Tag: ಬಿಳಿಗಿರಿರಂಗನ ಬೆಟ್ಟ

  • ಬಿಳಿಗಿರಿರಂಗನ ಬೆಟ್ಟ, ಬಂಡೀಪುರಕ್ಕೆ ವರದಾನವಾಯ್ತು ಭಾರೀ ಮಳೆ

    ಬಿಳಿಗಿರಿರಂಗನ ಬೆಟ್ಟ, ಬಂಡೀಪುರಕ್ಕೆ ವರದಾನವಾಯ್ತು ಭಾರೀ ಮಳೆ

    ಚಾಮರಾಜನಗರ: ಕಳೆದ ಒಂದೆರಡು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರುವ ಬಾರಿ ಮಳೆಯಿಂದ ಬೆಂಗಳೂರು ಸೇರಿದಂತೆ ನಾಡಿನ ಹಲವೆಡೆ ಹಲವು ಅವಘಡಗಳು ಸಂಭವಿಸಿವೆ. ಆದ್ರೆ ಈ ಮಳೆ ಅರಣ್ಯ ಭಾಗಕ್ಕೆ ವರದಾನವಾಗಿದ್ದು ಇದರಿಂದ ಪ್ರಕೃತಿ ಸೌಂದರ್ಯ ಕಂಗೊಳಿಸುತ್ತಿದೆ.

    ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣಾ ಪ್ರದೇಶ, ಬಂಡಿಪುರ ಹುಲಿ ಸಂರಕ್ಷಣಾ ಪ್ರದೇಶದ ಕಾಡು ಇದೀಗ ಹಚ್ಚ-ಹಸಿರಿನಿಂದ ಕಂಗೊಳಿಸುವುದರ ಜೊತೆಗೆ ಕಾಡಿನ ಮಧ್ಯ ಅಲ್ಲಿ ಝರಿಗಳು ನಿರ್ಮಾಣವಾಗಿವೆ. ಕಳೆದ ಒಂದೆರಡು ತಿಂಗಳಿನಿಂದ ಸುರಿದ ಭಾರೀ ಮಳೆ ಚಾಮರಾಜನಗರ ಜಿಲ್ಲೆ ಭಾಗದ ಅರಣ್ಯ ಪ್ರದೇಶವನ್ನು ಕಂಗೊಳಿಸುವಂತೆ ಮಾಡಿದೆ.

     

    ಭಾರೀ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಕಾಡಿನ ಮಧ್ಯೆ ಅಲ್ಲಲ್ಲಿ ಝರಿಗಳು ಹರಿಯುತ್ತಿದ್ದು, ಕಾಡಿನ ಸೊಬಗಿಗೆ ಮತ್ತಷ್ಟು ರಂಗು ತಂದಿದೆ. ಹಸಿರಿನ ಸೊಬಗಿನ ಮಧ್ಯ ಭಾಗದಲ್ಲಿ ಮೈದುಂಬಿ ಹರಿಯುತ್ತಿರುವ ಇಂತಹ ಝರಿಗಳನ್ನು ನೋಡಲು, ನಾಡಿನ ಹಲವು ಭಾಗಗಳಿಂದ ಪ್ರೇಕ್ಷಕರು ಇಲ್ಲಿಗೆ ಆಗಮಿಸಿ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

    ಕಳೆದ ಏಳು ತಿಂಗಳ ಹಿಂದೆ ಬಿಳಿರಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣ ಪ್ರದೇಶ ಹಾಗೂ ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದ ಕಾಡಿಗೆ ಬೆಂಕಿ ಬಿದ್ದು ಕಾಡು ಹೊತ್ತಿ ಉರಿದಿತ್ತು. ಇದರಿಂದ ಕಾಡಿನ ಅನೇಕ ಮರಗಿಡಗಳು ಬೆಂಕಿಗೆ ಆಹುತಿಯಾಗಿದ್ದವು. ಹೀಗಾಗಿ ಕಾಡಿನ ಸೌಂದರ್ಯ ಸಂಪೂರ್ಣವಾಗಿ ಕಳೆಗುಂದಿತ್ತು. ಇದೀಗ ಸುರಿಯುತ್ತಿರುವ ಮಳೆಯಿಂದ ಬೆಂಕಿ ಬಿದ್ದ ಪ್ರದೇಶಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ವರುಣನ ಆರ್ಭಟ ವನ್ಯ ಸಿರಿಯ ಸೊಬಗನ್ನು ಇದೀಗ ಮರುಕಳಿಸಿದ್ದು ಕಾಡಿಗೆ ಹಾಗೂ ಪ್ರೇಕ್ಷಕರಿಗೆ ಹಬ್ಬದೂಟ ಬಡಿಸುತ್ತಿದ್ದಾನೆ.

  • ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಆನೆಯ ರಕ್ಷಣೆ

    ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿದ ಆನೆಯ ರಕ್ಷಣೆ

    ಚಾಮರಾಜನಗರ: ಆನೆಯೊಂದು ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ನಡೆದಿದೆ.

    ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಕೃಷ್ಣಯ್ಯನ ಕಟ್ಟೆ ಎಂಬಲ್ಲಿ ಆನೆ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಭೀಕರ ಬರಗಾಲದಿಂದ ಅಲ್ಪಸ್ವಲ್ಪ ನೀರಿದ್ದ ಕಾರಣ ಈ ಘಟನೆ ನಡೆದಿದೆ.

    ಇಂದು ಬೆಳಗ್ಗೆ ಆನೆಗಳು ನೀರು ಕುಡಿಯಲು ಬಂದಾಗ ಒಂದು ಆನೆ ಕೆಸರಿನಲ್ಲಿ ಸಿಕ್ಕಿಕೊಂಡಿತ್ತು. ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿ ಆನೆ ಕೆಸರಿನಲ್ಲಿ ಸಿಲುಕಿರುವ ದೃಶ್ಯ ಕಂಡು ಜೆಸಿಬಿ ಯಂತ್ರ ತರಿಸಿ ಆನೆಯನ್ನು ಮೇಲೆತ್ತಿ ರಕ್ಷಿಸಿದ್ದಾರೆ.

    https://www.youtube.com/watch?v=ROnJakgagu8

     

  • ಬಿಳಿಗಿರಿ ರಂಗನ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಬೆಂಕಿ

    ಬಿಳಿಗಿರಿ ರಂಗನ ಬೆಟ್ಟದಲ್ಲಿ ನಿಯಂತ್ರಣಕ್ಕೆ ಬಂದ ಬೆಂಕಿ

    ಚಾಮರಾಜನಗರ: ಕಳೆದ ಎಂಟು ದಿನಗಳಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಮೂರು ದಿನಗಳಿಂದ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಣಾ ಪ್ರದೇಶ ಅಕ್ಷರಶಃ ಬೆಂಕಿಯಿಂದ ಹೊತ್ತಿ ಉರಿದಿತ್ತು. ಇದೀಗ ಬೆಂಕಿಯನ್ನು ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

    ಬೆಂಕಿ ಜ್ವಾಲೆಯ ನಡುವೆ ಅರಣ್ಯ ಇಲಾಖೆ ಸಿಬ್ಬಂದಿಗಳು ಹಗಲಿರುಳು ನಿದ್ದೆ, ಊಟವಿಲ್ಲದೇ ನಡೆಸಿದ ಕಾರ್ಯಚರಣೆಯ ಫಲವಾಗಿ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದೆ. ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಗೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಅಲ್ಲದೇ ಅಲವಾರು ಪ್ರಾಣಿ ಸಂಕುಲ ಬೆಂಕಿಯ ಕಿನ್ನಾಲೆಗೆ ತುತ್ತಾಗಿವೆ.

    ಬಂಡೀಪುರದ ಕಲ್ಕರೆ, ಗುಂಡ್ರೆ, ಮದ್ದೂರು ಅರಣ್ಯ ಪ್ರದೇಶ ಹಾಗೂ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಣಾ ಪ್ರದೇಶದ ಮದಲೆಮಾವು, ಪುಣಜೂರು, ಬೆಡಗುಳಿ ಪ್ರದೇಶದಲ್ಲಿ ಬಿದ್ದಿದ್ದ ಬೆಂಕಿ ಸಂಪೂರ್ಣ ಹತೋಟಿಗೆ ಬಂದಿದೆ.