Tag: ಬೀದಿ ವ್ಯಾಪಾರಿ

  • ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

    ಚೆನ್ನೈನ ಬೀದಿಬದಿಯಲ್ಲಿ ತರಕಾರಿ ಖರೀದಿಸಿದ ನಿರ್ಮಲಾ ಸೀತಾರಾಮನ್ – ವೀಡಿಯೋ ವೈರಲ್

    ಚೆನ್ನೈ: ತಮಿಳುನಾಡಿನ (Tamil Nadu) ಚೆನ್ನೈನ (Chennai) ಮೈಲಾಪುರ (Mylapore) ಪ್ರದೇಶದಲ್ಲಿ ರಸ್ತೆಬದಿಯ ವ್ಯಾಪಾರಿಗಳಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಶನಿವಾರ ತರಕಾರಿಗಳನ್ನು ಖರೀದಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈ ವೀಡಿಯೋವನ್ನು ನಿರ್ಮಲಾ ಸೀತಾರಾಮನ್ ಅವರ ಕಚೇರಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ತಮಿಳುನಾಡಿನ ಚೆನ್ನೈನ ಮೈಲಾಪುರ ಪ್ರದೇಶದ ಬೀದಿಬದಿ ವ್ಯಾಪಾರಿಗಳೊಂದಿಗೆ ಸಂವಾದ ನಡೆಸುತ್ತಾ ತರಕಾರಿಗಳನ್ನು ಖರೀದಿಸಿರುವುದನ್ನು ಕಾಣಬಹುದಾಗಿದೆ. ಮೊದಲಿಗೆ ಕೆಲವು ಗೆಣಸುಗಳನ್ನು ಆಯ್ದುಕೊಳ್ಳತ್ತಾರೆ, ಬಳಿಕ ಅದನು ಬಿಟ್ಟು ಹಾಗಲಕಾಯಿಯನ್ನು ಆಯ್ದು ತೂಕ ಮಾಡಿಸಿಕೊಂಡು ಖರೀದಿಸಿದ್ದಾರೆ. ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದಲ್ಲಿ ನಡುವೆ ತರಕಾರಿ ಬೆಲೆಯಲ್ಲಿ ಕೂಡ ಗಗನಕ್ಕೇರಿದೆ. ಇದನ್ನೂ ಓದಿ: ಡಿಎಂಕೆ ಅಧ್ಯಕ್ಷರಾಗಿ 2ನೇ ಬಾರಿಗೆ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆ

    ಸದ್ಯ ವೀಡಿಯೋಗೆ ಟ್ವಿಟ್ಟರ್ ಬಳಕೆದಾರರೊಬ್ಬರು, ವ್ಯಾಪಾರಿಗಳು ಮತ್ತು ಗ್ರಾಹಕರು ಹಣದುಬ್ಬರದಿಂದ ಹೇಗೆ ಉಳಿತಾಯ ಮಾಡಬಹುದು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂದು ತಿಳಿದುಕೊಳ್ಳುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಕಾಂಡೋಮ್‍ಗಳನ್ನು ಹೆಚ್ಚಾಗಿ ಬಳಸ್ತಿರೋದು ನಾವು – ಭಾಗವತ್‍ಗೆ ಓವೈಸಿ ತಿರುಗೇಟು

    Live Tv
    [brid partner=56869869 player=32851 video=960834 autoplay=true]

  • ಬೀದಿ ವ್ಯಾಪಾರಿಯ ಆದಾಯ 60 ಲಕ್ಷಕ್ಕೂ ಹೆಚ್ಚು- ಐಟಿಯಿಂದ ನೋಟಿಸ್ ಜಾರಿ

    ಬೀದಿ ವ್ಯಾಪಾರಿಯ ಆದಾಯ 60 ಲಕ್ಷಕ್ಕೂ ಹೆಚ್ಚು- ಐಟಿಯಿಂದ ನೋಟಿಸ್ ಜಾರಿ

    ಲಕ್ನೋ: ಬೀದಿಯಲ್ಲಿ ಕಚೋರಿ, ಸಮೋಸ ಮಾರಾಟದ ಮೂಲಕ ವಾರ್ಷಿಕ 60 ಲಕ್ಷದಿಂದ 1 ಕೋಟಿ ರೂ. ಆದಾಯ ಪಡೆಯುತ್ತಿದ್ದ ಬೀದಿ ವ್ಯಾಪಾರಿ ಮೇಲೆ ತೆರಿಗೆ ಇಲಾಖೆಯ ಕಣ್ಣುಬಿದ್ದಿದ್ದು, ವ್ಯಾಪಾರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ಉತ್ತರ ಪ್ರದೇಶದ ಅಲಿಗಢ್‍ನಲ್ಲಿರುವ ಬೀದಿ ವ್ಯಾಪಾರಿ ಮುಖೇಶ್ ಅವರು ಕೇವಲ ಕಚೋರಿ, ಸಮೋಸ ಮಾರಾಟ ಮಾಡುವುದರ ಮೂಲಕವೇ ಕೋಟ್ಯಧಿಪತಿ ಆಗಿದ್ದಾರೆ.

