Tag: ಬಿಹಾರ ವಿಧಾನಸಭಾ ಚುನಾವಣೆ

  • ಬಿಹಾರ ಚುನಾವಣೆ ಎನ್‌ಡಿಎ & ಲಠ್‌ಬಂಧನ್ ನಡುವಿನ ಹೋರಾಟ: ಆರ್‌ಜೆಡಿ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

    ಬಿಹಾರ ಚುನಾವಣೆ ಎನ್‌ಡಿಎ & ಲಠ್‌ಬಂಧನ್ ನಡುವಿನ ಹೋರಾಟ: ಆರ್‌ಜೆಡಿ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

    ಪಾಟ್ನಾ: ಜಂಗಲ್ ರಾಜ್‌ನ ನಾಯಕರು ತಮ್ಮ ಕುಟುಂಬಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಅವರು ಬಿಹಾರದ ಯುವಕರ ಜೀವನವನ್ನು ನಾಶಮಾಡುತ್ತಾರೆ. ಆದರೆ, ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ರಾಜ್ಯವನ್ನು ಸಮೃದ್ಧಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದ್ದಾರೆ.

    ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಇಂದು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಸಮಷ್ಟಿಪುರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಲಾಲು ಪ್ರಸಾದ್ ಯಾದವ್ ಅವರ ಕುಟುಂಬವು ಹಲವು ವರ್ಷಗಳಿಂದ ಬಿಹಾರವನ್ನು ಲೂಟಿ ಮಾಡಿದೆ. ಆದರೆ ಜಾಮೀನಿನ ಮೇಲೆ ಹೊರಗಿದ್ದಾರೆ. ರಾಜ್ಯದಲ್ಲಿ ತಮ್ಮ ‘ಮತದಾರ ಅಧಿಕಾರ ಯಾತ್ರೆ’ಯನ್ನು ಮಾಡುವ ಮೂಲಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಜನ ನಾಯಕ ಆಗಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರತಿ ಮನೆಗೆ ಸರ್ಕಾರಿ ಉದ್ಯೋಗ, 125 ಯೂನಿಟ್‌ ಉಚಿತ ವಿದ್ಯುತ್: ಬಿಹಾರಿಗಳಿಗೆ ಭರಪೂರ ಕೊಡುಗೆ

    ಬಿಹಾರದಲ್ಲಿ ಅಭಿವೃದ್ಧಿಯನ್ನು ತಡೆಯಲು ಆರ್‌ಜೆಡಿ ಮತ್ತು ಕಾಂಗ್ರೆಸ್ ಯಾವುದೇ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. 2004 ರಿಂದ 2014 ರವರೆಗೆ ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರಕ್ಕೆ ಸಹಾಯ ಮಾಡದಂತೆ ಕೇಳುವ ಮೂಲಕ ಆರ್‌ಜೆಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬೆದರಿಕೆ ಹಾಕುತ್ತಿತ್ತು ಎಂದು ಆರೋಪಿಸಿದರು.

    ಈ ಜನರು ಸಾವಿರಾರು ಕೋಟಿ ರೂಪಾಯಿಗಳ ಹಗರಣಗಳಲ್ಲಿ ಭಾಗಿಯಾದವರು. ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಈಗ ಅವರ ಕಳ್ಳತನದ ಅಭ್ಯಾಸ ಎಷ್ಟಿದೆಯೆಂದರೆ ಅವರು ಕರ್ಪೂರಿ ಠಾಕೂರ್ ಎಂಬ ಬಿರುದನ್ನು ಕದಿಯುವಲ್ಲಿ ನಿರತರಾಗಿದ್ದಾರೆ. ಕರ್ಪೂರಿ ಠಾಕೂರ್‌ಗೆ ಈ ಅವಮಾನವನ್ನು ಬಿಹಾರದ ಜನರು ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

    ಜನತಾದಳ ಯುನೈಟೆಡ್ ನಾಯಕ ನಿತೀಶ್ ಕುಮಾರ್ ಅವರನ್ನು ಶ್ಲಾಘಿಸಿದ ಪ್ರಧಾನಿ, ಎನ್‌ಡಿಎ ರಾಜ್ಯದಲ್ಲಿ ತನ್ನ ಹಿಂದಿನ ಎಲ್ಲಾ ಗೆಲುವಿನ ದಾಖಲೆಗಳನ್ನು ಮುರಿಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಹಾರ ಎನ್‌ಡಿಎಗೆ ಇದುವರೆಗಿನ ಅತಿದೊಡ್ಡ ಜನಾದೇಶವನ್ನು ನೀಡಲಿದೆ. ಅವರು ಮುಖ್ಯಮಂತ್ರಿಯಾಗಿರಲಿದ್ದಾರೆ ಎನ್ನುವ ಮೂಲಕ ನಿತೀಶ್ ಕುಮಾರ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದರು. ಇದನ್ನೂ ಓದಿ: Bihar Election| ಸಿಎಂ ಅಭ್ಯರ್ಥಿಯಾಗಿ ತೇಜಸ್ವಿ ಯಾದವ್ ಘೋಷಣೆ

    ರಾಜ್ಯದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದ ನಂತರ ಬೆಳವಣಿಗೆಯ ದರವು ಹೊಸ ಮಟ್ಟಕ್ಕೆ ಏರಲಿದೆ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮಂಚ್ (ಆರ್‌ಎಲ್‌ಎಂ) ಸೇರಿದಂತೆ ಆಡಳಿತಾರೂಢ ಮೈತ್ರಿಕೂಟಕ್ಕೆ ಮತ ಹಾಕುವಂತೆ ಜನರಿಗೆ ಮನವಿ ಮಾಡಿದರು. ಬಿಹಾರವು ‘ಜಂಗಲ್ ರಾಜ್’ ಅನ್ನು ದೂರವಿಟ್ಟು ಉತ್ತಮ ಆಡಳಿತಕ್ಕಾಗಿ ಮತ ಚಲಾಯಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಕಡೆಯಲ್ಲಿ ಮಾತನಾಡಿದ ಅವರು, ಜನರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ದೀಪಗಳನ್ನು ಆನ್ ಮಾಡಲು ಕೇಳಿಕೊಂಡರು ಬಳಿಕ ಇಷ್ಟು ಬೆಳಕು ಇರುವಾಗ ನಮಗೆ ಲಾಟಿನ್ ಬೇಕೇ? ಬಿಹಾರಕ್ಕೆ ಲಾಟಿನ್ ಮತ್ತು ಅದರ ಸ್ನೇಹಿತರು ಬೇಡ ಎಂದ ಪ್ರಧಾನಿ ಮೋದಿ ಆರ್‌ಜೆಡಿ ಗುರುತು ಉಲ್ಲೇಖಿಸಿ ತಿರುಗೇಟು ನೀಡಿದರು. ಈ ಬಾರಿಯ ಚುನಾವಣೆ ಎನ್‌ಡಿಎ ಮತ್ತು ಲಠ್‌ಬಂಧನ್ ನಡುವಿನ ಹೋರಾಟ ಎಂದು ಬಣ್ಣಿಸಿದರು. ಬಳಿಕ ಅವರು ಬೇಗುಸರಾಯ್‌ಯಲ್ಲೂ ಭಾಷಣ ಮಾಡಿದರು.

  • ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ – ಸ್ಪೀಕರ್‌ಗೆ ಕೊಟ್ಟಿಲ್ಲ ಟಿಕೆಟ್

    ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ – ಸ್ಪೀಕರ್‌ಗೆ ಕೊಟ್ಟಿಲ್ಲ ಟಿಕೆಟ್

    ಪಾಟ್ನಾ: ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಸೀಟು ಹಂಚಿಕೆ ಒಪ್ಪಂದದಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಈ ನಡುವೆಯೇ, ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಂಗಳವಾರ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಪಟ್ಟಿಯಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಇಬ್ಬರೂ ಇದ್ದಾರೆ. ಆದರೆ, ಪಕ್ಷವು ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಅವರನ್ನು ಪಾಟ್ನಾ ಸಾಹಿಬ್ ಸ್ಥಾನದಿಂದ ಕೈಬಿಟ್ಟಿದೆ. ಅವರು 2010 ರಿಂದ ಪ್ರತಿನಿಧಿಸುತ್ತಿದ್ದಾರೆ.

    ಚೌಧರಿ ತಾರಾಪುರದಿಂದ ಸ್ಪರ್ಧಿಸಿದರೆ, ಸಿನ್ಹಾ ಲಖಿಸರಾಯ್‌ನಿಂದ ಸ್ಪರ್ಧಿಸಲಿದ್ದಾರೆ. ದಾನಪುರದಿಂದ ಸ್ಪರ್ಧಿಸಲಿರುವ ಪಕ್ಷದ ಹಿರಿಯ ನಾಯಕ ರಾಮ್ ಕೃಪಾಲ್ ಯಾದವ್, ಗಯಾದಿಂದ ಪ್ರೇಮ್ ಕುಮಾರ್, ಕತಿಹಾರ್‌ನಿಂದ ಮಾಜಿ ಉಪಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್, ಸಹರ್ಸಾದಿಂದ ಅಲೋಕ್ ರಂಜನ್ ಝಾ ಮತ್ತು ಸಿವಾನ್‌ನಿಂದ ಮಂಗಲ್ ಪಾಂಡೆ ಸೇರಿದಂತೆ ಇತರ ಕೆಲವು ಪ್ರಮುಖ ಹೆಸರುಗಳು ಸೇರಿವೆ.

    ಏತನ್ಮಧ್ಯೆ, ಪಕ್ಷವು ಹಿಸುವಾ ಸ್ಥಾನವನ್ನು ಉಳಿಸಿಕೊಂಡಿದೆ. ಅನಿಲ್ ಕುಮಾರ್ ಅವರನ್ನು ತನ್ನ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಮಹತ್ವದ ಬದಲಾವಣೆಯೊಂದರಲ್ಲಿ, ಬಿಹಾರ ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಅವರನ್ನು ಕೈಬಿಡಲಾಗಿದೆ. ರತ್ನೇಶ್ ಕುಶ್ವಾಹ ಅವರನ್ನು ಪಾಟ್ನಾ ಸಾಹಿಬ್‌ನಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

    ಬಿಜೆಪಿ ಪಟ್ಟಿಯನ್ನು ಪ್ರಕಟಿಸುವ ಕೆಲವೇ ಗಂಟೆಗಳ ಮೊದಲು, ಚೌಧರಿ ಸಾಮಾಜಿಕ ಮಾಧ್ಯಮದಲ್ಲಿ ಎನ್‌ಡಿಎ ಪಕ್ಷಗಳ ನಡುವಿನ ಸೀಟು ಹಂಚಿಕೆ ಬಿಕ್ಕಟ್ಟನ್ನು ‘ಸೌಹಾರ್ದಯುತ ಚರ್ಚೆಯ ಮೂಲಕ ಪರಿಹರಿಸಲಾಗಿದೆ’ ಎಂದು ಘೋಷಿಸಿದ್ದಾರೆ. ಆಡಳಿತಾರೂಢ ಮೈತ್ರಿಕೂಟವು ತನ್ನ ಸೀಟು ಹಂಚಿಕೆ ಸೂತ್ರವನ್ನು ಘೋಷಿಸಿತ್ತು. ಅದರಡಿಯಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

    243 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ ಚುನಾವಣೆಗೆ ನಡೆಯುವ 121 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನಾಂಕವಾಗಿದ್ದರೆ, ಎರಡನೇ ಹಂತದಲ್ಲಿ 122 ಸ್ಥಾನಗಳಿಗೆ ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ.

  • ಬಿಹಾರ ವಿಧಾನಸಭೆ ಚುನಾವಣೆ; ಎನ್‌ಡಿಎ-ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಲೆಕ್ಕಾಚಾರ

    ಬಿಹಾರ ವಿಧಾನಸಭೆ ಚುನಾವಣೆ; ಎನ್‌ಡಿಎ-ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಲೆಕ್ಕಾಚಾರ

    ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ (Bihar Elections) ಮುಹೂರ್ತ ಫಿಕ್ಸ್ ಆಗಿದೆ. ಈ ಬೆನ್ನಲ್ಲೇ ಎನ್‌ಡಿಎ (NDA) ಮತ್ತು ಇಂಡಿಯಾ ಒಕ್ಕೂಟದಲ್ಲಿ (INDIA Bloc) ಸೀಟು ಹಂಚಿಕೆ ಲೆಕ್ಕಚಾರ ಶುರುವಾಗಿದೆ. ಎಲ್ಲ ಪಕ್ಷಗಳು ಹೆಚ್ಚು ಸ್ಥಾನಗಳನ್ನು ಗಿಟ್ಟಿಸಿಕೊಳ್ಳಲು ತೆರೆಮರೆಯಲ್ಲಿ ಕಸರತ್ತು ಆರಂಭಿಸಿವೆ.

    ಮೂಲಗಳ ಪ್ರಕಾರ ಎನ್‌ಡಿಎಯಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ‌. 243 ಕ್ಷೇತ್ರಗಳ ಪೈಕಿ, 205 ಸ್ಥಾನಗಳು ಜೆಡಿಯು ಮತ್ತು ಬಿಜೆಪಿ ನಡುವೆ ಹಂಚಿಕೆಯಾಗಿದೆ. ಕೆಲವು ಸನ್ನಿವೇಶಗಳಲ್ಲಿ ಒಂದು ಪಕ್ಷವು ಇನ್ನೊಂದಕ್ಕಿಂತ ಸ್ವಲ್ಪ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಬಹುದು ಎನ್ನಲಾಗಿದೆ. ಇದನ್ನೂ ಓದಿ: Bihar Election Dates 2025 | ಬೂತ್ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಲು ಸಹಾಯವಾಣಿ

    ಉಳಿದ 38 ಸ್ಥಾನಗಳನ್ನು ಎನ್‌ಡಿಎಯ ಸಣ್ಣ ಮಿತ್ರಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ), ಹಿಂದೂಸ್ತಾನಿ ಅವಾಮ್ ಮೋರ್ಚಾ (ಹೆಚ್‌ಎಎಂ) ಮತ್ತು ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಂ) ನಡುವೆ ಹಂಚುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಬಿಜೆಪಿ ಎಲ್‌ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್‌ಗೆ 25 ಸ್ಥಾನಗಳು, ಹೆಚ್‌ಎಎಂ ನಾಯಕ ಜಿತನ್ ರಾಮ್ ಮಾಂಝಿಗೆ ಏಳು ಸ್ಥಾನಗಳು ಮತ್ತು ಉಪೇಂದ್ರ ಕುಶ್ವಾಹ ಅವರ ಆರ್‌ಎಲ್‌ಎಂಗೆ ಆರು ಸ್ಥಾನಗಳನ್ನು ಪಡೆಯಬಹುದು.

    ಚಿರಾಗ್ ಪಾಸ್ವಾನ್ ಅವರೊಂದಿಗೆ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದ್ದು, ಎಲ್‌ಜೆಪಿ ನಾಯಕ ತಮ್ಮ ಪಕ್ಷದ ನಾಯಕರಿಗೆ ಆದ್ಯತೆಯ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ. ಪಾಸ್ವಾನ್ ಅವರ ಸ್ಥಾನಗಳ ಪಾಲು ಹೆಚ್ಚಾದರೆ, ಅದು ಮಾಂಝಿ ಮತ್ತು ಕುಶ್ವಾಹ ಅವರಿಗೆ ಹಂಚಿಕೆಯಲ್ಲಿ ಕಡಿತಕ್ಕೆ ಕಾರಣವಾಗಬಹುದು. ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ – ನ.6, 11ರಂದು ಮತದಾನ, ನ.14ಕ್ಕೆ ಫಲಿತಾಂಶ

    ಇಂಡಿಯಾ ಒಕ್ಕೂಟದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆರ್‌ಜೆಡಿಗೆ 125, ಕಾಂಗ್ರೆಸ್‌ಗೆ 55 ರಿಂದ 57 ಸ್ಥಾನಗಳಲ್ಲಿ ಸ್ಪರ್ಧೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಎಡ ಪಕ್ಷಗಳು 35, ಮುಖೇಶ್ ಸಾಹ್ನಿ ಅವರ ವಿಐಪಿ ಪಕ್ಷಕ್ಕೆ 20 ಸ್ಥಾನಗಳಲ್ಲಿ, ಪಶುಪತಿ ಪರಾಸ್‌ಗೆ ಮೂರು ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ಗೆ ಎರಡು ಸ್ಥಾನಗಳಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ. ಈಗಾಗಲೇ ನಾಯಕರ ನಡುವೆ ಮಾತುಕತೆ ನಡೆದಿದ್ದು, ಬಹುತೇಕ ನಾಯಕರ ಸಮ್ಮತಿ ಸಿಕ್ಕಿದ್ದರೂ, ಕಾಂಗ್ರೆಸ್ ಸೀಟುಗಳ‌ ಸಂಖ್ಯೆ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ. ನಾಳೆ ಕಾಂಗ್ರೆಸ್ ಮೊದಲ ಸಿಇಸಿ ಸಭೆ ನಡೆಸುತ್ತಿದ್ದು, ಸುಮಾರು 30 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ.

    ಬಿಹಾರ ವಿಧಾನಸಭೆಗೆ ಸೋಮವಾರ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 6 ರಂದು ಮೊದಲ‌ ಹಂತ, ನವೆಂಬರ್ 11 ರಂದು ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ನವೆಂಬರ್ 14 ರಂದು ಮತ ಎಣಿಕೆಯಾಗಲಿದೆ. ಇದನ್ನೂ ಓದಿ: Bihar Election Dates 2025 | 69 ಲಕ್ಷ ಹೆಸರುಗಳು ಡಿಲೀಟ್‌, 21 ಲಕ್ಷ ಹೊಸ ಮತದಾರರ ಸೇರ್ಪಡೆ

  • ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

    ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

    ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ (Bihar Assembly Election) ಸಿದ್ಧತೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ (Election Commission of India) ಇಂದು ಪರಿಶೀಲನಾ ಸಭೆ ನಡೆಸಿತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ನೇತೃತ್ವದಲ್ಲಿ ಪಾಟ್ನಾಗೆ ತೆರಳಿರುವ ನಿಯೋಗ ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನಹರಿಸಿದೆ.

    ಪಾಟ್ನಾದ (Patna) ತಾಜ್ ಹೋಟೆಲ್‌ನಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅಧ್ಯಕ್ಷತೆ ಹಾಗೂ ಚುನಾವಣಾ ಆಯುಕ್ತ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಉಪಸ್ಥಿತಿಯಲ್ಲಿ ಮಹತ್ವದ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಹಿರಿಯ ಇಸಿಐ ಅಧಿಕಾರಿಗಳು, ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ವಿನೋದ್ ಗುಂಜ್ಯಾಲ್ ಹಾಗೂ ರಾಜ್ಯದ ಎಲ್ಲಾ 12 ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

    ಬಿಹಾರ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವಂತೆ ಜೆಡಿಯು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಥವಾ ನಕ್ಸಲ್ ಸಮಸ್ಯೆಗಳಿಲ್ಲ ಹೀಗಾಗಿ ಒಂದೇ ಹಂತದಲ್ಲಿ ಮತದಾನ ನಡೆಯಬೇಕು. ಛತ್ ಪೂಜಾ ಸಮಯದಲ್ಲಿ ಅನೇಕ ಜನರು ಮನೆಗೆ ಮರಳುತ್ತಾರೆ. ಆದ್ದರಿಂದ ಆ ಸಮಯದಲ್ಲಿ ಚುನಾವಣೆಯನ್ನು ನಡೆಸಬೇಕು ಎಂದು ಮನವಿ ಮಾಡಿದೆ.

    ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಎಲ್ಲಾ ಪಕ್ಷಗಳು ಪಾರದರ್ಶಕ ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯೋಗ ಆಯುಕ್ತರು ಸಭೆಯಲ್ಲಿ ಹೇಳಿದರು. ಚುನಾವಣೆಯನ್ನು ಸಾಮರಸ್ಯದಿಂದ ನಡೆಸುವ ಜೊತೆಗೆ ಮತದಾರರನ್ನೂ ಗೌರವಿಸಬೇಕು ಎಂದು ಆಯೋಗ ತಿಳಿಸಿದೆ.

    ಚುನಾವಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಪ್ರತಿ ಮತಗಟ್ಟೆಯಲ್ಲಿ ಏಜೆಂಟ್‌ಗಳನ್ನು ನೇಮಿಸುವಂತೆ ಪಕ್ಷಗಳಿಗೆ ಸೂಚಿಸಲಾಯಿತು. ಇದೀಗ ಚುನಾವಣಾ ಆಯೋಗವು ಅಕ್ಟೋಬರ್ 6 ಅಥವಾ 7 ರಂದು ಚುನಾವಣಾ ದಿನಾಂಕಗಳನ್ನು ಘೋಷಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

  • ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

    ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭ

    – ಎನ್‌ಡಿಎ, ಇಂಡಿಯಾ ಒಕ್ಕೂಟಗಳ ನಡುವೆ ವಾಕ್ಸಮರ, ಜಟಾಪಟಿಗೆ ವೇದಿಕೆ ಸಜ್ಜು

    ನವದೆಹಲಿ: ನಾಳೆಯಿಂದ ಸಂಸತ್‌ನ ಮುಂಗಾರು ಅಧಿವೇಶನ (Parliament Mansoon Session) ಆರಂಭವಾಗಲಿದೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಸಮರಕ್ಕೆ ಅಖಾಡ ಸಜ್ಜಾಗಿದೆ. ಬಿಹಾರ ವಿಧಾನಸಭಾ ಚುನಾವಣೆ ಸಮೀಪದಲ್ಲಿಯೇ ನಡೆಯಲಿರುವ ಈ ಸಂಸತ್ ಅಧಿವೇಶನ ರಾಜಕೀಯ ಸಭೆಗೆ ವೇದಿಕೆಯಾಗಲಿದೆ.

    ಬಿಹಾರ ವಿಧಾನಸಭಾ ಚುನಾವಣೆ ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಅಧಿವೇಶನವು ರಾಜಕೀಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಇಂಡಿಯಾ ಒಕ್ಕೂಟದ ವಿರೋಧ ಪಕ್ಷಗಳಾದ ಕಾಂಗ್ರೆಸ್, ಆರ್‌ಜೆಡಿ, ಮತ್ತು ಟಿಎಂಸಿ, ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ, ಆಪರೇಷನ್ ಸಿಂಧೂರ, ಅಹಮದಾಬಾದ್‌ನ ಏರ್ ಇಂಡಿಯಾ ವಿಮಾನ ದುರಂತ, ಮತ್ತು ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಧ್ಯಸ್ಥಿಕೆಯ ಬಗ್ಗೆ ಆಡಳಿತ ಪಕ್ಷವನ್ನು ತೀವ್ರವಾಗಿ ಪ್ರಶ್ನಿಸಲು ಸಿದ್ಧವಾಗಿವೆ. ಇದರ ಜೊತೆಗೆ, ಪಹಲ್ಗಾಮ್‌ನ ಭಯೋತ್ಪಾದಕ ದಾಳಿ ಮತ್ತು ವಿದೇಶಾಂಗ ನೀತಿಯಂತಹ ವಿಷಯಗಳನ್ನು ಎತ್ತಿಹಿಡಿಯಲು ವಿರೋಧ ಪಕ್ಷಗಳು ತಯಾರಿ ನಡೆಸಿವೆ. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಮೂವರು ವಿದ್ಯಾರ್ಥಿಗಳು ನೀರುಪಾಲು

    ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಈ ಆರೋಪಗಳಿಗೆ ತಿರುಗೇಟು ನೀಡಲು ಸಿದ್ಧವಾಗಿದ್ದು, ತನ್ನ ಸಾಧನೆಗಳನ್ನು ಮಂಡಿಸಿ ವಿರೋಧ ಪಕ್ಷಗಳ ವಿಮರ್ಶೆಗೆ ಉತ್ತರ ನೀಡಲು ಕಾರ್ಯತಂತ್ರ ರೂಪಿಸಿದೆ. ಈ ನಡುವೆ ಕೇಂದ್ರ ಸರ್ಕಾರ ಎಂಟು ಮಸೂದೆಗಳನ್ನು ಮಂಡಿಸುವ ಲೆಕ್ಕಚಾರದಲ್ಲಿದೆ. ಆದಾಯ ತೆರಿಗೆ ಮಸೂದೆ 2025 ಕೂಡ ಲೋಕಸಭೆಯಲ್ಲಿ ಮಂಡನೆಯಾಗಲಿದ್ದು, ಇದನ್ನು ಫೆಬ್ರವರಿಯಲ್ಲಿ ಲೋಕಸಭೆಯ ಆಯ್ದ ಸಮಿತಿಗೆ ಕಳುಹಿಸಲಾಗಿತ್ತು. ಈ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಂಗಾರು ಅಧಿವೇಶನದಲ್ಲಿ ಆಪರೇಷನ್‌ ಸಿಂಧೂರ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧ: ಕಿರಣ್‌ ರಿಜಿಜು

    ಮಣಿಪುರದಲ್ಲಿ ಫೆಬ್ರವರಿ 13ರಂದು ಜಾರಿಗೊಂಡ ರಾಷ್ಟ್ರಪತಿ ಆಳ್ವಿಕೆಯ ವಿಸ್ತರಣೆಗೆ ಸಂಸತ್‌ನ ಅನುಮೋದನೆಯನ್ನು ಸರ್ಕಾರ ಕೋರಲಿದೆ. ಈ ವಿಷಯವು ವಿರೋಧ ಪಕ್ಷಗಳಿಂದ ತೀವ್ರ ಚರ್ಚೆಗೆ ಕಾರಣವಾಗಲಿದೆ. ಸಂಸತ್‌ನ ಈ ಮುಂಗಾರು ಅಧಿವೇಶನವು ಒಟ್ಟು 21 ಕಲಾಪಗಳನ್ನು ಒಳಗೊಂಡಿದ್ದು, ಆಗಸ್ಟ್ 12ರಿಂದ 18ರವರೆಗೆ ರಕ್ಷಾಬಂಧನ ಮತ್ತು ಸ್ವಾತಂತ್ರ‍್ಯ ದಿನಾಚರಣೆಗಾಗಿ ವಿರಾಮ ಘೋಷಿಸಲಾಗಿದೆ. ಈ ಅವಧಿಯಲ್ಲಿ, ಗೋವಾದ ಶಾಸಕಾಂಗ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳ ಪ್ರಾತಿನಿಧ್ಯದ ಮರುಹೊಂದಾಣಿಕೆ ಮಸೂದೆ 2024, ವಾಣಿಜ್ಯ ನೌಕಾಯಾನ ಮಸೂದೆ 2024, ಮತ್ತು ಭಾರತೀಯ ಬಂದರು ಮಸೂದೆ 2025 ಕೂಡ ಲೋಕಸಭೆಯಲ್ಲಿ ಅನುಮೋದನೆಗೆ ಕಾಯುತ್ತಿವೆ. ಇದನ್ನೂ ಓದಿ: ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್‌ ನೋಟಿಸ್‌ ವಿಚಾರಕ್ಕೆ ಸಿಎಂ ರಿಯಾಕ್ಷನ್‌

