Tag: ಬಿಸಿ ಊಟ

  • ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳೇ ಶಾಲೆಗೆ ಬೀಗ ಹಾಕಿ ಆಕ್ರೋಶ

    ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳೇ ಶಾಲೆಗೆ ಬೀಗ ಹಾಕಿ ಆಕ್ರೋಶ

    ಗದಗ: ಸಮರ್ಪಕ ಬಿಸಿ ಊಟ, ಪೌಷ್ಟಿಕ ಆಹಾರ ನೀಡದ್ದಕ್ಕೆ ಮಕ್ಕಳು ಶಾಲೆಗೆ (School) ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ (Lakkalakatti) ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ವತಃ ಮಕ್ಕಳೇ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ಶಿಕ್ಷಕಿ ಎಎಸ್ ರಾಠೋಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 15 ದಿನಗಳಿಂದ ಮಕ್ಕಳಿಗೆ ಮೊಟ್ಟೆ, ಶೇಂಗಾ ಚಿಕ್ಕಿ, ಬಾಳೆ ಹಣ್ಣು, ಪೌಷ್ಟಿಕ ಆಹಾರ ನೀಡುತ್ತಿಲ್ಲ. ಇನ್ನು ಮಧ್ಯಾಹ್ನ ಬಿಸಿ ಊಟ ಎಲ್ಲಾ ಮಕ್ಕಳಿಗೂ ಸಮರ್ಪಕವಾಗಿ ಕೊಡುತ್ತಿಲ್ಲ ಎಂಬ ಆರೋಪ ಮಕ್ಕಳದ್ದಾಗಿದೆ.

    ಇಲ್ಲಿ 1 ರಿಂದ 7ನೇ ತರಗತಿಯವರೆಗೆ 441 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಮಧ್ಯಾಹ್ನ 2:30 ರಿಂದ 3 ಗಂಟೆಗೆ ತಡವಾಗಿ ಬಿಸಿ ಊಟ ನೀಡುತ್ತಾರೆ. ಜೊತೆಗೆ ಕೇವಲ 1-2 ಕೆಜಿ ತರಕಾರಿಯಲ್ಲಿ 441 ಮಕ್ಕಳಿಗೆ ಬಿಸಿ ಊಟ ಹಂಚಿಕೆ ಮಾಡುತ್ತಾರೆ. ಧಾನ್ಯಗಳಿಲ್ಲದ ಮಸಾಲೆ ಮಿಶ್ರಿತ ತಿಳಿ ಸಾರು, ಹುಳು ಹತ್ತಿದ, ಬಲಿತ, ಕೊಳೆತ ತರಕಾರಿ ತಂದು ಊಟ ತಯಾರಿಸುತ್ತಾರೆ. ಇದರಿಂದ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಮಕ್ಕಳದ್ದಾಗಿದೆ.

    ಆದರೆ ಲೆಕ್ಕ ಪುಸ್ತಕದಲ್ಲಿ ಎಲ್ಲವನ್ನೂ ದಾಖಲು ಮಾಡಿರುತ್ತಾರೆ ಎಂಬ ಆರೋಪ ಪಾಲಕರದ್ದಾಗಿದೆ. ಮುಖ್ಯ ಶಿಕ್ಷಕಿ ಎಎಸ್ ರಾಠೋಡ್ ಬೇಡವೇ ಬೇಡ, ಮಕ್ಕಳ ಹಿತ ಕಾಪಾಡದ ಶಿಕ್ಷಕಿ ನಮ್ಮೂರ ಶಾಲೆಗೆ ಬೇರೆ ಕಡೆಗೆ ಎಂದು ಮಕ್ಕಳು, ಪಾಲಕರು ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ, ಶಿಕ್ಷಣಾಧಿಕಾರಿಗಳು ಬರುವಂತೆ ಮಕ್ಕಳು ಆಗ್ರಹಿಸಿದ್ದಾರೆ. ಶಿಕ್ಷಕಿ ವರ್ಗಾವಣೆ ಆಗುವವರೆಗೆ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಪಂಪ್‌ಸೆಟ್‌ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಭರವಸೆ – ಉಪವಾಸ ಸತ್ಯಾಗ್ರಹ ಕೈಬಿಟ್ಟ ಬಿಜೆಪಿ ಸಂಸದ

    ನಂತರ ಸ್ಥಳಕ್ಕೆ ಗಜೇಂದ್ರಗಡ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌ಎನ್ ಹುರಳಿ ಭೇಟಿ ನೀಡಿ, ಮಕ್ಕಳು ಹಾಗೂ ಪಾಲಕರ ಮನವೊಲಿಸಲು ಮುಂದಾಗಿದ್ದಾರೆ. ಇಂದು ಮುಖ್ಯ ಶಿಕ್ಷಕಿ ರಜೆ ಇದ್ದು, ಆದಷ್ಟು ಬೇಗ ಪರಿಶೀಲನೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಹೆಬ್ಬಾಳ್ಕರ್‌ಗೆ ಠಕ್ಕರ್‌ ನೀಡಲು ಸತೀಶ್‌ ಜಾರಕಿಹೊಳಿ ಪ್ಲ್ಯಾನ್‌

  • ಶಾಲಾ ಮಕ್ಕಳ ಜೊತೆ ಕೂತು ಬಿಸಿಯೂಟ ಸವಿದ ಸಿಪಿವೈ

    ಶಾಲಾ ಮಕ್ಕಳ ಜೊತೆ ಕೂತು ಬಿಸಿಯೂಟ ಸವಿದ ಸಿಪಿವೈ

    ರಾಮನಗರ: ಗೊಂಬೆನಗಿರಿ ಚನ್ನಪಟ್ಟಣದಲ್ಲಿ (Channapatna) ಚುನಾವಣಾ (Assembly Elections) ಕಾವು ರಂಗೇರುತ್ತಿದೆ. ಜಿದ್ದಾಜಿದ್ದಿಯ ಕ್ಷೇತ್ರವಾಗಿರುವ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್ (CP Yogeshwara) ನಡುವೆ ಪೈಪೋಟಿ ಹೆಚ್ಚಾಗಿದೆ.

    ಕ್ಷೇತ್ರದಾದ್ಯಂತ ಸಿಪಿ ಯೋಗೇಶ್ವರ್ ಕಾಲ್ನಡಿಗೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಸ್ವಾಭಿಮಾನಿ ಸಂಕಲ್ಪ ನಡಿಗೆ ಮೂಲಕ ಮನೆ ಮನೆಗೆ ತೆರಳಿ ಸಿಪಿವೈ ಮತಯಾಚನೆ ಮಾಡುತ್ತಿದ್ದಾರೆ. ಶುಕ್ರವಾರ ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಮತಯಾಚನೆ ಮಾಡಿದ ಸಿಪಿ ಯೋಗೇಶ್ವರ್ ಗ್ರಾಮದ ಸರ್ಕಾರಿ ಶಾಲಾ ಮಕ್ಕಳ ಜೊತೆ ಕೂತು ಮಧ್ಯಾಹ್ನದ ಬಿಸಿಯೂಟ ಸವಿದಿದ್ದಾರೆ. ಮಕ್ಕಳ ಜೊತೆ ಕೂತು ಪ್ರಾರ್ಥನೆ ಮಾಡಿ ಊಟ ಮಾಡಿದ್ದಾರೆ.

    ಶತಾಯಗತಾಯವಾಗಿ ಮಾಜಿ ಸಿಎಂ ಹೆಚ್‌ಡಿಕೆ ಅವರನ್ನು ಸೋಲಿಸಲು ಸಿಪಿವೈ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಕುಮಾರಸ್ವಾಮಿ ಕ್ಷೇತ್ರಕ್ಕೆ ಬರುವುದಿಲ್ಲ, ನಾನು ಇಲ್ಲಿಯೇ ಇದ್ದು ನಿಮ್ಮ ಕಷ್ಟಗಳನ್ನು ಆಲಿಸುತ್ತೇನೆ ಎಂದು ಮತದಾರರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ

    ಕ್ಷೇತ್ರಕ್ಕೆ ನೀರಾವರಿ ಯೋಜನೆ ತಂದು ಕೆರೆ ಅಭಿವೃದ್ಧಿ ಮಾಡಿದರೂ ಕಳೆದ ಚುನಾವಣೆಯಲ್ಲಿ ಸೋಲಾಯಿತು. ಈ ಬಾರಿ ಕ್ಷೇತ್ರದ ಜನರು ಆಶೀರ್ವಾದ ಮಾಡಿ ಎಂದು ಭಾವನಾತ್ಮಕವಾಗಿ ಮತದಾರರ ಓಲೈಕೆಗೆ ಸಿಪಿವೈ ಮುಂದಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಅಖಾಡಕ್ಕೆ ಸಿದ್ದು ಆಪ್ತ ಅಹಿಂದ ಟೀಂ ಎಂಟ್ರಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸರ್ಕಾರಿ ಶಾಲೆ ಮಕ್ಕಳೊಂದಿಗೆ ಬಿಸಿ ಊಟ ಸವಿದ ಎಸ್‍ಪಿ

    ಸರ್ಕಾರಿ ಶಾಲೆ ಮಕ್ಕಳೊಂದಿಗೆ ಬಿಸಿ ಊಟ ಸವಿದ ಎಸ್‍ಪಿ

    ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಸರ್ಕಾರಿ ಶಾಲೆ ಮಕ್ಕಳೊಂದಿಗೆ ಬಿಸಿಯೂಟ ಸವಿದು ಮಕ್ಕಳೊಂದಿಗೆ ಶಾಲೆಯ ಬಗ್ಗೆ ಚರ್ಚೆ ಮಾಡುತ್ತಾ ತಮ್ಮ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ.

    ನಗರದ ತಾಲೂಕಿನ ಕೊರ್ವಿಹಾಳ ಗ್ರಾಮಕ್ಕೆ ಭೇಟಿ ನೀಡಿದ್ದ ಎಸ್‍ಪಿ ನಿಖಿಲ್ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಗ್ರಾಮಸ್ಥರೊಡನೆ ಚರ್ಚೆ ನಡೆಸಿ ಬಳಿಕ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದ್ದಾರೆ. ನಂತರ ಮಕ್ಕಳೊಡನೆ ಬಿಸಿ ಊಟ ಸವಿದಿದ್ದಾರೆ. ಎಸ್‍ಪಿ ನಿಖಿಲ್ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ

    ಈ ಹಿಂದೆ ಪ್ರೊಬೆಷನರಿ ಅಧಿಕಾರಿಯಾಗಿದ್ದಾಗಲೂ ಅವರು ಜಿಲ್ಲೆಯಲ್ಲಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದರು. ಮಕ್ಕಳೊಂದಿಗೆ ಬಿಸಿಯೂಟ ಸವಿದು ಶಾಲೆಯ ಪರಸ್ಥಿತಿ ವಿಚಾರಣೆಗಳ ವಿಚಾರಣೆ ಮಾಡುತ್ತಿದ್ದರು. ಇದನ್ನೂ ಓದಿ: ಮುಸ್ಲಿಮರನ್ನ ಮದುವೆಯಾದ್ರೆ SSK ಸಮಾಜದಿಂದ ಬಹಿಷ್ಕರಿಸಿ: ನಾಗೇಶ್‌