Tag: ಬಿಹಾರ ಎಲೆಕ್ಷನ್

  • Bihar Election | `ಜೀವಿಕಾ ಸಿಎಂ ದೀದಿ’ಗಳಿಗೆ 30,000 ಮಾಸಿಕ ವೇತನದ ಭರವಸೆ – ತೇಜಸ್ವಿ ಯಾದವ್

    Bihar Election | `ಜೀವಿಕಾ ಸಿಎಂ ದೀದಿ’ಗಳಿಗೆ 30,000 ಮಾಸಿಕ ವೇತನದ ಭರವಸೆ – ತೇಜಸ್ವಿ ಯಾದವ್

    – ಎಲ್ಲ ಗುತ್ತಿಗೆ ನೌಕರರನ್ನ ಖಾಯಂಗೊಳಿಸುವ ಭರವಸೆ

    ಪಾಟ್ನಾ: ಬಿಹಾರದಲ್ಲಿ ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ `ಜೀವಿಕಾ ಸಿಎಂ ದೀದಿ’ಗಳಿಗೆ 30,000 ರೂ. ಮಾಸಿಕ ವೇತನದೊಂದಿಗೆ ಶಾಶ್ವತ ಸರ್ಕಾರಿ ಉದ್ಯೋಗವನ್ನು ನೀಡಲಾಗುವುದು ಎಂದು ಮಾಜಿ ಡಿಸಿಎಂ, ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ (Tjashwi Yadav) ಘೋಷಿಸಿದ್ದಾರೆ.

    ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಎರಡನೇ ಚುನಾವಣಾ ಭರವಸೆಯನ್ನು ಘೋಷಿಸಿದರು. ಜೀವಿಕಾ ಸಿಎಂ (ಸಮುದಾಯ ಸಂಚಾರಿ ಕಾರ್ಯಕರ್ತರು) ದೀದಿಗಳನ್ನು ಖಾಯಂ ಮಾಡಲಾಗುವುದು ಮತ್ತು ಅವರ ಸಂಬಳವನ್ನು ಹೆಚ್ಚಿಸುವುದರ ಜೊತೆಗೆ ಸರ್ಕಾರಿ ನೌಕರರ ಸ್ಥಾನಮಾನವನ್ನು ನೀಡಲಾಗುವುದು. ಇದಲ್ಲದೆ, ರಾಜ್ಯದ ಎಲ್ಲಾ ಗುತ್ತಿಗೆ ನೌಕರರನ್ನು ಶಾಶ್ವತ ಸರ್ಕಾರಿ ಉದ್ಯೋಗಿಗಳಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.ಇದನ್ನೂ ಓದಿ: ದೀಪಾವಳಿಗೆ ಮುದ್ದು ಮಗಳ ಫೇಸ್‌ ರಿವೀಲ್‌ ಮಾಡಿದ ದೀಪಿಕಾ ಪಡುಕೋಣೆ

    ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಈ ಸರ್ಕಾರದ ಅಡಿಯಲ್ಲಿ ಜೀವಿಕಾ ದೀದಿಗೆ ಅನ್ಯಾಯವಾಗಿದೆ. ನಾವು ಅವರ ಸಂಬಳವನ್ನು ತಿಂಗಳಿಗೆ 30,000 ರೂ.ಗಳಿಗೆ ಹೆಚ್ಚಿಸುವುದಾಗಿ ನಿರ್ಧರಿಸಿದ್ದೇವೆ. ಇದು ಸಾಮಾನ್ಯ ಘೋಷಣೆಯಲ್ಲ, ಇದು ಜೀವಿಕಾ ದೀದಿಯರ ಬೇಡಿಕೆಯಾಗಿದೆ ಎಂದು ಹೇಳಿದರು.

    ಇದಲ್ಲದೇ ಜೀವಿಕಾ ದೀದಿ ಗುಂಪುಗಳಿಗೆ ಮಹಿಳೆಯರು ಪಡೆದ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಜೊತೆಗೆ ಎರಡು ವರ್ಷಗಳವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಜೀವಿಕಾ ಗುಂಪಿನ ಮಹಿಳೆಯರು ಸರ್ಕಾರಕ್ಕೆ ಸಂಬAಧಿಸಿದ ಇತರ ಕೆಲಸಗಳನ್ನು ನಿರ್ವಹಿಸಲು ಮಾಸಿಕ 2,000 ರೂ. ಭತ್ಯೆ ನೀಡಲಾಗುವುದು. ಅದರೊಂದಿಗೆ ಸರ್ಕಾರವು 5,00,000 ರೂ.ಗಳವರೆಗಿನ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು.

    ಮಗಳು ಮತ್ತು ತಾಯಿ ಯೋಜನೆಗಳ ಅಡಿಯಲ್ಲಿ, ಬಿಯಿಂದ ಇವರೆಗೆ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಬಿ ಎಂದರೆ ಪ್ರಯೋಜನ, ಇ ಎಂದರೆ ಶಿಕ್ಷಣ, ಟಿ ಎಂದರೆ ತರಬೇತಿ ಮತ್ತು ಐ ಎಂದರೆ ಆದಾಯ. ಬಿಹಾರದ ಎಲ್ಲಾ ಗುತ್ತಿಗೆ ನೌಕರರನ್ನು ಖಾಯಂ ಸರ್ಕಾರಿ ನೌಕರರನ್ನಾಗಿ ಮಾಡಲಾಗುವುದು ಎಂದು ವಿವರಿಸಿದರು.

    ಈ ಹಿಂದೆ ಅಧಿಕಾರಕ್ಕೆ ಬಂದ 20 ತಿಂಗಳೊಳಗೆ ರಾಜ್ಯದ ಪ್ರತಿ ಮನೆಗೆ ಒಂದು ಸರ್ಕಾರಿ ಉದ್ಯೋಗ ನೀಡುವುದಾಗಿ ತೇಜಸ್ವಿ ಭರವಸೆ ನೀಡಿದ್ದರು. ಸರ್ಕಾರ ರಚಿಸಿದ 20 ದಿನಗಳಲ್ಲಿ ಉದ್ಯೋಗ ಖಾತರಿಪಡಿಸುವ ಹೊಸ ಕಾನೂನನ್ನು ಪರಿಚಯಿಸಲಾಗುವುದು. ಅಧಿಕಾರ ವಹಿಸಿಕೊಂಡ 20 ತಿಂಗಳೊಳಗೆ ಈ ಯೋಜನೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಪ್ರಿಯಾಂಕ್‌ಗೆ ಅನಂತ್‌ ಕುಮಾರ್‌ ಪುತ್ರಿ ಐಶ್ವರ್ಯ ಟಕ್ಕರ್‌

  • ಬಿಹಾರ ಚುನಾವಣೆಯಲ್ಲಿ ಗೆದ್ರೆ ಪ್ರತಿ ಮನೆಗೆ ಉದ್ಯೋಗ ಗ್ಯಾರಂಟಿ: ಸಮರ್ಥಿಸಿದ ಪರಮೇಶ್ವರ್

    ಬಿಹಾರ ಚುನಾವಣೆಯಲ್ಲಿ ಗೆದ್ರೆ ಪ್ರತಿ ಮನೆಗೆ ಉದ್ಯೋಗ ಗ್ಯಾರಂಟಿ: ಸಮರ್ಥಿಸಿದ ಪರಮೇಶ್ವರ್

    ಬೆಂಗಳೂರು: ಬಿಹಾರ ಚುನಾವಣೆಯಲ್ಲಿ (Bihar Election) ಇಂಡಿ ಕೂಟ ಗೆದ್ದರೆ ಪ್ರತಿ ಮನೆಗೆ ಸರ್ಕಾರಿ ಉದ್ಯೋಗ ಕೊಡುವ ಗ್ಯಾರಂಟಿ ಘೋಷಣೆಯನ್ನ ಗೃಹಸಚಿವ ಪರಮೇಶ್ವರ್ (Parameshwar) ಸಮರ್ಥನೆ ಮಾಡಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಜನಗಳಿಗೆ ಏನು ಬೇಕಾಗುತ್ತೆ ಅನ್ನೋದನ್ನ ತಿಳಿದುಕೊಂಡು ಚುನಾವಣೆ ಸಮಯದಲ್ಲಿ ಘೋಷಣೆ ಮಾಡುತ್ತೇವೆ. ಎಲ್ಲರೂ ಮಾಡೋದು ಅದೇ ಕೆಲಸ. ನಮ್ಮ ಮೈತ್ರಿ ಪಕ್ಷದವರು ಪ್ರತಿ ಮನೆಗೆ ಉದ್ಯೋಗ ಕೊಡ್ತೀನಿ ಅಂತ ಘೋಷಣೆ ಮಾಡಿದ್ದಾರೆ. ಉದ್ಯೋಗ ಅನ್ನೋದು ಬಹಳ ಮುಖ್ಯ. ಎಲ್ಲಾ ಕಡೆ ನಿರುದ್ಯೋಗದ ಸಮಸ್ಯೆ ಬಹಳ ಕಾಡ್ತಿದೆ. ಯುವಕರಿಗೆ ಉದ್ಯೋಗ ಸಿಕ್ತಿಲ್ಲ ಅನ್ನೋದು ದೊಡ್ಡ ಪ್ರಶ್ನೆ. ಹಾಗಾಗಿ ಚುನಾವಣೆ ಪ್ರಣಾಳಿಕೆ ಮಾಡಬೇಕು ಅಂತ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾವು ಮಾಡಿರೋದು ಪೊಲಿಟಿಕಲ್ ಮೀಟಿಂಗ್ ಅಲ್ಲ: ಪರಮೇಶ್ವರ್

    3 ಕೋಟಿ ಉದ್ಯೋಗ ಸೃಷ್ಟಿ ಸಾಧ್ಯನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಂತ ಹಂತವಾಗಿ ಮಾಡ್ತಾರೆ. ಒಂದೇ ದಿನ ಘೋಷಣೆ ಮಾಡಿ, ಒಂದೇ ದಿನ ಕೆಲಸ ಕೊಡೋಕೆ ಆಗುತ್ತಾ? ನಾವು ಕರ್ನಾಟಕದಲ್ಲಿ 2.5 ಲಕ್ಷ ಖಾಲಿ ಇರೋ ಹುದ್ದೆ ಭರ್ತಿ ಮಾಡ್ತೀವಿ ಅಂತ ಪ್ರಣಾಳಿಕೆಯಲ್ಲಿ ಹೇಳಿದ್ವಿ. ನಾವು ಒಂದೇ ಬಾರಿ ಹುದ್ದೆ ಭರ್ತಿ ಮಾಡ್ತೀವಿ ಅಂತ ಅಲ್ಲ. ಈಗ ಪ್ರಾರಂಭ ಮಾಡಿದ್ದೇವೆ. ಒಳ ಮೀಸಲಾತಿ ತೊಂದರೆ ಆಗಿತ್ತು. ಈಗ ಅದೆಲ್ಲ ಬಗೆಹರಿಸಿಕೊಂಡು ನೇಮಕಾತಿ ಪ್ರಾರಂಭ ಮಾಡ್ತಿದ್ದೇವೆ. ಪೊಲೀಸ್ ಇಲಾಖೆ ಸೇರಿ ಬೇರೆ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಎಂದಿದ್ದಾರೆ.

    ಪ್ರಧಾನಿ ಮೋದಿ 2 ಕೋಟಿ ಉದ್ಯೋಗ ಕೊಡ್ತೀನಿ ಅಂದ್ರು. ಅವರು ಕೊಡಲಿಲ್ಲ. ಅವರು ಮಾಡಿದ್ರೆ ನಾವು ಯಾಕೆ ಟೀಕೆ ಮಾಡ್ತಿದ್ವಿ. ಮೋದಿ ಚುನಾವಣೆ ಸಮಯದಲ್ಲಿ ಹೇಳಿದ್ದು ನಿಜ. ಹೇಳಿದ್ದು ಮಾಡಿದ್ರೆ ಯಾರು ಕೇಳ್ತಿದ್ರು? ಅವರು ಮಾಡಿದ್ರೆ ಹೊಗಳುತಿದ್ವಿ. ನಾವು 5 ಗ್ಯಾರಂಟಿ ಕೊಡ್ತೀವಿ ಅಂತ ಹೇಳಿದ್ವಿ ನಾವು ಮಾಡಿದ್ದೇವೆ ಎಂದು ಹೇಳಿದ್ದಾರೆ.

  • ಬಿಹಾರ ಎಲೆಕ್ಷನ್ ತನಕ ಸುಮ್ಮನಿದ್ದುಬಿಡಿ: ರಾಜಣ್ಣ ಮಾರ್ಮಿಕ ನುಡಿ

    ಬಿಹಾರ ಎಲೆಕ್ಷನ್ ತನಕ ಸುಮ್ಮನಿದ್ದುಬಿಡಿ: ರಾಜಣ್ಣ ಮಾರ್ಮಿಕ ನುಡಿ

    ತುಮಕೂರು: ಬಿಹಾರ ಎಲೆಕ್ಷನ್‌ವರೆಗೂ (Bihar Election) ಸುಮ್ಮನೆ ಇದ್ದು ಬಿಡಿ, ಬಿಹಾರ ಎಲೆಕ್ಷನ್ ಕಳೆದು ಹೋಗಲಿ ಎಂದು ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ಮಾರ್ಮಿಕವಾಗಿ ನುಡಿದಿದ್ದಾರೆ.

    ತುಮಕೂರಿನಲ್ಲಿ (Tumakuru) ಮಾಧ್ಯಮದವರು, ಮತ್ತೆ ನೀವು ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಹಾರ ಚುನಾವಣೆವರೆಗೂ ಕಾದು ನೋಡಿ ಎಂದಷ್ಟೇ ಹೇಳಿದ್ದಾರೆ. ಕೆಎನ್ ರಾಜಣ್ಣರ ಈ ಮಾತಿನ ಮರ್ಮ ಹಲವು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    ಅಲ್ಲದೇ ಸಿಎಂ ಸಿದ್ದರಾಮಯ್ಯರ (Siddaramaiah) ಬಗ್ಗೆ ನನಗೆ ವಿಶ್ವಾಸ ಇದೆ ಎಂದೂ ಮತ್ತೆ ಮಂತ್ರಿಗಿರಿ ಸಿಗಬಹುದು ಅನ್ನೋದನ್ನೂ ಪರೋಕ್ಷವಾಗಿ ಹೇಳಿದ್ದಾರೆ. ಮಂತ್ರಿ ಸ್ಥಾನ ಕೊಡಿ ಎಂದು ನಾನು ಕೇಳಿರಲಿಲ್ಲ. 2018 ರಲ್ಲಿ ನಾನು ಸೋತಾಗ ಸಿಎಂ ಸಿದ್ದರಾಮಯ್ಯ ಹೇಳಿದ್ರು ನೀನು ಗೆದ್ದರೆ ಮಿನಿಸ್ಟರ್ ಆಗ್ತಿದ್ದೆ ಕಣಯ್ಯಾ, ನಿನ್ನ ಬದಲು ತುಕಾರಂನನ್ನು ಮಾಡಿದೆ ಎಂದು ಹೇಳಿದರು. ಈ ಬಾರಿ ಅವರೇ ಕರೆದು ಸಚಿವ ಸ್ಥಾನ ಕೊಟ್ಟರು ಎಂದರು. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳ ಸಾವು – ಫಾರ್ಮಾ ಕಂಪನಿ ಮಾಲೀಕ ಅರೆಸ್ಟ್

    ಹೈಕಮಾಂಡ್‌ಗೆ ಸತ್ಯದ ಅರಿವಾಗಿದ್ಯಾ ಎಂಬ ಪ್ರಶ್ನೆಗೂ ಉತ್ತರಿಸಿದ ರಾಜಣ್ಣ, ಎಲ್ಲವೂ ಬಿಹಾರ ಎಲೆಕ್ಷನ್ ಕಳೆದ ಮೇಲೆಯೇ ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ಅವಘಡ – ವಿದ್ಯಾರ್ಥಿ ಸಜೀವ ದಹನ

  • ಬಿಹಾರ ಎಲೆಕ್ಷನ್‌ಗೆ ಕರ್ನಾಟಕದಲ್ಲಿ ವಸೂಲಿ – ಜಿಎಸ್‌ಟಿ ನೋಟಿಸ್‌ಗೆ ಕೇಸರಿ ಬಿಗ್ ಟ್ವಿಸ್ಟ್

    ಬಿಹಾರ ಎಲೆಕ್ಷನ್‌ಗೆ ಕರ್ನಾಟಕದಲ್ಲಿ ವಸೂಲಿ – ಜಿಎಸ್‌ಟಿ ನೋಟಿಸ್‌ಗೆ ಕೇಸರಿ ಬಿಗ್ ಟ್ವಿಸ್ಟ್

    ಬೆಂಗಳೂರು: ರಾಜ್ಯದ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಕೊಟ್ಟಿರೋ ಜಿಎಸ್‌ಟಿ ನೊಟೀಸ್‌ಗೆ ಬಿಜೆಪಿ (BJP) ಬಿಹಾರ ಎಲೆಕ್ಷನ್ (Bihar Election) ಲಿಂಕ್ ಕೊಟ್ಟಿದೆ.

    ಬಿಹಾರ ಎಲೆಕ್ಷನ್‌ಗಾಗಿ ಹಣ ಸಂಗ್ರಹಕ್ಕೆ ಸುರ್ಜೇವಾಲಾ ರಾಜ್ಯಕ್ಕೆ ಬಂದಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಸರ್ಕಾರ ಹೂವು, ತರಕಾರಿ, ಟೀ ಅಂಗಡಿ, ಬೇಕರಿಗಳಿಗೆಲ್ಲಾ ನೋಟಿಸ್‌ ಕೊಟ್ಟು ಹಗಲು ದರೋಡೆ ಮಾಡ್ತಿದೆ ಅಂತ ಎಕ್ಸ್‌ನಲ್ಲಿ ಗಂಭೀರ ಆರೋಪ ಮಾಡಿದೆ. ಅಲ್ಲದೆ, ಸಹಾಯವಾಣಿಯನ್ನೂ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್‌

    ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ತೆರಿಗೆ ಇಲಾಖೆ ಮೂಲಕ ನೋಟಿಸ್ ಕೊಡ್ತಿದ್ದಾರೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

    ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಈ ಬಗ್ಗೆ ಚರ್ಚೆ ಆಗ್ಬೇಕು. ಹಣಕಾಸು ಸಚಿವರು ಉತ್ತರ ಕೊಡ್ತಾರೆ ಅಂತ ಎಂದಿದ್ದಾರೆ. ಆದರೆ, ನೋಟಿಸ್ ಕೊಡೋದೇ ಕೇಂದ್ರ ಸರ್ಕಾರ ಅಂತ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ

    ಈ ಮಧ್ಯೆ, ವ್ಯಾಪಾರಿಗಳಿಗೆ ಜಿಎಸ್‌ಟಿ ಜಂಜಾಟ ಮುಂದುವರಿದಿದೆ. ಯುಪಿಐ ಬೇಡ, ಕ್ಯಾಶ್ ಕೊಡಿ ಅನ್ನೋ ವ್ಯಾಪಾರಿಗಳ ಸಂಖ್ಯೆ ದ್ವಿಗುಣ ಆಗ್ತಿದೆ. ಆದರೆ, ಗ್ರಾಹಕರು ಕ್ಯಾಶ್ ಇಲ್ಲ ಅಂತ ಪರದಾಡ್ತಿದ್ದಾರೆ.

  • ಗೆದ್ದವರು ಎಲ್ಲೂ ಹೋಗ್ಬೇಡಿ, ನಾವೇ ಸರ್ಕಾರ ರಚಿಸೋದು: ತೇಜಸ್ವಿ ಯಾದವ್

    ಗೆದ್ದವರು ಎಲ್ಲೂ ಹೋಗ್ಬೇಡಿ, ನಾವೇ ಸರ್ಕಾರ ರಚಿಸೋದು: ತೇಜಸ್ವಿ ಯಾದವ್

    ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹೊರ ಬಂದ್ರೂ ರಾಜಕೀಯ ಚಟುವಟಿಕೆಗಳು ಮಾತ್ರ ಇನ್ನು ಮುಂದುವರಿದಿದೆ. ಮಹಾಘಟಬಂಧನದ ನಾಯಕ ಆರ್ ಜೆಡಿಯ ತೇಜಸ್ವಿ ಯಾದವ್, ಗೆದ್ದ ತಮ್ಮ ಎಲ್ಲ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಮುಂದಿನ ಒಂದು ತಿಂಗಳು ಯಾರು ಪಾಟ್ನಾ ನಗರದಿಂದ ಹೊರ ಹೋಗಬೇಡಿ. ಕಾರಣ ನಾವೇ ಸರ್ಕಾರ ರಚಿಸುತ್ತೇವೆ ಎಂದಿದ್ದಾರೆ ಅಂತ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಇಂದು ಪಾಟ್ನಾದಲ್ಲಿರುವ ಮಾಜಿ ಸಿಎಂ, ಆರ್‍ಜೆಡಿ ನಾಯಕಿ ರಾಬ್ಡಿ ದೇವಿಯವರ ನಿವಾಸದಲ್ಲಿ ಮಹಾಘಟಬಂಧನದ ಎಲ್ಲ ಮುಖಂಡರು ಸೇರಿ ಆತ್ಮಾವಲೋಕನ ಸಭೆ ನಡೆಸಿದರು. ಈ ವೇಳೆ ತೇಜಸ್ವಿ ಯಾದವ್ ತಾವೇ ಸರ್ಕಾರ ರಚಿಸೋದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

    ಮ್ಯಾಜಿಕ್ ನಂಬರ್ ಪಡೆದಿರೋ ಎನ್‍ಡಿಎ ಒಕ್ಕೂಟದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಮಹಾಘಟಬಂಧನ ನಾಯಕರ ನಂಬಿಕೆ. ಸರ್ಕಾರ ರಚನೆ ವೇಳೆ ಉಂಟಾಗುವ ಭಿನ್ನಮತವನ್ನ ಲಾಭವಾಗಿ ಬಳಸಿಕೊಳ್ಳಲು ತೇಜಸ್ವಿ ಯಾದವ್ ಆ್ಯಂಡ್ ಟೀಂ ಪ್ಲಾನ್ ಮಾಡಿಕೊಂಡಿದೆಯಂತೆ. ಹಾಗಾಗಿ ಗೆದ್ದಿರೋ ಎಲ್ಲ ಜನಪ್ರತಿನಿಧಿಗಳನ್ನ ಪಾಟ್ನಾದಲ್ಲಿಯೇ ಉಳಿದುಕೊಳ್ಳುವಂತೆ ತೇಜಸ್ವಿ ಯಾದವ್ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಕೆಲ ನಾಯಕರು ಬಿಜೆಪಿಗೆ ಜಂಪ್ ಆಗುವ ಆತಂಕವೂ ಇದೆ ಎನ್ನಲಾಗಿದ್ದು, ಎಲ್ಲರನ್ನ ತನ್ನ ಕಣ್ಣಂಚಿನಲ್ಲಿಟ್ಟುಕೊಳ್ಳಲು ತೇಜಸ್ವಿ ತೀರ್ಮಾನಿಸಿರುವ ಕುರಿತು ವರದಿಗಳು ಪ್ರಕಟವಾಗುತ್ತಿವೆ.

    ತಮ್ಮ ನಾಯಕರ ಜೊತೆಗಿನ ಸಭೆ ಬಳಿಕ ಮಾತನಾಡಿದ ತೇಜಸ್ವಿ ಯಾದವ್, ನಮಗೆ ಜನರ ಸಮರ್ಥನೆ ಇದೆ. ನಾವು 130 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ನಿತೀಶ್ ಕುಮಾರ್ ಮೋಸದಿಂದ ಸರ್ಕಾರ ರಚನೆಗೆ ಮುಂದಾಗ್ತಿದ್ದಾರೆ. ಹಲವು ಕ್ಷೇತ್ರಗಳ ಮತ ಎಣಿಕೆ ವೇಳೆ ಮೋಸದಾಟ ನಡೆದಿದೆ ಎಂದು ಆರೋಪಿಸಿದ್ದಾರೆ.

    243 ವಿಧಾನಸಭಾ ಕ್ಷೇತ್ರದಲ್ಲಿ ಎನ್‍ಡಿಎ ಮ್ಯಾಜಿಕ್ ನಂಬರ್ 122ನ್ನು ದಾಟಿ 125 ಕ್ಷೇತ್ರಗಳಲ್ಲಿ ಸ್ಪಷ್ಟ ಬಹುಮತವನ್ನು ಪಡೆದಿದೆ. ಮಹಾಘಟಬಂಧನ್ 110 ಸ್ಥಾನಗಳಲ್ಲಿ ಗೆದ್ದಿದ್ದು, ಇತರರು 8ರಲ್ಲಿ ವಿಜಯದ ನಗೆ ಬೀರಿದ್ದಾರೆ. ತೇಜಸ್ವಿ ಯಾದವ್ ನೇತೃತ್ವದ ಆರ್ ಜೆಡಿಯ ಏಕಾಂಗಿ ಹೋರಾಟದ ಹೊರತಾಗಿಯೂ ಮಹಾಘಟಬಂಧನ್ ಅಧಿಕಾರ ವಂಚಿತವಾಗಿದೆ.

    ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆರ್ ಜೆಡಿ: ಬಿಹಾರದಲ್ಲಿ ಮತದಾರ ಮೋದಿ-ನಿತೀಶ್ ಜೋಡಿಗೆ ಜೈ ಅಂದಿದ್ದಾನೆ. ಯಾವ್ಯಾವ ಪಕ್ಷದ ಎಷ್ಟೆಷ್ಟು ಸಾಧನೆ ಅಂತ ನೋಡೋದಾದ್ರೆ, ಬಿಜೆಪಿ 74 ಕ್ಷೇತ್ರಗಳಲ್ಲಿ ವಿಜಯದ ನಗೆ ಬೀರುವ ಮೂಲಕ ಎನ್‍ಡಿಎ ಮೈತ್ರಿಕೂಟದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು, ಲೋಕ ಜನಶಕ್ತಿ ಪಾರ್ಟಿಯ ಚಿರಾಗ್ ಪಾಸ್ವಾನ್ ನೀಡಿದ ಏಟಿನಿಂದಾಗಿ ಮೂರನೇ ಸ್ಥಾನಕ್ಕೆ ಕುಸಿದಿದ್ದು 43 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್ಜೆಡಿ 75 ಕ್ಷೇತ್ರದಲ್ಲಿ ಗೆದ್ದು ಬಿಹಾರದ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‍ನಿಂದ ನಿರೀಕ್ಷಿತ ಬೆಂಬಲ ಸಿಗದೇ ಅಧಿಕಾರದಿಂದ ದೂರ ಉಳಿಯಬೇಕಾಗಿದೆ. ಇನ್ನು ಇನ್ನು, ವಿಕಾಸಶೀಲ ಇನ್ಸಾನ್ ಪಾರ್ಟಿ ಮತ್ತು ಜೀತನ್ ರಾಮ್ ಮಾಂಝಿ ಅವರ ಎಚ್‍ಎಎಂ ತಲಾ 4 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಹೀಗಾಗಿ ಜೆಡಿಯು ಕಳಪೆ ಸಾಧನೆಯ ಹೊರತಾಗಿಯೂ ಎಚ್‍ಎಎಂ ಮತ್ತು ವಿಐಪಿ ಉತ್ತಮ ಪ್ರದರ್ಶನದಿಂದ ಎನ್‍ಡಿಎ ತನ್ನಲ್ಲಿಯೇ ಅಧಿಕಾರ ಉಳಿಸಿಕೊಂಡಿದೆ.

  • ಬಿಹಾರ ಅಸೆಂಬ್ಲಿ ಫಲಿತಾಂಶ ಕದನ ಕುತೂಹಲ- ಎನ್‍ಡಿಎ-ಆರ್ ಜೆಡಿ ಮಧ್ಯೆ ಇನ್ನೂ ಟಫ್ ಫೈಟ್

    ಬಿಹಾರ ಅಸೆಂಬ್ಲಿ ಫಲಿತಾಂಶ ಕದನ ಕುತೂಹಲ- ಎನ್‍ಡಿಎ-ಆರ್ ಜೆಡಿ ಮಧ್ಯೆ ಇನ್ನೂ ಟಫ್ ಫೈಟ್

    ಪಾಟ್ನಾ: ಬಿಹಾರ ವಿಧನಾಸಭಾ ಫಲಿತಾಂಶ ಕ್ಷಣ ಕ್ಷಣಕ್ಕೂ ಬದಲಾಗುತ್ತಿದ್ದು, ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗುವ ಲಕ್ಷಣಗಳು ದಟ್ಟವಾಗುತ್ತಿವೆ. ಚುನಾವಣಾ ಆಯೋಗ ಸಹ ಮಧ್ಯರಾತ್ರಿಯವರೆಗೂ ಮತ ಎಣಿಕೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದೆ. ಸದ್ಯ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‍ಡಿಎ 124, ಮಹಾಘಟಬಂಧನ್ 111, ಎಲ್‍ಜೆಪಿ 1 ಮತ್ತು ಇತರರರು 7ರಲ್ಲಿ ಮುನ್ನಡೆಯಲ್ಲಿವೆ.

    ಬೆಳಗ್ಗೆ 9 ಗಂಟೆವರೆಗೂ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಭಾರೀ ಮುನ್ನಡೆ ಕಾಯ್ದುಕೊಂಡಿತ್ತು. 10 ಗಂಟೆಯ ನಂತರ ಬಿಹಾರದ ಸ್ವರೂಪವೇ ಬದಲಾಯ್ತು. ಗೆಲುವಿನ ಸಂಭ್ರಮ ನಿತೀಶ್ ಕುಮಾರ್ ಪಾಳಯದಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಎನ್‍ಡಿಎ ಮೈತ್ರಿಕೂಟ 120 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಮ್ಯಾಜಿಕ್ ನಂಬರ್ ತಲುಪಿ ನಿಟ್ಟುಸಿರು ಬಿಡುವಷ್ಟರಲ್ಲಿಯೇ ಇಲ್ಲಿದ್ದ ಸಂಭ್ರಮ ಲಕ್ಷ್ಮಿ ತೇಜಸ್ವಿ ನಿವಾಸ ಸೇರಿದಂತೆ ಆಗಿತ್ತು. ಜೆಡಿಯು ಜೊತೆ ಮೈತ್ರಿ ಮಾಡಿಕೊಂಡರೂ ಬಿಜೆಪಿ ಬಿಹಾರದಲ್ಲಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವಲ್ಲಿ ಯಶಸ್ವಿಯಾಗಿದೆ.

    ಸಂಜೆ ಸುಮಾರು 6.30ಕ್ಕೆ ಮತ್ತೊಮ್ಮೆ ವಿಜಯ ಲಕ್ಷಿ ತನ್ನ ಪಥವನ್ನ ಬದಲಿಸಿದ್ದರಿಂದ ಅಭ್ಯರ್ಥಿಗಳ ಢವ ಢವ ಹೆಚ್ಚಾಯ್ತು. ಎನ್‍ಡಿಎ ಮತ್ತು ಮಹಾಘಟಬಂಧನ್ ನಡುವೆ ನಾನಾ ನೀನಾ ಅನ್ನೋ ರೀತಿಯಲ್ಲಿ ಫೈಟ್ ಶುರುವಾಯ್ತು. ಸಂಜೆ ಏಳು ಗಂಟೆಗೆ ಎನ್‍ಡಿಎ 132 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಮತ್ತೆ ಕೆಳಗಿಳಿಯಿತು.

    ಕಾಂಗ್ರೆಸ್ ಮತ್ತು ಆರ್ ಜೆಡಿ ರಾತ್ರಿ 10 ಗಂಟೆಗೆ ಚುನಾವಣೆ ಆಯೋಗದ ಮುಂದೆ ಹೋಗಿದ್ದು, ನಿತೀಶ್ ಕುಮಾರ್ ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ನಿತೀಶ್ ಮನೆಯಲ್ಲಿ ದೊಡ್ಡ ಮಟ್ಟದಲ್ಲಿ ಬೈಟಕ್ ನಡೆಯುತ್ತಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಮತ್ತೊಂದು ಕಡೆ ಆರ್ ಜೆಡಿ 119 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದರು ಚನಾವಣೆ ಆಯೋಗ ಘೋಷಣೆ ಮಾಡುತ್ತಿಲ್ಲ ಎಂದು ಕೆಲ ದಾಖಲೆಗಳನ್ನು ಬಿಡುಗಡೆ ಮಾಡಿದೆ.

    ಶೇಕಡಾವಾರು ಮತ ಗಳಿಕೆಯಲ್ಲಿ ಎನ್‍ಡಿಎ ಮೈತ್ರಿಕೂಟವೇ ಮುಂದಿದೆ. ಎನ್‍ಡಿಎ ಶೇಕಡಾ 34ರಷ್ಟು ಮತ ಪಡೆದ್ರೆ, ಎಂಜಿಬಿ ಶೇಕಡಾ 32ರಷ್ಟು ಮತ ಪಡೆದಿದೆ. ಎಲ್‍ಜೆಪಿ ಶೇಕಡಾ 5.65ರಷ್ಟು ಮತ ಪಡೆದಿದೆ. ಆರ್‍ಜೆಡಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಂಐಎಂ ಶೇಕಡಾ 1.24ರಷ್ಟು ಮತ ಪಡೆದ್ದಿದೂ, ಅಲ್ಲದೇ ಐದು ಸ್ಥಾನ ಗೆದ್ದು ಮಹಾಘಟಬಂಧನ್‍ಗೆ ಶಾಕ್ ನೀಡಿದೆ. ಒಂದ್ವೇಳೆ ಎನ್‍ಡಿಎಗೆ ಸಿಂಪಲ್ ಮೆಜಾರಿಟಿ ಬಂದ್ರೂ. ನಿತೀಶ್ ಮತ್ತೆ ಸಿಎಂ ಆಗ್ತಾರೋ ಇಲ್ವೋ ಎಂಬ ಚರ್ಚೆಗಳು ಶುರುವಾಗಿವೆ. ಚುನಾವಣಾ ಪ್ರಚಾರದ ವೇಳೆ ಮೋದಿ ಕೊಟ್ಟ ಮಾತಿನಂತೆ ನಿತೀಶರನ್ನು ಸಿಎಂ ಮಾಡ್ತಾರಾ ಎಂಬ ಕುತೂಹಲವೂ ಎಲ್ಲರಲ್ಲಿದೆ. ಇನ್ನು ಬಿಜೆಪಿ ಅಧಿಕಾರದ ಸನಿಹದಲ್ಲಿರುವುದಕ್ಕೆ ಹೈಕಮಾಂಡ್ ಹರ್ಷ ವ್ಯಕ್ತಪಡಿಸಿದೆ.

  • ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಗೆಲುವು – ಎಬಿಸಿ- ಸಿ ವೋಟರ್ ಸಮೀಕ್ಷೆ ಭವಿಷ್ಯ

    ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಗೆಲುವು – ಎಬಿಸಿ- ಸಿ ವೋಟರ್ ಸಮೀಕ್ಷೆ ಭವಿಷ್ಯ

    ಪಾಟ್ನಾ: ಅಕ್ಟೋಬರ್ 28 ರಂದು ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಈ ಮಧ್ಯೆ ಚುನಾವಣಾ ಪೂರ್ವ ನಡೆಸಿದ ಸಮೀಕ್ಷೆ ಹೊರಬಿದ್ದಿದ್ದು ಎನ್‍ಡಿಎ ಮೈತ್ರಿಕೂಟಕ್ಕೆ ಭರ್ಜರಿ ಸಾಧಿಸಿಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ

    ಕೊರೊನಾ ಬಿಕ್ಕಟ್ಟಿನಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆಯಾಗಿದ್ದು, ಬಿಹಾರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ನಿತೀಶ್ ಕುಮಾರ್ ಹರಸಾಹಸ ಪಡುತ್ತಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಬಿಜೆಪಿ ಸಾಥ್ ನೀಡಿದೆ. ಬಿಜೆಪಿ – ಜೆಡಿಯು ಪಕ್ಷಗಳು ಸಮನಾಗಿ ಸೀಟು ಹಂಚಿಕೊಂಡು ಅಖಾಡಕ್ಕಿಳಿದಿವೆ. ಆರ್ ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಮೈತ್ರಿ ಒಟ್ಟಾಗಿ ಹೋರಾಟಕ್ಕಿಳಿದೆ. ಇದನ್ನೂ ಓದಿ: ಬಿಹಾರ ಚುನಾವಣೆ- ಮತದಾನದಲ್ಲಿ ಹೆಣ್ಮಕ್ಳೇ ಸ್ಟ್ರಾಂಗು

     

    ಮೊದಲ ಹಂತದ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಚುನಾವಣಾ ಪೂರ್ವ ನಡೆಸಿದ ಸಮೀಕ್ಷೆ ಹೊರಬಿದ್ದಿದೆ. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಯು ಮೈತ್ರಿಕೂಟ ಸರಳ ಬಹುಮತ ಪಡೆಯಲಿದೆ ಎಂದು ಎಬಿಪಿ-ಸಿವೋಟರ್ ನಡೆಸಿದ ಸಮೀಕ್ಷೆ ತಿಳಿಸಿದೆ. 243 ವಿಧಾನಸಭಾ ಸ್ಥಾನಗಳ ಪೈಕಿ, ಆರ್‍ಜೆಡಿ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಮಹಾಮೈತ್ರಿ 77-98 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದಿಂದ ದೂರ ಉಳಿಯಲಿದೆ ಎಂದು ಭವಿಷ್ಯ ನುಡಿದಿದೆ. ಎನ್ ಡಿಎ 135-159 ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಹೇಳಿದೆ. ಇದನ್ನೂ ಓದಿ: ರಾಮ ಮಂದಿರಕ್ಕಿಂತ ದೊಡ್ಡದಾದ ಸೀತಾ ಮಂದಿರ ನಿರ್ಮಿಸುತ್ತೇವೆ – ಎಲ್‌ಜೆಪಿ ಘೋಷಣೆ

    ಎನ್‍ಡಿಎಗೆ ಶೇ.43, ಮಹಾಮೈತ್ರಿಕೂಟಕ್ಕೆ ಶೇ.35, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಶೇ.4 ರಷ್ಟು, ಇತರರು ಶೇ.18ರಷ್ಟು ಮತಗಳನ್ನು ಗಳಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಬಿಜೆಪಿ 73 ರಿಂದ 81 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಜೆಡಿಯು 59 ರಿಂದ 67 ಸ್ಥಾನಗಳು ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ಮೂರರಿಂದ ಏಳು ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆರ್ ಜೆಡಿ 56 ರಿಂದ 64 ಸ್ಥಾನಗಳು, ಕಾಂಗ್ರೆಸ್ 12 ರಿಂದ 20 ಸ್ಥಾನಗಳನ್ನು ಪಡೆಯಲಿದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ತಿಳಿಸಿದೆ. ಇದನ್ನೂ ಓದಿ: ಗುಂಡಿಟ್ಟು ಬಿಹಾರದ ಪಕ್ಷೇತರ ಅಭ್ಯರ್ಥಿಯನ್ನು ಹತ್ಯೆಗೈದ ದುಷ್ಕರ್ಮಿಗಳು