Tag: ಬಿ.ಬಿ.ಚಿಮ್ಮನಕಟ್ಟಿ

  • ಸಿದ್ದರಾಮಯ್ಯ ಮೇಲೆ ಮೃದು ಧೋರಣೆ ತೋರಿದ ನಿರಾಣಿ

    ಸಿದ್ದರಾಮಯ್ಯ ಮೇಲೆ ಮೃದು ಧೋರಣೆ ತೋರಿದ ನಿರಾಣಿ

    ಬಾಗಲಕೋಟೆ: ಸಿದ್ದರಾಮಯ್ಯ ಅವರು ಪಕ್ಷದ ಹಿರಿಯರು. ಅವರ ವಿರುದ್ಧ ಬಿ.ಬಿ.ಚಿಮ್ಮನಕಟ್ಟಿ ಹೀಗೆ ಬಹಿರಂಗವಾಗಿ ಮಾತನಾಡಬಾರದಿತ್ತು ಎಂದು ಸಿದ್ದರಾಮಯ್ಯ ಮೇಲೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮೃದು ಧೋರಣೆ ತೋರಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಬಿ.ಚಿಮ್ಮನಕಟ್ಟಿ ಅವರು ಪಕ್ಷದ ಚೌಕಟ್ಟಿನಲ್ಲೆ ಮಾತನಾಡಬೇಕಿತ್ತು. ಸಿದ್ದರಾಮಯ್ಯ ಹಿರಿಯರು, ಮುಖ್ಯಮಂತ್ರಿ ಆದವರು, ವಿಪಕ್ಷ ನಾಯಕರು. ಅವರ ವಯಸ್ಸಿಗಾದರೂ ಬೆಲೆ ಕೊಡಬೇಕಿತ್ತು. ಬಾದಾಮಿಯಲ್ಲಿ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಹೊರಗಡೆ ಹೇಳಬಾರದಿತ್ತು ಎಂದರು.

    ಚಿಮ್ಮನಕಟ್ಟಿ ಅವರು ಸಿದ್ದರಾಮಯ್ಯ ಸಮಕಾಲೀನರು. ವಯಸ್ಸಿನಲ್ಲಿ ಅವರಷ್ಟೇ ಪ್ರಬಲ ಆಗಿರುವವರಾಗಿದ್ದಾರೆ. ಆದರೆ ಅವರು ಸಿದ್ದರಾಮಯ್ಯ ವಿರುದ್ಧ ಹೊರಗಡೆ ಹೀಗೆ ಮಾತನಾಡಬಾರದಿತ್ತು. ಇದು ಅವರ ಪಕ್ಷದ ವಿಚಾರವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನೀವು ಬದಲಾಗದಿದ್ದರೆ ಮುಂದೆ ಎಲ್ಲವೂ ಬದಲಾಗುತ್ತೆ: ಸಂಸದರಿಗೆ ಮೋದಿ ಎಚ್ಚರಿಕೆ

    ಯಾವುದೇ ರಾಜಕೀಯ ಪಕ್ಷ ಇರಲಿ ಸ್ವಪಕ್ಷದ ವ್ಯಕ್ತಿಯ ಮೇಲೆ ಅಸಮಾಧಾನವಿದ್ದರೆ ಕೂತು ಬಗೆ ಹರಿಸಿಕೊಳ್ಳಬೇಕು. ಬಿಜೆಪಿ, ಕಾಂಗ್ರೆಸ್, ಇತರೆ ಯಾವುದೇ ಪಕ್ಷ ಇದ್ದರೂ ಆಂತರಿಕ ಸಮಸ್ಯೆಯನ್ನು ಬಹಿರಂಗವಾಗಿ ಹೇಳಬಾರದು. ಇಂಥ ಘಟನೆ ಬಂದಾಗ ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಇದನ್ನೂ ಓದಿ: ಏಳಕ್ಕೆ ಏಳು ಜೆಡಿಎಸ್ ಶಾಸಕರಿದ್ದರೂ ಮಂಡ್ಯ ಅಭಿವೃದ್ಧಿಯಾಗಿಲ್ಲ ಯಾಕೆ: ಸಿದ್ದರಾಮಯ್ಯ

  • ಸಿದ್ದರಾಮಯ್ಯನವರಿಗೆ ಇನ್ನೊಂದು ಮದುವೆ ಮಾಡ್ಬೇಕು: ಬಿ.ಬಿ.ಚಿಮ್ಮನಕಟ್ಟಿ

    ಸಿದ್ದರಾಮಯ್ಯನವರಿಗೆ ಇನ್ನೊಂದು ಮದುವೆ ಮಾಡ್ಬೇಕು: ಬಿ.ಬಿ.ಚಿಮ್ಮನಕಟ್ಟಿ

    ಬಾಗಲಕೋಟೆ: ಕಾಂಗ್ರೆಸ್‍ನ ಮಾಜಿ ಶಾಸಕ ಬಿ.ಬಿ. ಚಿಮ್ಮನ್ನಕಟ್ಟಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇನ್ನೊಂದು ಮದುವೆಗೆ ಪ್ರಸ್ತಾವನೆ ಇಟ್ಟ ಪ್ರಸಂಗ ಬಾದಾಮಿಯಲ್ಲಿ ನಡೆದಿದೆ.

    ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮಾತನಾಡಿ, ಸಿದ್ದರಾಮಯ್ಯನವರಿಗೆ 71 ವರ್ಷ ಆಗಿಲ್ಲ. ಈಗಿನ್ನೂ ಅವರಿಗೆ 21 ವರ್ಷ ಆಗಿದೆ. ಪಕ್ಷಕ್ಕಾಗಿ ಈಗಲೂ ಚಿರ ಯುವಕನಂತೆ ಕೆಲಸಮಾಡುತ್ತಿದ್ದಾರೆ. ಹಾಗಾಗಿ ಇನ್ನೊಂದು ಮದುವೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ ಎಂದು ಹೇಳಿದರು.

    ಸಿದ್ದರಾಮಯ್ಯನವರಿಗೆ ಇನ್ನೊಂದು ಮದುವೆ ಮಾಡಿಸಬೇಕೆಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

    ಸಿದ್ದರಾಮಯ್ಯನವರನ್ನು ಈ ಕ್ಷೇತ್ರದಲ್ಲಿಯೂ ಸೋಲಿಸಲು ಬಹಳ ಷಡ್ಯಂತ್ರ ರೂಪಿಸಿದ್ದರು. ನಾವು ಸ್ವಲ್ಪ ಎಚ್ಚರ ತಪ್ಪಿದ್ದರೂ ಇಲ್ಲಿಯೂ ಅವರು ಸೋಲುತ್ತಿದ್ದರು. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶ್ರಮವಹಿಸಿ ಕೆಲಸ ಮಾಡಿ ಸಿದ್ದರಾಮಯ್ಯನವರ ಗೆಲುವಿಗೆ ಕಾರಣರಾಗಿದ್ದಾರೆ. ಗೆಲುವಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಈ ವೇಳೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಚಿಮ್ಮನಕಟ್ಟಿ ತಿಳಿಸಿದರು.