Tag: ಬಿಹಾರ ವ್ಯಕ್ತಿ

  • ಕೂಲರ್‌, ಫ್ಯಾನ್‌ ಇಲ್ಲದ ಕೋಣೆಯಲ್ಲಿ ವಾಸ – ಹೀಟ್‌ಸ್ಟ್ರೋಕ್‌ನಿಂದ ವ್ಯಕ್ತಿ ಸಾವು

    ಕೂಲರ್‌, ಫ್ಯಾನ್‌ ಇಲ್ಲದ ಕೋಣೆಯಲ್ಲಿ ವಾಸ – ಹೀಟ್‌ಸ್ಟ್ರೋಕ್‌ನಿಂದ ವ್ಯಕ್ತಿ ಸಾವು

    ನವದೆಹಲಿ: ಬಿಹಾರ ಮೂಲದ (Bihar Man) ವ್ಯಕ್ತಿಯೊಬ್ಬರು ಹೀಟ್‌ಸ್ಟ್ರೋಕ್‌ನಿಂದ ದೆಹಲಿ ಆಸ್ಪತ್ರೆಯಲ್ಲಿ (Delhi Hospital) ಸಾವನ್ನಪ್ಪಿದ್ದಾರೆ. ಶಾಖಾಘಾತದಿಂದ ವ್ಯಕ್ತಿಯನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವ್ಯಕ್ತಿ ಕೂಲರ್ ಅಥವಾ ಫ್ಯಾನ್ ಇಲ್ಲದ ಕೋಣೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ತೀವ್ರ ಜ್ವರವಿತ್ತು ಎಂದು ವೈದ್ಯರು ಹೇಳಿದ್ದರು. ದೇಹದ ಉಷ್ಣತೆಯು 107 ಡಿಗ್ರಿ ಸೆಲ್ಸಿಯಸ್ ಮಾರ್ಕ್ ಅನ್ನು ದಾಟಿತ್ತು. ಅದು ಸಾಮಾನ್ಯಕ್ಕಿಂತ ಸುಮಾರು 10 ಡಿಗ್ರಿ ಹೆಚ್ಚಾಗಿತ್ತು. ಬಿರು ಬೇಸಿಗೆಯಲ್ಲಿ ದೆಹಲಿಯಲ್ಲಿ ವರದಿಯಾದ ಹೀಟ್‌ಸ್ಟ್ರೋಕ್‌ ಸಾವು ಪ್ರಕರಣ ಇದು ಎನ್ನಲಾಗಿದೆ. ಇದನ್ನೂ ಓದಿ: ಎನ್‌ಡಿಎ ಅಧಿಕಾರಕ್ಕೆ ಬಂದ್ರೆ ಜೂನ್‌ 9 ರಂದು ಮೋದಿ ಪ್ರಮಾಣ ವಚನ!

    ಶಾಖದ ಅಲೆ ರಾಷ್ಟ್ರ ರಾಜಧಾನಿಯನ್ನು ಕಂಗೆಡಿಸಿದೆ. ಹೆಚ್ಚಿದ ತಾಪಮಾನ, ನೀರಿನ ಬಿಕ್ಕಟ್ಟಿನಿಂದ ಇಲ್ಲಿನ ಜನ ಸಂಕಷ್ಟಕ್ಕೀಡಾಗಿದ್ದಾರೆ. ನಗರದ ಹೊರವಲಯದಲ್ಲಿರುವ ಮುಂಗೇಶ್‌ಪುರ ಹವಾಮಾನ ಕೇಂದ್ರವು 52.9 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ.

    ದೆಹಲಿ ನಗರದಾದ್ಯಂತ ಸರಾಸರಿ 45-50% ಸೆಲ್ಸಿಯಸ್ ವ್ಯಾಪ್ತಿಯಲ್ಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಎಂ. ಮಹಪಾತ್ರ ಹೇಳಿದ್ದಾರೆ. ರಾಜಧಾನಿಯ ಜನತೆ ಕಳೆದ ವಾರದಿಂದ ತೀವ್ರ ಶಾಖದ ಅಲೆಗೆ ತತ್ತರಿಸುತ್ತಿದ್ದಾರೆ. ತಾಪ ಹೆಚ್ಚಳದ ಜೊತೆಗೆ ದೆಹಲಿಯ ಹಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ – ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಆಪ್ತ ಸಹಾಯಕ ಬಂಧನ

    ದಿನನಿತ್ಯ ಟ್ಯಾಂಕರ್ ಬರುತ್ತಿದೆ. ಆದರೆ 3,000 ರಿಂದ 4000 ಜನರಿರುವ ನಮಗೆ ಅರ್ಧ ಟ್ಯಾಂಕರ್ ನೀರಷ್ಟೇ ಸಿಗುತ್ತಿದೆ. ಬಿಸಿಯೂಟ, ನೀರು ಬೇಕು. ಆದರೆ ನಮಗೆ ಸಾಕಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ವಿನಯ್ ಅಳಲು ತೋಡಿಕೊಂಡಿದ್ದಾರೆ.

  • ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ಬಿಹಾರ ವರನ ಕೈ ಹಿಡಿದ ಜರ್ಮನಿ ಮಹಿಳೆ

    ಪಾಟ್ನಾ: ಪ್ರೀತಿಗೆ ಜಾತಿ, ಧರ್ಮ, ಭಾಷೆ ಇಲ್ಲ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿದೆ. ಪ್ರೀತಿ ಎಂತಹವರ ಹೃದಯವನ್ನು ಸಹ ಕರಗಿಸುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಜರ್ಮನಿಯ ಮಹಿಳೆಯೊಬ್ಬಳು ಬಿಹಾರದ ನವಾಡದ ವ್ಯಕ್ತಿಯೊಂದಿಗೆ ಭಾರತೀಯ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದಾರೆ. ಇದೀಗ ಈ ದಂಪತಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಲಾರಿಸ್ಸಾ ಬೆಲ್ಚ್ ಅವರು ಜರ್ಮನಿಯಲ್ಲಿ ಹುಟ್ಟಿ ಬೆಳೆದರು. ಇದೀಗ ಬಿಹಾರದ ನವಾಡದ ಸತ್ಯೇಂದ್ರ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಇಬ್ಬರು ಸ್ವೀಡನ್‍ನಲ್ಲಿ ಸಂಶೋಧನಾ ವಿದ್ಯಾರ್ಥಿಗಳಾಗಿದ್ದು, ಸತ್ಯೇಂದ್ರ ಅವರು ಚರ್ಮದ ಕ್ಯಾನ್ಸರ್ ಸಂಶೋಧನೆ ನಡೆಸುತ್ತಿದ್ದರೆ, ಲಾರಿಸ್ಸಾ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಇದನ್ನೂ ಓದಿ: ರೇಣುಕಾಚಾರ್ಯ, ಪ್ರತಾಪಸಿಂಹ ವಿರುದ್ಧದ 4 ಕೇಸ್‌ ವಾಪಸ್‌ ಪಡೆದ ಸರ್ಕಾರ- ಹೈಕೋರ್ಟ್‌ ಗರಂ

    2019 ಇಬ್ಬರಿಗೂ ಪರಿಚಯವಾಗಿ ನಂತರ ಸ್ನೇಹದಿಂದ ಪರಸ್ಪರ ಪ್ರೀತಿಸಲು ಆರಂಭಿಸಿದರು. ಮೂರು ವರ್ಷಗಳ ಬಳಿಕ ಇದೀಗ ಸಪ್ತಪದಿ ತುಳಿದಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಫೋಟೋದಲ್ಲಿ ಲಾರಿಸ್ಸಾ ಕೆಂಪು ಬಣ್ಣದ ಲೆಹೆಂಗಾ ತೊಟ್ಟು, ಚಿನ್ನಾಭರಣ ಧರಿಸಿ ದೇಸಿ ಲುಕ್‍ನಲ್ಲಿ ಮಿಂಚುತ್ತಿದ್ದರೆ, ಸತ್ಯೇಂದ್ರ ಅವರು ಗೋಲ್ಡನ್ ಕಲರ್ ಶೇರ್ವಾನಿ ಧರಿಸಿರುವುದನ್ನನು ಕಾಣಬಹುದಾಗಿದೆ.

    ಭಾರತದ ಬಗ್ಗೆ ಮಾತನಾಡಿರುವ ಲಾರಿಸ್ಸಾ, ಇಬ್ಬರೂ ಭಾರತೀಯ ಸಂಪ್ರದಾಯದಂತೆ ಮದುವೆಯಾಗಲು ಬಯಸಿದೇವು. ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಬಹಳ ಉತ್ಸುಕಳಾಗಿದ್ದೇನೆ. ನಾನು ಭಾರತದಲ್ಲಿಯೇ ನನ್ನ ಜೀವನವನ್ನು ಆನಂದದಿಂದ ಕಳೆಯಲು ಬಂದಿದ್ದೇನೆ. ಇಲ್ಲಿನ ಜನರು ತುಂಬಾ ಒಳ್ಳೆಯವರು, ನಮ್ಮ ಸಂಸ್ಕೃತಿಗೂ, ಭಾರತೀಯ ಸಂಸ್ಕೃತಿಗೂ ವ್ಯತ್ಯಾಸವಿದೆ. ನನಗೆ ಹಿಂದಿ ಹೆಚ್ಚು ಅರ್ಥವಾಗುವುದಿಲ್ಲ. ಆದರೆ ಸತ್ಯೇಂದ್ರ ಅವರು ಅನುವಾದಿಸಲು ಸಹಾಯ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ನೀರು ಕುಡಿಯೋಕೆ ಹೊರಟ ಅಶೋಕ್ ಕಾಲೆಳೆದ ಸಿದ್ದರಾಮಯ್ಯ, ಯಡಿಯೂರಪ್ಪ..!


    German woman, Bihar man, marriage, Hindu tradition