    ಹೌದು. ಅಲಿಗಢ್‍ನಲ್ಲಿರುವ ಸೀಮಾ ಸಿನಿಮಾ ಹಾಲ್ ಬಳಿ `ಮುಖೇಶ್ ಕಚೋರಿ’ ಹೆಸರಿನ ಅಂಗಡಿಯನ್ನು ಮುಖೇಶ್ ನಡೆಸುತ್ತಿದ್ದಾರೆ. ಇವರು ತಯಾರಿಸುವ ಕಚೋರಿ, ಸಮೋಸದ ರುಚಿಗೆ ಇಲ್ಲಿನ ತಿಂಡಿ ಪ್ರಿಯರು ಫಿದಾ ಆಗಿದ್ದು, ಪ್ರತಿದಿನ ಇಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತದೆ.

    ಕೆಲವು ದಿನಗಳ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಗೆ ಮುಖೇಶ್ ಆದಾಯದ ಮೇಲೆ ಯಾರೋ ದೂರು ನೀಡಿದ್ದರು. ಹೀಗಾಗಿ ರಾಜ್ಯ ತೆರಿಗೆ ಇಲಾಖೆಯು ಮುಖೇಶ್ ಮಾರಾಟದ ಬಗ್ಗೆ ದೂರು ಸ್ವೀಕರಿಸಿ, ಈ ಬಗ್ಗೆ ಪರಿಶೀಲನೆ ನಡೆಸಲು ಕೆಲವು ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿತ್ತು. ಬಳಿಕ ತೆರಿಗೆ ಅಧಿಕಾರಿಗಳು ಪಕ್ಕದ ಅಂಗಡಿಯಲ್ಲಿ ನೆಲೆಯೂರಿ ಮುಖೇಶ್ ಪ್ರತಿದಿನ ಎಷ್ಟು ವ್ಯಾಪಾರ ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿ ಕಲೆಹಾಕಿ ದಿನನಿತ್ಯದ ವ್ಯವಹಾರದ ಲೆಕ್ಕಾಚಾರ ಹಾಕಿದ್ದಾರೆ.

    ಈ ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆ ಮತ್ತು ಮಾರಾಟವಾದ ಆಹಾರ ಪದಾರ್ಥಗಳ ಸಂಖ್ಯೆಯನ್ನು ಆಧರಿಸಿ ಅವರ ಅಂದಾಜಿನ ಪ್ರಕಾರ, ಮುಖೇಶ್ ಅವರ ವಾರ್ಷಿಕ ವಹಿವಾಟು ಸುಮಾರು 60 ಲಕ್ಷದಿಂದ 1 ಕೋಟಿ ರೂ.ವರೆಗೂ ಇದೆ ಎನ್ನಲಾಗಿದೆ.

    ಅಷ್ಟೇ ಅಲ್ಲದೆ ಮುಖೇಶ್ ತನ್ನ ಅಂಗಡಿಯನ್ನು ಜಿಎಸ್‍ಟಿ ಅಡಿಯಲ್ಲಿ ನೋಂದಾಯಿಸಿರಲಿಲ್ಲ. ಸುಮಾರು 12 ವರ್ಷಗಳಿಂದ ಈ ವ್ಯಾಪಾರ ನಡೆಸುತ್ತಿದ್ದರೂ ಈವರೆಗೇ ಯಾವುದೇ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿರಲಿಲ್ಲ. ಆದ್ದರಿಂದ ಐಟಿ ಮುಖೇಶ್‍ಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ

  • ಬೀದಿ ಬದಿ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು

    ಬೀದಿ ಬದಿ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು

    ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಬೀದಿ ಬದಿಯ ವ್ಯಾಪಾರಿಯನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಧಾರವಾಡದ ಜಯನಗರ ಬಡಾವಣೆಯಲ್ಲಿ ನಡೆದಿದೆ.

    ಪರಮಾನಂದ ಕೆಂಬಾವಿ(25) ಕೊಲೆಯಾದ ವ್ಯಾಪಾರಿ. ಜಯನಗರದಲ್ಲಿ ನಿವಾಸಿಯಾದ ಪರಮಾನಂದ ಪಾನ್ ಶಾಪ್ ನಡೆಸುತ್ತಿದ್ದರು. ಭಾನುವಾರ ಮಧ್ಯರಾತ್ರಿ ಅಂಗಡಿಗೆ ಬಂದ ಹಂತಕರು ಕ್ಷುಲ್ಲಕ ಕಾರಣಕ್ಕೆ ಜಗಳ ತಗೆದು ಮಾರಕಾಸ್ತ್ರಗಳಿಂದ ಕೊಚ್ಚಿ ಪರಮಾನಂದ ಅವರನ್ನ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.