ಬೆಂಗಳೂರು: ನಗರದಲ್ಲಿ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ಖಾಲಿ ಟ್ರಂಕ್ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದರು.
ನಮ್ಮ ಊರು – ನಮ್ಮ ನಡಿಗೆ – ನಮ್ಮ ಮಾತುಕತೆ
Today’s walk at Cubbon Park marked a meaningful moment in a journey that has truly been close to my heart. Through this series, I have met citizens across the city, listened to their ideas, and shared their hopes for our future. These… pic.twitter.com/hckW2ZUlke
ಈ ವೇಳೆ ನಾಗರಿಕರೊಬ್ಬರು, ಸರ್ಕಾರ ಆಸ್ತಿಗಳನ್ನು ʻಎ ಖಾತಾʼ (A Khata) ಆಗಿ ಪರಿವರ್ತನೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಈ ಪರಿವರ್ತನೆಗಾಗಿ ಅನೇಕರು, ಹಲವು ವರ್ಷಗಳಿಂದ ಕಾಯುತ್ತಿದ್ದರು ಎಂದು ಸರ್ಕಾರದ ತೀರ್ಮಾನವನ್ನ ಸ್ವಾಗತಿಸಿ, ಮುಕ್ತವಾಗಿ ಪ್ರಶಂಸಿದರು. ಇದನ್ನೂ ಓದಿ: ನೀರಿನ ಬಿಲ್ 3 ಪಟ್ಟು ಹೆಚ್ಚಳ – ದುಬಾರಿ ಬಿಲ್ ನೋಡಿ ಹೌಹಾರಿದ ಗ್ರಾಹಕರು!
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ʻಎ ಖಾತಾʼ ನಿಮ್ಮ ಆಸ್ತಿ ದಾಖಲೆ. ಸಾರ್ವಜನಿಕರ ಆಸ್ತಿ ದಾಖಲೆಗಳನ್ನ ಸರಿಪಡಿಸಿ, ಅವುಗಳನ್ನು ಜನರಿಗೆ ನೀಡುವುದು ನಮ್ಮ ಸರ್ಕಾರದ 6ನೇ ಗ್ಯಾರಂಟಿ. ಇದಕ್ಕಾಗಿ ನಾವು ಕೇವಲ 5% ಮಾತ್ರ ಅಭಿವೃದ್ಧಿ ಶುಲ್ಕ ಪಾವತಿ ಮಾಡುವಂತೆ ಕೇಳಿದ್ದೇವೆ. ನಿಮ್ಮಂತಹ ಪ್ರಜ್ಞಾವಂತ ನಾಗರೀಕರು ಇದನ್ನು ಸ್ವಾಗತಿಸಿರುವುದಕ್ಕೆ ಧನ್ಯವಾದ ಎಂದು ನಮಿಸಿದರು.
– ಎ ಖಾತಾ, ಬಿ ಖಾತಾ ಅಂತ ಸರ್ಕಾರ ಹಗಲು ದರೋಡೆ ಮಾಡ್ತಿದೆ ಅಂತ ಆರೋಪ
ಬೆಂಗಳೂರು: ಬೆಂಗಳೂರಿಗರಿಗೆ ದೀಪಾವಳಿ ಉಡುಗೊರೆ ಅಂತ ಜನರಿಗೆ ಬಿ ಖಾತೆ, ಎ ಖಾತೆ ಅಂತ ಸರ್ಕಾರ ಹಗಲು ದರೋಡೆ ಮಾಡ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy), ಸರ್ಕಾರದ ವಿರುದ್ಧ ವಾಗ್ದಾಳಿ ನಡೆದಿದ್ದಾರೆ.
ಬಿ ಖಾತೆಯಿಂದ ಎ ಖಾತೆ ಮಾಡಿಕೊಡುವ ಸರ್ಕಾರದ ಸ್ಕೀಂ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಇದು ಲೂಟಿ ಹೊಡೆಯುವ ಯೋಜನೆ ಅಂತ ವಾಗ್ದಾಳಿ ನಡೆಸಿದರು. ಬಿ ಖಾತೆಯಿಂದ ಎ ಖಾತಾ ಮಾಡಿಸೋದು ಜನರಿಗೆ ಟೋಪಿ ಹಾಕೋ ಕೆಲಸ. ಇದರಲ್ಲಿ ದುಡ್ಡು ಮಾಡೋ ಪ್ಲ್ಯಾನ್ ಇದೆ. 2007 ರಲ್ಲಿ ನಮ್ಮ ಸರ್ಕಾರ ಇದ್ದಾಗ ಖಾತಾ ಬದಲಾವಣೆಗೆ ಆದೇಶ ಆಗಿತ್ತು. ಅನೇಕ ಕೋರ್ಟ್‌ಗಳು ಇದರ ಬಗ್ಗೆ ಆದೇಶ ಮಾಡಿವೆ. ಈಗ ಈ ಸರ್ಕಾರದವರು ಲೂಟಿ ಮಾಡಲು ಬಿ ಖಾತೆ, ಎ ಖಾತೆ ಅಂತ ಶುರು ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಅರ್ಜಿ ಆಹ್ವಾನ – ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ಮಂದಿಯಿಂದ ಅರ್ಜಿ
1997 ರಲ್ಲಿ 30×40 ಸೈಟ್ ಖಾತೆ ಮಾಡಿಸಿಕೊಳ್ಳಲು 12,263 ರೂ. ಇತ್ತು. ಈಗ ಅದರಲ್ಲೇ ಲಕ್ಷಾಂತರ ರೂಪಾಯಿ ಲೂಟಿ ಮಾಡೋಕೆ ಸರ್ಕಾರ ಮುಂದಾಗಿದೆ. 2007 ರಲ್ಲಿ ನನ್ನ ಸರ್ಕಾರ ಇದ್ದಾಗಲೇ ಖಾತೆ ಮಾಡಿಕೊಡುವ ನಿರ್ಧಾರ ಆಗಿದೆ. ಆಗಲೇ ಹಣವನ್ನ ಬಿಬಿಎಂಪಿ ಖಾತೆ ಮಾಡಿಕೊಡಲು ಹಣ ಪಡೆದಿದೆ ಎಂದು ತಿಳಿಸಿದರು.
ಜನರನ್ನ ಹಗಲು ದರೋಡೆ ಮಾಡಲು ಈ ಸರ್ಕಾರ ಮುಂದಾಗಿದೆ. ಎ ಖಾತಾ ಬಿ ಖಾತಾ ಅಂತ ಎಲ್ಲೂ ಇಲ್ಲ. ಈಗ ಓಸಿ, ಸಿಸಿ ಅಂತ ಮತ್ತೊಂದು ಸ್ಕೀಂ ಮಾಡೋಕೆ ಹೊರಟಿದ್ದಾರೆ. ಇವರ ಪ್ರಾರಂಭ 30×40 ಸೈಟ್‌ಗೆ ಖಾತೆ ಮಾಡಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಬಡವರ ಎಲ್ಲಿ ಇದನ್ನ ಕಟ್ಟೋಕೆ ಆಗುತ್ತದೆ. ಈ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಲೂಟಿ ಮಾಡೋಕೆ ಬಿ ಖಾತಾ, ಎ ಖಾತಾ ಸ್ಕೀಂ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದೀಪಾವಳಿ ಕೊಡುಗೆ ನೆಪದಲ್ಲಿ ಜನಕ್ಕೆ ದೋಖಾ, ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ: ಹೆಚ್‌ಡಿಕೆ ಬಾಂಬ್
ಬೆಂಗಳೂರು ಮತ್ತು ನಾಡಿನ ಜನರು ಎರಡು ವರ್ಷ ತಡೆಯಿರಿ. ಯಾರು ಹಣ ಕೊಟ್ಟು ಖಾತೆ ಮಾಡಿಸಿಕೊಳ್ಳಬೇಕು ಅಂತಿದ್ದೀರೋ, ಎರಡು ವರ್ಷ ಆದ ಮೇಲೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ಹಿಂದೆ ಇದ್ದ ಸಿಸ್ಟಮ್‌ನಲ್ಲಿ ಸರಳವಾಗಿ ಖಾತೆ ಮಾಡಿಸಿ ಕೊಡುವ ಕೆಲಸ ಮಾಡ್ತೀವಿ. ಕಡಿಮೆ ದರದಲ್ಲಿ ಖಾತೆ ಮಾಡಿಸಿ ಕೊಡುವ ಕೆಲಸ ಮಾಡ್ತೀವಿ. ಎರಡು ವರ್ಷ ಯಾರು ಇವರ ಮಾತಿಗೆ ಮರುಳಾಗಬೇಡಿ. ನಿಮ್ಮನ್ನ ಉಳಿಸುವ ಕೆಲಸ ಮಾಡ್ತೀವಿ ಎಂದು ಜನತೆಗೆ ಕರೆ ಕೊಟ್ಟರು.
– ಮಂಗಳವಾರದಿಂದ ಬೆಂಗಳೂರು ಒನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ
ಬೆಂಗಳೂರು: ಬಿ ಖಾತಾದಿಂದ ಎ ಖಾತಾ (A Khata) ಪರಿವರ್ತನೆಗೆ ಈಗಾಗಲೇ ಅರ್ಜಿ ಆಹ್ವಾನ ಆಗಿದೆ. ಬೆಂಗಳೂರಿನ (Bengaluru) 500ಕ್ಕೂ ಹೆಚ್ಚು ಮಂದಿ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಂಗಳವಾರದಿಂದ ಬೆಂಗಳೂರು ಒನ್‌ನಲ್ಲಿ (Bengaluru One) ಅರ್ಜಿ ಸಲ್ಲಿಕೆಗೆ ಅವಕಾಶ ಸಿಗಲಿದೆ. ಮತ್ತೊಂದು ಕಡೆ ಅರ್ಜಿ ಸಲ್ಲಿಕೆಯ ಡೆಮೋ ವೀಡಿಯೋವನ್ನ ಜಿಬಿಎ ಇಂದು ರಿಲೀಸ್ ಮಾಡಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಾರಿ ಆದ ಬಳಿಕ ಸರ್ಕಾರ ಬೆಂಗಳೂರಿಗರಿಗೆ ನೀಡಿರೋ ದೊಡ್ಡ ಗಿಫ್ಟ್ ಅಂದರೆ ಅದು ಬಿ ಖಾತೆಗಳಿಗೆ ಎ ಖಾತಾ ಮಾನ್ಯತೆ ನೀಡಿರುವುದು. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವೆಬ್‌ಸೈಟ್ ಬಿಡುಗಡೆ ಮಾಡಿ ಎ ಖಾತಾ ಪರಿವರ್ತನೆಗೆ ಅರ್ಜಿ ಆಹ್ವಾನಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಅರ್ಜಿ ಹಾಕೋದಕ್ಕೆ ಅವಕಾಶ ನೀಡಿ ಐದು ದಿನ ಆಗಿದ್ದು, 500 ಜನ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 3 ಸಾವಿರ ಜನ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಮಾಹಿತಿ ಪಡೆದುಕೊಂಡಿರೋದು ಬಯಲಾಗಿದೆ. ಬೆಂಗಳೂರು ಜನ ಬಿ ಖಾತಾ ಪರಿವರ್ತನೆಯ ವೆಬ್‌ಸೈಟ್‌ಗೆ ವಿಸಿಟ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಇದನ್ನೂ ಓದಿ: ಇನ್ಮುಂದೆ ನೆಟ್ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡ್ಬೋದು – RBIನಿಂದ ಆಫ್‌ಲೈನ್ ಡಿಜಿ ರುಪಿ ಬಿಡುಗಡೆ
ಅರ್ಜಿ ಸಲ್ಲಿಕೆಯನ್ನ ಬೆಂಗಳೂರು ಒನ್‌ಗಳಲ್ಲೂ ಕೂಡ ಅಪ್ಲೈ ಮಾಡಬಹುದಾಗಿದೆ. ನಾಳೆಯಿಂದ ಬೆಂಗಳೂರು ಒನ್‌ಗಳಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಜನರೇ ತಮ್ಮ ಮೊಬೈಲ್‌ನಲ್ಲಿ ಹೇಗೆ ಅರ್ಜಿ ಸಲ್ಲಿಕೆ ಮಾಡಿಕೊಳ್ಳೋದು ಮತ್ತು ಅರ್ಜಿ ಸಲ್ಲಿಕೆ ಕ್ರಮ ಹೇಗೆ ಅಂತಾ ಒಂದು ಡೆಮೋ ವೀಡಿಯೋವನ್ನ ಬಿಡುಗಡೆ ಮಾಡುವುದಾಗಿ ಪಬ್ಲಿಕ್ ಟಿವಿಗೆ ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಷ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಲಾಠಿ, ಗನ್ ಟ್ರೈನಿಂಗ್ ಕೊಟ್ಟಿದ್ದೀರಾ ಎಂದ ‘ಕೈ’ ನಾಯಕರಿಗೆ ಟಾಂಗ್ – ತಂದೆ, ನಾನು, ಮಗ RSS ಎಂದ ಸುನಿಲ್ ಕುಮಾರ್
ಎ ಖಾತಾ ಪಡೆಯಬೇಕು ಅಂದರೆ 5% ಮಾರ್ಗಸೂಚಿ ದರ ಕೂಡ ಕಟ್ಟಬೇಕಾಗಿದೆ. ಇದು ಮಧ್ಯಮ ವರ್ಗಕ್ಕೆ ಹೊರೆ ಆಗುತ್ತದೆ, ವಿನಾಯ್ತಿ ಮಾಡಿ ಅಂತಾ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮನವಿ ಮಾಡಿದ್ದಾರೆ. ಆದರೆ ಡಿಸಿಎಂ ಮಾರ್ಗಸೂಚಿ ದರ 5% ಕಡಿಮೆ ಬೆಲೆ. ಬೆಲೆ ಫಿಕ್ಸ್ ಮಾಡಲಾಗಿದೆ, ವಿನಾಯಿತಿ ಇಲ್ಲ. ಎ ಖಾತಾ ಆದರೆ ಬ್ಯಾಂಕ್‌ನಲ್ಲಿ ಸಾಲ ಸಿಗುತ್ತೆ ಮತ್ತು ಸೈಟ್ ಬೆಲೆ ಜಾಸ್ತಿ ಕೂಡ ಆಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ-ಅಫ್ಘಾನಿಸ್ತಾನದ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಗೆ
ಮಂಡ್ಯ: ದೀಪಾವಳಿ ಕೊಡುಗೆ (Deepavali Gift) ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ-ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ನೇರ ಆರೋಪ ಮಾಡಿದರು.
ಮಂಡ್ಯ ನಗರದ (Mandya City) ಸಂಜಯ್ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆ ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನ ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಎಂದು ಕಿಡಿಕಾರಿದರು. ಇದನ್ನೂ ಓದಿ: ನ.1ರಿಂದ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ – ನಿವೇಶನಗಳಿಗಷ್ಟೇ ಎ ಖಾತೆ; ಕಟ್ಟಡಗಳ ಸಕ್ರಮ ಇಲ್ಲ
ಬೆಂಗಳೂರು (Bengaluru) ನಗರದ ಜನರಿಗೆ ದೀಪಾವಳಿ ಕೊಡುಗೆ ನೀಡೋದಕ್ಕೆ ಬದಲಾಗಿ ಶಾಕ್ ಕೊಡ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ (A Khata) ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ಸರ್ಕಾರ. 30/40 ನಿವೇಶನಕ್ಕೆ 4 ರಿಂದ 8 ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10 ರಿಂದ 13 ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ಏರಬೇಕಿದೆ. ಎ-ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು. ಇದನ್ನೂ ಓದಿ: ಐನಾಕ್ಸ್‌ವಿಂಡ್ ಕಂಪನಿಯಿಂದ ಕುಷ್ಟಗಿಯಲ್ಲಿ 400 ಕೋಟಿ ಹೂಡಿಕೆ: ಎಂಬಿ ಪಾಟೀಲ್
ಹಣ ಮಾಡುವುದಕ್ಕೆಂದೇ ಈ ಸರ್ಕಾರ ಇದೆ
ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡೋದು ಎಂದರೆ ಹೀಗೆನಾ? ಜನರ ಮೇಲೆ ತೆರಿಗೆ ವಿಧಿಸಿ 6ನೇ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ನಿರಂತರವಾಗಿ ಸುಲಿಗೆ ಮಾಡುತ್ತಿದೆ. ಕೇವಲ ಹಣ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಪ್ರತಿಯೊಂದರಲ್ಲೂ ದುಡ್ಡು ಮಾಡುವ ಬಗ್ಗೆಯಷ್ಟೇ ಆಲೋಚನೆ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದರು. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ
ಈ ಸರ್ಕಾರದಲ್ಲಿ ಹಣ ಇಲ್ಲ. ಅದಕ್ಕೆ ಕಂಡ ಕಂಡ ಕಡೆ ಹಣಕ್ಕೆ ಕೈ ಹಾಕುತ್ತಿದೆ. ಬೆಂಗಳೂರಿನ ಗುಂಡಿ ಮುಚ್ಚೋದು ಇರಲಿ. ರಾಜ್ಯದಲ್ಲಿರುವ ಗುಂಡಿಗಳನ್ನೂ ಮುಚ್ಚೋಕೆ ಇವರಿಂದ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡ ಸಚಿವರು, ಜೆಡಿಎಸ್ ಕೊಡುಗೆ ಏನು ಎಂದು ಹಾಸನದಲ್ಲಿ ಸಿಎಂ ಪ್ರಶ್ನೆ ಮಾಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ದೆಹಲಿಗೆ ಬಂದಿದ್ದರು. 2018ರಲ್ಲಿ ನೀವು ಕೊಟ್ಟ 500 ಕೋಟಿ ರೂಪಾಯಿ ಅನುದಾನದಲ್ಲಿಯೇ ಇನ್ನೂ ಕೆಲಸ ನಡೆಯುತ್ತಿದೆ ಎಂದು ಅವರೇ ಹೇಳುತ್ತಾರೆ. ಅನುದಾನದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು, ನಾನು ಅಧಿಕಾರದಲ್ಲಿ ಇದ್ದ ಎಷ್ಟು ಕೊಟ್ಟಿದ್ದೇನೆ? ಇವರು ಎಷ್ಟು ಕೊಟ್ಟಿದ್ದಾರೆ? ಎಂಬ ಬಗ್ಗೆ ಜನರ ಮುಂದೆ ದಾಖಲೆ ಇಡಲಿ ಎಂದು ಕೇಂದ್ರ ಸಚಿವರು ಸವಾಲು ಹಾಕಿದರು.
ಮಾಜಿ ಪ್ರಧಾನಿಗಳಾದ ಹೆಚ್.ಡಿ ದೇವೇಗೌಡರು ಹಾಗೂ ಕೇಂದ್ರ ಸಚಿವರ ಸಂಸತ್ ಪ್ರದೇಶಾಭಿವೃದ್ಧಿ ನಿಧಿಯಿಂದ ಈ ಆಟೋ ನಿಲ್ದಾಣ ನಿರ್ಮಾಣ ಮಾಡಿದ್ದೇವೆ. ಇದು ಸುಸಜ್ಜಿತ, ವಿಶಾಲ ಆಟೋ ನಿಲ್ದಾಣ ಆಗಿದ್ದು, ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಇಲ್ಲಿ ಸುಸಜ್ಜಿತ ಆಟೋ ನಿಲ್ದಾಣ ಬೇಕು ಎನ್ನುವುದು ಬಹಳ ದಿನಗಳ ಬೇಡಿಕೆ ಆಗಿತ್ತು. ಆ ಬೇಡಿಕೆ ಈಡೇರಿಸುವ ಕೆಲಸ ಆಗಿದೆ. ಅಲ್ಪ ಕಾಲದಲ್ಲಿಯೇ ನಿಲ್ದಾಣ ನಿರ್ಮಾಣ ಆಗಿದೆ ಎಂದರು.
ನಗರದಲ್ಲಿ ಆಟೋ ವ್ಯವಸ್ಥೆ ಜನತೆಯ ಸಂಚಾರಕ್ಕೆ ಬಹಳ ಅನುಕೂಲವಾಗಿದೆ. ಆದರೆ, ಆಟೋ ಚಾಲಕರು ಮಳೆ, ಬಿಸಿಲಿನಲ್ಲಿ ಕಷ್ಟ ಅನುಭವಿಸುತ್ತಿದ್ದರು. ನಮಗೊಂದು ಸುಸಜ್ಜಿತ ನಿಲ್ದಾಣ ಮಾಡಿಕೊಡಿ ಎಂದು ಕೇಳಿದ್ದರು. ತಕ್ಷಣವೇ ಅದಕ್ಕೆ ಕ್ರಮ ವಹಿಸಿದ್ದೇವೆ. ದೇವೇಗೌಡರ ಸಂಸತ್ ನಿಧಿ ಹಾಗೂ ನನ್ನ ಪಾಲಿನ ಸಂಸತ್ ನಿಧಿಯ ಅನುದಾನದಿಂದ ಕಾಮಗಾರಿ ಕೈಗೆತ್ತಿಗೊಂಡಿದ್ದೆವು. ಈ ಸಂದರ್ಭದಲ್ಲಿ ಅನುದಾನ ನೀಡಿದ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಬೆಂಗಳೂರು: ರಾಜ್ಯ ಸರ್ಕಾರ ದೀಪಾವಳಿ (Deepavli) ಗಿಫ್ಟ್ ನೀಡಿದ್ದು ನವೆಂಬರ್ 1 ರಿಂದ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾವಣೆ ಮಾಡುವ ಐತಿಹಾಸಿಕ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ. ಇದು ಬೆಂಗಳೂರಿನ 15 ಲಕ್ಷಕ್ಕೂ ಆಸ್ತಿಗಳ ಮಾಲೀಕರಿಗೆ ಉಪಯೋಗವಾಗಲಿದೆ. ಇದೊಂದು ಕ್ರಾಂತಿಕಾರಕ ತೀರ್ಮಾನ. ಆಸ್ತಿ ಶುದ್ಧೀಕರಣಕ್ಕೆ ನಾಂದಿ ಅಂತ ಬೆಂಗಳೂರು (Bengaluru) ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ.
ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ-ಖಾತಾ ನೀಡಲು ಹೊಸದಾಗಿ ಜಾರಿಗೊಳಿಸಿರುವ ಆನ್‌ಲೈನ್ ವ್ಯವಸ್ಥೆಗೆ ವಿಧಾನಸೌಧದಲ್ಲಿ ಚಾಲನೆ ನೀಡಿದರು.
2 ಸಾವಿರ ಚದರ ಅಡಿ ವಿಸ್ತೀರ್ಣದ ಆಸ್ತಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತವೆ. 2 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಆಸ್ತಿಗಳಿಗೆ ನಕ್ಷೆ ಸೇರಿದಂತೆ ಇತರೇ ದಾಖಲೆಗಳನ್ನು ನೀಡಬೇಕಾಗುತ್ತದೆ. ನವೆಂಬರ್ 1ರಿಂದ ಪ್ರಾರಂಭವಾಗುವ ಈ ಅಭಿಯಾನ 100 ದಿನಗಳ ನಡೆಯಲಿದೆ. ಸದ್ಯಕ್ಕೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಮಾರ್ಗಸೂಚಿ ದರಕ್ಕೆ ಶೇ.5ರಷ್ಟು ಹಣ ಕಟ್ಟಬೇಕು. 100 ದಿನದ ನಂತರ ಹೆಚ್ಚುವರಿ ಶುಲ್ಕ ನಿಗದಿಯಾಗಲಿದ್ದು, ಆನಂತರ ದರ ನಿಗದಿಯಾಗಲಿದೆ. ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಅಂತ ಡಿಕೆಶಿ ಘೋಷಿಸಿದ್ದಾರೆ. ಇದನ್ನೂಓದಿ: ಸೇನಾ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರಿಗೆ MSIL ಸೂಪರ್ ಮಾರ್ಕೆಟ್ ಚಿಂತನೆ: ಎಂ ಬಿ ಪಾಟೀಲ್
ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ
ಬೆಂಗಳೂರಿನಲ್ಲಿ ಸದ್ಯ ಅಂದಾಜು 32 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು ಸದ್ಯ 17.5 ಲಕ್ಷ ಎ ಖಾತಾ ಆಸ್ತಿ ಇದ್ದರೆ 7.5 ಲಕ್ಷ ಬಿ ಖಾತಾ ಆಸ್ತಿಗಳಾಗಿವೆ. ಇನ್ನುಳಿದ 7.8 ಲಕ್ಷ ಆಸ್ತಿಗಳಿಗೆ ಯಾವುದೇ ಖಾತಾಗಳಿಲ್ಲ.
500 ರೂ. ಕಟ್ಟಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಜಿಬಿಎ ಸಿಬ್ಬಂದಿಯೇ ಮನೆ ಬಾಗಿಲಿಗೆ ಬಂದು ಸೇವೆ ನೀಡುತ್ತಾರೆ. 100 ದಿನವರೆಗೆ ಮಾರ್ಗಸೂಚಿ ದರಕ್ಕೆ 5% ಹಣ ಕಟ್ಟಬೇಕಾಗುತ್ತದೆ. 100 ದಿನದ ನಂತರ ಹೆಚ್ಚುವರಿ ಶುಲ್ಕ ಕಟ್ಟಬೇಕು. 3 ತಿಂಗಳ ನಂತರ ಹೆಚ್ಚುವರಿ ಶುಲ್ಕ ನಿಗದಿ ಆಗಲಿದೆ. ಬೆಂಗಳೂರು ಒನ್ ಕೇಂದ್ರದಲ್ಲೂ ನೋಂದಣಿಗೆ ಅವಕಾಶ ನೀಡಲಾಗಿದೆ.
ನಿವೇಶನಗಳಿಗಷ್ಟೇ ಎ ಖಾತೆ; ಕಟ್ಟಡಗಳ ಸಕ್ರಮವಿಲ್ಲ
ನಿವೇಶನಗಳಿಗೆ ಮಾತ್ರ `ಎ’ ಖಾತಾ ಸೌಲಭ್ಯ ಸಿಗಲಿದೆ.ಆದರೆ ಬಿಲ್ಡಿಂಗ್‌ಗಳಿಗೆ ಸದ್ಯಕ್ಕೆ ಎ ಖಾತಾ ಸ್ಟೇಟಸ್ ಇರುವುದಿಲ್ಲ. ಮೊದಲು ನಿವೇಶನಗಳನ್ನ ಎ ಖಾತಾ ಆಗಿ ಪರಿವರ್ತನೆಯಾಗಲಿದೆ. ಇದಾದ ಬಳಿಕ ಕಟ್ಟಡಗಳ ಮಾನ್ಯತೆಗೆ ಸರ್ಕಾರ ಪ್ರತ್ಯೇಕ ನಿಯಮ, ಶುಲ್ಕವನ್ನು ನಿಗದಿ ಮಾಡಲಿದೆ. ಇದನ್ನೂ ಓದಿ: ದೀಪಾವಳಿಗೆ ಸಿಹಿ ಸುದ್ದಿ- ರಾಜ್ಯದ ಸರ್ಕಾರಿ ನೌಕರರ DA 2% ಏರಿಕೆ
ಎ-ಖಾತಾ ಆನ್‌ಲೈನ್‌ನಲ್ಲಿ ಅಪ್ಲೈ ಮಾಡೋದು ಹೇಗೆ? (2000 ಚ.ಮೀಟರ್‌ಗಳ ವರೆಗೆ)
1. ತಮ್ಮ ಮೊಬೈಲ್ ನಂಬರ್‌ನಿಂದ ಇಂದು ಅನಾವರಣಗೊಳ್ಳುವ https://bbmp.karnataka.gov.in/btoakhata ವೆಬ್ ಪೋರ್ಟಲ್‌ಗೆ ಹೋಗಿ ಓಟಿಪಿ ಸಹಿತ ಲಾಗಿನ್ ಆಗಬೇಕು
2. ಫೈನಲ್ ಬಿ ಖಾತಾದ ಇಪಿಐಡಿ ನಂಬರ್ ಅನ್ನು ನಮೂದಿಸಬೇಕು
3. ಆಸ್ತಿಯ ಮಾಲೀಕರು ತಮ್ಮ ಆಧಾರ್ ದೃಢೀಕರಿಸಬೇಕು.
4. ನಿವೇಶನ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ
5. ಭೂಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ಸೈಟ್‌ಗಳು ಅಪ್ಲೈ ಮಾಡೋಕೆ ಅರ್ಹರು. ಫ್ಲ್ಯಾಟ್ ಇರುವವರು ಅಪ್ಲೈ ಮಾಡೋ ಆಗಿಲ್ಲ.
6. ನಗರಪಾಲಿಕೆಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ
7. ಮಾರುಕಟ್ಟೆ ಮೌಲ್ಯದ ಶೇ.5 ರಷ್ಟು ಮೊತ್ತವನ್ನು ʻಏಕ ನಿವೇಶನʼ ಅನುಮೋದನೆ ಶುಲ್ಕವಾಗಿ ಹಾಗೂ ಇತರೇ ಶುಲ್ಕಗಳನ್ನು ಪಾವತಿಸುವುದು.
8. ಇಷ್ಟೆಲ್ಲಾ ಪ್ರೋಸೆಸ್ ಆದ ಮೇಲೆ ಸ್ವಯಂಕೃತವಾಗಿ ಎ-ಖಾತಾ ಸಿಗಲಿದೆ
– 2000 ಚ.ಮೀ.ಗಿಂತ ಹೆಚ್ಚು ಆಸ್ತಿದಾರರು ಎ-ಖಾತಾಗೆ ಅಪ್ಲೈ ಮಾಡೋದು ಹೇಗೆ?
ಬೆಂಗಳೂರು: ಸಿಲಿಕಾನ್ ಸಿಟಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ದೀಪಾವಳಿ ಗಿಫ್ಟ್ ಕೊಡ್ತಾ ಇದೆ. 1,200 ಚದರ ಅಡಿವರೆಗಿನ ನಿವೇಶನದಲ್ಲಿ ನಿರ್ಮಿಸಿದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (OC) ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಿದ್ರೆ, ಮತ್ತೊಂದೆಡೆ ‘ಬಿ-ಖಾತಾ’ (B Khata) ಆಸ್ತಿಗಳನ್ನು ‘ಎ-ಖಾತಾ’ಗೆ (A Khata) ಪರಿವರ್ತಿಸುವ ಆನ್‌ಲೈನ್ ಪೋರ್ಟಲ್‌ಗೆ ಇಂದು ಚಾಲನೆ ನೀಡುತ್ತಿದೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ‘ಬಿ – ಖಾತೆ’ಯಿಂದ ‘ಎ – ಖಾತೆ’ಗೆ ಪರಿವರ್ತಿಸುವ ಆನ್‌ಲೈನ್ ಪೋರ್ಟಲ್‌ಗೆ ಚಾಲನೆ ನೀಡಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿರುವ ಅಂದಾಜು 6 ಲಕ್ಷಕ್ಕೂ ಅಧಿಕ ‘ಬಿ – ಖಾತೆ’ದಾರರು ತಮ್ಮ ಆಸ್ತಿಗಳಿಗೆ ‘ಎ – ಖಾತೆ’ ಪಡೆಯಲು ದಾರಿ ಸುಗಮವಾಗಿದೆ. ಇದರೊಂದಿಗೆ ಹೊಸ ನಿವೇಶನಗಳಿಗೂ ನೇರವಾಗಿ ‘ಎ – ಖಾತೆ’ ಪಡೆಯಲು ಈ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಎ-ಖಾತಾ ಆನ್‌ಲೈನ್‌ನಲ್ಲಿ ಅಪ್ಲೈ ಮಾಡೋದು ಹೇಗೆ? (2000 ಚ.ಮೀಟರ್‌ಗಳ ವರೆಗೆ)
1. ತಮ್ಮ ಮೊಬೈಲ್ ನಂಬರ್‌ನಿಂದ ಇಂದು ಅನಾವರಣಗೊಳ್ಳುವ https://bbmp.karnataka.gov.in/btoakhata ವೆಬ್ ಪೋರ್ಟಲ್‌ಗೆ ಹೋಗಿ ಓಟಿಪಿ ಸಹಿತ ಲಾಗಿನ್ ಆಗಬೇಕು
2. ಫೈನಲ್ ಬಿ ಖಾತಾದ ಇಪಿಐಡಿ ನಂಬರ್ ಅನ್ನು ನಮೂದಿಸಬೇಕು
3. ಆಸ್ತಿಯ ಮಾಲೀಕರು ತಮ್ಮ ಆಧಾರ್ ದೃಢೀಕರಿಸಬೇಕು.
4. ನಿವೇಶನ ಸ್ಥಳವನ್ನು ಮತ್ತು ನಿವೇಶನ ಮುಂಭಾಗದ ರಸ್ತೆಯ ಪ್ರಕಾರವನ್ನು ದೃಢಪಡಿಸಿ
5. ಭೂಪರಿವರ್ತನೆಯಾದ ಮತ್ತು ಭೂ ಪರಿವರ್ತನೆಯಾಗದ ಎರಡೂ ಸೈಟ್‌ಗಳು ಅಪ್ಲೈ ಮಾಡೋಕೆ ಅರ್ಹರು. ಫ್ಲ್ಯಾಟ್ ಇರುವವರು ಅಪ್ಲೈ ಮಾಡೋ ಆಗಿಲ್ಲ.
6. ನಗರಪಾಲಿಕೆಯಿಂದ ನಿವೇಶನಕ್ಕೆ ಭೇಟಿ ಮತ್ತು ದೃಢೀಕರಣ
7. ಮಾರುಕಟ್ಟೆ ಮೌಲ್ಯದ ಶೇ.5 ರಷ್ಟು ಮೊತ್ತವನ್ನು ʻಏಕ ನಿವೇಶನʼ ಅನುಮೋದನೆ ಶುಲ್ಕವಾಗಿ ಹಾಗೂ ಇತರೇ ಶುಲ್ಕಗಳನ್ನು ಪಾವತಿಸುವುದು.
8. ಇಷ್ಟೆಲ್ಲಾ ಪ್ರೋಸೆಸ್ ಆದ ಮೇಲೆ ಸ್ವಯಂಕೃತವಾಗಿ ಎ-ಖಾತಾ ಸಿಗಲಿದೆ
2000 ಚದರ ಮೀಟರ್‌ಗೂ ಹೆಚ್ಚಿನ ವಿಸ್ತೀರ್ಣ ಆಸ್ತಿ ಹೊಂದಿದವರು ಅಪ್ಲೈ ಮಾಡೋದು ಹೇಗೆ?
1. ನೋಂದಾಯಿತ ಇಂಜಿನಿಯರ್ ಅಥವಾ ಆರ್ಕಿಟೆಕ್ಚರ್ ಅನ್ನು ಸಂಪರ್ಕಿಸಬೇಕು.
2. ಯಾವುದೇ ರೀತಿಯ ನಿವೇಶನಗಳಿಗಾಗಿ https://bpas.bbmp.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
3. ಅಗತ್ಯ ದಾಖಲೆಗಳನ್ನ ಮತ್ತು ಕ್ಯಾಡ್ ಡ್ರಾಯಿಂಗ್ ಅನ್ನು ಅಪ್‌ಲೋಡ್ ಮಾಡಬೇಕು.
4. ಆರಂಭಿಕ ಪರಿಶೀಲನಾ ಶುಲ್ಕ 500 ರೂ. ಪಾವತಿಸಬೇಕು.
5. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು (ಫ್ಲಾಟ್‌ಗಳಿಗೆ ಅರ್ಹತೆ ಇಲ್ಲ)
6. ನಂತರ ನಿವೇಶನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ.
7. ಅರ್ಹತೆಗೆ ಅನುಸಾರವಾಗಿ ಅನುಮೋದನೆ ನೀಡಲಿದ್ದಾರೆ.
8. ನಂತರ ಅನ್ವಯವಾಗುವ ಶುಲ್ಕಗಳನ್ನ ಪಾವತಿಸಬೇಕಾಗುತ್ತದೆ.
9. ಅರ್ಹತಾನುಸಾರವಾಗಿ ʻಏಕನಿವೇಶನʼ (ಸಿಂಗಲ್ ಸೈಟ್) ಅನುಮೋದನೆ ಪ್ರಮಾಣ ಪತ್ರ, ಡ್ರಾಯಿಂಗ್ ಮತ್ತು ಎ-ಖಾತಾ ವಿತರಣೆ ಆಗಲಿದೆ.
ಬೆಂಗಳೂರು: ಇಲ್ಲಿನ ನಗರವಾಸಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಗುಡ್‌ನ್ಯೂಸ್ ಕೊಟ್ಟಿದೆ. ಬಿ – ಖಾತಾಗಳಿಗೆ ಎ-ಖಾತಾ ಮಾನ್ಯತೆ ನೀಡಲು ಜಿಬಿಎ ಹೊಸದೊಂದು ಸಾಫ್ಟ್‌ವೇರ್ ಸಿದ್ಧಪಡಿಸಿದೆ. ಈಗಾಗಲೇ ಸಾಫ್ಟ್‌ವೇರ್ ನಿರ್ಮಿಸುವ ಕಾರ್ಯ ಸಂಪೂರ್ಣ ಮುಕ್ತಾಯ ಆಗಿದೆ. ಇನ್ನು ಹೊಸ ತಂತ್ರಜ್ಞಾನದ ಆಪ್ ಸಿದ್ಧಪಡಿಸಿರುವುದನ್ನು ಲೋಕಾರ್ಪಣೆ ಮಾಡಲು ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ತಲುಪಿದೆ. ಡಿಸಿಎಂ ಒಪ್ಪಿಗೆ ಕೊಟ್ಟ ಬಳಿಕ ಎ – ಖಾತಾ (A Khata) ವಿತರಣೆ ಆಗಲಿದೆ. ಎ ಖಾತಾ ವಿತರಣೆಗೆ ಸಣ್ಣಪುಟ್ಟ ಕೆಲಸ ಅಷ್ಟೇ ಬಾಕಿ ಶೀಘ್ರದಲ್ಲೇ ಎ ಖಾತಾ ವಿತರಣೆ ಆಗಲಿದೆ.
ಬೆಂಗಳೂರಿನ (Bengaluru) ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿತ್ತು. ಇದರ ಬೆನ್ನಲ್ಲೇ ನಗರದ ಎಲ್ಲಾ ಬಿ ಖಾತಾಗಳಿಗೆ ಎ ಖಾತಾ ಮಾನ್ಯತೆ ನೀಡಲು ಕಳೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನಗರದಲ್ಲಿರುವ ಅಕ್ರಮ ಮತ್ತು ಅನಿಯಂತ್ರಿತ ಕಟ್ಟಡ ಮತ್ತು ವಿನ್ಯಾಸಗಳನ್ನು ನಿಯಂತ್ರಿಸಲು ಈ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿತ್ತು. ಆದ್ರೆ ಆದೇಶ ಆಗಿ ಒಂದು ತಿಂಗಳು ಸಮೀಪಿಸುತ್ತಾ ಇದ್ದರೂ ಎ-ಖಾತಾ ವಿತರಣೆ ಆಗಿರಲಿಲ್ಲ. ಹೀಗಾಗಿ ಜಿಬಿಎಯಿಂದ ಹೊಸ ಸಾಫ್ಟ್‌ವೇರ್ ಸಿದ್ಧಪಡಿಸುತ್ತಾ ಇದ್ದರು. ಈಗ ಹೊಸ ಸಾಫ್ಟ್‌ವೇರ್ ಸಿದ್ಧಪಡಿಸುವ ಕಾರ್ಯಮುಕ್ತಾಯ ಆಗಿದ್ದು. ಗ್ರೀನ್ ಸಿಗ್ನಲ್‌ಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅಂಗಳಕ್ಕೆ ರವಾನೆ ಆಗಲಿದೆ. ಇದನ್ನೂ ಓದಿ: ಗಣಪತಿ ಆತ್ಮಹತ್ಯೆ ಕೇಸ್ ನ್ಯಾ.ಕೆ.ಎನ್.ಕೇಶವ ನಾರಾಯಣ ಸಲ್ಲಿಸಿದ್ದ ವರದಿ ರಿಜೆಕ್ಟ್- ಕ್ಯಾಬಿನೆಟ್‌ನಲ್ಲಿ ಕೈಗೊಂಡ ತೀರ್ಮಾನಗಳು ಏನು?
ಕ್ರಮಬದ್ಧವಲ್ಲದ ನಿವೇಶನ ಅಥವಾ ಆಸ್ತಿಗಳಿಗೆ ಬಿಬಿಎಂಪಿಯಿಂದ 2009ರಿಂದ ಈಚೆಗೆ ಬಿ ಖಾತಾವನ್ನು ನೀಡಲಾಗಿತ್ತು, ಬಿ-ಖಾತಾ ನೀಡುವ ಪ್ರಕ್ರಿಯೆಯನ್ನು 2024 ರಂದು ಸ್ಥಗಿತಗೊಳಿಸಲಾಗಿತ್ತು, ಹೀಗಾಗಿ ಈ ನಡುವಿನ ಬಿಖಾತಾ ಆಸ್ತಿ ಸಮಸ್ಯೆ ಬಗೆಹರಿಸಲು ಈ ನಿರ್ಧಾರವನ್ನು ಮಾಡಲಾಗಿದೆ, ಇನ್ನು ಜಿಬಿಎಯಿಂದ ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಿದ್ದು ಖಾತಾದಾರರೇ ಅಪ್ಲೈ ಮಾಡಿ ಹಣ ಪಾವತಿ ಮಾಡುವ ವ್ಯವಸ್ಥೆ ಇರಲಿದೆ. ಜೊತೆಗೆ ಸೈಟ್, ಕಟ್ಟಡ ಮಾಹಿತಿಯನ್ನ ಒಳಗೊಂಡ ಅಂಶವನ್ನ ಕೂಡ ಉಲ್ಲೇಖ ಮಾಡಿ ಎ-ಖಾತಾಗೆ ಅಪ್ಲೈ ಮಾಡಬೇಕಾಗುತ್ತೆ. ಒಂದಷ್ಟು ಅಂಶಗಳನ್ನ ಒಳಗೊಂಡಂತಹ ಸಾಫ್ಟ್‌ವೇರ್ ಸಿದ್ಧವಾಗಿದ್ದು ಸಾಫ್ಟ್‌ವೇರ್ ಸಿದ್ಧವಾದ ಬಳಿಕ ಮುಂದಿನ ತಿಂಗಳು ಎ-ಖಾತಾ ವಿತರಣೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ
ಬೆಂಗಳೂರು: ಬಿ ಖಾತಾ ಹೊಂದಿರುವ ಬೆಂಗಳೂರಿಗರಿಗೆ (Bengaluru) ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಎ ಖಾತಾ (A Khata), ಬಿ ಖಾತಾ (B Khata) ಗೊಂದಲಕ್ಕೆ ತೆರೆ ಎಳೆಯಲು ಸಂಪುಟ ಒಪ್ಪಿಗೆ ನೀಡಿದೆ.
ಎ ಖಾತಾದಂತೆ ಬಿ ಖಾತಾಗೂ ಅಧಿಕೃತ ಮಾನ್ಯತೆ ನೀಡಲು ಸಂಪುಟ ತೀರ್ಮಾನಿಸಿದ್ದು, ಶೀಘ್ರದಲ್ಲೇ ರಾಜ್ಯ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬೀಳಲಿದೆ. 2020ರ ಮೇ 22 ರಿಂದ ಅನ್ವಯ ಆಗಲಿದ್ದು, 2024 ಸೆ.30 ರ ವರೆಗೆ ಮಾತ್ರ ಹಾಲಿ ಇರುವ ಬಿ ಖಾತಾಗಳನ್ನು ಎಲ್ಲಾ ಕಾನೂನು ಉದ್ದೇಶಕ್ಕೆ ಅಧಿಕೃತ ಖಾತಾ ಎಂದು ಪರಿಗಣಿಸುವುದಾಗಿ ಸಂಪುಟ ತೀರ್ಮಾನಿಸಿದೆ. ಈ ಮೂಲಕ ಬಿ ಖಾತಾಗಳಿಗಿದ್ದ ಬಿಬಿಎಂಪಿ ಪ್ಲಾನಿಂಗ್, ಓಸಿ, ಬ್ಯಾಂಕ್ ಲೋನ್ ಸಮಸ್ಯೆಗೆ ಮುಕ್ತಿ ಸಿಗಲಿದ್ದು, ಸರ್ಕಾರದ ಮಾನದಂಡಗಳು ಮುಂದಿನ ದಿನಗಗಳಲ್ಲಿ ಸ್ಪಷ್ಟವಾಗಲಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್ – ಆರ್‌ಸಿಬಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕ್ಯಾಬಿನೆಟ್‌ನಲ್ಲಿ ತೀರ್ಮಾನ
ಇದೇ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ 5 ಪಾಲಿಕಗಳ ರಚನೆಗೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಆದರೆ, 5 ಪಾಲಿಕೆಗಳ ವ್ಯಾಪ್ತಿ ಪ್ರದೇಶ, ಗಡಿಗಳ ವಿಚಾರದಲ್ಲಿ ಗೊಂದಲ ಇದ್ದು, ಶಾಸಕರ ಸಭೆ ಕರೆದು ಅಂತಿಮಗೊಳಿಸುತ್ತೇವೆ ಎಂದು ಕ್ಯಾಬಿನೆಟ್ ಸಲಹೆ ನೀಡಿದೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಕ್ಯಾಬಿನೆಟ್ ತಾತ್ವಿಕ ಅನುಮೋದನೆ ನೀಡಿದ್ದು, ಎನ್‌ಟಿಪಿಸಿ ಗುರುತಿಸಿರುವ ಸಂಭಾವ್ಯ ಸ್ಥಳಗಳ ಪರಿಶೀಲನೆಗೆ ನಿರ್ಧಾರ ಮಾಡಿದೆ. ಇಡೀ ಕರ್ನಾಟಕದಲ್ಲಿ ಎಲ್ಲೆಲ್ಲಿ ಸಾಧ್ಯವೋ ಆ ಸ್ಥಳಗಳ ಅಧ್ಯಯನ ಮಾಡಲು ಕ್ಯಾಬಿನೆಟ್ ನಿರ್ಧರಿಸಿದೆ. ಅಂದಹಾಗೆ 3 ಸ್ಥಳಗಳ ಪರಿಶೀಲನೆಗೆ ಎನ್ಟಿಪಿಸಿ ಸಲಹೆ ನೀಡಿದ್ದರೂ, ಇಡೀ ಕರ್ನಾಟಕದಲ್ಲಿ ಒಟ್ಟಾರೆ ಸ್ಥಳ ಪರಿಶೀಲನೆ ಅಧ್ಯಯನ ನಡೆಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಇದನ್ನೂ ಓದಿ: ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂಗೆ ಬರಬೇಡ ಅಂದಿದ್ದೇ ಬಿಎಸ್‍ವೈ: ಯತ್ನಾಳ್ ಬಾಂಬ್
ಬೆಂಗಳೂರು: ನಗರ-ಪಟ್ಟಣ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅನಧಿಕೃತ ನಿವೇಶನಗಳಿಗೆ, ಮನೆಗಳಿಗೆ ಒಂದು ಬಾರಿ `ಬಿ’ ಖಾತೆ ಮಾಡಿಕೊಡುವ ನಿರ್ಧಾರ ಐತಿಹಾಸಿಕ ನಿರ್ಧಾರ ಎಂದು ಸಚಿವ ರಹೀಂಖಾನ್ (Rahim Khan), ಸಚಿವ ಬೈರತಿ ಸುರೇಶ್ (Byrathi Suresh) ಬಣ್ಣಿಸಿದರು.ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮ ತನಿಖೆ ಮಾಡಿ: ನಾಗರಾಜ್ ಯಾದವ್
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಬೈರತಿ ಸುರೇಶ್, ರಾಜ್ಯದಲ್ಲಿ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ 55 ಲಕ್ಷ ಮನೆಗಳಿಗೆ ಬಿ ಖಾತೆಗಳೇ ಇರಲಿಲ್ಲ. ಹೀಗಾಗಿ ನಮ್ಮ ಸರ್ಕಾರ `ಬಿ’ ಖಾತೆ ಕೊಡುವ ಕೆಲಸ ಮಾಡ್ತಿದೆ. ಈ ನಿಯಮದಿಂದ ಮಾಲೀಕನಿಗೆ ದಾಖಲಾತಿ ಸಿಗಲಿದೆ. ಸರ್ಕಾರಕ್ಕೆ ಟ್ಯಾಕ್ಸ್ ಬರುತ್ತದೆ. ನಮ್ಮ ನಿರ್ಧಾರದಿಂದ ಸಾರ್ವಜನಿಕರು ಖುಷಿಯಾಗಿದ್ದಾರೆ. ಇದು ನಮ್ಮ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದರು.
ಬಳಿಕ ಮಾತನಾಡಿದ ಸಚಿವ ರಹೀಂಖಾನ್, ನಗರ-ಪಟ್ಟಣ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅನಧಿಕೃತ ನಿವೇಶನಗಳಿಗೆ, ಮನೆಗಳಿಗೆ ಒಂದು ಬಾರಿ `ಬಿ’ ಖಾತೆ ಮಾಡಿಕೊಡುವ ಪ್ರಕ್ರಿಯೆ ಶುರುವಾಗಿದೆ. ಇದು ನಮ್ಮ ಸರ್ಕಾರದ ಐತಿಹಾಸಿಕ ನಿರ್ಧಾರ. 40 ವರ್ಷಗಳಿಂದ ದಾಖಲಾತಿ ಇಲ್ಲದೆ ಜನರು ಕಣ್ಣೀರು ಹಾಕ್ತಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ನಿರ್ಣಯದಂತೆ ಬಿ-ಖಾತಾ ಮಾಡುವ ನಿರ್ಣಯ ಮಾಡಲಾಗಿದೆ. ಈಗಾಗಲೇ ಬಿ ಖಾತಾ ಪ್ರಕ್ರಿಯೆ ಶುರುವಾಗಿದೆ. ಸರ್ಕಾರದ ನಿಯಮದಿಂದ ಅನಧಿಕೃತವಾಗಿ ಮನೆ ನಿರ್ಮಾಣ ಮಾಡಿರೋರಿಗೆ, ಮನೆ ಮಾಲೀಕನಿಗೆ ದಾಖಲಾತಿ ಸಿಗಲಿದೆ. ಇದು ನಮ್ಮ ಸರ್ಕಾರದ ಐತಿಹಾಸಿಕ ತೀರ್ಮಾನವಾಗಿದೆ ಎಂದರು.ಇದನ್ನೂ ಓದಿ: ವೇದವ್ಯಾಸ್ ಕಾಮತ್ ವಿರುದ್ಧ ಎಫ್‌ಐಆರ್‌ಗೆ ಬಿಜೆಪಿ ಖಂಡನೆ – ಸರ್ಕಾರಕ್ಕೆ ತೀವ್ರ ತರಾಟೆ