    ಪ್ರಮುಖ ಮಸೂದೆಗಳು:
    *ಮಣಿಪುರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ, 2025: ರಾಜ್ಯದ ಜಿಎಸ್‌ಟಿ ಕಾನೂನನ್ನು ಕೇಂದ್ರ ಕಾನೂನಿಗೆ ಸಮನ್ವಯಗೊಳಿಸುವ ಗುರಿ.
    *ಜನ ವಿಶ್ವಾಸ (ನಿಬಂಧನೆಗಳ ತಿದ್ದುಪಡಿ) ಮಸೂದೆ, 2025: ವ್ಯಾಪಾರ ಸುಗಮಗೊಳಿಸುವಿಕೆ ಮತ್ತು ನಿಯಂತ್ರಣ ಅನುಸರಣೆಯನ್ನು ಸುಧಾರಿಸುವ ಉದ್ದೇಶ.
    *ಭಾರತೀಯ ನಿರ್ವಹಣಾ ಸಂಸ್ಥೆ (ತಿದ್ದುಪಡಿ) ಮಸೂದೆ, 2025: ಐಐಎಂ ಗುವಾಹಟಿಯನ್ನು ಐಐಎಂ ಕಾಯ್ದೆಯ ಅಡಿಯಲ್ಲಿ ಔಪಚಾರಿಕವಾಗಿ ಒಳಗೊಳ್ಳುವ ಗುರಿ.
    *ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2025: ತೆರಿಗೆ ಕಾನೂನುಗಳ ಸರಳೀಕರಣಕ್ಕೆ ಒತ್ತು.
    *ಭೂ ಪರಂಪರೆ ತಾಣಗಳು ಮತ್ತು ಭೂಅವಶೇಷಗಳ (ಸಂರಕ್ಷಣೆ ಮತ್ತು ನಿರ್ವಹಣೆ) ಮಸೂದೆ; ಭೂವೈಜ್ಞಾನಿಕ ತಾಣಗಳ ಸಂರಕ್ಷಣೆ.
    *ಕಲ್ಲುಗಣಿ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ: ಗಣಿಗಾರಿಕೆ ಕ್ಷೇತ್ರದಲ್ಲಿ ಸುಧಾರಣೆ.
    *ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ: ಕ್ರೀಡಾ ಆಡಳಿತದಲ್ಲಿ ಸುಧಾರಣೆಗೆ ಒತ್ತು.
    *ರಾಷ್ಟ್ರೀಯ ಡೋಪಿಂಗ್ ವಿರೋಧಿ (ತಿದ್ದುಪಡಿ) ಮಸೂದೆ: ಕ್ರೀಡೆಯಲ್ಲಿ ಡೋಪಿಂಗ್ ನಿಯಂತ್ರಣಕ್ಕೆ ಕ್ರಮ

  • ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ – ದೂರು ದಾಖಲು

    ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ – ದೂರು ದಾಖಲು

    ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೂ ( Bihar Assembly Elections) ಮುನ್ನ ಕೇಂದ್ರ ಸಚಿವ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ (Chirag Paswan) ಅವರಿಗೆ  ಜೀವ ಬೆದರಿಕೆ (Death Threat) ಹಾಕಲಾಗಿದೆ ಎಂದು ಪಕ್ಷದ ವಕ್ತಾರ ರಾಜೇಶ್ ಭಟ್ ತಿಳಿಸಿದ್ದಾರೆ.

    ಜೀವ ಬೆದರಿಕೆ ಹಿನ್ನೆಲೆ ರಾಜೇಶ್ ಭಟ್ ಪಾಟ್ನಾದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಟೈಗರ್ ಮೆರಾಜ್ ಇಡಿಸಿ’ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮಹಿಳೆಯರು ಸ್ನಾನ ಮಾಡೋದನ್ನ ಕದ್ದು ಮುಚ್ಚಿ ವಿಡಿಯೋ ಮಾಡ್ತಿದ್ದ ವಿಕೃತ ಕಾಮಿ ಅರೆಸ್ಟ್‌

    ಪಾಸ್ವಾನ್ ಅವರ ಜನಪ್ರಿಯತೆ ಹೆಚ್ಚುತ್ತಿರುವ ಕಾರಣ ಈ ಬೆದರಿಕೆ ಹಾಕಲಾಗಿದೆ. ಈ ಕೃತ್ಯ ಕ್ರಿಮಿನಲ್ ಉದ್ದೇಶ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ವಿಷಯದ ಗಂಭೀರತೆಯನ್ನು ತಕ್ಷಣವೇ ಅರಿತುಕೊಂಡು ತ್ವರಿತ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಿ ಎಂದು ರಾಜೇಶ್ ಭಟ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Davanagere | ಗೋಲ್ಡ್ ಲೋನ್ ರಿನಿವಲ್ ಮಾಡಲು ಬಂದಿದ್ದ ಮಹಿಳೆಯ 3.5 ಲಕ್ಷ ಹಣ ಎಗರಿಸಿದ ಕಳ್ಳಿಯರು

    ಈ ಕುರಿತು ಮಾತನಾಡಿದ ಸೈಬರ್ ಡಿಸಿಪಿ ನಿತೀಶ್ ಚಂದ್ರ ಧರಿಯಾ, ಜುಲೈ 11ರ ರಾತ್ರಿ 9 ಗಂಟೆ ಸುಮಾರಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಜೀವ ಬೆದರಿಕೆ ಹಾಕಲಾಗಿದೆ. ಪಾಟ್ನಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ವಿದೇಶಗಳಲ್ಲಿ ಆಸ್ತಿ ಮಾಡಿದ್ರೆ ಸರ್ಕಾರಕ್ಕೆ ಬರೆದುಕೊಡುವೆ – ಇಡಿ ದಾಳಿಗೊಳಗಾಗಿದ್ದ ಶಾಸಕ ಸುಬ್ಬಾರೆಡ್ಡಿ ಸವಾಲ್‌

  • ಬಿಹಾರದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಬಿಜೆಪಿಯಿಂದ ಟಿಕೆಟ್!

    ಬಿಹಾರದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಬಿಜೆಪಿಯಿಂದ ಟಿಕೆಟ್!

    ನವದೆಹಲಿ: ಬಿಹಾರ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮೊದಲ ಹಂತದ ಚುನಾವಣೆಗೆ ಎಲ್ಲ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಪ್ರಚಾರ ಕಾರ್ಯಕ್ಕೆ ಧಮುಕಿವೆ. ಘಟಾನುಘಟಿ ಬಾಹುಬಲಿಗಳು ಚುನಾವಣಾ ರಂಗ ಪ್ರವೇಶಕ್ಕೆ ಸಿದ್ಧರಾಗಿದ್ದು, ಒಂದು ವೇಳೆ ತಮಗೆ ಟಿಕೆಟ್ ಸಿಗದಿದ್ರೆ ಕುಟುಂಬಸ್ಥರಿಗೆ ಟಿಕೆಟ್ ಸಿಗುವಂತೆ ತೆರೆಮರೆಯಲ್ಲಿ ಪ್ರಯತ್ನ ಮಾಡುತ್ತಿರೋದು ಬಿಹಾರ ರಾಜಕೀಯದಲ್ಲಿ ಕಾಣಸಿಗುವ ಇಂದಿನ ದೃಶ್ಯಗಳು.

    ಶುಕ್ರವಾರ ಎಡಿಆರ್ (ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್) ವರದಿ ಹೊರಬಂದಿದ್ದು, ಬೆಚ್ಚಿಬೀಳುವ ಅಂಶಗಳನ್ನ ಹೊರಹಾಕಿವೆ. ಎಡಿಆರ್ ವರದಿ ಪ್ರಕಾರ 2005ರ ಬಳಿಕ ಅಪರಾಧ ಹಿನ್ನೆಲೆ ಅತಿ ಹೆಚ್ಚು ವ್ಯಕ್ತಿಗಳು ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿದ್ದಾರೆ.

    ಎಡಿಆರ್ ತನ್ನ ವರದಿಯಲ್ಲಿ 2005ರ ಬಿಹಾರ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ 10,875 ಅಭ್ಯರ್ಥಿಗಳ ಮಾಹಿತಿಯನ್ನ ಸಂಗ್ರಹಿಸಿದೆ. ಇದರ ಜೊತೆಗೆ 2005ರಿಂದ ಗೆದ್ದಿರುವ ಸಂಸದ ಮತ್ತು ಶಾಸಕರ ಮಾಹಿತಿಯನ್ನ ಎಡಿಆರ್ ವಿಶ್ಲೇಷಣೆ ಮಾಡಿದೆ. 10,785 ಅಭ್ಯರ್ಥಿಗಳ ಪೈಕಿ 3,230 ಜನರು ತಮ್ಮ ಅಪರಾಧ ಪ್ರಕರಣಗಳಿರೋದನ್ನ ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿಕೊಂಡಿದ್ದಾರೆ. ಇವರಲ್ಲಿ 2,204 ಅಭ್ಯರ್ಥಿಗಳ ಮೇಲೆ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿವೆ.

    2005ರಿಂದ ಬಿಹಾರದ ಚುನಾವಣೆಗಳಲ್ಲಿ ಗೆಲುವು ಕಂಡಿರುವ ಶೇ.57ರಷ್ಟು ಜನಪ್ರತಿನಿಧಿ(ಸಂಸದ ಮತ್ತು ಶಾಸಕರು)ಗಳ ಮೇಲೆ ಅಪರಾಧ ಪ್ರಕರಣಗಳಿವೆ. ಇದರಲ್ಲಿ ಶೇ.37ರಷ್ಟು ಗಂಭೀರ ಪ್ರಕರಣಗಳಿವೆ. ಈ ಎಲ್ಲ ಮಾಹಿತಿಗಳ ಜೊತೆ ಇವರೆಲ್ಲರ ಸಂಪತ್ತಿಗೆ ಬಗ್ಗೆಯೂ ಎಡಿಆರ್ ವಿಶ್ಲೇಷಣೆ ಮಾಡಿದೆ.

    ನಿಷ್ಕಳಂಕ ಪಕ್ಷ ಎಂದು ಕರೆದುಕೊಳ್ಳುವ ಬಿಜೆಪಿ, ಕಳೆದ 15 ವರ್ಷದಲ್ಲಿ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಚುನಾವಣೆ ಟಿಕೆಟ್ ನೀಡಿದೆ. 2005ರ ಚುನಾವಣಾ ಅಖಾಡದಲ್ಲಿದ್ದ ಬಿಜೆಪಿಯ 426 ಅಭ್ಯರ್ಥಿಗಳ ಪೈಕಿ 252 ಜನರು ತಮ್ಮ ಮೇಲಿರುವ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಅಂದ್ರೆ ಬಿಜೆಪಿಯ ಒಟ್ಟು ಅಭ್ಯರ್ಥಿಗಳ ಪೈಕಿ ಶೇ.59ರಷ್ಟು ಜನರ ಮೇಲೆ ಕಳಂಕದ ಕಪ್ಪು ಚುಕ್ಕೆಯಿದೆ.

    ಎರಡನೇ ಸ್ಥಾನದಲ್ಲಿ ಆರ್ ಜೆಡಿ ಪಕ್ಷವಿದೆ. ಕಳೆದ 15 ವರ್ಷದಲ್ಲಿ ಆರ್ ಜೆಡಿಯ 502 ಅಭ್ಯರ್ಥಿಗಳ ಪೈಕಿ 280 ಜನರು ಅಂದ್ರೆ ಶೇ.52ರಷ್ಟು ಜನರು ಅಪರಾಧ ಹಿನ್ನೆಲೆ ಹೊಂದಿದ್ದಾರೆ. ಅದೇ ರೀತಿ ಜೆಡಿಯು ಪಕ್ಷದಿಂದ 454 ಮಂದಿ ಚುನಾವಣೆ ಎದುರಿಸಿದ್ದು, 234 ಅಭ್ಯರ್ಥಿಗಳ ಮೇಲೆ ಪ್ರಕರಣಗಳು ದಾಖಲಾಗಿವೆ. ನಾಲ್ಕನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು 394 ಅಭ್ಯರ್ಥಿಗಳ ಪೈಕಿ 170 ಜನರ ಮೇಲೆ ಕೇಸ್ ಗಳಿವೆ. ಇನ್ನುಳಿದಂತೆ ಎಲ್‍ಜೆಪಿಯ 330 ಅಭ್ಯರ್ಥಿಗಳಲ್ಲಿ 155 (ಶೇ.47) ಮಂದಿಗೆ ಅಪರಾಧ ಹಿನ್ನೆಲೆ ಇದೆ. ಎಡಿಆರ್ ಸರ್ವೇ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಎಸ್‍ಪಿ, ಬಿಎಸ್‍ಪಿ ಜನಪ್ರತಿನಿಧಿಗಳ ಮಾಹಿತಿಯನ್ನ ಹೊಂದಿದೆ.

    ಗಂಭೀರ ಪ್ರಕರಣಗಳು: 2005ರಿಂದ ಬಿಹಾರದಲ್ಲಿ ನಡೆದಿರುವ ಚುನಾವಣೆಗೆ ಶೇ.35ರಷ್ಟು ಗಂಭೀರ ಪ್ರಕರಣಳಗಳನ್ನ ಹೊಂದಿರುವಂತಹ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇನ್ನು ಕಾಂಗ್ರೆಸ್ ಶೇ.24, ಆರ್ ಜೆಡಿ ಶೇ.35, ಜೆಡಿಯು ಶೇ.35 ಮತ್ತು ಎಲ್‍ಜೆಪಿ ಶೇ.30ರಷ್ಟು ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದೆ.

    ಬಿಜೆಪಿಯ ಶೇ.63ರಷ್ಟು ಸಂಸದರು, ಶಾಸಕರ ಮೇಲೆ ಅಪರಾಧ ಪ್ರಕರಣಗಳು: ಹೌದು, 2005ರಿಂದ ಬಿಹಾರದಲ್ಲಿ ನಡೆದ ಚುನಾವಣೆಗಳಲ್ಲಿ ಜಯಶಾಲಿಯಾಗಿರುವ 246 (ಸಂಸದರು ಮತ್ತು ಶಾಸಕರು) ಜನಪ್ರತಿನಿಧಿಗಳ 154 ಚುನಾಯಿತ ನಾಯಕರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಇವರಲ್ಲಿ 84 ಮಂದಿ ವಿರುದ್ಧ ಗಂಭೀರ ಪ್ರಕರಣಗಳಿವೆ.

    ಕಾಂಗ್ರೆಸ್ ನಿಂದ ಗೆದ್ದ 46 ಜನಪ್ರತಿನಿಧಿಗಳಲ್ಲಿ 25 ಮಂದಿ ಅಪರಾಧ ಪ್ರಕರಣಗಳು ದಾಖಲಾಗಿವೆ. 25ರಲ್ಲಿ 17 ಜನಪ್ರತಿನಿಧಿಗಳ ಹೆಸರು ಗಂಭೀರ ಪ್ರಕರಣಗಳಲ್ಲಿ ಕೇಳಿ ಬಂದಿವೆ. ಆರ್ ಜೆಡಿಯ 158ರಲ್ಲಿ 89(ಗಂಭೀರ 62), ಜೆಡಿಯು 296ರಲ್ಲಿ 149 (ಗಂಭೀರ 101) ಮತ್ತು ಎಲ್‍ಜೆಪಿಯ 27ರಲ್ಲಿ 19 (ಗಂಭೀರ 11) ಚುನಾಯಿತ ಪ್ರತಿನಿಧಿಗಳ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿವೆ.

    ಕೋಟ್ಯಧಿಪತಿಗಳಿಗೆ ಕಾಂಗ್ರೆಸ್ಸಿನಿಂದ ಟಿಕೆಟ್: 2005ರಿಂದ ಚುನಾವಣೆ ಎದುರಿಸಿರುವ ಸಂಪತ್ತಿನ ಮಾಹಿತಿಯನ್ನ ಎಡಿಆರ್ ವಿಶ್ಲೇಷಣೆ ಮಾಡಿದ್ದು, ಕಾಂಗ್ರೆಸ್ ಅತಿ ಹೆಚ್ಚು ಧನಿಕರಿಗೆ ಟಿಕೆಟ್ ನೀಡಿದೆ. 394 ಅಭ್ಯರ್ಥಿಗಳ ಸರಾಸರಿ ಸಂಪತ್ತು 3.44 ಕೋಟಿ ರೂ. ಇದೆ. ಅದೇ ರೀತಿ ಬಿಜೆಪಿಯ 426 ಅಭ್ಯರ್ಥಿಗಳ ಸರಾಸರಿ ಸಂಪತ್ತು 2.93 ಕೋಟಿ, ಜೆಡಿಯು 3.68 ಕೋಟಿ ರೂ ಮತ್ತು ಆರ್ ಜೆಡಿ 1.70 ಕೋಟಿ ಸಂಪತ್ತು ಹೊಂದಿದೆ.