Tag: ಬೀದಿ

  • ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿ ಹೊಡೆದು ಕೊಂದ

    ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿ ಹೊಡೆದು ಕೊಂದ

    ಲಕ್ನೋ: ಮಟನ್ ಚೀಲ ಹೊತ್ತೊಯ್ದ ಬೀದಿ ನಾಯಿಯನ್ನು ಕೋಲಿನಿಂದ ಹೊಡೆದು ಕೊಂದು ಹಾಕಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ.

    ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್(40) ಬಂಧಿತ ಆರೋಪಿಯಾಗಿದ್ದಾನೆ. ಈತನ ಮನೆಗೆ ನುಗ್ಗಿದ್ದ ನಾಯಿ ಮೇಕೆ ಮಾಂಸದ ಚೀಲದೊಂದಿಗೆ ಪರಾರಿಯಾಗಿತ್ತು. ಬೀದಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ ಎಂದು  ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ

    ವಿಜಯ ನಗರ  ಪೊಲೀಸ್ ಠಾಣೆಯ ಪ್ರಭಾರಿ ತಹಜೀಬ್ ಖಾಜಿ ಮಾತನಾಡಿ, ಬೀದಿಯಲ್ಲಿ ತಿರುಗಾಡಿಕೊಂಡಿದ್ದ ನಾಯಿ ಭಾನುವಾರ ರಾತ್ರಿ ಜಗದೀಶ್ ಚೌಹಾಣ್ ಅಲಿಯಾಸ್ ಠಾಕೂರ್ ಮನೆಗೆ ನುಗ್ಗಿ ಕುರಿ ಮಾಂಸದ ಚೀಲವನ್ನು ಬಾಯಿಗೆ ತುರುಕಿಕೊಂಡು ಅಲ್ಲಿಂದ ಪರಾರಿಯಾಗಿತ್ತು. ಇದರಿಂದ ಆಕ್ರೋಶಗೊಂಡ ಜಗದೀಶ್ ಹಿಂಬಾಲಿಸಿಕೊಂಡು ಬಂದು ನಾಯಿ ಸಾಯುವವರೆಗೂ ಕೋಲಿನಿಂದ ನಿರ್ದಯವಾಗಿ ಥಳಿಸಿದ್ದಾನೆ ಎಂದು ಹೇಳಿದರು.

    ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಚೌಹಾಣ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಎಸ್‍ಎಚ್‍ಒ ಹೇಳಿದರು. ಪೀಪಲ್ ಫಾರ್ ಅನಿಮಲ್ಸ್ ಇಂದೋರ್ ಘಟಕದ ಅಧ್ಯಕ್ಷ ಪ್ರಿಯಾಂಶು ಜೈನ್ ಅವರ ದೂರಿನ ಮೇರೆಗೆ ದೂರು ದಾಖಲಿಸಲಾಗಿದೆ ಎಂದರು.

  • ನಡುಬೀದಿಯಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನಾರಿಯರು!

    ನಡುಬೀದಿಯಲ್ಲಿ ಜುಟ್ಟು ಹಿಡಿದು ಹೊಡೆದಾಡಿಕೊಂಡ ನಾರಿಯರು!

    ಭೋಪಾಲ್: ಕುಡಿಯುವ ನೀರನ್ನು ಹಿಡಿಯಲು ನಿಂತಿದ್ದ ಇಬ್ಬರು ಯುವತಿಯರು ಪರಸ್ಪರವಾಗಿ ಜುಟ್ಟು ಹಿಡಿದುಕೊಂಡು ಹೊಡೆದಾಡಿದ್ದು, ಇಬ್ಬರು ಹೋಗಿ ಕೊಚ್ಚೆ ಗುಂಡಿಯಲ್ಲಿ ಬಿದ್ದರೂ ಹಿಡಿದ ಜುಟ್ಟು ಬಿಡದೆ ಗಲಾಟೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಪನ್ನಾದ ಮಲಾಘನ್ ಗ್ರಾಮದಲ್ಲಿ ನಡೆದಿದೆ.

    ವೈರಲ್ ವೀಡಿಯೋದಲ್ಲಿ ಏನಿದೆ?: ಪ್ಯಾಂಟ್ ಶರ್ಟ್ ಹಾಕಿಕೊಂಡಿರುವ ಯುವತಿಯರು ಬೀದಿಯಲ್ಲಿ ಪರಸ್ಪರ ಜುಟ್ಟು ಹಿಡಿದುಕೊಂಡು ಎಳೆದಾಡುತ್ತಾ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಅದೆಷ್ಟರ ಮಟ್ಟಿಗೆ ಮೈಮರೆತಿದ್ದರು ಎಂದರೆ, ಇವರಿಬ್ಬರೂ ಪರಸ್ಪರ ಎಳೆದಾಡುತ್ತಾ ಹೋಗಿ ಕೊಚ್ಚೆ ಗುಂಡಿಗೆ ಬಿದ್ದಿದ್ದಾರೆ. ಅವರ ಮೈಯೆಲ್ಲ ಕಪ್ಪಾದ, ಹೊಲಸು ನೀರಿನಿಂದ ಗಲೀಜಾದರೂ ಸಹ ಎಚ್ಚರವಿರಲಿಲ್ಲ. ಜುಟ್ಟು ಹಿಡಿದುಕೊಂಡೇ ಕಾದಾಟ ಮಾಡಿದ್ದಾರೆ. ಈ ಇಬ್ಬರು ಜಗಳವನ್ನು ನೋಡಿದ ಹಲವರು ಮಜಾ ತೆಗೆದುಕೊಳ್ಳುತ್ತಿದ್ದರು. ಯಾರು ಕೂಡಾ ಮುಂದೆ ಬಂದು ಜಗಳವನ್ನು ನಿಲ್ಲಿಸಿಲ್ಲ.ಇದನ್ನು ಓದಿ:ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಮುಖಕ್ಕೆ ಕೊಚ್ಚೆ ತಾಗಿದ್ದರೂ ಅದ್ಯಾವುದೂ ಪರಿಗಣಿಸದೆ ಕೈ, ಮುಖವನ್ನು ಗಲೀಜು ಮಾಡಿಕೊಂಡು ಹಿಡಿದ ಜುಟ್ಟು ಬಿಡದೆ ಕಿತ್ತಾಡಿಕೊಂಡ ಈ ಇಬ್ಬರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಅಬ್ಬಾ.. ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ಹೆತ್ತ ತಾಯಿಯನ್ನೆ ದೇವಸ್ಥಾನದಲ್ಲಿ ಬಿಟ್ಟು ಹೋದ ಮಕ್ಕಳು

    ಹೆತ್ತ ತಾಯಿಯನ್ನೆ ದೇವಸ್ಥಾನದಲ್ಲಿ ಬಿಟ್ಟು ಹೋದ ಮಕ್ಕಳು

    – ಕಾಲಿಲ್ಲದ ತಾಯಿಯನ್ನು ಬೀದಿಗೆ ತಳ್ಳಿದ್ರು

    ಕೊಪ್ಪಳ: ಬೀದಿಗೆ ತಳ್ಳಿದ ಪಾಪಿ ಮಕ್ಕಳಿಗಾಗಿ, ಕಾಲಿಲ್ಲದ ತಾಯಿ ಬಂಡಿ ದುರ್ಗಾದೇವಿ ದೇವಸ್ಥಾನದಲ್ಲಿ ಮಕ್ಕಳ ದಾರಿ ಕಾಯುತ್ತಿರುವ ಕರುಣಾಜನಕ ಘಟನೆ ನಡೆದಿದೆ.

    ದ್ರಾಕ್ಷಯಣಮ್ಮ ಅವರ ಕಾಲು ಗ್ಯಾಂಗ್ರಿನ್ ನಿಂದ ತುಂಡಾಗಿತ್ತು. ಹೀಗಾಗಿ ತಾಯಿಯನ್ನು ಮಕ್ಕಳು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾರೆ. ಪಾಪಿ ಮಕ್ಕಳು ಬರುವಿಕೆಗಾಗಿ ತಾಯಿ ಜೀವ ಅಂಗೈಯಲ್ಲಿ ಹಿಡಿದುಕೊಂಡು ಬಂಡಿ ದುರ್ಗಾದೇವಿ ದೇವಸ್ಥಾನದಲ್ಲಿ ಕಾಯುತ್ತಿರುವ ದೃಶ್ಯ ಮನಕಲಕುತ್ತಿದೆ.

    ದೇವಸ್ಥಾನದಲ್ಲಿ ತಾಯಿಯನ್ನ ಬಿಟ್ಟು ಹೋದ ಮಕ್ಕಳು ವಿರೇಶ್ ಹಾಗೂ ಚಂದ್ರಕಾಂತ್ ಆಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಗ್ಯಾಂಗ್ರಿನ್ ಇಂದ ದ್ರಾಕ್ಷಾಯಣಮ್ಮನ ಕಾಲು ತುಂಡಾಗಿತ್ತು. ಮಕ್ಕಳು ಆಸ್ಪತ್ರೆಗೆ ಬರದೇ ಇದ್ದಿದ್ದಕ್ಕೆ ವೈದ್ಯರೇ ಮನೆಗೆ ಬಿಟ್ಟು ಹೋಗಿದ್ದರು. ಆದರೆ ಮಕ್ಕಳು ಕಾಲಿಲ್ಲದ ತಾಯಿಯನ್ನ ದೇವಸ್ಥಾನದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.

    ಒಂದು ವಾರದಿಂದ ದೇವಸ್ಥಾನದಲ್ಲಿರುವ ದ್ರಾಕ್ಷಾಯಣಮ್ಮ ಮಕ್ಕಳಿಗಾಗಿ ಕಾಯುತ್ತಿದ್ದಾರೆ. ಅಕ್ಕ ಪಕ್ಕದ ಮನೆಯವರೇ ಊಟ ತಿಂಡಿ ನೀಡುತ್ತಿದ್ದಾರೆ. ಮಕ್ಕಳು ಬೀದಿ ಪಾಲು ಮಾಡಿದರು ಈ ತಾಯಿ ಜೀವ ಮಕ್ಕಳಿಗಾಗಿ ಹಂಬಲಿಸುತ್ತಿದೆ.

  • ನನ್ ಎಕ್ಡ ಎನ್ನುತ್ತಿದ್ದ ಹುಚ್ಚ ವೆಂಕಟ್ ಈಗ ಬರಿಗಾಲಲ್ಲಿ ಓಡಾಟ!

    ನನ್ ಎಕ್ಡ ಎನ್ನುತ್ತಿದ್ದ ಹುಚ್ಚ ವೆಂಕಟ್ ಈಗ ಬರಿಗಾಲಲ್ಲಿ ಓಡಾಟ!

    ಬೆಂಗಳೂರು: ಯಾವಾಗಲೂ ಒಂದಲ್ಲ ಒಂದು ಹೇಳಿಕೆಯ ಮೂಲಕವೇ, ವಿವಾದಗಳ ಮೂಲಕವೇ ಜನಪ್ರಿಯತೆ ಗಳಿಸಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಚೆನ್ನೈನ ಬೀದಿ ಬೀದಿಗಳಲ್ಲಿ ಚಪ್ಪಲಿಯೇ ಇಲ್ಲದೇ ಓಡಾಡುತ್ತಿರೋ ದೃಶ್ಯ ಕಂಡುಬಂದಿದೆ.

    ಮಾತು ಮಾತಿಗೂ ‘ನನ್ ಎಕ್ಡ’ ಅನ್ನೋ ಡೈಲಾಗ್ ಹೊಡೆದುಕೊಂಡು ಪಂಚಿಂಗ್ ಮಾತುಗಳನ್ನು ಹುಚ್ಚ ವೆಂಕಟ್ ಹೇಳುತ್ತಿದ್ದರು. ಬಾಯಿ ಬಿಟ್ಟರೆ `ನನ್ ಎಕ್ಡ’ ಎಂದು ಹೇಳುತ್ತಿದ್ದ ವೆಂಕಟ್ ಈಗ ಚೆನ್ನೈ ಬೀದಿಯಲ್ಲಿ ಬರಿಗಾಲಲ್ಲಿ ಓಡಾಟ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೆಲ ದಿನಗಳ ಹಿಂದೆ `ದುರಹಂಕಾರಿ ಹುಚ್ಚ ವೆಂಕಟ್’ ಚಿತ್ರದ ಪ್ರೋಮೋ ರಿಲೀಸ್ ಮಾಡಿ ಸಿನಿಮಾ ಮಾಡುತ್ತಿರುವುದಾಗಿ ಮಾಧ್ಯಮಗಳ ಮುಂದೆ ಹುಚ್ಚ ವೆಂಕಟ್ ಹೇಳಿಕೆ ನೀಡಿದ್ದರು. ಆದರೆ ಚೆನ್ನೈನ ಬೀದಿ ಬೀದಿಗಳಲ್ಲಿ ಚಪ್ಪಲಿ ಇಲ್ಲದೆ ಬರಿಗಾಲಿನಲ್ಲಿ ಅಲೆಯುತ್ತಿರುವುದನ್ನು ಕಂಡ ಕೆಲವರು ಅವರ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚುಡಾಯಿಸಿ ಬಾಲಕಿಯ ತಲೆ ಕತ್ತರಿಸಿ ರೋಡ್‍ನಲ್ಲಿ ಬಿಸಾಡ್ದ!

    ಚುಡಾಯಿಸಿ ಬಾಲಕಿಯ ತಲೆ ಕತ್ತರಿಸಿ ರೋಡ್‍ನಲ್ಲಿ ಬಿಸಾಡ್ದ!

    ಚೆನ್ನೈ: 13 ವರ್ಷದ ಬಾಲಕಿಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದ 27 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಸೋಮವಾರ ಈ ಘಟನೆ ನಡೆದಿದ್ದು, ರಾಜಲಕ್ಷ್ಮೀ(13) ಕಾಮುಕನಿಗೆ ಬಲಿಯಾದ ಬಾಲಕಿ. ದಿನೇಶ್ ಕುಮಾರ್ ಬಾಲಕಿಗೆ ಕಿರುಕುಳವನ್ನು ನೀಡಿದ ಆರೋಪಿ. ತಲವಾಯಪಟ್ಟಿ ನಿವಾಸಿಯಾದ ರಾಜಲಕ್ಷ್ಮೀ 8 ನೇ ತರಗತಿ ಓದುತ್ತಿದ್ದಳು. ಪ್ರತಿನಿತ್ಯ ಬಾಲಕಿ ರಾಜಲಕ್ಷ್ಮೀಗೆ ದಿನೇಶ್ ಚುಡಾಯಿಸುತ್ತಿದ್ದ. ಇದೇ ವೇಳೆ ಸೋಮವಾರ ರಾಜಲಕ್ಷ್ಮೀ ಮನೆಯಲ್ಲಿ ಯಾರೂ ಇಲ್ಲದ್ದನ್ನು ಕಂಡು ಮನೆಯೊಳಗೆ ನುಗ್ಗಿ ಅವಳನ್ನು ಮತ್ತಷ್ಟು ಚುಡಾಯಿಸಿದ್ದಾನೆ ಎಂದು ಅತ್ತೆರ್ ಪೊಲೀಸರು ಹೇಳಿದ್ದಾರೆ.

    ಇದೇ ವೇಳೆ ದಿನೇಶ್ ಮನೆಯೊಳಗೆ ನುಗ್ಗಿದಾಗ ರಾಜಲಕ್ಷ್ಮೀ ಕಿರುಚಿಕೊಂಡಿದ್ದಾಳೆ. ರಾಜಲಕ್ಷ್ಮೀಯ ಕಿರುಚಾಟವನ್ನು ಕೇಳಿಸಿಕೊಂಡು ತಾಯಿ ಸ್ಥಳಕ್ಕೆ ಆಗಮಿಸುತ್ತಿದ್ದರು. ಇದನ್ನು ಕಂಡ ಕಾಮುಕ ಬಾಲಕಿ ಮೇಲೆ ಹಲ್ಲೆ ಮಾಡಿ ಆಕೆಯ ತಲೆಯನ್ನು ಕತ್ತರಿಸಿ ಬೀದಿಯಲ್ಲಿ ಎಸೆದು ಹೋಗಿದ್ದಾರೆ.

    ಈ ಘಟನೆಯ ವೇಳೆ ಆರೋಪಿ ದಿನೇಶ್ ಮದ್ಯಪಾನ ಸೇವನೆ ಮಾಡಿದ್ದು, ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯಂತೆ ವರ್ತಿಸುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv