲಿ ಬೀಯರ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಯಿದೆ.

    ಹೌದು, ಬೀಯರ್ ತಯಾರಿಕೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುವ ಕಚ್ಚಾವಸ್ತುವಾದ ಬಾರ್ಲಿ ಬೆಳೆಯ ಇಳುವರಿ ಕಡಿಮೆಯಾಗುತ್ತಿದೆ. ಪ್ರಸ್ತುತ ಈಗ ಜಾಗತಿಕ ತಾಪಮಾನ ಭಾರೀ ಏರಿಕೆಯಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ಬಾರ್ಲಿ ಬೆಳೆಯ ಇಳುವರಿ ಶೇ. 17ರಷ್ಟು ಕುಸಿಯಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

    `ನೇಚರ್ ಪ್ಲಾಂಟ್’ ಪತ್ರಿಕೆಯಲ್ಲಿ ಈ ವಿಚಾರದ ಬಗ್ಗೆ ಲೇಖನ ಪ್ರಕಟವಾಗಿದೆ. ಒಂದು ವೇಳೆ ಬಾರ್ಲಿ ಇಳುವರಿ ಕುಸಿತವಾದರೆ ಬೀಯರ್ ಬೆಲೆ ಎರಡರಿಂದ ಮೂರುಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ದೇಶದಲ್ಲೇ ಫಸ್ಟ್.. ಮಹಾರಾಷ್ಟ್ರದ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್!

    ಕೆಲ ದಿನಗಳ ಹಿಂದೆ ಇಂಟರ್ ಗವರ್ನ್ಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಮುಂದಿನ ವರ್ಷಗಳಲ್ಲಿ ವಿಶ್ವದಲ್ಲಿ ತಾಪಮಾನ ಏರಿಕೆಯಾಗಲಿದೆ ಎಂದು ವರದಿ ಪ್ರಕಟಿಸಿತ್ತು. ಐಪಿಸಿಸಿ ವರದಿ ಜಾಗತಿಕ ಮಟ್ಟದ ಅತಿ ದೊಡ್ಡ ಅವಲೋಕನ ವರದಿ ಎಂದೇ ಪ್ರಸಿದ್ಧಿ ಪಡೆದಿದ್ದು, ಕೈಗಾರಿಕಾ ಕ್ರಾಂತಿ ಅವಧಿಯ ಹಿಂದಿನ ಮಟ್ಟ (ಪ್ರಿ ಇಂಡಸ್ಟ್ರಿಯಲ್ ಲೆವಲ್) ಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಜಾಸ್ತಿಯಾದರೆ ವಿಶ್ವಕ್ಕೆ ಭಾರೀ ಅಪಾಯವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು. ಈ ವರದಿಯ ಪ್ರಕಟವಾದ ಬೆನ್ನಲ್ಲೇ ನೇಚರ್ ಪ್ಲಾಂಟ್ ಪತ್ರಿಕೆಯಲ್ಲಿ ಬಾರ್ಲಿ ಬೆಳೆಯ ಬಗ್ಗೆ ದೀರ್ಘ ಅಧ್ಯಯನ ಪ್ರಕಟವಾಗಿದೆ. ಇದನ್ನೂ ಓದಿ: ಈ ವರ್ಷವೂ ದೇಶದಲ್ಲಿ ಬೀಸುತ್ತೆ ಮಾರಣಾಂತಿಕ ಬಿಸಿಗಾಳಿ! ಉಷ್ಣಾಂಶ ಹೆಚ್ಚಾದ್ರೆ ಎಲ್ಲೆಲ್ಲಿ ಏನಾಗುತ್ತೆ?

    ಬಾರ್ಲಿ ಬೇಸಿಗೆ ಕಾಲದಲ್ಲಿ ಬೆಳೆಯುವಂತಹ ಬೆಳೆಯಾಗಿದ್ದು, ಇದೇ ರೀತಿ ತಾಪಮಾನ ಏರಿಕೆ ಆಗುತ್ತಿದ್ದರೆ ಬಾರ್ಲಿ ಉತ್ಪನ್ನ ಇಳಿಕೆಯಾಗಿ, ಅದರ ಬೆಲೆ ಗಗನಕ್ಕೆ ಏರಲಿದೆ. ಇದರ ಪರಿಣಾಮ ಬೀಯರ್ ಉದ್ಯಮದ ಮೇಲೆ ಭಾರೀ ಹೊಡೆತ ಬೀಳಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:  ಖಾವಿ ಧರಿಸಿ ಮದ್ಯ ಕುಡಿಯಲು ಬಂದ ವ್ಯಕ್ತಿಗೆ ಬಾರಿನಲ್ಲೇ ಹಲ್ಲೆ

    ಈಗಾಗಲೇ ಐರ್ಲೆಂಡಿನಲ್ಲಿ ಬೀಯರ್ ಬೆಲೆ ಮೂರು ಪಟ್ಟು ಏರಿಕೆಯಾಗಿದೆ. ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್, ಗ್ಯಾಸ್ ಬಳಕೆ ಹೆಚ್ಚಾಗುತ್ತಿದ್ದು, ಅದೇ ಪ್ರಮಾಣದಲ್ಲಿ ಅರಣ್ಯ ನಾಶ ಹೆಚ್ಚಾಗುತ್ತಿದೆ. ಮರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿ ಪ್ರಕೃತಿಯ ಸಮತೋಲನವನ್ನು ಕಾಪಾಡಿಕೊಂಡರೆ ಬಾರ್ಲಿ ಇಳುವರಿ ಹೆಚ್ಚಾಗಿ ಬೀಯರ್ ಬೆಲೆ ಸ್ವಲ್ಪ ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

    ವರ್ಷದಿಂದ ವರ್ಷಕ್ಕೆ ಕುಸಿತ:
    ಪ್ರಪಂಚದಾದ್ಯಂತ ಸುಮಾರು 100 ರಾಷ್ಟ್ರಗಳಲ್ಲಿ ಬಾರ್ಲಿ ಬೆಳೆಯಲಾಗುತ್ತಿದೆ. ವಿಶ್ವದಲ್ಲಿ 2015-16 ರಲ್ಲಿ 149.64 ದಶಲಕ್ಷ ಮೆಟ್ರಿಕ್ ಟನ್ ಬಾರ್ಲಿ ಬೆಳೆದಿದ್ದರೆ, 2016-17 ರಲ್ಲಿ 145.96 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. 2017-18 ರಲ್ಲಿ 142.37 ಮೆಟ್ರಿಕ್ ಟನ್ ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv