Tag: ಬಿ.ಎಲ್ ಸಂತೋಷ್

  • ನಾಯಕತ್ವ ಬದಲಾವಣೆ ಅಂದ್ರೆ ಯಾರ ಬದಲಾವಣೆ?: ಬಿಜೆಪಿಯಲ್ಲಿ ಬಿಎಲ್‍ಎಸ್ ಬಿಸಿ

    ನಾಯಕತ್ವ ಬದಲಾವಣೆ ಅಂದ್ರೆ ಯಾರ ಬದಲಾವಣೆ?: ಬಿಜೆಪಿಯಲ್ಲಿ ಬಿಎಲ್‍ಎಸ್ ಬಿಸಿ

    ಬೆಂಗಳೂರು: ಅವರು ಚೇಂಚ್ ಆಗ್ತಾರೆ ಇವರು ಚೇಂಜ್ ಆಗ್ತಾರೆ..! ಏಪ್ರಿಲ್ ಎಂಡ್‍ಗೆ ಆಗುತ್ತೆ. ಮೇ ಸೆಕೆಂಡ್ ವೀಕ್ ಆಗುತ್ತೆ..! ಹೀಗೆ ಅಲ್ಲೊಬ್ಬ ಇಲ್ಲೊಬ್ಬ ಬಿಜೆಪಿ ನಾಯಕರು ಮಾತಾಡ್ತಿದ್ರು. ಆದ್ರೀಗ ಬಿಜೆಪಿ ಹೈಕಮಾಂಡ್‍ನ ಟಾಪ್ 5 ಸ್ಥಾನದ ನಾಯಕ ಮಾತನಾಡಿದ್ದಾರೆ. ಹಾಗಾದ್ರೆ ಯಾರ ಬದಲಾವಣೆ? ಬಿ.ಎಲ್.ಸಂತೋಷ್ ಸುಳಿವು ಏನು? ಎಂಬ ಕುತೂಹಲ ಮನೆಮಾಡಿದೆ.

    ಹೊಸತನಕ್ಕಾಗಿ ಗುಜರಾತ್‍ನಲ್ಲಿ ಬದಲಾವಣೆ ಅಂತೆ! ಹಾಗಾದ್ರೆ ಕರ್ನಾಟಕದಲ್ಲಿ ಬದಲಾವಣೆಯೇ ಬಿಜೆಪಿಗೆ ಶಕ್ತಿ ಎನ್ನುವಂತಾಗುತ್ತಾ? ಇದು ‘ಸಂತೋಷ’ದ ಸುಳಿವೋ..? ಅಥವಾ ಉದಾಹರಣೆಗಷ್ಟೇ ಸೀಮಿತವೋ..? ಎಂಬ ಪ್ರಶ್ನೆಗಳು ಎದ್ದಿವೆ. ಡೆಲ್ಲಿಯಲ್ಲಿ ಟಾಪ್ 5 ನಾಯಕನ ಸ್ಥಾನದಲ್ಲಿ ಕುಳಿತವರ ಬಾಯಿಂದ ಬದಲಾವಣೆ ಮಾತು ಹೊರಬಿದ್ದಿದೆ. ನಿನ್ನೆ ಮೈಸೂರಿನ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಮಾತು ಗಂಭೀರ ಚರ್ಚೆ ಹುಟ್ಟುಹಾಕಿದೆ. ಇದು ಸಂತೋಷದ ಮಾತೋ..? ಅಥವಾ ಪಾಸಿಂಗ್ ಟಾಕ್ಸೋ..? ಅಥವಾ ಉದಾಹರಣೆಗೆ ಹರಿಬಿಟ್ಟದ್ದು..? ಎಂಬ ಪ್ರಶ್ನೆಗಳು ಬಿಜೆಪಿಗರ ತಲೆ ಹೊಕ್ಕು ಕೊರೆಯುವಂತೆ ಮಾಡಿದೆ. ಗುಜರಾತ್‍ನಲ್ಲಿ ಸಿಎಂ ಬದಲಾವಣೆಯಾದಗ ಇಡೀ ಮಂತ್ರಿ ಮಂಡಲವೇ ಬದಲಾಯ್ತು..! ಯಾವುದೇ ದೂರು ಅಂತಲ್ಲ, ಹೊಸತನ ತರಬೇಕು ಎಂಬ ಹೇಳಿಕೆಯಂತೂ ವಾಟ್ ನೆಕ್ಸ್ಟ್..? ಎನ್ನುವಂತೆ ಮಾಡಿದೆ. ಎರಡು ನಿಮಿಷ 12 ಸೆಕೆಂಡ್‍ಗಳ ವೀಡಿಯೋದಲ್ಲಿ ಯಾರಿಗೆಲ್ಲ ಪರೋಕ್ಷವಾಗಿ ಸಂದೇಶ ರವಾನಿಸಬೇಕು ಆ ಕೆಲಸವನ್ನು ಬಿ.ಎಲ್.ಸಂತೋಷ್ ಜಾಣತನದಿಂದ ಮಾಡಿ ಮುಗಿಸಿದ್ದಾರೆ. ಇದನ್ನೂ ಓದಿ: ನಮ್ಮಿಂದ ಯಾವುದೇ ಭೂ ಪ್ರದೇಶಗಳನ್ನು ಚೀನಾ ಕಸಿದುಕೊಳ್ಳಲು ಬಿಡಲ್ಲ: ಮನೋಜ್ ಪಾಂಡೆ

    ಯಾರ ನಾಯಕತ್ವ ಬದಲಾವಣೆ?
    ಈ ನಡುವೆ ನಾಯಕತ್ವ ಬದಲಾವಣೆ ಅಂದ್ರೆ ಯಾರ ನಾಯಕತ್ವ..? ಸಂಘಟನೆಯ ನಾಯಕತ್ವವೋ..? ಸರ್ಕಾರದ ನಾಯಕತ್ವವೋ..? 50 ಸೀಟು 56 ವಯಸ್ಸಿನವರಿಗಷ್ಟೇ ಮುಖ್ಯಮಂತ್ರಿ ಕುರ್ಚಿನಾ..? ಎಂಬ ಚರ್ಚೆಗೂ ಸಂತೋಷ್ ಹೇಳಿಕೆ ಕಾರಣವಾಗಿದೆ. ಬಿ.ಎಲ್.ಸಂತೋಷ್ ಈ ಹೇಳಿಕೆಯ ಹಿಂದಿನ ಅಸಲಿಯತ್ತು ಏನು..? ಕರ್ನಾಟಕದಲ್ಲಿ ಕಡೇ ಆಟದ ಪ್ರಯೋಗ ಏನಾದರೂ ಇದೆಯೋ..? ಹೊಸತನ ಅಂದ್ರೆ ಸಂಪುಟ ಪುನಾರಚನೆವೋ..? ಬೇರೆನೋ..? ಎಂಬ ಕುತೂಹಲ ಹುಟ್ಟು ಹಾಕಿದೆ. ಬೆಂಗಳೂರಿಗೆ ಅಮಿತ್ ಷಾ ಆಗಮಿಸುವ ಎರಡು ದಿನ ಮೊದಲೇ ಸಂತೋಷ್ ಅವರ ಮಾತುಗಳ ಹಿಂದಿನ ಮರ್ಮ ಏನು ಎಂಬುದರ ಬಗ್ಗೆ ನಾನಾ ದೃಷ್ಟಿಕೋನಗಳಿಂದ ಬಿಜೆಪಿ ಒಳಗೆ ಚರ್ಚೆಗಳು ಶುರುವಾಗಿವೆ. ಸಂಘಟನೆಯ ನಾಯಕತ್ವದಲ್ಲಿ ಬದಲಾವಣೆ ತರಬಹುದಾ. ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ತರಬಹುದಾ. ಮುಂದಿನ ಚುನಾವಣೆಯ ಭವಿಷ್ಯದ ನಾಯಕತ್ವದಲ್ಲಿ ಬದಲಾವಣೆ ತರುವ ಮಾತುಗಳ ಎಂಬುದಕ್ಕೆ ಸ್ಪಷ್ಟತೆ ಸಿಗುತ್ತಿಲ್ಲ. ಕುಟುಂಬ ರಾಜಕಾರಣ ವಿರೋಧಿಸಿ ಸಿಎಂ ಕುರ್ಚಿಗೆ ವಯಸ್ಸಿನ ಮಿತಿಯನ್ನು ಫಿಕ್ಸ್ ಮಾಡಿ ಸಂತೋಷ್ ಆಡಿರುವ ಮಾತುಗಳು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಇದನ್ನೂ ಓದಿ: ನಾನು ಸುಮ್ಮನೇ ಮೈ ಪರಚಿಕೊಳ್ಳುವ ವ್ಯಕ್ತಿಯಲ್ಲ: ಸಿದ್ದು ವಿರುದ್ಧ ಸೋಮಣ್ಣ ಕಿಡಿ

    ಒಟ್ನಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಬದಲಾವಣೆಯ ಬಲೂನ್ ಆಕಾಶದೆತ್ತರಕ್ಕೆ ಹಾರಾಡ್ತಿರೋದು ಕಮ್ಮಿ ಏನಲ್ಲ, ಆದ್ರೆ ಉತ್ತರವಿಲ್ಲದ ಪ್ರಶ್ನೆಗಳನ್ನು ತೇಲಿಬಿಟ್ಟು ರಾಜಕೀಯ ಮೇಲಾಟವನ್ನು ದೂರದಲ್ಲಿ ನಿಂತು ನೋಡುವ ತಂತ್ರಗಾರಿಕೆಗೂ ಕೊರತೆ ಇಲ್ಲ ಎನ್ನಬಹುದು. ಬದಲಾವಣೆಯ ಬಲೂನ್‍ಗೆ ಉಸಿರು ತುಂಬಿದವರು ಯಾರು..? ಆ ಬಲೂನ್ ಎಷ್ಟು ಎತ್ತರ ಎಷ್ಟು ಅವಧಿಗೆ ಹಾರಾಡುತ್ತೆ..? ಕಡೇ ಆಟದಲ್ಲಿ ಯಾರಿಗೆ ಗೆಲುವು ಸಿಗುತ್ತೆ..? ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಇದನ್ನೂ ಓದಿ: ಬಿಜೆಪಿ ಸೇರಿ ಸುಖವಾಗಿದ್ದೇವೆ: ನಾರಾಯಣ ಗೌಡ

    – ರವೀಶ್.ಹೆಚ್.ಎಸ್. ಪೊಲಿಟಿಕಲ್ ಬ್ಯೂರೋ ಚೀಫ್, ಪಬ್ಲಿಕ್ ಟಿವಿ

  • ದುರ್ಬಲ ಇರೋ ಕಡೆ ಬದಲಾವಣೆ ಮಾಡಲಾಗುತ್ತೆ: ಸಿ.ಟಿ.ರವಿ

    ದುರ್ಬಲ ಇರೋ ಕಡೆ ಬದಲಾವಣೆ ಮಾಡಲಾಗುತ್ತೆ: ಸಿ.ಟಿ.ರವಿ

    ಮಂಡ್ಯ: ಸಾಮರ್ಥ್ಯ ಇದ್ದವರು ಎಲ್ಲಿದ್ದರು ಯಶಸ್ಸು ಕಾಣುತ್ತಾರೆ. ದುರ್ಬಲ ಇರೋ ಕಡೆ ಬದಲಾವಣೆ ಆಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

    ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸಿದ್ದೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆ ವಿಚಾರವಾಗಿ ನಗರದ ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಸಂತೋಷ್ ಅವರು ಯಾವ ಉದ್ದೇಶದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಗೆಲ್ಲುವ ಸಾಧ್ಯತೆ ಇರುವರಿಗೆ ಪಕ್ಷ ಬೆಂಬಲ ಕೊಡುತ್ತೆ. ದುರ್ಬಲ ಇರೋ ಕಡೆ ಬದಲಾವಣೆ ಮಾಡಲಾಗುತ್ತೆ. ಇದು ಹಿಂದಿನಿಂದ ಬಂದಿರುವ ಪದ್ದತಿ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕಾರಣ ಬ್ಯುಸಿನೆಸ್ ಅಲ್ಲ, ಅಪ್ಪ ಮಕ್ಕಳ ಸಂಸ್ಕೃತಿ ರಾಜಕಾರಣದಲ್ಲಿ ಇರಬಾರದು: ಅಶ್ವಥ್ ನಾರಾಯಣ

    ಗೆಲ್ಲುವ ಸಾಮರ್ಥ್ಯ ಇರುವವರಿಗೆ ನಮ್ಮ ಪಾರ್ಟಿ ಬೆಂಬಲ ಕೊಡುತ್ತಲೇ ಬಂದಿದೆ. ಸಾಮರ್ಥ್ಯ ಇದ್ದವರು ಎಲ್ಲಿದ್ದರೂ ಯಶಸ್ಸು ಕಾಣುತ್ತಾರೆ. ನಮ್ಮ ಪಕ್ಷ ದುರ್ಬಲರಿಗೆ ಮಣೆ ಹಾಕುವುದಿಲ್ಲ. ಕರ್ನಾಟಕಕ್ಕೆ ಕರ್ನಾಟಕದವರೇ ಮಾದರಿ. ಇಲ್ಲಿ ಗುಜರಾತ್, ಪಂಜಾಬ್ ಮಾದರಿ ಅನ್ನುವುದು ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

  • ರಾಜಕಾರಣ ಬ್ಯುಸಿನೆಸ್ ಅಲ್ಲ, ಅಪ್ಪ ಮಕ್ಕಳ ಸಂಸ್ಕೃತಿ ರಾಜಕಾರಣದಲ್ಲಿ ಇರಬಾರದು: ಅಶ್ವಥ್ ನಾರಾಯಣ

    ರಾಜಕಾರಣ ಬ್ಯುಸಿನೆಸ್ ಅಲ್ಲ, ಅಪ್ಪ ಮಕ್ಕಳ ಸಂಸ್ಕೃತಿ ರಾಜಕಾರಣದಲ್ಲಿ ಇರಬಾರದು: ಅಶ್ವಥ್ ನಾರಾಯಣ

    ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಅಪ್ಪ-ಮಕ್ಕಳು, ಕುಟುಂಬ ರಾಜಕಾರಣದ ಸದ್ದು ಜೋರಾಗಿ ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಸಂಘಟನೆ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿಕೆ ತಲ್ಲಣ ಸೃಷ್ಟಿಸಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ಆತಂಕ ಸೃಷ್ಟಿ ಮಾಡಿದೆ.

    ಕುಟುಂಬ ರಾಜಕಾರಣದ ವಿರುದ್ಧ ಹೇಳಿಕೆ ಕೊಟ್ಟರುವ ಬಿ.ಎಲ್.ಸಂತೋಷ್ ಹೇಳಿಕೆಯನ್ನು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸ್ವಾಗತ ಮಾಡಿದ್ದಾರೆ. ಅಲ್ಲದೆ ರಾಜಕಾರಣದಲ್ಲಿ ಅಪ್ಪ-ಮಕ್ಕಳ ಸಂಸ್ಕೃತಿ ಇರಬಾರದು ಅಂತ ಸಂತೋಷ್ ಮಾತಿಗೆ ಧ್ವನಿಗೂಡಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣ ಅನ್ನೋದು ಬ್ಯುಸಿನೆಸ್ ಅಲ್ಲ. ಪಕ್ಷ ವಿನೂತನವಾಗಿ, ಹೊಸದಾಗಿ ಏನೇ ಮಾಡಿದರು ನಮಗೆ ಸಂತೋಷ ಇದೆ. ನಮ್ಮ ಅಭ್ಯಂತರ ಇಲ್ಲ. ಪಕ್ಷಕ್ಕೆ ವ್ಯಕ್ತಿಗಳು ಮುಖ್ಯ ಅಲ್ಲ. ವ್ಯಕ್ತಿಗಿಂತ ವ್ಯವಸ್ಥೆ ಮುಖ್ಯವಾಗಿ ಇರುತ್ತದೆ. ವ್ಯವಸ್ಥೆಯಲ್ಲಿ ಯಾರಾದರೇನು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

    ಕುಟುಂಬ ರಾಜಕಾರಣವನ್ನು ಇಡೀ ಸಮಾಜ ವಿರೋಧ ಮಾಡುತ್ತದೆ. ಕುಟುಂಬ ಆಧಾರಿತ ರಾಜಕೀಯ ಇರಬಾರದು ಅನ್ನೋದು ಸಮಾಜದ ಇಚ್ಛೆ. ಆ ದಿಕ್ಕಿನಲ್ಲಿ ಬಿಜೆಪಿ ಯೋಚನೆ ಮಾಡ್ತಿರೋದು ಒಳ್ಳೆ ಬೆಳವಣಿಗೆ. ಕೆಲವರಿಗೆ ಮೀಸಲು ಇರೋದಕ್ಕೆ ಇದು ಬ್ಯುಸಿನೆಸ್ ಅಲ್ಲ, ಇದೊಂದು ಸೇವೆ. ನಾವು ಸಮಾಜಕ್ಕೆ ಸೇವೆ ಸಲ್ಲಿಸಬೇಕು. ರಾಜಕೀಯಕ್ಕೆ ಬಂದು ನಮ್ಮ ಸೇವೆ ಮಾಡಿಕೊಳ್ಳೋದು ಸರಿಯಲ್ಲ. ಅಪ್ಪ-ಮಕ್ಕಳ ಸಂಸ್ಕೃತಿ ಸಮಾಜದಲ್ಲಿ ಇರಬಾರದು ಎಂದಿದ್ದಾರೆ.

    ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳಲ್ಲಿ ಕುಟುಂಬ ರಾಜಕಾರಣ, ಅಪ್ಪ ಮಕ್ಕಳ ಪಕ್ಷ ಅಂತ ಇದೆ. ಎಲ್ಲಾ ರಾಜ್ಯದಲ್ಲೂ ಅಪ್ಪ-ಮಕ್ಕಳ ಪಕ್ಷ ಆಗಿ ಬಿಟ್ಟಿದೆ. ಹೀಗಾಗಿ ಪ್ರಧಾನಿ ಮೋದಿ ಅವರು ಇದನ್ನ ಸ್ಪಷ್ಟವಾಗಿ ವಿರೋಧ ಮಾಡಿದ್ದಾರೆ. ಇದನ್ನ ನಾವೂ ವಿರೋಧ ಮಾಡಬೇಕು. ಇದೇನು ಬ್ಯುಸಿನೆಸ್ ಮಾಡೆಲ್ ಅಲ್ಲ. ಈ ನಿಟ್ಟಿನಲ್ಲಿ ಪ್ರಧಾನಿಗಳು ನಿರ್ಧಾರ ಮಾಡಿದ್ದಾರೆ. ಯಾರು ಯಾರು ಇರಬೇಕು ಅಂತ ಪಕ್ಷ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವು ಬದ್ಧರಾಗಿ ಇರಬೇಕು. ನಾನೇ ಒಬ್ಬ, ನಾನೇ ಎಲ್ಲಾ ಅಂತ ಹೇಳೋದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ಕಾಫಿನಾಡ ಬಿ.ಎಸ್.ರಾಜು ನೇಮಕ

    MODi

    ನಾಯಕತ್ವ ಬದಲಾವಣೆ ಹೈಕಮಾಂಡ್ ತೀರ್ಮಾನ:
    ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿ ಇರುತ್ತೇವೆ. ಪಕ್ಷ ಆಲೋಚನೆ ಮಾಡಿ ನಿರ್ಧಾರ ಮಾಡುತ್ತದೆ. ಅದಕ್ಕೆ ನಾವೆಲ್ಲ ಸಹಕಾರ ಕೊಡಬೇಕು. ನಾವೆಲ್ಲ ಒಟ್ಟಾಗಿ ಇರಬೇಕು. ಪಕ್ಷವಾಗಿ ಏನು ನಿರ್ಧಾರ ಆಗುತ್ತೋ ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

    ಅನೇಕರಲ್ಲಿ ಬೇರೆ ಬೇರೆ ಅಭಿಪ್ರಾಯಗಳು ಇರಬಹುದು. ಆದರೆ ಪಕ್ಷದ ತೀರ್ಮಾನವೇ ಅಂತಿಮ. ಅದಕ್ಕೆ ಎಲ್ಲರೂ ಬದ್ಧವಾಗಿ ಇರಬೇಕು. ನಾವು ಬಂದಿರೋದು ಸಮಾಜಕ್ಕೆ ಒಳ್ಳೆಯದು ಮಾಡಲು. ಪಕ್ಷ ಏನು ತೀರ್ಮಾನ ಮಾಡುತ್ತೋ ಹಾಗೆ ನಡೆಯಬೇಕು. ಈ ದಿಕ್ಕಿನಲ್ಲಿ ಪಕ್ಷ ತೆಗೆದುಕೊಳ್ಳೊವ ತೀರ್ಮಾನಕ್ಕೆ ನಾನು ಬದ್ಧವಾಗಿ ಇರುತ್ತೇನೆ ಎಂದು ಹೇಳಿದ್ದಾರೆ.

  • ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

    ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ: ಬಿ.ಎಲ್.ಸಂತೋಷ್

    ಮೈಸೂರು: ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣವಾಗಿದೆ. ಪ್ರಯೋಗ ಗುಜರಾತ್‍ನಲ್ಲೂ ಯಶಸ್ವಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.

    ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಾಲಿ ಶಾಸಕರು, ಕುಟುಂಬಸ್ಥರನ್ನು ಹೊರಗಿಟ್ಟು ಚುನಾವಣೆ ನಡೆಸಿದ್ದೇವೆ. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದರು.

    ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನು ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಧಿಕಾರಕ್ಕೇರಿದ್ದೇವೆ. ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದು ಹೇಳಿದರು. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ನರ್ಸ್ ಮೃತದೇಹ ಪತ್ತೆ – ಅತ್ಯಾಚಾರ ಆರೋಪ ಮಾಡಿದ ಕುಟುಂಬಸ್ಥರು

    ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಈ ರೀತಿ ಹೇಳಿಕೆ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ. ರಾಜ್ಯದ 2023ರ ವಿಧಾನಸಭಾ ಚುನಾವಣೆಗೂ ಅನ್ವಯವಾಗುತ್ತಾ, ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿದ್ದಾರೆ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ. ಇದನ್ನೂ ಓದಿ: ಭಾರತೀಯ ಸೇನೆಯ ಲೆಫ್ಟಿನೆಂಟ್ ಜನರಲ್ ಆಗಿ ಕಾಫಿನಾಡ ಬಿ.ಎಸ್.ರಾಜು ನೇಮಕ

  • ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ: ಬಿ.ಎಲ್ ಸಂತೋಷ್

    ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ: ಬಿ.ಎಲ್ ಸಂತೋಷ್

    ಬಳ್ಳಾರಿ: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಬರೀ ಮೋದಿ ಹೆಸರೊಂದೇ ಸಾಕಾಗಲ್ಲ. ಮೋದಿ ಹೆಸರೇಳಿಕೊಂಡು ಗೆದ್ದು ಬರುತ್ತೇವೆ ಎಂಬ ಭ್ರಮೆಯಿಂದ ಹೊರಬನ್ನಿ ಎಂದು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಖಡಕ್ ಸಂದೇಶ ನೀಡಿದ್ದಾರೆ.

    ಬಿಜೆಪಿ ಕಾರ್ಯಕಾರಿಣಿಯಲ್ಲಿ ಬಿಎಲ್ ಸಂತೋಷ್ ಮಾಡಿದ ಭಾಷಣ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆಡಳಿತ ವಿರೋಧಿ ಅಲೆ ಎದುರಿಸಿ ಚುನಾವಣೆ ಗೆಲ್ಲಬೇಕು. ಇದಕ್ಕಾಗಿ ಪಕ್ಷ ಸಂಘಟಿಸಿ ಎಂದು ಕರೆ ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೇ, ಮುಂದಿನ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ. ಇಲ್ಲಿಯೂ ಯುಪಿ ಮಾದರಿ ಅನುಸರಿಸಲಾಗುವುದು ಎನ್ನುವ ಮೂಲಕ ಹಲವರಿಗೆ ಬಿಗ್ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ: ಜೆ.ಪಿ ನಡ್ಡಾ

    ಬಿಜೆಪಿ ಕೋರ್ ಕಮಿಟಿ ಸಭೆ ಅಂತಿಮ ಕ್ಷಣದಲ್ಲಿ ರದ್ದುಗೊಂಡಿತು. ಬಿಜೆಪಿ ಪ್ರಮುಖರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರಾಜ್ಯ ಬಿಜೆಪಿ ನಾಯಕರಿಗೆ ಮೂರು ಟಾಸ್ಕ್ ನೀಡಿದ್ದಾರೆ. ಮಿಷನ್ 150 ಗುರಿ ತಲುಪಲು ಭರದ ಸಿದ್ಧತೆ ಮಾಡಿಕೊಳ್ಳಿ. ಕಷ್ಟದ ವಿಧಾನಸಭೆ ಕ್ಷೇತ್ರಗಳನ್ನು ರಿಸ್ಕ್ ಆಧಾರದಲ್ಲಿ ವಿಂಗಡಿಸಿಕೊಂಡು ಫೋಕಸ್ ಮಾಡಿ. ಕಾಂಗ್ರೆಸ್, ಜೆಡಿಎಸ್ ಕೋಟೆಗಳಲ್ಲಿ ಸ್ಪೆಷಲ್ ಫೋಕಸ್‍ಗೆ ತಾಕೀತು ಮಾಡಿದ್ದಾರೆ. ಕೇಂದ್ರ ಮತ್ತು ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಿ. ಸಿಎಂ ಸಹಿತ ಪದಾಧಿಕಾರಿಗಳವರೆಗೆ ಎಲ್ಲರೂ ಪಕ್ಷ ಸಂಘಟನೆ ಮಾಡಿ. ಸಚಿವರು ತಮ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜಿಲ್ಲಾ ಸಂಘಟನೆಯ ಮೇಲೆ ಗಮನ ಹರಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪ್ರತಿಭಟನೆಗಿಳಿದ ಉಕ್ರೇನ್‌ನಿಂದ ವಾಪಸ್ ಆದ ವೈದ್ಯಕೀಯ ವಿದ್ಯಾರ್ಥಿಗಳು

  • ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ: ಜೆ.ಪಿ ನಡ್ಡಾ

    ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ: ಜೆ.ಪಿ ನಡ್ಡಾ

    ಬೆಂಗಳೂರು: ಹೊಸಪೇಟೆಯ ಬಿಜೆಪಿ ಕಾರ್ಯಕಾರಿಣಿ ಮುಗಿದಿದ್ದು, ಪರಸ್ಪರ ಹೊಗಳಿಕೆಗೆ ಸೀಮಿತವಾಗಿದ್ದು ಕಂಡುಬಂತು. ಸಾಲು ಸಾಲು ವಿವಾದ, ಈಶ್ವರಪ್ಪ ಪ್ರಕರಣ ಸದ್ದು ಮಾಡುತ್ತಿರುವ ಸಂದರ್ಭದಲ್ಲೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಬೊಮ್ಮಾಯಿ ಸರ್ಕಾರಕ್ಕೆ ಶಹಬ್ಬಾಶ್‍ಗಿರಿ ನೀಡಿದ್ದಾರೆ.

    ರಾಜ್ಯದಲ್ಲಿ ಸ್ವರ್ಣಯುಗ ಆರಂಭವಾಗಿದೆ ಎಂದು ನಡ್ಡಾ ಹೊಗಳಿದ್ದಾರೆ. ಪ್ರಮುಖರೊಂದಿಗೆ ಸಭೆ ನಡೆಸಿದ ನಡ್ಡಾ, ಟಾರ್ಗೆಟ್ 150 ರೀಚ್ ಆಗಲು, ಹಿಂದುತ್ವದ ಜೊತೆ ಅಭಿವೃದ್ಧಿ ಸೂತ್ರ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ. 2023ರಲ್ಲಿ ಬಿಜೆಪಿ ಮತ್ತೆ ಇಲ್ಲಿ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷವಾಗಿದೆ. ಜೆಡಿಎಸ್, ಶಿವಸೇನಾ, ಟಿಡಿಪಿ, ಪಿಡಿಪಿ ಸೇರಿದಂತೆ ಹತ್ತಾರು ಪಕ್ಷಗಳು ಪ್ರಾದೇಶಿಕ ಪಕ್ಷವಾಗಿ ದೇಶದ ವಿವಿಧೆಡೆ ಇವೆ. ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂಬ ನರೇಂದ್ರ ಮೋದಿಯವರ ಕನಸು ನನಸಾಗಿಸಲು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ. ಕೋವಿಡ್ ವೇಳೆ ಪ್ರಧಾನಿ ಗರೀಬ್ ಕಲ್ಯಾಣ್ ಯೋಜನೆ ಮೂಲಕ 80 ಕೋಟಿಗೂ ಹೆಚ್ಚು ಜನರಿಗೆ ಪಡಿತರ ಕೊಡಲಾಗಿದೆ. ಹಸಿವಿನಿಂದ ಯಾರೂ ಸಾಯಬಾರದೆಂಬ ಉದ್ದೇಶ ಇದರಲ್ಲಿದೆ. ಬೊಮ್ಮಾಯಿಯವರು ಮಾಸಾಶನವನ್ನು ಹೆಚ್ಚಿಸಿದ್ದಾರೆ. ಇಲ್ಲಿನ ಸಂಬಾರ ಪದಾರ್ಥಗಳು ಮತ್ತು ಕಾಫಿ ರಫ್ತು ಹೆಚ್ಚಾಗಿದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಸರ್ಕಾರಗಳ ಸಾಧನೆಯನ್ನು ಜನರಿಗೆ ತಲುಪಿಸಿ ಎಂದರು. ಇತ್ತ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ. ಇದನ್ನೂ ಓದಿ: ಕಾನೂನಿಗಿಂತ ಧರ್ಮ ದೊಡ್ಡದಲ್ಲ ಎಂಬುದನ್ನು ಮುಸ್ಲಿಮರು ಅರಿಯಬೇಕು: ರಾಜ್‌ ಠಾಕ್ರೆ

    ಬಿಜೆಪಿ ಸರ್ಕಾರವನ್ನು ಮೆಚ್ಚುತ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಖಂಡನಾ ನಿರ್ಣಯವಾಗಿದ್ದು, ಮೋದಿ ಸರ್ಕಾರ ಜಗತ್ತಿನ ಗಮನ ಸೆಳೆದಿದೆ ಎಂದು ಅಭಿನಂದನಾ ನಿರ್ಣಯವನ್ನು ಕಾರ್ಯಕಾರಣಿ ಕೈಗೊಂಡಿದೆ. ಇಂದಿನ ಕೋರ್ ಕಮಿಟಿ ಸಭೆ ಕಡೆ ಕ್ಷಣದಲ್ಲಿ ರದ್ದಾಗಿದೆ. ಇದನ್ನೂ ಓದಿ: PSI ನೇಮಕಾತಿ ಅಕ್ರಮ – ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮನೆಗೆ ಸಿಐಡಿ ದಾಳಿ

  • ಕೆಲವೊಬ್ಬರು ಸುಧಾರಿಸಲು ಸಾಧ್ಯವಿಲ್ಲ ಬಿ. ಎಲ್. ಸಂತೋಷ್ ವ್ಯಂಗ್ಯ

    ಕೆಲವೊಬ್ಬರು ಸುಧಾರಿಸಲು ಸಾಧ್ಯವಿಲ್ಲ ಬಿ. ಎಲ್. ಸಂತೋಷ್ ವ್ಯಂಗ್ಯ

    ನವದೆಹಲಿ: ಕೆಲವೊಬ್ಬರು ಸುಧಾರಿಸುವುದು ಸಾಧ್ಯವಿಲ್ಲ ಎಂದು ಎಸ್‍ಪಿ ಅಧ್ಯಕ್ಷನಿಗೆ ಪರೋಕ್ಷವಾಗಿ ವ್ಯಂಗ್ಯವಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವ್ಯಂಗ್ಯವಾಡಿದ್ದಾರೆ.

    ಪಂಚ ರಾಜ್ಯಗಳ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಬಿ. ಎಲ್. ಸಂತೋಷ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

    ಈ ವೇಳೆ ಬಿಜೆಪಿಯ ಗೆಲುವಿನ ಬಗ್ಗೆ ಯಾವಾಗಲೂ ಟೀಕೆ ಮಾಡುವ ಪ್ರತಿಪಕ್ಷಗಳ ವಿರುದ್ಧ ಸಿಡಿದ ಅವರು, ದೇವ ಭೂಮಿಯಲ್ಲಿ ಬಿಜೆಪಿಯು ಗೆಲುವಿನ ನಾಗಾಲೋಟದತ್ತ ಸಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿದ್ದು, ಗಣರಾಜ್ಯವನ್ನು ಕಿತ್ತೊಗೆಯಲಾಗುತ್ತಿದೆ. ಗಡಿನಾಡು ಪಂಜಾಬ್‍ನಲ್ಲಿ ಆಮ್ ಆದ್ಮಿಯು ಗೆಲುವಿನತ್ತ ಸಾಗುತ್ತಿದೆ. ಪರ್ಯಾಯ ಆಡಳಿತದ ಭರವಸೆ, ಆಶಾವಾದ ಮೂಡಿದೆ. ಕೆಲವೊಬ್ಬರು ಸುಧಾರಿಸುವುದೇ ಇಲ್ಲ ಎಂದು ಟ್ವೀಟ್ ಮೂಲಕ ಕುಹಕವಾಡಿದ್ದಾರೆ. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ

    ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಫಲಿತಾಂಶ ಬರುವಂತೆ ಮತಯಂತ್ರಗಳನ್ನು ತಿರುಚಲು ಸರ್ಕಾರದಿಂದ ಜಿಲ್ಲಾಧಿಕಾರಿಗಳಿಗೆ ಸೂಚನೆ ಬಂದಿದೆ ಅಂತ ಆಖಿಲೇಶ್ ಯಾದವ್ ಮಂಗಳವಾರ ಆರೋಪಿಸಿದ್ದರು. ವಾರಣಾಸಿಯಲ್ಲಿ ಇವಿಎಂಗಳನ್ನು ಸಾಗಿಸುತ್ತಿದ್ದು ಎರಡು ಟ್ರಕ್‍ಗಳನ್ನು ಎಸ್‍ಪಿ ಕಾರ್ಯಕರ್ತರು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ ಹರಸಾಹಸದ ನಂತರ ಟ್ರಕ್‍ಗಳು ಮುಂದೆ ಸಾಗಲು ಅನುವು ಮಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿತ್ತು.

    ಆರೋಪ ಬಂದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಬಳಸಿರುವ ಮತ ಯಂತ್ರಗಳನ್ನು ಬಲಿಷ್ಟವಾದ ಒಂದು ಕೊಠಡಿಯಲ್ಲಿ ಭದ್ರವಾಗಿ ಇರಿಸಲಾಗಿದೆ. ಅಲ್ಲಿ ಸಿ.ಸಿ.ಟಿ.ವಿ ಕಣ್ಗಾಗಾವಲು ಇದೆ. ಬಲಿಷ್ಟವಾದ ಆ ಕೊಠಡಿಯಿಂದ ಯಾವುದೇ ಮತಯಂತ್ರಗಳನ್ನು ಸಾಗಿಸಿಲ್ಲ. ಟ್ರಕ್‍ನಲ್ಲಿ ಇರುವ ಮತಯಂತ್ರಗಳನ್ನು ಚುನಾವಣೆಯಲ್ಲಿ ಬಳಿಸಿಲ್ಲ. ಮತ ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲು ಈ ಮತಯಂತ್ರಗಳನ್ನು ಸಾಗಿಸಲಾಗುತ್ತಿತ್ತು. ರಾಜಕೀಯ ಪಕ್ಷಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಎಂದು ವಾರಣಾಸಿ ಜಿಲ್ಲಾಧಿಕಾರಿ ಕೌಶಲ್ ಶರ್ಮಾ ಸ್ಪಷ್ಟನೆ ನೀಡಿದ್ದರು.

  • ಶ್ರೀನಿವಾಸ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಶ್ರೀನಿವಾಸ ಪೂಜಾರಿ ಒಂದು ರೂಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ: ಬಿ.ಎಲ್.ಸಂತೋಷ್

    ಉಡುಪಿ: ಕೋಟ ಶ್ರೀನಿವಾಸ ಪೂಜಾರಿ ಒಂದು ರುಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ ಎಂದು ಬಿಜೆಪಿ ಸಂಘಟನಾ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೇಳಿದ್ದಾರೆ.

    ವಿಧಾನ ಪರಿಷತ್ ಚುನಾವಣೆ ನಡೆದು ಫಲಿತಾಂಶ ಬಂದಿದೆ. ಬುದ್ಧಿವಂತರ ಚುನಾವಣೆ ಮಾದರಿ ಎಂದೆಲ್ಲಾ ಇವರಿಗೆ ಬಿಂಬಿತವಾದ ಪರಿಷತ್ ಚುನಾವಣೆಗೆ ಕೋಟಿ ಕೋಟಿ ರೂಪಾಯಿ ಹಣದ ಹೊಳೆ ಹರಿದ ಬಗ್ಗೆ ಜಿಲ್ಲಾ ಮಟ್ಟದ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡ ಸಂತೋಷ್ ಅವರು ಖೇದ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು, ಮತಗಳು, ಮತ ಹಾಕಿದ ಪ್ರತಿನಿಧಿಗಳು ಖರೀದಿಯಾಗಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಪಠ್ಯಪುಸ್ತಕ ವಿತರಿಸದಿರುವುದು ಶಿಕ್ಷಣ ಸಚಿವರ ಅಸಮರ್ಥತೆಯ ಸಂಕೇತ: ಎಎಪಿ

    ದ.ಕ-ಉಡುಪಿ ಶೇ.99 ನಾವು ಮಾರಾಟಕ್ಕಿಲ್ಲ ಅಂತ ತೋರಿಸಿಕೊಟ್ಟಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ಇದು ಸಾಬೀತಾಗಬೇಕು. ನಾವು ಮಾರಾಟಕ್ಕಿಲ್ಲ, ದಾಕ್ಷಿಣ್ಯಕ್ಕೆ ಒಳಗಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವವರಿಗೆ ಈ ಬದ್ಧತೆ ಬೇಕು ಎಂದು ಕರೆ ನೀಡಿದರು.

    ಕೆಲ ಜಿಲ್ಲೆಗಳಲ್ಲಿ ಕೋಟ್ಯಂತರ ರೂಪಾಯಿ ಪರಿಷತ್ತಿನ ಚುನಾವಣೆಗೆ ಖರ್ಚಾಗಿದೆ. ಆಮಿಷಗಳಿಗೆ ಮಣಿದು ಜನಪ್ರತಿನಿಧಿಗಳು ಮತ ಚಲಾವಣೆ ಮಾಡಿರುವುದು ಜಗಜ್ಜಾಹೀರಾಗಿದೆ. ದ.ಕ ಉಡುಪಿ ಬಿಜೆಪಿ ಅಭ್ಯರ್ಥಿ ಒಂದು ರೂಪಾಯಿ ಖರ್ಚು ಮಾಡದೆ ಗೆದ್ದಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೆಸರು ಉಲ್ಲೇಖ ಮಾಡದೇ ವಿಷಯ ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ

    ವಿಧಾನ ಪರಿಷತ್ ರದ್ದು ಗೊಳಿಸುವ ಸಮಯ ಬಂದಿದೆಯಲ್ಲವೇ? ಅಂತ ಪಕ್ಷದ ಹಿರಿಯ ಮತ್ತು ಸಂವೇದನೆ ಇರುವ ಕಾರ್ಯಕರ್ತರೊಬ್ಬರು ನನ್ನನ್ನು ಪ್ರಶ್ನಿಸಿದರು. ದ.ಕನ್ನಡದ ಉಡುಪಿ ಜಿಲ್ಲೆಯಲ್ಲಿ ಈ ಪ್ರಶ್ನೆ ಉದ್ಭವಿಸುವುದಿಲ್ಲ. ಯಾರೂ ವೋಟ್ ಮಾರಾಟ ಮಾಡಬಾರದು ಅದೊಂದು ನಡವಳಿಕೆ. ನಾನು ಮಾರಾಟಕ್ಕಿಲ್ಲ ಎನ್ನುವುದು ರಾಜಕಾರಣಿಯೊಬ್ಬನಿಗೆ ಇರಬೇಕಾದ ಅತಿ ದೊಡ್ಡ ಗುಣ ಎಂದು ಹೇಳಿದರು.

  • ನಾನು ರಾಜಕೀಯ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ: ಚನ್ನಣ್ಣವರ್ ಸ್ಪಷ್ಟನೆ

    ನಾನು ರಾಜಕೀಯ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ: ಚನ್ನಣ್ಣವರ್ ಸ್ಪಷ್ಟನೆ

    ನವದೆಹಲಿ: ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗೆ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಸ್ಪಷ್ಟನೆ ಕೊಟ್ಟಿದ್ದಾರೆ.

    ನಾನು ಭರವಸೆ ಎಂಬ ಪುಸ್ತಕವನ್ನು ಬರೆಯುತ್ತಿದ್ದು, ಇದರ ಪ್ರಯುಕ್ತ ಇತ್ತೀಚೆಗೆ ನನ್ನ ಇತ್ತೀಚಿನ ರಜೆ ದಿನಗಳಲ್ಲಿ ನನ್ನ ಹಳೆಯ ಸ್ನೇಹಿತರ ಮನೆಗಳನ್ನು ದೇವಸ್ಥಾನಗಳನ್ನು, ಶ್ರೀ ಮಠಗಳನ್ನು ಭೇಟಿಯಾಗಿ ಮಾಹಿತಿ ಕಲೆಹಾಕುತ್ತಿದ್ದೇನೆ. ಆ ಸಂದರ್ಭದ ವಿವಿಧ ಫೋಟೋಗಳನ್ನು ಉಪಯೋಗಿಸಿಕೊಂಡು ಕೆಲವು ಮಾಧ್ಯಮಗಳು ವಿಶೇಷವಾದ ಅರ್ಥವನ್ನು ಕಲ್ಪಸಿ ಬಿತ್ತರಿಸುತ್ತಿವೆ. ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಅದಕ್ಕೆ ಯಾವುದೇ ವಿಶೇಷತೆ ಮತ್ತು ಅಪಾರ್ಥವನ್ನು ಕಲ್ಪಿಸಬೇಡಿ. ನಾನು ರಾಜಕೀಯ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ ಎಂಬುದನ್ನು ಈ ಮೂಲಕವಾಗಿ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ:  ಬಿಜೆಪಿ ಸೇರುತ್ತಾರಾ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್?

    ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಫೇಮಸ್ ಆಗಿರುವ ರವಿ ಡಿ ಚನ್ನಣ್ಣನವರ್ ಅವರನ್ನು  ಬಿಜೆಪಿ ಸೆಳೆಯಲು ಮುಂದಾಗಿದೆಯಂತೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

    ಕಳೆದ ಮಂಗಳವಾರ ದೆಹಲಿಯಲ್ಲಿ ರವಿ ಚನ್ನಣ್ಣನವರ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿದ್ದರು. ಕೊಳ್ಳೇಗಾಲದ ಶಾಸಕ ಎನ್.ಮಹೇಶ್ ಬಿಜೆಪಿ ಸೇರ್ಪಡೆಗೂ ಮುನ್ನ ಸಂತೋಷ್ ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ರವಿ ಚನ್ನಣ್ಣನವರ್ ಕೂಡಾ ಇದ್ದರು ಎಂದು ಮೂಲಗಳು ಹೇಳಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಮ್ಮುಖದಲ್ಲಿ ಸಭೆ ಕೂಡಾ ನಡೆದಿದೆ ಎಂದು ಹೇಳಲಾಗುತ್ತಿತ್ತು

  • ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ಇಂದು ರಾತ್ರಿಯೇ ಬೆಂಗ್ಳೂರಿಗೆ ಬಿ.ಎಲ್ ಸಂತೋಷ್

    ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ಇಂದು ರಾತ್ರಿಯೇ ಬೆಂಗ್ಳೂರಿಗೆ ಬಿ.ಎಲ್ ಸಂತೋಷ್

    ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಈ ಮಧ್ಯೆ ಇಂದು ರಾತ್ರಿಯೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ದೆಹಲಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಇಂದು ರಾತ್ರಿ 8:30ರ ವಿಮಾನದ ಮೂಲಕ ಬೆಂಗಳೂರಿಗೆ ಸಂತೋಷ್ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಾರ್ಲಿಮೆಂಟ್ ಬೋರ್ಡ್ ಸದಸ್ಯರಾಗಿರುವ ಸಂತೋಷ್ ಅವರು ಸಭೆಗೂ ಮುನ್ನ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ವೀಕ್ಷಕರ ಭೇಟಿಗೂ ಮುನ್ನ ರಾಜ್ಯಕ್ಕೆ ಸಂತೋಷ್ ಭೇಟಿ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಸರ್ಕಾರಿ ನೌಕರರಿಗೆ ಯಡಿಯೂರಪ್ಪ ಬಂಪರ್ ಗಿಫ್ಟ್

    ಇತ್ತ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದಾರೆ. ರಾತ್ರಿ 8:30 ರ ವಿಸ್ತಾರ ವಿಮಾನದ ಮೂಲಕ ಬೆಂಗಳೂರಿಗೆ ಹೋಗಲಿದ್ದಾರೆ. ಅಮಿತ್ ಶಾ ಭೇಟಿಗಾಗಿ ಬಂದಿದ್ದರು. ಆದರೆ ನಾಳೆ ರಾಜ್ಯಕ್ಕೆ ವೀಕ್ಷಕರ ಆಗಮನ ಹಿನ್ನೆಲೆಯಲ್ಲಿ ಇದೀಗ ಅಮಿತ್ ಶಾ ಅವರನ್ನು ಭೇಟಿಯಾಗದೇ ನಿರಾಣಿ ವಾಪಸ್ಸಾಗುತ್ತಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಇಲ್ಲದ ಬಿಜೆಪಿ ನಾಶವಾಗುತ್ತೆ- ಬೂಕನಕೆರೆಯಲ್ಲಿ ಬಿಎಸ್‍ವೈ ಅಭಿಮಾನಿ ಕಣ್ಣೀರು

    ಈ ಹಿಂದೆ ರಾಜ್ಯ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ಇದೀಗ ವೀಕ್ಷಕರಾಗಿ ಆಯ್ಕೆಯಾಗಿದ್ದಾರೆ. ಧರ್ಮೆಂದ್ರ ಪ್ರಧಾನ್ ಗೆ ಕರ್ನಾಟಕಕ್ಕೆ ತೆರಳಲು ಹೈಕಮಾಂಡ್ ಸೂಚನೆ ನೀಡಿದೆ. ಅದರಂತೆ ರಾಜ್ಯಕ್ಕೆ ಭೇಟಿ ಕೊಡಲಿರುವ ಪ್ರಧಾನ್ ಅವರು ಬೆಂಗಳೂರಿನಲ್ಲಿ ಶಾಸಕಾಂಗ ಸಭೆ ನಡೆಸಲಿದ್ದಾರೆ. ಮುಂದಿನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಕಸರತ್ತು ಆರಂಭವಾಗಿದ್ದು, ನಾಳೆ ರಾಜ್ಯಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ರಾಜ್ಯಕ್ಕೆ ಭೇಟಿ ನಿಡಲಿದ್ದಾರೆ.