Tag: ಬೀದಿ ಬದಿ ವ್ಯಾಪಾರಿಗಳು

  • ಯುಪಿ ಬಳಿಕ ಹಿಮಾಚಲದಲ್ಲೂ ಆಹಾರ ಮಳಿಗೆಗಳ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ!

    ಯುಪಿ ಬಳಿಕ ಹಿಮಾಚಲದಲ್ಲೂ ಆಹಾರ ಮಳಿಗೆಗಳ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ!

    ನವದೆಹಲಿ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಇನ್ಮುಂದೆ ಆಹಾರ ಮಳಿಗೆ, ಹೊಟೇಲ್ ಹಾಗೂ ಬೀದಿ ವ್ಯಾಪಾರಿಗಳ ಮಳಿಗೆಗಳ ಹೆಸರು ಪದರ್ಶನ ಕಡ್ಡಾಯ ಎಂದು ಇಲ್ಲಿನ ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್ (Vikramaditya Singh) ಆದೇಶ ಹೊರಡಿಸಿದ್ದಾರೆ.

    ಇತ್ತೀಚಿಗಷ್ಟೇ ಉತ್ತರ ಪ್ರದೇಶ (Uttara Pradesh) ಸರ್ಕಾರವು ಬೀದಿ ಬದಿಯ ವ್ಯಾಪಾರಿಗಳು ತಮ್ಮ ಹೆಸರು ಹಾಗೂ ವ್ಯಾಪಾರದ ಗುರುತನ್ನು ಅಳವಡಿಸುವುದು ಕಡ್ಡಾಯವೆಂದು ಕಟ್ಟುನಿಟ್ಟಾದ ಆದೇಶವನ್ನು ಹೊರಡಿಸಿತ್ತು.ಇದನ್ನೂ ಓದಿ: ಸೆ.27ರಂದು ತುಮಕೂರು- ಯಶವಂತಪುರ ಮೆಮು ರೈಲಿಗೆ ಚಾಲನೆ

    ಇದಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ವಿಕ್ರಮಾದಿತ್ಯ ಸಿಂಗ್ ಮಾತಾನಾಡಿ, ಇತ್ತೀಚಿಗೆ ರಾಜಾದ್ಯಂತ ಜನರು ಇದಕ್ಕೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ವ್ಯಕ್ತಪಡಿಸಿದ್ದರು. ಅವುಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರ ನಡೆದ ನಗರಾಭಿವೃದ್ಧಿ ಇಲಾಖೆ (Urban Development Department) ಹಾಗೂ ಶಿಮ್ಲಾ ಮಹಾನಗರ ಪಾಲಿಕೆ (Shimla Municipal Corporation) ಸಭೆಯಲ್ಲಿ ನಿರ್ಧಾರಿಸಿದೆ. ಸರಕು ಸಾಮಗ್ರಿಗಳ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಆಹಾರ ಪದಾರ್ಥ ಮಾರಾಟಗಾರರು ತಮ್ಮ ಗುರುತನ್ನು ಪ್ರದರ್ಶಿಸಬೇಕೆಂದು ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.

    ತಿನ್ನುವ ಆಹಾರವು ಶುಚಿಯಾಗಿದೆಯಾ? ಗುಣಮಟ್ಟವಾಗಿದೆಯಾ? ಎನ್ನುವುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳುತ್ತದೆ. ಜೊತೆಗೆ ಇದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil Supplies Department) ಪರಿಶೀಲಿಸುತ್ತದೆ ಎಂದು ತಿಳಿಸಿದ್ದಾರೆ.

    ತಮ್ಮ ಗುರುತನ್ನು ಪ್ರದರ್ಶಿಸುವಾಗ ನೋಂದಣಿ ಸಂಖ್ಯೆ ಹಾಗೂ ವ್ಯಾಪಾರಿಯ ಭಾವಚಿತ್ರವನ್ನು ಪದರ್ಶಿಸಬೇಕೆಂದು ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾದಾಗ ಕ್ರಮ ಕೈಗೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಸಿಎಂ, ಪುತ್ರ ಯತೀಂದ್ರ, ಪತ್ನಿ ಪಾರ್ವತಿ ಮೇಲೆ ಎಫ್‌ಐಆರ್‌ ದಾಖಲಿಸಿ: ಪ್ರದೀಪ್‌ ಕುಮಾರ್‌ ದೂರು

  • ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

    ವ್ಯಾಕ್ಸಿನ್ ಪಡೆಯದ ಆಟೋ ಚಾಲಕರು ಆಟೋವನ್ನು ರಸ್ತೆಗಿಳಿಸುವಂತಿಲ್ಲ: ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ

    ವಿಜಯಪುರ: ವ್ಯಾಕ್ಸಿನ್ ಹಾಕಿಸಿಕೊಳ್ಳದ ಆಟೋ ಚಾಲಕರು ಆಟೋಗಳನ್ನ ರಸ್ತೆಗೆ ಇಳಿಸುವ ಹಾಗಿಲ್ಲ. ಇನ್ನು ಈವರೆಗೂ ವ್ಯಾಕ್ಸಿನ್ ಪಡೆಯದ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುವ ಹಾಗಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನೀಲ್‍ಕುಮಾರ್ ಖಡಕ್ ನಿರ್ಧಾರಕ್ಕೆ ಮುಂದಾಗಿದ್ದಾರೆ.

    ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಕೇಳುತ್ತಿಲ್ಲ. ನಾವು ಆರೋಗ್ಯವಾಗಿದ್ದೀವಿ ವ್ಯಾಕ್ಸಿನ್ ಯಾಕೆ ಎಂದು ಹೇಳುತ್ತಿದ್ದಾರೆ.

    ಹೀಗಾಗಿ ಗರಂ ಆಗಿರುವ ಡಿಸಿ ಸುನೀಲ್‍ಕುಮಾರ್, ವ್ಯಾಕ್ಸಿನ್ ಹಾಕಿಸಿಕೊಂಡರೇ ಮಾತ್ರ ಆಟೋ ಓಡಿಸಬೇಕು. ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಬಹುದು. ಇಲ್ಲದಿದ್ದರೆ ಪಾಲಿಕೆ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಲೇ ಬಾರದು ಎಂದು ಆದೇಶಿಸಿದ್ದಾರೆ.

    ವಿಜಯಪುರದಲ್ಲಿ 6 ಸಾವಿರದಷ್ಟು ಬೀದಿಬದಿ ವ್ಯಾಪಾರಿಗಳಿದ್ದಾರೆ, ಆದರೆ, ಅರ್ಧದಷ್ಟು ಜನರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. 75 ಸಾವಿರ ಕಟ್ಟಡ ಕಾರ್ಮಿಕರಿದ್ದು, ಅವರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಎಂದು ಡಿಸಿ ಸುನೀಲ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಬಂದ್ ಆಗಿದ್ದ ಪ್ರವಾಸಿ ತಾಣಗಳು ಓಪನ್

  • ಸಣ್ಣ ವ್ಯಾಪಾರಿಗಳಿಗೆ 50 ಸಾವಿರ ಸಾಲ – ಶೇ.2ರಷ್ಟು ಬಡ್ಡಿ ಕೇಂದ್ರದಿಂದ ಪಾವತಿ

    ಸಣ್ಣ ವ್ಯಾಪಾರಿಗಳಿಗೆ 50 ಸಾವಿರ ಸಾಲ – ಶೇ.2ರಷ್ಟು ಬಡ್ಡಿ ಕೇಂದ್ರದಿಂದ ಪಾವತಿ

    ನವದೆಹಲಿ: ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳಿಗೆ ರಿಲೀಫ್ ನೀಡಿದಂತೆ ಸಣ್ಣ ವ್ಯಾಪಾರಿಗಳಿಗೆ ಸಹಾಯಹಸ್ತ ಚಾಚಿದೆ.

    ಮುದ್ರಾ ಶಿಶು ಯೋಜನೆಯ ಅಡಿಯಲ್ಲಿ ಗರಿಷ್ಟ 50 ಸಾವಿರ ರೂ. ಸಾಲ ನೀಡಲಾಗುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ಸಾಲ ಪಡೆದವರಿಗೆ 12 ಅವಧಿಗೆ ಶೇ.2 ರಷ್ಟು ಬಡ್ಡಿಯನ್ನು ಸರ್ಕಾರವೇ ಪಾವತಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

     

    ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಈ ಸಾಲಕ್ಕೆ ಅನುಮತಿ ನೀಡಿದೆ. ಪ್ರಧಾನಿ ಮೋದಿ ಪ್ರಕಟಿಸಿದ 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜಿನಲ್ಲಿ ಈ ಯೋಜನೆಗೆ ಒಟ್ಟು 1,500 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.

    ಏನಿದು ಮುದ್ರಾ ಸಾಲ?
    ಸಣ್ಣ ಉದ್ಯಮಿಗಳಿಗೆ ಸಹಾಯ ಮಾಡಲು ಮುದ್ರಾ ಬ್ಯಾಂಕ್ ಸ್ಥಾಪನೆಯಾಗಿದ್ದು, ಈ ಯೋಜನೆಯ ಅಡಿ ಶಿಶು ಸಾಲ(50 ಸಾವಿರ ರೂ.), ಕಿಶೋರ್ ಸಾಲ(50 ಸಾವಿರ ರೂ. ನಿಂದ 5 ಲಕ್ಷ ರೂ.), ತರುಣ್ ಸಾಲ(5 ಲಕ್ಷ ರೂ. ನಿಂದ 10 ಲಕ್ಷ ರೂ.) ನೀಡಲಾಗುತ್ತದೆ.

    ಮುದ್ರಾ ವ್ಯಾಪ್ತಿಯಲ್ಲಿ ಯಾರೆಲ್ಲ ಬರುತ್ತಾರೆ?
    3 ಚಕ್ರ ವಾಹನ, ಕಾರು, ಟ್ಯಾಕ್ಸಿ, ಆಟೋ ರಿಕ್ಷಾ ಓಡಿಸುವವರು, ಜೆರಾಕ್ಸ್ ಅಂಗಡಿ, ಮೆಡಿಕಲ್ ಸ್ಟೋರ್, ಸಲೂನ್, ಬ್ಯೂಟಿಪಾರ್ಲರ್ ಗಳು, ವ್ಯಾಯಾಮಶಾಲೆ, ಅಂಗಡಿಗಳು, ಹೊಲಿಗೆ ಅಂಗಡಿಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟರ್ ರಿಪೇರಿ ಮಾಡುವ ಅಂಗಡಿ ಸೇರಿದಂತೆ ಸಣ್ಣ ಪ್ರಮಾಣದ ಉದ್ಯೋಗ ನಡೆಸುವವರು ಸೇರುತ್ತಾರೆ.

  • ಮಹಿಳೆಯರಿಗೆ ಲಕ್ಷಾಂತರ ರೂ. ಟೋಪಿ – ಮಾನವ ಹಕ್ಕುಗಳ ಅಧ್ಯಕ್ಷ ಅರೆಸ್ಟ್

    ಮಹಿಳೆಯರಿಗೆ ಲಕ್ಷಾಂತರ ರೂ. ಟೋಪಿ – ಮಾನವ ಹಕ್ಕುಗಳ ಅಧ್ಯಕ್ಷ ಅರೆಸ್ಟ್

    ಮಡಿಕೇರಿ: ಮಾನವ ಹಕ್ಕುಗಳ ಸಂಸ್ಥೆಯ ಅಧ್ಯಕ್ಷ ಎಂದು ಹೇಳಿಕೊಂಡು ಮಹಿಳೆಯರಿಗೆ ಲಕ್ಷಾಂತರ ರೂ. ಟೋಪಿ ಹಾಕಿದ್ದ ಆರೋಪಿಯನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

    ಮಂಜಿನ ನಗರಿ ಮಡಿಕೇರಿಯಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನ ಹೆಣ್ಣೂರಿನವನಾದ ರಸೂಲ್ ಖಾನ್, ನಾನು ಮಾನವ ಹಕ್ಕುಗಳ ಸಂಸ್ಥೆಯ ಮುಖಂಡ ವ್ಯಾಪಾರ ಮಾಡಲು ನಿಮಗೆ ಸಾಲ ಕೊಡಿಸುತ್ತೇನೆ ಎಂದು ಹೇಳಿಕೊಂಡು ಬೆಂಗಳೂರಿನಿಂದ ಮಡಿಕೇರಿಗೆ ಬಂದಿದ್ದ. ಸಾಲ ಕೊಡಿಸಬೇಕಾದಲ್ಲಿ ನೀವು ಒಂದು ಕಾರ್ಯಕ್ರಮ ಮಾಡಬೇಕು ಎಂದು ಅದ್ಧೂರಿ ಕಾರ್ಯಕ್ರಮ ಮಾಡಿಸಿದ್ದಾನೆ. ಬಳಿಕ ಹತ್ತಾರು ಮಹಿಳೆಯರಿಗೆ ಲಕ್ಷಾಂತರ ರೂ. ಟೋಪಿಹಾಕಿ ಪರಾರಿಯಾಗಿದ್ದ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

    ಒಬ್ಬೊಬ್ಬರಿಗೂ ಒಂದುವರೆ ಲಕ್ಷ ರೂ. ಸಾಲ ಕೊಡಿಸುತ್ತೇನೆ ಎಂದು ಬೀದಿ ಬದಿ ವ್ಯಾಪಾರಿಗಳನ್ನು ನಂಬಿಸಿದ್ದಾನೆ. ಅಲ್ಲದೆ ಸಂಸ್ಥೆಗೆ ಜನರನ್ನು ಸದಸ್ಯರನ್ನಾಗಿಸಬೇಕು, ಅದಕ್ಕೂ ಮುನನ್ನ ಮಡಿಕೇರಿ ನಗರದಲ್ಲಿ ಒಂದು ಕಾರ್ಯಕ್ರಮ ಆಯೋಜನೆ ಮಾಡಬೇಕು ಎಂದು ಬೀದಿ ಬದಿ ವ್ಯಾಪಾರ ಮಾಡುವ ಮಹಿಳಿಯರಿಗೆ ತಿಳಿಸಿದ್ದಾನೆ. ಇದನ್ನೇ ನಂಬಿದ್ದ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಕುಶಾಲನಗರದ ಮಹಿಳಾ ವ್ಯಾಪಾರಿಗಳು ಮೋಸ ಹೋಗಿದ್ದಾರೆ. 15ಕ್ಕೂ ಹೆಚ್ಚು ಮಹಿಳೆಯರು ಸೇರಿ ಮಡಿಕೇರಿಯಲ್ಲಿ ಕಾರ್ಯಕ್ರಮವನ್ನೂ ಮಾಡಿದ್ದಾರೆ. ಬಳಿಕ ಮಹಿಳೆಯರಿಗೆ ಅನುವಂಶೀಯ ವೈದ್ಯರ ಪರಿಷತ್ತು ಹೆಸರಿನ ಸರ್ಟಿಫಿಕೇಟ್‍ಗಳನ್ನು ವಿತರಣೆ ಮಾಡಿದ್ದಾನೆ.

    ಇದನ್ನು ನಂಬಿದ ಮಹಿಳೆಯರು ತಲಾ ಹದಿನೈದು ಸಾವಿರದಂತೆ ಹಣ ನೀಡಿದ್ದಾರೆ. ಹೀಗೆ ಒಬ್ಬೊಬ್ಬರಿಂದಲೂ ಹದಿನೈದು ಸಾವಿರ ರೂ. ಹಣ ಪಡೆದಿದ್ದ ಬಾಬು ಅಲಿಯಾಸ್ ರಸೂಲ್ ಖಾನ್, ಬಳಿಕ ವ್ಯಾಪಾರಿ ಮಹಿಳೆಯರನ್ನು ಬೆಂಗಳೂರಿಗೂ ಕರೆದೊಯ್ದು ಇದೇ ತನ್ನ ಕಚೇರಿ ಎಂದು ಪರಿಚಯಿಸಿದ್ದಾನೆ. ನಂತರ ಹಲವು ದಿನ ಕಳೆದರೂ ಸಾಲ ಕೊಡಿಸುವ ಕುರಿತು ಮಾತನಾಡದಿದ್ದಾಗ ಮಹಿಳೆಯರು ಫೋನ್ ಮಾಡಿ ಪ್ರಶ್ನಿಸಿದ್ದಾರೆ. ಈ ವೇಳೆ ನೀವು ಯಾರು ಅಂತಾನೆ ಗೊತ್ತಿಲ್ಲ. ನೀವು ನನಗೆ ಯಾವುದೇ ಹಣವನ್ನೂ ಕೊಟ್ಟಿಲ್ಲ ಎಂದು ಉಲ್ಟಾ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯರು, ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣವೇ ಎಚ್ಚೆತ್ತುಕೊಂಡ ಮಡಿಕೇರಿ ನಗರ ಪೊಲೀಸರು, ಆರೋಪಿ ರಸೂಲ್ ಖಾನ್‍ನನ್ನು ಬಂಧಿಸಿ ಜೈಲಿಗೆ ದಬ್ಬಿದ್ದಾರೆ.