ಆಂಸ್ಟರ್ಡ್ಯಾಮ್: ದಯವಿಟ್ಟು ಕಡಲತೀರದಲ್ಲಿ ಸೆಕ್ಸ್ ಮಾಡೋದು ಬೇಡ ಎಂದು ನೆದರ್ಲೆಂಡ್‌ನ (Netherland) ಆಂಸ್ಟರ್ಡ್ಯಾಮ್ ಪಟ್ಟಣ ಪ್ರವಾಸಿಗರಿಗೆ (Tourists) ಮನವಿ ಮಾಡಿದೆ. ಇದೇ ಮೊದಲಬಾರಿಗೆ ನೆದರ್ ಲ್ಯಾಂಡ್‌ನ ನಗರವೊಂದು ಬೀಚ್ ಮತ್ತು ದಿಬ್ಬಗಳಲ್ಲಿ ಸೆಕ್ಸ್ ಮಾಡುವುದನ್ನು ನಿಷೇಧಿಸಿದೆ. ದಕ್ಷಿಣ ನೆದರ್‌ಲ್ಯಾಂಡ್‌ನ ವೀರೆ ಎಂಬ ಪಟ್ಟಣವು No Sex On The Beach (ಬೀಚ್‌ನಲ್ಲಿ ಸೆಕ್ಸ್ ಬೇಡ) ಎಂಬ ಅಭಿಯಾನ ಕೈಗೊಂಡಿದೆ.
ವೀರೆ ಮುನ್ಸಿಪಾಲಿಟಿಯು (Veere Municipality) ಬೀಚ್‌ನಲ್ಲಿ ಸೆಕ್ಸ್ ನಿಷೇಧದ ಫಲಕಗಳನ್ನ ಅಳವಡಿಸುವ ಮೂಲಕ ಪ್ರವಾಸಿಗರಿಗೂ ತಿಳಿಸಲಾಗುತ್ತಿದೆ. ವಿಶೇಷವಾಗಿ ಮರಳಿನ ದಿಬ್ಬಗಳಲ್ಲಿ ರತಿಕ್ರೀಡೆಗೆ ಅವಕಾಶವಿಲ್ಲ. ಅವುಗಳನ್ನ ಕಾನೂನುಬದ್ಧಗೊಳಿಸಲಾಗಿದೆ. ಮೀಸಲು ಅರಣ್ಯ ಮತ್ತು ಬೀಚ್‌ಗಳಲ್ಲಿ ಸೆಕ್ಸ್ ಮಾಡೋದನ್ನ ತಪ್ಪಿಸಲು ಮೇಲ್ವಿಚಾರಣೆ ಹೆಚ್ಚಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಗುರುವಾರ ವೀರೆ ಮುನ್ಸಿಪಾಲಿಟಿ (Netherland Veere Municipality) ಈ ನಿರ್ಣಯ ಕೈಗೊಂಡಿದ್ದು, ಕಡಲ ತೀರಗಳು, ನೈಸರ್ಗಿಕ ಪ್ರದೇಶಗಳು ಹಾಗೂ ಮರಳಿನ ದಿಬ್ಬಗಳಲ್ಲಿ ಸಾರ್ವಜನಿಕ ಲೈಂಗಿಕತೆಯನ್ನ ನಿಷೇಧಿಸಿದೆ. ಇದನ್ನೂ ಓದಿ: ಸೆಕ್ಸ್ ಕೂಡ ಒಂದು ಕೆಲಸ – ಕಾನೂನುಬದ್ಧಗೊಳಿಸಲು ಹೊಸ ಮಸೂದೆ ಮಂಡನೆ
ಈ ಕುರಿತು ಪ್ರಕಟಣೆ ನೀಡಿರುವ ವೀರೆ ಪಟ್ಟಣದ ಮೇಯರ್ ಫ್ರೆಡೆರಿಕ್ ಶೌವೆನಾರ್, ಸ್ಥಳೀಯ ಸಮುದಾಯಕ್ಕೆ ಈ ಮರಳಿನ ದಿಬ್ಬಗಳು ತುಂಬ ಮಹತ್ವದ್ದಾಗಿವೆ. ಹಾಗಾಗಿ ನೈಸರ್ಗಿಕ ಪರಿಸರ ಹಾನಿಗೊಳಿಸುವಂತಹ ಅನಪೇಕ್ಷಿತ ನಡವಳಿಕೆಯಿಂದ ರಕ್ಷಿಸಬೇಕಾದ ಅಗತ್ಯವಿದೆ. ಪ್ರವಾಸಿಗರ ಸೆಕ್ಸ್ ಚಟುವಟಿಕೆಯು ರಜೆ ಆಸ್ವಾದಿಸಲು ಬರುವ ಇತರರಿಗೂ ತೊಂದರೆಯಾಗಬಹುದು. ಈ ನಿರ್ಧಾರವು ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಹೆಜ್ಜೆಯಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರ ಇನ್ನುಮುಂದೆ ಎಚ್ಚರಿಕೆಗಳನ್ನು ನೀಡುವುದಿಲ್ಲ ಬದಲಿಗೆ, ತ್ವರಿತ ಮೌಖಿಕವಾಗಿ ತಿಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರವಾಸಿಗರಿಗೆ ಮಾಹಿತಿ ಒದಗಿಸುವ ಎಂಟು ಹೊಸ ಮಾಹಿತಿ ಫಲಕಗಳನ್ನು ಸ್ಥಾಪಿಸಲಾಗಿದೆ. ಈ ಮಧ್ಯೆ ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಆಕ್ಷೇಪ ಕೂಡ ವ್ಯಕ್ತವಾಗಿದೆ. ಲೈಂಗಿಕ ನಡವಳಿಕೆಯಿಂದ ಬೆತ್ತಲೆ ಸೂರ್ಯ ಸ್ನಾನ ಪ್ರಕ್ರಿಯೆಯನ್ನು ಪ್ರತ್ಯೇಕಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
ಬೆತ್ತಲೆ ಸೂರ್ಯ ಸ್ನಾನವು ಲೈಂಗಿಕತೆಯಲ್ಲ ಅದು ಸ್ವಾತಂತ್ರ್ಯದ ಭಾವನೆಯನ್ನು ನೀಡುತ್ತದೆ, ಫೋಟೋಶಾಪ್ ಮಾಡದ ನೈಜ, ಬೆತ್ತಲೆ ದೇಹಗಳನ್ನು ನೋಡುವುದು ತುಂಬಾ ಆರೋಗ್ಯಕರ. ಆದರೆ ನಾವು ಹೊರಾಂಗಣದಲ್ಲಿ ಲೈಂಗಿಕತೆಯಿಂದ ದೂರವಿರುತ್ತೇವೆ ಎಂದು ಸಂಘಟನೆಯೊಂದು ತಿಳಿಸಿದೆ.
ತಿರುವನಂತಪುರಂ: ಬೀಚ್‍ನಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದ ವೇಳೆ ನಡೆದ ಘರ್ಷಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಓರ್ವನನ್ನು ಬಂಧಿಸಿ 50 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಸಂಗೀತ ಕಾರ್ಯಕ್ರಮದ ವೇಳೆ ಸ್ಥಳದಲ್ಲಿ ನಿಲ್ಲಲಾಗದವರು ಗಲಾಟೆ ಮಾಡಿದ್ದು, ಜನದಟ್ಟಣೆಯಿಂದ ಬ್ಯಾರಿಕೇಡ್‍ಗಳಿಗೂ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಕಾರ್ಯಕ್ರಮವನ್ನು ನಿಲ್ಲಿಸಲು ಒತ್ತಾಯಿಸಿದ್ದಾರೆ. ಆದರೆ ಅಲ್ಲಿ ನೆರೆದಿದ್ದ ಗುಪೊಂದು ಕಲ್ಲು ಹಾಗೂ ಬಿಯರ್ ಬಾಟಲಿಗಳನ್ನು ಪೊಲೀಸರ ಮೇಲೆ ತೂರಿ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ಕರೆಸಿ ಪರಿಸ್ಥಿತಿ ನಿಯಂತ್ರಿಸಲಾಯಿತು.
ಘಟನೆಯಲ್ಲಿ 6 ಪೊಲೀಸರು ಹಾಗೂ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಈ ಕುರಿತು ವೆಲ್ಲಾಯಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 50 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹಿಜಬ್‍ಗೆ ಅವಕಾಶ ಇಲ್ಲದ ಕಾಲೇಜಿನಿಂದ ಟಿಸಿ ಪಡೆದ ವಿದ್ಯಾರ್ಥಿನಿಯರು
ಮಂಗಳೂರು: ಫಾಜಿಲ್ ಹತ್ಯೆಯಿಂದ ಸುದ್ದಿಯಾಗಿದ್ದ ಸುರತ್ಕಲ್ ಈಗ ಅತ್ಯಾಚಾರ ಪ್ರಕರಣದಿಂದ ಸುದ್ದಿಯಾಗಿದೆ. ಬೀಚ್‌ನಲ್ಲಿ ಪ್ರಿಯಕರನ ಜೊತೆಗೆ ಬಂದಿದ್ದ ಯುವತಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ.
ಯುವತಿ ನೀಡಿದ ದೂರಿನ ಆಧಾರದಲ್ಲಿ ಮುನಾಜ್ ಅಹಮದ್ ಎಂಬಾತನನ್ನು ಬಂಧಿಸಲಾಗಿದೆ. ಮೀನು ಲಾರಿಯಲ್ಲಿ ಡ್ರೈವರ್ ಆಗಿರುವ ರೇಪಿಸ್ಟ್ ಮುನಾಜ್ ಈ ಹಿಂದೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ. ಈಗ ಅತ್ಯಾಚಾರ ಆರೋಪಿಯಾಗಿರುವ ಮುನಾಜ್‌ನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಸುರತ್ಕಲ್ ಎನ್‌ಐಟಿಕೆ ಬೀಚ್ ಪರಿಸರಕ್ಕೆ ಜುಲೈ 27 ರಂದು ಹಿಂದೂ ಯುವಕನ ಜೊತೆ ಮಂಗಳೂರಿನ ಮುಸ್ಲಿಮ್ ಯುವತಿ ಬಂದಿದ್ದಳು. ಕಡಲ ತೀರದಲ್ಲಿ ಹಿಂದೂ ಯುವಕನ ಜೊತೆ ಮಾತನಾಡುತ್ತಿದ್ದ ವೇಳೆ ಮುನಾಜ್ ಅಹಮದ್ ಬಂದಿದ್ದಾನೆ.
ಹಿಂದೂ ಯುವಕನ ಜೊತೆ ಯಾಕೆ ಸುತ್ತಾಡುತ್ತಿಯಾ ಎಂದು ಯುವತಿಯನ್ನು ಮುನಾಜ್ ತರಾಟೆಗೆ ತೆಗೆದುಕೊಂಡು ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಯುವಕ ಮತ್ತು ಯುವತಿಯ ವಿಡಿಯೋ ಚಿತ್ರೀಕರಿಸಿ ಮನೆಯವರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಖಾಸಗಿ ಬಸ್ – ಕಾರ್ ನಡುವೆ ಭೀಕರ ಅಪಘಾತ – ಓರ್ವ ಸಾವು, 6 ಮಂದಿಗೆ ಗಾಯ
ಹಲ್ಲೆ ನಡೆದ ಮೇಲೆ ಯುವಕ ಸ್ಥಳದಿಂದ ಓಡಿ ಹೋಗಿದ್ದಾನೆ. ಬಳಿಕ ಬೀಚ್ ಪರಿಸರದಲ್ಲೇ ಯುವತಿಯ ಮೇಲೆ ಅತ್ಯಾಚಾರಗೈದಿದ್ದಾನೆ. ಅತ್ಯಾಚಾರ ಮಾಡಿದ ಬಳಿಕ ವೀಡಿಯೋ ಸೆರೆ ಹಿಡಿದು ಕಿರುಕುಳ ನೀಡಲು ಆರಂಭಿಸಿದ್ದಾನೆ. ಸಂತ್ರಸ್ತ ಯವತಿ ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ದೇಶಾದ್ಯಂತ 75 ಸಮುದ್ರ ತೀರಗಳಲ್ಲಿ 75 ದಿನಗಳ ಕಾಲ ಕರಾವಳಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.
ಭೂ ವಿಜ್ಞಾನ ಸಚಿವಾಲಯದ ಪ್ರಧಾನ ಕಚೇರಿಯ ಪೃಥ್ವಿ ಭವನದಲ್ಲಿ ಮುಂಬರುವ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಸಿದ್ಧತೆಗಳನ್ನು ಪರಿಶೀಲಿಸಿದ ಅವರು, ಈ ವರ್ಷ ಜು. 3 ರಿಂದ ಸೆ. 17ರವರೆಗೆ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಪ್ರತಿವರ್ಷ ಸೆ. 3ನೇ ಶನಿವಾರದಂದು ಆಯೋಜಿಸಲಾಗುವ ವಾರ್ಷಿಕ ಕಾರ್ಯಕ್ರಮವು ಈ ವರ್ಷ ಸೆ. 17ರಂದು ಬಂದಿದೆ ಎಂದು ಹೇಳಿದರು.
ಇದು ಕಾಕತಾಳೀಯ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವೂ ಅಂದೇ ಆಗಿದೆ. ಅಂದು ಸಮುದ್ರದ ಬೀಚ್ ರಕ್ಷಣೆ, ಪರಿಸರ ಮತ್ತು ಹವಾಮಾನ ರಕ್ಷಣೆಯ ನಿಟ್ಟಿನಲ್ಲಿ ಸ್ವಚ್ಛಗೊಳಿಸಲಾಗುವುದು ಎಂದು ತಿಳಿಸಿದರು.
ಈ ವರ್ಷದ ಕಾರ್ಯಕ್ರಮವನ್ನು ದೇಶದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಜೊತೆಗೆ ಆಚರಿಸಲಾಗುತ್ತದೆ. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮದುವೆಗೆ ಅಡ್ಡಿಯಾಯ್ತು ಕುಜ ದೋಷ – ಮಹಿಳಾ ಪೊಲೀಸ್ ಬಲಿ
ಪಣಜಿ: ಕಳೆದ ವಾರ ಉತ್ತರ ಗೋವಾದ ಅರಂಬೋಲ್ ಸ್ವೀಟ್ ವಾಟರ್ ಬೀಚ್‍ನಲ್ಲಿ ಬ್ರಿಟಿಷ್ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪತಿಯೊಂದಿಗೆ ರಜೆಯ ಮೇಲೆ ಗೋವಾದಲ್ಲಿರುವ ಸಂತ್ರಸ್ತೆ ಸೋಮವಾರ (ಜೂನ್ 6) ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ, ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ನೇಣಿಗೆ ಶರಣು
ಉಡುಪಿ: ಅರಬ್ಬೀ ಸಮುದ್ರದ ಅಬ್ಬರ ಜೋರಾಗಿರುವುದರಿಂದ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರ ಆಕರ್ಷಣೆಗೋಸ್ಕರ ನಿರ್ಮಾಣವಾಗಿದ್ದ ತೇಲುವ ಸೇತುವೆ ವಾಟರ್ ಸ್ಪೋರ್ಟ್ಸ್ ನ್ನು ಸ್ಥಗಿತ ಮಾಡಲಾಗಿದೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ನಿರ್ಮಾಣವಾಗಿದ್ದ ಸಮುದ್ರದ ತೇಲುವ ಸೇತುವೆ, ಮಲ್ಪೆ ಬೀಚ್‍ನ ಪ್ರಮುಖ ಆಕರ್ಷಣೆಯಾಗಿತ್ತು. ಕಳೆದ ಮೂರು ದಿನಗಳಿಂದ ಸಾವಿರಾರು ಪ್ರವಾಸಿಗರು ಬಂದು ಮೋಜುಮಸ್ತಿಯಲ್ಲಿ ತೊಡಗಿದ್ದರು. ಸಮುದ್ರದ ಅಬ್ಬರ ಜಾಸ್ತಿ ಇರುವುದರಿಂದ ತೇಲುವ ಸೇತುವೆ ಸೇರಿದಂತೆ ಎಲ್ಲಾ ವಾಟರ್ ಸ್ಪೋರ್ಟ್ಸ್ ಗಳನ್ನು ಸ್ಥಗಿತ ಮಾಡುವುದಾಗಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಹೇಳಿದೆ.
ಸೇತುವೆಯ ಬಿಡಿಭಾಗಗಳನ್ನು ಮೇಲಕ್ಕೆತ್ತುವ ಸಂದರ್ಭದಲ್ಲಿ ಸ್ಥಳೀಯರು ವೀಡಿಯೋ ಮಾಡಿದ್ದು ಸೇತುವೆ ಮುರಿದಿದೆ ಎಂದು ವೀಡಿಯೋಗಳನ್ನು ಹರಿಬಿಟ್ಟಿದ್ದಾರೆ. ತೇಲುವ ಸೇತುವೆಗೆ ಯಾವುದೇ ಸಮಸ್ಯೆಗಳು ಆಗಿಲ್ಲ, ಬೀಚ್ ಅಭಿವೃದ್ಧಿ ಸಮಿತಿಯವರು ಅಲೆಗಳ ಅಬ್ಬರ ಜಾಸ್ತಿ ಇರುವುದರಿಂದ ಫ್ಲೋಟಿಂಗ್ ಬ್ರಿಡ್ಜ್ ಮೇಲಕ್ಕೆತ್ತಲಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕಾದಿಂದ ವಾಪಸ್ಸಾದ ದಂಪತಿಯನ್ನು ಕೊಂದೇ ಬಿಟ್ಟ ಕಾರು ಡ್ರೈವರ್!
ಬೇಸಿಗೆ ಬಂದತೆಂದರೆ ಬಹುತೇಕ ನಟ ನಟಿಯರು ಮಾಲ್ಡೀವ್ಸ್ ಎನ್ನುವ ಭೂಮಿ ಮೇಲಿನ ಸ್ವರ್ಗಕ್ಕೆ ಹಾರುತ್ತಾರೆ. ಈ ಸ್ವರ್ಗಕ್ಕೆ ಕರೆಯಿಸಿಕೊಳ್ಳುವುದಕ್ಕಾಗಿಯೇ ಮಾಲ್ಡೀವ್ಸ್ ನ ಅನೇಕ ಏಜನ್ಸಿಗಳು ಸಿಲಿಬ್ರಿಟಿಗಳಿಗೆ ಗಾಳ ಹಾಕುತ್ತವೆ. ಒಂದಷ್ಟು ನಿಬಂಧನೆಗಳೊಂದಿಗೆ ಒಪ್ಪಂದವಾದರೆ, ವಾಲ್ಡೀವ್ಸ್ ನ ಸ್ವರ್ಗಗದಲ್ಲಿ ಕೆಲ ದಿನಗಳ ಕಾಲ ಉಚಿತವಾಗಿ ಕಳೆಯಬೇಕು.
ಒಪ್ಪಂದಗಳೇನು ಭಾರೀ ಕಠಿಣವಾದವುಗಳು ಅಲ್ಲ, ನಟಿಯರು ಕಡ್ಡಾಯವಾಗಿ ಬಿಕಿನಿ ಧರಿಸಬೇಕು ಮತ್ತು ಆ ವಿಡಿಯೋ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಬೇಕು. ತಾವು ಯಾವ ಸ್ಥಳದಲ್ಲಿ ಇದ್ದೇವೆ ಎನ್ನುವುದು ಸ್ಪಷ್ಟವಾಗಿ ನಮೂದಿಸಿರಬೇಕು. ಇದು ಪ್ರವಾಸಿ ಸ್ಥಳಗಳನ್ನು ಆಕರ್ಷಿಸಲು ಮಾಲ್ಡೀವ್ಸ್ ಮಾಡಿಕೊಂಡಿರುವ ವಿಶೇಷ ಪ್ಯಾಕೇಜ್. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು
ಅಂತಹದ್ದೇ ಭೂಮಿ ಮೇಲಿನ ಸ್ವರ್ಗದಲ್ಲಿ ಆನಂದವಾಗಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ. ಬೀಚ್ ಬಳಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಕ್ಯಾಟ್ ವಾಕ್ ಎನ್ನುವಂತೆ ಮೆಲ್ಲನೆ ಕೆಲವು ಹೆಜ್ಜೆಗಳನ್ನು ಇಟ್ಟು ಪಡ್ಡೆಗಳ ಕಣ್ಣಿಗೆ ಹಬ್ಬವಾಗಿದ್ದಾರೆ. ಇದನ್ನೂ ಓದಿ : ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ
ಈಗಷ್ಟೇ ಬಾಲಿವುಡ್ ನ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ರಜೆ ಕಳೆಯಲು ಮಾಲ್ಡೀವ್ಸ್ಗೆ ಹಾರಿರುವ ತಮ್ಮನ್ನಾ ಕೆಲ ದಿನಗಳ ಕಾಲ ಫ್ರೆಂಡ್ಸ್ ಜತೆ ಅಲ್ಲಿಯೇ ತಂಗಲಿದ್ದಾರೆ. ನಂತರ ಮತ್ತೆ ಶೂಟಿಂಗ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರಂತೆ.
ಮಂಗಳೂರು: ಕರಾವಳಿ ಜಿಲ್ಲೆಯ ಸೌಂದರ್ಯ, ನಮ್ಮ ಪ್ರವಾಸೋದ್ಯಮದ ಕನ್ನಡಿ ಎಂದರೆ ಅದು ನಮ್ಮ ಬೀಚ್‍ಗಳು. ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ಸ್ವಚ್ಛವಾಗಿರುವುದರ ಜೊತೆಗೆ ಕಡಲ ತೀರವನ್ನು ಸ್ವಚ್ಛವಾಗಿ ಇರಿಸಬೇಕಾದ ಅಗತ್ಯವಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕ್ರೆಡೈ ಮಂಗಳೂರು ಮತ್ತು ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಆಶ್ರಯದಲ್ಲಿ ಸ್ಮಾರ್ಟ್ ಸಿಟಿ ‘ಕ್ಲೀನ್ ಬೀಚ್’ ಜಾಗೃತಿಗಾಗಿ ಓಟ ಹಾಗೂ ಸ್ವಚ್ಛತಾ ಕಾರ್ಯಕ್ರಮ ಇಂದು ಮಂಗಳೂರಿನ ಪಣಂಬೂರು ಬೀಚ್‍ನಲ್ಲಿ ನಡೆಯಿತು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಪಂಚಾಯತ್ ಸಿಇಒ ಡಾ.ಕುಮಾರ್, ನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಕ್ರೆಡೈ ಮಂಗಳೂರು ಇದರ ಅಧ್ಯಕ್ಷ ಪುಷ್ಪರಾಜ ಜೈನ್, ಕೆಐಒಸಿಎಲ್ ಜನರಲ್ ಮ್ಯಾನೇಜರ್ ರಾಮಕೃಷ್ಣ ರಾವ್.ಹೆಚ್, ಸೀನಿಯರ್ ಮ್ಯಾನೇಜರ್ ಮುರುಗೇಶ್, ಮಂಗಳೂರು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ, ಬೈಕಂಪಾಡಿ ಮೊಗವೀರ ಮಹಾಸಭಾದ ಅಧ್ಯಕ್ಷ ವಸಂತ ಅಮೀನ್, ಯತೀಶ್ ಬೈಕಂಪಾಡಿ, ಯಂಗ್ ಸ್ಟಾರ್ ಪಣಂಬೂರು ಅಧ್ಯಕ್ಷ ನವೀನ್ ಸಾಲಿಯಾನ, ಸಂತೋಷ್ ಗುರಿಕಾರ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೀಚ್ ಸ್ವಚ್ಛತಾ ಜಾಗೃತಿ ಓಟ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರವಾರ: ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ನಡೆಯುತಿದ್ದ ಜಲಸಾಹಸ ಕ್ರೀಡೆಯು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಆರಂಭವಾಗಿದೆ.
ಭಾರತದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪವನ್ನು ಹೊರತುಪಡಿಸಿದರೆ ಎರಡನೇ ಮತ್ತು ಅತ್ಯಂತ ಸುರಕ್ಷತೆ ಇರುವ ನೇತ್ರಾಣಿ ದ್ವೀಪದಲ್ಲಿ ಮಾತ್ರ ಸ್ಕೂಬಾ ಡೈವ್ ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನೇತ್ರಾಣಿ ಅಡ್ವೆಂಚರ್ಸ್ 2009ರ ಡಿಸೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ ಮುರುಡೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಪ್ಯಾಡಿ ನೋಂದಾಯಿತ ಡೈವ್ ಕೇಂದ್ರವಾಗಿದ್ದು, ಸ್ಕೂಬಾ ಡೈವರ್ ಗಳು ಮತ್ತು ಬೋಧಕರಿಗೆ ಮಹತ್ವಾಕಾಂಕ್ಷೆಯ ಡಿಸ್ಕವರ್ ಸ್ಕೂಬಾ ಡೈವ್ ಮತ್ತು ವೃತ್ತಿಪರ ಪ್ರಮಾಣೀಕರಣ ಕೋರ್ಸ್‍ಗಳನ್ನು ನೀಡುತ್ತದೆ. ಪ್ಯಾಡಿ ಜಾಗತಿಕ ಮಾನದಂಡಗಳ ಪ್ರಕಾರ ನೇತ್ರಾಣಿ ಅಡ್ವೆಂಚರ್ಸ್ ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತದೆ. ಸ್ಕೂಬಾ ಡೈವಿಂಗ್ ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗುತ್ತದೆ ಮತ್ತು ಮೇ ಅಂತ್ಯದವರೆಗೆ ನಡೆಯುತ್ತದೆ. ಆದರೇ ಇದೀಗ ಜಿಲ್ಲಾಡಳಿತ ಒಂದು ತಿಂಗಳು ಮಾತ್ರ ಸ್ಕೂಬಾ ಡೈವ್‍ಗೆ ಅವಕಾಶ ಮಾಡಿಕೊಟ್ಟಿದೆ.
ಏನಿದು ಸ್ಕೂಬಾ ಡೈವ್?ಹೇಗಿರುತ್ತೆ ಕಡಲಾಳದ ಸೌಂದರ್ಯ?
ಸಮುದ್ರದಾಳದಲ್ಲಿ ಇಳಿದು ಅಲ್ಲಿನ ಜೀವಚರಗಳನ್ನು ವೀಕ್ಷಿಸುವುದೇ ಸ್ಕೂಬಾ ಡೈವ್. ಇದಕ್ಕಾಗಿ ಆಕ್ಸಿಜನ್ ಸಿಲಿಂಡರ್ ತುಂಬಿದ ಪರಿಕರಗಳನ್ನು ಹಾಕಿಕೊಂಡು ಸಮುದ್ರದ ಮಧ್ಯಭಾಗದಲ್ಲಿ ಜಂಪ್ ಮಾಡುವ ಮೂಲಕ ಕಡಲಿನ ಆಳಕ್ಕೆ ಇಳಿಯಲಾಗುತ್ತದೆ. ಇದಕ್ಕಾಗಿ ಈಜು ಬರಬೇಕು ಎಂದೇನೂ ಇಲ್ಲ. ಆದರೇ ಧೈರ್ಯ ಬೇಕು. ಇನ್ನು ಸುರಕ್ಷತೆ ದೃಷ್ಟಿಯಿಂದ ನುರಿತ ತರಬೇತುದಾರರು ಸಹಾಯಕ್ಕೆ ಇರುತ್ತಾರೆ. ಉಸಿರಾಟದ ಸಾಧನ ಧರಿಸಿ ನೀರೊಳಗೆ ಮುಳುಗಿ ಹವಳಗಳನ್ನು ನೋಡುವ, ಮೀನಿನಂತೆ ಸಮುದ್ರದಲ್ಲಿ ಈಜಾಡಬೇಕು ಎನ್ನುವ ಆಸಕ್ತಿ ಇರುವ ಯಾವುದೇ ವ್ಯಕ್ತಿ ಸ್ಕೂಬಾ ಡೈವಿಂಗ್ ಮಾಡಬಹುದು. ನೀರಿನ ಅಡಿಯಲ್ಲಿ ಸಂವಹನಕ್ಕಾಗಿ ಬಳಸಬೇಕಾದ ವಿವಿಧ ಕೈ ಸನ್ನೆಗಳು, ಮೂಲ ಉಸಿರಾಟದ ತತ್ವಗಳು ಮತ್ತು ಉಪಕರಣಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಆಸಕ್ತರಿಗೆ ಮಾರ್ಗದರ್ಶಕರು ತಿಳಿಸಿಕೊಡುತ್ತಾರೆ. ಕೈ ಚಿಹ್ನೆಗಳನ್ನು ತಪ್ಪಾಗಿ ಗ್ರಹಿಸಬಾರದು, ಕಿವಿಗಳ ಮೇಲಿನ ಒತ್ತಡವನ್ನು ಹೇಗೆ ಸಮನಾಗಿಸುವುದು ಎಂಬುದನ್ನು ಕಲಿಯುವುದು ಅವಶ್ಯಕ. ಕೆಲವು ನಿರ್ವಾಹಕರು ತೀರದ ಬಳಿ ಅಥವಾ ಈಜುಕೊಳದಲ್ಲಿ ಪ್ರಾತ್ಯಕ್ಷಿಕೆ ನೀಡಿ ವಿವರಿಸುತ್ತಾರೆ. ನಂತರ ಹವಳಗಳಿರುವ ತಾಣಕ್ಕೆ ದೋಣಿಯಲ್ಲಿ ಹೋಗಿ ಗೈಡ್ ಮತ್ತು ಹವ್ಯಾಸಿ ಮುಳುಗುಗಾರರು ಇಬ್ಬರೂ ನೀರಿಗೆ ಧುಮುಕಿ ನೀರೊಳಗಿನ ಮೀನುಗಳು ಮತ್ತು ಹವಳಗಳನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತಾರೆ. ಇದನ್ನೂ ಓದಿ: ಸಮುದ್ರದಾಳದಲ್ಲಿ ಪತಿ ಜೊತೆ ನಟಿಯ ಸ್ಕೂಬಾ ಡೈವಿಂಗ್
ನೇತ್ರಾಣಿ ದ್ವೀಪದಲ್ಲಿ ಹವಳದ ದಿಬ್ಬಗಳು, ಡಾಲ್ಫಿನ್‍ಗಳು, ವಿವಿಧ ಜಾತಿಯ ಆಮೆಗಳು, ಚಿಟ್ಟೆ ಮೀನು, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು ಮತ್ತು ಸೀಗಡಿ ಮೀನುಗಳು ಕಂಡು ಬರುತ್ತವೆ. ಓರ್ಕಾ ಮತ್ತು ತಿಮಿಂಗಿಲಗಳನ್ನೂ ಸಹ ಇಲ್ಲಿ ನೋಡಬಹುದಾಗಿದ್ದು ಅಪರೂಪದ ಜಲಚರಗಳ ಆಗರವಾಗಿದ್ದು ಇವುಗಳನ್ನು ಸಮುದ್ರದಾಳಕ್ಕೆ ಇಳಿದು ವೀಕ್ಷಿಸಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ದೇವಾಲಯ ಪಟ್ಟಣವಾದ ಮುರುಡೇಶ್ವರದಿಂದ ಸುಮಾರು 10 ನಾಟಿಕಲ್ ಮೈಲುಗಳಷ್ಟು (19 ಕಿ.ಮೀ) ದೂರದಲ್ಲಿರುವ ಪಾರಿವಾಳ ದ್ವೀಪ ಎಂದೂ ಕರೆಯಲ್ಪಡುವ ನೇತ್ರಾಣಿ ಮೇಲಿನಿಂದ ಹೃದಯ ಆಕಾರದಲ್ಲಿ ಕಾಣುತ್ತದೆ ಇದನ್ನು ‘ಭಾರತದ ಡೈವಿಂಗ್‍ನ ಹೃದಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಭಾರತೀಯ ನೌಕಾದಳವು ಸಮರಾಭ್ಯಾಸ ಮಾಡುವ ಪ್ರದೇಶವೂ ಇದಾಗಿದ್ದು, ಹಿಂದೆ ಈ ಭಾಗಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೇ ಜಿಲ್ಲಾಡಳಿತದ ದೂರ ದೃಷ್ಟಿಯಿಂದ ಇದೀಗ ಈ ಭಾಗದಲ್ಲಿ ಪ್ರವಾಸಿಗರಿಗೆ ತೆರಳಲು ಅವಕಾಶಗಳನ್ನು ನೀಡಿದೆ. ಇದನ್ನೂ ಓದಿ: ದುಬೈನಲ್ಲಿ ಸ್ಕೈ ಡೈವ್ ಮಾಡಿದ ನೀರಜ್
ತೆರಳುವುದು ಹೇಗೆ? ವ್ಯವಸ್ಥೆ ಏನು?
ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಪಶ್ವಿಮ ಕರಾವಳಿ ತೀರ ಪ್ರದೇಶವಾಗಿದೆ. ಬಸ್, ರೈಲು ಹಾಗೂ ವಿಮಾನದಲ್ಲಿ ಸಹ ಇಲ್ಲಿಗೆ ಬರಬಹುದಾಗಿದೆ. ಗೋಕರ್ಣದಿಂದ ಕೇವಲ 54 ಕಿ.ಮೀ ದೂರದಲ್ಲಿದೆ.
ವಿಮಾನದ ಮೂಲಕ:
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದಕ್ಷಿಣಕ್ಕೆ 153 ಕಿ.ಮೀ ದೂರದಲ್ಲಿದೆ. ಇದು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ಮತ್ತು ವಿದೇಶದಲ್ಲಿರುವ ಕೆಲವು ಸ್ಥಳಗಳಿಗೆ ಸಂಪರ್ಕ ಹೊಂದಿದೆ. ಮುರುಡೇಶ್ವರ ತಲುಪಲು ವಿಮಾನ ನಿಲ್ದಾಣದಿಂದ ಟ್ಯಾಕ್ಸಿಗಳು ಲಭ್ಯವಿದೆ.
