Tag: ಬೀಗ

  • ಪತ್ನಿಯ ಗುಪ್ತಾಂಗದಲ್ಲಿ ರಂಧ್ರ ಮಾಡಿ ಬೀಗ ಜಡಿದು ವಿಕೃತಿ ಮೆರೆದ ಪತಿ!

    ಪತ್ನಿಯ ಗುಪ್ತಾಂಗದಲ್ಲಿ ರಂಧ್ರ ಮಾಡಿ ಬೀಗ ಜಡಿದು ವಿಕೃತಿ ಮೆರೆದ ಪತಿ!

    ಪುಣೆ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಗುಪ್ತಾಂಗವನ್ನು ಡ್ರಿಲ್‌ ಮಾಡಿ ಬಳಿಕ ಬೀಗ ಹಾಕಿದ ವಿಚಿತ್ರ ಪ್ರಸಂಗವೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಅಚ್ಚರಿ ಎನಿಸಿದರೂ ಸತ್ಯವಾಗಿರುವ ಈ ಘಟನೆ ಮಹಾರಾಷ್ಟ್ರದ (Maharastra) ಪಿಂಪ್ರಿ ಚಿಂಚ್ವಾಡದಲ್ಲಿ ನಡೆದಿದೆ. ವ್ಯಕ್ತಿಯನ್ನು ಉಪೇಂದ್ರ ಹುಡಕೆ ಎಂದು ಗುರುತಿಸಲಾಗಿದೆ. ನೇಪಾಳ ಮೂಲದ ಈತ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದು, ಪತ್ನಿ ಮನೆಯಲ್ಲಿಯೇ ಇರುತ್ತಿದ್ದಳು. ಸದ್ಯ ಪ್ರಕರಣ ಸಂಬಂಧ ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

    ಪತ್ನಿಗೆ ಬೇರೊಬ್ಬನ ಜೊತೆ ಸಂಬಂಧ ಇರುವ ಬಗ್ಗೆ ಉಪೇಂದ್ರ ಅನುಮಾನಗೊಂಡಿದ್ದನು. ಹೀಗಾಗಿ ಮೇ 11 ರಂದು ಕಂಠಪೂರ್ತಿ ಕುಡಿದು ಬಂದಿದ್ದ ಉಪೇಂದ್ರ, ಪತ್ನಿಗೆ ಮನಬಂದಂತೆ ಥಳಿಸಿ, ಒದ್ದಿದ್ದಾನೆ. ಬಳಿಕ ಆಕೆಯನ್ನು ಚೂಡಿದಾರದ ಶಾಲಿನಿಂದ ಕಟ್ಟಿಹಾಕಿ ಹೇಯ ಕೃತ್ಯ ಎಸಗಿದ್ದಾನೆ.

    ಹರಿತವಾದ ಬ್ಲೇಡ್‌ನಿಂದ ಗುಪ್ತಾಂಗದ ಎರಡೂ ಕಡೆ ರಂಧ್ರಗಳನ್ನು ಮಾಡಿದ್ದಾನೆ. ಕಬ್ಬಿಣದ ಸ್ಕ್ರೂಗಳನ್ನು ಹಾಕಿ ನಂತರ ಆಕೆಯ ಜನನಾಂಗದ ಪ್ರದೇಶಕ್ಕೆ ಬೀಗ ಹಾಕಿದ್ದಾನೆ. ಇತ್ತ ಪತಿಯ ನೀಚ ಕೃತ್ಯದಿಂದ ನೋವು ತಾಳಲಾರದೆ 28 ವರ್ಷದ ಪತ್ನಿ ಜೋರಾಗಿ ಕಿರುಚಾಡಿದ್ದಾಳೆ. ಆದರೂ ಪತಿ ಆಕೆಯ ಮೇಲೆ ಕಿಂಚಿತ್ತೂ ಅನುಕಂಪ ತೋರಿಸಲಿಲ್ಲ. ಇದನ್ನೂ ಓದಿ: ಅಕ್ರಮ ಮರಳು ಅಡ್ಡಾದ ಮೇಲೆ ಅಧಿಕಾರಿಗಳ ದಾಳಿ – 1.58 ಕೋಟಿ ರೂ. ಮೌಲ್ಯದ ಮರಳು ಜಪ್ತಿ

    ಮಹಿಳೆಯ ಕಿರುಚಾಟ ಕೇಳಿಸಿಕೊಂಡ ಅಕ್ಕಪಕ್ಕದ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದ ಒದ್ದಾಡುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಅಲ್ಲದೇ ಕೂಡಲೇ ಆಕೆಯನ್ನು ಹತ್ತಿರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಲೇ ವೈದ್ಯರು ತುರ್ತು ಸರ್ಜರಿ ಮೂಲಕ ಸ್ಕ್ರೂ ಹಾಗೂ ಲಾಕ್‌ ಅನ್ನು ತೆಗೆಯುವಲ್ಲಿ ಯಶಸ್ವಿಯಾದರು.

    ಪ್ರಕರಣ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಶಿಕ್ಷಕಿಯರ ನಡುವೆ ಮನಸ್ತಾಪ- ಶಾಲೆಗೇ ಬೀಗ ಜಡಿದ ಗ್ರಾಮಸ್ಥರು

    ಶಿಕ್ಷಕಿಯರ ನಡುವೆ ಮನಸ್ತಾಪ- ಶಾಲೆಗೇ ಬೀಗ ಜಡಿದ ಗ್ರಾಮಸ್ಥರು

    ತುಮಕೂರು: ಶಿಕ್ಷಕಿಯರ ನಡುವಿನ ಮನಸ್ತಾಪದಿಂದ ರೋಸಿ ಹೋದ ಗ್ರಾಮಸ್ಥರು ಶಾಲೆಗೇ ಬೀಗ ಜಡಿದಿದ್ದಾರೆ.

    ತುಮಕೂರು ತಾಲೂಕಿನ ಚಿಕ್ಕಸಾರಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಪ್ರಸಂಗ ನಡೆದಿದೆ. ಶಾಲೆಯ ಶಿಕ್ಷಕಿಯರಾದ ಗಂಗಲಕ್ಷ್ಮಮ್ಮ ಹಾಗೂ ಭಾಗ್ಯಮ್ಮ ನಡುವೆ ಪರಸ್ಪರ ವೈಷಮ್ಯ ಇದೆ. ಹೀಗಾಗಿ ಪ್ರತಿದಿನವೂ ಇವರು ಶಾಲೆಗೆ ತಡವಾಗಿ ಬರುತ್ತಿದ್ದರು.

    ಶಾಲೆಗೆ ತಡವಾಗಿ ಬರುವುದು ಮಾತ್ರವಲ್ಲದೇ ಮಕ್ಕಳಿಗೆ ಪಾಠ ಮಾಡದೇ ಸದಾ ಪರಸ್ಪರ ಜಗಳವಾಡುತ್ತಿದ್ದರು. ಶಿಕ್ಷಕಿಯರ ಈ ವರ್ತನೆ ಕಂಡು ಗ್ರಾಮಸ್ಥರು, ಪಾಠ ಮಾಡದೇ ಜಗಳವಾಡುತ್ತಾರೆಂದು ಶಾಲೆಗೆ ಬೀಗ ಹಾಕಿದ್ದಾರೆ. ಇದನ್ನೂ ಓದಿ: ಸಮ್ಮತಿಯ ಸೆಕ್ಸ್‌ನಿಂದ ಅವಿವಾಹಿತೆ ಗರ್ಭಧಾರಣೆ – 20 ವಾರಗಳ ಬಳಿಕ ಗರ್ಭಪಾತಕ್ಕೆ ಅವಕಾಶವಿಲ್ಲ: ಹೈಕೋರ್ಟ್

    Live Tv
    [brid partner=56869869 player=32851 video=960834 autoplay=true]

  • ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!

    ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!

    ಲಕ್ನೋ: ಅಯೋಧ್ಯೆಯ ರಾಮಮಂದಿರಕ್ಕೆ ಭಕ್ತರೊಬ್ಬರು 400 ಕೆಜಿಯ ಬೀಗವನ್ನು ದೇಣಿಗೆಯಾಗಿ ಕೊಡಲು ಮುಂದಾಗಿದ್ದಾರೆ.

    ಅಲಿಗಢ ಜಿಲ್ಲೆಯ ಕಮ್ಮಾರರೊಬ್ಬರು ಬರೋಬ್ಬರಿ 400 ಕೇಜಿ ತೂಕದ ಬೀಗವನ್ನು ದೇಣಿಗೆಯಾಗಿ ನೀಡಲು ಸಿದ್ಧತೆ ನಡೆಸಿದ್ದಾರೆ. ಸತ್ಯಪ್ರಕಾಶ್ ಶರ್ಮಾ ಮತ್ತು ಅವರ ಪತ್ನಿ ಕಳೆದ 6 ತಿಂಗಳಿಂದ ಈ ಬೀಗ ತಯಾರಿಕೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹಿತ್ತಾಳೆಯಿಂದ ತಯಾರಾಗುತ್ತಿರುವ ಬೀಗಕ್ಕೆ ಮೇಲ್ಮೈಗೆ ಸ್ಟೀಲ್ ಲೇಪ ಮಾಡಲಾಗಿದೆ. ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

    10 ಅಡಿ ಎತ್ತರ ಹಾಗೂ ನಾಲ್ಕೂವರೆ ಅಡಿ ಅಗಲದ ಕೀ ಇದಾಗಿದೆ. ಕೀ 30 ಕೆಜಿ ತೂಕವಿದೆ. 2,00,000 ರೂಪಾಯಿ ವೆಚ್ಚದ ಈ ಬೀಗದ ಮೇಲೆ ಭಗವಾನ್ ರಾಮನ ಚಿತ್ರವನ್ನು ಕೆತ್ತಲಾಗಿದೆ. ಇದನ್ನು ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರಕ್ಕೆ ಈ ಬೀಗವನ್ನು ಸಮರ್ಪಿಸಲಾಗುವುದು. ಹಿತ್ತಾಳೆ ಕೆಲಸ ಮುಗಿದ ನಂತರ ರಾಮಮಂದಿರಕ್ಕೆ ಬೀಗವನ್ನು ಕಳುಹಿಸಲಾಗುವುದು. ಈ ಕಲೆಯನ್ನು ಉತ್ತೇಜಿಸಲು ಸರ್ಕಾರದ ಬೆಂಬಲ ಅಗತ್ಯವಿದೆ. ಬಡ್ಡಿಗೆ ಹಣ ಪಡೆದು ಈ ಬೀಗದ ಕೆಲಸ ಮಾಡುತ್ತಿದ್ದೇನೆ ಎಂದು ಸತ್ಯಪ್ರಕಾಶ್ ತಿಳಿಸಿದರು. ಇದನ್ನೂ ಓದಿ: ಬೊಮ್ಮಾಯಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

    ಅವರ ಪತ್ನಿ ರುಕ್ಮಣಿ ಶರ್ಮಾ ಮಾತನಾಡಿ, ಸತ್ಯಪ್ರಕಾಶ್ ಬೀಗ ಹಾಕುವ ವ್ಯವಹಾರದಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸಿದ್ದಾರೆ. ಮುಂದಿನ ಪೀಳಿಗೆಗೆ ವಿಷಯಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು. ಮುಂಬರುವ ಗಣರಾಜ್ಯೋತ್ಸವದ ಪರೇಡ್‍ಗಾಗಿ ಹೊಸದಿಲ್ಲಿಯಲ್ಲಿ ದೈತ್ಯ ಬೀಗದ ಕೋಷ್ಟಕವನ್ನು ಮಾಡಲು ಯೋಜಿಸಿದ್ದಾರೆ. 20 ಇಂಚು ದಪ್ಪದ ಜೊತೆಗೆ 15 ಅಡಿ ಎತ್ತರ, 8 ಅಡಿ ಅಗಲದ ಬೀಗವನ್ನು ಮಾಡಲು ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ. ಸತ್ಯಪ್ರಕಾಶ್ ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೇಕಾಡ್ಸ್‌ನಲ್ಲಿ ತಮ್ಮ ಸಾಧನೆಯನ್ನು ದಾಖಲಿಸಲು ಬಯಸುತ್ತಾರೆ ಎಂದು ಪತ್ನಿಯ ಕೆಲಸದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

  • ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೀಗ ಜಡಿದು ಪ್ರತಿಭಟನೆ

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೀಗ ಜಡಿದು ಪ್ರತಿಭಟನೆ

    ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗಿದೆ.

    ಮಂಡಳಿಯ ಅನ್ಯಾಯದಿಂದ ನೊಂದ ಸದಸ್ಯರು ಸ್ವಂತ ಒಂದು ಬೀಗ ತಂದು ವಾಣಿಜ್ಯ ಮಂಡಳಿಗೆ ಬೀಗ ಹಾಕಿದ್ದಾರೆ. ಒಂದು ಪಕ್ಷಕ್ಕೆ ಸೀಮಿತವಾಗಿರುವ ವಾಣಿಜ್ಯ ಮಂಡಳಿಯ ನಡೆಯನ್ನು ಖಂಡಿಸಿದ್ದಾರೆ.

    ವಾಣಿಜ್ಯ ಮಂಡಳಿ ಸದಸ್ಯ ಶ್ರೀನಿವಾಸ್ ಮೇಕೆದಾಟು ಪಾದಯಾತ್ರೆ ಮತ್ತು ವಾಣಿಜ್ಯ ಮಂಡಳಿಯು ಒಂದು ಪಕ್ಷಕ್ಕೆ ಸೀಮಿತವಾಗಿದ್ದನ್ನು ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿತ್ತು. ಉಚ್ಛಾಟನೆ ಮಾಡಿದ್ದನ್ನು ಖಂಡಿಸಿ ಶ್ರೀನಿವಾಸ್, ಪುನೀತ್ ಕೆರೆಹಳ್ಳಿ ಸೇರಿದಂತೆ ಹಲವು ಮಂದಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್

    ಸದಸ್ಯತ್ವದಿಂದ ಉಚ್ಛಾಟನೆಗೊಂಡಿರುವ ಹಿನ್ನೆಲೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಕ್ರಮ ಅವ್ಯವಹಾರ ನಡೆಯುತ್ತಿದೆ. ಯಾವುದೋ ಒಬ್ಬ ವ್ಯಕ್ತಿಯ ಕಪಿಮುಷ್ಟಿಗೆ ಸಿಲುಕಿ ಸದಸ್ಯರಿಗೆ ಅನ್ಯಾಯ ಮಾಡುತ್ತಿದ್ದಾರೆ. ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ವಾಣಿಜ್ಯ ಮಂಡಳಿ ಕಲಾವಿದರ ಸಮಸ್ಯೆಗೆ ಸ್ಪಂದಿಸಬೇಕು. ಅದು ಬಿಟ್ಟು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗುವುದಲ್ಲ. ಇದನ್ನ ಪ್ರಶ್ನೆ ಮಾಡಿದ ಎಷ್ಟೋ ಸದಸ್ಯರನ್ನ ಉಚ್ಛಾಟನೆ ಮಾಡಿದ್ದಾರೆ. ಉಚ್ಛಾಟನೆ ಮಾಡೋದು ಎಷ್ಟು ಸರಿ? ದೊಡ್ಡ ಅವ್ಯವಹಾರ ನಡೆಯುತ್ತಾ ಇದೆ. ಅನ್ಯಾಯ ಆಗಿದೆ ನ್ಯಾಯ ಸಿಗಬೇಕು. ಹೀಗಾಗಿ ವಾಣಿಜ್ಯ ಮಂಡಳಿಗೆ ಬೀಗ ಹಾಕಿ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    ಪ್ರತಿಭಟನೆ ವೇಳೆ ಹೈ ಗ್ರೌಂಡ್ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ವಾಗ್ವಾದ ನಡೆದಿದೆ. ಹೈ ಗ್ರೌಂಡ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬೀಗ ತೆಗೆಯಿರೀ ಅಂತಾ ಹೇಳಿದ್ದು, ಪ್ರತಿಭಟನಕಾರರು ವಾಣಿಜ್ಯ ಮಂಡಳಿಗೆ ಹಾಕಿದ್ದ ಬೀಗ ತೆಗೆದಿದ್ದಾರೆ.

  • ರಾತ್ರೋರಾತ್ರಿ ವಸತಿ ಸಂಕೀರ್ಣಕ್ಕೆ ಬೀಗ – ಬೀದಿಗೆ ಬಿದ್ದ 32 ಕುಟುಂಬಗಳು

    ರಾತ್ರೋರಾತ್ರಿ ವಸತಿ ಸಂಕೀರ್ಣಕ್ಕೆ ಬೀಗ – ಬೀದಿಗೆ ಬಿದ್ದ 32 ಕುಟುಂಬಗಳು

    ತುಮಕೂರು: ಸಾಲ ಕಟ್ಟಿಲ್ಲ ಎಂಬ ಕಾರಣಕ್ಕೆ ರಾತ್ರೋ ರಾತ್ರಿ ವಸತಿ ಸಂರ್ಕೀಣದಲ್ಲಿದ್ದ 32 ಮನೆಗಳಿಗೂ ಕೆನರಾ ಬ್ಯಾಂಕ್ ಮತ್ತು ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಅಧಿಕಾರಿಗಳು ಬೀಗ ಹಾಕಿದ್ದಾರೆ.

    ಈ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ. ಮಂಜುನಾಥ್ ಅನ್ನೋರಿಗೆ ಸೇರಿದ ವಸತಿ ಸಂಕೀರ್ಣ ಇದಾಗಿದ್ದು, ಮನೆಗಳಿಗೆ ಬೀಗ ಹಾಕಿದ್ದರ ಪರಿಣಾಮ ಮನೆ ಮಾಲೀಕರು ಮತ್ತು ಬಾಡಿಗೆದಾರರು ರಾತ್ರೋರಾತ್ರಿ ಬೀದಿಗೆ ಬಿದ್ದಿದ್ದಾರೆ.  ಇದನ್ನೂ ಓದಿ: ರಾತ್ರಿಯಿಂದ ಬೆಂಗಳೂರಲ್ಲಿ ಜಿಟಿಜಿಟಿ ಮಳೆ – ಮಲೆನಾಡು, ಗದಗ, ಕಲಬುರಗಿ, ಕೋಲಾರ, ಚಿತ್ರದುರ್ಗದಲ್ಲೂ ವರ್ಷಧಾರೆ

    ಸಾಲದ ಕಂತು ಕಟ್ಟಿಸಿಕೊಳ್ಳದೇ ಬ್ಯಾಂಕ್ ಅಧಿಕಾರಿಗಳು ಬೇಕಂತಾನೇ ಹೀಗೆ ಮಾಡ್ತಿದ್ದಾರೆ ಎಂದು ವಸತಿ ಸಂಕೀರ್ಣದ ಮಾಲೀಕ ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

  • ಎಸ್.ಆರ್.ಎಸ್.ಐ ಮನೆಯ ಹಿಂಬಾಗಿಲ ಬೀಗ ಮುರಿದು ಕಳ್ಳತನ!

    ಎಸ್.ಆರ್.ಎಸ್.ಐ ಮನೆಯ ಹಿಂಬಾಗಿಲ ಬೀಗ ಮುರಿದು ಕಳ್ಳತನ!

    ಹಾವೇರಿ: ಮನೆಯ ಹಿಂಬಾಗಿಲ ಬೀಗ ಮುರಿದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿರುವ ಘಟನೆ ಹಾವೇರಿ ನಗರದ ಹೊರವಲಯದಲ್ಲಿರುವ ಶ್ರೀಕಂಠಪ್ಪ ಬಡಾವಣೆಯಲ್ಲಿ ನಡೆದಿದೆ.

    ನಗರದ ಅಂಥೋನಿ ಡಿಸೋಜಾ ಹಾವೇರಿ ಸಶಸ್ತ್ರ ಮೀಸಲು ಪಡೆಯ ಎಸ್.ಆರ್.ಎಸ್.ಐ ಕೆಲಸ ಮಾಡುತ್ತಿದ್ದ ಪೊಲೀಸ್ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

    ಹಿಂಬಾಗಿಲ ಬೀಗ ಮುರಿದು ಟ್ರಜರಿಯಲ್ಲಿ ಎರಡು ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂಪಾಯಿ ಕಳ್ಳತನ ಮಾಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • ಕಾಫಿನಾಡ ಏಕೈಕ ಕಾರ್ಖಾನೆಗೆ ಬೀಗ- ಕಾರ್ಮಿಕರು ಅತಂತ್ರ

    ಕಾಫಿನಾಡ ಏಕೈಕ ಕಾರ್ಖಾನೆಗೆ ಬೀಗ- ಕಾರ್ಮಿಕರು ಅತಂತ್ರ

    ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದ್ದ ಕಾಫಿನಾಡ ಏಕೈಕ ಕಾರ್ಖಾನೆ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್‍ಗೆ ಬೀಗ ಬೀಳುವ ಕಾಲ ಸನ್ನಿಹಿತವಾಗಿದ್ದು, ಕಾರ್ಖಾನೆಯನ್ನು ನೆಚ್ಚಿಕೊಂಡು ನಾಲ್ಕೈದು ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರ ಪರಿಸ್ಥಿತಿ ಅತಂತ್ರವಾಗಿದೆ.

    ಪ್ರಸ್ತುತ ಕಾರ್ಖಾನೆಯಲ್ಲಿ 60 ಜನ ಪರ್ಮೆಂಟ್ ಉದ್ಯೋಗಿಗಳು, 12 ಜನ ಟ್ರೈನಿಸ್, 10 ಆಫೀಸರ್ಸ್ ಸೇರಿದಂತೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ 180 ಕಾರ್ಮಿಕರು ಕಾರ್ಖಾನೆಯಿಂದ ಬದುಕು ಕಟ್ಟಿಕೊಂಡಿದ್ದರು. ಆದರೀಗ ಕಾರ್ಖಾನೆಗೆ ಬೀಗ ಬೀಳುತ್ತೆಂದು ನೌಕರರು ಕಂಗಾಲಾಗಿದ್ದಾರೆ. ಕಂಪನಿಯನ್ನು ಅವಲಂಬಿಸಿ 20ಕ್ಕೂ ಹೆಚ್ಚು ಫೆಲ್ಟಿಂಗ್ ಅಂಗಡಿಗಳೂ ಇವೆ. ಈಗ ಕಂಪನಿಗೆ ಬೀಗ ಬೀಳುತ್ತೆಂದು ಎಲ್ಲರೂ ಅತಂತ್ರರಾಗಿದ್ದಾರೆ.

    1984ನೇ ಇಸವಿಯಿಂದಲೂ ಕೂಡ ನೌಕರರು ಈ ಕಾರ್ಖಾನೆಯನ್ನು ಬೆಮೆಲ್ ಕಂಪನಿ ಜೊತೆ ವೀಲಿನ ಮಾಡಿಕೊಳ್ಳುವಂತೆ ನೌಕರರು ಮನವಿ ಹಾಗೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ದಿ.ಸಂಸದ ಡಿ.ಸಿ.ಶ್ರೀಕಂಠಪ್ಪ ಕೂಡ ಕಾರ್ಖಾನೆಯನ್ನ ಬೆಮೆಲ್‍ಗೆ ಸೇರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. 1992ರಿಂದ ಕಾರ್ಖಾನೆ ಸಾಕಷ್ಟು ಲಾಭ ಕಂಡಿತ್ತು. ಟ್ಯಾಕ್ಸ್ ಪೇ ಮಾಡ್ತಿದ್ದ ಸಂಸ್ಥೆ 2003ರಲ್ಲಿ ಬಿ.ಎಫ್.ಆರ್ ನಿಂದ ಹೊರಕ್ಕೆ ಬಂದಿತ್ತು. 2017-18ನೇ ಇಸವಿಯಲ್ಲೂ ಕಾರ್ಖಾನೆಗೆ ಸಾಕಷ್ಟು ಲಾಭ ಬಂದಿತ್ತು. ಈ ಕಾರ್ಖಾನೆಯನ್ನ ಸಬ್ಸಿಟ್ಯೂಟ್ ಆಗಿ ಇಟ್ಟುಕೊಂಡಿದ್ದ ಬೆಮೆಲ್‍ಗೆ ಕೇಂದ್ರ ಸರ್ಕಾರದ ನೀತಿ ಆಯೋಗ ಬೆಮೆಲ್‍ಗೆ ವಿಜ್ಞಾನ ಇಂಡಸ್ಟ್ರೀಸ್‍ನ ಮರ್ಜ್ ಮಾಡಿಕೊಳ್ಳುವಂತೆ ಸೂಚಿಸಿತ್ತು.

    ಆದರೆ ಬೆಮಲ್ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಈ ಕಾರ್ಖಾನೆಯನ್ನು ಮರ್ಜ್ ಮಾಡಿಕೊಳ್ಳದ ಬೆಮೆಲ್, ಪ್ರೈವೈಟೈಸ್ ಮಾಡಲು ಟೆಂಡರ್ ಕೂಡ ಕರೆದಿತ್ತು. ಆದರೆ ಟೆಂಡರ್ ಪಡೆಯಲು ಯಾರೂ ಮುಂದೆ ಬಾರದ ಹಿನ್ನೆಲೆ ಇದೀಗ ಈ ಕಾರ್ಖಾನೆಗೆ ಬೀಗ ಬೀಳುವ ಕಾಲ ಸನ್ನಿತವಾಗಿದ್ದು ನೌಕರರು ಅತಂತ್ರಕ್ಕೀಡಾಗಿದ್ದಾರೆ. ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ, ನೌಕರರ ನೋವನ್ನ ಅರಿತು, ಕಾರ್ಖಾನೆಯನ್ನ ಬೆಮೆಲ್‍ಗೆ ಮರ್ಜ್ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ಮಧ್ಯೆ ಕಾಫಿನಾಡಿಗರು ಕೂಡ ಜಿಲ್ಲೆಯಲ್ಲಿರೋ ಏಕೈಕ ಕಾರ್ಖಾನೆಯನ್ನ ಉಳಿಸಿಬೇಕೆಂದು ಆಗ್ರಹಿಸಿದ್ದಾರೆ.

  • ಪೂಜಾರಿಗಳ ಜಗಳದಿಂದ ವಿಜಯಪುರದ ಪ್ರಸಿದ್ಧ ದೇವಸ್ಥಾನಕ್ಕೆ ಬೀಗ

    ಪೂಜಾರಿಗಳ ಜಗಳದಿಂದ ವಿಜಯಪುರದ ಪ್ರಸಿದ್ಧ ದೇವಸ್ಥಾನಕ್ಕೆ ಬೀಗ

    ವಿಜಯಪುರ: ಪೂಜಾರಿಗಳ ಜಗಳದಿಂದ ದೇವಸ್ಥಾನಕ್ಕೆ ಬೀಗ ಬಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ವಿಜಯಪುರ ನಗರದ ಸುಪ್ರಸಿದ್ಧ ಆದಿಲ್ ಶಾಹಿ ಕಾಲದ ಪವಾಡ ಬಸವೇಶ್ವರ ದೇವಸ್ಥಾನದ ಪೂಜೆ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದು, ಗರ್ಭಗುಡಿಗೆ ಬೀಗ ಹಾಕಲಾಗಿದೆ.

    ಚಿನ್ನಿ ಕಾಲಿಮಠ ಮತ್ತು ನಂದಿಕೋಲಮಠ ಕುಟುಂಬಗಳು ಇಲ್ಲಿ 30 ವರ್ಷಗಳಿಂದ ಪೂಜೆ ಮಾಡುತ್ತಲೇ ಬಂದಿವೆ. ಚಿನ್ನಿಕಾಲಿಮಠ 11 ತಿಂಗಳು ಮತ್ತು ನಂದಿಕೋಲಮಠ 1 ತಿಂಗಳು ಪೂಜೆ ಮಾಡುವುದಾಗಿ ತೀರ್ಮಾನವಾಗಿತ್ತು. ಆದರೆ ಇದಕ್ಕೆ ಒಪ್ಪದ ನಂದಿಕೋಲಮಠ ಮತ್ತು ಚಿನ್ನಿಕಾಲಿಮಠ ಕುಟುಂಬಸ್ಥರು ಆಗಾಗ ಬಡಿದಾಡುತ್ತಿದ್ದರು. ಮತ್ತೆ ಭಾನುವಾರ ಬೆಳಿಗ್ಗೆ ಪೂಜೆ ಮಾಡಲು ಎರಡು ಕುಟುಂಬಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಗರ್ಭಗುಡಿಗೆ ಎರಡು ಕುಟುಂಬದವರು ಪ್ರತ್ಯೇಕ ಬೀಗ ಜಡಿದಿದ್ದಾರೆ. ಇದರಿಂದ ದೇವರ ದರ್ಶನಕ್ಕಾಗಿ ಬಂದ ನೂರಾರು ಭಕ್ತರು ದೇವರ ದರ್ಶನ ಪಡೆಯದೆ ವಾಪಸ್ ಹೋಗಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಗಲಾಟೆಗೆ ಬೇಸತ್ತ ಮಠದ ಕಮಿಟಿ ಮತ್ತು ಭಕ್ತರು ಆಕ್ರೋಶಗೊಂಡು ಇವರಿಬ್ಬರ ಮೇಲೂ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಅಧಿಕಾರಿಗಳನ್ನ ಕಚೇರಿಯೊಳಗೆ ಕೂಡಿಟ್ಟ ರೈತರು!

    ಅಧಿಕಾರಿಗಳನ್ನ ಕಚೇರಿಯೊಳಗೆ ಕೂಡಿಟ್ಟ ರೈತರು!

    ಮೈಸೂರು: ಲೋಕಸಭಾ ಚುನಾವಣೆಯ ಕರ್ತವ್ಯದ ನೆಪ ಹೇಳುತ್ತಾ ನಾಲೆಗಳಿಗೆ ನೀರು ಹರಿಸುವುದನ್ನು ಮರೆತ ಅಧಿಕಾರ ವರ್ಗಕ್ಕೆ ರೈತರು ಬಿಸಿ ಮುಟ್ಟಿಸಿದ್ದಾರೆ.

    ಮೈಸೂರಿನ ಟಿ. ನರಸೀಪುರದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ರೈತರು ಅಧಿಕಾರಿಗಳನ್ನು ಕೂಡಿ ಹಾಕಿ ಕಚೇರಿಗೆ ಬೀಗ ಹಾಕಿದ್ದಾರೆ. ರೈತರು ಅನೇಕ ದಿನಗಳಿಂದ ನಾಲೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಚುನಾವಣೆಯ ಕೆಲಸ ಇದೆ ಎಂದು ನೆಪ ಹೇಳುತ್ತಾ ನೀರು ಹರಿಸುವುದನ್ನೇ ಮರೆತಿದ್ದಾರೆ.

    ನಾಲೆಯ ನೀರನ್ನೇ ನಂಬಿಕೊಂಡು ನೂರಾರು ರೈತರು ಜೀವನ ಸಾಗಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಅವರು ಅಧಿಕಾರಿಗಳನ್ನು ಕಚೇರಿಯೊಳಗೆ ಕೂಡಿ ಹಾಕಿದ್ದು, ಕೂಡಲೆ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದ್ದರು.

    ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ನೀರು ಬಿಡುವ ದಿನಾಂಕ ತಿಳಿಸುವವರೆಗೂ ಕಚೇರಿಯ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಅಧಿಕಾರಿಗಳು ಬಂದು ಸಮಾಧಾನ ಮಾಡಿ ಕಚೇರಿಯ ಬೀಗ ತೆಗೆಸಿದ್ದಾರೆ.

  • ತಮಿಳು ನಟ ವಿಶಾಲ್ ಬಂಧನ

    ತಮಿಳು ನಟ ವಿಶಾಲ್ ಬಂಧನ

    ಚೆನ್ನೈ: ತಮಿಳು ಚಿತ್ರ ನಿರ್ಮಾಪಕರ ಸಂಘದ (ಟಿಎಫ್‍ಪಿಸಿ) ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದಕ್ಕೆ ನಟ, ನಿರ್ಮಾಪಕ ವಿಶಾಲ್ ಅವರನ್ನು ಗುರುವಾರ ಚೆನ್ನೈನ ಟಿ. ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಡಿಸೆಂಬರ್ 19 ರಂದು ಕೆಲ ನಿರ್ಮಾಪಕರು ವಿಶಾಲ್ ಅವರ ವಿರುದ್ಧ ಪ್ರತಿಭಟನೆ ಮಾಡಿ ಚೆನ್ನೈನ ಟಿ. ನಗರ ಹಾಗೂ ಅಣ್ಣ ಸಲೈನಲ್ಲಿರುವ ತಮಿಳು ನಿರ್ಮಾಪಕರ ಸಂಘದ ಕಚೇರಿಗೆ ಬೀಗ ಹಾಕಿದ್ದರು. ವಿಶಾಲ್ ಅವರು 2015ರಲ್ಲಿ ನಡೆದ ಟಿಎಫ್‍ಪಿಸಿ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಅಧ್ಯಕ್ಷರಾದ ಮೇಲೆ ಮರೆತಿದ್ದಾರೆ ಎಂದು ಆರೋಪಿಸಿ ಕೆಲ ನಿರ್ಮಾಪಕರು ಅವರ ವಿರುದ್ಧ ಪ್ರತಿಭಟನೆ ಮಾಡಿದ್ದರು.

    ಇಂದು ವಿಶಾಲ್ ಹಾಗೂ ಇತರೆ ಸದಸ್ಯರು ಟಿಎಫ್‍ಪಿಸಿ ಕಚೇರಿಗೆ ಬಂದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಟಿಎಫ್‍ಪಿಸಿಗೆ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಕಚೇರಿಗೆ ಬೀಗ ಹಾಕಿದ್ದಾರೆ ಅದಕ್ಕೆ ನೀವು ಸಾಥ್ ಕೊಟ್ಟಿದ್ದೀರಿ. ಒಂದು ವೇಳೆ ಕಚೇರಿಯಲ್ಲಿ ಮುಖ್ಯವಾದ ಕೆಲಸವಿದ್ದರೆ ಸದಸ್ಯರು ಹೋಗೋದು ಹೇಗೆ? ಕಚೇರಿ ಕೆಲಸ ನಿಲ್ಲಿಸಿದರೆ ನಷ್ಟ ಯಾರಿಗೆ ಎಂದು ಪೊಲೀಸರನ್ನು ವಿಶಾಲ್ ಪ್ರಶ್ನಿಸಿದ್ದಾರೆ. ಹಾಗೆಯೆ ಕೆಲ ಕಾಲ ಪೊಲೀಸ್ ಸಿಬ್ಬಂದಿ ಹಾಗೂ ವಿಶಾಲ್ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ವಿಶಾಲ್ ಹಾಗೂ ಅವರ ಸಹಚರರು ಕಚೇರಿ ಬೀಗ ಒಡೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶಾಲ್ ಅವರನ್ನು ಬಂಧಿಸಿದ್ದಾರೆ.

    ಈ ಘಟನೆ ಕುರಿತು ನಟ ವಿಶಾಲ್ ಪ್ರತಿಕ್ರಿಯಿಸಿ, ನಾನು ಪೊಲೀಸರಿಗೆ ಹಾಗೂ ಅವರ ಕೆಲಸಕ್ಕೆ ಗೌರವ ನೀಡುತ್ತೇನೆ. ಆದರೆ ಕೆಲವು ದಾಖಲೆಗಳು ಹಾಗೂ ಲೆಕ್ಕದ ಪುಸ್ತಕಗಳನ್ನು ಇಡಲು ಕಚೇರಿ ಬೀಗ ಒಡೆಯಲು ಯತ್ನಿಸಿದೆ ಅಷ್ಟೇ ಎಂದು ಹೇಳಿದ್ದಾರೆ.

    ಟಿಎಫ್‍ಪಿಸಿಗೆ ಸಂಬಂಧವಿಲ್ಲದ ಜನರು ಕಚೇರಿಯ ಬೀಗ ಹಾಕಿಸಿದ್ದಾರೆ. ಆದರೆ ಪೊಲೀಸರು ಯಾವ ತಪ್ಪು ಮಾಡದಿದ್ದರೂ ನನ್ನನ್ನು ಹಾಗೂ ನನ್ನ ಜೊತೆಗಾರರನ್ನು ಬಂಧಿಸಿದ್ದಾರೆ. ಇದನ್ನು ನಂಬಲಾಗುತ್ತಿಲ್ಲ. ನಾವು ಈ ಪ್ರಕರಣದ ವಿರುದ್ಧ ಹೋರಾಡುತ್ತೇವೆ. ಇಳೆಯರಾಜ ಅವರ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿ ಕಷ್ಟದಲ್ಲಿರುವ ನಿರ್ಮಾಪಕರಿಗೆ ಸಹಾಯ ಮಾಡುತ್ತೇವೆ ಎಂದು ನಟ ವಿಶಾಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಸದ್ಯ ವಿಶಾಲ್, ಮಂಸೂರ್ ಅಲಿ ಖಾನ್ ಹಾಗೂ ಟಿಎಫ್‍ಪಿಸಿಯ ಇತರೆ ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv