ಬೀದರ್: ಮನೆಯ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಗಳು (Stray Dog) ಏಕಾಏಕಿ ದಾಳಿ ನಡೆಸಿದ್ದು, ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಗಾಡಿವಾನ ಓಣಿಯಲ್ಲಿ ನಡೆದಿದೆ.
ಬಸವಕಲ್ಯಾಣ ನಗರಸಭೆಯ ನಿರ್ಲಕ್ಷ್ಯದಿಂದ ನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗಿದೆ. ಸಿಕ್ಕ-ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ ಎಂದು ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮೋಹಕತಾರೆ ರಮ್ಯಾ(Actress Ramya) ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದ ಪ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಇನ್ನೂ ಶ್ವಾನದ ಬಗ್ಗೆ ವಿಶೇಷ ಪ್ರೀತಿಯಿರುವ ರಮ್ಯಾ ಇದೀಗ ಬೀದಿ ನಾಯಿಯ ವೀಡಿಯೋವೊಂದನ್ನ ಶೇರ್ ಮಾಡಿ, ನೋಟ್ ಕೂಡ ಬರೆದಿದ್ದಾರೆ. ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.
`ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಾರೆ ಎಂದು ಕಾಯ್ತಿದ್ದ ಫ್ಯಾನ್ಸ್ಗೆ ನಿರಾಸೆಯಾಗಿದೆ. ಕೊನೆಯ ಹಂತದಲ್ಲಿ ನಾಯಕಿಯ ಬದಲಾವಣೆಯಾಗಿದೆ. ಸದ್ಯ ನಿರ್ಮಾಣದ ಹೊಣೆ ಹೊತ್ತಿರುವ ನಟಿ ರಮ್ಯಾ, ಶ್ವಾನದ(Dog) ಬಗ್ಗೆ ವಿಶೇಷ ಪೋಸ್ಟ್‌ವೊಂದನ್ನ ಶೇರ್ ಮಾಡಿದ್ದಾರೆ.
ರಾಣಿ ನಮ್ಮ ಜೊತೆಗಿರುವುದು ಒಂದು ವರ್ಷವಾಗುತ್ತಾ ಬಂತು. ರಾಣಿ ಮೇಲೆ ಕಾರು ಹರಿದು ಹೋಗಿ ರಸ್ತೆಯಲ್ಲಿ ಬಿದ್ದಿತ್ತು. ಗೋವಾದಲ್ಲಿ ಶೆಲ್ಟರ್ ಹೌಸ್ ಒಂದರಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ನೀಡಿದ ನಂತರ ರಾಣಿ ಚೇತರಿಸಿಕೊಂಡಳು. ನಮ್ಮಲ್ಲಿ ವಯಸ್ಸಾದ ಎರಡು ನಾಯಿಗಳಿದ್ದವು. ಹಾಗಾಗಿ ರಾಣಿಯನ್ನು ಸಾಕಬಹುದು ಎನ್ನುವ ಬಗ್ಗೆ ನನಗೆ ಖಚಿತವಿರಲಿಲ್ಲ. ಆದರೆ ರಾಣಿ ನಮ್ಮನೆಗೆ ಬಂದಳು. ನಾನು ಜೀವನದಲ್ಲಿ ಏನನ್ನೂ ನಿರ್ಧರಿಸಬೇಕಾಗಿಲ್ಲ, ಜೀವನವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಮೈ ರಾನು, ಮೈ ಬೇಬಿ ಗರ್ಲ್, ನನ್ನ ಹೃದಯ ತೆರೆದಿದ್ದಕ್ಕೆ ಧನ್ಯವಾದಗಳು. ಐ ಲವ್ ಯೂ ಲವ್ ಯೂ ಲವ್ ಯೂ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಅಪ್ಪುಗೆ ಅರ್ಪಿಸಿದ ಪುನೀತ್ ಪತ್ನಿ ಅಶ್ವಿನಿ
ಬೆಳಗಾವಿ: ಬೀದಿ ನಾಯಿಗಳಿಗೆ (Stray Dog) ತೊಂದರೆ ಕೊಡುವುದಲ್ಲದೇ ಅವುಗಳಿಗೆ ಉಚಿತವಾಗಿ ಆಹಾರ ಕೊಡುತ್ತಿರುವ ಕುಟುಂಬದವರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿರುವುದಾಗಿ ಬೆಳಗಾವಿ ಪೊಲೀಸರಿಗೆ ದೂರು ನೀಡಿದರೂ, ಕ್ರಮಕೈಗೊಳ್ಳದ ಹಿನ್ನೆಲೆ ಸಂತ್ರಸ್ತರು ಪ್ರಧಾನಿಗೆ (Prim Minister) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಪ್ರಕರಣ ಹಿನ್ನೆಲೆ: ಅನಿತಾ ದೊಡ್ಡಮನಿ ಕುಟುಂಬಸ್ಥರು ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಅನಿಮಲ್ ವೇಲ್ಫೇರ್ ಅಸೋಸಿಯೇಷನ್ (ಎನ್‌ಜಿಓ) ತೆಗೆದುಕೊಂಡು ಸರ್ಕಾರದ ಅನುಮತಿ ಪಡೆದು ನಗರದಲ್ಲಿರುವ ಬೀದಿ ನಾಯಿಗಳಿಗೆ ಉಚಿತವಾಗಿ ಊಟ ಹಾಕುತ್ತಿದ್ದಾರೆ. ಆದರೆ, ಬೀದಿ ನಾಯಿಗಳಿಗೆ ಊಟ ನೀಡದಂತೆ ಅನಿತಾ ಕುಟುಂಬಸ್ಥರಿಗೆ ವಕೀಲ ವಿನಾಯಕ್ ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಳೆದ ಒಂಭತ್ತು ತಿಂಗಳ ಹಿಂದೆಯೇ ಶಾಹಾಪುರ ಪೊಲೀಸ್ ಠಾಣೆಯಲ್ಲಿ ಅನಿತಾ ಅವರು ದೂರು ದಾಖಲಿಸಿದ್ದಾರೆ.
ಆದರೆ ನಾಯಿಗಳಿಗೆ ತೊಂದರೆ ಹಾಗೂ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದರೂ ಪೊಲೀಸರು ಸೂಕ್ತಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ನಾವು ಬೀದಿ ನಾಯಿಗಳಿಗೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ರಾಜ್ಯಪಾಲ ಹಾಗೂ ಪ್ರಧಾನಮಂತ್ರಿವರೆಗೂ ದೂರು ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ನಾಯಿಗಳಿಗೆ ಹಾಗೂ ನಮಗೆ ಕಿರುಕುಳ ನೀಡುತ್ತಿರುವ ವಿನಾಯಕ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ – `ಕೈ’ ನಾಯಕರ ಪಟ್ಟಿ ರಿಲೀಸ್
Live Tv
[brid partner=56869869 player=32851 video=960834 autoplay=true]
ಲಕ್ನೋ: 7 ತಿಂಗಳ ಮಗುವನ್ನು (Child) ಬೀದಿ ನಾಯಿಗಳು (Stray Dog) ಕ್ರೂರವಾಗಿ ಕಚ್ಚಿ ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾ (Noida) ಸೆಕ್ಟರ್ 100ನ ಐಷಾರಾಮಿ ಲೋಟಸ್ ಬೌಲೆವಾರ್ಡ್ ಸೊಸೈಟಿಯಲ್ಲಿ ನಡೆದಿದೆ. ಘಟನೆಯಿಂದ ಬೆಚ್ಚಿ ಬಿದ್ದಿರುವ ನಿವಾಸಿಗಳು ಶ್ವಾನ ಪ್ರಿಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವರದಿಗಳ ಪ್ರಕಾರ ಬೀದಿ ನಾಯಿಗಳ ದಾಳಿಗೆ ಬಲಿಯಾದ 7 ತಿಂಗಳ ಮಗುವನ್ನು ಅರವಿಂದ್ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಸಪ್ನಾ ದೇವಿ ದಿನಗೂಲಿ ಕೆಲಸಕ್ಕೆ ಹೋಗುವಾಗ ಮಗುವನ್ನು ಆಟವಾಡಲು ಸೊಸೈಟಿಯೊಳಗೆ ಬಿಟ್ಟು ಹೋಗಿದ್ದಳು ಎನ್ನಲಾಗಿದೆ.
ಈ ವೇಳೆ ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ನಡೆಸಿವೆ. ಮಗುವಿನ ಕಿರುಚಾಟ ಕೇಳಿ ಸೊಸೈಟಿ ನಿವಾಸಿಗಳು ಹೊರಬಂದಾಗ ಮಗು ಗಂಭೀರವಾಗಿ ಗಾಯಗೊಂಡಿತ್ತು. ಆಘಾತಕಾರಿ ವಿಷಯ ಎಂದರೆ ನಾಯಿಗಳು ಮಗುವಿನ ಹೊಟ್ಟೆಯನ್ನು ಸೀಳಿ ಕರುಳನ್ನೇ ಹರಿದು ಹಾಕಿವೆ. ತಕ್ಷಣ ಮಗುವನ್ನು ಸ್ಥಳೀಯರು ನೋಯ್ಡಾದ ಯಥಾರ್ಥ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಮಗು ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ. ಇದನ್ನೂ ಓದಿ: ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ- ಇಬ್ಬರು ಪೈಲಟ್ ಸೇರಿ 6 ಮಂದಿ ದುರ್ಮರಣ
ಬೀದಿ ನಾಯಿಗಳು ಹಲವು ವರ್ಷಗಳಿಂದ ಸೊಸೈಟಿಯಲ್ಲಿ ಹಲವರ ಮೇಲೆ ದಾಳಿ ಮಾಡಿವೆ ಎಂದು ನಿವಾಸಿಗಳು ಹೇಳಿದ್ದಾರೆ. ಆದರೆ ಕೆಲ ಶ್ವಾನ ಪ್ರಿಯರ ಅಡ್ಡಿಯಿಂದಾಗಿ ಬೀದಿ ನಾಯಿಗಳನ್ನು ಅಲ್ಲಿಂದ ಬೇರೆಡೆಗೆ ಒಯ್ಯಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಿಟ್‌ಬುಲ್ ತಳಿಯ ನಾಯಿ ತನ್ನ ಮಾಲೀಕನನ್ನೇ ಕೊಂದಿತ್ತು. ಇತ್ತೀಚೆಗೆ ಘಾಜಿಯಾಬಾದ್ ಪುರಸಭೆ ಪಿಟ್‌ಬುಲ್, ರಾಟ್‌ವೀಲರ್‌ನಂತಹ ಆಕ್ರಮಣಕಾರಿ ಸ್ವಭಾವದ ನಾಯಿಗಳನ್ನು ಸಾಕುವುದನ್ನು ನಿಷೇಧಿಸಿದೆ. ಇದನ್ನೂ ಓದಿ: ನಮಾಜ್ ವಿಷಯಕ್ಕೆ ಗಲಾಟೆ – ವಿವಿಯಿಂದ ಹೊರನಡೆದ 60 ನೈಜೀರಿಯಾ ವಿದ್ಯಾರ್ಥಿಗಳು
ಕಾರವಾರ: ಬಹುತೇಕ ಅರಣ್ಯವನ್ನೇ ಹೊಂದಿರುವ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಕಾಟಕ್ಕಿಂತ ಬೀದಿ ನಾಯಿಗಳ ಉಪಟಳವೇ ಹೆಚ್ಚಾಗಿದೆ. ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ ಆರು ಸಾವಿರದ ಐನೂರಕ್ಕೂ ಹೆಚ್ಚು ಜನ ನಾಯಿಗಳಿಂದ ಕಚ್ಚಿಸಿಕೊಂಡಿದ್ದು, ಇದೀಗ ಬೀದಿನಾಯಿಗಳಿಗೆ ಜನರು ಭಯಪಡುವಂತಾಗಿದೆ.
ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರದಲ್ಲಿ ಬೀದಿನಾಯಿಗಳ ದಾಳಿಯಿಂದ ಜನ ಬೇಸತ್ತು ಹೋಗಿದ್ದಾರೆ. ಆದರೆ ಬಹುತೇಕ ಅರಣ್ಯವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡುಪ್ರಾಣಿಗಳಿಗಿಂತ ನಾಯಿಗಳ ದಾಳಿಗೆ ಒಳಗಾದವರೇ ಹೆಚ್ಚಾಗುತಿದ್ದಾರೆ. ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬೀದಿ ನಾಯಿ (Street Dogs) ಗಳ ಸಂಖ್ಯೆ ಗಣನೀಯವಾಗಿ ಏರಿದ್ದು, ರಸ್ತೆಯಲ್ಲಿ ಸಂಚರಿಸುವ ಜನ, ವಾಹನಗಳ ಮೇಲೆ ಬೀದಿ ನಾಯಿಗಳು ಮುಗಿಬೀಳುತ್ತಿವೆ. ಈ ವರ್ಷದಲ್ಲೇ ಬರೋಬ್ಬರಿ 6,533 ಜನರು ನಾಯಿಯ ದಾಳಿಗೆ ಒಳಗಾಗಿದ್ದಾರೆ. ಆದರೆ ಕಾಡು ಪ್ರಾಣಿಗಳಿಂದ ದಾಳಿಗೊಳಗಾದ ಪ್ರಕರಣಗಳು 349 ಮಾತ್ರ ದಾಖಲಾಗಿದೆ. ಹೀಗಾಗಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡುವಂತೆ ಜಿಲ್ಲಾಡಳಿತವನ್ನು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಪಶುಸಂಗೋಪನಾ ಇಲಾಖೆ (Department of Animal Husbandry) ಮಾಹಿತಿಯಂತೆ 7 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿವೆ. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿವೆ. ಜಿಲ್ಲೆಯ ಕೆಲವೆಡೆ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದ್ದಾರೆ. ಹಳಿಯಾಳ ಪುರಸಭೆಯಲ್ಲಿ ಮಾತ್ರ ನಾಯಿಗಳ ಸಂತಾನ ಶಕ್ತಿ ಹರಣ ಮಾಡುವ ಬದಲು, ನೂರಾರು ನಾಯಿಗಳನ್ನು ಹಿಡಿದು ಕಾಡಿನಲ್ಲಿ ಬಿಟ್ಟು ಬರಲಾಗುತ್ತಿದೆ. ಹೀಗಾಗಿ ಪ್ರಾಣಿದಯಾ ಸಂಘ (Animal Welfare Association) ದವರು ಸಹ ನಿಯಮ ಬಾಹಿರವಾಗಿ ಬೀದಿನಾಯಿಗಳನ್ನು ಹಿಡಿದು ಕಾಡಿಗೆ ಬಿಡುತ್ತಿರುವ ಕುರಿತು ದೂರು ಸಹ ದಾಖಲಿಸಿದ್ದು, ಜಿಲ್ಲಾಡಳಿತ ಇದೀಗ ನಾಯಿಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ.
ಸದ್ಯ ಜಿಲ್ಲೆಯಲ್ಲಿ ನಾಯಿಗಳ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಆದರೆ ನಿಯಮದ ಪ್ರಕಾರ ನಡೆದುಕೊಳ್ಳಬೇಕಿದ್ದ ಸ್ಥಳೀಯ ಆಡಳಿತ ನಾಯಿಗಳನ್ನು ಹಿಡಿದು ಕಾಡಿಗೆ ಬಿಡುತ್ತಿರುವುದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದ್ದು, ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಣ ಮಾಡುವಂತೆ ಜನರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನಕ್ಕೆ ಬಡಿದ ಪಕ್ಷಿ – ಕಣ್ಣೂರಿನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಕೇರಳದಲ್ಲಿ(Kerala) ಬೀದಿ ನಾಯಿಗಳ(Stray Dog) ಹಾವಳಿ ಹೆಚ್ಚುತ್ತಿರುವುದರೊಂದಿಗೆ ಅವುಗಳಿಂದ ಜನರ ಮೇಲೆ ದಾಳಿ ನಡೆಯುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಇದರ ಹಿನ್ನೆಲೆ ವ್ಯಕ್ತಿಯೊಬ್ಬರು ಮಕ್ಕಳ ಮೇಲೆ ನಾಯಿಗಳಿಂದ ಯಾವುದೇ ದಾಳಿಯಾಗಬಾರದು ಎಂಬ ಕಾರಣಕ್ಕೆ ಕೋವಿ(Gun) ಹಿಡಿದು ಅವರನ್ನು ಮದರಸಾಗೆ ಕಳುಹಿಸಿದ ಘಟನೆ ನಡೆದಿದೆ.
ತಿರುವನಂತಪುರಂ: ಬೀದಿ ನಾಯಿಗಳ(Stray Dog) ದಾಳಿಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕ್ರೋಧೋನ್ಮತ್ತ ಮತ್ತು ಹಿಂಸಾತ್ಮಕ ನಾಯಿಗಳನ್ನು ಕೊಲ್ಲಲು ಕೇರಳ(Kerala) ಸರ್ಕಾರ ಸುಪ್ರೀಂ ಕೋರ್ಟ್(Supreme Court)ನಿಂದ ಅನುಮತಿ ಪಡೆಯಲು ನಿರ್ಧರಿಸಿದೆ.
ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟಲು ಕೇರಳ ಸರ್ಕಾರ ದಾಳಿ ನಡೆಸುವಂತಹ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್‌ನ ಅನುಮತಿ ಕೇಳಲು ನಿರ್ಧರಿಸಿದೆ. ಮಾತ್ರವಲ್ಲದೇ ನಾಯಿಗಳ ಹಾವಳಿಯನ್ನು ತಡೆಯಲು ಸೆಪ್ಟೆಂಬರ್ 20 ರಿಂದ 1 ತಿಂಗಳ ಕಾಲ ಅಭಿಯಾನವನ್ನು ನಡೆಸಲು ಯೋಜಿಸಿದೆ.
ಕೇರಳದಲ್ಲಿ ಹೆಚ್ಚುತ್ತಿರುವ ನಾಯಿ ಕಚ್ಚುವಿಕೆಯ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಇದರಿಂದ ಹಿಂಸಾತ್ಮಕ ದಾಳಿ ಮತ್ತು ರೇಬಿಸ್ ಸೋಂಕನ್ನು ತೊಡೆದುಹಾಕಲು ಅನುಮತಿಗಾಗಿ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ ಎಂದರು.
1 ತಿಂಗಳ ಅಭಿಯಾನದಲ್ಲಿ ನಾವು ಪ್ರಾಣಿಗಳ ಜನನ ನಿಯಂತ್ರಣ(ಎಬಿಸಿ) ಕ್ರಮಗಳನ್ನು ತೀವ್ರವಾಗಿ ಹೆಚ್ಚಿಸುತ್ತೇವೆ. ಬೀದಿ ನಾಯಿಗಳಿರುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ, ಅವುಗಳಿಗೆ ಆಶ್ರಯಗಳನ್ನು ನಿರ್ಮಿಸುತ್ತೇವೆ. ರೋಗ ತಡೆಗಟ್ಟಲು ಸಾಕಷ್ಟು ಲಸಿಕೆಗಳನ್ನು ಸಂಗ್ರಹಿಸುತ್ತೇವೆ ಎಂದು ರಾಜೇಶ್ ತಿಳಿಸಿದ್ದಾರೆ. ಇದನ್ನೂ ಓದಿ: ಬೆನ್ನಟ್ಟಿಕೊಂಡು ಬಂದ ಬೀದಿ ನಾಯಿಗಳು- ಬಾಲಕರು ಗ್ರೇಟ್ ಎಸ್ಕೇಪ್
Live Tv
[brid partner=56869869 player=32851 video=960834 autoplay=true]
ತಿರುವನಂತಪುರಂ: ಕೇರಳ (Kerala) ದಲ್ಲಿ ಶ್ವಾನಗಳ ಹಾವಳಿ ದಿನದಿಂದ ಹೆಚ್ಚಾಗುತ್ತಿದೆ. ಬೀದಿನಾಯಿಗಳ ಅಟ್ಟಹಾಸದಿಂದ ಕೆಲವರು ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಬೀದಿ ನಾಯಿ (Stray Dogs) ಗಳು ಇಬ್ಬರು ಬಾಲಕರನ್ನು ಅಟ್ಟಿಸಿಕೊಂಡು ಬಂದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಕಣ್ಣೂರಿನಲ್ಲಿ ನಡೆದಿರುವ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಕರು ಬೀದಿ ನಾಯಿಗಳ ದಾಳಿಯಿಂದ ಗ್ರೇಟ್ ಎಸ್ಕೇಪ್ ಆಗಿದ್ದು, ನಿಟ್ಟುಸಿರುಬಿಡುವಂತಾಗಿದೆ. ಇದನ್ನೂ ಓದಿ: 86 ವರ್ಷಗಳ ನಂತರ ಮತ್ತೆ ಕಾಂಗರೂ ದಾಳಿಗೆ ವ್ಯಕ್ತಿ ಬಲಿ
ವೀಡಿಯೋದಲ್ಲೇನಿದೆ..?: 4-5 ಬೀದಿನಾಯಿಗಳು ಇಬ್ಬರು ಬಾಲಕರನ್ನು ಬೆನ್ನಟ್ಟಿವೆ. ಅಂತೆಯೇ ಅವುಗಳಿಂದ ತಪ್ಪಿಸಿಕೊಂಡು ಓಡಿ ಬಂದ ಬಾಲಕರು, ಮನೆಯ ಗೇಟಿನೊಳಗೆ ಬಂದು ಗೇಟ್ ಹಾಕಿಕೊಳ್ಳುತ್ತಾರೆ. ಈ ಮೂಲಕ ಭಾರೀ ಅನಾಹುತದಿಂದ ಕೂದಲೆಳೆಯ ಅಂತರದಲ್ಲಿ ಬಾಲಕರು ಬಚಾವಾಗಿದ್ದನ್ನು ಗಮನಿಸಬಹುದಾಗಿದೆ.
#WATCH | Kerala: Students in Kannur manage to escape unharmed as stray dogs chase them in the locality (12.09) pic.twitter.com/HPV27btmix
ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ (Supreme Court) ನಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಈ ವೇಳೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಬೀದಿ ನಾಯಿಗಳಿಗೆ ಆಹಾರ ಹಾಕಿದವರೇ ಅದರಿಂದ ಹಾನಿಯಾದವರಿಗೆ ಚಿಕಿತ್ಸೆ ವೆಚ್ಚವಬನ್ನು ಭರಿಸಬೇಕು ಎಂದು ಆದೇಶಿಸಿತ್ತು.
Live Tv
[brid partner=56869869 player=32851 video=960834 autoplay=true]
ಜೈಪುರ: ರಾಜಸ್ಥಾನದ ಭರತ್‍ಪುರ ಪ್ರದೇಶದಲ್ಲಿ ಬೀದಿ ನಾಯಿಯ ಮೇಲೆ ವೃದ್ಧನೋರ್ವ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಜಿಲ್ಲಾ ಪ್ರಾಣಿ ಹಿಂಸೆ ತಡೆ ಸಮಿತಿಯ ಸದಸ್ಯೆ ಕವಿತಾ ಸಿಂಗ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದು, ವೃದ್ಧ ಹಲವು ಬಾರಿ ಹೆಣ್ಣು ನಾಯಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಳಿ ಕೂದಲು, ಬೊಜ್ಜು ಸೇರಿ ಹಲವು ರೋಗಗಳಿಗೆ ಕರಿಬೇವಿನಲ್ಲಿದೆ ಪರಿಹಾರ
ಆರೋಪಿಯನ್ನು ಚಂಪಾಲಾಲ್ ಗುಪ್ತಾ ಎಂದು ಗುರುತಿಸಲಾಗಿದ್ದು, ಊಟ ನೀಡುವ ನೆಪದಲ್ಲಿ ನಾಯಿಯನ್ನು ಮನೆಗೆ ಕರೆದೊಯ್ದು ವಿಕೃತ ಕೃತ್ಯ ವೆಸಗಿದ್ದಾನೆ. ಕಳೆದ 2 ದಿನಗಳಿಂದ ಒಂದೇ ಸಮನೆ ಅಳುತ್ತಿದ್ದ ನಾಯಿಯನ್ನು ಮಥುರಾ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳು ಗಮನಿಸಿದ್ದು, ರಕ್ತದ ಮಡುವಿನಲ್ಲಿ ಬಿದ್ದು ನಾಯಿ ಒದ್ದಾಡುತ್ತಿರುವುದನ್ನು ಕಂಡು ಶಾಕ್ ಆಗಿದ್ದಾರೆ. ನಂತರ ಸತ್ಯ ಬೆಳಕಿಗೆ ಬಂದಿದೆ. ಕೊನೆಗೆ ಗಾಯಗೊಂಡಿದ್ದ ನಾಯಿಯನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದ ಚಿಕಿತ್ಸೆ ಕೊಡಿಸಲಾಯಿತು.
ತಪಾಸಣೆ ವೇಳೆ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದ್ದು, ಸದ್ಯ ಈ ಸಂಬಂಧ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕಾಮಕಸ್ತೂರಿ ಬೀಜ ಬಲು ಆರೋಗ್ಯಕಾರಿ
ಬೆಂಗಳೂರು: ಈ ಭೂಮಿಯಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಅದೇ ರೀತಿ ಪ್ರಾಣಿಗಳಿಗೂ ಸಹ ಬದುಕುವ ಹಕ್ಕಿದೆ. ಆದರೇ ಬೆಂಗಳೂರಿನ ಜನ ಬೀದಿ ನಾಯಿಗಳನ್ನು ಕೊಲ್ಲುವ ಮಟ್ಟಕ್ಕೆ ಹೋಗ್ತಿದ್ದಾರೆ. ಅತಂಹ ಅನೇಕ ಘಟನೆಗಳು ನಡೆದಿವೆ. ಈಗ ಬೆಂಗಳೂರಿನ ಕೊಟ್ಟಿಗೆ ಪಾಳ್ಯದ ಬಳಿ ಇರುವ ಟೆಲಿಕಾಮ್ ಲೇಔಟ್‍ನಲ್ಲಿ ಯುವಕನೊಬ್ಬ ಕಳೆದ ವಾರ ಬೀದಿ ನಾಯಿಯೊಂದನ್ನು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ್ದಾನೆ.
ಬೀದಿ ನಾಯಿ ಮೇಲೆ ಹೀಗೆ ಹಲ್ಲೆ ಮಾಡಿ ಪ್ರಾಣ ತಗಿಯೋದು ಕ್ರಿಮಿನಲ್ ಅಪರಾಧ ಎಂದು ಕಾನೂನಿದೆ. ಜನ ಅದನ್ನು ಪಾಲಿಸಬೇಕು. ಪ್ರಾಣಿಗಳನ್ನು ಮಾನವೀಯತೆಯಿಂದ ನೋಡಬೇಕು ಎಂದು ಪ್ರಾಣಿ ದಯಾ ಸಂಘದ ಸದಸ್ಯರು ಮನವಿ ಮಾಡಿದ್ದಾರೆ.
ಒಂದು ಜೀವವನ್ನು ತೆಗೆಯುವ ಹಕ್ಕು ಯಾರಿಗೂ ಇಲ್ಲ. ಪರಿಸರದಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ನಿಯತ್ತಿನ ಪ್ರಾಣಿ ಅಂತಲೇ ಕರೆಸಿಕೊಳ್ಳೋ ನಾಯಿಯನ್ನ ಯಾಕೇ ಹೀಗೆ ಮಾಡ್ತಾರೆ. ಇನ್ಯಾರೂ ಈ ರೀತಿ ಮಾಡಬಾರದು ಅಂತಹ ಶಿಕ್ಷೆಯನ್ನ ಕಾನೂನು ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