Tag: ಬಿವಿ ಶ್ರೀನಿವಾಸ್

  • ಬಿಜೆಪಿ, ಎನ್‌ಡಿಎ ನಾಯಕರಿಂದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ: ಬಿ.ವಿ ಶ್ರೀನಿವಾಸ್

    ಬಿಜೆಪಿ, ಎನ್‌ಡಿಎ ನಾಯಕರಿಂದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ: ಬಿ.ವಿ ಶ್ರೀನಿವಾಸ್

    ನವದೆಹಲಿ: ಬಿಜೆಪಿ, ಎನ್‌ಡಿಎ ನಾಯಕರಿಂದ ಹೆಣ್ಣುಮಕ್ಕಳ ರಕ್ಷಣೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (BV Srinivas) ಗಂಭೀರ ಆರೋಪ ಮಾಡಿದ್ದಾರೆ.

    ಪ್ರಜ್ವಲ್ ರೇವಣ್ಣ (Prajwal Revanna) ಕುರಿತು ನವದೆಹಲಿಯಲ್ಲಿ (New Delhi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅಮಿತ್ ಶಾ ಹಾಗೂ ಮೋದಿ ನೆರವಿನಿಂದ ವಿದೇಶಕ್ಕೆ ತೆರಳಿದ್ದು, ಅವರ ಕೈ ಹಿಡಿಯುವ ಕೆಲಸ ಬಿಜೆಪಿ (BJP) ಮಾಡಿದೆ. ಅವರು ವಾಪಸ್ ಬರಲು ವಿಳಂಬ ಆಗುತ್ತಿರುವುದಕ್ಕೂ ಕಾರಣ ಬಿಜೆಪಿ. ಇದು ಬಿಜೆಪಿ ರಾಜಕೀಯ ಷಡ್ಯಂತ್ರ. ಮೊದಲು ಪೆನ್‌ಡ್ರೈವ್ ಬಿಜೆಪಿ ನಾಯಕರಿಗೆ ಸಿಕ್ಕಿತ್ತು. ಅದನ್ನು ಲೀಕ್ ಮಾಡಿದ್ದು ಬಿಜೆಪಿ ನಾಯಕರು. ಬಿಜೆಪಿಗೆ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವುದು ಗುರಿ. ಈಗ ಮೈತ್ರಿ ಮಾಡಿಕೊಂಡು ಜೆಡಿಎಸ್ (JDS) ಮುಗಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಎರಡನೇ ಹಂತದ ಚುನಾವಣೆ – ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ಜೊತೆಗೆ ಬಿಎಂಟಿಸಿ ನಿಯೋಜನೆ

    ಪಂಜಾಬ್, ಮಹಾರಾಷ್ಟ್ರ ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಿದ್ದಾರೆ. ಈ ವಿಚಾರದಲ್ಲಿ ಮೋದಿ (Narendra Modi) ಅವರ ಮೌನ ಯಾಕೆ? ಇತಿಹಾಸದಲ್ಲಿ ಈ ರೀತಿಯ ಘಟನೆ ನೋಡಿರಲಿಲ್ಲ. ಆದರೆ ಮೋದಿ ಅವರು ವೇದಿಕೆಗೆ ಬಂದು ಪ್ರಜ್ವಲ್‌ಗೆ ಮತ ನೀಡಿದರೆ ನನ್ನನ್ನು ಬಲಪಡಿಸಿದಂತೆ ಎಂದು ಹೇಳುತ್ತಾರೆ. ದಾವಣಗೆರೆಯಲ್ಲಿ ಮೋದಿ ಮಾತನಾಡಬಹುದು ಎಂದು ಎಲ್ಲರು ಅಂದುಕೊಂಡಿದ್ದರು, ಆದರೆ ಮಾತನಾಡಲಿಲ್ಲ. ಹುಬ್ಬಳ್ಳಿಯಲ್ಲಿ ನೇಹಾ ಮನೆಗೆ ತೆರಳಿದ್ದ ಅಮಿತ್ ಶಾ (Amit Shah) ಪ್ರಜ್ವಲ್ ಸಂತ್ರಸ್ತರ ಮನೆಗೆ ಯಾಕೆ ಹೋಗಿಲ್ಲ? ಅರವಿಂದ್ ಲಿಂಬಾವಳಿ ಅವರು ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಹೇಳಿದ್ದಾರೆ. ಆದರೆ ವಿಜಯೇಂದ್ರ, ಅಶೋಕ್ ನಿಲುವು ಏನು? ಬಿಜೆಪಿ ನಾಯಕರೇ ಪ್ರಜ್ವಲ್‌ನನ್ನು ರಾಜ್ಯಕ್ಕೆ ಕರೆತರುವುದು ಬೇಡ ಎಂದು ಸಲಹೆ ನೀಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು – ಸಂತ್ರಸ್ತೆಯ ಆರೋಪ ಏನು?

    ಮೋದಿ ಅಮಿತ್ ಶಾಗೆ ಮನವಿ ಮಾಡುತ್ತಿದ್ದೇನೆ. ರಾಜ್ಯದ ಮಾನ ಮರ್ಯಾದೆ ಪೆನ್‌ಡ್ರೈವ್ ಮೂಲಕ ಹಂಚಿದ್ದಾರೆ. ಮೈತ್ರಿ ರದ್ದು ಮಾಡುವ ಮಾತುಗಳು ಕೇಳಿ ಬರುತ್ತಿದೆ. ಈವರೆಗೂ ಅಧಿಕೃತ ಹೇಳಿಕೆ ಬಂದಿಲ್ಲ. ಜೆಡಿಎಸ್ ಮುಗಿಸುವ ಕನಸು ನನಸಾಗುತ್ತಿದೆ. ಮೈತ್ರಿ ಮುರಿಯದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಬಿಜೆಪಿ ವಾಷಿಂಗ್ ಮಿಷನ್‌ನಲ್ಲಿ ಕ್ಲೀನ್ ಮಾಡಲಾಗುತ್ತದೆ. ಜೆಡಿಎಸ್ ಅನ್ನು ಬಿಜೆಪಿ ಜೊತೆಗೆ ವಿಲೀನ ಮಾಡಬಹುದು. ಬ್ರಿಜ್‌ಭೂಷಣ್ ವಿರುದ್ಧವೂ ಕ್ರಮ ತೆಗೆದುಕೊಳ್ಳಲಿಲ್ಲ. ಮಂಗಳವಾರ ಮತದಾನ ಇದೆ. ಜನರು ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಬಂಟ್ವಾಳದಲ್ಲಿ ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು

  • ಪ್ರಜ್ವಲ್ ದೇಶ ಬಿಟ್ಟು ಹೋಗಲು ಕೇಂದ್ರದ ಸಪೋರ್ಟ್ ಇದೆ: ಬಿ.ವಿ.ಶ್ರೀನಿವಾಸ್

    ಪ್ರಜ್ವಲ್ ದೇಶ ಬಿಟ್ಟು ಹೋಗಲು ಕೇಂದ್ರದ ಸಪೋರ್ಟ್ ಇದೆ: ಬಿ.ವಿ.ಶ್ರೀನಿವಾಸ್

    ರಾಯಚೂರು: ಪ್ರಜ್ವಲ್ (Prajwal Revanna) ದೇಶ ಬಿಟ್ಟು ಹೋಗಲು ಕೇಂದ್ರದ ಸಪೋರ್ಟ್ ಇದೆ ಎಂದು ಯುವ ಕಾಂಗ್ರೆಸ್ (Congress) ಅಧ್ಯಕ್ಷ ಬಿ.ವಿ.ಶ್ರೀನಿವಾಸ್ (BV Srinivas) ಆರೋಪಿಸಿದ್ದಾರೆ.

    ಈ ಕುರಿತು ರಾಯಚೂರಿನಲ್ಲಿ (Raichur) ಮಾತನಾಡಿದ ಅವರು, ಪ್ರಜ್ವಲ್ ವಿಚಾರದಲ್ಲಿ ಬಿಜೆಪಿ (BJP) ಡಬಲ್ ಸ್ಟ್ಯಾಂಡ್ ತೆಗೆದುಕೊಂಡಿದೆ. ಬಿಜೆಪಿ ಸತ್ತ ಹೆಣದ ಮೇಲೆ ರಾಜಕೀಯ ಮಾಡೋದನ್ನ ನೋಡಿದ್ದೇವೆ. ದೇವರಾಜೇಗೌಡ 6 ತಿಂಗಳ ಮುಂಚೆಯೇ ಪತ್ರ ಬರೆದಿದ್ದರು. ಆದರೆ ಮೋದಿ, ವಿಜಯೇಂದ್ರ, ಅಮಿತ್ ಶಾ ಇವರೆಲ್ಲರೂ ಸೇರಿ ಟಿಕೆಟ್ ನೀಡಿದರು. ಕರ್ನಾಟಕದ ಮಾನ-ಮರ್ಯಾದೆ ರಸ್ತೆ ರಸ್ತೆಗಳಲ್ಲಿ ಪೆನ್‌ಡ್ರೈವ್ ಮೂಲಕ ಹರಾಜಾಗುತ್ತಿದೆ. ಇದು ಒಂದಲ್ಲ ಎರಡಲ್ಲ ಮಾಸ್ ರೇಪಿಸ್ಟ್ ಪ್ರಕರಣ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಾಸನದಿಂದ ಪ್ರಜ್ವಲ್ ಈಗ ಗೆದ್ದರೆ ಅಮಾನತು ಮಾಡ್ತೀವಿ: ಆರ್.ಅಶೋಕ್

    ಬಿಜೆಪಿಯವರು ಬೇಟಿ ಬಚಾವೋ ಬೇಟಿ ಪಡಾವೋ ಎಂದು ಹೇಳುತ್ತಾರೆ. ಆದರೆ ನಾವು ಬೇಟಿನಾ ಬಿಜೆಪಿ ನಾಯಕರಿಂದ ಬಚಾವ್ ಮಾಡ್ಬೇಕಾ? ಅವರ ಮೈತ್ರಿ ಪಕ್ಷದಿಂದ ಬಚಾವ್ ಮಾಡಬೇಕಾ? ಇಡೀ ದೇಶದ ಜನರ ಬಳಿ ಮೋದಿ ಮತ್ತು ಅಮಿತ್ ಶಾ ಕ್ಷಮೆಯಾಚಿಸಲಿ. ಪ್ರಜ್ವಲ್ ರೇವಣ್ಣನಿಗೆ ವೋಟ್ ಕೊಟ್ಟರೆ ನನಗೆ ಬಲಪಡಿಸಿದ ಹಾಗೆ ಎಂದರು. ನೇಹಾ ಹತ್ಯೆ ಬಗ್ಗೆ ನಿಮಗೆಷ್ಟು ಕಾಳಜಿ ಇತ್ತಲ್ವಾ? ಈಗ ಈ 400 ಮಹಿಳೆಯರ ಬಗ್ಗೆ ಯಾಕೆ ಕಾಳಜಿ ಇಲ್ಲಾ? ಯಾಕೆ ಈವರೆಗೂ ನೀವು ಮೈತ್ರಿಯನ್ನು ರದ್ದು ಮಾಡ್ತಿಲ್ಲಾ? ಅಮಿತ್ ಶಾ ಮತ್ತು ನಡ್ಡಾನ ನೇಹಾ ಮನೆಗೆ ಕರೆದುಕೊಂಡು ಹೋಗುತ್ತೀರಾ. ಈ ಸಂತ್ರಸ್ತರ ಮನೆಗೆ ಯಾವಾಗ ನಿಮ್ಮ ನಾಯಕರನ್ನು ಕರೆದುಕೊಂಡು ಹೋಗುತ್ತೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜೆಪಿ ನಡ್ಡಾ ವಿರುದ್ಧ ದೂರು-ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲು

    ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿ ಡೈವರ್ಟ್ ಮಾಡುತ್ತಿದ್ದಾರೆ. ಪರಿಶೀಲನೆ ನಡೆಸುವ ಮುಂಚೆ ಕೇಂದ್ರ ಸರ್ಕಾರ ವೀಸಾ ಕೊಟ್ಟು ಜರ್ಮನಿಗೆ ಕಳುಹಿಸಿದೆ. ಇದರಲ್ಲಿ ಬಿಜೆಪಿ ಕೇಂದ್ರ ಸರ್ಕಾರದ ಕೈವಾಡವಿದೆ. ಬಿಜೆಪಿ, ಮೋದಿಯವರ ಸಪೋರ್ಟ್ ಪ್ರಜ್ವಲ್ ರೇವಣ್ಣ ಮೇಲಿದೆ. ಬಿಜೆಪಿಯವರು ಮತಕ್ಕಾಗಿ ಮೈತ್ರಿ ಮುಂದುವರಿಕೆ ಮಾಡುತ್ತೀರಾ? ಕುಮಾರಸ್ವಾಮಿ ಹಿಟ್ ಅಂಡ್ ರನ್ ಹೇಳಿಕೆ ಕೊಡುತ್ತಿದ್ದಾರೆ. ಪೆನ್‌ಡ್ರೈವ್ ಬಿಡುತ್ತೇನೆ, ಪೆನ್‌ಡ್ರೈವ್ ಬಿಡುತ್ತೇನೆ ಎಂದು ಹೇಳಿದವರು ಯಾರು? ಎಲ್ಲೋ ಕನ್ಫ್ಯೂಸ್ ಆಗಿ ಮನೆಯ ಪೆನ್‌ಡ್ರೈವ್ ಬಿಟ್ಟಿದ್ದಾರಾ? ಬಿಜೆಪಿ ಅವರಿಗಿಂತ ಜಾಸ್ತಿ ಸುಳ್ಳು ಹೇಳೋದನ್ನ ಕುಮಾರಸ್ವಾಮಿ ಮಾಡುತ್ತಿದ್ದಾರೆ. ನಮ್ಮ ಜೊತೆ ಮೈತ್ರಿ ಇದ್ದಾಗ ತಪ್ಪು ಬಂದಿದ್ದರೆ ಸ್ಟ್ಯಾಂಡ್ ತೆಗೆದುಕೊಳುತ್ತಿದ್ದೆವು. ಪ್ರಜ್ವಲ್ ರೇವಣ್ಣನ ಅರೆಸ್ಟ್ ಮಾಡೋದು ಕೇಂದ್ರದ ಕೈಯಲ್ಲಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಬೆಂಕಿಯೊಂದಿಗೆ ಆಟವಾಡುತ್ತಿದೆ: ರಾಜನಾಥ್ ಸಿಂಗ್

  • ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು

    ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ – ಬಿವಿ ಶ್ರೀನಿವಾಸ್‍ಗೆ ಸುಪ್ರೀಂ ಜಾಮೀನು

    ನವದೆಹಲಿ: ಭಾರತೀಯ ಯುವ ಕಾಂಗ್ರೆಸ್ (Congress) ಅಧ್ಯಕ್ಷ ಬಿವಿ ಶ್ರೀನಿವಾಸ್ (BV Srinivas) ಅವರ ವಿರುದ್ಧದ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (Supreme Court) ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠವು ಜಾಮೀನು ನೀಡಿದೆ.

    ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಕರಣದ ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ನಿರೀಕ್ಷಣಾ ಜಾಮೀನು ಪಡೆಯಲು ಶ್ರೀನಿವಾಸ್ ಅವರು ಅರ್ಹರು ಎಂದು ಕೋರ್ಟ್ ಹೇಳಿದೆ. 50,000 ರೂ. ಬಾಂಡ್ ಪಡೆದು ಜಾಮೀನು ನೀಡಿದ ನ್ಯಾಯಾಲಯ ತನಿಖೆಗೆ ಸಹಕರಿಸುವಂತೆ ಸೂಚಿಸಿತು. ಈ ವೇಳೆ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಹಿಂಡನ್‍ಬರ್ಗ್ ಪ್ರಕರಣ – ಮೂರು ತಿಂಗಳಲ್ಲಿ ತನಿಖೆಯ ಪ್ರಗತಿ ತೋರಿಸಲು ಸೆಬಿಗೆ ಸುಪ್ರೀಂ ಸೂಚನೆ

    ಶ್ರೀನಿವಾಸ್ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದುಗೊಳಿಸುವಂತೆ ಗುವಾಹಟಿ ಹೈಕೋರ್ಟ್ (Gauhati High Court) ಮೆಟ್ಟಿಲೇರಿದ್ದರು. ಎಫ್‍ಐಆರ್ ದಾಖಲಿಸಲು ಅಸ್ಸಾಂ (Assam) ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ ಎಂದು ಆರೋಪಿಸಿದ್ದರು. ಆದರೆ ಹೈಕೋರ್ಟ್ ಮನವಿಯನ್ನು ತಿರಸ್ಕರಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅವರು ಸುಪ್ರೀಂ ಮೊರೆ ಹೋಗಿದ್ದರು.

    ಮಾ. 25 ರಂದು ರಾಯ್‍ಪುರದ ಮೇಫೇರ್ ಹೋಟೆಲ್‍ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸರ್ವಸದಸ್ಯರ ಅಧಿವೇಶನದ ವೇಳೆ ಶ್ರೀನಿವಾಸ್ ಹೋಟೆಲ್‍ನಲ್ಲಿ ಥಳಿಸಿದ್ದರು. ತನ್ನ ತೋಳುಗಳನ್ನು ಹಿಡಿದುಕೊಂಡು ದೌರ್ಜನ್ಯ ಎಸಗಿದ್ದರು. ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅಸ್ಸಾಂ ಯುವ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷೆ ಅಂಗಿತಾ ದತ್ತಾ ಅವರು ದೂರು ನೀಡಿದ್ದರು. ಅಲ್ಲದೆ ಅವರ ವರ್ತನೆ ಬಗ್ಗೆ ಕಾಂಗ್ರೆಸ್‍ನ ಉನ್ನತ ನಾಯಕರಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದತ್ತಾ ಆರೋಪಿಸಿದ್ದರು.

    ಶ್ರೀನಿವಾಸ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ವಕೀಲ ರಾಜೇಶ್ ಇನಾಮದಾರ್ ವಾದ ಮಂಡಿಸಿದರು. ಅಸ್ಸಾಂ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ವಾದ ಮಂಡಿಸಿದರು. ಇದನ್ನೂ ಓದಿ: ಗೋ ಸಾಗಾಣಿಕೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ – ಪುನೀತ್ ಕೆರೆಹಳ್ಳಿ ಸೇರಿ ಐವರಿಗೆ ಜಾಮೀನು

  • ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮುಖಂಡನ  ಕೂದಲು ಹಿಡಿದು ಜೀಪಿನೊಳಗೆ ದಬ್ಬಿದ ಪೊಲೀಸರು

    ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮುಖಂಡನ ಕೂದಲು ಹಿಡಿದು ಜೀಪಿನೊಳಗೆ ದಬ್ಬಿದ ಪೊಲೀಸರು

    ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಎರಡನೇ ಬಾರಿ ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಬೀದಿಗಿಳಿದು ಭಾರೀ ಪ್ರತಿಭಟನೆ ನಡೆಸಿದ್ದಾರೆ.

    ಕಳೆದ ಬಾರಿ ರಾಹುಲ್ ಗಾಂಧಿಯವರ ಇಡಿ ವಿಚಾರಣೆ ವೇಳೆ ಪ್ರತಿಭಟನೆಯಲ್ಲಿ ಪೊಲೀಸರನ್ನು ಕಂಡು ಕಾಲ್ಕಿತ್ತು ಓಡಿ ಹೋಗಿದ್ದ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಇಂದು ಮತ್ತೆ ಸುದ್ದಿಯಾಗಿದ್ದಾರೆ. ಇಂದು ಕೂಡಾ ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದ ಶ್ರೀನಿವಾಸ್ ಕೂದಲನ್ನು ಹಿಡಿದು ಪೊಲೀಸರು ಎಳೆದಾಡಿದ್ದಾರೆ.

    ಭಾರೀ ಪ್ರತಿಭಟನೆಯ ಸಂದರ್ಭ ಮಾಧ್ಯಮದವರೊಂದಿಗೆ ಮಾತಾಡಲು ಮುಂದಾದ ಶ್ರೀನಿವಾಸ್‌ನನ್ನು ಪೊಲೀಸರು ಕಾರಿನೊಳಗೆ ತಳ್ಳುವ ಪ್ರಯತ್ನ ಮಾಡಿದ್ದಾರೆ. ಶ್ರೀನಿವಾಸ್ ಕಾರಿನಿಂದ ಹೊರ ಬರುವ ಪ್ರಯತ್ನದಲ್ಲಿದ್ದಾಗ ಪೊಲೀಸರು ಅವರ ತಲೆ ಕೂದಲನ್ನು ಹಿಡಿದು ಹಿಗ್ಗಾಮುಗ್ಗ ಎಳೆದಾಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ – ಚಟರ್ಜಿ ಆಪ್ತೆಯ ಮನೆಯಲ್ಲಿ ಸ್ಫೋಟಕ ಮಾಹಿತಿಯಿರುವ ಡೈರಿ ಪತ್ತೆ

    ಶ್ರೀನಿವಾಸ್ ಅವರ ಕೂದಲು ಹಿಡಿದು ಎಳೆದಾಡಿದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ದೆಹಲಿ ಪೊಲೀಸರ ಗಮನಕ್ಕೂ ಬಂದಿದೆ. ಶ್ರೀನಿವಾಸ್ ಅವರೊಂದಿಗೆ ಈ ರೀತಿಯಾಗಿ ವರ್ತಿಸಿರುವ ಸಿಬ್ಬಂದಿಯನ್ನು ನಾವು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಸಿಬ್ಬಂದಿ ಗುರುತು ಸಿಕ್ಕ ಬಳಿಕ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಮುಖ್ಯಮಂತ್ರಿ ಆಗಿದ್ದರೆ ಉಮೇಶ್ ಕತ್ತಿಯನ್ನ ನಿಮ್ಹಾನ್ಸ್ ಸೇರಿಸ್ತಿದ್ದೆ: ವಾಟಾಳ್ ನಾಗರಾಜ್

    Live Tv
    [brid partner=56869869 player=32851 video=960834 autoplay=true]

  • ನೆಹರು ಕುಟುಂಬ ಏನು ಮಾಡಿದ್ರೂ ಪ್ರಶ್ನಿಸುವಂತಿಲ್ಲ ಎಂದು ಸಂವಿಧಾನದಲ್ಲಿದ್ಯಾ?: ಸಿ.ಟಿ ರವಿ

    ನೆಹರು ಕುಟುಂಬ ಏನು ಮಾಡಿದ್ರೂ ಪ್ರಶ್ನಿಸುವಂತಿಲ್ಲ ಎಂದು ಸಂವಿಧಾನದಲ್ಲಿದ್ಯಾ?: ಸಿ.ಟಿ ರವಿ

    ಚಿಕ್ಕಮಗಳೂರು: ಸಂವಿಧಾನದಲ್ಲಿ ನೆಹರು ಕುಟುಂಬ ಏನು ಮಾಡಿದರೂ ಪ್ರಶ್ನೆ ಮಾಡುವಂತಿಲ್ಲ ಎಂದು ಸಂವಿಧಾನದಲ್ಲಿ ಇದೆಯಾ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕ್ರಿಮಿನಲ್ ಆಫೆನ್ಸ್ ಮಾಡಿದವರನ್ನು ಕೂಡ ವಿಚಾರಣೆ ಮಾಡಬಾರದು ಎಂದರೆ ಏನರ್ಥ? ಮಹಾತ್ಮ ಗಾಂಧಿ ಹೆಸರನ್ನಿಟ್ಟುಕೊಂಡು ಅವರ ವ್ಯಕ್ತಿತ್ವಕ್ಕೆ ಅಪಚಾರ ಬರೆಯುತ್ತಿದ್ದಾರೆ. ನಿಜವಾಗಿಯೂ ಇವರು ಗಾಂಧಿ ಅಲ್ಲ. ಇವರು ಗ್ಯಾಂಡಿ ಎಂದು ಲೇವಡಿ ಮಾಡಿದರು.

    ರಾಹುಲ್ ಗಾಂಧಿಯವರ ದಾದಾ ಫಿರೋಜ್ ಗ್ಯಾಂಡಿ. ಆದರೆ ಇವರು ಗಾಂಧಿ ಎಂದು ಹೆಸರನ್ನಿಟ್ಟುಕೊಂಡಿದ್ದಾರೆ. ನೋಡಿದ ಜನ ಏನೆಂದು ತಿಳಿದುಕೊಳ್ಳುತ್ತಾರೆ? ಇವರು ಮಹಾತ್ಮ ಗಾಂಧಿಯವರ ಕುಟುಂಬದವರು ಎಂದುಕೊಳ್ಳುತ್ತಾರೆ. ಗಾಂಧಿ ಸತ್ಯದ ಪರವಾಗಿ ಸತ್ಯಾಗ್ರಹ ಮಾಡಿದರೆ, ಇವರು ಅಕ್ರಮ, ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬೀದಿಯಲ್ಲಿ ನಿಂತು ಚಳುವಳಿ ಮಾಡುತ್ತಾರೆ ಎಂದು ಕಿಡಿ ಕಾರಿದರು.

    ಚಳುವಳಿ ಮೂಲಕ ಭ್ರಷ್ಟಾಚಾರ ತನಿಖೆ ಆಗಬಾರದು ಎಂದು ಬಯಸುತ್ತಾರಾ? ಇವರ ಹುನ್ನಾರ ಏನು? ಇದಕ್ಕೆ ಉತ್ತರ ನೀಡಲಿ. ಕನಿಷ್ಠ 2,000 ದಿಂದ 5,000 ಕೋಟಿ ರೂ. ವ್ಯಾಲ್ಯೂವೇಷನ್ ಇದೆ ಎಂದು ಮಾತನಾಡುತ್ತಾರೆ. ಅಷ್ಟು ಇರುವುದನ್ನು 50 ಲಕ್ಷ ರೂ. ಒಂದು ಯಂಗ್ ಇಂಡಿಯಾ ಎಂಬಂತಹ ಕಂಪನಿ ಸ್ಟಾರ್ಟ್ ಮಾಡಿ ಟ್ರಾನ್ಸ್‌ಫರ್ ಮಾಡಿದರೆ ಇದನ್ನು ಹಗಲು ದರೋಡೆ ಎನ್ನದೆ ಬೇರೇನು ಹೇಳಬೇಕು ಎಂದು ಪ್ರಶ್ನಿಸಿದರು.

    ಸಿದ್ದರಾಮಯ್ಯನವರೇ, ಡಿಕೆ ಶಿವಕುಮಾರ್ ಅವರೇ ನಿಮ್ಮ ಲೆಕ್ಕದಲ್ಲಿ ಇದು ಹಗಲು ದರೋಡೆ ಅಲ್ಲವಾ? ಹಾಗಾದರೆ ನೀವು ಭ್ರಷ್ಟಾಚಾರವನ್ನು ಸಮರ್ಥನೆ ಮಾಡಲು ಚಳುವಳಿ ಮಾಡಿದ್ರಾ? ದೇಶದಲ್ಲಿ ಭ್ರಷ್ಟಾಚಾರವನ್ನು ನೀವು ಬೀದಿಯಲ್ಲಿ ಚಳುವಳಿ ಮಾಡುವ ಮೂಲಕ ಮುಚ್ಚಿಟ್ಟುಕೊಳ್ಳಲು ಆಗುತ್ತಾ ಎಂದು ವಾಗ್ವಾದ ನಡೆಸಿದರು. ಇದನ್ನೂ ಓದಿ: ಅಡ್ಡಮಾರ್ಗ ಹಿಡಿದ ಕಾಂಗ್ರೆಸ್ ನಾಪತ್ತೆಯಾಗುತ್ತೆ: ಆರಗ ಜ್ಞಾನೇಂದ್ರ

