Tag: ಬಿ.ಎಲ್ ಸಂತೋಷ್

  • ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ: ಬಿ.ಎಲ್.ಸಂತೋಷ್

    ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ: ಬಿ.ಎಲ್.ಸಂತೋಷ್

    – ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು ತೀರ್ಥಕ್ಷೇತ್ರಗಳೇ ಇವರ ಟಾರ್ಗೆಟ್ ಅಂತ ಆರೋಪ

    ಉಡುಪಿ: ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (B.L.Santosh) ಆರೋಪಿಸಿದ್ದಾರೆ.

    ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣ ಸಂಬಂಧ ಬಿ.ಎಲ್.ಸಂತೋಷ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಯಲ್ಲಿ ಬಿಜೆಪಿ ಕಚೇರಿಯ ಶಿಲಾನ್ಯಾಸದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ. ಮೂರು ವರ್ಷದ ಹಿಂದೆ ಉಡುಪಿ ಕೃಷ್ಣಮಠದ ಮೇಲೂ ಆಕ್ರಮಣ ನಡೆದಿತ್ತು. ಸ್ವಲ್ಪ ದಿನದಲ್ಲಿ ಮೂಡುಬಿದ್ರೆ ಮೇಲೆ ಆಕ್ರಮಣ ನಡೆಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್;‌ ಹಲವರಿಗೆ SIT ಬುಲಾವ್‌ – ಯೂಟ್ಯೂಬರ್‌ಗಳಿಗೂ ನೋಟಿಸ್‌ ನೀಡಿ ವಿಚಾರಣೆ

    ಹುಲಿಗೆ ರಕ್ತದ ರುಚಿ ಸಿಕ್ಕಿದೆ. ವೈಚಾರಿಕ ರಾಜಕೀಯದ ಮೂಲಕ ಶಬರಿಮಲೆಯಲ್ಲಿ ಸ್ವಲ್ಪ ರಕ್ತದ ರುಚಿ ನೋಡಿದ್ದರು. ಈಶ ಆಶ್ರಮ, ಶನಿ ಸಿಂಗಾಪುರದಲ್ಲೂ ರಕ್ತದ ರುಚಿ ನೋಡಿದ್ದರು. ಧರ್ಮಸ್ಥಳದಲ್ಲಿ ರಕ್ತದ ರುಚಿ ನೋಡುವ ಕೆಲಸ ಮಾಡುತ್ತಲೇ ಇದ್ದಾರೆ. ನಡೆದಿರುವ ಆಕ್ರಮಣಕ್ಕೆ ಶಿಕ್ಷೆ ಆಗಬೇಕು. ಮಾಡುತ್ತಿರುವ ಅಪಪ್ರಚಾರಕ್ಕೂ ಶಾಸ್ತಿ ಆಗಬೇಕು. ಈ ಸಂಕಲ್ಪವನ್ನ ನಾವು ನಮ್ಮ ಕಾರ್ಯಾಲಯದಲ್ಲಿ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ.

    ಇದು ವ್ಯಕ್ತಿ ಅಥವಾ ಸಂಸ್ಥೆಗೆ ನಡೆದ ಆಕ್ರಮಣ ಅಲ್ಲ. ನಮ್ಮ ಶ್ರದ್ಧೆ, ನಂಬಿಕೆ, ವಿಷಯದ ಮೇಲೆ ಮಾಡಿರುವ ಅಕ್ರಮಣ ಇದು. ಉಡುಪಿ ಮೇಲೆ ಆಕ್ರಮಣ ಯಾಕೋ ಈಗ ಬಿಟ್ಟು ಬಿಟ್ಟಿದ್ದಾರೆ. ಮತ್ತೆ ಆಕ್ರಮಣ ಪಿಕ್‌ಅಪ್ ಮಾಡ್ತಾರೋ ಗೊತ್ತಿಲ್ಲ. ಹಿಂದುಗಳ ಶ್ರದ್ಧೆಯ ವಿಚಾರ ಮತ್ತು ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಗೋವು, ಕುಟುಂಬ ವ್ಯವಸ್ಥೆ, ಮೌಲ್ಯಗಳು ತೀರ್ಥಕ್ಷೇತ್ರಗಳು ಇವರ ಟಾರ್ಗೆಟ್ ಎಂದು ಅಸಮಧಾನ ಹೊರಹಾಕಿದ್ದಾರೆ.

    ಕುಂಭಮೇಳದ ಮೇಲೆ ನಿರಂತರ ಅಪಪ್ರಚಾರ ನಡೆಯಿತು. ಕುಂಭಮೇಳಕ್ಕೆ ಹೋದರೆ ಜಗತ್ತಲ್ಲಿ ಇಲ್ಲದ ಕಾಯಿಲೆ ಬರುತ್ತದೆ ಅಂತ ಹೇಳಿದ್ರು. ಆದರೆ, ದೇಶದ ನಂಬಿಕೆ ಬಹಳ ಗಟ್ಟಿಯಾಗಿದೆ. ಆರೋಪ ಬಂದ ಮೇಲೆ ಕೋಟ್ಯಂತರ ಭಕ್ತರ ಸಂಖ್ಯೆ ಜಾಸ್ತಿ ಆಯ್ತು. ನಾವು ಸವಾಲನ್ನು ಎದುರಿಸುತ್ತೇವೆ. ನಮ್ಮ ಸಮಾಜ ಸಶಕ್ತವಾಗಿದೆ. ದೇಶ ಮತ್ತು ಸಂಸ್ಕೃತಿಗೆ ಹಾಕಿರುವ ಸವಾಲಿಗೆ ಮುಟ್ಟಿ ನೋಡುವಂತೆ ಉತ್ತರ ಕೊಡುತ್ತೇವೆ ಎಂದಿದ್ದಾರೆ.

