Tag: ಬಿಸ್ಕತ್ತು

  • ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ನಾಯಿ ತಿನ್ನದ ಬಿಸ್ಕತ್ತನ್ನು ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ – ವಿಡಿಯೋ ವೈರಲ್

    ನವದೆಹಲಿ: ನಾಯಿ ತಿನ್ನದ ಬಿಸ್ಕತ್ತನ್ನು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ತನ್ನ ಕಾರ್ಯಕರ್ತನಿಗೆ ನೀಡಿರುವ ವೀಡಿಯೋ ಸಮಾಜಕ ಜಾಲತಾಣಗಳಲ್ಲಿ  (Social Media) ವೈರಲ್ ಆಗಿದ್ದು ಭಾರೀ ಟೀಕೆಗೆ ಗುರಿಯಾಗಿದೆ.

    ಭಾರತ ಜೋಡೋ ನ್ಯಾಯ ಯಾತ್ರೆ (Bharth Jodo Nyay yatra) ಸಂದರ್ಭದಲ್ಲಿ ರಾಹುಲ್ ಗಾಂಧಿ ನಾಯಿಗೆ (Dog) ಬಿಸ್ಕತ್ತನ್ನು (Biscuit )ನೀಡಿದ್ದಾರೆ. ಆದರೆ ನಾಯಿ ತಿನ್ನಲು ನಿರಾಕರಿಸಿದೆ. ಅದೇ ಸಮಯದಲ್ಲಿ ಅವರನ್ನು ಮಾತನಾಡಿಸಲು ಪಕ್ಷದ ಕಾರ್ಯಕರ್ತರು ಬಂದಿದ್ದಾರೆ. ಆಗ ನಾಯಿಗೆ ಹಾಕಿದ ಬಿಸ್ಕತ್ತಲ್ಲೇ ಒಂದು ಬಿಸ್ಕತ್ತನ್ನು ತೆಗೆದು ಕಾರ್ಯಕರ್ತನಿಗೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಟೀಕೆ ವ್ಯಕ್ತವಾಗಿದೆ. ಇದನ್ನೂ ಓದಿ:  ಕೇಂದ್ರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವೆಸಗಿದರೆ 10 ವರ್ಷ ಜೈಲು, 1 ಕೋಟಿ ದಂಡ – ಮಸೂದೆ ಮಂಡನೆ

    ಘಟನೆ ಕುರಿತು ಬಿಜೆಪಿ ನಾಯಕಿ ಪಲ್ಲವಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತನಿಗೆ, ನಾಯಿ ತಿರಸ್ಕರಿಸಿದ ಬಿಸ್ಕತ್ತನ್ನು ನೀಡಿದ್ದಾರೆ. ಇದು ಅವರ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಮತ್ತು ಮತದಾರರಿಗೆ ನೀಡುವ ಗೌರವವೇ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮಾತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

    ಬಿಜೆಪಿ ಐಟಿ ಸೆಲ್‌ನ ಅಮಿತ್ ಮಾಳವೀಯ ಅವರು ಸಹ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಬೂತ್ ಏಜೆಂಟರನ್ನು ನಾಯಿಗಳಿಗೆ ಹೋಲಿಸಿದ್ದರು. ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷರು ಕಾರ್ಯಕರ್ತನನ್ನು ನಾಯಿಯಂತೆ ನಡೆಸಿಕೊಂಡರೆ ಅಂತಹ ಪಕ್ಷವು ಕಣ್ಮರೆಯಾಗುವುದು ಪಕ್ಕಾ ಎಂದು ಮಾಳವೀಯ ಬರೆದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸನ್ನು ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ 10 ಸಾವಿರ ದಂಡ – ಹೈಕೋರ್ಟ್‌ ಆದೇಶ

  • ಚಹಾದೊಂದಿಗೆ ಸವಿಯಿರಿ ಗೋಡಂಬಿ ಬಿಸ್ಕತ್ತು

    ಚಹಾದೊಂದಿಗೆ ಸವಿಯಿರಿ ಗೋಡಂಬಿ ಬಿಸ್ಕತ್ತು

    ಹಾದ ಸಮಯದಲ್ಲಿ ಹೆಚ್ಚಿನವರಿಗೆ ಬಿಸ್ಕತ್ತು (Biscuits) ಬೇಕೇ ಬೇಕು. ಅದೇ ಬಿಸ್ಕತ್ತನ್ನು ಪ್ರತಿ ಬಾರಿ ಅಂಗಡಿಗಳಿಂದಲೇ ತರುತ್ತೀರಾ? ಒಮ್ಮೆ ಈ ಸುಲಭ ವಿಧಾನದಲ್ಲಿ ಮಾಡಬಹುದಾದ ಗೋಡಂಬಿ ಬಿಸ್ಕತ್ತನ್ನು (Cashew Biscuits) ಮನೆಯಲ್ಲಿ ಮಾಡಿ ನೋಡಿ. ನೀವೇ ನಿಮ್ಮ ಕೈಯಾರೆ ಮಾಡಿದ ಬಿಸ್ಕತ್ತನ್ನು ಚಹಾದೊಂದಿಗೆ ಸವಿದರೆ ಇನ್ನಷ್ಟು ಮಜವಾಗಿರುತ್ತದೆ ಅಲ್ವಾ?

    ಬೇಕಾಗುವ ಪದಾರ್ಥಗಳು:
    ತುಪ್ಪ – ಅರ್ಧ ಕಪ್
    ಪುಡಿ ಸಕ್ಕರೆ – ಅರ್ಧ ಕಪ್
    ಹಾಲಿನ ಪುಡಿ – 2 ಟೀಸ್ಪೂನ್
    ಮೈದಾ – ಮುಕ್ಕಾಲು ಕಪ್
    ಕಸ್ಟರ್ಡ್ ಪುಡಿ – 2 ಟೀಸ್ಪೂನ್
    ಬೇಕಿಂಗ್ ಪೌಡರ್ – ಅರ್ಧ ಟೀಸ್ಪೂನ್
    ಉಪ್ಪು – ಕಾಲು ಟೀಸ್ಪೂನ್
    ಗೋಡಂಬಿ ಪುಡಿ – ಕಾಲು ಕಪ್
    ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
    ಹಾಲು – 2 ಟೀಸ್ಪೂನ್
    ಪುಡಿಮಾಡಿದ ಗೋಡಂಬಿ – 4 ಟೀಸ್ಪೂನ್ ಇದನ್ನೂ ಓದಿ: ರುಚಿಕರವಾದ ಆಲೂಗಡ್ಡೆ ಮಂಚೂರಿಯನ್ ಮಾಡಿ ನೋಡಿದ್ದೀರಾ?

    ಮಾಡುವ ವಿಧಾನ:
    * ಮೊದಲಿಗೆ ಒಂದು ಬಟ್ಟಲಿನಲ್ಲಿ ಗಟ್ಟಿಯಾದ ತುಪ್ಪ ತೆಗೆದುಕೊಳ್ಳಿ. (ತುಪ್ಪ ಗಟ್ಟಿ ಮಾಡಲು ಸ್ವಲ್ಪ ಹೊತ್ತು ಪ್ರಿಡ್ಜ್‌ನಲ್ಲಿಡಬಹುದು)
    * ಈಗ ತುಪ್ಪವನ್ನು ಚೆನ್ನಾಗಿ ಬೀಟ್ ಮಾಡಿ, ಬಿಳಿಯಾದ ಕ್ರೀಮ್ ನಂತಾಗುವವರೆಗೆ ಬೀಟ್ ಮಾಡಿ.
    * ಈಗ ಪುಡಿ ಸಕ್ಕರೆ ಮತ್ತು ಹಾಲಿನ ಪುಡಿಯನ್ನು ಸೇರಿಸಿ, 2 ನಿಮಿಷ ಚೆನ್ನಾಗಿ ಮಿಕ್ಸ್ ಆಗುವವರೆಗೆ ಬೀಟ್ ಮಾಡಿ.
    * ಈಗ ಒಂದು ಜರಡಿ ಇಟ್ಟು, ಮೈದಾ, ಕಸ್ಟರ್ಡ್ ಪೌಡರ್, ಬೇಕಿಂಗ್ ಪೌಡರ್ ಹಾಗೂ ಉಪ್ಪು ಹಾಕಿ ಗಾಳಿಸಿ.
    * ಗೋಡಂಬಿ ಪುಡಿ ಹಾಗೂ ಏಲಕ್ಕಿ ಪುಡಿಯನ್ನೂ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನೂ ಓದಿ: ಮಂಗಳೂರು ಬನ್ಸ್ ಮಾಡುವುದು ಹೇಗೆ ಗೊತ್ತಾ?

    * ಈಗ ಹಿಟ್ಟನ್ನು ಸಣ್ಣ ಸಣ್ಣ ಭಾಗಗಳನ್ನಾಗಿ ಮಾಡಿ, ನಿಮಗಿಷ್ಟದ ಬಿಸ್ಕತ್ತಿನ ಆಕಾರ ಕೊಡಿ. ಆಕಾರವನ್ನು ಚೆನ್ನಾಗಿ ಹೊಂದಿಸಲು 10 ನಿಮಿಷ ಫ್ರಿಡ್ಜ್‌ನಲ್ಲಿಡಬಹುದು.
    * ಈಗ ಬಿಸ್ಕತ್ತಿನ ಮೇಲೆ ಹಾಲನ್ನು ಬ್ರಷ್ ಮಾಡಿ, ಅದರ ಮೇಲೆ ಪುಡಿ ಮಾಡಿದ ಗೋಡಂಬಿಯನ್ನು ಚದುರಿಸಿ.
    * ಈಗ ಪ್ರೀ ಹೀಟೆಡ್ ಓವನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ 10-12 ನಿಮಿಷಗಳ ಕಾಲ ಬಿಸ್ಕತ್ತನ್ನು ಬೇಯಿಸಿ.
    * ಬಿಸ್ಕತ್ತುಗಳು ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಓವನ್‌ನಿಂದ ತೆಗೆದು, ಆರಲು ಬಿಡಿ.
    * ಇದೀಗ ಗರಿಗರಿಯಾದ ಗೋಡಂಬಿ ಬಿಸ್ಕತ್ತು ತಯಾರಾಗಿದ್ದು, ಚಹಾದೊಂದಿಗೆ ಸವಿಯಿರಿ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿಟ್ಟರೆ 1 ವಾರಗಳ ವರೆಗೆ ಬೇಕೆಂದಾಗ ಸವಿಯಬಹುದು.

    Live Tv
    [brid partner=56869869 player=32851 video=960834 autoplay=true]