Tag: ಬೀದಿನಾಯಿ

  • ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

    ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದಲ್ಲಿ ಬೀದಿ ನಾಯಿಗಳ (Stray Dog) ಕಾಟ ಮಿತಿಮೀರಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡವರು ಬರೋಬ್ಬರಿ 6,533 ಜನ. ಹೀಗಾಗಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಸ್ಥಳೀಯ ಆಡಳಿತ ನಾಯಿಗಳ ಸಂತಾನ ಹರಣ (Treatment for infertility) ಚಿಕಿತ್ಸೆಗೆ ಮುಂದಾಗಿದೆ.

    ಇದರ ಭಾಗವಾಗಿ ಖಾಸಗಿಯವರೊಂದಿಗೆ ಸ್ಥಳೀಯ ಆಡಳಿತದ ಸಿಬ್ಬಂದಿ ಸೇರಿ ಬೀದಿನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದ ಪುರಸಭೆಯ ಸಿಬ್ಬಂದಿ ಮಾತ್ರ ಬೀದಿನಾಯಿಗಳನ್ನು ಹಿಡಿಯುವುದರಲ್ಲಿ ರಾಕ್ಷಸತನ ತೋರಿದ್ದಾರೆ. ಇದನ್ನೂ ಓದಿ: IMA ನಡೆಸುತ್ತಿದ್ದ ಸ್ಕೂಲ್ ಬಂದ್‍ಗೆ ಹೈಕೋರ್ಟ್ ಆದೇಶ- ಮಕ್ಕಳ ಭವಿಷ್ಯದ ಬಗ್ಗೆ ಕಂಗಾಲಾದ ಪೋಷಕರು

    ಹೌದು ಹಳಿಯಾಳ ನಗರದಲ್ಲಿ ಬೀದಿ ಬೀದಿಗಳನ್ನು ಜಾಲಾಡಿದ ಪುರಸಭೆ ಸಿಬ್ಬಂದಿ ಬೇಕಾ ಬಿಟ್ಟಿ ಬೀದಿನಾಯಿಗಳನ್ನು ನಿಯಮ ಮೀರಿ ಹಿಂಸಾತ್ಮಕ ರೀತಿಯಲ್ಲಿ ಹಿಡಿದಿದ್ದಾರೆ. ಇನ್ನೂರಕ್ಕೂ ಹೆಚ್ಚು ಬೀದಿನಾಯಿಗಳನ್ನು ಹಿಡಿದ ಪುರಸಭೆ (Municipality) ಸಿಬ್ಬಂದಿ ಮಾಡಿದ್ದ ಕೆಲಸ ಮಾತ್ರ ಎಡವಟ್ಟಿನದ್ದು. ಬೀದಿ ನಾಯಿಗಳನ್ನು ಹಿಂಸಾತ್ಮಕವಾಗಿ ಹಿಡಿದು ಹಳಿಯಾಳದಿಂದ ಯಲ್ಲಾಪುರ ಭಾಗದ ಕಾಡಿನಲ್ಲಿ 80ಕ್ಕೂ ಹೆಚ್ಚು ನಾಯಿಗಳನ್ನು ತಂದು ಬಿಟ್ಟಿದ್ದಾರೆ.

    ಈ ಭಾಗದಲ್ಲಿ ಹೆಚ್ಚು ಕಾಡು (Wild) ಇದ್ದು, ಚಿರತೆ, ಹುಲಿಗಳಿವೆ. ಹೀಗೆ ಬೇಕಾಬಿಟ್ಟಿ ಕಾಡಿನಲ್ಲಿ ಬಿಟ್ಟಿದ್ದರಿಂದ ಇದೀಗ ಬೀದಿ ನಾಯಿಗಳಿಗೆ ಆಹಾರ ವಿಲ್ಲದೇ ಸಾಯುವ ಆತಂಕವಿದ್ದರೆ, ಕಾಡುಪ್ರಾಣಿಗಳಿಗೆ (Wild Animal) ಸುಲಭವಾಗಿ ಆಹಾರವಾಗುತ್ತಿವೆ. ಪುರಸಭೆ ಸಿಬ್ಬಂದಿಗಳು ಮಾಡಿದ ಅಚಾತುರ್ಯದ ಕೆಲಸಕ್ಕೆ ಪ್ರಾಣಿ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.  ಇದನ್ನೂ ಓದಿ: ಭಾರತ ಎಂದಿಗೂ ಹಿಂದೂರಾಷ್ಟ್ರ – ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ: ಸುನಿಲ್ ಕುಮಾರ್

    ಹಳಿಯಾಳದ ಮಾತೃಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷ ಎಸ್.ಕೆ ಯೋಗರಾಜ್‍ರವರು ಪುರಸಭೆ ಸಿಬ್ಬಂದಿ ಅಮಾನುಷ ವರ್ತನೆಯ ವಿರುದ್ಧ ದೂರು ದಾಖಲಿಸಿದ್ದಾರೆ. ಇದಲ್ಲದೇ ಪಶುಸಂಗೋಪನ ಇಲಾಖೆಯಿಂದಲೂ ಪುರಸಭೆ ಸಿಬ್ಬಂದಿ ಕೃತ್ಯಕ್ಕೆ ನೋಟಿಸ್ ಜಾರಿಮಾಡಿದ್ದು, ಇದೀಗ ಹಳಿಯಾಳ ತಾಲೂಕಿನಲ್ಲಿ ಪುರಸಭೆ ಕಾರ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆಟವಾಡ್ತಿದ್ದ ಮಕ್ಕಳ ಮೇಲೆ 20ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ; ಮುಂದೇನಾಯ್ತು ನೋಡಿ…

