Tag: ಬೀದಿ ನಾಯಿಗಳು

  • ಬೀದಿ ನಾಯಿಗಳ ದಾಳಿ, ತಪ್ಪಿಸಿಕೊಳ್ಳುಲು ಹೋಗಿ ಕೈ ಮುರಿದುಕೊಂಡ ಬಾಲಕಿಯ

    ಬೀದಿ ನಾಯಿಗಳ ದಾಳಿ, ತಪ್ಪಿಸಿಕೊಳ್ಳುಲು ಹೋಗಿ ಕೈ ಮುರಿದುಕೊಂಡ ಬಾಲಕಿಯ

    ರಾಮನಗರ: ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ವೇಳೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದು, ತಪ್ಪಿಸಿಕೊಳ್ಳಲು ಹೋಗಿ ಬಾಲಕಿ ಕೈ ಮುರಿದುಕೊಂಡಿದ್ದಾಳೆ.

    ನಗರದ 30ನೇ ವಾರ್ಡಿನ ಐಜೂರಿನ ವಾಟರ್ ಟ್ಯಾಂಕ್ ಬಳಿ ಭಾನುವಾರ ಗಿರೀಶ್ ಪುತ್ರಿ ಪ್ರೀತಿ ಆರ್.ಜಿ(11) ಹಾಲು ತರಲು ಅಂಗಡಿಗೆ ತೆರಳುತ್ತಿದ್ದ ಸಮಯದಲ್ಲಿ 10 ಕ್ಕೂ ಹೆಚ್ಚು ಬೀದಿ ನಾಯಿಗಳು ಬಾಲಕಿಯನ್ನು ಸುತ್ತುವರೆದಿವೆ. ಈ ವೇಳೆ ಗಾಬರಿಗೊಂಡ ಬಾಲಕಿ ಓಡಲು ಮುಂದಾದಾಗ ಬಿದ್ದಿದ್ದು, ಬಿದ್ದ ರಭಸಕ್ಕೆ ಕೈ ಮೂಳೆ ಮುರಿದಿದೆ.

    ಬೀದಿ ನಾಯಿಗಳ ದಾಳಿಯ ನಂತರ ಸ್ಥಳದಲ್ಲಿದ್ದ ಸಾರ್ವಜಿನಿಕರು ಬಾಲಕಿಯ ಪೋಷಕರಿಗೆ ವಿಚಾರ ತಿಳಿಸಿದ್ದು, ನಂತರ ಬಾಲಕಿಯನ್ನು ಹತ್ತಿರದ ನಾರಾಯಣ ಅಸ್ಪತ್ರೆಗೆ ಕರೆದೋಯ್ದಿದ್ದಾರೆ. ಕೈಗೆ ಹೆಚ್ಚು ಪೆಟ್ಟು ಬಿದ್ದಿದ್ದ ಕಾರಣ ಕೈ ಮೂಳೆ ಮುರಿದಿದೆ ಎಂದು ವೈದ್ಯರು ವೈದ್ಯರು ತಿಳಿಸಿದ್ದಾರೆ.

    ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ನಮಗೆ ಈ ರೀತಿ ಅನಾಹುತ ಸಂಭವಿಸಿದರೆ, ಆಸ್ಪತ್ರೆ ಖರ್ಚು ಭರಿಸುವವರ್ಯಾರು ಎಂದು ಪೋಷಕರು ಗೋಳಿಡುತ್ತಿದ್ದಾರೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಕುರಿತು ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಬೀದಿ ನಾಯಿಗಳ ದಾಳಿಗೆ 2 ವರ್ಷದ ಕಂದಮ್ಮ ಸಾವು

    ಬೀದಿ ನಾಯಿಗಳ ದಾಳಿಗೆ 2 ವರ್ಷದ ಕಂದಮ್ಮ ಸಾವು

    ರಾಮನಗರ: ಬೀದಿ ನಾಯಿಗಳ ದಾಳಿಗೆ 2 ವರ್ಷದ ಕಂದಮ್ಮ ಬಲಿಯಾದ ಘಟನೆ ರಾಮನಗರ ತಾಲೂಕಿನಲ್ಲಿ ನಡೆದಿದೆ.

    ರಾಮನಗರ ತಾಲೂಕಿನ ಕೆಂಚನಕುಪ್ಪೆಯ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, 7 ವರ್ಷದ ಮೋನಿಕಾ ನಾಯಿಗಳ ದಾಳಿಯಿಂದ ಮೃತಪಟ್ಟ ಬಾಲಕಿ. ಬೀದಿ ನಾಯಿಗಳು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಬಲಿಯಾಗಿದ್ದಾಳೆ.

    ಶನಿವಾರ ಸಂಜೆ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಬಾಲಕಿ ಮೋನಿಕಾ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದವು. ದಾಳಿಯಿಂದ ತಲೆ, ಕತ್ತು, ಬೆನ್ನು, ಹೊಟ್ಟೆ ಭಾಗದಲ್ಲಿ ಕಚ್ಚಿ ಗಂಭೀರವಾಗಿ ಗಾಯ ಮಾಡಿದ್ದವು.

    ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾಳೆ.

  • ಬೀದಿ ನಾಯಿಗಳಿಗೆ ಆಶ್ರಯ ಒದಗಿಸಲು ಮುಂದಾದ ರಕ್ಷಿತ್ ಶೆಟ್ಟಿ

    ಬೀದಿ ನಾಯಿಗಳಿಗೆ ಆಶ್ರಯ ಒದಗಿಸಲು ಮುಂದಾದ ರಕ್ಷಿತ್ ಶೆಟ್ಟಿ

    ಬೆಂಗಳೂರು: ಬೀದಿ ನಾಯಿಗಳಿಗೆ ಆಶ್ರಯ ಒದಗಿಸಿ, ಅವುಗಳನ್ನು ದತ್ತು ಪಡೆಯಿರಿ ಎಂಬ ಅಭಿಯಾನಕ್ಕೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೆಂಬಲ ನೀಡಿದ್ದಾರೆ. ಅನಾಥವಾಗಿ, ಆಶ್ರಯವಿಲ್ಲದೆ ಬೀದಿಗಳಲ್ಲಿ ಬದಕುವ ಮೂಕ ಪ್ರಾಣಿಗಳಿಗೆ ನೆರವು ನೀಡಲು ಮುಂದಾಗಿದ್ದಾರೆ.

    ಕೇರ್ ಎಂಬ ಎನ್‍ಜಿಓದ ಜೊತೆ ರಕ್ಷಿತ್ ಕೈಜೊಡಿಸಿ ಬೀದಿ ನಾಯಿಗಳಿಗೆ ಆಶ್ರಯ ನೀಡುವ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಫೇಸ್‍ಬುಕ್‍ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಸದ್ಯ ರಕ್ಷಿತ್ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ನಾಯಿಯ ಪಾತ್ರ ಮುಖ್ಯವಾಗಿದೆ.

    ನಮ್ಮ ದೇಶದ ಪ್ರತಿಯೊಂದು ಬೀದಿಯಲ್ಲಿಯೂ ಹಲವಾರು ನಾಯಿಗಳನ್ನು ನೋಡುತ್ತೇವೆ. ಆದರೆ, ಮನೆಯಲ್ಲಿ ಸಾಕಲು ಮಾತ್ರ ಬ್ರೀಡ್ ನಾಯಿಗಳನ್ನು ಆಯ್ಕೆ ಮಾಡುತ್ತೇವೆ. ಬೀದಿ ನಾಯಿಗಳು ಕೂಡ ಬ್ರೀಡ್ ನಾಯಿಗಳಿಗಿಂತ ಏನು ಕಡಿಮೆ ಇಲ್ಲ. ನಮ್ಮ ವಾತಾವರಣಕ್ಕೆ ಅವುಗಳು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಲ್ಲದೆ ಅವುಗಳ ಸಾಕಲು ಖರ್ಚು ಕೂಡ ಕಡಿಮೆ. ಈ ನಾಯಿಗಳನ್ನು ದತ್ತು ಪಡೆಯಿರಿ ಆಗ ಅವುಗಳಿಗೂ ಮನೆ, ಕುಟುಂಬ, ಪ್ರೀತಿ, ವಾತ್ಸಲ್ಯ ಸಿಗುತ್ತದೆ. ಇದೇ ಸ್ವಾತಂತ್ರ್ಯ ದಿನವನ್ನು ಎಲ್ಲರು ಬೀದಿ ನಾಯಿಗಳನ್ನು ದತ್ತು ಪಡೆಯೋಣ, ಆಶ್ರಯ ನೀಡೋಣ ಎಂದು ವಿಡಿಯೋ ಮೂಲಕ ರಕ್ಷಿತ್ ಮನವಿ ಮಾಡಿಕೊಂಡಿದ್ದಾರೆ.

    ಕೇರ್ ಸಂಸ್ಥೆ ನೇತೃತ್ವದಲ್ಲಿ ಇದೇ ಆಗಸ್ಟ್ 11 ರಂದು ‘ಇಂಡಿಪೆಂಡೆನ್ಸ್ ಅಡಾಪ್‍ಕ್ಷನ್ ಡ್ರೈವ್’ ಆರೋಜಿಸಲಾಗಿದೆ. ಬೆಳಗ್ಗೆ 12 ರಿಂದ 3 ಗಂಟೆವರೆಗೆ ಈ ಕಾರ್ಯಕ್ರಮ ನಡೆಯಲಿದೆ. ನಾಯಿಗಳನ್ನು ಸಾಕಬೇಕು, ನಿಮ್ಮ ಕುಟುಂಬಕ್ಕೆ ಸೇರಿಕೊಳ್ಳಬೇಕು ಎಂದು ಇಚ್ಛಿಸುವವರು ಬೀದಿ ನಾಯಿಯನ್ನು ಇಲ್ಲಿ ಬಂದು ದತ್ತು ಪಡೆಯಬಹುದಾಗಿದೆ. ರಕ್ಷಿತ್ ಅವರ ಈ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    https://www.facebook.com/therakshitshetty/videos/487983035108493/

  • ಬೆಂಗ್ಳೂರಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ 5ರ ಬಾಲಕ ಬಲಿ

    ಬೆಂಗ್ಳೂರಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ 5ರ ಬಾಲಕ ಬಲಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಅಟ್ಟಹಾಸಕ್ಕೆ 5 ವರ್ಷದ ಪುಟ್ಟ ಬಾಲಕ ಬಲಿಯಾಗಿರುವ ಘಟನೆ ಸೋಲದೇವನಹಳ್ಳಿಯ ಸಾಸ್ವೆಘಟ್ಟ ಗ್ರಾಮದಲ್ಲಿ ನಡೆದಿದೆ.

    ದುರ್ಗೇಶ್(5) ನಾಯಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನವರಾಗಿರುವ ಮಲ್ಲಪ್ಪ ಹಾಗೂ ಅನಿತಾ ದಂಪತಿಯ ಮೂರನೇ ಮಗ ದುರ್ಗೇಶ್ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದಾನೆ. ಕೆಲಸ ಅರಸಿ ಬೆಂಗಳೂರಿಗೆ ಬಂದ ದಂಪತಿ ಸಾಸ್ವೆಘಟ್ಟ ಗ್ರಾಮದಲ್ಲಿ ನೆಲೆಸಿದ್ದರು. ಕಳೆದ ಮೂರ್ನಾಲ್ಕು ವರ್ಷದಿಂದ ಬೆಂಗಳೂರಿನಲ್ಲಿ ಕಟ್ಟಡದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

    ದುರ್ಗೇಶ್‍ನ ತಾಯಿ ಗರ್ಭಿಣಿಯಾಗಿದ್ದು, ಅವರು ಮನೆಯಲ್ಲಿಯೇ ಇದ್ದರು. ಆದರೆ ಕೆಲಸಕ್ಕೆ ಹೋಗಿದ್ದ ತಂದೆಗೆ ಭೇಟಿಯಾಗಲು ದುರ್ಗೇಶ್ ಹೋಗುತ್ತಿದ್ದಾಗ ಆತನ ಮೇಲೆ 8-10 ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿವೆ. ಪರಿಣಾಮ ಬಾಲಕ ತೀವ್ರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಇದೇ ವ್ಯಾಪ್ತಿಯಲ್ಲಿ ನಡೆದ ಮೂರನೇ ಪ್ರಕರಣ ಇದಾಗಿದ್ದು, ಕಳೆದ ವಾರ ಬಾಲಕಿ ನಾಯಿ ದಾಳಿಗೆ ಸಾವನ್ನಪ್ಪಿದ್ದಳು. ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದೇ ಸಾವುಗಳಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಬಗ್ಗೆ ಗ್ರಾಮ ಪಂಚಾಯ್ತಿ ಪಿಡಿಓ ಬಳಿ ಕೇಳಿದರೆ ಬಿಬಿಎಂಪಿ ಕಡೆ ಕೈ ಮಾಡಿ, ಬಿಬಿಎಂಪಿ ಅವರು ಹಾಗೂ ಇಲ್ಲಿ ಸುತ್ತಮುತ್ತಲ ಜನರು ಸೋಲದೇವನಹಳ್ಳಿ ಬಳಿ ಕಸ, ತ್ಯಾಜ್ಯಗಳನ್ನು ಎಸೆದು ಹೋಗುತ್ತಾರೆ. ಅಲ್ಲದೆ ಬಿಬಿಎಂಪಿ ಅವರು ನಗರದಲ್ಲಿದ್ದ ಬೀದಿ ನಾಯಿಗಳನ್ನು ಹಿಡಿದು ಇಲ್ಲಿ ತಂದು ಬಿಡುತ್ತಾರೆ ಎನ್ನುತ್ತಿದ್ದಾರೆ.

    ಯಲಹಂಕ ಶಾಸಕ ಎಸ್‍ಆರ್ ವಿಶ್ವನಾಥ್ ಅವರಿಗೆ ಪ್ರಶ್ನಿಸಿದರೆ, ಈ ಘಟನೆ ಬಗ್ಗೆ ಮಾತ್ರ ನನಗೆ ಮಾಹಿತಿ ಇದೆ. ಉಳಿದ ಎರಡು ಪ್ರಕರಣದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಬೀದಿ ನಾಯಿಗಳನ್ನು ಕೊಲ್ಲಲು ಹೋದರೆ ಪ್ರಾಣಿ ದಯಾ ಸಂಘದವರು ಅಡ್ಡಿ ಪಡಿಸುತ್ತಾರೆ. ಅದನ್ನು ಬೇರೆ ಕಡೆಗೆ ಬಿಟ್ಟು ಬರಲು ಕೂಡ ಅನುಮತಿ ಇಲ್ಲ. ಹೀಗಿರುವಾಗ ನಾವೇನು ಮಾಡಬೇಕು ಎಂದರು. ಬಳಿಕ ಘಟನಾ ಸ್ಥಳಕ್ಕೆ ಭೇಟಿ ಕೊಡುತ್ತೇವೆ ಜೊತೆಗೆ ಈ ಸಂಬಂಧ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    https://www.youtube.com/watch?v=WCdhrw8GDH4

  • 3 ಮಕ್ಕಳ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳು

    3 ಮಕ್ಕಳ ಮೇಲೆ ದಾಳಿ ನಡೆಸಿದ ಬೀದಿ ನಾಯಿಗಳು

    ಬೆಂಗಳೂರು: ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ಪದ್ಮನಾಭ ನಗರದ ಕನಕ ಬಡಾವಣೆಯಲ್ಲಿ ಮೂವರು ಮಕ್ಕಳ ಮೇಲೆ ಡೆಡ್ಲಿ ಡಾಗ್ ಅಟ್ಯಾಕ್ ಮಾಡಿವೆ.

    ನಗರದಲ್ಲಿ ಬೀದಿ ನಾಯಿಗಳು ರಾಕ್ಷಸನ ಹಾಗೇ ವರ್ತಿಸುತ್ತಿದ್ದು, ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದೆ. ಆಟವಾಡುತ್ತಾ ಮನೆಗೆ ತೆರಳುತ್ತಿದ್ದ 7 ವರ್ಷದ ಬಾಲಕಿ, 9 ವರ್ಷದ ಬಾಲಕಿ ಹಾಗೂ 9 ವರ್ಷದ ಬಾಲಕನ ಮೇಲೆ ನಾಯಿಗಳು ದಾಳಿ ಮಾಡಿವೆ.

    ಈ ಘಟನೆಯ ಪರಿಣಾಮ 9 ವರ್ಷದ ಬಾಲಕ ತನ್ಮಯ್ ಗೌಡನಿಗೆ ಗಂಭೀರ ಗಾಯಗಳಾಗಿದ್ದು, ಮಕ್ಕಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಬೀದಿ ನಾಯಿಗಳ ದಾಳಿಗೆ ಒಳಗಾಗಿದ್ದ ಪ್ರವೀಣ್ ಎಂಬ ಬಾಲಕ ಸೆಪ್ಟೆಂಬರ್ 2ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು. ಪ್ರವೀಣ್ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಹೋಗಿದ್ದ ವೇಳೆ ಬಾಲಕನ ಮೇಲೆ ಸುಮಾರು 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿದ್ದು, ಪ್ರವೀಣ್ ನ ಕತ್ತು, ಮೈ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಾಲಕನ ಸ್ಥಿತಿಯು ಚಿಂತಾಜನಕವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಪ್ರವೀಣ್ ಸೆಪ್ಟೆಂಬರ್ 2ರಂದು ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv