Tag: ಬೀದರ್‌ ಪೊಲೀಸ್‌

  • ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 12 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

    ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 12 ಲಕ್ಷ ರೂ. ಮೌಲ್ಯದ ವಸ್ತುಗಳು ಜಪ್ತಿ

    ಬೀದರ್: ನಗರದ ಪೊಲೀಸರು (Bidar Police) ಭರ್ಜರಿ ಕಾರ್ಯಾಚರಣೆ ನಡೆಸಿ ಕಳ್ಳತನವಾಗಿದ್ದ 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

    ಭಾಲ್ಕಿ, ಮೇಹಕರ್ ಮತ್ತು ಹುಮ್ನಾಬಾದ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು 11 ಕಳ್ಳತನದ ಪ್ರಕರಣಗಳನ್ನು ಭೇದಿಸಿ ಬಂಗಾರ, ಬೆಳ್ಳಿ (Silver), ದ್ವಿಚಕ್ರ ವಾಹನ ಹಾಗೂ ಎಮ್ಮೆ ಸೇರಿದಂತೆ 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: Video | Tharun Sonal Wedding – ತಾಳಿ ಕಟ್ಟುವ ಶುಭ ವೇಳೆ – ದೃಶ್ಯ ಕಣ್ತುಂಬಿಕೊಳ್ಳಿ!

    ಮಂದಿರ ಕಳ್ಳತನ ಪ್ರಕರಣದಲ್ಲಿ 11 ಗ್ರಾಂ ಬೆಳ್ಳಿ ಮತ್ತು 1 ಗ್ರಾಂ ಚಿನ್ನಾಭರಣ (Gold Jewellery) ಹಾಗೂ ತೆಲಂಗಾಣದಲ್ಲಿ ಕಳ್ಳತನವಾಗಿದ್ದ 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಎಮ್ಮೆ ಕಳ್ಳತನ ಪ್ರಕರಣ ಭೇದಿಸಿದ ಮೇಹಕರ್ ಠಾಣೆಯ ಪೊಲೀಸರು ಸೂಮಾರು 7 ಲಕ್ಷ ರೂ. ಬೆಲೆಬಾಳುವ ಎಮ್ಮೆ ವಶಕ್ಕೆ ಪಡೆದುಕೊಂಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ಕೇಸ್‌ – ವಿಚಾರಣೆ ವೇಳೆ ಕಾಮುಕನ ಮೊಬೈಲ್‌ನಲ್ಲಿ ಸೆಕ್ಸ್‌ ವೀಡಿಯೋಗಳು ಪತ್ತೆ!

  • ಅಕ್ರಮವಾಗಿ ಮಾರಾಟ ಮಾಡ್ತಿದ್ದ 1 ಕೋಟಿ ರೂ. ಮೌಲ್ಯದ ತಿಮಿಂಗಲ ವಾಂತಿ ವಶ – ಮೂವರು ಅರೆಸ್ಟ್‌

    – ತಿಮಿಂಗಲ ವಾಂತಿಗೆ ಯಾಕಿಷ್ಟು ಬೇಡಿಕೆ? – ಇದರಿಂದ ಪ್ರಯೋಜನ ಏನು?

    ಬೀದರ್‌: ಕಾಳಸಂತೆಯಲ್ಲಿ ತಿಮಿಂಗಲ ವಾಂತಿ (Ambergris) ಮಾರಾಟ ಮಾಡುತ್ತಿದ್ದ ಖತರ್ನಾಕ್‌ ಗ್ಯಾಂಗ್‌ಗೆ ಹೆಡೆಮುರಿ ಕಟ್ಟಿರುವ ಪೊಲೀಸರು ಸುಮಾರು 1 ಕೋಟಿ ರೂ. ಮೌಲ್ಯದ 980 ಗ್ರಾಂ ನಷ್ಟು ಅಂಬರ್‌ಗ್ರಿಸ್ ವಶಪಡಿಸಿಕೊಂಡಿದ್ದಾರೆ.

    ಭರ್ಜರಿ ಕಾರ್ಯಾಚರಣೆ ಮಾಡಿದ ಬೀದರ್ ಪೊಲೀಸರು (Bidar Police) ಸೌಂದರ್ಯ ವರ್ಧಕ ಹಾಗೂ ಸುಗಂಧ ದ್ರವ್ಯ ತಯಾರಿಸಲು ಬಳಕೆ ಮಾಡುತ್ತಾರೆ. ಹಾಗಾಗಿ ತಿಮಿಂಗಲ ವಾಂತಿಯನ್ನು ಗೋವಾದಿಂದ ಅಕ್ರಮವಾಗಿ ಬೀದರ್‌ಗೆ ತಂದಿದ್ದ ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಮೂವರು ಆರೋಪಿಗಳನ್ನು ಅರೆಸ್ಟ್ ಬಂಧಿಸಿ ಜೈಲಿಗಟ್ಟಿದ್ದಾರೆ.

    15 ದಿನಗಳಲ್ಲಿ 28 ಕೇಸ್‌:
    ಕಳೆದ 15 ದಿನಗಳಲ್ಲಿ 28 ಕಳ್ಳತನ ಪ್ರಕರಣ ಭೇದಿಸಿದ್ದಾರೆ. ಜಿಲ್ಲೆಯ 13 ಠಾಣೆಗಳಲ್ಲಿ ದಾಖಲಾಗಿದ್ದ ಜಾನುವಾರು ಮತ್ತು ವಿವಿಧ ಸ್ವತ್ತಿನ 28 ಪ್ರಕರಣಗಳನ್ನು ಭೇದಿಸಿ ಅಂತಾರಾಜ್ಯ ಕಳ್ಳರು ಸೇರಿ 28 ಆರೋಪಿಗಳನ್ನ ಬಂಧಿಸಿದ್ದಾರೆ.

    ಒಟ್ಟಾರೆಯಾಗಿ ಬಂಧಿತ ಆರೋಪಿಗಳಿಂದ 53 ಲಕ್ಷ ರೂ. ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿದೆ. ಅದರಲ್ಲಿ 7.76 ಲಕ್ಷ ನಗದು, 23.91 ಲಕ್ಷ ಮೌಲ್ಯದ 396 ಗ್ರಾಂ ಚಿನ್ನ, 320 ಗ್ರಾಂ ಬೆಳ್ಳಿ, 7 ಜಾನುವಾರು, 6 ಪಂಪ್ ಸೆಟ್, 7 ವಾಹನಗಳು, 16 ಸಾವಿರ ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಬೀದರ್‌ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ಶ್ಲಾಘಿಸಿದ್ದಾರೆ.

    ತಿಮಿಂಗಲ ವಾಂತಿಗೆ ಯಾಕಿಷ್ಟು ಬೇಡಿಕೆ?
    ಅಂಬರ್ ಗ್ರೀಸ್ ಎಂಬ ವಸ್ತುವು ಮೇಣದಂಥ ವಸ್ತುವಾಗಿದ್ದು, ಇದನ್ನ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಚ್ಚಾವಸ್ತುವಾಗಿದ್ದಾಗಲೂ ಅಂಬರ್ ಗ್ರೀಸ್ ಕೊಂಚ ಸುವಾಸನೆ ಬೀರುವಂಥದ್ದಾಗಿರುತ್ತದೆ. ಕೆಲವು ದೇಶಗಳಲ್ಲಿ ಕಾಮೋತ್ತೇಜಕ ವಸ್ತುಗಳ ತಯಾರಿಕೆಯಲ್ಲೂ ಇದನ್ನ ಬಳಸಲಾಗುತ್ತದೆ.

    ತಿಮಿಂಗಿಲ ವಾಂತಿ ಸಿಗುವುದು ಬಹಳ ಅಪರೂಪ. ಏಕೆಂದರೆ, ತಿಮಿಂಗಿಲಗಳು ಸಮುದ್ರದಲ್ಲಿ ವಾಂತಿ ಮಾಡಿಕೊಳ್ಳುವುದು ಅಪರೂಪ. ಆದ್ದರಿಂದ ಇವು ಜನಸಾಮಾನ್ಯರಿಗೆ ಸಿಗುವುದು ತುಂಬಾ ವಿರಳ. ಹಾಗಾಗಿ ಈ ವಸ್ತುವಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಆದರೆ ಕಳ್ಳಸಾಗಣೆದಾರರು ಅಂಬರ್‌ಗ್ರೀಸ್‌ಗಾಗಿ ಸಮುದ್ರಗಳಿಗೆ ದಾಂಗುಡಿ ಇಡುವುದನ್ನು ತಪ್ಪಿಸಲು ಬಹುತೇಕ ದೇಶಗಳು ಇದರ ಮಾರಾಟ ನಿಷೇಧಿಸಿವೆ. ಹಾಗಾಗಿ ಇದು ಕಳ್ಳಸಾಗಣೆಯಾಗುತ್ತಿದೆ.

  • ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯಿಂದಲೇ ಪತಿಯ ಕೊಲೆ

    ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯಿಂದಲೇ ಪತಿಯ ಕೊಲೆ

    – ಪತ್ನಿ ಜೊತೆ ಪ್ರಿಯಕರ ಅರೆಸ್ಟ್‌

    ಬೀದರ್ : ಅನೈತಿಕ ಸಂಬಂಧವನ್ನು (Illicit affairs) ಪ್ರಶ್ನೆ ಮಾಡಿದ್ದಕ್ಕೆ ಪತಿಯನ್ನೇ (Husband) ಸಂಚು ರೂಪಿಸಿ ಪತ್ನಿ (Wife) ಹಾಗೂ ಪ್ರಿಯಕರ ಸೇರಿ ‌ಕೊಲೆ ಮಾಡಿದ ಪ್ರಕರಣವನ್ನು ಕೊನೆಗೂ ಬೀದರ್ ಪೊಲೀಸರು (Bidar Police) ಬೇಧಿಸಿದ್ದಾರೆ.

    ಅಮಿತ್‌ ಕೊಲೆಯಾಗಿದ್ದು, ಪೊಲೀಸರು ಈಗ ಪತ್ನಿ ಚೈತ್ರಾ, ಆಕೆಯ ಗೆಳೆಯ ರವಿ ಪಾಟೀಲ್ ಅಲ್ಲದೇ ಕೃತ್ಯಕ್ಕೆ ಸಹಕಾರ ನೀಡಿದ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ಬಂಧಿಸಿದ್ದಾರೆ.
    ಇದನ್ನೂ ಓದಿ: ನಾನು ನ್ಯಾಯದ ದಾರಿಯಲ್ಲಿದ್ದೇನೆ, ಸತ್ಯಕ್ಕೆ ಜಯ ಸಿಕ್ಕಿದೆ: ವಿಕ್ರಂ ಸಿಂಹ

    ಚೈತ್ರ ಮತ್ತು ಗೆಳೆಯ ಅಮಿತ್‌ ಪಾಟೀಲ್‌
    ಚೈತ್ರಾ ಮತ್ತು ಗೆಳೆಯ ಅಮಿತ್‌ ಪಾಟೀಲ್‌

    ಏನಿದು ಪ್ರಕರಣ?
    ನವೆಂಬರ್‌ 11 ರಂದು ಬೀದರ್ ತಾಲೂಕಿನ ಅಲಿಯಂಬರ್ ಗ್ರಾಮದ ಬಳಿ ಅಮಿತ್‌ ಶವ ಪತ್ತೆಯಾಗಿತ್ತು. ಇದನ್ನು ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಮೃತದೇಹ ನೋಡಿದಾಗ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು.

    ತನಿಖೆಗೆ ಇಳಿದ ಪೊಲೀಸರಿಗೆ ಶವ ಪತ್ತೆಯಾದ ಜಗದಲ್ಲಿ ಸಕ್ರಿಯವಾಗಿದ್ದ ಮೊಬೈಲ್‌ ನಂಬರ್‌ ಪತ್ತೆಹಚ್ಚಿದ್ದಾರೆ. ಬಳಿಕ ಸಿಕ್ಕಿಂದರ್ ಶಾಹಾ, ವೆಂಕಟ್ ಗಿರಿಮಾತೆ ಮತ್ತು ಆಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ರವಿ ಪಾಟೀಲ್ ಇವರಿಗೆ ಮುಂಗಡವಾಗಿ ಹಣ ನೀಡಿ ಕೃತ್ಯ ನಡೆಸಿ ವಿಚಾರಣೆಯನ್ನು ಬಾಯಿಬಿಟ್ಟಿದ್ದಾರೆ.

    ನಂತರ ರವಿಪಾಟೀಲ್‌ ವಿಚಾರಣೆ ವೇಳೆ ಚೈತ್ರಾ ಪಾತ್ರ ಬಹಿರಂಗವಾಗಿದೆ. ವಿಚಾರಣೆ ವೇಳೆ ನಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಚೈತ್ರಾ ತಿಳಿಸಿದ್ದಾಳೆ.

    ಪೊಲೀಸರು ಈಗ ಕೃತ್ಯಕ್ಕೆ ಬಳಸಿದ ರಾಡ್, ಮೊಬೈಲ್‌ ಹಾಗೂ ಕೊಲೆ ಮಾಡಲು ಸಹಚರರಿಗೆ ನೀಡಿದ ಮುಂಗಡ ಹಣವನ್ನು ಜಪ್ತಿ ಮಾಡಿದ್ದಾರೆ.