Tag: ಬೀದಿದೀಪ

  • ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶ

    ಇಡೀ ರಾಜ್ಯಕ್ಕೆ ಬೆಳಕು ನೀಡುವ ರಾಯಚೂರಿನಲ್ಲೇ ಬೆಳಕಿಲ್ಲ – ಸಾರ್ವಜನಿಕರಿಂದ ತೀವ್ರ ಆಕ್ರೋಶ

    -ಬಡಾವಣೆ, ಮುಖ್ಯರಸ್ತೆಗೆ ಹೋದರೂ ಬೀದಿ ದೀಪಗಳಿಲ್ಲ

    ರಾಯಚೂರು: ಇತ್ತೀಚಿಗೆ ಕಲಬುರಗಿಯಲ್ಲಿ (Kalaburagi) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಯಚೂರು (Raichuru) ನಗರಸಭೆಯನ್ನು ಪಾಲಿಕೆಯಾಗಿ ಸರ್ಕಾರ ಮೇಲ್ದರ್ಜೆಗೆ ಏರಿಸಿದೆ. ನಗರದ ಜನರು ಇದಕ್ಕೆ ಒಂದೆಡೆ ಖುಷಿ ವ್ಯಕ್ತಪಡಿಸಿದರೆ, ಇನ್ನೊಂದೆಡೆ ನಗರಸಭೆಯ ನಿರ್ಲಕ್ಷ್ಯಕ್ಕೆ ನಿತ್ಯ ಹಿಡಿಶಾಪ ಹಾಕುವಂತಾಗಿದೆ. ರಾತ್ರಿಯಾದರೆ ಸಾಕು ಬಡಾವಣೆಗಳಲ್ಲಿ ಜನ ಓಡಾಡಲು ಹೆದರುವ ಪರಸ್ಥಿತಿಯಿದೆ. ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ನಗರಸಭೆ ನಿರ್ಲಕ್ಷ್ಯ ಕಾರಣವಾಗುತ್ತಿದೆ.

    ಬಿಸಿಲನಾಡು ರಾಯಚೂರಿನ ಜಿಲ್ಲಾ ಕೇಂದ್ರ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರದ ಯಾವುದೇ ಬಡಾವಣೆ, ಮುಖ್ಯರಸ್ತೆಗೆ ಹೋದರೂ ಬೀದಿ ದೀಪಗಳಿಲ್ಲ. ಕೇವಲ ಕಂಬಗಳು ಮಾತ್ರ ನಿಂತಿವೆ. ಬೀದಿದೀಪಗಳು ಹಾಳಾಗಿ ಸುಮಾರು ತಿಂಗಳುಗಳೇ ಕಳೆದರೂ ಜಿಲ್ಲಾಡಳಿತ ಹಾಗೂ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಂಜೆಯಾದರೆ ಸಾಕು ಜನ ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ.ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಫುಲ್‌ ಡಿಮ್ಯಾಂಡ್‌ – 69 ಪ್ರಶಸ್ತಿಗೆ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

    ಮಹಿಳೆಯರಿಗಂತೂ ಸುರಕ್ಷತೆಯೇ ಇಲ್ಲವಾಗಿದೆ. ಕಳೆದ ಕೆಲ ತಿಂಗಳುಗಳಿಂದ ನಗರದಲ್ಲಿ ಕಳ್ಳತನ, ಅಪಹರಣ ಯತ್ನ, ದರೋಡೆಯಂತ ಪ್ರಕರಣಗಳು ನಡೆಯುತ್ತಿದ್ದರೂ ನಗರಸಭೆ ಕಣ್ಮುಚ್ಚಿ ಕುಳಿತಿದೆ. ಇನ್ನೂ ಸಿಸಿ ಕ್ಯಾಮರಾಗಳನ್ನು ಅಲ್ಲಲ್ಲಿ ಅಳವಡಿಸಿದ್ದರೂ ಯಾವುದೇ ಕೆಲಸ ಮಾಡುತ್ತಿಲ್ಲ. ನಗರಸಭೆಯನ್ನು ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿದ್ದರೂ ಜನರಲ್ಲಿ ಖುಷಿ ಕಾಣುತ್ತಿಲ್ಲ. ಜನರನ್ನು ಕಳ್ಳಕಾಕರಿಂದ ರಕ್ಷಿಸಲು, ರಾತ್ರಿ ವೇಳೆ ಸುರಕ್ಷಿತವಾಗಿ ಓಡಾಡಲು ಕೂಡಲೇ ಬೀದಿದೀಪಗಳನ್ನು ಅಳವಡಿಸಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೀದಿದೀಪಗಳ ನಿರ್ವಹಣೆಗಾಗಿ ಫೆಬ್ರವರಿಯಲ್ಲಿ ಒಂದುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆದಾರರು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆ ಗುತ್ತಿಗೆ ರದ್ದು ಮಾಡಲಾಗಿತ್ತು.

    ಇದಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಮಾತನಾಡಿ, ಹೊಸ ಟೆಂಡರ್ ಕರೆಯುತ್ತೇವೆ. ಇನ್ನೂ ಎರಡು ಮೂರು ದಿನಗಳಲ್ಲಿ ಹೊಸ ಟೆಂಡರ್ ಕರೆಯುತ್ತಿದ್ದೇವೆ. ಆದಷ್ಟು ಬೇಗ ಬೀದಿದೀಪ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ

    ಒಟ್ಟಿನಲ್ಲಿ ನಗರಸಭೆಯ ನಿಧಾನಗತಿಯ ಧೋರಣೆ ಜನರಲ್ಲಿ ಅಸುರಕ್ಷಿತೆಯ ಭಾವನೆ ಮೂಡಿಸಿದೆ. ರಾತ್ರಿಯಾದರೆ ಸಾಕು ಜನ ರಸ್ತೆಯಲ್ಲಿ ಓಡಾಡಲು ಹೆದರುವ ಪರಸ್ಥಿತಿ ಉಂಟಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಬೀದಿದೀಪಗಳ ಅಳವಡಿಕೆಗೆ ಮುಂದಾಗಬೇಕಿದೆ.ಇದನ್ನೂ ಓದಿ: ಇಡೀ ವಿಶ್ವದಲ್ಲಿ ಜನರ ಖಾತೆಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ನಮ್ಮದು – ಯತೀಂದ್ರ

  • ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು

    ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು

    ಮೈಸೂರು: ಸಂಸದ ಪ್ರತಾಪ್ ಸಿಂಹ (Pratap Simha) ಅವರು ನವೆಂಬರ್ 30 ರೊಳಗೆ ಮೈಸೂರಿನ ರಿಂಗ್ ರಸ್ತೆಗಳಿಗೆ (Mysore Ring Road) ಬೀದಿ ದೀಪ ಅಳವಡಿಸುವ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಮೈಸೂರು-ಬೆಂಗಳೂರು ರಸ್ತೆಯ ಜಂಕ್ಷನ್ ದೀಪಗಳನ್ನ ಬೆಳಗಿಸಲಾಗಿತ್ತು. ಆದರೆ ದೀಪ ಬೆಳಗಿದ ಎರಡೇ ದಿನಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

    ಸಾತಗಳ್ಳಿ ರಿಂಗ್ ರಸ್ತೆಯಲ್ಲಿ ಬೀದಿ ದೀಪ ಅಳವಡಿಸಿ ಎರಡೇ ದಿನಗಳಲ್ಲಿ ಎಂಸಿಬಿ ಸ್ವಿಚ್‌ಗಳನ್ನೇ (MCB Switches) ಕದ್ದೊಯ್ದಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತ ಪಡಿಸಿರುವ ಸಂಸದ ಪ್ರತಾಪ್ ಸಿಂಹ (Pratap Simha), ಲೈಟು ಬೇಕು ಅಂದ್ರಿ, ಶ್ರಮಪಟ್ಟು ಹಾಕಿಸಿದೆ. ಎರಡೇ ದಿನಗಳಲ್ಲಿ ಸಾತಗಳ್ಳಿ ಬಳಿ ಕಳ್ಳರ ಕಾಟ ಶುರುವಾಗಿದೆ. ಎಂಸಿಬಿ ಸ್ವಿಚ್ಸ್ ಕದ್ದು, ವಿದ್ಯುತ್ ಸಂಪರ್ಕ ತೆಗೆಯುತ್ತಿದ್ದಾರೆ. ಇಂದಿನಿಂದ ರಾತ್ರಿ ಗಸ್ತು ಆರಂಭಿಸುತ್ತಿದ್ದೇನೆ ಮತ್ತು ಸಿಸಿಟಿವಿ ಕ್ಯಾಮೆರಾ (CCTV Camera) ಅಳವಡಿಸಲು ಇಂಡಿಯನ್ ಬ್ಯಾಂಕ್ ನಿಂದ 5 ಲಕ್ಷ ಡಿಡಿ ಕೊಡಿಸಿದೆ ಎಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: HDK ಪ್ರಧಾನಿಯಾದ್ರೆ ಜೆಡಿಎಸ್‍ನಲ್ಲಿ ದಲಿತ, ಮುಸ್ಲಿಂ CM: ಸಿಎಂ ಇಬ್ರಾಹಿಂ

    ಕಗ್ಗತ್ತಲಲ್ಲಿ ಮುಳುಗಿದ್ದ ಮೈಸೂರಿನ 42.5 ಕಿ.ಮೀ. ರಿಂಗ್ ರಸ್ತೆಯ ಶೇ.50 ಭಾಗದ ದೀಪಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದ್ದರು. ಇದನ್ನೂ ಓದಿ: ದೇವಸ್ಥಾನದ ಆವರಣದ ಒಳಗಡೆ ಮೊಬೈಲ್‌, ಕ್ಯಾಮೆರಾಕ್ಕೆ ನಿರ್ಬಂಧ ವಿಧಿಸಿ: ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

    ರಿಂಗ್ ರಸ್ತೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಕಾಮಗಾರಿಗೆ ತಗಲುವ ವೆಚ್ಚ 12 ಕೋಟಿ ರೂ.ಗಳನ್ನು ಮುಡಾದಿಂದ ಭರಿಸುವುದು ಹಾಗೂ ವಿದ್ಯುತ್ ದೀಪಗಳ ನಿರ್ವಹಣೆಯ ಹೊಣೆಯನ್ನು ನಗರ ಪಾಲಿಕೆ ವಹಿಸಿಕೊಳ್ಳುವುದು ಎಂದು ನಿರ್ಧಾರವಾಗಿತ್ತು. ಅದರಂತೆ ಇದೀಗ ರಿಂಗ್ ರಸ್ತೆಯ ಶೇ.50ರಷ್ಟು ಭಾಗದಲ್ಲಿ ಎಲ್‌ಇಡಿ ಬಲ್ಬ್‌ಗಳು ಬೆಳಗುತ್ತಿದ್ದವು. ಇನ್ನುಳಿದಂತೆ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಿಂದ ಕೆಆರ್‌ಎಸ್ ರಸ್ತೆ, ಹಿನಕಲ್ ಜಂಕ್ಷನ್, ಬೋಗಾದಿ, ದಟ್ಟಗಳ್ಳಿ ಹಾಗೂ ಹೆಚ್.ಡಿ.ಕೋಟೆ ಜಂಕ್ಷನ್ ಮೂಲಕ ನಂಜನಗೂಡು ಜಂಕ್ಷನ್‌ವರೆಗಿನ ಎಲ್‌ಇಡಿ ಬಲ್ಬ್‌ಗಳು  ಡಿಸೆಂಬರ್ 10ರೊಳಗೆ ಬೆಳಗಲಿವೆ ಎಂದು ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದರು.

    ಶಿಥಿಲಾವಸ್ಥೆಯಲ್ಲಿದ್ದ 87 ವಿದ್ಯುತ್ ಕಂಬಗಳನ್ನು ಬದಲಿಸಿದ್ದು, ಕಂಟ್ರೋಲ್ ಯೂನಿಟ್ ಅಳವಡಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಡಿಸೆಂಬರ್ 10ರೊಳಗೆ ಅದು ಪೂರ್ಣಗೊಳ್ಳಲಿದೆ ಹೇಳಲಾಗಿತ್ತು. ಅಷ್ಟರಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಇನ್ಮುಂದೆ ಕಳ್ಳರಿಗೆ ಹೆಡೆಮುರಿಕಟ್ಟಲು ಸಿಸಿಟಿವಿ ಕ್ಯಾಮೆರಾ ಅಳವಡಿಸುವುದಾಗಿ ಸಂಸದರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]