    ಆಟವಾಡ್ತಿದ್ದ ಮಕ್ಕಳ ಮೇಲೆ 20ಕ್ಕೂ ಹೆಚ್ಚು ಬೀದಿನಾಯಿಗಳು ದಾಳಿ; ಮುಂದೇನಾಯ್ತು ನೋಡಿ…

    ಲಕ್ನೋ: ಲಕ್ನೋದ ಠಾಕೂರ್‌ಗಂಜ್‌ನ ಮುಸಾಹಿಬ್‌ಗಂಜ್‌ನಲ್ಲಿರುವ ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ 20ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

    ಈ ದಾಳಿಯಲ್ಲಿ 8 ವರ್ಷದ ಹುಡುಗ ಮೃತಪಟ್ಟಿದ್ದು, ಮೃತನ ಸಹೋದರಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಅಣ್ಣ-ತಂಗಿಯನ್ನು ಕೆಜಿಎಂಯುನ ಟ್ರಾಮಾ ಸೆಂಟರ್‌ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಆದರೆ ಬಾಲಕ ಮೊಹಮ್ಮದ್ ಹೈದರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅವರ 5 ವರ್ಷದ ಸಹೋದರಿ ಜನ್ನತ್ ಸ್ಥಿತಿ ಗಂಭೀರವಾಗಿದ್ದು, ICUಗೆ ದಾಖಲಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕಬಡ್ಡಿ ಆಟಗಾರ ಧರ್ಮಿಂದರ್ ಸಿಂಗ್ ಮನೆಗೆ ಭೇಟಿ ಕೊಟ್ಟ ನವಜೋತ್ ಸಿಂಗ್ ಸಿಧು

    dogs

    ಮೃತ ಬಾಲಕನ ಪೋಷಕರು ಲಕ್ನೋದ ಮುನ್ಸಿಪಲ್ ಕಾರ್ಪೊರೇಷನ್ ವಿರುದ್ಧ ಧ್ವನಿ ಎತ್ತಿದ್ದಾರೆ. ಬೀದಿ ನಾಯಿಗಳನ್ನು ಹಿಡಿಯಲು ಆದೇಶ ನೀಡಬೇಕೆಂದು ಅವರು ಅಧಿಕಾರಿಗಳಿಗೆ ಈ ಹಿಂದೆಯೇ ಮನವಿ ಮಾಡಿದ್ದರು. ಪದೇ – ಪದೇ ಸ್ಥಳಿಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರು ನೀಡಿ ಮನವರಿಕೆ ಮಾಡಿಕೊಡಲಾಗಿತ್ತು. ಆದರೂ, ಲಕ್ನೋ ಮಹಾನಗರ ಪಾಲಿಕೆ (LMC) ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

    ಸರ್ಕಾರೇತರ ಸಂಸ್ಥೆಗಳು (NGO) ನಾಯಿಗಳನ್ನು ಹಿಡಿಯಲು ವಿರೋಧ ವ್ಯಕ್ತಪಡಿಸಿರುವುದರಿಂದ ನಾಯಿಗಳನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಎಲ್‌ಎಂಸಿ ನಿರಾಕರಿಸಿತ್ತು. ಸಂತ್ರಸ್ತೆಯ ತಂದೆ ಮುನ್ಸಿಪಲ್ ಕಾರ್ಪೊರೇಷನ್ ವಲಯ 6ರ ಅಧಿಕಾರಿಗಳು ಮತ್ತು ಇತರರ ವಿರುದ್ಧ ಠಾಕೂರ್‌ಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ.

  • ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಆದಿಕೇಶವುಲು ಮೊಮ್ಮಗ

    ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಆದಿಕೇಶವುಲು ಮೊಮ್ಮಗ

    ಬೆಂಗಳೂರು: ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಯುವಕನೊಬ್ಬ ವಿಕೃತಿ ಮೆರೆದ ಘಟನೆ ಜಯನಗರದಲ್ಲಿ ನಡೆದಿದೆ.

    ಉದ್ಯಮಿ, ಮಾಜಿ ಸಂಸದ ದಿ. ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಈ ಕೃತ್ಯ ಎಸಗಿದ್ದಾನೆ. ಬೀದಿ ಮೇಲೆ ಮಲಗಿದ್ದ ನಾಯಿಯ ಮೇಲೆ ಉದ್ದೇಶಪೂರ್ವಕವಾಗಿಯೇ ಆಡಿ ಕಾರು ಹತ್ತಿಸಿ ಆದಿ ವಿಕೃತಿ ಮೆರೆದಿದ್ದಾನೆ.

    ಆದಿ ಕಾರನ್ನು ಬೇಕೆಂದೇ ರಿವರ್ಸ್ ತೆಗೆದುಕೊಂಡು ನಾಯಿ ಮೇಲೆ ಹತ್ತಿಸಿದ್ದಾನೆ. ಕಾರು ಹತ್ತಿದ ರಭಸಕ್ಕೆ ನಾಯಿ ವಿಲ-ವಿಲ ಒದ್ದಾಡಿದೆ. ಜಯನಗರ 1ನೇೀ ಬ್ಲಾಕ್ 10ನೇ ಬಿ ಮೈನ್ ನಲ್ಲಿ ಈ ಘಟನೆ ನಡೆದಿದ್ದು ಘಟನೆಯ ವೀಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು – ಕಣ್ಣೀರಿಟ್ಟ ರೈತ ಮಹಿಳೆ

    ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ಹೋದಾಗ ಆತ ಕಾರಿನೊಂದಿಗೆ ಪರಾರಿಯಾಗಿರುವ ವಿಚಾರ ತಿಳಿದು ಬಂದಿದೆ. ಪೊಲೀಸರು ವಿಚಾರಣೆಗೆ ಬರುವಂತೆ ಸಿದ್ದಾಪುರ ಪೊಲೀಸರು ಆದಿಗೆ ನೋಟಿಸ್ ಕೊಟ್ಟಿದ್ದಾರೆ.

    ಈ ಘಟನೆಯ ಬಳಿಕ ಆರೋಪಿಗೆ ಕೊರೊನಾ ಬಂದಿದೆ. ಕುಟುಂಬಸ್ಥರು ಆದಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಕಾಪಿಯನ್ನು ಠಾಣೆಗೆ ಕಳುಹಿಸಿದ್ದಾರೆ. ಕೋವಿಡ್‍ನಿಂದ ಗುಣಮುಖವಾದ ನಂತ್ರ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ಕಳುಹಿಸಲಾಗಿದೆ. ಇದನ್ನೂ ಓದಿ: 43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ – ಮಹಿಳೆ ಅರೆಸ್ಟ್

  • ಬೀದಿನಾಯಿಗಳಿಗೆ ಆಹಾರ ನೀಡಿದ್ದಕ್ಕೆ 8 ಲಕ್ಷ ದಂಡ

    ಬೀದಿನಾಯಿಗಳಿಗೆ ಆಹಾರ ನೀಡಿದ್ದಕ್ಕೆ 8 ಲಕ್ಷ ದಂಡ

    ಮುಂಬೈ: ಬೀದಿ ನಾಯಿಗಳಿಗೆ ಆಹಾರ ನೀಡಿದ್ದಕ್ಕೆ ಮಹಿಳೆಗೆ 8 ಲಕ್ಷ ರೂ. ದಂಡ ಹಾಕಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ.

    ಬೀದಿನಾಯಿಗಳಿಗೆ ಹೌಸಿಂಗ್ ಕಾಲೋನಿ ಆವರಣದಲ್ಲಿ ಆಹಾರ ನೀಡಿದ್ಧಕ್ಕೆ ಮುಂಬೈ ಮಹಿಳೆಗೆ 8 ಲಕ್ಷ ರೂಪಾಯಿ ದಂಡವನ್ನು ಅಪಾರ್ಟ್‍ಮೆಂಟ್ ನಿವಾಸಿಗಳ ಸಂಘ ವಿಧಿಸಿದೆ. 40ಕ್ಕೂ ಹೆಚ್ಚು ಕಟ್ಟಡಗಳಿರುವ NRI ಅಪಾರ್ಟ್‍ಮೆಂಟ್ ಇದಾಗಿದೆ. ಇಲ್ಲಿ ವಾಸಿಸುವ ಆಂಶು ಸಿಂಗ್, ಕಾಲೋನಿ ಆವರಣದಲ್ಲಿ ಬೀದಿನಾಯಿಗಳು ಆಶ್ರಯ ಸಿದ್ದವು.ಈ  ಶ್ವಾನಗಳಿಗೆ ಆಹಾರ ನೀಡಿ ಭಾರಿ ಮೊತ್ತದ ದಂಡವನ್ನು ಕಟ್ಟಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಘೋರ ಅಪರಾಧ, ಅದಕ್ಕೆ ಪೂರ್ಣ ವಿರಾಮ ಹಾಕಿ – ರಮೇಶ್ ಕುಮಾರ್ ವಿರುದ್ಧ ಪ್ರಿಯಾಂಕಾ ಗಾಂಧಿ ಆಕ್ರೋಶ

    ಜಲೈ 2021ರಿಂದ ಬೀದಿನಾಯಿಗಳಿಗೆ ಆಹಾರ ಒದಗಿಸುತ್ತಿದ್ದೆ. ಈ ಕಾರಣಕ್ಕಾಗಿ ನನಗೆ ಪ್ರತಿ ದಿನಕ್ಕೆ 5000ರೂಪಾಯಿಗಳಂತೆ ಈ ವರೆಗೆ ಒಟ್ಟು 8 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇನ್ನೊಬ್ಬ ನಿವಾಸಿಗೆ ಆರು ಲಕ್ಷ ದಂಡ ವಿಧಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಬೀದಿನಾಯಿಗಳಿಂದ ಎಲ್ಲರಿಗೂ ತೊಂದರೆಯಾಗುತ್ತಿರುವ ಕಾರಣ ದಂಡ ವಿಧಿಸಲಾಗಿದೆ ಎಂದು ಸಂಘ ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಹೆಣ್ಣು ಕುಲಕ್ಕೆ ಕ್ಷಮೆ ಕೇಳಿದ ರಮೇಶ್ ಕುಮಾರ್ – ಮುಂದುವರಿಸೋದು ಬೇಡ ಎಂದ ಸ್ಪೀಕರ್ ಕಾಗೇರಿ

    ನಿವಾಸಿ ಲೀಲಾ ವರ್ಮಾ ಖಾಸಗಿವಾಹಿನಿಯವರೊಂದಿಗೆ ಮಾತನಾಡಿ, ನಾಯಿಗಳಿಗೆ ಆಹಾರ ನೀಡುತ್ತಿರುವ ಸದಸ್ಯರನ್ನು ಸೊಸೈಟಿ ಕಾವಲುಗಾರರು ಹಿಂಬಾಲಿಸಿ ಅವರ ಹೆಸರನ್ನು ನಮೂದಿಸುತ್ತಾರೆ. ನಂತರ ಅದನ್ನು ವ್ಯವಸ್ಥಾಪಕ ಸಮಿತಿಗೆ ವರದಿ ಮಾಡಲಾಗುತ್ತದೆ, ನಂತರ ದಂಡವನ್ನು ಲೆಕ್ಕಾಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಮಕ್ಕಳು ಟ್ಯೂಷನ್‍ಗೆ ಹೋಗುವಾಗ ಬೀದಿನಾಯಿಗಳು ಹಿಂದೆ ಓಡಿಬರುತ್ತವೆ. ಪೋಷಕರು ಆತಂಕಗೊಂಡಿದ್ದಾರೆ. ಬೀದಿನಾಯಿಗಳಿಂದಾಗಿ ಸ್ವಚ್ಛತೆ ಕಾಪಾಡಲು ಸಾಧ್ಯವಾಗುತ್ತಿಲ್ಲ. ಅವುಗಳ ಶಬ್ಧದಿಂದಾಗಿ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಎಂದು ವಸತಿ ಸಮುಚ್ಚಯ ಕಾರ್ಯದರ್ಶಿ ವಿನಿತಾ ಶ್ರೀನಂದನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • ನೆರೆಹೊರೆಯ 4 ಕಾಲಿನ ಸ್ನೇಹಿತರನ್ನು ಮರೆಯಬೇಡಿ: ಐಂದ್ರಿತಾ

    ನೆರೆಹೊರೆಯ 4 ಕಾಲಿನ ಸ್ನೇಹಿತರನ್ನು ಮರೆಯಬೇಡಿ: ಐಂದ್ರಿತಾ

    ಬೆಂಗಳೂರು: ಕೊರೊನಾ ಎಫೆಕ್ಟ್ ನಿಂದ ಇಡೀ ರಾಜ್ಯವೇ ಲಾಕ್‍ಡೌನ್ ಆಗಿದೆ. ಇದರಿಂದ ಜನರಿಗೇ ಆಹಾರ ಸಿಗದೆ ಪರದಾಡುತ್ತಿದ್ದಾರೆ. ಹೀಗಿರುವಾಗ ನಟಿ ಐಂದ್ರಿತಾ ರೇ ಅವರು ಬೀದಿ ನಾಯಿಗಳಿಗೆ ಆಹಾರ ನೀಡಿ ಮಾನವೀಯತೆ ಮರೆದಿದ್ದಾರೆ.

    ಕೊರೊನಾ ವೈರಸ್‍ನಿಂದ ದೇಶವೇ ಸಂಕಷ್ಟಕ್ಕೆ ಸಿಲುಕಿದೆ. ಜನರು ಒಂದು ಮಟ್ಟಿಗೆ ಹೊರಬರಲು ಭಯಪಡುತ್ತಿದ್ದಾರೆ. ಇದರಿಂದ ಬೀದಿನಾಯಿಗಳು, ಬೀದಿ ಹಸುಕರುಗಳು ಆಹಾರವಿಲ್ಲದೇ ಪರದಾಡುತ್ತಿವೆ. ಈ ಪರಿಸ್ಥಿತಿಯಲ್ಲಿ ಕೆಲವರು ಬೀದಿನಾಯಿಗಳಿಗೆ ಅಹಾರ ನೀಡಿ ನೆರವಾಗುತ್ತಿದ್ದಾರೆ. ಈಗ ನಟಿ ಐಂದ್ರಿತಾ ರೇ ತಮ್ಮ ಅಕ್ಕಪಕ್ಕದ ಬೀದಿನಾಯಿಗಳಿಗೆ ಊಟ ಹಾಕಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಐಂದ್ರಿತಾ, ನಮ್ಮ ನೆರೆಹೊರೆಯಲ್ಲಿರುವ ನಾಲ್ಕು ಕಾಲಿನ ಸ್ನೇಹಿತರ ಬಗ್ಗೆ ನಾವು ಮರೆಯಬಾರದು. ಈ ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗುತ್ತಿರುವುದರಿಂದ ಮತ್ತು ಕೊರೊನಾದಿಂದ ಪ್ರಸ್ತುತ ದೇಶ ಲಾಕ್‍ಡೌನ್ ಆಗಿದೆ. ಈ ಪರಿಸ್ಥಿತಿಯಲ್ಲಿ ಅವುಗಳಿಗೆ ಆಹಾರ ಮತ್ತು ನೀರಿನ ಕೊರತೆ ಊಂಟಾಗಿದೆ. ಆದ್ದರಿಂದ ನೀವು ಮನೆಗೆ ಬೇಕಾದ ದಿನಸಿ ತರಲು ಹೊರಹೋದಾಗ ದಯವಿಟ್ಟು ನಾಯಿಗಳಿಗೆ ಆಹಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

    https://www.instagram.com/p/B-B-id0lrY8/

    ಮೊದಲಿನಿಂದಲೂ ಪ್ರಾಣಿ ಪ್ರಿಯೆ ಆಗಿರುವ ಐಂದ್ರಿತಾ ರೇ ಅವರಿಗೆ ಶ್ವಾನಗಳು ಎಂದರೆ ಅಚ್ಚುಮೆಚ್ಚು, ಈ ಕಾರಣದಿಂದಲೇ ರಾತ್ರಿ ವೇಳೆ ಯಾರಿಗೂ ತಿಳಿಯದ ಹಾಗೇ ಮಾಸ್ಕ್ ಧರಿಸಿ ಬೀದಿನಾಯಿಗಳಿಗೇ ಆಹಾರ ಹಾಕಿಬಂದಿದ್ದಾರೆ. ಐಂದ್ರಿತಾ ರೇ ಅವರ ಮಾನವೀಯತೆ ನೋಡಿ ಫಿದಾ ಅಗಿರುವ ಅವರ ಅಭಿಮಾನಿಗಳು, ನಿಮಗೆ ಇರುವ ಕಾಳಜಿ ನೋಡಿ ಬಹಳ ಖುಷಿ ಆಯ್ತು ಮೇಡಂ, ಹೀಗೆ ನಿಮ್ಮ ಕೆಲಸವನ್ನು ಮುಂದುವರಿಸಿ ಎಂದು ಕಮೆಂಟ್ ಮಾಡಿದ್ದಾರೆ.

    https://www.instagram.com/p/B-TkHHulXZs/

    ಐಂದ್ರಿತಾ ಅವರ ರೀತಿಯಲ್ಲೇ ನಟಿ ಸಂಯುಕ್ತ ಹೊರನಾಡು ಅವರು ಕೂಡ ನಾಯಿಗಳಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದೊಂದು ವಾರದಿಂದ ನಾಯಿಗಳು ಆಹಾರವಿಲ್ಲದೆ ಪರದಾಡುತ್ತಿರುವುದನ್ನು ಕಂಡು ಬಹಳ ನೋವಾಗಿತ್ತು. ಹೀಗಾಗಿ ಕೆಲವು ನಾಯಿಗಳಿಗೆ ನಾನು ಆಹಾರ ತಿನ್ನಿಸಿದೆ. ಅಲ್ಲದೆ ಟಾಸ್ಕ್ ಫೋರ್ಸ್‍ನಲ್ಲಿ ಭಾಗವಾಹಿಸಿದ್ದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ಈ ನಿಟ್ಟಿನಲ್ಲಿ ನಮ್ಮ ತಂಡ ಫುಲ್ ಆ್ಯಕ್ಟಿವ್ ಆಗಿದ್ದು, ತುಂಬಾ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದರು.

  • ಬೀದಿ ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮರೆದ ಸಹೋದರಿಯರು

    ಬೀದಿ ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮರೆದ ಸಹೋದರಿಯರು

    ಮುಂಬೈ: ಕೊರೊನಾ ಎಫೆಕ್ಟ್ ನಿಂದ ಆಹಾರವಿಲ್ಲದೆ ಬಳಲುತ್ತಿದ್ದ ಬೀದಿ ನಾಯಿಗಳಿಗೆ ಊಟ ಹಾಕಿ ಮಹಾರಾಷ್ಟ್ರದ ನಾಗ್ಪುರದ ಸಹೋದರಿಯರು ಮಾನವೀಯತೆ ಮೆರೆದಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ದೇಶವನ್ನು ಕಾಪಾಡಲು ಪ್ರಧಾನಿ ಮೋದಿ ಲಾಕ್‍ಡೌನ್ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಸಮಯದಲ್ಲಿ ಜನರಿಗೆ ತಿನ್ನಲು ಆಹಾರ ಸಿಗದೆ ಪರಾದಡುತ್ತಿದ್ದಾರೆ. ಇನ್ನೂ ಬೀದಿ ಶ್ವಾನಗಳು, ಪಕ್ಷಿಗಳು ಕೂಡ ಆಹಾರ ಸಿಗದೇ ಸಂಕಷ್ಟಕ್ಕೆ ಸಿಲುಕಿವೆ.

    ಹೀಗೆ ಆಹಾರವಿಲ್ಲದೇ ಸಂಕಷ್ಟದಲ್ಲಿ ಸಿಲುಕಿರುವ ಶ್ವಾನಗಳಿಗೆ ಮಹಾರಾಷ್ಟ್ರದ ಸಹೋದರಿಯರಾದ ಕಾಜಲ್ ಮತ್ತು ದಿಶಾ ನಾಗ್ಪುರದಲ್ಲಿರುವ ಬೀದಿ ನಾಯಿಗಳಿಗೆ ತಮ್ಮ ಮನೆಯಿಂದ ಬಾಕ್ಸ್‍ಗಳಲ್ಲಿ ಊಟವನ್ನು ತೆಗೆದುಕೊಂಡು ಹೋಗಿ ನೀಡುತ್ತಿದ್ದಾರೆ. ತಮ್ಮ ಬಗ್ಗೆ ಮಾತ್ರ ಯೋಚಿಸುವ ಜನರ ಮಧ್ಯೆ ಬೀದಿಶ್ವಾನಗಳ ಕಷ್ಟವನ್ನು ಅರ್ಥ ಮಾಡಿಕೊಂಡ ಸಹೋದರಿಯರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ವಿಚಾರವಾಗಿ ಮಾತನಾಡಿರುವ ಸಹೋದರಿಯರು, ಲಾಕ್ ಡೌನ್ ಆಗಿರುವುರಿಂದ ಯಾವ ಜನರು ಹೊರಗೆ ಬರುತ್ತಿಲ್ಲ. ಹೀಗಾಗಿ ಬೀದಿಯಲ್ಲಿರುವ ಶ್ವಾನಗಳಿಗೆ ಆಹಾರ ಸಿಗುತ್ತಿಲ್ಲ. ನಾವು ನಮ್ಮ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ನಮಗಾಗಿ ಸರ್ಕಾರ ಊಟದ ವ್ಯವಸ್ಥೆ ಮಾಡುತ್ತದೆ. ಆದರೆ ಈ ಶ್ವಾನಗಳು ಹಸಿವಿನಿಂದ ಸಾಯಬೇಕಾ? ಕೇವಲ ನಮ್ಮ ಬಗ್ಗೆ ನಾವು ಯೋಚಿಸಿದರೆ ಸಾಲದು ಇವುಗಳ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ದೊಡ್ಡ ಮಟ್ಟದ ಬಿಕ್ಕಟ್ಟನ್ನು ಎದುರುಸುತ್ತಿದ್ದೇವೆ. ಆದರೆ ಈ ಪ್ರಾಣಿಗಳು ಹಸಿವಿನಿಂದ ಸಾಯುವುದನ್ನು ಹೇಗೆ ನೋಡುವುದು. ಈ ರೀತಿಯ ಸಮಯದಲ್ಲಿ ನಾವು ಅವುಗಳನ್ನು ಹಸಿವಿನಿಂದ ಸಾಯಲು ಬಿಡಬಾರದು. ಕಷ್ಟದ ಪರಿಸ್ಥಿತಿಯಲ್ಲಿ ಅವುಗಳಿಗೆ ಆಹಾರ ನೀಡುವುದು ಮತ್ತು ಅವುಗಳನ್ನು ಪೋಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕಾಜಲ್ ಮತ್ತು ದಿಶಾ ತಿಳಿಸಿದ್ದಾರೆ.

    ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ರವರಗೆ ಲಾಕ್‍ಡೌನ್ ಮಾಡಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಭಾರತದಲ್ಲಿ ಇಲ್ಲಿಯವರಗೆ 20 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 761 ಜನರಿಗೆ ಈ ವೈರಸ್ ತಗುಲಿದೆ.

  • ಬಿಬಿಎಂಪಿ ಕಚೇರಿಯಲ್ಲಿ ಬೀದಿನಾಯಿಗಳ ಕಾಟ

    ಬಿಬಿಎಂಪಿ ಕಚೇರಿಯಲ್ಲಿ ಬೀದಿನಾಯಿಗಳ ಕಾಟ

    ಬೆಂಗಳೂರು: ನಗರದಲ್ಲಿ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಬಿಬಿಎಂಪಿ ಕೋಟಿ ಲೆಕ್ಕದಲ್ಲಿ ದುಡ್ಡು ಖರ್ಚು ಮಾಡಿದ್ದೇ ಬಂತು. ಬೆಂಗಳೂರಿನ ಏರಿಯಾಗಳಲ್ಲದೇ ಈಗ ಬಿಬಿಎಂಪಿ ಕಚೇರಿಯ ಆವರಣದೊಳಗೆ ಈಗ ಬೀದಿನಾಯಿಗಳ ಕಾಟ ಶುರುವಾಗಿದೆ.

    ಬಿಬಿಎಂಪಿ ಕಚೇರಿಯಲ್ಲೇ ಬೀದಿನಾಯಿಗಳ ಹಾವಳಿ, ಇನ್ನು ಇವರು ನಗರದ ಬೀದಿನಾಯಿಗಳ ಕಾಟಕ್ಕೆ ಮುಕ್ತಿ ಹಾಡ್ತಾರಾ ಎಂದು ಜನರು ವ್ಯಂಗ್ಯವಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಬಿಬಿಎಂಪಿ ಆರೋಗ್ಯ ವಿಭಾಗದಿಂದ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದೆ. ಆದರೆ ನಾಯಿಗಳ ಸಂಖ್ಯೆ ಕಡಿಮೆಯಾಗಿಲ್ಲ.

    ಬೀದಿ ನಾಯಿಗಳ ಅಪರೇಷನ್ ಮಾಡಲಾಗಿದೆ ಎಂದು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಆದರು ಬೀದಿ ನಾಯಿಗಳ ಹಾವಳಿ ತಪ್ಪಿಲ್ಲ. ಬೀದಿ ನಾಯಿಗಳ ಹೆಸರಲ್ಲಿ ದುಡ್ಡು ಅದ್ಯಾರ ಜೇಬು ಸೇರಿದ್ಯೋ ಎಂದು ಜನರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.

  • ಬಾಯಾರಿದ್ದ ಬೀದಿನಾಯಿಗೆ ಬೊಗಸೆ ನೀರು ಕುಡಿಸಿದ ವೃದ್ಧ: ವಿಡಿಯೋ ವೈರಲ್

    ಬಾಯಾರಿದ್ದ ಬೀದಿನಾಯಿಗೆ ಬೊಗಸೆ ನೀರು ಕುಡಿಸಿದ ವೃದ್ಧ: ವಿಡಿಯೋ ವೈರಲ್

    ಬಾಯಾರಿಕೆಯಾಗಿದ್ದ ಬೀದಿನಾಯಿಗೆ ವೃದ್ಧರೊಬ್ಬರು ತನ್ನ ಕೈಯಲ್ಲಿ ನೀರು ತುಂಬಿಸಿ ಕುಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸುಶಾಂತ್ ನಂದ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, ಏನ್ನನ್ನು ಬಯಸೇ ಒಬ್ಬರಿಗೆ ಸಹಾಯ ಮಾಡಿ. ಜೀವನದಲ್ಲಿ ಇನ್ನೊಬ್ಬರಿಗೆ ದಯೆ ತೋರಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಾರೋ ಎಸೆದ ಚಪಾತಿಯನ್ನು ನೀರಿನಲ್ಲಿ ತೊಳೆದು ತಿಂದ ವೃದ್ಧ 

    ವಿಡಿಯೋದಲ್ಲಿ ವೃದ್ಧ ಫುಟ್‍ಪಾತ್ ಬಳಿಯಿದ್ದ ನಲ್ಲಿಯಿಂದ ತನ್ನ ಕೈಯಲ್ಲಿ ನೀರು ತುಂಬಿಸಿಕೊಂಡು ಅದನ್ನು ಬಾಯಾರಿಕೆಯಿಂದ ಇದ್ದ ನಾಯಿಗೆ ಕುಡಿಸಿದ್ದಾರೆ. ವೃದ್ಧ ನಾಯಿಗೆ ನೀರು ಕುಡಿಸುವಾಗ ಯಾರೋ ಅದನ್ನು ವಿಡಿಯೋ ಮಾಡಿದ್ದಾರೆ. ಇದನ್ನೂ ಓದಿ: ಬೀದಿ ನಾಯಿಗೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ

    ವೈರಲ್ ಆಗಿರುವ ಈ ವಿಡಿಯೋ ಹಲವು ಮಂದಿಗೆ ಇಷ್ಟವಾಗಿದ್ದು, ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋಗೆ 10 ಸಾವಿರಕ್ಕೂ ಹೆಚ್ಚು ವ್ಯೂವ್ ಬಂದಿದ್ದು, ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ಸದ್ಯ ಈ ವಿಡಿಯೋವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂಬ ಮಾಹಿತಿ ದೊರೆತಿಲ್ಲ.

    ಅಲ್ಲದೆ ವಿಡಿಯೋ ನೋಡಿ ಹಲವು ಮಂದಿ ರೀ-ಟ್ವೀಟ್ ಮಾಡುವ ಮೂಲಕ ವೃದ್ಧನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವಿಡಿಯೋ ತುಂಬಾನೇ ಕ್ಯೂಟ್ ಆಗಿದೆ ಎಂದು ರೀ-ಟ್ವೀಟ್ ಮಾಡುತ್ತಿದ್ದಾರೆ.

  • 10ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿ ದಾಳಿ- ಬಾಲಕ ಗಂಭೀರ

    10ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿ ದಾಳಿ- ಬಾಲಕ ಗಂಭೀರ

    ರಾಮನಗರ: ಬೀದಿ ನಾಯಿಯೊಂದು 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ನಡೆದಿದೆ.

    ಮಾಗಡಿ ಪಟ್ಟಣದ ಮಾಗಡಿ- ಗುಡೇಮಾರನಹಳ್ಳಿ ರಸ್ತೆಯಲ್ಲಿನ ಗಾಂಧಿ ಸರ್ಕಲ್ ನಲ್ಲಿ ಬೀದಿ ನಾಯಿ ದಾಳಿ ನಡೆಸಿದ್ದು ಸಿಕ್ಕ ಸಿಕ್ಕವರ ಮೇಲೆಲ್ಲ ದಾಳಿ ನಡೆಸಿದೆ. ಬೀದಿ ನಾಯಿಯ ದಾಳಿಗೆ ಸಿಕ್ಕಿ ಬೈಚಾಪುರ ಗ್ರಾಮದ ನಂಜಪ್ಪ, ನಂದ ಕಿಶೋರ್ ಹಾಗೂ ಕೇಶವ, ಗುಡ್ದಳ್ಳಿ ಗ್ರಾಮದ ರಾಜಶೇಖರ್ ಸೇರಿದಂತೆ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ್ದು ಸಿಕ್ಕ ಸಿಕ್ಕವರ ಮುಖ, ಕೈ ಕಾಲು, ಮುಖ, ಹೊಟ್ಟೆ, ಬೆನ್ನು ಮೊದಲಾದ ಭಾಗಗಳನ್ನು ಕಚ್ಚಿ ಗಾಯಗೊಳಿಸಿದೆ.

    ಗಾಂಧಿ ಸರ್ಕಲ್ ನಲ್ಲಿ ಜನರ ಮೇಲೆ ಎರಗಿ ದಾಳಿ ನಡೆಸಿ ಹಲವರಿಗೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿ ನಂತರ ಸಮೀಪದಲ್ಲಿಯೇ ಇರುವ ಸರ್ಕಾರಿ ಪಿಯು ಕಾಲೇಜಿಗೆ ನುಗ್ಗಿದೆ. ಈ ವೇಳೆ ಬೀದಿ ನಾಯಿಗೆ ಎದುರಾಗಿ ಸಿಕ್ಕ ವಿದ್ಯಾರ್ಥಿನಿ ಭೂಮಿಕಾಳ ಮೇಲೆ ದಾಳಿ ನಡೆಸಿದ್ದು, ಆಕೆಯ ಕೈ, ಕಾಲಿಗೆ ಕಚ್ಚಿ ಗಾಯಗೊಳಿಸಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯಗೊಳಿಸಿದ್ದು ಬೈಚಾಪುರದ ಐದು ವರ್ಷದ ಬಾಲಕ ನಂದ ಕಿಶೋರ್ ಗೆ ಗಂಭೀರ ಗಾಯಗಳಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ಪದೇ ಪದೇ ನಾಯಿ ದಾಳಿಗಳು ನಡೆಯುತ್ತಿದ್ದರೂ, ಯಾವುದೇ ಕ್ರಮಗಳನ್ನು ಮಾತ್ರ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಬೀದಿ ನಾಯಿಗಳ ಹಾವಳಿ

    ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಬೀದಿ ನಾಯಿಗಳ ಹಾವಳಿ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೀದಿನಾಯಿಗಳ ಹಾವಳಿ ಮುಂದುವರಿದಿದ್ದು, ಹೆಚ್‍ಎಎಲ್‍ನ ವಿಭೂತಿಪುರಂ ಬಳಿ ಬಾಲಕನ ಮೇಲೆ ಎರಗಿದ ನಾಯಿಗಳು ಗಂಭೀರವಾಗಿ ಗಾಯಗೊಳಿಸಿವೆ.

    ಹೌದು, ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಶೌಚಾಲಯಕ್ಕೆ ಹೋಗಿದ್ದ ಬಾಲಕನ ಮೇಲೆ 10 ಕ್ಕೂ ಹೆಚ್ಚು ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ. ಆಟ-ಪಾಠ ಕಲಿಯಬೇಕಿದ್ದ ಬಾಲಕನೀಗ ಸಾವು-ಬದುಕಿನ ಮಧ್ಯೆ ಹೋರಾಡುತ್ತಾ ಇದ್ದಾನೆ.

    ಪ್ರವೀಣ್ ಬೀದಿನಾಯಿಗಳ ದಾಳಿಗೆ ತುತ್ತಾದ ಬಾಲಕ. ಬುಧವಾರ ಸಂಜೆ ಬಾಲಕ ಶೌಚಾಲಯಕ್ಕೆ ತೆರಳಿದ್ದಾಗ, ಏಕಾಏಕಿ 10 ಕ್ಕೂ ಹೆಚ್ಚು ಬೀದಿನಾಯಿಗಳ ಗುಂಪು ಬಾಲಕನ ಮೇಲೆ ಎರಗಿ, ಕತ್ತು, ಮೈ ಹಾಗೂ ಕೈ ಭಾಗಕ್ಕೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಇದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕನ ಸ್ಥಿತಿಯು ಚಿಂತಾಜನಕವಾಗಿದೆ. ವೈದ್ಯರು ಇನ್ನು ಮೂರು ದಿನಗಳ ಕಾಲ ಏನು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.  ಇದರಿಂದ ಬಾಲಕನ ತಾಯಿ ತೀವ್ರವಾಗಿ ಚಿಂತೆಗೀಡಾಗಿದ್ದಾರೆ. ಮಗನ ಚಿಕಿತ್ಸೆಗೆ ಹಣ ಇಲ್ಲದೇ ಪರದಾಡುತ್ತಾ, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

    ಘಟನೆ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು, ಈ ಏರಿಯಾಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಇವುಗಳಿಗೆ ಮೂಲ ಕಾರಣ ವಿಭೂತಿಪುರಂನಲ್ಲಿರುವ ಹೆಚ್ಚಿನ ಮಾಂಸದ ಅಂಗಡಿಗಳು. ಅಂಗಡಿಯವರು ನಾಯಿಗಳಿಗೆ ಮಾಂಸದ ತುಂಡುಗಳನ್ನು ಹಾಕುತ್ತಾರೆ. ಹೀಗಾಗಿ ಇವನ್ನೇ ರೂಢಿ ಮಾಡಿಕೊಂಡಿರುವ ನಾಯಿಗಳು ಜನರ ಮೇಲೂ ದಾಳಿ ನಡೆಸುತ್ತಲೇ ಇರುತ್ತವೆ. ಈ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೂ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv