Tag: ಬಿ.ಶ್ರೀರಾಮುಲು

  • ಹನಿಟ್ರ‍್ಯಾಪ್‌ನ ಡೈರೆಕ್ಟರ್, ಪ್ರೊಡ್ಯುಸರ್ ಯಾರು ಅಂತ ಗೊತ್ತಾಗ್ಬೇಕಾದ್ರೆ ಸಿಬಿಐ ತನಿಖೆ ಆಗ್ಬೇಕು – ಶ್ರೀರಾಮುಲು

    ಹನಿಟ್ರ‍್ಯಾಪ್‌ನ ಡೈರೆಕ್ಟರ್, ಪ್ರೊಡ್ಯುಸರ್ ಯಾರು ಅಂತ ಗೊತ್ತಾಗ್ಬೇಕಾದ್ರೆ ಸಿಬಿಐ ತನಿಖೆ ಆಗ್ಬೇಕು – ಶ್ರೀರಾಮುಲು

    ಯಾದಗಿರಿ: ಹನಿಟ್ರ‍್ಯಾಪ್‌ನ (Honey Trap) ಡೈರೆಕ್ಟರ್ ಮತ್ತು ಪ್ರೊಡ್ಯುಸರ್ ಯಾರು ಅಂತ ಗೊತ್ತಾಗಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು (Sriramulu) ಹೇಳಿದರು.

    ಜಿಲ್ಲೆಯ ಮಹಲ್ ರೋಜಾದಲ್ಲಿ ಹನಿಟ್ರ‍್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಹನಿಟ್ರ‍್ಯಾಪ್ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಕೊಡಬೇಕು. ರಾಜ್ಯದಲ್ಲಿ ಒಂದು ಫ್ಯಾಷನ್, ಒಂದು ಟ್ರೆಂಡ್ ಸ್ಟಾರ್ಟ್ ಆಗಿದೆ. ಹನಿಟ್ರ‍್ಯಾಪ್ ಪ್ರಕರಣದಿಂದ ಇಡೀ ರಾಜ್ಯದ ಜನ ಅಸಹ್ಯಪಡುವ ಪರಿಸ್ಥಿತಿ ಬಂದಿದೆ. ಯಾವುದೇ ಪಕ್ಷದವರಿದ್ದರೂ ಈ ರೀತಿ ಹನಿಟ್ರ‍್ಯಾಪ್‌ನಿಂದ ಮುಜುಗರ ಆಗುತ್ತದೆ. ರಾಜಕೀಯದಲ್ಲಿ ಹಲವು ವರ್ಷಗಳಿಂದ ಜನರ ಪ್ರೀತಿಗಳಿಸಿ, ದೊಡ್ಡ ಮಟ್ಟಕ್ಕೆ ಮುಟ್ಟಿದ್ದೀವಿ. ಆದರೆ ಈ ರೀತಿಯ ಸಂದರ್ಭದಲ್ಲಿ ಹನಿಟ್ರ‍್ಯಾಪ್‌ನಿಂದ ಮನಸ್ಸಿಗೆ ನೋವು ಮಾಡುವ ಕೆಲಸ ಕೆಲವು ವ್ಯಕ್ತಿಗಳು ಮಾಡುತ್ತಿದ್ದಾರೆ ಎಂದರು.ಇದನ್ನೂ ಓದಿ: Sikandar ಆ್ಯಕ್ಷನ್ ಪ್ಯಾಕ್ಡ್ ಟ್ರೈಲರ್‌ ಔಟ್‌- ಸಲ್ಮಾನ್‌ ಖಾನ್‌ ಫೈಟ್‌, ರೊಮ್ಯಾನ್ಸ್‌ ನೋಡಿ ಸೂಪರ್‌ ಎಂದ ಫ್ಯಾನ್ಸ್

    ಯಾವುದೇ ಪಕ್ಷದವರು ಇರಲಿ ಸಿಬಿಐ ತನಿಖೆ ಮಾಡಬೇಕು. ಜನಪ್ರತಿನಿಧಿಗಳಿಗೆ ರಕ್ಷಣೆ ಕೊಡಬೇಕು, ಅವರ ಮೇಲಿನ ವಿಶ್ವಾಸ ಉಳಿಸಬೇಕು. ಅದಕ್ಕಾಗಿ ಈ ಹನಿಟ್ರ‍್ಯಾಪ್‌ಗೆ ಕಡಿವಾಣ ಹಾಕಬೇಕು. ಸಿಬಿಐ ತನಿಖೆಯಾದರೆ ಇದರ ಹಿಂದೆ ಯಾರಿದ್ದಾರೆಂದು ಹೊರಗಡೆ ಬರುತ್ತದೆ. ಇದಕ್ಕಿಂತ ಮುಂಚೆ ಅನೇಕರಿಗೆ ಹನಿಟ್ರ‍್ಯಾಪ್ ಆಗಿದೆ. ಹಿಂದುಳಿದ ಜಾತಿಯ ವ್ಯಕ್ತಿಗಳಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಇದೀಗ ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ‍್ಯಾಪ್‌ ಯತ್ನ ನಡೆದಿದೆ. ಪಕ್ಷಾತೀತಿವಾಗಿ ರಾಜಕಾರಣಿಗಳಿಗೆ ಈ ರೀತಿ ಆದರೆ ನೋವು ಉಂಟಾಗುತ್ತದೆ. ಇದಕ್ಕೆ ಯಾರು ಡೈರೆಕ್ಟರ್, ಯಾರು ಪ್ರೊಡ್ಯುಷರ್? ಈ ಹನಿಟ್ರ‍್ಯಾಪ್ ಫ್ಯಾಕ್ಟರಿಯನ್ನು ಯಾರು ಇಟ್ಟುಕೊಂಡಿದ್ದಾರೆ ಎನ್ನೋದು ಹೊರಬರಬೇಕಾದರೆ ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

    ಇನ್ನೂ ಇದೇ ವೇಳೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ರಾಜೀನಾಮೆ ವಿಚಾರವಾಗಿ ಮಾತನಾಡಿ, ಸಭಾಪತಿಗಳಿಗೂ ಹನಿಟ್ರ‍್ಯಾಪ್‌ನಿಂದ ಮುಜುಗರ ಆಗಿದೆ. ಇದರಿಂದ ಅವರಿಗೂ ತೊಂದರೆ ಆಗುತ್ತದೆ. 30-40 ವರ್ಷ ರಾಜಕಾರಣದಲ್ಲಿದ್ದು, ಸಭಾಪತಿಗಳಾಗಿರುತ್ತಾರೆ. ಹನಿಟ್ರ‍್ಯಾಪ್ ಬೇರೆ ಬೇರೆ ವಿಚಾರ ಬಂದಾಗ ಮುಜುಗರ ಆಗುತ್ತದೆ. ಹೊರಟ್ಟಿಯವರು ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರಿಗೂ ನೋವು ಆಗಬಾರದು ಅಂತಿದ್ರೆ ಸಿಬಿಐ ತನಿಖೆಗೆ ಕೊಡಬೇಕು. ರಾಜಕಾರಣಿಗಳ ಮೇಲೆ ಎಲ್ಲಾ ಅಸ್ತ್ರ ಉಪಯೋಗಿಸುತ್ತಾರೆ. ಇವತ್ತು ರಾಜಣ್ಣ, ಈ ಹಿಂದೆ ಎಷ್ಟು ಜನ ರಾಜಕಾರಣಿಗಳ ಮೇಲೆ ಹನಿಟ್ರ‍್ಯಾಪ್ ನಡೆದಿದೆ. ಪ್ರಾಮಾಣಿಕ ರಾಜಕಾರಣಿಗಳಿಗೆ ನೋವಾಗುತ್ತದೆ. ಇದರಿಂದಾಗಿ ಬಸವರಾಜ ಹೊರಟ್ಟಿ ಅವರಿಗೆ ನೋವಾಗಿ ರಾಜೀನಾಮೆ ಬಗ್ಗೆ ಮಾತಾಡಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: BCCIನಿಂದ ನಿರ್ಲಕ್ಷ್ಯಕ್ಕೀಡಾಗಿದ್ದ ಇಶಾನ್‌ ಕಿಶನ್‌ನಿಂದ ಬೌಂಡರಿ, ಸಿಕ್ಸರ್‌ ಸುರಿಮಳೆ – SRH ಪರ 45 ಬಾಲ್‌ಗೆ ಸೆಂಚುರಿ

     

  • ಕಾಂಗ್ರೆಸ್‌ನವರ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ: ಶ್ರೀರಾಮುಲು

    ಕಾಂಗ್ರೆಸ್‌ನವರ ಗೊಡ್ಡು ಬೆದರಿಕೆಗೆ ನಾವು ಜಗ್ಗಲ್ಲ: ಶ್ರೀರಾಮುಲು

    ಕೊಪ್ಪಳ/ಬಳ್ಳಾರಿ: ಒಂದೂವರೆ ವರ್ಷಗಳ ಕಾಲ ತುಟಿ ಬಿಚ್ಚದ ಸರ್ಕಾರ ಈಗ ಸಿದ್ದರಾಮಯ್ಯ (CM Siddaramaiah) ಹಗರಣಗಳನ್ನು ಮುಚ್ಚಿ ಹಾಕಲು ಯಡಿಯೂರಪ್ಪ, ನನ್ನ ಮೇಲೆ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಲು ಹೊರಟಿದ್ದಾರೆ ಇಂತಹ ಗೊಡ್ಡು ಬೆದರಿಕೆಗೆ ನಾವು ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು (B.Sriramulu) ಹೇಳಿದರು.ಇದನ್ನೂ ಓದಿ: ‘ಪುಷ್ಪಾ 2’ ಐಟಂ ಹಾಡಿಗೆ ಸೊಂಟ ಬಳುಕಿಸಿದ ಕನ್ನಡದ ನಟಿ ಶ್ರೀಲೀಲಾ

    ಬಳ್ಳಾರಿಯ (Ballary) ಸಂಡೂರು (Sanduru) ಕ್ಷೇತ್ರದ ಬನ್ನಿಹಟ್ಟಿ ಗ್ರಾಮದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ (Congress) ಸರ್ಕಾರದ ಗೊಡ್ಡು ಬೆದರಿಕೆ ನನಗೆ ಏನು ಮಾಡದು. ನಾನು ಸಚಿವನಾಗಿದ್ದ ಅವಧಿಯಲ್ಲಿ ಕರೋನಾ ಕಲಬುರಗಿಯಿಂದ ರಾಜ್ಯದ ತುಂಬೆಲ್ಲಾ ಹರಡಿತ್ತು. ನಾನು ಆರೋಗ್ಯ ಸಚಿವನಾಗಿದ್ದೆ. ಟಾಸ್ಕ್ ಫೋರ್ಸ್ ಮಾಡಿಕೊಂಡು, ಕೆಲಸ ಮಾಡಿದ್ದೇವೆ. ರಾಜ್ಯ ಸರ್ಕಾರ ಮಾಡುತ್ತಿರುವ ಭ್ರಷ್ಟಾಚಾರ ಮುಚ್ಚಿಹಾಕಲು, ನನ್ನ ಮೇಲೆ, ಯಡಿಯೂರಪ್ಪ ಮೇಲೆ ಪ್ರಾಸಿಕ್ಯೂಷನ್‌ಗೆ ಶಿಫಾರಸು ಮಾಡಿದ್ದಾರೆ. ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ದೇವರ ಜೊತೆ ಅಂದು ನಾವು ಕೆಲಸ ಮಾಡಿದ್ದೇವೆ. ಅವರು ಏನು, ಮಾಡುತ್ತಾರೋ, ಮಾಡಲಿ ಎಂದರು.

    ವಾಲ್ಮೀಕಿ ಹಗರಣ ಯಾಕೆ ಆಯ್ತು? ಅಂತ ನಾವು ಜನರ ಬಳಿ ಹೇಳ್ತಿದ್ದೇವೆ. ಇದನ್ನೆಲ್ಲ ಮುಚ್ಚಿಹಾಕುವ ಷಡ್ಯಂತ್ರಗಳಿಂದ ಈಗ ಕೋವಿಡ್ ವಿಚಾರ ತೆಗೆದಿದ್ದಾರೆ. ಒಂದೂವರೇ ವರ್ಷಗಳ ಕಾಲ ಏನು ಮಾಡ್ತಿದ್ರಿ? ನನ್ನ ವಿರುದ್ಧ ಒಂದೇ, ಒಂದು ಆರೋಪ ಸಾಬೀತು ಮಾಡಲಿ. ದ್ವೇಷದ ರಾಜಕಾರಣ ಒಳ್ಳೆಯದಲ್ಲ. ಪ್ರಾದೇಶಿಕ ಪಕ್ಷಗಳು ದ್ವೇಷದ ರಾಜಕಾರಣ ಮಾಡುತ್ತವೆ ಆದರೆ ರಾಷ್ಟ್ರೀಯ ಪಕ್ಷಗಳು ಈ ರೀತಿ ಮೊದಲ ಬಾರಿಗೆ ಮಾಡುತ್ತಿವೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಯೋಗ ಶಿಕ್ಷಕಿ ಕಿಡ್ನ್ಯಾಪ್‌ ಕೇಸ್: ಘಟನೆ ಬಳಿಕ ಟೆಂಪಲ್ ರನ್ ನಡೆಸಿದ್ದ ಆರೋಪಿಗಳು ಅರೆಸ್ಟ್

  • ಸಿದ್ದರಾಮಯ್ಯ ಎರಡು ನಾಲಿಗೆಯ ಹಾವು ಇದ್ದಂತೆ: ಶ್ರೀರಾಮುಲು

    ಸಿದ್ದರಾಮಯ್ಯ ಎರಡು ನಾಲಿಗೆಯ ಹಾವು ಇದ್ದಂತೆ: ಶ್ರೀರಾಮುಲು

    ಕೊಪ್ಪಳ: ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಪಕ್ಷದವರ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅವರು ಒಂದು ರೀತಿಯಲ್ಲಿ ಎರಡು ನಾಲಿಗೆ ಇರುವ ಹಾವು ಇದ್ದಂತೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದರು.

    ಕೊಪ್ಪಳದ ಗಂಗಾವತಿ ತಾಲೂಕಿನ ಪಂಪಾ ಸರೋವರಕ್ಕೆ ಭೇಟಿ ಮಾಡಿದ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರನ್ನು ನಾಯಿಗೆ ಹೋಲಿಕೆ ಮಾಡುತ್ತಿದ್ದಾರೆ. ಯಾವ ನೈತಿಕತೆಯಿಂದ ಅವರು ಆರೋಪ ಮಾಡುತ್ತಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಅವರ ಕಾಂಗ್ರೆಸ್ ಪಕ್ಷದಲ್ಲಿ ಏಕಾಂಗಿಯಾಗಿರುವ ನಾಯಕನಾಗಿದ್ದಾರೆ. ಅವರು ಕಾಂಗ್ರೆಸ್ ಪಾರ್ಟಿಯಿಂದ ತಿರಸ್ಕೃತಗೊಂಡಿದ್ದು, ಅವರು ಮಾನಸಿಕವಾಗಿ  ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಸ್ತ್ರಾಪಹರಣ ದೃಶ್ಯಕ್ಕೆ ದ್ರೌಪದಿ ಬದಲು ಸೀತಾದೇವಿ ಹೆಸರು ಹೇಳಿದ ರಣದೀಪ್ ಸುರ್ಜೆವಾಲಾ: ವೀಡಿಯೋ ವೈರಲ್ 

    ಒಂದು ರೀತಿಯಲ್ಲಿ ಸೀಳು ನಾಲಿಗೆಯನ್ನು ಹೊಂದಿರುವ ಎರಡು ನಾಲಿಗೆಯ ನಾಯಕನಾಗಿದ್ದಾರೆ. ಬೆಳಗ್ಗೆ ಒಂದು ಮಾತನಾಡಿದರೆ ಸಂಜೆ ಮತ್ತೊಂದು ಮಾತನಾಡುತ್ತಾರೆ. ಮಾತನಾಡುವ ಪರಿಜ್ಞಾನ ಅವರಿಗೆ ಇಲ್ಲ. ರಾಜಕೀಯದ ಕಾಂಗ್ರೆಸ್ ಪಕ್ಷದಲ್ಲಿ ಚೆಸ್ ಆಟವಾಡುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಇರುವ ಡಿಕೆಶಿ ಅವರನ್ನು ಯಾವ ರೀತಿ ಮುಗಿಸಬೇಕು ಎಂದು ಯೋಚಿಸುತ್ತಿದ್ದಾರೆ ಎಂದರು.

    ಸಿಎಂ ಇಬ್ರಾಹಿಂ ಯಾವ ರೀತಿ ಮುಗಿಸಬೇಕು ಎನ್ನುವ ಆಲೋಚನೆಯಿಂದ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ಸಿಎಂ ಕುರ್ಚಿಯ ಭ್ರಮೆಯಿಂದ ಅವರ ಪಕ್ಷದಲ್ಲಿರುವ ನಾಯಕರನ್ನು ಕಡೆಗಣಿಸುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಮರ್ಯಾದೆ ನೀಡುವ ಅವಶ್ಯಕತೆ ಇಲ್ಲ. ಮುಂದಿನ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.

  • ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇವೆ: ಶ್ರೀರಾಮುಲು

    ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇವೆ: ಶ್ರೀರಾಮುಲು

    ತುಮಕುರು: ಜನರ ಜೀವವನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಪಾವಗಡದಿಂದ ತುಮಕೂರು ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‍ಗಳನ್ನು ರದ್ದು ಮಾಡುತ್ತೇವೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಖಾಸಗಿ ಬಸ್ ಪಲ್ಟಿಯಾಗಿ 6 ಮಂದಿ ಸಾವನ್ನಪ್ಪಿದ್ದಾರೆ. ಈ ಸ್ಥಳಕ್ಕೆ ಉನ್ನತ ಮಟ್ಟದ ಅಧಿಕಾರಿಗಳನ್ನು ನಾನು ತನಿಖೆಗೆ ಕಳುಹಿಸಿಕೊಟ್ಟಿದ್ದೆ. ತನಿಖೆಯ ಪ್ರಾಥಮಿಕ ಹಂತದಲ್ಲಿ ನನಗೆ ಬಂದಿರುವ ವರದಿಯ ಪ್ರಕಾರ ಲೋಡ್ ಹೆಚ್ಚಾಗಿತ್ತು ಎನ್ನಲಾಗಿದೆ. ಬಸ್ ಟಾಪ್ ಮೇಲೆ ಕೂಡಾ ಜನರು ಕುಳಿತುಕೊಂಡಿದ್ದರು. ಈ ವೇಳೆ ಬಸ್ ಯಾವ ಸ್ಪೀಡ್‍ನಲ್ಲಿ ಓಡಿಸಬೇಕು ಎನ್ನುವ ಜ್ಞಾನ ಚಾಲಕನಿಗೆ ಇರಬೇಕಾಗಿತ್ತು. ಚಾಲಕನೊಬ್ಬನಿಗೆ ಶಿಕ್ಷೆ ಆಗಬೇಕಾದದ್ದು ಅಲ್ಲ, ಖಾಸಗಿ ಬಸ್ ಮಾಲೀಕರು ಇದಕ್ಕೆ ಹೊಣೆಯಾಗಿರುತ್ತಾರೆ. ಆ ಭಾಗದಲ್ಲಿ ಸಂಚರಿಸುವ ಖಾಸಗಿ ಬಸ್‍ಗಳ ಲೈಸನ್ಸ್ ರದ್ದು ಮಾಡಿದರೆ ಮಾತ್ರ ಅವರಿಗೆ ಬುದ್ದಿ ಬರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಮುಂದಿನ ಮೂರು ದಿನ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

    ಇಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲ ಹೊಣೆ ಯಾರು? ಬೇಜವಬ್ದಾರಿತನದಿಂದ ಕಾನೂನನ್ನು ಉಲ್ಲಂಘಿಸಲು ಅವರಿಗೆ ಯಾರು ಅಧಿಕಾರ ಕೊಟ್ಟಿದ್ದಾರೆ. ನಾನು ಆ ಭಾಗದಲ್ಲಿ ಸಂಚರಿಸುವ ಬಸ್‍ಗಳ ಲೈಸನ್ಸ್ ರದ್ದು ಮಾಡುತ್ತೇನೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:  ವೈ.ಎನ್. ಹೊಸಕೋಟೆಯಿಂದ ಪಾವಗಡಕ್ಕೆ ಬರುತ್ತಿದ್ದ ಬಸ್ ಪಲ್ಟಿ:8 ಮಂದಿ ಸಾವು

    ಖಾಸಗಿ ಅವರು ಬದುಕಬೇಕು. ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದ ಭಾಗಗಳಿಗೆ ಸಂಚರಿಸಬೇಕು. ಅವರು ಸರ್ಕಾರದ ನಿಯಮಾನುಸಾರ ಸಂಚರ ಮಾಡಬೇಕು. ಆದರೆ ಕೇವಲ ಲಾಭದಾಯಕ ಕಾರಣದಿಂದ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಜನರ ಪ್ರಾಣಕ್ಕೆ ಕುತ್ತು ತರುವಂತೆ ಮಾಡಿದರೆ, ಕ್ಷಮಿಸುವ ಮಾತಿಲ್ಲ ಎಂದು ಖಾಸಗಿ ಬಸ್ ಮಾಲೀಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ರಾಜ್ಯದಲ್ಲಿ BJP ಸರ್ಕಾರ ಬಂದ್ರೆ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್: ಬಿ.ಶ್ರೀರಾಮುಲು

    ರಾಜ್ಯದಲ್ಲಿ BJP ಸರ್ಕಾರ ಬಂದ್ರೆ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್: ಬಿ.ಶ್ರೀರಾಮುಲು

    ಗದಗ: ದೇವರ ದಯದಿಂದ 2023ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬಂದರೆ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ಅಡವಿಟ್ಟ ವಿಚಾರವಾಗಿ ಮಾತನಾಡಿದರು. ಇಲಾಖೆ ಆಸ್ತಿ ಅಡವಿಟ್ಟಿರುವುದು ನಿಜ. ಅಡವಿಟ್ಟ ಉದ್ದೇಶ ಸಿಬ್ಬಂದಿ ಭವಿಷ್ಯದ ನಿಧಿಗಾಗಿ. ಹೆಚ್ಚು ಬಡ್ಡಿ ಬರಿಸಬೇಕಾಗಿತ್ತು. ಅದನ್ನು ತಪ್ಪಿಸಲು ಕಡಿಮೆ ಬಡ್ಡಿದರ ದೊರೆಯುವ ಹಿನ್ನಲೆ, ಅಡಮಾನ ಇಡಲಾಗಿದೆ. ವೈಯಕ್ತಿಕವಾಗಿ ಇಲ್ಲಿ ಬಳಕೆ ಮಾಡುವದು ಏನೂ ಇಲ್ಲ. ಎಲ್ಲವೂ ಭವಿಷ್ಯದ ನಿಧಿ ಸಲುವಾಗಿ ಕೊಟ್ಟಿದ್ದು. ಸಾರಿಗೆ ಲಾಭದಾಯಕದ ಉದ್ದೇಶವಿಲ್ಲ, ಜನರ ಸೇವೆ ನೀಡುವ ಉದ್ದೇಶವಿದೆ. ಸಿದ್ಧರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವಕ್ಕೆ ಗಿಫ್ಟ್ ನೀಡುವ ವಿಚಾರಕ್ಕೆ ವ್ಯಂಗ್ಯವಾಡಿದರು.

    ಸಿದ್ಧರಾಮಯ್ಯ ತಮ್ಮ ಸ್ವಕ್ಷೇತ್ರದಲ್ಲಿ ಹೊಸ ಸಂಪ್ರದಾಯ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಗೆ ಮಾಡಿದವರಿಗೆ ಟಂಟಂ, ಬೈಕ್, ಟಿವಿ, ಪ್ರಿಜ್, ಮೊಬೈಲ್ ಹೀಗೆ ಅನೇಕ ವಸ್ತುಗಳನ್ನು ಕೊಡುತ್ತೆವೆ ಅಂತಿದ್ದಾರೆ. ಕಾಂಗ್ರೆಸ್ ಈಗ ಎಂತಹ ದುಸ್ಥಿತಿಗೆ ಬಂದಿದೆ ನೋಡಿ. ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಆಮಿಷ ಒಡ್ಡುವ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಆದರೆ ನಾವು ಎಂಥಹ ಪರಿಸ್ಥಿತಿ ಬಂದರೂ ರಾಜಿಯಾಗೋ ಪ್ರಶ್ನೆ ಇಲ್ಲ. ಸಿದ್ಧರಾಮಯ್ಯ ಹಾಗೂ ಡಿಕೆಶಿ ಕೇವಲ ರಾಜಕಾರಣಕ್ಕೆ  ಫೋಟೋ ಪೋಸ್‍ಗಾಗಿ ಇಬ್ಬರು ಜೊತೆಯಾಗಿರ್ತಾರೆ. ಇಬ್ಬರೂ ನಾನು ಸಿಎಂ ಆಗಬೇಕು ನಾನು ಸಿ.ಎಂ ಆಗಬೇಕು ಎಂದು ಪೈಪೋಟಿ ಜೊತೆ ಹಗಲು ಕಸನು ಕಾಣುತ್ತಿದ್ದಾರೆ. ಆದರೆ ಇಬ್ಬರೂ ಮುಖ್ಯಮಂತ್ರಿ ಆಗಲ್ಲ. ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲ್ಲ ಅಂದಮೇಲೆ ಮುಖ್ಯಮಂತ್ರಿ ಹೇಗೆ ಆಗ್ತಾರೆ ಅಂತ ವ್ಯಂಗ್ಯವಾಡಿದ್ರು. ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್

    bjp - congress

    ಕಾಂಗ್ರೆಸ್ ಹಿಂದುಳಿದ ಜಾತಿಗಳ ಆಧಾರದ ಮೇಲೆ ರಾಜಕಾರಣ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಪಂಚರಾಜ್ಯ ಚುನಾವಣೆ ನೋಡಿದರೆ ಗೊತ್ತಾಗುತ್ತೆ, ಕಾಂಗ್ರೆಸ್ ದೂಳಿಪಟ ಆಗಿದೆ. ಕಾಂಗ್ರೆಸ್ ಪಕ್ಷ ಈಗ ಪಾರ್ಟ್ ಟೈಮ್ ಪಾರ್ಟಿ ಆಗಿ ಉಳದಿದೆ ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ್ರೆ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತೆವೆ ಎಂದು ಚುನಾವಣೆಗೂ ಮುನ್ನ ಬಂಪರ್ ಗಿಪ್ಟ್ ಆಫರ್ ನೀಡುವ ಮೂಲಕ ಮಹಿಳೆಯರ ಮತಕ್ಕೆ ಶ್ರೀರಾಮುಲು ಕಣ್ಣು ಹಾಕಿದ್ದಾರೆ.  ಇದನ್ನೂ ಓದಿ: ತಾಯಿಗಾಗಿ ಔಷಧಿ ಹುಡುಕುತ್ತಾ ಹೊರಟ ಮಗಳು- ರಷ್ಯಾ ದಾಳಿಗೆ ಬಲಿ

  • ದೆಹಲಿಯಲ್ಲಿ ಡಿಸಿಎಂ ಪಟ್ಟಕ್ಕಾಗಿ ಶ್ರೀರಾಮುಲು ಲಾಬಿ

    ದೆಹಲಿಯಲ್ಲಿ ಡಿಸಿಎಂ ಪಟ್ಟಕ್ಕಾಗಿ ಶ್ರೀರಾಮುಲು ಲಾಬಿ

    ನವದೆಹಲಿ: ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಚರ್ಚೆ ಮತ್ತೆ ಜೋರಾಗಿದೆ. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರವಾಗಿ ಚರ್ಚಿಸಲು ದೆಹಲಿಗೆ ತೆರಳಲಿದ್ದು, ಸಿಎಂಗೂ ಮುನ್ನ ದೆಹಲಿಯಲ್ಲಿ ಮಂತ್ರಿ ಸ್ಥಾನಕ್ಕೆ ಲಾಬಿ ನಡೆದಿದೆ.

    ಹಾಲಿ ಸಚಿವ ಬಿ.ಶ್ರೀರಾಮುಲು ಈಗ ದೆಹಲಿಗೆ ಭೇಟಿ ನೀಡಿದ್ದಾರೆ. ಹೈಕಮಾಂಡ್ ನಾಯಕರು ಮತ್ತು ಅವರ ಆಪ್ತರ ಮೂಲಕ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ. ಮೂಲಗಳ ಪ್ರಕಾರ ಬಿ. ಶ್ರೀರಾಮುಲು ಡಿಸಿಎಂ ಪಟ್ಟಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಇದನ್ನೂ ಓದಿ: ಮೋದಿಯವರು ದೇವರ ಸ್ವರೂಪ: ಶಿವರಾಜ್ ಸಿಂಗ್ ಚೌಹಾಣ್

    ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಈ ಬಾರಿ ಕಡೆಯದಾಗಿ ಸಂಪುಟ ಪುನಾರಚನೆಗೊಳ್ಳುತ್ತಿದೆ. ಈ ಹಿನ್ನಲೆ ಕಡೆಯದಾಗಿ ಡಿಸಿಎಂ ಹುದ್ದೆ ನೀಡುವಂತೆ ರಾಮುಲು ಮನವಿ ಮಾಡುತ್ತಿದ್ದಾರಂತೆ. ಕಳೆದ ಬಾರಿಯ ಚುನಾವಣೆಯಲ್ಲಿ ಡಿಸಿಎಂ ಮಾಡುವುದಾಗಿ ಹೈಕಮಾಂಡ್ ಘೋಷಿಸಿತ್ತು. ಚುನಾವಣೆ ಹತ್ತಿರ ಇರುವ ಹಿನ್ನಲೆ ಕಡೆಯ ಅವಕಾಶ ನೀಡಬೇಕು ಎಂದು ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಜೆಟ್‍ನಲ್ಲಿ ಮುಂದಿನ 25 ವರ್ಷಗಳ ಮುಂದಾಲೋಚನೆಯಿದೆ: ಬಿ.ಸಿ.ಪಾಟೀಲ್

    ಹಾಲಿ ಖಾತೆಯ ಬಗ್ಗೆಯೂ ಶ್ರೀರಾಮುಲು ತೃಪ್ತರಾಗಿಲ್ಲ ಹೀಗಾಗಿ ಉಪಮುಖಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಲ್ಲಿ ಸಂಪುಟ ಪುನಾರಚನೆ ವೇಳೆ ಪ್ರಭಾವಿ ಖಾತೆ ಸಿಗಬಹುದು ಎಂದು ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

  • ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬೊಮ್ಮಾಯಿ

    ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬೊಮ್ಮಾಯಿ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಸಾರಿಗೆ ಇಲಾಖೆಯ ಕುಂದುಕೊರತೆಯ ಬಗ್ಗೆ ಚರ್ಚೆ ನಡೆಸಲಾಗಿದೆ.

    ಸಭೆಯಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕ.ರಾ.ರ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಉಪಸ್ಥಿತರಿದ್ದರು. ಇದನ್ನೂ ಓದಿ: ಬೊಮ್ಮಾಯಿ ಸರ್ಕಾರಕ್ಕೆ 6 ತಿಂಗಳು – ರಿಪೋರ್ಟ್ ಕಾರ್ಡ್ ತರಿಸಿಕೊಂಡ ಹೈಕಮಾಂಡ್!

    ಈ ಮೊದಲು ಮುಖ್ಯಮಂತ್ರಿ ಇಂದು ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಅಧಿಕಾರಿಗಳಿಗೆ ವಿಧಾನಸೌಧದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ಅಲ್ಲದೇ, ಮತದಾನ ಸಂವಿಧಾನ ನಮಗೆ ನೀಡಿರುವ ಅತ್ಯಮೂಲ್ಯ ಹಕ್ಕು. ಅದನ್ನು ತಪ್ಪದೇ ಚಲಾಯಿಸಿ, ದೇಶದ ಅಭಿವೃದ್ಧಿಗೆ ಕೈ ಜೋಡಿಸೋಣ, ಉತ್ತಮ ಸಮಾಜ ನಿರ್ಮಿಸುವಲ್ಲಿ ಮುನ್ನಡೆಯೋಣ. 18 ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರಿ. ಎಲ್ಲರಿಗೂ ರಾಷ್ಟ್ರೀಯ ಮತದಾರರ ದಿನದ ಶುಭಾಶಯಗಳು ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ರಾಷ್ಟ್ರೀಯ ಮತದಾರರ ದಿನದ ಶುಭಕೋರಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ

  • ಅಲ್ಪಸಂಖ್ಯಾತ ಮುಖಂಡರನ್ನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಿ – ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

    ಅಲ್ಪಸಂಖ್ಯಾತ ಮುಖಂಡರನ್ನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಿ – ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

    ಬಳ್ಳಾರಿ: ಚುನಾವಣೆ ಪ್ರಚಾರದ ಭರಾಟೆಯಲ್ಲಿ ಸಿದ್ದರಾಮಯ್ಯ ತಾವೊಬ್ಬ ಮಾಜಿ ಮುಖ್ಯಮಂತ್ರಿ ಅನ್ನೊದನ್ನ ಮರಿತಿದ್ದಾರೆ. ಚುನಾವಣೆ ಬಂದಾಗ ಮಾತ್ರ ದಲಿತರು, ಅಲ್ಪಸಂಖ್ಯಾತರು ನೆನಪಾಗುತ್ತಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧವಾಗಿ ಕಿಡಿಕಾರಿದ್ದಾರೆ.

    bjp - congress

    ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ನಿಶ್ಚಿತವಾಗಿದೆ. ಚುನಾವಣೆ ಪ್ರಚಾರದ ಭರಾಟೆಯಲ್ಲಿ ಸಿದ್ದರಾಮಯ್ಯ ತಾವೊಬ್ಬ ಮಾಜಿ ಮುಖ್ಯಮಂತ್ರಿ ಅನ್ನೊದನ್ನ ಮರೆತು ದಲಿತರು, ಅಲ್ಪಸಂಖ್ಯಾತರು, ಸೂಟಕೇಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಚುನಾವಣೆ ಬಂದಾಗ ಮಾತ್ರ ದಲಿತರು, ಅಲ್ಪಸಂಖ್ಯಾತರು ನೆನಪಾಗುತ್ತಾರೆ. ದಲಿತರು,ಅಲ್ಪಸಂಖ್ಯಾತರ ಕಾಂಗ್ರೆಸ್‍ಗೆ ಸೀಮಿತ ಎನ್ನುವಂತೆ ಮುದ್ರೆ ಹಾಕಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ಹೊಸ ಪಕ್ಷ ಸ್ಥಾಪನೆ ಖಚಿತಪಡಿಸಿದ ಅಮರೀಂದರ್ ಸಿಂಗ್ – ಬಿಜೆಪಿ ಜೊತೆಗೆ ಹೊಂದಾಣಿಕೆ

    ಕೇವಲ ಚುನಾವಣೆ ಬಂದಾಗ ಮಾತ್ರ ಕಾಂಗ್ರಸ್ ನವರಿಗೆ ದಲಿತರು, ಅಲ್ಪಸಂಖ್ಯಾತರ ನೆನಪಾಗುತ್ತಾರೆ. ನಾನು ಕಾಂಗ್ರೆಸ್ ನವರಿಗೆ ಸವಾಲು ಹಾಕುತ್ತೆನೆ. ನಿಮ್ಮ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನ ದಲಿತರನ್ನ ಘೋಷಣೆ ಮಾಡಿ. ಅಲ್ಪಸಂಖ್ಯಾತ ಮುಖಂಡರನ್ನ ರಾಜ್ಯಾಧ್ಯಕ್ಷರನ್ನಾಗಿ ಘೋಷಣೆ ಮಾಡಲಿ ಎಂದು ಕಾಂಗ್ರೆಸ್‍ಗೆ ಸವಾಲು ಹಾಕಿದ್ದಾರೆ. ಇದನ್ನೂ ಓದಿ:  ಕುಚ್ಚಲಕ್ಕಿ ರೊಟ್ಟಿ ಮಾಡಿದ ರಾಬರ್ಟ್ ನಟಿ ಆಶಾ ಭಟ್

    60 ವರ್ಷದಿಂದ ದಲಿತರು ಮತ್ತು ಮುಸ್ಲಿಮರನ್ನ ಓಟ್ ಬ್ಯಾಂಕ್ ಆಗಿ ಬಳಸಿಕೊಂಡಿದ್ದಿರಿ, ಅವರ ಉದ್ಧಾರಕ್ಕಾಗಿ ಏನು ಕೆಲಸ ಮಾಡಿಲ್ಲ. ನಿಮಗೆ ತಾಕತ್ತಿದ್ದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ. ಪರಮೇಶ್ವರ ಮುಂದಿನ ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಿ. ಇದು ಸಿದ್ದರಾಮಯ್ಯನವರಿಗೆ ನನ್ನ ಸವಾಲು ಎಂದು ಹೇಳಿದ್ದಾರೆ.

    ಡಿಸಿಎಂ ಸ್ಥಾನ ನನಗೆ ಕೈ ತಪ್ಪಲು ಯಾರು ಪ್ರಯತ್ನ ಪಟ್ಟಿಲ್ಲ. ಸಾಮಾಜಿಕ ನ್ಯಾಯ ದಡಿ ಪಕ್ಷ ತೀರ್ಮಾನ ಕೈಗೊಳ್ಳಲಿದೆ. ಬರುವ ದಿನಗಳಲ್ಲಿ ಡಿಸಿಎಂ ಹಂಚಿಕೆ ಮಾಡಿದ್ದೆ ಆದಲ್ಲಿ, ನನಗೆ ಡಿಸಿಎಂ ಸ್ಥಾನ ಸಿಗಲಿದೆ ಎನ್ನುವ ವಿಶ್ವಾಸ ನನಗಿದೆ ಎಂದಿದ್ದಾರೆ.

  • ಕೋತಿಗಳಿಗೆ ಬಾಳೆಹಣ್ಣು ತಿನ್ನಿಸಿದ ಸಾರಿಗೆ ಸಚಿವ ಶ್ರೀರಾಮುಲು

    ಕೋತಿಗಳಿಗೆ ಬಾಳೆಹಣ್ಣು ತಿನ್ನಿಸಿದ ಸಾರಿಗೆ ಸಚಿವ ಶ್ರೀರಾಮುಲು

    ಕೊಪ್ಪಳ: ಕೋತಿಗಳ ಜೊತೆಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾಲ ಕಳೆದು, ಬಾಳೆಹಣ್ಣು ತಿನ್ನಿಸಿದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಶ್ರೀರಾಮುಲು ಅವರು ಕೋತಿಗಳ ಜೊತೆಗೆ ಕೆಲವು ಸಮಯ ಕಳೆದಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಘಟನೆ ನಡೆದಿದೆ. ರಾಮಾಯಣದಲ್ಲಿ ಉಲ್ಲೇಖ ಇರುವ ಪೌರಾಣಿಕ ಪ್ರಸಿದ್ಧ ಪಂಪಾ ಸರೋವರ ಇದಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಮಳೆ ಅವಾಂತರ- ಹೂ ತೋಟಗಳು ಜಲಾವೃತ

    ವೀಡಿಯೋದಲ್ಲಿ ಏನಿದೆ?
    ಮಂಗಗಳಿಗೆ ಆಹಾರ ನೀಡುತ್ತಿರುವ ಸಚಿವ ಬಿ.ಶ್ರೀರಾಮುಲು ಅವರನ್ನು ನೋಡಬಹುದಾಗಿದೆ. ಅವರ ಹೆಗಲ ಮೇಲೆ ಕೋತಿ ಕುಳಿತುಕೊಂಡಿದೆ. ಅವರು ಕೋತಿಗಳಿಗೆ ಬಾಳೆ ಹಣ್ಣು ನೀಡುವಾಗ ಹೆಗಲೆ ಮೇಲೆ ಕೋತಿ ಕುಳಿತುಕೊಂಡಿದೆ. ಕೋತಿಯನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡೇ ಇತರೆ ಕೋತಿಗಳಿಗೆ ಆಹಾರವನ್ನು ಶ್ರೀರಾಮುಲು ನೀಡಿದ್ದಾರೆ. ಇದನ್ನೂ ಓದಿ: 75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ

  • ನಮ್ಮದು ಡಕೋಟಾ ಎಕ್ಸ್‌ಪ್ರೆಸ್‌ ಸರ್ಕಾರವಲ್ಲ: ಬಿ.ಶ್ರೀರಾಮುಲು

    ನಮ್ಮದು ಡಕೋಟಾ ಎಕ್ಸ್‌ಪ್ರೆಸ್‌ ಸರ್ಕಾರವಲ್ಲ: ಬಿ.ಶ್ರೀರಾಮುಲು

    ಗದಗ: ನಮ್ಮದು ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರವಲ್ಲ, ಜನಪರ ಹಾಗೂ ಅಭಿವೃದ್ಧಿ ಪರ ಸರ್ಕಾರ. ಮುಖ್ಯಮಂತ್ರಿ ಕುರ್ಚಿಗೆ ಹಾರುವ ಕನಸಿನ ಉದ್ದೇಶದಿಂದ ಸಿದ್ದರಾಮಯ್ಯನವರು ಆರೋಪ ಪ್ರತ್ಯಾರೋಪ ಮಾಡ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಟಾಂಗ್ ನೀಡಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳುವ ಹಾಗೆ ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್ ಸರ್ಕಾರವಲ್ಲ. ಕೊರೊನಾ ಇರೋದರಿಂದ ಅಭಿವೃದ್ಧಿ ಕಾರ್ಯಗಳಾಗಲಿಲ್ಲ. ಈಗ ಪಾರದರ್ಶಕವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳಾಗುತ್ತಿವೆ. ಸಿದ್ದರಾಮ್ಯನವರಿಗೆ ಮುಖ್ಯಮಂತ್ರಿ ಕುರ್ಚಿ ಮಾತ್ರ ಕಾಣುತ್ತಿದೆ. ಆದರೆ ಜನರಿಗೆ ಒಳ್ಳೆಯದಾಗಬೇಕೆಂಬ ಹಿತದೃಷ್ಟಿಯೇ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

    ಮುಖ್ಯಮಂತ್ರಿ ಸ್ಥಾನಕ್ಕೆ ಹಾರಬೇಕೆಂದರೆ ಆರೋಪ ಮಾಡಲೇಬೇಕಲ್ವಾ. ಹಾಗಾಗಿ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಗೆದ್ರೆ ಸಾಕು, ನಾನು ಮುಖ್ಯಮಂತ್ರಿ ಆಗುತ್ತೇನೆ ಎನ್ನುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿ ಬಹಳಷ್ಟು ಒಡಕಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಜಿ ಪರಮೇಶ್ವರ್ ನಡುವೆ ಸಿಎಂ ಗಾದಿಗಾಗಿ ಫೈಟ್ ಇದೆ. ಮೊದಲು ಅಲ್ಲಿಯೇ ಸರಿಯಿಲ್ಲ ಎಂದು ನುಡಿದಿದ್ದಾರೆ.

    ಈಶ್ವರಪ್ಪ ಎಸ್‍ಟಿ ಹೋರಾಟಕ್ಕೆ ಆರ್‍ಎಸ್.ಎಸ್ ಬೆಂಬಲವಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಮಾಡಿದ್ದಾರೆ. ಆರ್‍ಎಸ್‍ಎಸ್ ಜಾತಿ, ಪಂಗಡ ವಿಷಯಕ್ಕೆ ಕೈಹಾಕಲ್ಲ. ದೇಶದ ಐಕ್ಯತೆಗೆ ಹೋರಾಡುತ್ತೆ. ಸಿದ್ದರಾಮಯ್ಯ ಆಡಳಿತ ಸರ್ಕಾರದಲ್ಲಿ ಕುರುಬ ಸಮಾದಲ್ಲಿ ಸಿದ್ದರಾಮಯ್ಯ ಗುರುತಿಸಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.