    ಇದೇ ವೇಳೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ ವಿರುದ್ಧವೂ ಮಾತನಾಡಿದ ಸಿ.ಟಿ ರವಿ, ಬಿವಿ ಶ್ರೀನಿವಾಸ್ ಅವರಿಗೆ ಉಜ್ವಲ ಭವಿಷ್ಯವಿದೆ. ರಾಜಕಾರಣದಲ್ಲಿ ಅಲ್ಲ, ರನ್ನಿಂಗ್ ರೇಸ್‌ನಲ್ಲಿ. ನಾನು ನೋಡಿದ ಕ್ಷಣಾರ್ಧದಲ್ಲಿ ಮಿಂಚಿನ ಓಟ. ಯಾವುದಾದರೂ ಅಥ್ಲೆಟಿಕ್ಸ್‌ಗೆ ಹೋದರೆ ಫ್ರೈಜ್-ಗೀಜ್ ಸಿಗಬಹುದು. ಅವರು ಭವಿಷ್ಯವನ್ನು ಅಲ್ಲಿ ಹುಡುಕಬಹುದು. ಓಡುವುದರಲ್ಲೂ ಹೇಗೆ ಭವಿಷ್ಯ ಎಂಬುದನ್ನು ಅಲ್ಲಿ ಹುಡುಕಾಡಬಹುದು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕುವೆಂಪು ಸಾಕಷ್ಟು ಜನರ ಸಹಕಾರದಿಂದ ಉನ್ನತ ಸ್ಥಾನಕ್ಕೇರಿದರು ಎಂದವನು ಅಯೋಗ್ಯ: ಎಂಎಲ್‍ಸಿ

    ನಾವು ಚಳುವಳಿ ಮೂಲಕ ಬಂದವರು. ಹತ್ತಾರು ಪೊಲೀಸ್ ಸ್ಟೇಷನ್‌ನಲ್ಲಿ ಒದೆ ತಿಂದಿದ್ದೇವೆ. ನನಗೇನು ಸಂಕೋಚ ಇಲ್ಲ. ಚಳುವಳಿ ಮಾಡಿ, ಕೇಸ್ ಹಾಕಿಸಿಕೊಂಡಿದ್ದೇವೆ. ವರ್ಷಕ್ಕೆ 2-3 ಬಾರಿ ಜೈಲಿಗೆ ಹೋಗಿದ್ದೇವೆ. ಯಾವತ್ತೂ ಬೆನ್ನು ತೋರಿಸಿ ಓಡಿ ಹೋಗಿಲ್ಲ. ಅವರಿಗೆ ಭವಿಷ್ಯವಿದೆ. ಮಿಂಚಿನ ಓಟ ಎಷ್ಟು ಬೇಗ ಅಂದ್ರೆ, ಇದೇ ಸ್ಪೀಡಲ್ಲಿ ಒಲಂಪಿಕ್ಸ್‌ನಲ್ಲಿ ಓಡಿದ್ರೆ ಗ್ಯಾರಂಟಿ ಪ್ಲೇಸ್ ಮಾಡುವವರು. ಅವರಿಗೆ ಎಷ್ಟು ವಯಸ್ಸು ಗೊತ್ತಿಲ್ಲ. ರಾಜಕೀಯದಲ್ಲಿ ಭವಿಷ್ಯ ಹುಡುಕಿಕೊಳ್ಳಲು ಆಗುತ್ತೋ ಇಲ್ವೋ ಆದರೆ ಓಟದಲ್ಲಿ ಭವಿಷ್ಯ ಕಂಡುಕೊಳ್ಳಬಹುದು. ಪೊಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುವ ಕಳ್ಳರಿಗೆ ಇವರು ಮಾದರಿ ಎಂದು ಟಾಂಗ್ ನೀಡಿದರು.

  • ಪ್ರತಿಭಟನೆಗೂ ಮುನ್ನ ನನ್ನ ಅರೆಸ್ಟ್ ಮಾಡಲು ಬಂದ ಬಿಜೆಪಿ ನಾಯಕರು ಶಿಖಂಡಿಗಳು: ಬಿ.ವಿ ಶ್ರೀನಿವಾಸ್

    ಪ್ರತಿಭಟನೆಗೂ ಮುನ್ನ ನನ್ನ ಅರೆಸ್ಟ್ ಮಾಡಲು ಬಂದ ಬಿಜೆಪಿ ನಾಯಕರು ಶಿಖಂಡಿಗಳು: ಬಿ.ವಿ ಶ್ರೀನಿವಾಸ್

    ನವದೆಹಲಿ: ಪ್ರತಿಭಟನೆಗೂ ಮುನ್ನ ನನ್ನ ಅರೆಸ್ಟ್ ಮಾಡಲು ಬಂದ ಬಿಜೆಪಿ ನಾಯಕರುಗಳೇ ಶಿಖಂಡಿಗಳು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿಭಟನೆ ತಡೆಯಲು ಪೊಲೀಸ್ ಹಾಕಿದ ಭದ್ರತೆ ಬಗ್ಗೆ ಬಿಜೆಪಿ ಮಾತನಾಡಲಿ. ಕಾಂಗ್ರೆಸ್ ನಾಯಕರಿಗೆ ಹೆದರಿ ಬಾರಿ ಭದ್ರತೆ ನಿಯೋಜನೆ ಮಾಡಿದ್ದಾರೆ. ಈ ಭದ್ರತೆ ಅರುಣಾಚಲ ಪ್ರದೇಶ, ಲಡಾಕ್ ನಲ್ಲಿ ಹಾಕಿದ್ದರೇ ಚೀನಾ ದೇಶದ ಒಳಗೆ ಬರುತ್ತಿರಲಿಲ್ಲ ಎಂದರು.

    ಸಿ.ಟಿ ರವಿ ಒಬ್ಬ ಸಮಾಜಘಾತುಕ. ಅವನೊಬ್ಬ ಮೆಂಟಲ್ ಗಿರಾಕಿ. ಬಿಜೆಪಿಯವರು 130ಕ್ಕೂ ಹೆಚ್ಚು ಕೇಸ್ ನನ್ನ ಮೇಲೆ ಹಾಕಿದ್ದಾರೆ. ಆದರೆ ನಾನು ಯಾವುದಕ್ಕೂ ಹೆದರಿಲ್ಲ. ಪ್ರತಿಭಟನೆ ನಡೆಸುವ ವೇಳೆ ನಾನು ಭಾಗಿಯಾಗಬೇಕಿತ್ತು. ಅದಕ್ಕೂ ಮುನ್ನ ನನ್ನ ಬಂಧಿಸಲು ಪ್ರಯತ್ನಿಸಿದರು ಎಂದು ಹೇಳಿದರು. ಇದನ್ನೂ ಓದಿ: ಪೊಲೀಸರನ್ನು ನೋಡುತ್ತಲೇ ಎದ್ನೋ ಬಿದ್ನೋ ಓಟಕ್ಕಿತ್ತ ಶ್ರೀನಿವಾಸ್ ಬಿವಿ

    ನನ್ನ ಮೇಲಿನ ಭಯಕ್ಕೆ ನಿನ್ನೆಯಿಂದ ಬಂಧಿಸಲು ಪ್ರಯತ್ನ ಮಾಡಿದ್ದಾರೆ. ನಾನು ಜೈಲಿನಲ್ಲಿ ಕೂತರೆ ಕಾರ್ಯಕರ್ತರ ಕಥೆ ಏನು..?. ನಾನು ಯೂಥ್ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಬೇಕಿತ್ತು. ಪ್ರತಿಭಟನೆಗೂ ಮುನ್ನ ನನ್ನ ಅರೆಸ್ಟ್ ಮಾಡಲು ಬಂದ ಬಿಜೆಪಿ ನಾಯಕರು ಶಿಖಂಡಿಗಳು ಎಂದು ಕಿಡಿಕಾರಿದರು. ಇದನ್ನೂ ಓದಿ: ಮೋದಿಜೀ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ ಹೆದರದ ಕಾಂಗ್ರೆಸ್ ನಿಮ್ಮ ಸರ್ಕಾರಕ್ಕೆ ಹೆದರುತ್ತಾ?: ಸಿದ್ದರಾಮಯ್ಯ

    ಸಿ.ಟಿ ರವಿಯವರೇ ನನ್ನ ಇತಿಹಾಸ ತೆಗೆದು ನೋಡಿ. ದೆಹಲಿಯಲ್ಲಿ ನನಗೆ ಏನು ಹೆಸರಿದೆ ಗೊತ್ತಾ?. ನನ್ನ ಆಕ್ಸಿಜನ್ ಮ್ಯಾನ್ ಅಂತಾ ಕರೆಯುತ್ತಾರೆ. ನ್ಯೂಯಾರ್ಕ್ ಟೈಮ್ಸ್ ತೆಗೆದು ಸಿ.ಟಿ ರವಿ ಓದಲಿ. ಬೇಕಾದ್ರೆ ಸಿ.ಟಿ ರವಿಗೆ ಪತ್ರಿಕೆ ಕಳಿಸುವೆ. ಸಿ.ಟಿ ರವಿಗೆ ಲೂಟಿ ರವಿ ಅಂತಾ ಕರಿತಾರೇ. ಯಾರ ಹಿನ್ನೆಲೆ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಗರಂ ಆದರು.