ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾ ಮಹಾಮಾರಿಗೆ ಕಳೆದ ಒಂದು ವರ್ಷದಿಂದ ಸುಮಾರು 420 ಪಾಲಕರು ಬಲಿಯಾಗಿದ್ದಾರೆ.

ಕೊರೊನಾ ಮಹಾಮಾರಿಯ ಆರ್ಭಟದಿಂದ ಈಗಾಗಲೇ ಸಾಕಷ್ಟು ಜನರ ಬದುಕು ಬೀದಿಗೆ ಬಂದಿದೆ. ಪೋಷಕರನ್ನು ಕಳೆದುಕೊಂಡು ರಾಜ್ಯದಲ್ಲಿ ಸಾಕಷ್ಟು ಮಕ್ಕಳು ಅನಾಥರಾಗಿದ್ದಾರೆ. ಸದ್ಯ 143 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಕಡು ಬಡತನದ 42 ಮಕ್ಕಳನ್ನು ಬಾಲ ಸ್ವರಾಜ್ಯ ಯೋಜನೆಯಲ್ಲಿ ಸೇರಿಸಲಾಗಿದೆ. ಇದನ್ನೂ ಓದಿ: ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್

ಸಂಪೂರ್ಣವಾಗಿ ಪೋಷಕರನ್ನು ಕಳೆದುಕೊಂಡ 5 ಅನಾಥ ಮಕ್ಕಳು ಅವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹುಮ್ನಬಾದ್ ತಾಲೂಕಿನಲ್ಲಿ 4 ಹಾಗೂ ಬೀದರ್ ನಗರದ ಓರ್ವ ಬಾಲಕ ಸೇರಿ ಜಿಲ್ಲೆಯಲ್ಲಿ ಒಟ್ಟು ಐದು ಬಾಲಕರು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ನಾಥ ಮಕ್ಕಳಿಗೆ ಸರ್ಕಾರದಿಂದ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕಾಗಿದ್ದು, ಸರ್ಕಾರದ ಬಾಲ ಸ್ವರಾಜ್ಯ ಯೋಜನೆಗೆ ಈ ಅನಾಥ ಮಕ್ಕಳ ಎಲ್ಲಾ ಮಾಹಿತಿ ನೀಡಲಾಗಿದೆ ಎಂದು ಮಕ್ಕಳ ರಕ್ಷಣಾಧಿಕಾರಿ ಶಂಭುಲಿಂಗಾ ಹೀರೆಮಠರವರು ತಿಳಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಕೊರತೆ ಮುಚ್ಚಿ ಹಾಕಲು ಸರ್ಕಾರ ಸುಳ್ಳು ಹೇಳುತ್ತಿದೆ: ರಾಹುಲ್ ಗಾಂಧಿ
