Tag: ಬಿ-ಫಾರಂ

  • ರಾಹುಕಾಲ ಮುಗಿದ ಬಳಿಕ ಬಿ ಫಾರಂ ವಿತರಿಸಿದ ಡಿಕೆಶಿ

    ರಾಹುಕಾಲ ಮುಗಿದ ಬಳಿಕ ಬಿ ಫಾರಂ ವಿತರಿಸಿದ ಡಿಕೆಶಿ

    ಬೆಂಗಳೂರು: ಕಾಂಗ್ರೆಸ್‌ (Congress) ತನ್ನ ಅಭ್ಯರ್ಥಿಗಳಿಗೆ ಬಿ ಫಾರಂ (B Form) ವಿತರಣೆ ಮಾಡಲು ಆರಂಭಿಸಿದೆ.

    ಗುರುವಾರ ಮಧ್ಯಾಹ್ನ 1:30 ರಿಂದ 3 ಗಂಟೆಯವರೆಗೆ ರಾಹುಕಾಲವಿತ್ತು. ರಾಹುಕಾಲ ಮುಕ್ತಾಯವಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ (KPCC Office) ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಅವರು ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಮಾಡಲು ಆರಂಭಿಸಿದರು.

    ಮೊದಲ ಬಿ ಫಾರಂ ಅನ್ನು ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿ ಭೈರತಿ ಸುರೇಶ್‌ಗೆ ನೀಡಲಾಯಿತು. ಎರಡನೇ ಬಿ ಫಾರಂ ಅನ್ನು ರಾಜರಾಜೇಶ್ವರಿ ನಗರದ ಅಭ್ಯರ್ಥಿ ಕುಸುಮಾ ನೀಡಲಾಯಿತು. ಇದನ್ನೂ ಓದಿ: ಟಿಕೆಟ್ ಕೊಟ್ಟಿಲ್ಲವೆಂದ್ರೆ ಅವರಿಗೆ ಬೇರೆ ಜವಾಬ್ದಾರಿ ನೀಡಲಿದೆ ಎಂದರ್ಥ: ಅಣ್ಣಾಮಲೈ

     

    224 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 165 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇನ್ನೂ 58 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ ಘೋಷಿಸಿದ್ದು ಅಭ್ಯರ್ಥಿಯನ್ನು ಹಾಕಿಲ್ಲ.

  • ಶಾಸಕರ ಬಿ ಫಾರಂ, ಸಿ ಫಾರಂ ಗಲಾಟೆ – ಪುಟ್ಟರಾಜು ವಿರುದ್ಧ ನಾರಾಯಣಗೌಡ ಕಿಡಿ

    ಶಾಸಕರ ಬಿ ಫಾರಂ, ಸಿ ಫಾರಂ ಗಲಾಟೆ – ಪುಟ್ಟರಾಜು ವಿರುದ್ಧ ನಾರಾಯಣಗೌಡ ಕಿಡಿ

    ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಹಾಲಿ ಶಾಸಕರುಗಳ ವಾಕ್ ಸಮರ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿದೆ. ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಮತ್ತು ಮೇಲುಕೋಟೆ ಶಾಸಕ ಪುಟ್ಟರಾಜು ಅವರು ಒಬ್ಬರಿಗೋಬ್ಬರ ಮೇಲೆ ಆರೋಪ ಪ್ರತ್ಯಾರೋಪ ಮಾಡುವ ಮೂಲಕ ವಾಕ್ ಸಮರವನ್ನು ಮುಂದುವರೆಸುತ್ತಿದ್ದಾರೆ.

    ಈ ಹಿಂದೆ ಇಬ್ಬರೂ ಸಹ ಒಂದಲ್ಲಾ ಒಂದು ವಿಷಯಗಳನ್ನು ಇಟ್ಟುಕೊಂಡು ವಾಕ್ ಸಮರವನ್ನು ಆರಂಭಿಸಿದ್ದರು. ಈ ವೇಳೆ ಮಾಜಿ ಸಚಿವ ಪುಟ್ಟರಾಜು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನಿಂದ ನಾರಾಯಣಗೌಡಗೆ ಬಿ ಫಾರಂ ಸಿಗಲು ನಾನು ಕಾರಣ, ಕುಮಾರಸ್ವಾಮಿ ಅವರನ್ನು ಒಪ್ಪಿಸಿ ನಾನು ಟಿಕೆಟ್ ಕೊಡಿಸಿದ್ದೆ. ಈಗ ನಾರಾಯಣಗೌಡ ಹೀಗೆ ಮಾತಾಡುತ್ತಾನೆ ಎಂದು ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ನಾರಾಯಣಗೌಡ ಅವರು ಕೆ.ಆರ್ ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಪುಟ್ಟರಾಜು ಅವರಿಗೆ ತಿರುಗೇಟು ನೀಡಿದ್ದಾರೆ.

    ನನಗೆ ಪುಟ್ಟರಾಜು ಅವರು ಬಿ ಫಾರಂ, ಸಿ ಫಾರಂ ಕೊಡಿಸಿದ್ದು ನಾನು ಅಂತ ಹೇಳುತ್ತಾರೆ. ಆದರೆ ಅವರು ಹಳೆಯದನ್ನು ಮರೆಯಬಾರದು. ಅವರು ಎಂಪಿ ಚುನಾವಣೆಯಲ್ಲಿ ನಿಂತಾಗ ಯಾರು ಬಿ ಫಾರಂ ತಂದಿದ್ದರು ಚುನಾವಣೆಯ ಉದ್ದಕ್ಕೂ ಅವರೊಂದಿಗೆ ಜಿಲ್ಲೆಯಲ್ಲಿ ಓಡಾಡಿದ್ದು ಯಾರೆಂದು ಮರೆಯಬಾರದು ಎಂದರು. ಈ ಮೂಲಕ ಪುಟ್ಟರಾಜು ಅವರಿಗೆ ಎಂಪಿ ಟಿಕೆಟ್ ಸಿಗಲು ನಾನು ಕಾರಣ, ಚುನಾವಣೆಯಲ್ಲಿ ಗೆಲ್ಲಲು ನಾನು ಶ್ರಮ ಹಾಕಿದ್ದೇನೆ ಎಂದು ಪರೋಕ್ಷವಾಗಿ ನಾರಾಯಣಗೌಡರು ಪ್ರತ್ಯುತ್ತರ ನೀಡಿದರು.

    ಈ ಹೇಳಿಕೆಯ ಮೂಲಕ ಇಷ್ಟು ದಿನಗಳ ಕಾಲ ನಡೆಯುತ್ತಿದ್ದ ವಾಕ್ ಸಮರಕ್ಕೆ ಮತ್ತಷ್ಟು ಪುಷ್ಠಿ ಬಂದಂತೆ ಆಗಿದೆ. ನಾರಾಯಣಗೌಡರ ಈ ಹೇಳಿಕೆಗೆ ಪುಟ್ಟರಾಜು ಅವರು ಯಾವ ರೀತಿ ಕೌಂಟರ್ ಕೊಡುತ್ತಾರೆ ಎಂದು ಕಾದುನೋಡಬೇಕಿದೆ.

  • ತುಮಕೂರಲ್ಲಿ ಕಾಂಗ್ರೆಸ್ ಮಾರಾಮಾರಿ – ಬಿ ಫಾರಂ ಕಿತ್ಕೊಂಡು ಎಸ್ಕೇಪ್ ಆದ್ರು!

    ತುಮಕೂರಲ್ಲಿ ಕಾಂಗ್ರೆಸ್ ಮಾರಾಮಾರಿ – ಬಿ ಫಾರಂ ಕಿತ್ಕೊಂಡು ಎಸ್ಕೇಪ್ ಆದ್ರು!

    ತುಮಕೂರು: ಪುರಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಗಾಗಿ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ.

    17 ನೇ ವಾರ್ಡ್ ನ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯ ಬಿ ಫಾರಂನ್ನು ಇನ್ನೋರ್ವ ಆಕಾಂಕ್ಷಿ ಕಸಿದುಕೊಂಡು ಪರಾರಿಯಾದ ಪರಿಣಾಮ ಮಾರಾಮಾರಿ ನಡೆದಿದೆ.

    ಆಸ್ಮಾ ಎಂಬವರಿಗೆ ಬಿ ಫಾರಂ ನೀಡಲಾಗಿತ್ತು. ಇದರಿಂದ ಇನ್ನೋರ್ವ ಆಕಾಂಕ್ಷಿ ಸುಲ್ತಾನಾ ಅಸಮಾಧಾನಗೊಂಡಿದ್ದರು. ಆಸ್ಮಾ ನಾಮಪತ್ರ ಸಲ್ಲಿಸಲು ಬಿ ಫಾರಂ ಜೊತೆಗೆ ತಾಲೂಕು ಕಚೇರಿಗೆ ಬರುತ್ತಿರುವಾಗ ದಾರಿ ಮಧ್ಯೆ ಸುಲ್ತಾನಾ ಬೆಂಬಲಿಗರು ಬಿ ಫಾರಂ ಕಸಿದುಕೊಂಡು ಪರಾರಿಯಾಗಿದ್ದಾರೆ.

    ಪರಿಣಾಮ ತಾಲೂಕು ಕಚೇರಿ ಎದುರು ಜಮಾಯಿಸಿದ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿದೆ. ಪರಸ್ಪರ ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡು ಹೊಡೆದಾಟ ಮಾಡಿಕೊಂಡಿದ್ದಾರೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

  • ಏನಿದು ಬಿ ಫಾರಂ? ಫಾರಂ-26 ಏನು?

    ಏನಿದು ಬಿ ಫಾರಂ? ಫಾರಂ-26 ಏನು?

    ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದಲ್ಲಿ ಬಹಳಷ್ಟು ಫಾರ್ಮ್‍ಗಳನ್ನು ಅಭ್ಯರ್ಥಿಗಳು ಭರ್ತಿಮಾಡಬೇಕಾಗುತ್ತದೆ. ಅವುಗಳಲ್ಲಿ ಫಾರಂ-ಬಿ ಕೂಡ ಒಂದು. ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದನ್ನು ಫಾರಂ-ಬಿ ಸಾಕ್ಷೀಕರಿಸುತ್ತದೆ. ಮೀಸಲಿಟ್ಟ ಪಕ್ಷದ ಚಿಹ್ನೆಯನ್ನು ಅಭ್ಯರ್ಥಿಗೆ ಕೊಡಲಾಗುತ್ತದೆ.

    ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಮೇಲೆ ಅಭ್ಯರ್ಥಿಗಳು ನಾಮ ನಿರ್ದೇಶನ ಅರ್ಜಿಯ ಜೊತೆಗೆ ಇತರೆ ಬೆಂಬಲಿತ ದಾಖಲೆಗಳನ್ನು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡುತ್ತಾರೆ.

    ಲೋಕಸಭಾ ಚುನಾವಣೆಗೆ ಫಾರಂ-2ಎ, ವಿಧಾನ ಸಭಾ ಚುನಾವಣೆಗಳಿಗೆ ಫಾರಂ-2ಬಿ, ರಾಜ್ಯಸಭಾ ಚುನಾವಣೆಗಳಿಗೆ ಫಾರಂ-2ಸಿ ನಾಮಪತ್ರದ ಅರ್ಜಿಗಳನ್ನು ಅಭ್ಯರ್ಥಿಗಳು ಸಲ್ಲಿಸಬೇಕಾಗುತ್ತದೆ. ನಾಮಪತ್ರ ಅರ್ಜಿಯ ಜೊತೆ ಫಾರಂ-26 ಅಫಿಡವಿಟ್ ಹಾಗೂ ಬಿ-ಫಾರಂ ಅನ್ನು ಬೆಂಬಲಿತ ದಾಖಲೆಗಳಾಗಿ ಅಭ್ಯರ್ಥಿಗಳು ಸಲ್ಲಿಸಬೇಕು.

    ಫಾರಂ-26 ನಲ್ಲಿ ಏನಿರಲಿದೆ?
    ಕ್ರಿಮಿನಲ್ ಪ್ರಕರಣಗಳಲ್ಲಿ ಈ ಹಿಂದೆ ಅಭ್ಯರ್ಥಿ ತೊಡಗಿಕೊಂಡಿದ್ದರಾ? ಪ್ರಕರಣದ ತನಿಖೆ ಅಥವಾ ವಿಚಾರಣೆ ಎಲ್ಲಿಯವರೆಗೆ ಬಂದಿದೆ? ಎಲ್ಲಾ ಕುಟುಂಬ ಸದಸ್ಯರ ಆದಾಯ ತೆರಿಗೆ, ಆಸ್ತಿಯ ಮೌಲ್ಯ, ಸಾಲದ ಮಾಹಿತಿ, ಅಭ್ಯರ್ಥಿ ಮತ್ತು ಗಂಡ/ಹೆಂಡತಿಯ ವೃತ್ತಿ ಅಥವಾ ಉದ್ಯೋಗ, ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಯನ್ನು ಅಫಿಡವಿಟ್ ನಲ್ಲಿ ನಮೂದಿಸಬೇಕು.

    ಬಿ-ಫಾರಂನಲ್ಲಿ ಏನಿರಲಿದೆ?
    ಪ್ರತಿಷ್ಠಿತ ಕ್ಷೇತ್ರದಿಂದ ಈ ಅಭ್ಯರ್ಥಿ ನಮ್ಮ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನು ಪಕ್ಷದ ಅಧಿಕೃತ ಸದಸ್ಯನ ಸಹಿಯೊಂದಿಗೆ ಅಭ್ಯರ್ಥಿಗೆ ಪಕ್ಷ ಕೊಡುವ ಫಾರ್ಮ್ ಅನ್ನು ಬಿ-ಫಾರಂ ಎಂದು ಕರೆಯಲಾಗುತ್ತದೆ. ನಾಮಪತ್ರದ ಅರ್ಜಿಯಲ್ಲಿ ಪ್ರತಿಷ್ಠಿತ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ನಮೂದಿಸಿದ್ದಲ್ಲಿ, ಅಭ್ಯರ್ಥಿಯು ಬಿ-ಫಾರಂ ಅನ್ನು ಸಲ್ಲಿಸಬೇಕಾಗುತ್ತದೆ.