Tag: ಬಿಳಿ ಕಾಗೆ

  • ಮೈಸೂರಿನಲ್ಲಿ ಕಾಣಿಸಿಕೊಂಡ ಬಿಳಿ ಕಾಗೆ – ಗ್ರಾಮಸ್ಥರಲ್ಲಿ ಆತಂಕ

    ಮೈಸೂರಿನಲ್ಲಿ ಕಾಣಿಸಿಕೊಂಡ ಬಿಳಿ ಕಾಗೆ – ಗ್ರಾಮಸ್ಥರಲ್ಲಿ ಆತಂಕ

    ಮೈಸೂರು: ಸಾಮಾನ್ಯವಾಗಿ ಕಾಗೆ ಎಂದ ತಕ್ಷಣ ನೆನಪಾಗುವುದು ಕಪ್ಪು ಬಣ್ಣ. ಆದ್ರೆ ಜಿಲ್ಲೆಯಲ್ಲಿ ಬಿಳಿ ಬಣ್ಣದ ಕಾಗೆ ಕಾಣಿಸಿಕೊಂಡಿದ್ದು ಹಲವರಲ್ಲಿ ಅಚ್ಚರಿಗೆ ಕಾರಣವಾಗಿದೆ.

    ಕೆಆರ್ ನಗರ ತಾಲೂಕು ಭೇರ್ಯ ಗ್ರಾಮದಲ್ಲಿ ಬಿಳಿ ಕಾಗೆ ಕಾಣಿಸಿಕೊಂಡಿದ್ದು, ಬೇರೆ ಸಾಮಾನ್ಯ ಕಾಗೆಗಳ ಗುಂಪಿನ ಜೊತೆಯಲ್ಲೇ ಹಾರಾಟ ನಡೆಸುತ್ತಿದೆ. ದಿನನಿತ್ಯ ಗ್ರಾಮದ ದಿನಸಿ ಅಂಗಡಿ ಬಳಿ ಕಾಣಿಸಿಕೊಳ್ಳುವ ಈ ಬಿಳಿ ಕಾಗೆ ಕುರಿತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ಕಾಗೆಯ ಮೈಬಣ್ಣ ಬಿಳಿಯಾಗಿದ್ದರೆ, ಕತ್ತಿನ ಮೇಲ್ಭಾಗ ಮಾತ್ರ ಕಪ್ಪಿಗಿದೆ. ಜೀನ್ ವ್ಯತ್ಯಾಸದಿಂದ ಕಾಗೆ ಬಿಳಿ ಬಣ್ಣಕ್ಕೆ ತಿರುಗಿರೋ ಸಾಧ್ಯತೆ ಇದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ ಎನ್ನುವುದು ಕೆಲ ಪಕ್ಷಿ ತಜ್ಞರ ಅಭಿಪ್ರಾಯವಾಗಿದೆ.

    ಈ ಹಿಂದೆಯೂ ಸಹ ಮೈಸೂರಿನ ಕೆಆರ್ ಆಸ್ಪತ್ರೆ ಬಳಿ ಕಪ್ಪು ಹಾಗೂ ಬಿಳಿ ಬಣ್ಣದಿಂದ ಕೂಡಿದ್ದ ಕಾಗೆ ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿತ್ತು.

  • ಮೈಸೂರಿನಲ್ಲಿ ಕಪ್ಪು, ಬಿಳಿ ಕಾಗೆ ಪ್ರತ್ಯಕ್ಷ!

    ಮೈಸೂರಿನಲ್ಲಿ ಕಪ್ಪು, ಬಿಳಿ ಕಾಗೆ ಪ್ರತ್ಯಕ್ಷ!

    ಮೈಸೂರು: ಕಾಗೆ ಬಣ್ಣ ಕಪ್ಪು ಇರುವುದು ಎಲ್ಲರಿಗೆ ತಿಳಿದಿರುವ ವಿಚಾರ. ಆದರೆ ಮೈಸೂರಿನಲ್ಲಿ ಬಿಳಿ ಕಾಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ.

    ಕಾಗೆಯ ಅರ್ಧ ಭಾಗ ಹಾಗೂ ಪುಕ್ಕ ಬಿಳಿ ಬಣ್ಣದಿಂದ ಕೂಡಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಈ ಬಿಳಿ ಕಾಗೆ ಕಾಣಿಸಿಕೊಂಡಿದ್ದು, ಬಹು ದಿನದಿಂದ ಆಸ್ಪತ್ರೆಯ ಆವರಣದಲ್ಲಿನ ಮರದಲ್ಲೇ ಕಾಗೆ ಇದೆ. ಈ ಬಿಳಿ ಕಾಗೆ ನೋಡಿ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಜೀನ್ ವ್ಯತ್ಯಾಸಗಳಿಂದ ಕಾಗೆ ಬಿಳಿ ಬಣ್ಣಕ್ಕೆ ತಿರುಗಿರೋ ಸಾಧ್ಯತೆ ಇದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ ಎನ್ನುವುದು ಕೆಲ ಪಕ್ಷಿ ತಜ್ನರ ಅಭಿಪ್ರಾಯಪಟ್ಟಿದ್ದಾರೆ.