Tag: ಬಿಹಾರ್

  • ಮುಂದಿನ ಬಾರಿ ರಾಹುಲ್ ಗಾಂಧಿಯನ್ನ ಪ್ರಧಾನಿ ಮಾಡುತ್ತೇವೆ – ಮತದಾರ ಅಧಿಕಾರ್ ರ‍್ಯಾಲಿಯಲ್ಲಿ ತೇಜಸ್ವಿ ಯಾದವ್ ಘೋಷಣೆ

    ಮುಂದಿನ ಬಾರಿ ರಾಹುಲ್ ಗಾಂಧಿಯನ್ನ ಪ್ರಧಾನಿ ಮಾಡುತ್ತೇವೆ – ಮತದಾರ ಅಧಿಕಾರ್ ರ‍್ಯಾಲಿಯಲ್ಲಿ ತೇಜಸ್ವಿ ಯಾದವ್ ಘೋಷಣೆ

    ಪಾಟ್ನಾ: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ರಾಹುಲ್ ಗಾಂಧಿ (Rahul Gandhi) ಅವರನ್ನು ಪ್ರಧಾನಿಯನ್ನಾಗಿ ಮಾಡಲು ವಿರೋಧ ಪಕ್ಷಗಳು ಕೆಲಸ ಮಾಡುತ್ತವೆ ಎಂದು ಆರ್‌ಜೆಡಿ ನಾಯಕ, ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಸುಳಿವು ನೀಡಿದ್ದಾರೆ.

    ಬಿಹಾರದ (Bihar) ನವಾಡದಲ್ಲಿ ನಡೆದ ‘ಮತದಾರ ಅಧಿಕಾರ್’ ರ‍್ಯಾಲಿಯಲ್ಲಿ (Voter Adhikar Rally) ಮಾತನಾಡಿದ ಅವರು, ಮುಂದಿನ ಬಾರಿ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೇ ಕೈ ಸಂಸದ ಸಸಿಕಾಂತ್‌ ಸೆಂಥಿಲ್: ಜನಾರ್ದನ ರೆಡ್ಡಿ

    ಬಿಹಾರದ ಜನರನ್ನು ಮೂರ್ಖರನ್ನಾಗಿಸಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆಯನ್ನು ರಚಿಸಿಕೊಂಡಿವೆ. ಮತದಾನದ ಹಕ್ಕನ್ನು ಬಿಜೆಪಿ ಕಸಿದುಕೊಳ್ಳಲು ಬಯಸುತ್ತಿದೆ, ನಾವು ಬಿಹಾರಿಗಳು. ಒಬ್ಬ ಬಿಹಾರಿ ಎಲ್ಲರಿಗಿಂತ ಮೇಲು. ನಾವು ಚುನಾವಣೆಗಳನ್ನು ಖೈನಿನಂತೆ (ತಂಬಾಕು ಜಗಿಯುವುದು) ಪರಿಗಣಿಸುತ್ತೇವೆ. ನಾವು ಅದನ್ನು ಉಜ್ಜಿ ಎಸೆಯುತ್ತೇವೆ ಎಂದರು. ಇದನ್ನೂ ಓದಿ: ನಿಗದಿತ ಸಮಯದಲ್ಲಿ ಕಲಬುರಗಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ: ಶಿವಾನಂದ ಪಾಟೀಲ್

    ಚುನಾವಣಾ ಅಯೋಗ ಬಿಜೆಪಿಯ ಆದೇಶದಂತೆ ಜೀವಂತ ಮತದಾರರ ಹೆಸರುಗಳನ್ನು ಅಳಿಸಿಹಾಕಿ ಅವರನ್ನು ಸತ್ತಿದ್ದಾರೆಂದು ಘೋಷಿಸುತ್ತಿದೆ. ಚುನಾವಣಾ ಆಯೋಗ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ 65 ಲಕ್ಷಕ್ಕೂ ಹೆಚ್ಚು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ತೋರಿಸಲಾಗಿದೆ. ಎಸ್‌ಐಆರ್ ಮತಗಳ ದರೋಡೆಕೋರ. ನಾವು ಹಾಗೆ ಆಗಲು ಬಿಡುವುದಿಲ್ಲ. ಹಳೆಯ ಮತ್ತು ದುರ್ಬಲ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಕಿತ್ತೊಗೆಯುವಂತೆ ಆರ್‌ಜೆಡಿ ನಾಯಕ ಯುವಕರನ್ನು ಒತ್ತಾಯಿಸಿದರು. ಇದನ್ನೂ ಓದಿ: ಮತಗಳ್ಳತನ ಆರೋಪ; ಆಯೋಗದ ಕ್ರಮವನ್ನು ಸದನ ಖಂಡಿಸಬೇಕು: ಬಿ.ಕೆ ಹರಿಪ್ರಸಾದ್

  • ಮತಗಳ್ಳತನ ವಿರುದ್ಧ ಬಿಹಾರದಿಂದಲೇ ನೇರ ಹೋರಾಟ: ರಾಹುಲ್ ಗಾಂಧಿ ಘೋಷಣೆ

    ಮತಗಳ್ಳತನ ವಿರುದ್ಧ ಬಿಹಾರದಿಂದಲೇ ನೇರ ಹೋರಾಟ: ರಾಹುಲ್ ಗಾಂಧಿ ಘೋಷಣೆ

    ನವದೆಹಲಿ: ಬಿಹಾರದಲ್ಲಿ (Bihar) ಆಗಸ್ಟ್ 17ರಿಂದ ಆರಂಭಗೊಳ್ಳುವ ‘ಮತದಾರ ಅಧಿಕಾರ ಯಾತ್ರೆ’ ಮೂಲಕ ದೇಶವ್ಯಾಪಿ ‘ಮತದಾನ ಕಳ್ಳತನ’ ವಿರುದ್ಧ ನೇರ ಹೋರಾಟಕ್ಕೆ ಇಳಿಯುವುದಾಗಿ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಘೋಷಿಸಿದರು.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ಇದು ಕೇವಲ ಚುನಾವಣೆಯ ವಿಷಯವಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ‘ಒಬ್ಬ ವ್ಯಕ್ತಿ, ಒಂದು ಮತ’ ತತ್ವವನ್ನು ರಕ್ಷಿಸಲು ನಡೆಯುತ್ತಿರುವ ನಿರ್ಣಾಯಕ ಹೋರಾಟ. ದೇಶಾದ್ಯಂತ ಮತದಾರರ ಪಟ್ಟಿಯಲ್ಲಿನ ಶುದ್ಧೀಕರಣವೇ ಈ ಅಭಿಯಾನದ ಪ್ರಮುಖ ಗುರಿ. ಯುವಕರು, ಕಾರ್ಮಿಕರು, ರೈತರು ಸೇರಿದಂತೆ ದೇಶದ ಪ್ರತಿಯೊಬ್ಬ ನಾಗರೀಕನು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಬಿಹಾರದ ಮಣ್ಣಿನಿಂದ ಪ್ರಾರಂಭವಾಗುವ ಈ ಯಾತ್ರೆ ಸೆಪ್ಟೆಂಬರ್ 1ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯುವ ಮಹಾ ರ‍್ಯಾಲಿಯೊಂದಿಗೆ ಮುಕ್ತಾಯಗೊಳ್ಳಲಿದೆ. ‘ಈ ಬಾರಿ, ಮತ ಕಳ್ಳರ ಸೋಲು ಜನರ ಮತ್ತು ಸಂವಿಧಾನದ ಗೆಲುವು’ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ನಟ ದರ್ಶನ್‌ ಜಾಮೀನು ರದ್ದು – ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿದೆ?

    ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಿನಲ್ಲಿ ನಡೆಯುತ್ತಿರುವ ಮತದಾನ ಹಕ್ಕು ಕಸಿಯುತ್ತಿರುವ ಸಂವಿಧಾನ ವಿರೋಧಿ ನಡೆಯ ವಿರುದ್ಧ ಇಂಡಿಯಾ ಮೈತ್ರಿಕೂಟದ ನಾಯಕರು ರಾಜ್ಯಾದ್ಯಂತ ‘ಮತದಾರ ಅಧಿಕಾರ ಯಾತ್ರೆ’ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಚಶೋತಿಯಲ್ಲಿ ಮೇಘಸ್ಫೋಟ – ದಿಢೀರ್‌ ಪ್ರವಾಹಕ್ಕೆ 10 ಸಾವು

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಉಸ್ತುವಾರಿ ಮತ್ತು ಪಕ್ಷದ ಸಂಘಟನೆಗಳ ಸಭೆಯ ನಂತರ, ಮೂರು ಹಂತಗಳ ವಿಶೇಷ ಅಭಿಯಾನವನ್ನು ಘೋಷಿಸಲಾಗಿದೆ. ಅದರಂತೆ ಆಗಸ್ಟ್ 14ರಂದು ಎಲ್ಲಾ ಜಿಲ್ಲೆಗಳಲ್ಲಿ ‘ಲೋಕತಂತ್ರ ಬಚಾವೋ ಮಶಾಲ್ ಮೆರವಣಿಗೆ’ ನಡೆಯಲಿದೆ. ಆಗಸ್ಟ್ 22ರಿಂದ ಸೆಪ್ಟೆಂಬರ್ 7ರವರೆಗೆ ರಾಜ್ಯ ಕೇಂದ್ರ ಕಚೇರಿಗಳಲ್ಲಿ ‘ವೋಟ್ ಚೋರ್, ಗಡ್ಡಿ ಚೋರ್’ ರ‍್ಯಾಲಿಗಳು ನಡೆಯಲಿದೆ. ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರವರೆಗೆ ಮತದಾನ ಹಕ್ಕು ರಕ್ಷಣೆಗೆ ದೇಶವ್ಯಾಪಿ ಸಹಿ ಅಭಿಯಾನ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಎನ್‌ಎಸ್‌ಯುಐ ಉಸ್ತುವಾರಿ ಕನಯ್ಯಾ ಕುಮಾರ್ ವಿವರಿಸಿದರು. ಇದನ್ನೂ ಓದಿ: ರಾಜಣ್ಣ ವಜಾ ಹೈಕಮಾಂಡ್ ತೀರ್ಮಾನ, ಇದರಲ್ಲಿ ರಾಜ್ಯ ನಾಯಕರ ಪಾತ್ರ ಇಲ್ಲ: ಇಕ್ಬಾಲ್ ಹುಸೇನ್

    ಕಳೆದ ವಾರ, ರಾಹುಲ್ ಗಾಂಧಿ 2024ರ ಲೋಕಸಭಾ ಚುನಾವಣೆಯ ವೇಳೆ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. ಪ್ರಸ್ತುತ, ಸಂಸತ್ತಿನ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳು ಈ ವಿಷಯದ ಮೇಲೆ ಚರ್ಚೆ ನಡೆಸುವಂತೆ ಒತ್ತಾಯಿಸುತ್ತಿದ್ದು, ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಆಯೋಗವು ಮತದಾರರ ಹಕ್ಕು ಕಸಿಯುತ್ತಿವೆ ಎಂದು ಆರೋಪಿಸುತ್ತಿವೆ. ಇದನ್ನೂ ಓದಿ: ದೇವರ ಮೇಲೆ ನಂಬಿಕೆ ಇಡಬೇಕು – ಜೈಲು ಸೇರುವ ಮುನ್ನ ಪವಿತ್ರಾ ಮತ್ತೊಂದು ಪೋಸ್ಟ್

  • ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು

    ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ – ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟ ಆರೋಪಿಗಳು

    ಪಾಟ್ನಾ: ಮಾಟಮಂತ್ರದ (Black magic) ಹೆಸರಿನಲ್ಲಿ ವ್ಯಕ್ತಿಯೊಬ್ಬರ ಶಿರಶ್ಛೇದನ ಮಾಡಿ ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟು ಹಾಕಿರುವ ಘಟನೆ ಬಿಹಾರದ (Bihar) ಔರಂಗಾಬಾದ್‌ನಲ್ಲಿ (Aurangabad) ನಡೆದಿದೆ.

    ಮೃತ ವ್ಯಕ್ತಿಯನ್ನು ಯುಗುಲ್ ಯಾದಲ್(65) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳಾದ ಮಾಂತ್ರಿಕನ ಸಂಬಂಧಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿ ರಾಮಶಿಶ್ ರಿಕ್ಯಾಸನ್ ಎಂಬ ಮಾಂತ್ರಿಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಡ್‌ರೂಮ್ ಫೋಟೋ ಹಂಚಿಕೊಂಡ ‘ಗಿಲ್ಲಿ’ ನಟಿ ರಕುಲ್

    ಮಾ.13ರಂದು ಗುಲಾಬ್ ಬಿಘಾ ಗ್ರಾಮದ ನಿವಾಸಿ ಯುಗುಲ್ ಯಾದವ್ ನಾಪತ್ತೆಯಾಗಿದ್ದಾರೆ ಎಂದು ದೂರು ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ಅವರನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ತನಿಖೆಯ ಸಮಯದಲ್ಲಿ, ಬಂಗೇರ್ ಗ್ರಾಮದಲ್ಲಿ ಹೋಳಿಕಾ ದಹನ ಬೆಂಕಿಯ ಚಿತಾಭಸ್ಮದಿಂದ ಮಾನವ ಮೂಳೆಗಳು ಪತ್ತೆಯಾಗಿವೆ ಎಂದು ಔರಂಗಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅಂಬರೀಶ್ ರಾಹುಲ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಭರ್ಜರಿ ಜಯಗಳಿಸಿದ ಆರ್‌ಸಿಬಿ ಹಾಡಿಹೊಗಳಿದ ಡಿವಿಲಿಯರ್ಸ್‌

    ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದಾಗ ಸುಟ್ಟ ಮಾನವ ಮೂಳೆಗಳು ಮತ್ತು ಯುಗುಲ್ ಅವರ ಚಪ್ಪಲಿಗಳು ಕಂಡುಬಂದಿವೆ. ತಕ್ಷಣವೇ ಶ್ವಾನ ದಳವನ್ನು ನಿಯೋಜಿಸಲಾಯಿತು. ಶ್ವಾನವು ತನಿಖಾಧಿಕಾರಿಗಳನ್ನು ಮಾಂತ್ರಿಕ ರಾಮಶಿಶ್ ರಿಕ್ಯಾಸನ್ ಮನೆಗೆ ಕರೆದೊಯ್ಯಿತು. ರಾಮಶಿಶ್ ಮನೆಯಲ್ಲಿ ಇಲ್ಲದಿದ್ದಾಗ, ಈ ಕೃತ್ಯದಲ್ಲಿ ಆತನ ಸಂಬಂಧಿ ಧರ್ಮೇಂದ್ರ ಭಾಗಿಯಾಗಿರುವ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಇದನ್ನೂ ಓದಿ: ಸಿಎಸ್‌ಕೆ ಸೋಲಿಸಿ ಬೆಂಗಳೂರಿಗೆ ಆರ್‌ಸಿಬಿ ಟೀಂ ಗ್ರ್ಯಾಂಡ್‌ ಎಂಟ್ರಿ – ಏರ್‌ಪೋರ್ಟ್‌ನಲ್ಲಿ ಫ್ಯಾನ್ಸ್ ಜಯಘೋಷ

    ವಿಚಾರಣೆಯ ಸಮಯದಲ್ಲಿ, ಧರ್ಮೇಂದ್ರ ತಾನು ಮತ್ತು ಇತರರು ಮಾಟಮಂತ್ರದ ಭಾಗವಾಗಿ ಯುಗಲ್‌ನನ್ನು ಅಪಹರಿಸಿ ಶಿರಚ್ಛೇದ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಹೋಳಿಕಾ ದಹನ್ ಬೆಂಕಿಯಲ್ಲಿ ಯುಗಲ್ ಮುಂಡವನ್ನು ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಹೋಳಿ ಹಬ್ಬದ ದಿನ ಮುಸ್ಲಿಮರು ಹೊರಗೆ ಬರಬೇಡಿ.. ಮನೆಯಲ್ಲೇ ಇರಿ: ಬಿಜೆಪಿ ಶಾಸಕ ಠಾಕೂರ್‌

    ಹೋಳಿ ಹಬ್ಬದ ದಿನ ಮುಸ್ಲಿಮರು ಹೊರಗೆ ಬರಬೇಡಿ.. ಮನೆಯಲ್ಲೇ ಇರಿ: ಬಿಜೆಪಿ ಶಾಸಕ ಠಾಕೂರ್‌

    ಪಾಟ್ನಾ: ಹೋಳಿ (Holi) ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮನೆಯೊಳಗೆ ಇರುವಂತೆ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ತಿಳಿಸಿದ್ದಾರೆ. ಈ ವರ್ಷದ ಹೋಳಿ ಹಬ್ಬವು ಮಾರ್ಚ್ 14 ರಂದು ಬರುತ್ತದೆ. ಇದು ರಂಜಾನ್ ತಿಂಗಳ ಶುಕ್ರವಾರದ ಪ್ರಾರ್ಥನೆ ದಿನವೇ ನಡೆಯಲಿದೆ.

    ಮಧುಬನಿ ಜಿಲ್ಲೆಯ ಬಿಸ್ಫಿಯ ಶಾಸಕರಾಗಿರುವ ಹರಿಭೂಷಣ್ ಠಾಕೂರ್ ಮಾತನಾಡಿ, ಈ ಬಾರಿ ಹೋಳಿ ಶುಕ್ರವಾರ ದಿನ ಬರುತ್ತದೆ. ಹೋಳಿ ಸಮಯದಲ್ಲಿ ಮನೆಯೊಳಗೆ ಇರಿ. ಅದನ್ನು ಯಾವುದೇ ಅಡೆತಡೆಯಿಲ್ಲದೆ ಆಚರಿಸೋಣ ಎಂದು ನಾನು ಅವರಿಗೆ ಮನವಿ ಮಾಡುತ್ತೇನೆ. 52 ಶುಕ್ರವಾರಗಳಿವೆ. ಅವರು (ಮುಸ್ಲಿಮರು) ಹೋಳಿ ದಿನ ಮಾತ್ರ ಹೊರಗೆ ಬರುವುದನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.

    ಹೋಳಿಯಂದು ಹೊರಗೆ ಹೋದಾಗ ಮುಸ್ಲಿಮರ ಮೇಲೆ ಯಾರಾದರು ಬಣ್ಣ ಹಚ್ಚಿದರೆ ನೊಂದುಕೊಳ್ಳಬೇಡಿ ಎಂದು ಶಾಸಕ ತಿಳಿಸಿದ್ದಾರೆ.

    ಮುಸ್ಲಿಮರು ಅಬಿರ್ ಮತ್ತು ಗುಲಾಲ್ ಮಾರಾಟ ಮಾಡುವ ಮೂಲಕ ಹಣ ಗಳಿಸುತ್ತಾರೆ. ಆದರೆ ಹೋಳಿಯಂದು ತಮ್ಮ ಮೇಲೆ ಬಣ್ಣ ಎರಚುವುದರಿಂದ ದೂರವಿರಲು ಬಯಸುತ್ತಾರೆ. ಕೋಮು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಪರಸ್ಪರರ ಧರ್ಮ ಮತ್ತು ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.

    ಶಾಸಕರ ಹೇಳಿಕೆಯನ್ನು ಟೀಕಿಸಿದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್, ಬಿಜೆಪಿ ವಿಭಜಕ ರಾಜಕೀಯ ಮಾಡುತ್ತಿದೆ. ಬಿಜೆಪಿ ಕೋಮು ಉದ್ವಿಗ್ನತೆಗೆ ಕಾರಣವಾಗುವ ಹೇಳಿಕೆಗಳನ್ನು ನೀಡಲು ಅವಕಾಶಗಳನ್ನು ಹುಡುಕುತ್ತದೆ ಎಂದು ಆರೋಪಿಸಿದ್ದಾರೆ.

    ಹೋಳಿ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ಮನೆಯೊಳಗೆ ಇರುವಂತೆ ಸಂಭಾಲ್ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಸಲಹೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಂಬಲಿಸಿದ್ದರು. ಅದರ ಬೆನ್ನಲ್ಲೇ, ಬಿಹಾರ ಶಾಸಕರೂ ಅದೇ ರೀತಿ ಹೇಳಿಕೆ ನೀಡಿದ್ದಾರೆ.

  • ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದು ಜೆಡಿಯು ಅಭ್ಯರ್ಥಿ ಪರ ಮಾಜಿ ಶಾಸಕ ರೋಡ್‌ಶೋ

    ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದು ಜೆಡಿಯು ಅಭ್ಯರ್ಥಿ ಪರ ಮಾಜಿ ಶಾಸಕ ರೋಡ್‌ಶೋ

    ಪಾಟ್ನಾ: ಪೆರೋಲ್‌ ಮೇಲೆ ಜೈಲಿನಿಂದ ಹೊರಬಂದ ಮಾಜಿ ಶಾಸಕರೊಬ್ಬರು ಜೆಡಿಯು (JDU) ಅಭ್ಯರ್ಥಿ ಪರವಾಗಿ ಮೆಗಾ ರೋಡ್‌ಶೋನಲ್ಲಿ ಭಾಗಿಯಾಗಿ ಪ್ರಚಾರ ನಡೆಸಿದ್ದಾರೆ.

    ಛೋಟೆ ಸರ್ಕಾರ್ ಖ್ಯಾತಿ ಗಳಿಸಿರುವ ಅನಂತ್ ಕುಮಾರ್ ಸಿಂಗ್, ಮೊಕಾಮಾದಿಂದ ಐದು ಬಾರಿ ಶಾಸಕರಾಗಿದ್ದರು. ಇಂದು ಬೆಳಗ್ಗೆ ಪಾಟ್ನಾದ ಬ್ಯೂರ್ ಸೆಂಟ್ರಲ್ ಜೈಲಿನಿಂದ 15 ದಿನ ಪೆರೋಲ್‌ ಮೇಲೆ ಹೊರಬಂದಿದ್ದಾರೆ. ಜೈಲಿಂದ ಹೊರಬಂದ ಕೆಲವೇ ಹೊತ್ತನಲ್ಲಿ ಮಾಜಿ ಶಾಸಕ ಬಿಹಾರದಲ್ಲಿ ನಿತೀಶ್‌ ಕುಮಾರ್‌ (Nitish Kumar) ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿ ಪರ ರೋಡ್‌ಶೋನಲ್ಲಿ ಭಾಗಿಯಾಗಿದ್ದಾರೆ.‌ ಇದನ್ನೂ ಓದಿ: ಕಾಂಗ್ರೆಸ್ ಬೆಂಕಿಯೊಂದಿಗೆ ಆಟವಾಡುತ್ತಿದೆ: ರಾಜನಾಥ್ ಸಿಂಗ್

    ಅಪರಾಧಿ ಅನಂತ್‌ ಕುಮಾರ್‌ ಸಿಂಗ್‌ಗೆ ಜೈಲಿನ ಹೊರಗಡೆ ಜನರಿಂದ ಭವ್ಯ ಸ್ವಾಗತವೇ ಸಿಕ್ಕಿತು. ಅಪಾರ ಸಂಖ್ಯೆ ಜನ ಸೇರಿದ್ದರು. ಹೊರಬರುತ್ತಿದ್ದಂತೆ ಸಿಂಗ್‌ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಬ್ಯಾಂಡ್‌ಸೆಟ್‌ ಬಾರಿಸಿ ಸ್ವಾಗತಿಸಲಾಯಿತು. ನಂತರ ಬಾರ್ಹ್ ವಿಧಾನಸಭಾ ಕ್ಷೇತ್ರದ ಸಬ್ನೀಮಾ ಗ್ರಾಮದಿಂದ ರೋಡ್‌ಶೋ ಆರಂಭಿಸಲಾಯಿತು. ಮುಂಗರ್‌ನ ಜೆಡಿಯು ಅಭ್ಯರ್ಥಿ ಲಾಲನ್ ಸಿಂಗ್‌ಗೆ ಬೆಂಬಲ ವ್ಯಕ್ತಪಡಿಸುವಂತೆ ಪ್ರಚಾರ ನಡೆಸಲಾಯಿತು.

    2020 ರಲ್ಲಿ ಆರ್‌ಜೆಡಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ಅನಂತ್ ಸಿಂಗ್, ಶಸ್ತ್ರಾಸ್ತ್ರ ಪ್ರಕರಣದಲ್ಲಿ ದೋಷಿಯಾಗಿದ್ದರು. 10 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಹಿಂದೂ ಸಂಘಟನೆ ನಾಯಕನ ಹತ್ಯೆಗೆ ಸಂಚು – ಗುಜರಾತ್‌ನಲ್ಲಿ ಮುಸ್ಲಿಂ ಧರ್ಮಗುರು ಅರೆಸ್ಟ್‌

  • ನಿತೀಶ್ ಸಿಎಂ ಆದ ಬಳಿಕ ಮೊದಲ ಬಾರಿ ಭಾರತ್ ಜೋಡೋ ಯಾತ್ರೆ ಬಿಹಾರಕ್ಕೆ ಎಂಟ್ರಿ

    ನಿತೀಶ್ ಸಿಎಂ ಆದ ಬಳಿಕ ಮೊದಲ ಬಾರಿ ಭಾರತ್ ಜೋಡೋ ಯಾತ್ರೆ ಬಿಹಾರಕ್ಕೆ ಎಂಟ್ರಿ

    ಪಾಟ್ನಾ: ನಿತೀಶ್ ಕುಮಾರ್ (Nitish Kumar)  ಯೂ-ಟರ್ನ್ ಹೊಡೆದು ಬಿಹಾರದ (Bihar)  ಸಿಎಂ ಪಟ್ಟ ಅಲಂಕರಿಸಿದ ಬಳಿಕ ಕಾಂಗ್ರೆಸ್ ನಾಯಕರ ಭಾರತ್ ಜೋಡೋ ಯಾತ್ರೆ (Bharath Jodo Yatra) ಮೊದಲ ಬಾರಿಗೆ ಎಂಟ್ರಿ ಕೊಡಲಿದೆ.

    ಭಾನುವಾರವಷ್ಟೇ ನಿತೀಶ್ ಕುಮಾರ್ ಬಿಜೆಪಿ ನೇತೃತ್ವದ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‌ಡಿಎ)ಗೆ ಮರಳಿ ಸಿಎಂ ಆದರು. ಇದಾದ ಬಳಿಕ ಅಂದರೆ ಇಂದು ಅಥವಾ ನಾಳೆ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆ ಬಿಹಾರಕ್ಕೆ ಪ್ರವೇಶಿಸಲು ನಿರ್ಧರಿಸಿದೆ. ಇದನ್ನೂ ಓದಿ: ಇನ್ನೊಂದೇ ವಾರದಲ್ಲಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ -‌ ಬಿಜೆಪಿ ಸಚಿವರ ಗ್ಯಾರಂಟಿ

    2020ರ ವಿಧಾನಸಭಾ ಚುನಾವಣಾ ಪ್ರಚಾರದ ನಂತರ ರಾಹುಲ್ ಗಾಂದಿಯವರು ಈ ರಾಜ್ಯಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಲಿದ್ದಾರೆ. ಮುಸ್ಲಿಮರ ಪ್ರಾಬಲ್ಯ ಹೆಚ್ಚಿರುವ ಬಿಹಾರ್‌ದ ಕೀಶನ್ಗಂಜ್‌ನಿಂದ ಯಾತ್ರೆ ಪ್ರಾರಂಭವಾಗಲಿದೆ. ಪಕ್ಕದ ಜಿಲ್ಲೆಯಾಗಿರುವ ಪೂರ್ನಿಯಾದಲ್ಲಿ ದೊಡ್ಡ ರ‍್ಯಾಲಿಯನ್ನು ಕೈಗೊಂಡ ನಂತರ ರಾಹುಲ್ ಗಾಂಧಿ ಸಾರ್ವಜನಿಕರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಲಿದ್ದಾರೆ. ನಂತರ ಕತಿಹಾರ್‌ನಲ್ಲಿ ರ‍್ಯಾಲಿ ಮುಂದುವರಿಯಲ್ಲಿದೆ. ಇದನ್ನೂ ಓದಿ: I am a Hindu, ಆದ್ರೆ ಬಿಜೆಪಿಯವರು ಚುನಾವಣೆಗೋಸ್ಕರ ಪ್ರಚೋದನೆ ಕೊಡ್ತಿದ್ದಾರೆ: ಸಿಎಂ ಸಿಡಿಮಿಡಿ

    ಮೂರು ದಿನಗಳಲ್ಲಿ ಬಿಹಾರದ ನಾಲ್ಕು ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದ್ದು, ರಾಹುಲ್ ಗಾಂಧಿ ಗುರುವಾರ (ಫೆ.1) ಅರಾರಿಯಾ ಜಿಲ್ಲೆಯ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ. ಕೆಲವು ದಿನಗಳು ಜಾರ್ಖಂಡ್ ಮೂಲಕ ಬಿಹಾರಕ್ಕೆ ಹಿಂದಿರುಗುತ್ತಾರೆ ಎನ್ನಲಾಗಿದೆ. ಇದನ್ನೂ ಓದಿ: ಪರೀಕ್ಷೆ ಆತಂಕ ಕಾಡ್ತಿದೆಯಾ? – ವಿದ್ಯಾರ್ಥಿಗಳಿಗೆ ಇಲ್ಲಿದೆ ಪ್ರಧಾನಿ ಮೋದಿಯ ಟಾಪ್‌-10 ಟಿಪ್ಸ್!

    ಆರ್‌ಜೆಡಿ ಮುಖ್ಯಸ್ಥರಾದ ಲಾಲು ಯಾದವ್ ಜ.31 ರಂದು ಪೂರ್ನಿಯಾ ಅಥವಾ ಕತಿಹಾರ್‌ನಲ್ಲಿ ರ‍್ಯಾಲಿಗೆ ಬರುವ ಸಾಧ್ಯತೆಗಳಿವೆ. ಜೊತೆಗೆ ಸಿಪಿಐ(ಎಂಎಲ್) ಎಲ್‌ನ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ವಾಚಾರ್ಯ ಅವರನ್ನೂ ಪೂರ್ನಿಯಾದಲ್ಲಿ ನಡೆಯುವ ರ‍್ಯಾಲಿಗೆ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ: ಹೆಚ್‌ಡಿಕೆ ವಾಗ್ದಾಳಿ

    ಭಾರತ್ (ಇಂಡಿಯಾ) ಬ್ಲಾಕ್ ರಚನೆಗೆ ಕಾರಣವಾದ ವಿವಿಧ ವಿರೋಧ ಪಕ್ಷಗಳನ್ನು ಒಟ್ಟು ಗೂಡಿಸುವಲ್ಲಿ ನಿತೀಶ್ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ರಾಹುಲ್ ಗಾಂಧಿಯೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂಬ ನೀರಿಕ್ಷೆಯಿತ್ತು. ಆದರೆ ಈಗ ಅವರು ರಾಹುಲ್ ಗಾಂಧಿಗೆ ಶಾಕ್ ನೀಡಿದ್ದಾರೆ. ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ಭುಗಿಲೆದ್ದ ಆಕ್ರೋಶ – ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರೀ ಹೈಡ್ರಾಮಾ

  • ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ

    ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ

    ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ (Karpoori Thakur) ಅವರಿಗೆ ಮಂಗಳವಾರ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಗೌರವವಾದ ಭಾರತ ರತ್ನ (Bharat Ratna) ಪ್ರದಾನ ಮಾಡಿದರು.

    ಕರ್ಪೂರಿ ಠಾಕೂರ್ 1988 ರ ಫೆಬ್ರವರಿ 17 ರಂದು ನಿಧನರಾದರು. ಅವರ ಮರಣದ 35 ವರ್ಷಗಳ ನಂತರ ಪ್ರಶಸ್ತಿ ನೀಡಲಾಗಿದೆ. ಇದನ್ನೂ ಓದಿ: Bharat Jodo Nyay Yatra: ಅಸ್ಸಾಂನಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ – ಕೈ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ

    ರಾಜ್ಯದಲ್ಲಿ ಜನನಾಯಕ ಎಂದೇ ಖ್ಯಾತರಾಗಿದ್ದ ಕರ್ಪೂರಿ ಠಾಕೂರ್ ಅವರು ಅಲ್ಪಾವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಡಿಸೆಂಬರ್ 1970 ರಿಂದ ಜೂನ್ 1971 ರವರೆಗೆ ಮತ್ತು ಡಿಸೆಂಬರ್ 1977 ರಿಂದ ಏಪ್ರಿಲ್ 1979 ರ ವರೆಗೆ ಸಿಎಂ ಆಗಿದ್ದರು.

    ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗೆ ಕೇಂದ್ರದ ಮಾನ್ಯತೆ ಸಿಕ್ಕಿದೆ. ಠಾಕೂರ್‌ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು ಎಂಬುದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ದೀರ್ಘಕಾಲದ ಬೇಡಿಕೆಯಾಗಿತ್ತು. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!

  • ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ: ನಿತೀಶ್‌ ಕುಮಾರ್‌ ಬೇಸರ

    ಇಂಡಿಯಾ ಮೈತ್ರಿಕೂಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ: ನಿತೀಶ್‌ ಕುಮಾರ್‌ ಬೇಸರ

    ಪಾಟ್ನಾ: ಐಎನ್‌ಡಿಐಎ (INDIA) ಮೈತ್ರಿಕೂಟ ಯಾವುದೇ ಪ್ರಗತಿ ಕಾಣುತ್ತಿಲ್ಲ. ಕಾಂಗ್ರೆಸ್‌ (Congress) ಪಂಚರಾಜ್ಯ ಚುನಾವಣೆ ಕಡೆಗೆ ಮಾತ್ರ ತನ್ನ ಗಮನ ಕೇಂದ್ರೀಕರಿಸಿದೆ ಎಂದು ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ದೂಷಿಸಿದ್ದಾರೆ.

    ಪಾಟ್ನಾದಲ್ಲಿ ನಡೆದ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಸಿಪಿಐ) ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಈ ವೇಳೆ 2024 ರ ಲೋಕಸಭಾ ಚುನಾವಣೆಯ ತಯಾರಿಯಲ್ಲಿ ಪ್ರಗತಿಯ ಕೊರತೆಗೆ ಕಾಂಗ್ರೆಸ್ ಪಕ್ಷವನ್ನು ದೂಷಿಸಿದರು. ಇದರಿಂದ ಇಂಡಿಯಾ ಬಣದ ಭವಿಷ್ಯದ ಬಗ್ಗೆ ಊಹಾಪೋಹಗಳು ಉಲ್ಬಣಗೊಂಡಿದೆ. ಇದನ್ನೂ ಓದಿ: Breaking: ಲಂಚ ಪಡೆಯುವಾಗಲೇ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ED ಅಧಿಕಾರಿಗಳು ಅರೆಸ್ಟ್‌

    ನಾವು ಅವರೊಂದಿಗೆ (ಕಾಂಗ್ರೆಸ್) ಮಾತನಾಡುತ್ತಿದ್ದೇವೆ. ಇಂಡಿಯಾ ಒಕ್ಕೂಟವನ್ನು ಮುನ್ನಡೆಸುವಂತೆ‌ ಅವರನ್ನು ಪ್ರೇರೇಪಿಸುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಡಿಯಾ ಒಕ್ಕೂಟದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಐದು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹೆಚ್ಚು ಆಸಕ್ತಿ ತೋರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾವು ಕಾಂಗ್ರೆಸ್‌ಗೆ ಪ್ರಮುಖ ಪಾತ್ರವನ್ನು ನೀಡಲು ಒಪ್ಪಿಕೊಂಡಿದ್ದೇವೆ. ಆದರೆ ಅವರು ಪಂಚರಾಜ್ಯ ಚುನಾವಣೆಯ ನಂತರವೇ ಮುಂದಿನ ಸಭೆಯನ್ನು ಕರೆಯುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 7ನೇ ತರಗತಿ ವಿದ್ಯಾರ್ಥಿಯಿಂದ ಕೇರಳ ಸಿಎಂಗೆ ಬೆದರಿಕೆ ಕರೆ

    ಇಂಡಿಯಾ ಮೈತ್ರಿಕೂಟ ಕೊನೆಯ ಸಭೆ ಮುಂಬೈನಲ್ಲಿ ಆ.31 ಹಾಗೂ ಸೆ.1 ರಂದು ನಡೆಯಿತು. ನಂತರ ಮುಂದಿನ ದಿನಾಂಕ ನಿಗದಿಪಡಿಸಲಾಗುವುದು ಎಂದು ಕಾಂಗ್ರೆಸ್‌ ಘೋಷಿಸಿತು. ಮುಂದಿನ ಸಭೆ ದೆಹಲಿಯಲ್ಲಿ ನಡೆಯಬಹುದು ಎಂಬ ಮಾತುಗಳು ಸಹ ಕೇಳಿಬಂದವು. ಆದರೆ ಇದುವರೆಗೂ ಯಾವುದೇ ಸುದ್ದಿ ಹೊರಬಂದಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹಿಂದೂ ಹೆಣ್ಣುಮಕ್ಕಳನ್ನು ಅವಮಾನಿಸಿದ್ರೆ ಕೈ ಕತ್ತರಿಸುತ್ತೇವೆ – ಕೇಂದ್ರ ಸಚಿವ ಚೌಬೆ ವಿವಾದಾತ್ಮಕ ಹೇಳಿಕೆ

    ಹಿಂದೂ ಹೆಣ್ಣುಮಕ್ಕಳನ್ನು ಅವಮಾನಿಸಿದ್ರೆ ಕೈ ಕತ್ತರಿಸುತ್ತೇವೆ – ಕೇಂದ್ರ ಸಚಿವ ಚೌಬೆ ವಿವಾದಾತ್ಮಕ ಹೇಳಿಕೆ

    ಪಾಟ್ನಾ: ನಮ್ಮ ಹಿಂದೂ ಸಮುದಾಯದ ಹೆಣ್ಣುಮಕ್ಕಳನ್ನು ಅವಮಾನಿಸಿದರೆ, ಅವರ ಕೈ ಕತ್ತರಿಸಲಾಗುವುದು ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್‌ ಚೌಬೆ (Ashwini Kumar Choubey) ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

    ಸನಾತನ ಧರ್ಮದ ಹೆಣ್ಣುಮಕ್ಕಳು ಭಾರತದ ಮಕ್ಕಳಿದ್ದಂತೆ. ಹಿಂದೂ ಹೆಣ್ಣುಮಕ್ಕಳ ಘನತೆಯ ಜೊತೆ ಚೆಲ್ಲಾಟವಾಡುವವರ ಕೈ ಕತ್ತರಿಸುತ್ತೇವೆ. ಆರ್‌ಜೆಡಿ ನಾಯಕರು ತಮ್ಮ ಹೆಣ್ಣುಮಕ್ಕಳನ್ನು ಮುಸ್ಲಿಮರಿಗೆ ಮದುವೆ ಮಾಡಿಕೊಡಬಹುದು ಎಂದು ನಂಬಿದ್ದರೆ, ಅದು ಅವರ ಸ್ವಾತಂತ್ರ್ಯ. ಆದರೆ ಭಾರತವು ಹಿಂದೂ ರಾಷ್ಟ್ರವಾಗಿದೆ. ಅದು ಹಾಗೆಯೇ ಉಳಿಯುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೇಳಿಕೆ – ವಿವರ ಪಡೆಯಲು ರಾಗಾ ಮನೆಗೆ ಆಗಮಿಸಿದ ಪೊಲೀಸರು

    ಯಾವುದೇ ಮುಸ್ಲಿಂ ಯುವಕ ಹಿಂದೂ ಸಮುದಾಯದ ಮಗಳನ್ನು ಅಪಹರಿಸಿದರೆ ಅದಕ್ಕೆ ಬಿಜೆಪಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾಲವೇ ಹೇಳುತ್ತದೆ. ಹಿಂದೂ ಸಮುದಾಯದ ಸ್ವಾಭಿಮಾನ ಮತ್ತು ಹೆಮ್ಮೆಗಾಗಿ ಬಿಜೆಪಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ನಾಯಕರು ಯಾರ ಕತ್ತು ಸೀಳಲು ಸಿದ್ಧರಾಗಿದ್ದಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

    ಬಿಜೆಪಿ ನಾಯಕರು ತಮ್ಮ ಹೆಣ್ಣುಮಕ್ಕಳನ್ನು ಮುಸ್ಲಿಮರಿಗೆ ಮದುವೆ ಮಾಡುವ ಬದಲು ಮುಸ್ಲಿಮರಿಂದ ರಕ್ಷಿಸಬೇಕು ಎಂದು ಹೇಳಿದ್ದ ಆರ್‌ಜೆಡಿಯ ಭಾಯಿ ವೀರೇಂದ್ರ ಅವರಿಗೆ ಚೌಬೆ ಟಾಂಗ್‌ ಕೊಟ್ಟಿದ್ದಾರೆ. ವೀರೇಂದ್ರ ಹೇಳಿಕೆಗೆ ಬಿಜೆಪಿ ಎಂಎಲ್‌ಸಿ ಸಂತೋಷ್ ಸಿಂಗ್ ಕೂಡ ತಿರುಗೇಟು ನೀಡಿದ್ದರು. ಆರ್‌ಜೆಡಿ ನಾಯಕರು ಮಾನಸಿಕವಾಗಿ ದಿವಾಳಿಯಾಗಿದ್ದಾರೆ. ಹಿಂದೂ ಹೆಣ್ಣುಮಕ್ಕಳನ್ನು ತಪ್ಪು ಉದ್ದೇಶದಿಂದ ನೋಡುವ ಯಾವುದೇ ಮುಸ್ಲಿಂ ಯುವಕನ ಬೆರಳುಗಳನ್ನು ಕತ್ತರಿಸುತ್ತೇನೆ ಎಂದು ಅವರು ನೇರವಾಗಿ ಸಮುದಾಯವೊಂದನ್ನು ಗುರಿಯಾಗಿಸಿ ವಿವಾದಿತ ಹೇಳಿಕೆ ನೀಡಿದ್ದರು. ಇದನ್ನೂ ಓದಿ: ದೆಹಲಿ ಮೆಟ್ರೋ ಸೈಟ್ ಬಳಿ ಚೀಲದಲ್ಲಿತ್ತು ಮಹಿಳೆಯ ತಲೆ, ದೇಹದ ಇತರ ಭಾಗಗಳು

  • ಹೀಗೊಂದು ಪ್ರೇಮ ಕಥೆ? – ಅವಳ ಗಂಡನನ್ನು ಇವಳು, ಇವಳ ಪತಿಯನ್ನು ಅವಳು ಮದುವೆಯಾದ್ರು!

    ಹೀಗೊಂದು ಪ್ರೇಮ ಕಥೆ? – ಅವಳ ಗಂಡನನ್ನು ಇವಳು, ಇವಳ ಪತಿಯನ್ನು ಅವಳು ಮದುವೆಯಾದ್ರು!

    ಪಾಟ್ನಾ: ಬಿಹಾರ್‌ನಲ್ಲಿ (Bihar) ವಿಲಕ್ಷಣ ಪ್ರೇಮ ಕಥೆಯೊಂದು ವರದಿಯಾಗಿದೆ. ಅವನ ಹೆಂಡತಿಯನ್ನು ಇವನು ಮತ್ತು ಇವನ ಹೆಂಡತಿಯನ್ನು ಅವನು ಮದುವೆಯಾಗಿದ್ದಾರೆ.

    ಹೌದು, ಬಿಹಾರ್‌ನ ಖಗಾರಿಯಾದಲ್ಲಿ ಇಂತಹದ್ದೊಂದು ಪ್ರೇಮ ಕಥೆ ಅಚ್ಚರಿ ಮೂಡಿಸಿದೆ. ಇಬ್ಬರು ಮಹಿಳೆಯರು ಪರಸ್ಪರರ ಗಂಡಂದಿರನ್ನು ಪ್ರೀತಿಸಿದ್ದರು. ಹೀಗಾಗಿ ಆಕೆಯ ಗಂಡನನ್ನು ಈಕೆ ಮತ್ತು ಈಕೆ ಗಂಡನನ್ನು ಆಕೆ ವರಿಸಿದ್ದಾರೆ. ಇದನ್ನೂ ಓದಿ: ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು 38 ವರ್ಷದ ವ್ಯಕ್ತಿ ದುರ್ಮರಣ

    ನೀರಜ್ ಕುಮಾರ್ ಸಿಂಗ್ ಮತ್ತು ರೂಬಿ ದೇವಿ 2009 ರಲ್ಲಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹೀಗಿದ್ದೂ, ರೂಬಿ ತನ್ನ ಪೋಷಕರ ಮನೆಯ ಬಳಿ ವಾಸಿಸುತ್ತಿದ್ದ ಮುಖೇಶ್ ಕುಮಾರ್ ಸಿಂಗ್ ಎಂಬ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು. ಕಳೆದ ವರ್ಷ ಫೆಬ್ರವರಿಯಲ್ಲಿ ರೂಬಿ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಮುಖೇಶ್‌ನೊಂದಿಗೆ ಓಡಿ ಹೋದಳು. ಇತ್ತ ಪತಿ ನೀರಜ್ ಜೊತೆ ಹೆಣ್ಣು ಮಗುವನ್ನು ಮಾತ್ರ ಬಿಟ್ಟು ಹೋಗಿದ್ದಳು.

    ಮುಖೇಶ್‌ನ ಹೆಂಡತಿಯ ಹೆಸರು ಕೂಡ ರೂಬಿ ದೇವಿ. ಈಕೆ ತನ್ನ ಗಂಡನೊಂದಿಗೆ ಓಡಿ ಹೋದ ಮಹಿಳೆಯ ಪತಿ (ನೀರಜ್ ರೂಬಿ) ಬಗ್ಗೆ ತಿಳಿದುಕೊಂಡಳು. ನಂತರ ಇಬ್ಬರೂ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. ಕೊನೆಗೆ ಒಬ್ಬರನ್ನೊಬ್ಬರು ಇಷ್ಟಪಡಲು ಪ್ರಾರಂಭಿಸಿದರು. ಫೆಬ್ರವರಿ 18 ರಂದು ಇಬ್ಬರೂ ನ್ಯಾಯಾಲಯದಲ್ಲಿ ವಿವಾಹವಾದರು. ಇದನ್ನೂ ಓದಿ: ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

    ನೀರಜ್‌ ರೂಬಿ ತನ್ನ ಎರಡನೇ ಹೆಂಡತಿಯ ಮಕ್ಕಳನ್ನು ಮನೆಯಲ್ಲಿ ಪೋಷಿಸಲು ಒಪ್ಪಿಕೊಂಡ. ಇಬ್ಬರೂ ನವ ದಂಪತಿ ಈಗ ಮಧ್ಯಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.