Tag: ಬಿ ಸುರೇಶ್ ಗೌಡ

  • ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ

    ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ

    ತುಮಕೂರು: ಬಿಜೆಪಿ ಶಾಸಕ ಬಿ.ಸುರೇಶ್ ಗೌಡ (B.Suresh Gowda) ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಪರ ಬ್ಯಾಟ್ ಬೀಸಿದ್ದು, ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಅರ್ಹತೆ ಇತ್ತು. ಆದರೆ ಸಮುದಾಯದ ಮುಖಂಡರ ನಿರ್ಲಕ್ಷ್ಯದಿಂದ ಸಿಎಂ ಸ್ಥಾನದಿಂದ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ.

    ತುಮಕೂರಿನಲ್ಲಿ (Tumakuru) ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರಿಗೆ ನೂರಕ್ಕೆ ನೂರು ನಾಯಕತ್ವ ಇದೆ. ಇವತ್ತು ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಕಾರಣ ಡಿಕೆ ಶಿವಕುಮಾರ್ ಹಾಗೂ ಅವರ ಶಕ್ತಿ. ಆದರೆ ಸಮುದಾಯದ ಒಬ್ಬರೂ ಕಾಂಗ್ರೆಸ್‌ನವರು ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಲಿಲ್ಲ ಎಂದರು. ಇದನ್ನೂ ಓದಿ: ಯಾರೋ ಹುಡುಗರು ಮಾಡಿದ್ದಾರೆ, ಟ್ವೀಟ್‌ ವಿಥ್‌ ಡ್ರಾ ಮಾಡಿಸಿದ್ದೇನೆ: ಡಿಕೆ ಶಿವಕುಮಾರ್‌

    ನಾನು ಇಲ್ಲಿ ಕುಳಿತಿರುವ ಸ್ವಾಮೀಜಿಯವರ ಬಳಿ ಹೇಳುತ್ತಿದ್ದೇನೆ. ನಮ್ಮ ಸಮಾಜದ ನಾಯಕತ್ವ ಬಂದಾಗ ನಮ್ಮ ಸಮಾಜ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಧ್ವನಿ ಎತ್ತಿ ಹೇಳಬೇಕಾಗುತ್ತದೆ. ಅವತ್ತು ನ್ಯಾಯ ಸಿಗುತ್ತದೆ. ಈ ಹಿಂದೆ ದೇವೇಗೌಡರು ಮುಖ್ಯಮಂತ್ರಿ ಆಗಬೇಕಾದರೆ ಹೋರಾಟ ಮಾಡಿ ಹಕ್ಕನ್ನು ನಾವು ಕಿತ್ತುಕೊಂಡಿರುವುದಕ್ಕೆ ದೇವೇಗೌಡರು ಮುಖ್ಯಮಂತ್ರಿ ಆದರು. ಇಲ್ಲ ಅಂದರೆ ಅವತ್ತು ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವೇ ಇರುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಖಿಲ್ ಬದ್ಲು ಎಲ್ಲಿದ್ದೀಯಪ್ಪಾ ಕುಮಾರಣ್ಣ ಎಂದು ಕೇಳುವ ಸ್ಥಿತಿ ಬಂದಿದೆ: ಬಿಜೆಪಿ ಮಾಜಿ ಶಾಸಕ

    ನಿಖಿಲ್ ಬದ್ಲು ಎಲ್ಲಿದ್ದೀಯಪ್ಪಾ ಕುಮಾರಣ್ಣ ಎಂದು ಕೇಳುವ ಸ್ಥಿತಿ ಬಂದಿದೆ: ಬಿಜೆಪಿ ಮಾಜಿ ಶಾಸಕ

    -ಮಂಡ್ಯ ಜನ ಸಾಕಿದ ಹಸು ಕಥೆ ಹೇಳಿದ ಸುರೇಶ್ ಗೌಡ

    ತುಮಕೂರು: ನಿಖಿಲ್ ಎಲ್ಲಿದ್ದೀಯಪ್ಪಾ? ಬದಲು ಎಲ್ಲಿದ್ದೀಯಪ್ಪಾ ಕುಮಾರಣ್ಣ ಎಂದು ಕೇಳುವ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ ಎಂದು ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ.

    ತುಮಕೂರು ಲೋಕಸಭಾ ಕ್ಷೇತ್ರದ ಹೊನ್ನುಡುಕೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಮೇಲೆ ಸ್ತ್ರೀ ಶಕ್ತಿ, ಸಾಲ ಮನ್ನಾ, ಗರ್ಭಿಣಿಯರಿಗೆ 6 ಸಾವಿರ ರೂ, ವೃದ್ಧಾಪ್ಯ ವೇತನ ಹೆಚ್ಚಳ ನೀಡುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೂ ಜಾರಿಯಾಗಿಲ್ಲ. ಹಾಗಾಗಿ ನಿಖಿಲ್ ಬದಲು ಎಲ್ಲಿದಿಯಪ್ಪಾ ಕುಮಾರಣ್ಣ ಎಂದು ಕೇಳುವ ಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.

    ಐಸ್‍ಕ್ಯಾಂಡಿ ತಿನ್ನುತ್ತಾ, ಈಜುತ್ತಾ, ಇನ್ನೇನೆನೋ ಮಾಡುವಲ್ಲೂ ಎಲ್ಲಿದಿಯಪ್ಪಾ ನಿಖಿಲ್ ಧ್ಯಾನ ಕೇಳಿ ಬರುತ್ತಿದೆ. ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಿದ್ದ ಕುಮಾರಣ್ಣನ ಕುರಿತು ಮಂಡ್ಯದ ಜನರೇ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದರು.

    ಮಂಡ್ಯದ ಜನ ಅಭಿಮಾನದಿಂದ ‘ಜೆಡಿಎಸ್’ ಎಂಬ ಹಸು ಸಾಕಿದ್ದರು. ಕಷ್ಟಪಟ್ಟು ಮೇವು, ಬೂಸಾ ಕೊಟ್ಟು ಬೆಳೆಸಿದ್ದರು. ಆದರೆ ಅದರ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲಾ ದೇವೇಗೌಡರ ಕುಟುಂಬ ತಿನ್ನುತ್ತಿದೆ. ಮಂಡ್ಯ ಜನರಿಗೆ ಸೆಗಣಿ ಕೊಟ್ಟು, ಕೊಟ್ಟಿಗೆ ಕಸ ಗುಡಿಸಲು ದೇವೇಗೌಡರ ಕುಟುಂಬ ಹೇಳುತ್ತಿದೆ. ಹಾಗಾಗಿ ಮಂಡ್ಯ ಜನರು ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮಂಡ್ಯ ಜನತೆ ಕುಟುಂಬ ರಾಜಕಾರಣದ ವಿರುದ್ಧ ತಿರುಗಿ ಬಿದ್ದಿದ್ದು, ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿ.ಸುರೇಶ್ ಗೌಡ ಹರಿಹಾಯ್ದರು.

  • ಪೊಲೀಸ್ ಠಾಣೆಯ ಎದುರು ಮಲಗಿ ಬಿಜೆಪಿ ನಾಯಕನ ರಂಪಾಟ!

    ಪೊಲೀಸ್ ಠಾಣೆಯ ಎದುರು ಮಲಗಿ ಬಿಜೆಪಿ ನಾಯಕನ ರಂಪಾಟ!

    ತುಮಕೂರು: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡರು ಪೊಲೀಸ್ ಠಾಣೆಯ ಮುಂದೆ ಮಲಗಿ ಪ್ರತಿಭಟನೆ ಮಾಡಿದ್ದು, ಚಿಕ್ಕಪುಟ್ಟ ವಿಚಾರಕ್ಕೆಲ್ಲ ಪ್ರತಿಭಟನೆ ನಡೆಸಿ ಪೊಲೀಸರಿಗೆ ತೊಂದರೆ ಮಾಡಿದ್ದಾರೆ.

    ಬಿಜೆಪಿ ಮುಖಂಡನನ್ನು ಜಿಲ್ಲೆಯ ಕ್ಯಾತಸಂದ್ರದ ಪೊಲೀಸರು ದೂರೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆತಂದಿದ್ದರು. ಇದರಿಂದ ಸಿಡಿಮಿಡಿಗೊಂಡ ಬಿ. ಸುರೇಶ್ ಗೌಡ, ಕ್ಯಾತಸಂದ್ರದ ಪೊಲೀಸ್ ಠಾಣೆಯ ದ್ವಾರದ ಮೆಟ್ಟಿಲಿನಲ್ಲಿ ಮಲಗಿ ಅತಿರೇಕದ ಪ್ರತಿಭಟನೆ ಮಾಡಿದ್ದಾರೆ.

    ದ್ವಾರದಲ್ಲಿ ಮಲಗಿದಲ್ಲದೆ ಪಿಎಸ್‍ಐ ರಾಜು ಅವರನ್ನು ಒಳಗೆ ಬಿಡದೆ ಕೆಲಕಾಲ ಹೊರಗಡೆಯೇ ನಿಲ್ಲುವಂತೆ ಮಾಡಿ ಪೊಲೀಸರಿಗೆ ತೊಂದರೆಯನ್ನು ನೀಡಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತ ಹನುಮಂತರಾಜು ಅವರನ್ನು ಬಿಟ್ಟುಕಳಿಸುವ ಭರವಸೆ ನೀಡಿದಾಗ ಮಲಗಿದ್ದ ಗೌಡರು ಎದ್ದು ಪಿಎಸ್‍ಐ ಅವರನ್ನು ಒಳಗಡೆ ಬಿಟ್ಟಿದ್ದಾರೆ.

    ತಾಲೂಕು ಪಂಚಾಯ್ತಿಯ ಬಿಜೆಪಿ ಮಾಜಿ ಸದಸ್ಯ ಹನುಮಂತರಾಜು ವಿರುದ್ಧ ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಶಿವು ಎಂಬವರ ನಡುವೆ ಪೈಪ್ ಲೈನ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಆದ್ದರಿಂದ ಶಿವು ಅವರು ಹನುಮಂತರಾಜು ಅವರ ಮೇಲೆ ದೂರು ನೀಡಿದ್ದರು. ಹೀಗಾಗಿ ಹನುಮಂತರಾಜು ಅವರನ್ನು ಪೊಲೀಸರು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋಗಿದ್ದರು.

    ಜೆಡಿಎಸ್ ಶಾಸಕ ಗೌರಿಶಂಕರ್ ಒತ್ತಡದಿಂದ ಬಿಜೆಪಿ ಮುಖಂಡನ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ ಅನ್ನೋದು ಸುರೇಶ್ ಗೌಡರ ಆರೋಪವಾಗಿತ್ತು. ಅದಕ್ಕಾಗಿಯೆ ತಮ್ಮ ಪಕ್ಷದವರನ್ನು ಬಿಡಿಸಲು ಸುರೇಶ್ ಗೌಡ ಅವರು ಈ ರೀತಿ ರಂಪಾಟ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ಪ್ರಚಾರ ಮಾಡಲು ಹೋದ ಬಿಜೆಪಿ ಶಾಸಕರ ಪುತ್ರಿಗೆ ಗ್ರಾಮಸ್ಥರಿಂದ ತರಾಟೆ!

    ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ತಂದೆಯ ಪರ ಪ್ರಚಾರ ನಡೆಸಲು ತೆರಳಿದ್ದ ಶಾಸಕರ ಪುತ್ರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದಿದೆ.

    ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡರ ಪುತ್ರಿ ಐಶ್ವರ್ಯ ತಮ್ಮ ತಂದೆಯ ಪರ ಮತಯಾಚನೆ ಮಾಡಲು ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಗೊಲ್ಲಳ್ಳಿ ಗ್ರಾಮಸ್ಥರು ಶಾಸಕರು ತಮ್ಮ ಗ್ರಾಮಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿಲ್ಲ. ಅಭಿವೃದ್ಧಿ ಮಾಡದಿದ್ದರೂ ಮತ ಕೇಳಲು ಮಾತ್ರ ಬರುತ್ತೀರಿ ಎಂದು ಆರೋಪಿಸಿ ತರಾಟೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಐಶ್ವರ್ಯ ಗ್ರಾಮಸ್ಥರ ಪ್ರಶ್ನೆಗಳ ಸುರಿಮಳೆಗೆ ಸಮಾಜಾಯಿಸಿ ನೀಡಲು ಯತ್ನಿಸಿದ್ದಾರೆ. ಆದರೆ ಬಳಿಕ ಗ್ರಾಮಸ್ಥರ ಅಸಮಾಧಾವನ್ನು ಶಮನಗೊಳಿಸಲು ವಿಫಲರಾಗಿ ಸ್ಥಳದಿಂದ ಹಿಂದಿರುಗಿದ್ದಾರೆ.

    https://www.youtube.com/watch?v=9lt3Z0DUPx8