Tag: ಬಿಸಿನೀರು

  • ರಾತ್ರಿ ಮಲಗೋ ಮುನ್ನ ಕುಡಿಯುವ 1 ಲೋಟ ಬೆಚ್ಚಗಿನ ನೀರಿನಿಂದ ಆಗುವ ಪ್ರಯೋಜನಗಳು

    ರಾತ್ರಿ ಮಲಗೋ ಮುನ್ನ ಕುಡಿಯುವ 1 ಲೋಟ ಬೆಚ್ಚಗಿನ ನೀರಿನಿಂದ ಆಗುವ ಪ್ರಯೋಜನಗಳು

    ನೀರು ಕುಡಿಯುವುದರಿಂದ ದೇಹಕ್ಕೆ ಎಷ್ಟು ಲಾಭ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಬಿಸಿನೀರಿನಿಂದ (Warm Water) ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಇದೆ. ಆರೋಗ್ಯ ತಜ್ಞರು ಕೂಡ ಬೆಳಗ್ಗೆ ಎದ್ದ ತಕ್ಷಣ ಮೊದಲು ಬಿಸಿ ನೀರು ಕುಡಿಯುವಂತೆ ಹೇಳುತ್ತಾರೆ. ಆದರೆ ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ (Health Benifits) ಎಂಬುದು ಇಲ್ಲಿ ಗಮನಾರ್ಹ. ಮಲಗುವ ಮುನ್ನ 1 ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಜೊತೆಗೆ ಇತರ ಅನೇಕ ಸಮಸ್ಯೆಗಳಿಗೂ ರಾಮಬಾಣವಾಗಿದೆ.

    ಬಿಸಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು?:
    * ಬಿಸಿನೀರು ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸವನ್ನು ಕೂಡ ಸೇರಿಸಬಹುದು. ಇದರಿಂದ ನಿಮಗೆ ಶಕ್ತಿಯೂ ಸಿಗುತ್ತದೆ.
    * ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ತೂಕವನ್ನು ಕಡಿಮೆ ಮಾಡುತ್ತದೆ. ರಾತ್ರಿ ಊಟವಾದ ಅರ್ಧ ಗಂಟೆಯ ನಂತರ ಅಥವಾ ಮಲಗುವ ಒಂದು ಅಥವಾ ಎರಡು ಗಂಟೆಗಳ ಮೊದಲು ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಲ್ಲದೆ ಬೆಳಗ್ಗೆ ದೇಹದಿಂದ ವಿಷವನ್ನು ಹೊರಹಾಕುತ್ತದೆ.

    * ರಾತ್ರಿ ಮಲಗುವ ಮುನ್ನ ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ಒತ್ತಡ ಮತ್ತು ಖಿನ್ನತೆ ಕಡಿಮೆಯಾಗುತ್ತದೆ. ನೀರಿನ ಕೊರತೆಯು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರನ್ನು ಕುಡಿಯುವುದು ನಿದ್ರೆಗೆ ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
    * ರಾತ್ರಿ ಮಲಗುವ ಮುನ್ನ ಬಿಸಿನೀರು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ. ಮಲಬದ್ಧತೆ, ಅಜೀರ್ಣಕ್ಕೆ ಬಿಸಿ ನೀರು ರಾಮಬಾಣವಾಗಿರುತ್ತದೆ. ರಾತ್ರಿಯಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ. ಹೀಗಾಗಿ ಬಿಸಿನೀರು ಕುಡಿಯುವುದರಿಂದ ನಿಮ್ಮ ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.

    * ವಯಸ್ಸು ಹೆಚ್ಚಾದಂತೆ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಈ ಸಮಸ್ಯೆ ನಿಮ್ಮಲ್ಲೂ ಕಂಡುಬರುತ್ತಿದ್ದರೆ ಈ ಕ್ಷಣದಿಂದಲೇ ಬಿಸಿನೀರು ಕುಡಿಯಲು ಪ್ರಾರಂಭಿಸಿ. ಬಿಸಿನೀರು ಚರ್ಮವನ್ನು ಬಿಗಿಗೊಳಿಸುವುದರ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ.
    * ವಾಸ್ತವವಾಗಿ ಬಿಸಿನೀರು ಕೊಬ್ಬನ್ನು ಸುಡುತ್ತದೆ. ಇದರಿಂದ ಜೀರ್ಣಕ್ರಿಯೆಯೂ ಉತ್ತಮವಾಗಿ ಉಳಿಯುತ್ತದೆ ಮತ್ತು ನೀರು ಕುಡಿಯುವುದರಿಂದ ಮತ್ತೆ ಮತ್ತೆ ಹಸಿವಾಗುವುದಿಲ್ಲ.

  • ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಬಿಸಿನೀರು ಎರಚಿ ಬಿಯರ್ ಬಾಟ್ಲಿಯಿಂದ ಹಲ್ಲೆಗೈದ ಆಂಟಿ!

    ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಬಿಸಿನೀರು ಎರಚಿ ಬಿಯರ್ ಬಾಟ್ಲಿಯಿಂದ ಹಲ್ಲೆಗೈದ ಆಂಟಿ!

    ಬೆಂಗಳೂರು: ಮದುವೆಯಾಗಲು (Marriage) ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ಯುವಕನ ಮೇಲೆ ಬಿಸಿನೀರು (Hot Water) ಎರಚಿದ ಘಟನೆ ಬೆಂಗಳೂರಿನ (Bengaluru) ಚಾಮರಾಜಪೇಟೆಯಲ್ಲಿ (Chamarajpet) ನಡೆದಿದೆ.

    ಕಲಬುರಗಿ (Kalaburagi) ಮೂಲದ ಭೀಮಾಶಂಕರ ಆರ್ಯ ಗಾಯಗೊಂಡ ಯುವಕ. ಜ್ಯೋತಿ ದೊಡ್ಡಮನಿ ಎಂಬ ಮಹಿಳೆ ಈ ಕೃತ್ಯ ಎಸಗಿದ್ದು, ಭೀಮಾಶಂಕರ ಮತ್ತು ಜ್ಯೋತಿ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಜ್ಯೋತಿಗೆ ಎರಡು ವರ್ಷದ ಹಿಂದೆ ಬೇರೊಬ್ಬನೊಂದಿಗೆ ಮದುವೆಯಾಗಿದ್ದು (Marriage), ಈ ವಿಷಯವನ್ನು ಭೀಮಾಶಂಕರನಿಂದ ಮುಚ್ಚಿಟ್ಟಿದ್ದಳು. ಇದನ್ನೂ ಓದಿ: ಬಾಡಿಗೆ ಹಣದ ಆಸೆಗೆ ಚಿಕ್ಕಪ್ಪನ ಮಗನನ್ನೇ ಕೊಂದ

    ಆದರೆ ಈ ವಿಚಾರ ತಿಳಿದ ಭೀಮಾಶಂಕರ ಜ್ಯೋತಿಯಿಂದ ದೂರವಾಗಿದ್ದ. ಇದೇ ಕಾರಣಕ್ಕೆ ಮೇ 25ರಂದು ರಾತ್ರಿ ಜ್ಯೋತಿ ಮಾತನಾಡುವ ನೆಪದಲ್ಲಿ ಆತನನ್ನು ಕರೆಸಿಕೊಂಡು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆಗ ಭೀಮಾಶಂಕರ ಮದುವೆಗೆ ಒಪ್ಪದಿದ್ದಾಗ, ಕಾದಿದ್ದ ಬಿಸಿನೀರನ್ನು ಆತನ ಮುಖದ ಮೇಲೆ ಎರಚಿ ಬಿಯರ್ ಬಾಟ್ಲಿಯಿಂದ ಹಲ್ಲೆ (Attack) ಮಾಡಿದ್ದಾಳೆ. ಇದನ್ನೂ ಓದಿ: ಕಾರು, ಲಾರಿ ಮುಖಾಮುಖಿ ಡಿಕ್ಕಿ – ಕಾಂಗ್ರೆಸ್ ಮುಖಂಡ ಸ್ಥಳದಲ್ಲೇ ಸಾವು

    ಘಟನೆಯಿಂದ ಗಂಭೀರ ಗಾಯಗೊಂಡ ಭೀಮಾಶಂಕರ ವಿಕ್ಟೋರಿಯಾ (Victoria) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಭೀಕರ ಅಪಘಾತ- 10 ಮಂದಿ ದುರ್ಮರಣ

  • ಅನೈತಿಕ ಸಂಬಂಧ ಶಂಕೆ – ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ್ಲು

    ಅನೈತಿಕ ಸಂಬಂಧ ಶಂಕೆ – ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ್ಲು

    ಚೆನ್ನೈ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯೇ ಪತಿಯ ಗುಪ್ತಾಂಗಕ್ಕೆ ಕುದಿಯುವ ಬಿಸಿ ನೀರು ಎರಚಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇದೀಗ ಸುಟ್ಟ ಗಾಯದಿಂದ ಬಳಲುತ್ತಿರುವ 32 ವರ್ಷದ ವ್ಯಕ್ತಿಯನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಗಾಯಗೊಂಡಿರುವ ವ್ಯಕ್ತಿಯನ್ನು ಪುದುಪಟ್ಟು ಮೂಲದ ತಂಗರಾಜ್ ಎಂದು ಗುರುತಿಸಲಾಗಿದ್ದು, ಏಳು ವರ್ಷಗಳ ಹಿಂದೆ 29 ವರ್ಷದ ಪ್ರಿಯಾಳನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದನ್ನೂ ಓದಿ: ಈ ಬಾರಿ ಗಣಪನ ಜೊತೆ ಸಾವರ್ಕರ್ ಫೋಟೋ- ಹಿಂದೂ ಸಂಘಟನೆಗಳಿಂದ ಹೊಸ ಪ್ಲ್ಯಾನ್