ರೈಲಿನ ಮೂಲಕ:
ಮುರುಡೇಶ್ವರ ರೈಲು ನಿಲ್ದಾಣವು ಮಂಗಳೂರು ಮತ್ತು ಮುಂಬೈಗೆ ಸಂಪರ್ಕ ಹೊಂದಿದೆ. ಮಂಗಳೂರು ಪ್ರಮುಖ ರೈಲುಮಾರ್ಗವಾಗಿದ್ದು, ಇದು ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಮುರುಡೇಶ್ವರ ರೈಲು ನಿಲ್ದಾಣವು ಪಟ್ಟಣದಿಂದ ಪೂರ್ವಕ್ಕೆ ಕೇವಲ 2 ಕಿ.ಮೀ ದೂರದಲ್ಲಿದೆ ಮತ್ತು ಬಸ್ಸುಗಳು ಮತ್ತು ಆಟೋರಿಕ್ಷಾಗಳ ಮೂಲಕ ತಲುಪಬಹುದಾಗಿದೆ.
ರಸ್ತೆ ಮಾರ್ಗ:
ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ಮುರುಡೇಶ್ವರನನ್ನು ಮುಂಬೈ, ಕೊಚ್ಚಿ ಮತ್ತು ಬೆಂಗಳೂರಿಗೆ ಸಂಪರ್ಕಿಸುತ್ತವೆ. ಮುಂಬೈಯನ್ನು ಕೊಚ್ಚಿಗೆ ಸಂಪರ್ಕಿಸುವ ಎನ್‍ಎಚ್-17 ನಲ್ಲಿ ನೆಲೆಗೊಂಡಿರುವ ಸಾಮಾನ್ಯ ಬಸ್‍ಗಳು ಎರಡು ನಗರಗಳ ನಡುವೆ ನಿಯಮಿತವಾಗಿ ಚಲಿಸುತ್ತವೆ ಮತ್ತು ಮಂಗಳೂರಿನ ಮೂಲಕ ಹಾದು ಹೋಗುತ್ತವೆ. ಬೆಂಗಳೂರು ಈ ಪ್ರದೇಶದ ಇತರ ಹಲವು ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ.
ವಸತಿ ವ್ಯವಸ್ಥೆ:
ಮುರಡೇಶ್ವರ ಪ್ರಸಿದ್ಧ ಪ್ರವಾಸಿ ಸ್ಥಳವಾದ್ದರಿಂದ ವಸತಿ ವ್ಯವಸ್ಥೆ ಸಾಕಷ್ಟಿದೆ. ಖಾಸಗಿ ಲಾಡ್ಜ್‍ಗಳು, ಸರ್ಕಾರಿ ವಸತಿಗೃಹ ಹಾಗೂ ಹೋಮ್ ಸ್ಟೇಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇಲ್ಲಿಗೆ ಬರುವವರು ಸ್ಕೂಬಾ ಡೈ ಜೊತೆಗೆ ಹೊನ್ನಾವರ ಭಾಗದ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಹೊಂದಿದ ಇಕೋ ಬೀಚ್ ಸೌಂದರ್ಯ ಸವಿಯುವ ಜೊತೆಗೆ ಕಾಂಡ್ಲ ವನದಲ್ಲಿ ವಾಕ್ ಸಹ ಮಾಡಬಹುದಾಗಿದ್ದು, ಪ್ರವಾಸಿಗರಿಗೆ ಅತೀ ಕಡಿಮೆ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ಇಲ್ಲಿ ವ್ಯವಸ್ಥೆ ಮಾಡಿದೆ.
ಕಾರವಾರ: ಈಜಲು ಹೋಗಿ ಸಮುದ್ರದ ಪಾಲಾಗುತಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.
ಹುಬ್ಬಳ್ಳಿ ಮೂಲದ ರೋಹಿತ್ ಪಾಟೀಲ್(21) ರಕ್ಷಣೆಗೊಳಗಾದ ಯುವಕ. ಐದು ಜನರು ಹುಬ್ಬಳ್ಳಿಯ ರೇಣುಕಾ ನಗರದಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಇಳಿದಿದ್ದ ರೋಹಿತ್ ಅಲೆಯ ಅಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿದ್ದರು. ಇದನ್ನೂ ಓದಿ: ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ
ಇದನ್ನು ಗಮನಿಸಿದ ಪೊಲೀಸ್ ಸಿಬ್ಬಂದಿ ಮಂಜುನಾಥ್ ಉಪ್ಪಾರ್, ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್, ಲೈಫ್ ಗಾರ್ಡ ರವಿ ಪೂಜಾರಿ ಅವರು ಸ್ಥಳೀಯರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ.