Tag: ಬಿ.ಪಿ ಹರೀಶ್

  • ಹರಿಹರ ಶಾಸಕರಿಗೆ ತಲೆ ಕೆಟ್ಟಿರಬೇಕು – ಬಿ.ಪಿ ಹರೀಶ್ ವಿರುದ್ಧ ಎಸ್.ಎಸ್ ಮಲ್ಲಿಕಾರ್ಜುನ್ ಕಿಡಿ

    ಹರಿಹರ ಶಾಸಕರಿಗೆ ತಲೆ ಕೆಟ್ಟಿರಬೇಕು – ಬಿ.ಪಿ ಹರೀಶ್ ವಿರುದ್ಧ ಎಸ್.ಎಸ್ ಮಲ್ಲಿಕಾರ್ಜುನ್ ಕಿಡಿ

    ದಾವಣಗೆರೆ: ಹರಿಹರ ಶಾಸಕರಿಗೆ ತಲೆ ಸರಿ ಇದಿಯೋ ಇಲ್ವೋ? ಅವರ ತಲೆ ಕೆಟ್ಟಿರಬೇಕು ಎಂದು ಬಿ.ಪಿ ಹರೀಶ್ (B.P. Harish) ವಿರುದ್ಧ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ (S.S. Mallikarjun) ಆಕ್ರೋಶ ಹೊರಹಾಕಿದ್ದಾರೆ.

    ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಜೊತೆ ರೇಣುಕಾಚಾರ್ಯ ಮತ್ತು ಉಳಿದ ನಾಯಕರು ಹೊಂದಾಣಿಕೆ ರಾಜಕೀಯ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ ಎಂಬ ಬಿ.ಪಿ ಹರೀಶ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಎಲುಬಿಲ್ಲದ ನಾಲಿಗೆ ಏನೇನೋ ಮಾತನಾಡ್ತಾನೆ. ಇದೇ ಹರೀಶ್ ನಮ್ಮ ಮನೆಗೆ ಬಂದು ಸಿದ್ದೇಶ್ವರ್‍ಗೆ ಬಾಯಿಗೆ ಬಂದ ಹಾಗೆ ಬೈದಿದ್ದ. ಕಾಂಗ್ರೆಸ್‍ನಲ್ಲಿದ್ದು ಹಿಂದೆ ಚುನಾವಣೆಯಲ್ಲಿ ನಮ್ಮ ಪರ ಪ್ರಚಾರ ಮಾಡಿದ್ದ. ಅವನು ಯಾವಾಗ ಯಾರ ಕಡೆ ಇರುತ್ತಾನೋ ಗೊತ್ತಿಲ್ಲ. ನಮ್ಮ ಮನೆಗೆ ಬಂದಿದ್ದು ರೇಣುಕಾಚಾರ್ಯ ಅಲ್ಲ ಹರೀಶ್ ಬಂದು ಮನೆ ಕಾಯುತ್ತಿದ್ದ ಎಂದು ವ್ಯಂಗ್ಯವಾಡಿದ್ದಾರೆ.

    ಪೇಪರ್‍ನಲ್ಲಿ ತನ್ನ ಫೋಟೋ ಬರಬೇಕು ಎಂದು ಏನೇನೋ ಮಾತಾಡ್ತಾ ಇದಾನೆ. ಜನ ಆಯ್ಕೆ ಮಾಡಿ ಕಳಿಸಿದ್ದಾರೆ, ಜನರ ಸೇವೆ ಮಾಡಲಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

  • ಕಾಂಗ್ರೆಸ್ ಜೊತೆ ಬಿಜೆಪಿ ಹೊಂದಾಣಿಕೆಯಿಂದ ಲೋಕಸಭಾ ಚುನಾವಣೆಯಲ್ಲಿ ಸೋಲಾಗಿದೆ: ಬಿ.ಪಿ ಹರೀಶ್

    ಕಾಂಗ್ರೆಸ್ ಜೊತೆ ಬಿಜೆಪಿ ಹೊಂದಾಣಿಕೆಯಿಂದ ಲೋಕಸಭಾ ಚುನಾವಣೆಯಲ್ಲಿ ಸೋಲಾಗಿದೆ: ಬಿ.ಪಿ ಹರೀಶ್

    ದಾವಣಗೆರೆ: ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ ಎನ್ನುವುದು ಸತ್ಯ ಎಂದು ಬಿಜೆಪಿ ಶಾಸಕ ಬಿ.ಪಿ ಹರೀಶ್ (B.P Hareesh) ಹೇಳಿದ್ದಾರೆ.

    ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಾಂಗ್ರೆಸ್ ಸಚಿವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿ ಲೋಕಸಭಾ ಕ್ಷೇತ್ರವನ್ನು ಕಳೆದುಕೊಳ್ಳುವಂತೆ ಆಯ್ತು. ಈ ಮಾತನ್ನು ಶಾಸಕ ಶಿವಗಂಗಾ ಬಸವರಾಜ್ ಹೇಳಿರುವುದಕ್ಕಿಂತ ಮುಂಚಿನಿಂದಲೂ ನಾನು ಹೇಳುತ್ತಾ ಬಂದಿದ್ದೇನೆ ಎಂದಿದ್ದಾರೆ.

    ಪಾಪಾ ಮಾಡಿದವರ ಹೆಸರನ್ನು ಶಿವಗಂಗಾ ಬಸವರಾಜ್ ಬಹಿರಂಗ ಪಡಿಸಲಿ. ಈ ಒಳ ಒಪ್ಪಂದದಿಂದ ಬಿಜೆಪಿ ಪಕ್ಷವನ್ನು ಸೋಲಿಸಿದವರಿಗೆ ಮುಂದಿನ ದಿನಗಳಲ್ಲಿ ಜನರು ಪಾಠ ಕಲಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಕಾಂಗ್ರೆಸ್ ಶಾಸಕರಿಗೆ ಸಾಕಾಗಿದೆ. ಅವರಿಗೆ ಜಿಲ್ಲೆಯ ಅಭಿವೃದ್ಧಿ ಮಾಡಲು ಮನಸ್ಸಿಲ್ಲ. ಅವರಿಗೆ ಇರುವುದು ಒಂದೇ ಗುರಿ, ಇಂಡಸ್ಟ್ರಿಯನ್ನು ಬೆಳೆಸಿ ಟಾಟಾ ಬಿರ್ಲಾ ತರ ಆಗಬೇಕು ಎನ್ನುವುದು. ಕಾಂಗ್ರೆಸ್ ಶಾಸಕರಿಗೆ ಅನುಧಾನ ಕೊಡುತ್ತಿಲ್ಲ ಇನ್ನೂ ನಮಗೆ ಎಲ್ಲಿ ಕೊಡ್ತಾರೆ ಎಂದು ಉಸ್ತುವಾರಿ ಸಚಿವರ ವಿರುದ್ಧವೂ ಕಿಡಿಕಾರಿದ್ದಾರೆ.