Tag: ಬಿ ದಯಾನಂದ

  • ಸಿದ್ಧವಾಗಿದೆ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ – ನಾಳೆ ಕೇಂದ್ರಕ್ಕೆ ಸಲ್ಲಿಕೆ?

    ಸಿದ್ಧವಾಗಿದೆ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ – ನಾಳೆ ಕೇಂದ್ರಕ್ಕೆ ಸಲ್ಲಿಕೆ?

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ (Chinnaswamy Stadium Stampede) ಕೇಸ್‌ಗೆ ಸಂಬಂಧಿಸಿದ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ರಿಪೋರ್ಟ್ ಸಿದ್ಧವಾಗಿದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ನಾಳೆಯೊಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ.

    ಯುಪಿಎಸ್‌ಸಿ ನಿಯಾಮವಳಿಗಳ ಪ್ರಕಾರ 15 ದಿನದೊಳಗಾಗಿ ವರದಿ ಸಲ್ಲಿಸಬೇಕು. ಐಪಿಎಸ್ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ್ರೆ ವರದಿ ಸಲ್ಲಿಸಬೇಕು. ಆದರೆ, ಅಮಾನತು ಬಗ್ಗೆ ಕೇಂದ್ರಕ್ಕೆ ಮಾಹಿತಿಯನ್ನಷ್ಟೇ ನೀಡಿರುವ ರಾಜ್ಯ ಸರ್ಕಾರ ಲಿಖಿತ ವರದಿ ನೀಡಬೇಕಿದೆ. ಡಿಪಿಎಆರ್‌ನಿಂದಲೇ ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ವರದಿ ತಯಾರಾಗಿದೆ. ಇದನ್ನೂ ಓದಿ: ಕಾಲ್ತುಳಿತ ತಡೆಗೆ ಹೊಸ ಕಾನೂನು – 3 ವರ್ಷ ಜೈಲು, 5 ಲಕ್ಷ ದಂಡ

    ಐಪಿಎಸ್ ಅಧಿಕಾರಿಗಳಾದ ದಯಾನಂದ್, ಶೇಖರ್, ವಿಕಾಸ್ ಕುಮಾರ್ ಅವರನ್ನು ಚಿನ್ನಸ್ವಾಮಿ ಕಾಲ್ತುಳಿತದ ಕರ್ತವ್ಯಲೋಪದಡಿಯಲ್ಲಿ ಅಮಾನತು ಮಾಡಲಾಗಿತ್ತು. ಇದೀಗ ವರದಿಯಲ್ಲೂ ಪೊಲೀಸರ ಲೋಪ ಎತ್ತಿ ಹಿಡಿದಿದ್ಯಾ ರಾಜ್ಯ ಸರ್ಕಾರ ಎಂಬ ಪ್ರಶ್ನೆ ಮೂಡಿದೆ.

    ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ಹೊಣೆ ಪೊಲೀಸರದ್ದಾಗಿದ್ದು, ಐಪಿಎಸ್ ಅಧಿಕಾರಿಗಳ ಮೇಲೆ ಕರ್ತವ್ಯಲೋಪದ ಚಾರ್ಜ್‌ಶೀಟ್ ಇದೆ ಎನ್ನಲಾಗಿದೆ. ರಾಜ್ಯ ಸರ್ಕಾರದ ಸಸ್ಪೆಂಡ್ ರಿಪೋರ್ಟ್ ಏನಾಗುತ್ತೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಸಸ್ಪೆಂಡ್ ಕ್ರಮವನ್ನ ಎತ್ತಿ ಹಿಡಿಯುತ್ತಾ ಅಥವಾ ರಿಜೆಕ್ಟ್ ಮಾಡುತ್ತಾ ಎಂಬುದು ಸದ್ಯದ ಕುತೂಹಲವಾಗಿದೆ. ಇದನ್ನೂ ಓದಿ: ಕಾಲ್ತುಳಿತ ತನಿಖೆಗೆ ಇನ್ನೊಂದು ವಾರ ಗಡುವು ಕೇಳಲು ಚಿಂತನೆ – ಸಿಸಿಟಿವಿ ಫೂಟೇಜ್ ನೀಡುವಂತೆ ಡಿಸಿ ಪತ್ರ

  • ಕಮಿಷನರ್‌, ಪೊಲೀಸರ ಸಸ್ಪೆಂಡ್‌ ಖಂಡಿಸಿ ಪ್ರತಿಭಟನೆ – ಹೆಡ್‌ಕಾನ್‌ಸ್ಟೇಬಲ್‌ ಜೊತೆ ಫೋನಲ್ಲಿ ಮಾತನಾಡಿ ಸುರೇಶ್‌ ಕುಮಾರ್‌ ಬೆಂಬಲ

    ಕಮಿಷನರ್‌, ಪೊಲೀಸರ ಸಸ್ಪೆಂಡ್‌ ಖಂಡಿಸಿ ಪ್ರತಿಭಟನೆ – ಹೆಡ್‌ಕಾನ್‌ಸ್ಟೇಬಲ್‌ ಜೊತೆ ಫೋನಲ್ಲಿ ಮಾತನಾಡಿ ಸುರೇಶ್‌ ಕುಮಾರ್‌ ಬೆಂಬಲ

    ಬೆಂಗಳೂರು: ಕಾಲ್ತುಳಿತ ಪ್ರಕರಣದಲ್ಲಿ ಬೆಂಗಳೂರು ಕಮಿಷನರ್‌ ದಯಾನಂದ್‌ ಸೇರಿ ಐವರು ಪೊಲೀಸ್‌ ಅಧಿಕಾರಿಗಳ ಅಮಾನತು ಖಂಡಿಸಿ ಪ್ರತಿಭಟನೆ ನಡೆಸಿದ ಹೆಡ್‌ಕಾನ್‌ಸ್ಟೇಬಲ್‌ಗೆ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಪೊಲೀಸರ ಅಮಾನತು ಖಂಡಿಸಿದ ಹೆಡ್‌ಕಾನ್‌ಸ್ಟೇಬಲ್ ನರಸಿಂಹ ರಾಜು ಜೊತೆ ಫೋನ್‌ನಲ್ಲಿ ಶಾಸಕರು ಮಾತನಾಡಿದ್ದಾರೆ. ಅಲ್ಲದೇ, ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

    ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಶಾಸಕ ಸುರೇಶ್‌ ಕುಮಾರ್‌ ಅವರು, ನಾನು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆಯನ್ನು ಕೇಳಿಕೊಳ್ಳುವುದೇನೆಂದರೆ ನರಸಿಂಹ ರಾಜು ಅವರ ಅಳಲು ಇಡೀ ಪೊಲೀಸ್ ಇಲಾಖೆಯ ಅಳಲು ಎಂಬುದನ್ನು ಗಮನಿಸಲಿ. ಪ್ರಾಮಾಣಿಕ ಮನಸ್ಸಿನಿಂದ ಇವರು ಮಾಡಿರುವ ಪ್ರತಿಭಟನೆಯನ್ನು ಸಕಾರಾತ್ಮಕವಾಗಿ ಕಾಣಲಿ. ಯಾವುದೇ ಕಾರಣಕ್ಕೂ ಈ ನಿಷ್ಠಾವಂತ ಪೊಲೀಸ್ ಪೇದೆಯ ಮೇಲೆ ಯಾವುದೇ ಕಠಿಣ ಕ್ರಮ ಜರುಗಿಸದಿರಲಿ ಎಂದು ತಿಳಿಸಿದ್ದಾರೆ.

    ಸಾಮಾನ್ಯ ಪೊಲೀಸ್ ಪೇದೆಯ ನೈತಿಕ ಸ್ಥೈರ್ಯ ಕುಸಿದು ಹೋದರೆ, ಇಲಾಖೆಯನ್ನು ಸರಿಪಡಿಸುವುದು ಬಹಳ ಕಷ್ಟವಾಗುತ್ತದೆ. ಇಂತಹ ಪೊಲೀಸ್ ಸಿಬ್ಬಂದಿ ಬೀದಿಯಲ್ಲಿ ಗಸ್ತು ಹೊಡೆಯುತ್ತಿದ್ದಾರೆ ಎಂಬ ಕಾರಣದಿಂದ ನಾವೆಲ್ಲ ಮನೆಯಲ್ಲಿ ಮನೆಗಳಲ್ಲಿ ನೆಮ್ಮದಿಯಿಂದ ಇದ್ದೇವೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಇಡೀ ಸಮಾಜ ದಯಾನಂದ್‌ರಿಂದ ಹಿಡಿದು ನರಸಿಂಹರಾಜು ವರೆಗೆ ಇರುವ ನಿಷ್ಠಾವಂತ ಅಧಿಕಾರಿಗಳ ಪರವಾಗಿ ನಿಲ್ಲಲು ಇದು ಸರಿಯಾದ ಸಮಯ, ಸರಿಯಾದ ಕಾರಣ, ಸರಿಯಾದ ಗಳಿಗೆ. ರಾಜ್ಯ ಸರ್ಕಾರ ಮುಟ್ಟು ವಿದ್ಯಮಾನವನ್ನು ಯಾವುದೇ ಸೇಡಿನ ಮನೋಭಾವವಿಲ್ಲದೆ, ಪ್ರಾಂಜಲ ಮನಸ್ಸಿನಿಂದ ವಿಮರ್ಶಿಸಿ ವಿವೇಚನಾಯುಕ್ತ ಹೆಜ್ಜೆ ಇಡಬೇಕು ಎಂದು‌ ಶಾಸಕ ಸುರೇಶ್‌ ಕುಮಾರ್ ಆಗ್ರಹಿಸಿದ್ದಾರೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್‌ ಕಮಿಷನರ್‌ ದಯಾನಂದ್‌ ಸೇರಿದಂತೆ ಐವರು ಪೊಲೀಸ್‌ ಅಧಿಕಾರಿಗಳನ್ನು ಸರ್ಕಾರ ಅಮಾನತು ಮಾಡಿದೆ. ಸರ್ಕಾರದ ನಡೆಯನ್ನು ಖಂಡಿಸಿ ಹೆಡ್‌ಕಾನ್‌ಸ್ಟೇಬಲ್‌ವೊಬ್ಬರು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೊ ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದರು.

  • ದಯಾನಂದ್ ಮೇಲೆ ಕೋಪ ಬಂದಿದ್ದರೆ ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು: ಭಾಸ್ಕರ್ ರಾವ್

    ದಯಾನಂದ್ ಮೇಲೆ ಕೋಪ ಬಂದಿದ್ದರೆ ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು: ಭಾಸ್ಕರ್ ರಾವ್

    ಸಿದ್ದರಾಮಯ್ಯ ವೀಕ್ ಮುಖ್ಯಮಂತ್ರಿ: ನಿವೃತ್ತ ಪೊಲೀಸ್ ಅಧಿಕಾರಿ ವಾಗ್ದಾಳಿ

    ಮೈಸೂರು: ದಯಾನಂದ್ (B.Dayananda) ಮೇಲೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು. ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಸರ್ಕಾರದ ವಿರುದ್ಧ ಗುಡುಗಿದರು.

    ಸಿದ್ದರಾಮಯ್ಯ ವೀಕ್, ಅಸಹಾಯಕ ಮುಖ್ಯಮಂತ್ರಿ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಬಹಳ ಸ್ಟ್ರಾಂಗ್ ಇದ್ರು. ಈಗ ಸಂಪೂರ್ಣವಾಗಿ ಕಳೆದು ಹೋಗಿದ್ದಾರೆ. ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ. ತಪ್ಪು ಮಾಡಿರುವವರೇ ಇವರು. ಕೇಂದ್ರ ಸರ್ಕಾರ ಕೊಟ್ಟ ಕಾನೂನನ್ನು ದುರುಪಯೋಗಪಡಿಸಿಕೊಂಡು ಐಎಎಸ್ ಅಧಿಕಾರಿಗಳ ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಘಟನೆ ಸರ್ಕಾರದ ಪ್ರಾಯೋಜಿತ ಕೊಲೆ: ಅರಗ ಜ್ಞಾನೇಂದ್ರ

    ಇದು ದಯಾನಂದ್‌ಗೆ ಸೀಮಿತವಾದ ವಿಚಾರವಲ್ಲ. ಇಡೀ ಪೊಲೀಸ್ ಇಲಾಖೆ ಮಾಡಿದ ಕಗ್ಗೊಲೆ. ಪೊಲೀಸರ ನೈತಿಕ ಸ್ಥೈರ್ಯವನ್ನೇ ಸಿದ್ದರಾಮಯ್ಯ ಕುಗ್ಗಿಸಿದ್ದಾರೆ. ಹೀಗೆ ಎಷ್ಟು ಜನರ ಮೇಲೆ ಕ್ರಮ ತೆಗೆದುಕೊಳ್ಳುತ್ತಾ ಹೋಗುತ್ತೀರಾ? ತೀರಾ ಅವಮಾನಕರ ರೀತಿಯಲ್ಲಿ ದಯಾನಂದ್ ಅವರನ್ನ ನಡೆಸಿಕೊಂಡಿದ್ದೀರಾ. ಅವರ ಮೇಲೆ ನಿಮಗೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು, ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು. ಅದನ್ನ ಬಿಟ್ಟು ಅಮಾನತು ಮಾಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಐಪಿಎಲ್ ಏನು ರಾಜ್ಯ ಮತ್ತು ದೇಶದ ಪಂದ್ಯಾವಳಿನಾ? ಅದೊಂದು ಕ್ಲಬ್ ಪಂದ್ಯ ಅಷ್ಟೇ. ಅದಕ್ಕೆ ಡಿ.ಕೆ.ಶಿವಕುಮಾರ್ ಹೋಗಿದ್ದೇನು, ಮುತ್ತಿಕಿದ್ದೇನು, ಬಾವುಟ ಹಿಡಿದಿದ್ದೇನು. ಇದೆಲ್ಲಾ ಮುಖ್ಯಮಂತ್ರಿಗೆ ಗೊತ್ತಾಗಲಿಲ್ವಾ? ಕಾಂಗ್ರೆಸ್ ಹೈಕಮಾಂಡ್ ಬಿಗಿಯಾಗಿದ್ರೆ ಈ ಸಿಎಂ, ಡಿಸಿಎಂ, ಗೃಹ ಸಚಿವರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗೋವಿಂದರಾಜ್ ವಿರುದ್ಧ ಕ್ರಮ – ಅಷ್ಟಾದ್ರೂ ಜ್ಞಾನೋದಯ ಆಗಿದ್ದಕ್ಕೆ ಸರ್ಕಾರಕ್ಕೆ ಅಭಿನಂದನೆ: ಹೆಚ್‍ಡಿಕೆ ವ್ಯಂಗ್ಯ

    ಯಾವುದೊ ಆಫ್ರಿಕಾ ದೇಶದಲ್ಲಿ ಹೆಣಗಳನ್ನ ಹೊತ್ತುಕೊಂಡು ಹೋದ ರೀತಿಯಲ್ಲಿ ಬೆಂಗಳೂರಿನಲ್ಲಿ ಹೊತ್ತಿಕೊಂಡು ಹೋಗಲಾಗಿದೆ ಎಂದು ಟೀಕಿಸಿದರು.

  • ಅತ್ಯಂತ ಕರಾಳ ದಿನ, ಡಿಸಿಎಂ ಅಪರಾಧಿ ಅನ್ನೋದು ರಾಜ್ಯಕ್ಕೆ ಗೊತ್ತಿದೆ: ಭಾಸ್ಕರ್‌ ರಾವ್‌ ಆಕ್ರೋಶ

    ಅತ್ಯಂತ ಕರಾಳ ದಿನ, ಡಿಸಿಎಂ ಅಪರಾಧಿ ಅನ್ನೋದು ರಾಜ್ಯಕ್ಕೆ ಗೊತ್ತಿದೆ: ಭಾಸ್ಕರ್‌ ರಾವ್‌ ಆಕ್ರೋಶ

    ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ (Chinnaswamy Stadium Stampede Case) ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ್‌ (B Dayananda) ಅವರನ್ನು ಅಮಾನತು ಮಾಡಿದ್ದಕ್ಕೆ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ (Bhaskar Rao) ಕಿಡಿಕಾರಿದ್ದಾರೆ.

    ಎಕ್ಸ್‌ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತು ಕರ್ನಾಟಕ ಪೊಲೀಸ್ (Karnataka Police) ಇತಿಹಾಸದಲ್ಲಿ ಅತ್ಯಂತ ಕರಾಳ ದಿನ ಎಂದು ಪೋಸ್ಟ್‌ ಮಾಡಿದ್ದಾರೆ.


    ಪೋಸ್ಟ್‌ನಲ್ಲಿ ಏನಿದೆ?
    ಸಿದ್ದರಾಮಯ್ಯ (Siddaramaiah) ಅವರು ಭಯಗೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಅಮಾನತು ಮಾಡಿರುವುದು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ. ಸತ್ಯ ಹೇಳಿದ್ದಕ್ಕೆ ಅವರಿಗೆ ಶಿಕ್ಷೆಯ ರೂಪದಲ್ಲಿ ಬಹುಮಾನ ನೀಡಿದ್ದಾರೆ. ಇದನ್ನೂ ಓದಿ: Stampede Case | ಸಿಎಂ ಸೂಚನೆ ಬೆನ್ನಲ್ಲೇ ನಾಲ್ವರು ಅರೆಸ್ಟ್‌, ಉಳಿದವರು ಎಸ್ಕೇಪ್‌

    ದಯಾನಂದ್‌ ಮತ್ತು ಅವರ ತಂಡ ಬೆಂಗಳೂರನ್ನು ಸುರಕ್ಷಿತವಾಗಿಡಲು ಇಡೀ ರಾತ್ರಿ ಶ್ರಮಿಸಿತ್ತು. ಸಾವಿನ ಪರೇಡ್‌ ನಡೆಸಲು ಕಾರಣರಾದ ಉಪಮುಖ್ಯಮಂತ್ರಿಯೇ ಈ ಪ್ರಕರಣದಲ್ಲಿ ಪ್ರಮುಖ ಅಪರಾಧಿ ಎಂದು ಕರ್ನಾಟಕದ ಎಲ್ಲರಿಗೂ ತಿಳಿದಿದೆ.

    ಯಾವುದೇ ಮುಖ್ಯಮಂತ್ರಿ ಇಷ್ಟು ಅಸಹಾಯಕ, ಹೇಡಿಯಾಗಲು ಸಾಧ್ಯವಿಲ್ಲ. ಸರ್ಕಾರದ ಕೈಗೆ ರಕ್ತ ಅಂಟಿಕೊಂಡಿದ್ದು ಈಗ ನಿಯಂತ್ರಣವನ್ನು ಕಳೆದುಕೊಂಡಿದ್ದು ಅಪಾಯದಲ್ಲಿದೆ.