    POLICE JEEP

    ತಂಗರಾಜ್ ಮೊಬೈಲ್ ತಯಾರಿಸುವ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ತಂಗರಾಜ್ ತನ್ನ ಕೆಲಸದ ಸ್ಥಳದಲ್ಲಿ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಪ್ರಿಯಾ ಅನೇಕ ಬಾರಿ ಪತಿಯೊಂದಿಗೆ ಜಗಳವಾಡಿದ್ದಳು ಎಂದು ತಿಳಿದುಬಂದಿದೆ.

    ಮಂಗಳವಾರ ದಂಪತಿ ನಡುವೆ ಮತ್ತೆ ಜಗಳ ಆಗಿದ್ದು, ನಂತರ ತಂಗರಾಜ್ ಮಲಗಿದ್ದರು. ಆದರೆ ಇನ್ನೂ ಅಸಮಾಧಾನಗೊಂಡ ಪ್ರಿಯಾ, ಕುದಿಯುವ ನೀರನ್ನು ಕಾಯಿಸಿ ತಂಗರಾಜ್ ಅವರ ಗುಪ್ತಾಂಗದ ಮೇಲೆ ಸುರಿದಿದ್ದಾಳೆ. ಇದನ್ನೂ ಓದಿ: ದೇಶದ ಮೊದಲ ಎಲೆಕ್ಟ್ರಿಕ್‌ ಡಬ್ಬಲ್ ಡೆಕ್ಕರ್ ಬಸ್‌ ಇಂದಿನಿಂದ ಕಾರ್ಯಾರಂಭ – ಏನಿದರ ವಿಶೇಷತೆ?

    ಈ ವೇಳೆ ತಂಗರಾಜ್ ನೋವಿನಿಂದ ಕಿರುಚಾಡುತ್ತಿರುವುದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಮನೆಯವರು ಆತನನ್ನು ರಕ್ಷಿಸಿ ವಾಲಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ವ್ಯಕ್ತಿಯ ಗುಪ್ತಾಂಗಕ್ಕೆ ಶೇ.50ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಕಾವೇರಿಪಾಕ್ಕಂ ಪೊಲೀಸರು ಇದೀಗ ಪ್ರಿಯಾ ವಿರುದ್ಧ 294, 324, 506 ಮತ್ತು 506 (ii) ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಲಬುರಗಿಯ ಬೋರ್‌ವೆಲ್‌ನಲ್ಲಿ ಬಿಸಿನೀರು – ಆಶ್ಚರ್ಯಕ್ಕೊಳಗಾದ ಜನತೆ

    ಕಲಬುರಗಿಯ ಬೋರ್‌ವೆಲ್‌ನಲ್ಲಿ ಬಿಸಿನೀರು – ಆಶ್ಚರ್ಯಕ್ಕೊಳಗಾದ ಜನತೆ

    ಕಲಬುರಗಿ: ಮನೆಯಲ್ಲಿ ಹಾಕಿಸಿದ ಬೋರ್ ವೆಲ್‍ನಲ್ಲಿ ಬಿಸಿನೀರು ಬರುತ್ತಿರುವ ಅಚ್ಚರಿ ಘಟನೆ ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿ ನಡೆದಿದೆ.

    ಚಂದಾಪುರ ಪಟ್ಟಣದಲ್ಲಿ ಶಿವಕುಮಾರ್ ಐನೋಳಿ ಎಂಬುವವರ ಮನೆಯಲ್ಲಿ ಎರಡು ದಿನದ ಹಿಂದೆ ಬೋರ್ ಹಾಕಿಸಿದ್ದು, ಬೋರ್‌ವೆಲ್‌ನಲ್ಲಿ ಬಿಸಿನೀರು ಬರುತ್ತಿವೆ.

    ಬೋರ್‌ವೆಲ್‌ ಹಾಕಿಸಿದ ನಂತರ ನೀರು ಬಳಕೆ ಮಾಡಲು ಮುಂದಾದಾಗ ನೀರು ಬಿಸಿಯಿರುವುದು ಗೊತ್ತಾಗಿದೆ. ಈ ಅಚ್ಚರಿ ವಿಷಯ ತಿಳಿಯುತ್ತಿದಂತೆ ಪಟ್ಟಣದ ಜನ ನೀರು ನೋಡಲು ಶಿವಕುಮಾರ್ ಮನೆಯತ್ತ ದೌಡಾಯಿಸುತ್ತಿದ್ದಾರೆ. ವಿಷಯ ತಿಳಿದ ಚಿಂಚೋಳಿ ತಹಶೀಲ್ದಾರ್ ಪಂಡಿತ ಬಿರಾದಾರ, ಮನೆಗೆ ಭೇಟಿ ನೀಡಿ ಬಿಸಿನೀರು ಬರುತ್ತಿರುವುದನ್ನು ಪರಿಶೀಲಿಸಿದ್ದಾರೆ.

    ತಹಶೀಲ್ದಾರ್ ಅವರು ಭೂ ವಿಜ್ಞಾನಿಗಳನ್ನು ಕಳುಹಿಸಿ ಬಿಸಿನೀರು ಬರಲು ಕಾರಣ ಪತ್ತೆಹಚ್ಚುವಂತೆ ತಿಳಿಸುವುದಾಗಿ ಬೋರ್‌ವೆಲ್‌ ಮಾಲೀಕರಿಗೆ ತಿಳಿಸಿದ್ದಾರೆ. ಭೂ ವಿಜ್ಞಾನಿಗಳು ಬಂದು ಪರಿಶೀಲಿಸಿದ ನಂತರವಷ್ಟೇ ಬೋರ್‌ವೆಲ್‌ನಲ್ಲಿ ಬಿಸಿನೀರು ಬರಲು ಕಾರಣವೇನು ಎಂಬುದು ತಿಳಿಯಬೇಕಿದೆ.

  • ಬೋರ್ ವೆಲ್‍ನಲ್ಲಿ ಬರ್ತಿದೆ ಬಿಸಿ ನೀರು- ಭದ್ರಾವತಿಯಲ್ಲಿ ಕೌತುಕ

    ಬೋರ್ ವೆಲ್‍ನಲ್ಲಿ ಬರ್ತಿದೆ ಬಿಸಿ ನೀರು- ಭದ್ರಾವತಿಯಲ್ಲಿ ಕೌತುಕ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ತಡಸ ಗ್ರಾಮದ ಬೋರ್ ವೆಲ್‍ನಲ್ಲಿ ಕುದಿಯುವ ನೀರು ಬರುತ್ತಿದ್ದು ಜನರಿಗೆ ಕೌತುಕದ ಜೊತೆಗೆ ಆತಂಕ ಮೂಡಿಸಿದೆ.

    ಗ್ರಾಮದ ಪರಮೇಶ್ವರಪ್ಪ ಎಂಬವರ ಮನೆ ಹಿತ್ತಲಿನಲ್ಲಿದ್ದ ಬೋರ್ ವೆಲ್‍ನಲ್ಲಿ ಕುದಿಯುವ ನೀರು ಬರುತ್ತಿದೆ. ಮೊದಲು 2 ರಿಂದ 3 ನಿಮಿಷ ಬಿಸಿನೀರು ಬಂದು ನಂತರ ಮತ್ತೆ ತಣ್ಣೀರು ಬರುತ್ತಿದೆ. ಸುಮಾರು 34 ವರ್ಷದ ಹಿಂದೆ ಈ ಕೊಳವೆ ಬಾವಿ ಕೊರೆಸಲಾಗಿದ್ದು ಇದು ಊರಿನವರ ನೀರಿನ ಅವಶ್ಯಕತೆ ಪೂರೈಸುತ್ತಿತ್ತು.

    ಇತ್ತೀಚೆಗೆ ಈ ಬಾವಿಯಲ್ಲಿ ಬಿಸಿ ನೀರು ಬಂದಿರುವುದು ಅಚ್ಚರಿ ತಂದಿದೆ. ಗ್ರಾಮದ ಈ ಬೋರ್ ವೆಲ್ ಒಂದರಲ್ಲಿ ಮಾತ್ರ ಈ ರೀತಿಯ ಅಚ್ಚರಿ ಕಾಣಿಸಿಕೊಂಡಿದ್ದು, ಬೇರೆ ಯಾವುದೇ ಬೋರ್ ವೆಲ್‍ಗಳಲ್ಲೂ ಬಿಸಿನೀರು ಬಂದಿಲ್ಲ. ಬೋರ್ ವೆಲ್‍ನಲ್ಲಿ ಬಿಸಿ ನೀರು ಬರಲು ತಾಂತ್ರಿಕ ಸಮಸ್ಯೆ ಅಥವಾ ಅಂತರ್ಜಲದಲ್ಲಿ ಏರುಪೇರಾಗಿದೆಯಾ ಎಂಬ ಅನುಮಾನ ಸದ್ಯ ಗ್ರಾಮಸ್ಥರಲ್ಲಿ ಮೂಡಿದೆ. ಇತ್ತ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಇಂತಹ ಬಿಸಿನೀರಿನ ಒರತೆ ಇದೆಯ ಎಂಬ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಪತ್ತೆ ಹಚ್ಚಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv