Tag: ಬಿಹಾರ ಸರ್ಕಾರ

  • Bihar | ಮರುಪರೀಕ್ಷೆಗೆ ಆಗ್ರಹ – ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ

    Bihar | ಮರುಪರೀಕ್ಷೆಗೆ ಆಗ್ರಹ – ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ

    ಪಾಟ್ನಾ: 70ನೇ ಸಂಯೋಜಿತ ಸ್ಪರ್ಧಾತ್ಮಕ ಪರೀಕ್ಷೆಯ (CCE) ಮರುಪರೀಕ್ಷೆಗೆ ಒತ್ತಾಯಿಸಿ ಬಿಹಾರ ಲೋಕಸೇವಾ ಆಯೋಗದ (BPSC) ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಪಾಟ್ನಾದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಜಲಫಿರಂಗಿ ಬಳಸಿದರಲ್ಲದೇ ಲಾಠಿ ಚಾರ್ಜ್‌ (Police Lathi Charge) ಸಹ ನಡೆಸಿದರು.

    ಕಳೆದ ಕೆಲ ದಿನಗಳಿಂದ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಭಾನುವಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರೊಂದಿಗೆ ಮಾತುಕತೆಗಾಗಿ ಅವರ ನಿವಾಸಕ್ಕೆ ತೆರಳಲು ಗಾಂಧಿ ಮೈದಾನದಲ್ಲಿ ಜಮಾಯಿಸಿದ್ದರು. ನಿತೀಶ್‌ ಕುಮಾರ್‌ ಭೇಟಿ ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದರು. ಆದ್ರೆ ವಿದ್ಯಾರ್ಥಿಗಳು ಸಿಎಂ ಭೇಟಿ ಮಾಡಲೇಬೇಕೆಂದು ಪಟ್ಟು ಹಿಡಿದರು. ಈ ವೇಳೆ ಬ್ಯಾರಿಕೇಡ್‌ಗಳನ್ನಿಟ್ಟು ವಿದ್ಯಾರ್ಥಿಗಳನ್ನ ತಡೆಯಲು ಮುಂದಾದರು.

    ವಿದ್ಯಾರ್ಥಿಗಳು ಬ್ಯಾರಿಕೇಡ್‌ ಕಿತ್ತೆಸೆದು ನಿತೀಶ್‌ ಕುಮಾರ್‌ ನಿವಾಸಕ್ಕೆ ತೆರಳಲು ಮುಂದಾಗಿದ್ದರಿಂದ ಪೊಲೀಸರು ಬಲಪ್ರಯೋಗ ಮಾಡಿದರು. ಜಲಫಿರಂಗಿಗಳನ್ನು ಬಳಸಿದರಲ್ಲೇ, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಮಾಡಿದರು. ಈ ಕುರಿತ ವಿಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರ ಲಾಠಿ ಚಾರ್ಜ್‌ನಲ್ಲಿ ಹಲವು ಅಭ್ಯರ್ಥಿಗಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಜನ್ ಸೂರಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೇ ಐವರು ಸದಸ್ಯರ ವಿದ್ಯಾರ್ಥಿ ನಿಯೋಗದೊಂದಿಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳನ್ನ ಭೇಟಿ ಮಾಡುವುದಾಗಿ ಘೋಷಣೆ ಮಾಡಿದರು. ಸರ್ಕಾರ ಯಾವುದೇ ನಿರ್ಧಾರಕ್ಕೆ ಬರದಿದ್ದರೆ, ಮರುದಿನ ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಪ್ರಶಾಂತ್‌ ಕಿಶೋರ್‌ ಎಚ್ಚರಿಕೆ ನೀಡಿದರು.

    ಬಿಹಾರ ಬಂದ್‌ಗೆ ಕರೆ:
    AISA ಡಿಸೆಂಬರ್ 30 ರಂದು BPSC ಮರು ಪರೀಕ್ಷೆಗೆ ಸಂಬಂಧಿಸಿದಂತೆ ಬಿಹಾರ ಬಂದ್ ಮತ್ತು ಚಕ್ಕಾ ಜಾಮ್ ಅನ್ನು ಘೋಷಿಸಿದೆ. ಸಿಪಿಐ ಕೂಡ ಈ ಆಂದೋಲನಕ್ಕೆ ಬೆಂಬಲ ಘೋಷಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಲು ಯಾವಾಗ ಮೆರವಣಿಗೆ ನಡೆಸಬೇಕು ಎಂಬುದನ್ನು ವಿದ್ಯಾರ್ಥಿಗಳೇ ನಿರ್ಧರಿಸಬೇಕು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

  • ರಾಜ್ಯದಲ್ಲೂ ಜಾತಿಗಣತಿ ಸಮೀಕ್ಷೆ ವರದಿ ಜಾರಿಗೆ ಒತ್ತಡ; ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಮೋದಿ

    ರಾಜ್ಯದಲ್ಲೂ ಜಾತಿಗಣತಿ ಸಮೀಕ್ಷೆ ವರದಿ ಜಾರಿಗೆ ಒತ್ತಡ; ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಮೋದಿ

    ಬೆಂಗಳೂರು: ಬಿಹಾರದಲ್ಲಿ ಜಾತಿಗಣತಿ ಸಮೀಕ್ಷಾ ವರದಿ (Caste Survey Report) ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಲ್ಲಿಯೂ ಜಾತಿಗಣತಿ ವಿಚಾರ ಸದ್ದು ಮಾಡಿದೆ.

    2015ರಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರ ನೇಮಕ ಮಾಡಿದ್ದ ಕಾಂತರಾಜು ಸಮಿತಿ ವರದಿಯನ್ನು ಜಾರಿ ಮಾಡಬೇಕು ಎಂಬ ಕೂಗು ಕಾಂಗ್ರೆಸ್ ಪಡಸಾಲೆಯಲ್ಲೇ ಕೇಳಿಬಂದಿದೆ. ಜಾತಿಗಣತಿ ಆಗ್ಬೇಕು ಅನ್ನೋದು ರಾಹುಲ್ ಗಾಂಧಿ (Rahul Gandhi) ಅವರ ಆಶಯ. ಹೀಗಾಗಿ ರಾಜ್ಯ ಸರ್ಕಾರ ಸಮೀಕ್ಷಾ ವರದಿ ಬಿಡುಗಡೆ ಮಾಡ್ಬೇಕು ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ಇದನ್ನೂ ಓದಿ: Maharashtra: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ – 24 ಗಂಟೆಯಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು

    ತಪ್ಪು-ಒಪ್ಪು ಏನೇ ಇರಲಿ, ಎಷ್ಟೇ ಒತ್ತಡಗಳಿರಲಿ, ಜಾತಿ ಗಣತಿ ವಿವರಗಳನ್ನ ಸರ್ಕಾರ ಪ್ರಕಟಿಸಬೇಕು. ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದಷ್ಟು ಬೇಗ ಜಾತಿಗಣತಿ ವರದಿ ಜಾರಿ ಮಾಡಬೇಕು ಎಂದು ಎಂದು ಸತೀಶ್ ಜಾರಕಿಹೊಳಿ, ಬಸವರಾಜ ರಾಯರೆಡ್ಡಿ ಆಗ್ರಹಿಸಿದ್ದಾರೆ. ಆದ್ರೆ, ಬಿಜೆಪಿ ಮಾತ್ರ ಇದನ್ನು ತೀವ್ರವಾಗಿ ವಿರೋಧಿಸಿದೆ. ಇತ್ತ ಆಯೋಗ ಇನ್ನೂ ವರದಿ ನೀಡಿಲ್ಲ, ಕೊಟ್ಟಾಗ ನೋಡೋಣ ಎಂದು ಸಿಎಂ ಸುಮ್ಮನಾಗಿದ್ದಾರೆ. ನವೆಂಬರ್ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸ್ತೇವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.

    ಮೋದಿ ಕಿಡಿ: ವಿಪಕ್ಷಗಳ ಜಾತಿಗಣತಿ ರಾಜಕೀಯದ ವಿರುದ್ಧ ಪ್ರಧಾನಿ ಮೋದಿ (Narendra Modi) ಸಿಡಿದೆದ್ದಿದ್ದಾರೆ. ಕಳೆದ ಎರಡು ದಿನಗಳಿಂದ ನಿರಂತರವಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಾತಿಗಣತಿ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳಲು ಕಾಂಗ್ರೆಸ್ ಬಯಸ್ತಿದೆಯೇ? ಎಂದು ಪ್ರಧಾನಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

    ಛತ್ತೀಸ್‌ಘಡದ ಜಗ್ದಾಲ್‌ಪುರ ರ‍್ಯಾಲಿಯಲ್ಲಿ ಮಾತಾಡಿದ ಅವರು, ಜಾತಿಗಣತಿ ಮೂಲಕ ಅಲ್ಪಸಂಖ್ಯಾತರನ್ನು ತೊಲಗಿಸಲು ಕಾಂಗ್ರೆಸ್ಸಿಗರು ಬಯಸ್ತಾರಾ? ಹಾಗಾದ್ರೆ ಅತಿಹೆಚ್ಚು ಜನಸಂಖ್ಯೆಯ ಹಿಂದೂಗಳು ಮುಂದೆ ಬಂದು ಅವರ ಎಲ್ಲಾ ಹಕ್ಕುಗಳನ್ನು ತೆಗೆದುಕೊಳ್ಳಬೇಕೆ? ಈ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಕಾಂಗ್ರೆಸ್ ನಾಯಕರಿಗೆ ಇದ್ಯಾ? ಇಲ್ಲ ಅವರಿಗೆ ಆ ಧೈರ್ಯ ಇಲ್ಲ ಎಂದು ಕೆಣಕಿದ್ದಾರೆ. ಕಾಂಗ್ರೆಸ್ ಹಿಂದೂಗಳನ್ನು ಒಡೆಯಲು ನೋಡ್ತಿದೆ. ಬಡವರನ್ನು ವಿಭಜಿಸಲು ಪ್ರಯತ್ನಿಸ್ತಿದೆ, ದೇಶದ ವಿನಾಶಕ್ಕೆ ಮುಂದಾಗಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

    ಬಿಹಾರ ಜಾತಿ ಸಮೀಕ್ಷೆ ವರದಿ ಬಿಡುಗಡೆ; ಜಾತಿ ಹೆಸರಲ್ಲಿ ದೇಶ ವಿಭಜಿಸುವ ಪ್ರಯತ್ನವೆಂದು ಮೋದಿ ವಾಗ್ದಾಳಿ

    ಪಾಟ್ನಾ: ಮುಂಬರುವ 2024ರ ಲೋಕಸಭೆ ಚುನಾವಣೆಗೂ ಮುನ್ನವೇ ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ ರಾಜ್ಯ ಸರ್ಕಾರ ಜಾತಿ ಆಧಾರಿತ ಸಮೀಕ್ಷಾ (Bihar Caste Survey) ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. ಜಾತಿಯ ಹೆಸರಲ್ಲಿ ದೇಶವನ್ನ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾವುದೇ ಪಕ್ಷದ ಹೆಸರು ಉಲ್ಲೇಖಿಸದೇ ಬಿಹಾರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಸಾಧಿಸುವಲ್ಲಿ ವಿಫಲರಾಗಿದ್ದಾರೆ. ಈಗ ಬಡವರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅಂದಿನಿಂದಲೂ ಬಡವರ ಭಾವನೆಗಳೊಂದಿಗೆ ಆಟವಾಡುವ ಪ್ರವೃತ್ತಿಯನ್ನ ಮುಂದುವರಿಸಿಕೊಂಡು ಬಂದಿದ್ದಾರೆ. ಮೊದಲು ಜಾತಿ ಹೆಸರಿನಲ್ಲಿ ದೇಶವನ್ನ ಒಡೆದರು, ಇಂದು ಅದೇ ಪಾಪ ಕೃತ್ಯವನ್ನು ಮಾಡುತ್ತಿದ್ದಾರೆ. ಭ್ರಷ್ಟಾಚಾರಿಗಳು ಇನ್ನಷ್ಟು ಭ್ರಷ್ಟಾಚಾರಿಗಳಾಗಿದ್ದಾರೆ. ಜಾತಿ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುವ ಯಾವುದೇ ಪ್ರಯತ್ನವೂ ಪಾಪಕ್ಕೆ ಸಮಾನ ಎಂದು ಮೋದಿ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಸ್ಲೀಪರ್ ಸೆಲ್‌ಗಳ ಅಡ್ಡವಾಗ್ತಿದೆ, ಹಿಂದೂಗಳು ಭಯದಲ್ಲಿ ಬದುಕುವಂತಾಗಿದೆ: ವೇದವ್ಯಾಸ್ ಕಾಮತ್

    ಇನ್ನೂ ಬಿಹಾರ ಸರ್ಕಾರದ ಜಾತಿ ಸಮೀಕ್ಷಾ ವರದಿಗೆ ಪ್ರತಿಕ್ರಿಯಿಸಿದ ಸಂಸದ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರವೂ ಶೀಘ್ರವೇ ರಾಷ್ಟ್ರೀಯ ಜಾತಿ ಗಣತಿಯನ್ನು ನಡೆಸಬೇಕು. ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ವಾಸ್ತವಾಗಿ ಜಾತಿಗಣತಿಯನ್ನ ಪೂರ್ಣಗೊಳಿಒಸಿದೆ. ಆದ್ರೆ ಅದರ ಫಲಿತಾಂಶಗಳನ್ನ ಮೋದಿ ಸರ್ಕಾರ ಪ್ರಕಟಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರಲ್ಲದೇ, ನೊಂದ ಸಮಾಜಗಳ ಸಬಲೀಕರಣಗೊಳಿಸಲು ಹಾಗೂ ಭದ್ರ ಅಡಿಪಾಯ ಹಾಕಿಕೊಡಲು ಜಾತಿಗಣತಿ ಅತ್ಯವಶ್ಯಕ ಎಂದು ಪ್ರತಿಪಾದಿಸಿದ್ದಾರೆ.  ಇದನ್ನೂ ಓದಿ: Asian Games 2023: ಪಾರುಲ್‌ ಕಣ್ಣಲ್ಲಿ ಬೆಳ್ಳಿ ಬೆಳಕು – 9ನೇ ದಿನವೂ ಭಾರತ ಪದಕಗಳ ಬೇಟೆ

    ಜಾತಿಗಣತಿ ವರದಿ ಬಿಡುಗಡೆ:
    2024ರ ಲೋಕಸಭೆ ಚುನಾವಣೆಗೂ ಮುನ್ನವೇ ನಿತೀಶ್‌ ಕುಮಾರ್‌ (Nitish Kumar) ನೇತೃತ್ವದ ಬಿಹಾರ ರಾಜ್ಯ ಸರ್ಕಾರ ಜಾತಿ ಆಧಾರಿತ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ರಾಜ್ಯದಲ್ಲಿ ಹಿಂದುಳಿದ ಸಮುದಾಯದ ಜನ 63% ಹಾಗೂ ಸಾಮಾನ್ಯ ವರ್ಗದ ಜನ 15.52% ಇದ್ದಾರೆ. ಅತ್ಯಂತ ಹಿಂದುಳಿದ ಜಾತಿಯ ಜನ 36.01%, ಹಿಂದುಳಿದ ಸಮುದಾಯ, 27.12% ಮತ್ತು ಸಾಮಾನ್ಯ ವರ್ಗ 15.52% ಇದ್ದಾರೆ. ಪರಿಶಿಷ್ಟ ಜಾತಿಯವರು 19.65% ಮತ್ತು ಪರಿಶಿಷ್ಟ ಪಂಗಡದವರು 1.68% ಇದ್ದಾರೆ. OBCಗಳಲ್ಲಿ ಯಾದವರು 14.26% ರಷ್ಟಿದ್ದರೆ, ಕುಶ್ವಾಹಾ ಮತ್ತು ಕುರ್ಮಿಗಳು ಕ್ರಮವಾಗಿ 4.27% ಮತ್ತು 2.87% ಜನಸಂಖ್ಯೆಯನ್ನ ಹೊಂದಿದ್ದಾರೆ. ಭೂಮಿಹಾರ್‌ಗಳು 2.86 ಪ್ರತಿಶತ, ಬ್ರಾಹ್ಮಣರು 3.66 ಪ್ರತಿಶತ, ಮುಸಾಹರ್‌ಗಳು 3 ಪ್ರತಿಶತ ಇದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಕಾಂಗ್ರೆಸ್‌ ಮುಕ್ತ ಅವಕಾಶ ಕೊಟ್ಟಿದೆ; ಉದಯಪುರ ಟೈಲರ್‌ ಹತ್ಯೆ ಖಂಡಿಸಿದ ಮೋದಿ

    ರಾಜ್ಯದಲ್ಲಿ ಒಟ್ಟು 13,07,25,310 ಜನಸಂಖ್ಯೆಯಿದೆ. ಮೀಸಲಾತಿಯಿಂದ ಹೊರಗಿರುವ ಜನಸಂಖ್ಯೆ 15.52% ಎಂದು ಬಿಹಾರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಬಿಹಾರ ಸರ್ಕಾರ ಈ ವರ್ಷದ ಜನವರಿಯಲ್ಲಿ ಜಾತಿ ಸರ್ವೆ ಮಾಡಿಸಿತ್ತು. ಜಾತಿ ಗಣತಿಗಾಗಿ 500 ಕೋಟಿ ರೂ. ಖರ್ಚು ಮಾಡಿತ್ತು. ರಾಜ್ಯದಾದ್ಯಂತ ಸುಮಾರು 2.64 ಲಕ್ಷ ಗಣತಿದಾರರು 2.9 ಕೋಟಿ ನೋಂದಾಯಿತ ಕುಟುಂಬಗಳ ವಿವರಗಳನ್ನು 17 ಸಾಮಾಜಿಕ ಆರ್ಥಿಕ ಮಾನದಂಡಗಳ ಮೇಲೆ ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ಲಾಠಿಚಾರ್ಜ್‌ಗೆ ಬಿಜೆಪಿ ನಾಯಕ ಬಲಿ

    ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ – ಲಾಠಿಚಾರ್ಜ್‌ಗೆ ಬಿಜೆಪಿ ನಾಯಕ ಬಲಿ

    ಪಾಟ್ನಾ: ಶಿಕ್ಷಕರ ನೇಮಕಾತಿ ನಿಯಮಾವಳಿ ವಿರೋಧಿಸಿ ಪಾಟ್ನಾದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಲಾಠಿಚಾರ್ಜ್‌ಗೆ (Lathicharge) ಬಿಜೆಪಿ ನಾಯಕರೊಬ್ಬರು (BJP Leader) ಮೃತಪಟ್ಟಿದ್ದಾರೆ.

    ಬಿಹಾರ ಸರ್ಕಾರದ (Bihar Government) ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ (Protest) ಆಯೋಜಿಸಿತ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೋಗುತ್ತಿದ್ದಾಗ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ.

    ಪೊಲೀಸರ ಲಾಠಿಯಿಂದ ಬಲವಾಗಿ ಏಟು ತಿಂದಿದ್ದ ಜೆಹಾನಾಬಾದ್ ಜಿಲ್ಲೆಯ ಅಧ್ಯಕ್ಷ ವಿಜಯ್‌ ಕುಮಾರ್‌ ಸಿಂಗ್‌ (Vijay Kumar Singh) ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹೋಗಿತ್ತು.

    ಪ್ರತಿಭಟನೆಯನ್ನು ಚದುರಿಸಲು ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಟಿಯರ್‌ ಗ್ಯಾಸ್‌ ಪ್ರಯೋಗಿಸಿದ್ದರು. ಇದನ್ನೂ ಓದಿ: ಎಣ್ಣೆ ಏಟಲ್ಲಿ ಅರ್ಧ ಸುಟ್ಟ ಯುವತಿಯ ಮೃತದೇಹ ತಿಂದ್ರು!

    ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda) ಪ್ರತಿಕ್ರಿಯಿಸಿ, ಪಾಟ್ನಾದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ರಾಜ್ಯ ಸರ್ಕಾರದ ವೈಫಲ್ಯವನ್ನು ತೋರಿಸುತ್ತದೆ. ಮಹಾಘಟಬಂಧನ್ ಸರ್ಕಾರವು ಭ್ರಷ್ಟಾಚಾರದ ಕೋಟೆಯನ್ನು ರಕ್ಷಿಸುವ ಸಲುವಾಗಿ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಿದೆ. ಆರೋಪ ಎದುರಿಸುತ್ತಿರುವ ವ್ಯಕ್ತಿಯನ್ನು ರಕ್ಷಿಸಲು ಬಿಹಾರದ ಮುಖ್ಯಮಂತ್ರಿಗಳು ತಮ್ಮ ನೈತಿಕತೆಯನ್ನು ಮರೆತಿದ್ದಾರೆ ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಎಎಸ್ ಅಧಿಕಾರಿ ಕೊಲೆ ಅಪರಾಧಿ ರಿಲೀಸ್ – ಬಿಹಾರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ಐಎಎಸ್ ಅಧಿಕಾರಿ ಕೊಲೆ ಅಪರಾಧಿ ರಿಲೀಸ್ – ಬಿಹಾರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ನವದೆಹಲಿ: ದರೋಡೆಕೋರ, ರಾಜಕಾರಣಿ ಆನಂದ್ ಮೋಹನ್‍ನನ್ನು ಅವಧಿ ಮುನ್ನವೇ ಜೈಲಿನಿಂದ ಬಿಡುಗಡೆ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ (Supreme Court) ಬಿಹಾರ (Bihar) ಸರ್ಕಾರಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಸರ್ಕಾರ ಎರಡು ವಾರಗಳಲ್ಲಿ ಉತ್ತರಿಸಬೇಕು ಎಂದು ನ್ಯಾಯಾಲಯ ಎಚ್ಚರಿಸಿದೆ.

    ಐಎಎಸ್ (IAS) ಅಧಿಕಾರಿ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಆನಂದ್ ಮೋಹನ್‍ನನ್ನು ಬಿಹಾರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದನ್ನು ಪ್ರಶ್ನಿಸಿ ಕೃಷ್ಣಯ್ಯ ಪತ್ನಿ ಉಮಾ ಕೃಷ್ಣಯ್ಯ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಸುಪ್ರೀಂ ಪ್ರತಿಕ್ರಿಯೆಯಿಂದ ನನಗೆ ಸಂತಸವಾಗಿದೆ. ನ್ಯಾಯ ಸಿಗುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಬಂಧನ ಭೀತಿ – ಸುಪ್ರೀಂ ಮೊರೆ ಹೋದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್

    ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಜೈಲು ಕೈಪಿಡಿಯನ್ನು ಇತ್ತೀಚೆಗೆ ತಿದ್ದುಪಡಿ ಮಾಡಿತ್ತು. ಇದಾದ ನಂತರ 27 ಅಪರಾಧಿಗಳ ಬಿಡುಗಡೆಯಾಗಿತ್ತು. ಏ. 27 ರಂದು ಆನಂದ್ ಮೋಹನ್‍ನನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನು ಸುಪ್ರೀಂ ಗಮನಕ್ಕೆ ತಂದಿದ್ದ ಅರ್ಜಿದಾರರು ಆನಂದ್‍ನನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಕೈಪಿಡಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿದ್ದರು.

    1994ರಲ್ಲಿ ಅಂದಿನ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate) ಜಿ. ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಆನಂದ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈ ಹಿಂದೆ ಪುತ್ರ ಚೇತನ್ ಆನಂದ್ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು 15 ದಿನಗಳ ಪೆರೋಲ್‍ನಲ್ಲಿದ್ದ. ಪೆರೋಲ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಏ.26 ರಂದು ಸಹರ್ಸಾ ಜೈಲಿಗೆ ಮರಳಿದ್ದ. ಆದರೆ ಏ.27 ರಂದು ಬಿಡುಗಡೆಯಾಗಿದ್ದ.

    ಪ್ರಕರಣದ ಹಿನ್ನೆಲೆ ಏನು?
    1994 ರ ಡಿಸೆಂಬರ್ 5 ರಂದು ಮುಜಾಫರ್‍ಪುರ್‍ನಲ್ಲಿ ಕೃಷ್ಣಯ್ಯ ಅವರನ್ನು ಆನಂದ್ ಮೋಹನ್‍ನ ಪ್ರಚೋದನೆಗೆ ಒಳಗಾದ ಗುಂಪು ಥಳಿಸಿ ಕೊಂದಿತ್ತು. 2007 ರಲ್ಲಿ ವಿಚಾರಣಾ ನ್ಯಾಯಾಲಯವು ಆನಂದ್ ಮೋಹನ್‍ಗೆ ಮರಣದಂಡನೆ ವಿಧಿಸಿತ್ತು. ಒಂದು ವರ್ಷದ ನಂತರ ಪಾಟ್ನಾ  ಹೈಕೋರ್ಟ್ (Patna High Court) ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು. ನಂತರ ಮೋಹನ್ ಸುಪ್ರೀಂ ಕೋರ್ಟ್‍ನಲ್ಲಿ ತೀರ್ಪನ್ನು ಪ್ರಶ್ನಿಸಿದ್ದ. ಆದರೆ ಈ ಅರ್ಜಿಯ ಯಾವುದೇ ವಿಚಾರಣೆ ನಡೆಯದೇ 2007 ರಿಂದ ಸಹರ್ಸಾ (Saharsa) ಜೈಲಿನಲ್ಲಿದ್ದ. ಇದನ್ನೂ ಓದಿ: ಸಿಹಿ ಹಂಚಿ ರೇಪ್ – 30 ಮಕ್ಕಳ ಮೇಲೆ ಅತ್ಯಾಚಾರಗೈದವ ಕೊನೆಗೂ ದೋಷಿಯಾದ