  • ಇವರ‍್ಯಾರೂ ರಾಜವಂಶಸ್ಥರಲ್ಲ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು: ಮುರ್ಮು, ಮೋದಿ, ರಾಧಾಕೃಷ್ಣನ್‌ ಬಗ್ಗೆ ಬಿಎಲ್‌ ಸಂತೋಷ್‌ ಮಾತು

    ಇವರ‍್ಯಾರೂ ರಾಜವಂಶಸ್ಥರಲ್ಲ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು: ಮುರ್ಮು, ಮೋದಿ, ರಾಧಾಕೃಷ್ಣನ್‌ ಬಗ್ಗೆ ಬಿಎಲ್‌ ಸಂತೋಷ್‌ ಮಾತು

    – ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಒಟ್ಟಿಗೆ ಇರುವ ಫೋಟೊ ಶೇರ್‌ ಮಾಡಿ ಬಣ್ಣನೆ

    ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu), ನೂತನ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ (C.P.Radhakrishnan), ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಒಟ್ಟಿಗೆ ಕುಳಿತಿರುವ ಫೋಟೊವನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ (B.L.Santhosh) ಹಂಚಿಕೊಂಡಿದ್ದಾರೆ. ಇವರ‍್ಯಾರೂ ರಾಜವಂಶಸ್ಥರಲ್ಲ, ಸ್ವಂತ ಪರಿಶ್ರಮದಿಂದ ಮೇಲೆ ಬಂದವರು ಎಂದು ಬಣ್ಣಿಸಿದ್ದಾರೆ.

    ಇವರಿಗೆ ತಮ್ಮ ಹಕ್ಕುಗಳ ಪ್ರಜ್ಞೆಯೂ ಇಲ್ಲ. ಮೂವರೂ ಸ್ವಂತ ಪರಿಶ್ರಮದಿಂದ ಮೇಲೆ ಬಂದವರು. ಹಿಂದುಳಿದ ಸಮುದಾಯದಿಂದ ಬಂದವರು. ಜೀವನದ ಪ್ರತಿಯೊಂದು ಹಂತದಲ್ಲೂ ಮೆಟ್ಟಿಲುಗಳನ್ನು ಏರಿ ಬಂದಿದ್ದಾರೆ. ಅದು ಭಾರತದ ಪ್ರಜಾಪ್ರಭುತ್ವ ಮತ್ತು ನಾಗರಿಕತೆಯ ಶಕ್ತಿ ಎಂದು ಬಿಎಲ್‌ ಸಂತೋಷ್‌ ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಪ್ರಮಾಣ ಸ್ವೀಕಾರ

    ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಕುಟುಂಬದಿಂದ ಬಂದವರು. ಚಿಕ್ಕ ವಯಸ್ಸಿನಲ್ಲಿ ಟೀ ಮಾರುತ್ತಿದ್ದ ವ್ಯಕ್ತಿ ಈಗ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ, ರಾಜಕೀಯ ನಾಯಕನಾಗಿ ಹಲವಾರು ಹುದ್ದೆಗಳನ್ನು ಅಲಂಕರಿಸಿದವರು. ತುರ್ತು ಪರಿಸ್ಥಿತಿ ಸೇರಿ ಆಗಿನ ಕೇಂದ್ರ ಸರ್ಕಾರದ ಹಲವಾರು ಕ್ರಮಗಳ ವಿರುದ್ಧದ ಹೋರಾಟಗಳಲ್ಲೂ ಭಾಗಿಯಾಗಿದ್ದರು. ಸತತ ಮೂರು ಅವಧಿಗೆ ಪ್ರಧಾನಿಯಾಗಿ ದಾಖಲೆ ಕೂಡ ಬರೆದಿದ್ದಾರೆ.

    ದ್ರೌಪದಿ ಮುರ್ಮು ಅವರು ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಸಾಮಾನ್ಯ ಕುಟುಂಬದಿಂದ ಬಂದ ಅವರು ಈಗ ರಾಷ್ಟ್ರಪತಿಯಾಗಿದ್ದಾರೆ. ಇವರು ಸಹ ಬಿಜೆಪಿಯ ಹಲವಾರು ಹುದ್ದೆಗಳನ್ನು ಕಾರ್ಯನಿರ್ವಹಿಸಿದ್ದಾರೆ.

    ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಸಿ.ಪಿ.ರಾಧಾಕೃಷ್ಣನ್‌ ಅವರು ದೊಡ್ಡ ಕೌಟುಂಬಿಕ ಹಿನ್ನೆಲೆಯಿಂದ ಬಂದವರಲ್ಲ. ಚಿಕ್ಕ ವಯಸ್ಸಿನಲ್ಲೇ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡರು. ನಂತರ ಬಿಜೆಪಿ ಸೇರಿ ತಮಿಳುನಾಡಿನಲ್ಲಿ ತಳಮಟ್ಟದಲ್ಲಿ ವ್ಯಾಪಕ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಇಂದು ಪ್ರಮಾಣವಚನ ಸ್ವೀಕಾರ

  • ಮತ್ತೊಬ್ಬ ಬಿಜೆಪಿ ನಾಯಕ ದೆಹಲಿಗೆ – ಲೋಕಸಭೆ ಟಿಕೆಟ್‌ಗೆ ಸುಧಾಕರ್‌ ಕಸರತ್ತು?

    ಮತ್ತೊಬ್ಬ ಬಿಜೆಪಿ ನಾಯಕ ದೆಹಲಿಗೆ – ಲೋಕಸಭೆ ಟಿಕೆಟ್‌ಗೆ ಸುಧಾಕರ್‌ ಕಸರತ್ತು?

    ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಷ್ಟ್ರೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ (BJP) ಮಾಜಿ ಸಚಿವ ಡಾ. ಕೆ.ಸುಧಾಕರ್‌ (K.Sudhakar) ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

    ಸುಧಾಕರ್‌ ಅವರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿ.ಎಲ್‌.ಸಂತೋಷ್‌ (B.L.Santosh) ಜೊತೆಗಿರುವ ಫೋಟೋ ವೈರಲ್‌ ಆಗಿದೆ. ಚಿಕ್ಕಬಳ್ಳಾಪುರ ಲೋಕಸಭೆ ಟಿಕೆಟ್‌ಗೆ ಸುಧಾಕರ್‌ ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕೈಯಲ್ಲಿ ಮಂತ್ರಾಕ್ಷತೆ, ಬಗಲಲ್ಲಿ ದೊಣ್ಣೆ ಹಿಡಿದಿರುವವರಿಗೆ ಕಾಂಗ್ರೆಸ್ಸಿಗರು ಹೆದರಲ್ಲ: ಡಿಕೆಶಿ

    ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಕೆ.ಸುಧಾಕರ್‌ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಇವರ ವಿರುದ್ಧ ಸ್ಪರ್ಧೆಗಿಳಿದಿದ್ದ ಕಾಂಗ್ರೆಸ್‌ನ ಪ್ರದೀಪ್‌ ಈಶ್ವರ್‌ ಗೆಲುವು ಸಾಧಿಸಿದ್ದರು.

    ಈಗ ಲೋಕಸಭೆ ಚುನಾವಣೆಗೆ ಕಾಲ ಸನ್ನಿಹಿತವಾಗಿದೆ. ಈ ಹೊತ್ತಲ್ಲಿ ರಾಜ್ಯ ನಾಯಕರು ದೆಹಲಿಗೆ ತೆರಳಿ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ಚುನಾವಣೆಗೆ ಟಿಕೆಟ್‌ ಗಿಟ್ಟಿಸಲು ಕಸರತ್ತು ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಶ್ರೀರಾಮ ಅವರಪ್ಪನ ಮನೆ ಆಸ್ತಿನಾ? – ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಡಿಕೆಶಿ

    ಈಚೆಗೆ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ದೆಹಲಿಗೆ ತೆರಳಿ ಅಮಿತ್‌ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇವರು ತಮ್ಮ ಪುತ್ರ ಕಾಂತೇಶ್‌ನನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಟಿಕೆಟ್‌ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಸೋತಿದ್ದ ಸೋಮಣ್ಣ ಕೂಡ ದೆಹಲಿಗೆ ಭೇಟಿ ನೀಡಿ ಪಕ್ಷದ ನಾಯಕರನ್ನು ಭೇಟಿಯಾಗಿದ್ದರು.

  • ಕೆಲ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರವೇ ಇರಲಿ ಅಂತ ಬಯಸುತ್ತಿದ್ದಾರೆ: ಸತೀಶ್ ಜಾರಕಿಹೊಳಿ

    ಕೆಲ ಬಿಜೆಪಿ ನಾಯಕರು ಕಾಂಗ್ರೆಸ್‌ ಸರ್ಕಾರವೇ ಇರಲಿ ಅಂತ ಬಯಸುತ್ತಿದ್ದಾರೆ: ಸತೀಶ್ ಜಾರಕಿಹೊಳಿ

    ಬೆಂಗಳೂರು: ಬಿಜೆಪಿಯಲ್ಲೇ ಬಿ.ಎಲ್‌ ಸಂತೋಷ್‌ (BL Santosh) ವಿರುದ್ಧ ಮಾತನಾಡುತ್ತಿದ್ದಾರೆ. ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್‌ ಸರ್ಕಾರವೇ ಇರಲಿ ಅಂತ ಬಯಸುತ್ತಿದ್ದಾರೆ. ಅವರ ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ಟಾಂಗ್‌ ನೀಡಿದ್ದಾರೆ.

    40 ಜನ ಬಿಜೆಪಿ (BJP) ಸೇರ್ತಾರೆ ಎಂಬ ಬಿ.ಎಲ್‌ ಸಂತೋಷ್‌ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಾರಕಿಹೊಳಿ, ಈ ಸನ್ನಿವೇಶಕ್ಕೆ ಇಂತಹ ಮಾತು ಸರಿಯಲ್ಲ. ಬಿ.ಎಲ್‌ ಸಂತೋಷ್‌ ಅವರು ರಾಷ್ಟ್ರಮಟ್ಟದ ರಾಜಕಾರಣ ಮಾಡುವವರು. 40 ಜನರನ್ನ ತೆಗೆದುಕೊಂಡು ಏನು ಮಾಡ್ತಾರೆ ಅಂತಾ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: G20ಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ

    ಯಾವುದೇ ಸರ್ಕಾರ ಬೀಳುತ್ತೆ ಅನ್ನೋದು ಸರಿಯಲ್ಲ. ಸರ್ಕಾರ ಬಂದು 3 ತಿಂಗಳಾಗಿದೆ. ಸರ್ಕಾರ ಬೀಳುತ್ತೆ ಅಂತ 5 ವರ್ಷದ ವರೆಗೂ ಈ ಮಾತು ಇದ್ದೇ ಇರುತ್ತದೆ. ಆದರೆ ಆ ಕಾರ್ಯ ಸಫಲ ಆಗೋದಿಲ್ಲ. ಪ್ರಯತ್ನ ಅಂತೂ ಅವರದ್ದು ಇದ್ದೇ ಇರುತ್ತದೆ ಅಂತ ಕುಟುಕಿದ್ದಾರೆ. ಇದನ್ನೂ ಓದಿ: 11% ಏರಿಕೆ, ಆಗಸ್ಟ್‌ನಲ್ಲಿ 1.59 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?

    ಬೆಳಗಾವಿ ಭಾಗದಲ್ಲಿ ಕಾಂಗ್ರೆಸ್‌ಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಆ ಭಾಗದಲ್ಲಿ ಸದ್ಯಕ್ಕೆ ಯಾರೂ ಇಲ್ಲ. ಇದ್ದರೆ ನೇರವಾಗಿ ಸಿಎಂ, ಡಿಸಿಎಂ ಭೇಟಿ ಮಾಡ್ತಾರೆ. ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವರು ಬರೋದಕ್ಕೆ ರೆಡಿ ಇದ್ದಾರೆ. ಅನೇಕರು ಭೇಟಿಯಾಗ್ತಾ ಇದ್ದಾರೆ. ಓಪನ್ ಆಗಿಯೇ ಭೇಟಿ ಆಗುತ್ತಿದೆ. ಕೆಲವೊಂದು ಪರೋಕ್ಷವಾಗಿ ಸಂಪರ್ಕ ಆಗ್ತಾ ಇದೆ. ಎಲ್ಲದಕ್ಕೂ ಸಮಯ ಸಂದರ್ಭ ಬೇಕಲ್ಲವೇ? ಯಾರೇ ಬಂದರೂ ಸ್ವಾಗತ ಮಾಡ್ತೀವಿ ಅಂತಾ ಸ್ಪಷ್ಟಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿ.ಎಲ್ ಸಂತೋಷ್ ಇರೋವರೆಗೂ ಬಿಜೆಪಿ ಗೆಲ್ಲೋದಿಲ್ಲ- ರೇಣುಕಾಚಾರ್ಯ ಬೆಂಬಲಿಗರ ಆಕ್ರೋಶ

    ಬಿ.ಎಲ್ ಸಂತೋಷ್ ಇರೋವರೆಗೂ ಬಿಜೆಪಿ ಗೆಲ್ಲೋದಿಲ್ಲ- ರೇಣುಕಾಚಾರ್ಯ ಬೆಂಬಲಿಗರ ಆಕ್ರೋಶ

    ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.

    ಬಿಎಲ್ ಸಂತೋಷ್ (B.L Santhosh) ಹಾಗೂ ನಳಿನ್ ಕುಮಾರ್ ಕಟೀಲ್ ವಿರುದ್ಧವೇ ರೇಣುಕಾಚಾರ್ಯ ಬೆಂಬಲಿಗರು ಕಿಡಿಕಾರಿದ್ದಾರೆ. ಹೊನ್ನಾಳಿಯಲ್ಲಿ ರೇಣುಕಾಚಾರ್ಯ ನಿವಾಸದ ಮುಂದೆ ಜಮಾಯಿಸಿದ ಬೆಂಬಲಿಗರು, ಬಿಎಲ್ ಸಂತೋಷ್ ರಾಜ್ಯವನ್ನು ಬಿಟ್ಟು ತೊಲಗಬೇಕಿದೆ. ಆಗ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಾ ಬಿಎಲ್ ಸಂತೋಷ್ ವಿರುದ್ದ ಧಿಕ್ಕಾರ ಕೂಗಿದ್ದಾರೆ.

    ಯಡಿಯೂರಪ್ಪ (BS Yediyurappa) ರನ್ನು ಕೆಳಗೆ ಇಳಿಸಿ ಲಿಂಗಾಯತರನ್ನು ಕಡೆಗಣಿಸಿದ ಪರಿಣಾಮ ಇದಾಗಿದೆ. ಬಿಎಲ್ ಸಂತೋಷ್ ಇರೋವರೆಗೂ ಬಿಜೆಪಿ ಗೆಲ್ಲೋದಿಲ್ಲ. ಬಿಎಲ್ ಸಂತೋಷ್ ರಾಜ್ಯ ಬಿಟ್ಟು ತೊಲಗಲಿ ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸೋಮವಾರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ?

    ಕೋವಿಡ್ ಸಂದರ್ಭದಲ್ಲಿ ಪ್ರಾಣ ಒತ್ತೇ ಇಟ್ಟು ಕೆಲಸ ಮಾಡಿದ್ದಾರೆ. ಅಂತವರು ಸೋಲಬೇಕು ಎಂದರೆ ಇದೇ ಕಾರಣ. 70 ಜನ ಹೊಸಾ ಮುಖಕ್ಕೆ ಟಿಕೆಟ್ ನೀಡಿ ಕೈ ಸುಟ್ಟುಕೊಂಡರು. ಇದೆಲ್ಲ ಸಂತೋಷ್ ಜೀಯ ಪ್ಲಾನ್‍ನಿಂದಲೇ ಬಿಜೆಪಿ ಸೋತಿದ್ದು ಎಂದು ಕಿಡಿಕಾರಿದ್ದಾರೆ.

  • ಬಿಜೆಪಿ ಸೋಲಿಗೆ ವ್ಯಂಗ್ಯವಾಡಿದ ಕಾಂಗ್ರೆಸ್ಸಿಗರಿಗೆ ಬಿ.ಎಲ್ ಸಂತೋಷ್ ಹೊಸ ಸವಾಲ್

    ಬಿಜೆಪಿ ಸೋಲಿಗೆ ವ್ಯಂಗ್ಯವಾಡಿದ ಕಾಂಗ್ರೆಸ್ಸಿಗರಿಗೆ ಬಿ.ಎಲ್ ಸಂತೋಷ್ ಹೊಸ ಸವಾಲ್

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಹೀಗಾಗಿ ವ್ಯಂಗ್ಯವಾಡಿದ ಕಾಂಗ್ರೆಸ್ ನವರಿಗೆ ತಿರುಗೇಟು ನೀಡುವ ಮೂಲಕ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಹೊಸ ಸವಾಲೆಸೆದಿದ್ದಾರೆ.

    ಈ ಸಂಬಂಧ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು, ಇನ್ನು 12 ತಿಂಗಳಿನೊಳಗೆ 31,000ಕ್ಕೆ ಮತ್ತೆ 10,000 ಸೇರಿಸಿ 41,000 ಬೂತ್‍ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ. ಇದನ್ನೂ ಓದಿ: ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು: ಸಿ.ಟಿ ರವಿ

    ಫೇಸ್‌ಬುಕ್‌ ನಲ್ಲೇನಿದೆ..?: ಕಲಿಯುತ್ತೇವೆ, ಸೋಲಿನಿಂದ, ಹಿನ್ನಡೆಗಳಿಂದ, ತಪ್ಪುಗಳಿಂದ ಉತ್ತರಿಸುತ್ತೇವೆ. ಟೀಕೆಗಳಿಗೆ, ಕುಹಕಗಳಿಗೆ, ಒಡಕು ಮಾತುಗಳಿಗೆ ನಮ್ಮ ಗತಿಶೀಲತೆಯಿಂದ ನಾವು ಇರಲಿಕ್ಕೇ ಬಂದವರು, ಗೆಲ್ಲಲಿಕ್ಕೇ ಬಂದವರು. ನಮಗೆ ಸೋಲು ಕ್ಷಣಿಕ, ಮುನ್ನಡೆ ಸತತ. ಇನ್ನು 12 ತಿಂಗಳಿನೊಳಗೆ 31,000ಕ್ಕೆ ಮತ್ತೆ 10,000 ಸೇರಿಸಿ 41,000 ಬೂತ್‍ಗಳಲ್ಲಿ ಮುನ್ನಡೆ ಸಾಧಿಸಿ ತೋರಿಸುತ್ತೇವೆ ಎಂದು ಚಾಲೆಂಜ್ ಹಾಕಿದ್ದಾರೆ.

  • ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ- ಯುವಕ ಅರೆಸ್ಟ್

    ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ- ಯುವಕ ಅರೆಸ್ಟ್

    ಮೈಸೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (B L Santhosh) ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿ ವೈರಲ್ ಮಾಡಿದ ಯುಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

    ದಿಲೀಪ್ ಗೌಡ (Dilip Gowda) ಬಂಧಿತ ಮೈಸೂರಿನ ಯುವಕ. ಈತ ಲಿಂಗಾಯತ ಸಮುದಾಯದ ವಿರುದ್ಧ ಸಂತೋಷ್ ಹೇಳಿಕೆ ನೀಡಿದ ರೀತಿ ಪತ್ರಿಕಾ ವರದಿ ಸೃಷ್ಟಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಬಿಜೆಪಿ ದೂರು ನೀಡಿತ್ತು. ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂದ್ರೆ ಸಪೋರ್ಟ್ ಮಾಡ್ತೀನಿ: ಜನಾರ್ದನ ರೆಡ್ಡಿ

    ಬಿಜೆಪಿ (BJP) ನೀಡಿದ ದೂರಿನ ಆಧರಿಸಿ ಮೈಸೂರು ನಗರ ಪೊಲೀಸರು ದಿಲೀಪ್ ಗೌಡನನ್ನು ಬಂಧಿಸಿದ್ದಾರೆ.

  • ಬಿ.ಎಲ್ ಸಂತೋಷ್ ಬಗ್ಗೆ ಕಾಂಗ್ರೆಸ್‍ಗೆ ನಡುಕ ಶುರುವಾಗಿದೆ: ಪ್ರತಾಪ್ ಸಿಂಹ

    ಬಿ.ಎಲ್ ಸಂತೋಷ್ ಬಗ್ಗೆ ಕಾಂಗ್ರೆಸ್‍ಗೆ ನಡುಕ ಶುರುವಾಗಿದೆ: ಪ್ರತಾಪ್ ಸಿಂಹ

    ರಾಯಚೂರು: ವರುಣಾ (Varuna Constituency) ದಲ್ಲಿ ಸಿದ್ದರಾಮಯ್ಯ (Siddaramaiah) ನವರ ಕತೆ ಏನಾಗಿದೆ ಅಂದ್ರೆ ನಾಮಿನೇಷನ್ ಆದ ಮೇಲೆ ಮತದಾನದ ದಿನ ಮತ್ತೆ ಕ್ಷೇತ್ರಕ್ಕೆ ಬರ್ತೀನಿ ಅಂದೋರು, ಐದು ದಿನ ಮುಂಚಿತವಾಗಿಯೇ ಬಂದಿದ್ದಾರೆ. 10 ಕೆ.ಜಿ ಅಕ್ಕಿ ಕೊಡ್ತೀನಿ ಅಂತ ಹಾರಾಟ ಮಾಡುತ್ತಿದ್ದರು. ಆದರೆ ಈಗ ಅವರಿಗೆ ಕಷ್ಟವಾಗಿದೆ ಅಂತ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

    ರಾಯಚೂರು ಗ್ರಾಮೀಣ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಪರ ಯಾಪಲದಿನ್ನಿಯಲ್ಲಿ ಮತಬೇಟೆ ನಡೆಸಿದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು. ಸೋಮಣ್ಣ ವರುಣಾದಲ್ಲಿ ಸ್ಪರ್ಧಿಸಿದ್ದಕ್ಕೆ ನಾಮಪತ್ರ ಸಲ್ಲಿಸಿದ ಮರುದಿನವೇ ಸಿದ್ದರಾಮಯ್ಯ ವರುಣಕ್ಕೆ ಬಂದ್ರು. ಸಿಎಂ ಆಕಾಂಕ್ಷಿ ಅಭ್ಯರ್ಥಿ ಕನಿಷ್ಠ 45 ಕ್ಷೇತ್ರ ಗೆಲ್ಲಿಸಬೇಕು. ಅವರೇ ತಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ. ಡಬನ್ ಇಂಜಿನ್ ಸರ್ಕಾರ ಬರುವುದು ಖಚಿತವಾಗಿದೆ. ನಾವು ಯಾವುದೇ ಭಾಗಕ್ಕೆ ಹೋದರೂ ಅಭಿವೃದ್ಧಿ ಬಗ್ಗೆ ಮಾತಾಡುತ್ತಿದ್ದೇವೆ ಎಂದರು.

    ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾರಿಗೆ ಕಾಗೆ ಬಿದ್ದಿತ್ತು. ಬಜರಂಗದಳ (Bajaranagdal) ನಿಷೇಧ ಮಾಡುತ್ತೇನೆ ಅಂದ ಕೂಡಲೇ ಡಿಕೆ ಶಿವಕುಮಾರ್ ಇದ್ದ ಹೆಲಿಕಾಪ್ಟರ್ ಗೆ ಹದ್ದು ಬಂದು ಬಡಿಯಿತು. ಕಾಂಗ್ರೆಸ್ ಅಂದ್ರೆ ಪ್ರಾಣಿ ಪಕ್ಷಿಗಳಿಗೂ ಇಷ್ಟವಿಲ್ಲ. ಪ್ರಜ್ಞಾವಂತ ಮತದಾರರೇ ನಿಮ್ಮ ಮನಸ್ಸಿನಲ್ಲೂ ಕಾಂಗ್ರೆಸ್ ಇರುವುದಿಲ್ಲ. ಮತ್ತೆ ಕಾಂಗ್ರೆಸ್ ಅವರನ್ನ ಅಧಿಕಾರಕ್ಕೆ ತಂದರೆ ಕೋಟಿ ಕೋಟಿ ಲೂಟಿ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ತಂದ್ರೆ ಗ್ಯಾರೆಂಟಿ ಕೊಡ್ತೀವಿ ಅಂತಿದ್ದಾರೆ. ಸಿದ್ದರಾಮಯ್ಯರನ್ನ ಮೈಸೂರು ಜನರೇ ನಂಬಲ್ಲ. ಚಾಮುಂಡೇಶ್ವರಿ ಜನ ಸೋಲಿಸಿದರು. ಮೈಸೂರು ದಸರಾಗೆ ಫೇಮಸ್ ಆದರೆ ಸಿದ್ದರಾಮಯ್ಯ ಮಹಿಷಾ ದಸರಾ ಅಂತ ನಾನ್ಸೆನ್ಸ್ ಶುರು ಮಾಡಿದ್ದಕ್ಕೆ ತಾಯಿ ಚಾಮುಂಡೇಶ್ವರಿನೇ 35 ಸಾವಿರ ವೋಟುಗಳಿಂದ ಸೋಲಿಸಿದಳು ಎಂದು ಕಿಡಕಾರಿದರು. ಇದನ್ನೂ ಓದಿ: ಬಜರಂಗಬಲಿಯ ಆಕ್ರೋಶದಿಂದ ಕಾಂಗ್ರೆಸ್ ಭವಿಷ್ಯ ಸುಟ್ಟು ಬೂದಿಯಾಗಲಿದೆ: ಪ್ರಹ್ಲಾದ್ ಜೋಶಿ ಕಿಡಿ

    ಬಿಜೆಪಿ (BJP) ಬಂದ್ರೆ ಮಳೆ ಬರುತ್ತೆ, ಭೂಮಿ ಹಸನಾಗುತ್ತೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗ ಬರಗಾಲ ಹೋಗಿ ಮಳೆ ಬಂತು. ಕಾಂಗ್ರೆಸ್‍ನವರು ಅಕ್ಕಿನೂ ಕೊಡಲ್ಲ, 2000 ರೂ. ನೂ ಕೊಡಲ್ಲ. ಆಮ್ ಆದ್ಮಿ ದೆಹಲಿಯಲ್ಲಿ ಹೀಗೆ ಹೇಳಿತ್ತು ಈಗ ಏನೂ ಕೊಡ್ತಿಲ್ಲ. ಕಾಂಗ್ರೆಸ್ ಗೆ ವೋಟು ಹಾಕಿದರೆ ಒಸಾಮಾ ಬಿನ್ ಲಾಡೆನ್, ಮುಲ್ಲಾ ಉಮರ್ ಆಡಳಿತದ ತಾಲಿಬಾನ್ ಸರ್ಕಾರ ಬರುತ್ತೆ. ಶಿವನ ಬೆಟ್ಟವನ್ನ ಡಿಕೆಶಿ (DK Shivakumar) ಏಸು ಬೆಟ್ಟ ಮಾಡಲು ಹೋಗಿದ್ದರು. ಟಿಪ್ಪು ಹುಟ್ಟಿನ ಬಗ್ಗೆ ಸಿದ್ದರಾಮಯ್ಯ ಕುಂಡಲಿ ಬರೆಯುತ್ತಾರೆ, ಆಂಜನೇಯನ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದರು. ಮುಸ್ಲಿಮರಿಗೆ ಅಕ್ರಮವಾಗಿ ಕೊಟ್ಟ 4% ಮೀಸಲಾತಿ ವಾಪಸ್ ತರುತ್ತೇವೆ ಅಂತಿದ್ದಾರೆ. ಹಿಂದುಳಿದ ಸಮುದಾಯದ ಮೀಸಲಾತಿ ಕಿತ್ತು ಅವರಿಗೆ ಕೊಡ್ತಾರೆ. ಗೊಹತ್ಯೆ ಮಾಡುವವರಿಗೆ ಮೀಸಲಾತಿ ಕೊಡ್ತಾರಂತೆ ಅಂತ ಹರಿಹಾಯ್ದರು.

    ಇನ್ನೂ ಸಂತೋಷ್ (B.L Santhosh) ಜೀ ಬಗ್ಗೆ ಸುಳ್ಳು ಸುದ್ದಿ ಮಾಡಿ ಕಾಂಗ್ರೆಸ್‍ನವರು ಪ್ರಚಾರ ಮಾಡುತ್ತಿದ್ದಾರೆ. ವೀರಶೈವರ ಬಗ್ಗೆ ಹಗರವಾಗಿ ಮಾತನಾಡಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ವಾಟ್ಸಪ್ ನಲ್ಲಿ ಹರಿಬಿಡುತ್ತಿದ್ದಾರೆ. ಸಂತೋಷ್ ಅವರ ಬಗ್ಗೆ ಕಾಂಗ್ರೆಸ್‍ಗೆ ನಡುಕ ಶುರುವಾಗಿದೆ. ವೀರಶೈವ ಸೇರಿ ಎಲ್ಲಾ ಸಮುದಾಯ ಉಳಿಯಲು ಬಿಜೆಪಿ ಸರ್ಕಾರ ಬರಬೇಕು ಅಂತ ಪ್ರತಾಪ್ ಸಿಂಹ ಹೇಳಿದ್ದಾರೆ.

  • ಕುಟುಂಬ, ಸಂಸಾರ ತ್ಯಾಗ ಮಾಡಿ ಬಿ.ಎಲ್ ಸಂತೋಷ್‌ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ: ಪ್ರಹ್ಲಾದ್ ಜೋಶಿ

    ಕುಟುಂಬ, ಸಂಸಾರ ತ್ಯಾಗ ಮಾಡಿ ಬಿ.ಎಲ್ ಸಂತೋಷ್‌ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ: ಪ್ರಹ್ಲಾದ್ ಜೋಶಿ

    ಹುಬ್ಬಳ್ಳಿ: ಬಿ.ಎಲ್ ಸಂತೋಷ್‌ (BL Santhosh) ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಅವರು ತಮ್ಮ ಕುಟುಂಬ, ಸಂಸಾರ ತ್ಯಾಗ ಮಾಡಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.

    ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಈಗಾಗಲೇ ಕಿತ್ತೂರು ಭಾಗದಲ್ಲಿ ಒಂದು ಮೋದಿ ಕಾರ್ಯಕ್ರಮ ನಿಗದಿಯಾಗಿದೆ. ಮೋದಿ ಕಾರ್ಯಕ್ರಮ ಇನ್ನೂ ಎರಡು, ಮೂರು ಜಾಸ್ತಿ ಮಾಡುವಂತೆ ಮನವಿ ಮಾಡಿದ್ದೇವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಸಹ ಬರಲಿದ್ದಾರೆ ಎಂದರು. ಇದನ್ನೂ ಓದಿ: ಏಪ್ರಿಲ್ 29ರಂದು ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ

    ಅಮಿತ್ ಶಾ ಇಂದು ಸಂಜೆ 6 ಗಂಟೆಗೆ ಹುಬ್ಬಳ್ಳಿಗೆ ಬರಲಿದ್ದಾರೆ. ನಮ್ಮ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಮತ್ತು ಇತರೆ ಪ್ರಮುಖ ನಾಯಕರ ಜೊತೆಗೆ ಸಭೆಯಿದೆ. ಗದಗ, ಧಾರವಾಡ, ಹಾವೇರಿ ಜಿಲ್ಲೆಯ ಪ್ರಮುಖರ ಸಭೆ ನಡೆಯಲಿದೆ. ಸದ್ಯದ ಚುನಾವಣಾ ಮಾಹಿತಿಯನ್ನು ಶಾ ಪಡೆಯಲಿದ್ದಾರೆ. ಬಳಿಕ ಸುದ್ದಿಗೊಷ್ಠಿ ನಡೆಸಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್‌ಗೆ ಶಾಕ್‌ – ʼಕೈʼ ಅಭ್ಯರ್ಥಿಗೆ ವೋಟ್‌ ಹಾಕಿ ಎಂದ MLC ಭೋಜೇಗೌಡ

  • ಬಿಜೆಪಿ ಶಾಸಕ ಅನಿಲ್ ಬೆನಕೆಗೆ ಬಿ.ಎಲ್ ಸಂತೋಷ್ ಬುಲಾವ್

    ಬಿಜೆಪಿ ಶಾಸಕ ಅನಿಲ್ ಬೆನಕೆಗೆ ಬಿ.ಎಲ್ ಸಂತೋಷ್ ಬುಲಾವ್

    ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ (BJP) ಶಾಸಕ ಅನಿಲ್ ಬೆನಕೆಗೆ (Anil Benake) ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ ಬುಲಾವ್ (B.L Santhosh) ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಿಂದ (Belagavi) ಬೆಂಗಳೂರಿಗೆ (Bengaluru) ಶಾಸಕ ಅನಿಲ್ ಬೆನಕೆ ಪ್ರಯಾಣ ಬೆಳೆಸಿದ್ದು, ಪಕ್ಷದ ಮುಖಂಡರೊಂದಿಗೆ ಶನಿವಾರ ಚರ್ಚಿಸಲಿದ್ದಾರೆ.

    ಅನಿಲ್ ಬೆನಕೆ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಲಿಂಗಾಯತ (Lingayats) ಸಮುದಾಯದ ಡಾ.ರವಿ ಪಾಟೀಲ ಅವರಿಗೆ ಬಿಜೆಪಿ ಮಣೆ ಹಾಕಿದೆ. ಬಿಜೆಪಿ ನಾಯಕರ ನಿರ್ಧಾರಕ್ಕೆ ಅನಿಲ್ ಬೆನಕೆ ತೀವ್ರ ಅಸಮಾಧಾನಗೊಂಡಿದ್ದಾರೆ. ಇದನ್ನೂ ಓದಿ: ಕನ್ನಡವೇ ಮೊದಲು, ರೈತ ಚೈತನ್ಯ – ಜೆಡಿಎಸ್‌ನಿಂದ ಭರವಸೆ ಪತ್ರ ಬಿಡುಗಡೆ

    ಬೆಂಗಳೂರಿಗೆ ತೆರಳುವ ಮುನ್ನವೇ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್ ಬೆನಕೆ, ಬಿಜೆಪಿ ಟಿಕೆಟ್ ಸಿಗಲಿ, ಬಿಡಲಿ ನಾನು ಈ ಬಾರಿ ಸ್ಪರ್ಧೆ ಮಾಡುತ್ತೇನೆ. ಯಾವ ಪಕ್ಷ ಎಂದು ನಿರ್ಧರಿಸಿಲ್ಲ. ಆದರೆ ಸ್ಪರ್ಧೆಗೆ ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್, ಜೆಡಿಎಸ್ ಸೇರಿ ಹಲವು ಪಕ್ಷಗಳ ಜೊತೆ ಮಾತುಕತೆ ನಡೆದಿದೆ. ಈ ಮಧ್ಯೆಯೇ ಬಿ.ಎಲ್ ಸಂತೋಷ್ ಅವರು ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ. ನಾನು ಈಗ ಬೆಂಗಳೂರಿಗೆ ತೆರಳುತ್ತಿದ್ದೇನೆ. ನಮ್ಮ ನಾಯಕರ ಜೊತೆಗೆ ಚರ್ಚಿಸಿ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದರು. ಇದನ್ನೂ ಓದಿ: ಸೋಮಣ್ಣ ಹೊರಗಿನವ, ವರುಣಾದಲ್ಲಿ ಒಂದು ಮತವೂ ಬೀಳಲ್ಲ: ಸಿದ್ದು