Tag: ಬಿಳಿಗಿರಿರಂಗನ ಬೆಟ್ಟ

  • ಗಡಿಜಿಲ್ಲೆ ದೇಗುಲಗಳಿಗೆ ಕುಟುಂಬ ಸಮೇತ ಸಿಜೆಐ  ಭೇಟಿ

    ಗಡಿಜಿಲ್ಲೆ ದೇಗುಲಗಳಿಗೆ ಕುಟುಂಬ ಸಮೇತ ಸಿಜೆಐ  ಭೇಟಿ

    ಚಾಮರಾಜನಗರ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕುಟುಂಬ ಸಮೇತರಾಗಿ ಬಿಳಿಗಿರಿರಂಗನ ಬೆಟ್ಟ, ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿದರು.

    ಯಳಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರೆ ಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಬಿಳಿಗಿರಿ ರಂಗನಾಥನಿಗೆ ವಿಶೇಷ ಪೂಜೆ, ಅರ್ಚನೆ ಮಾಡಿಸಿದರು. ಬಳಿಕ, ಬಿಳಿಗಿರಿರಂಗನ ಬೆಟ್ಟದಿಂದ ಕೆ.ಗುಡಿಗೆ ಬಂದು ಅರಣ್ಯ ಸೌಂದರ್ಯ ವೀಕ್ಷಿಸಿದರು.

    ಚಾಮರಾಜನಗರದ ಹರಳುಕೋಟೆ ಆಂಜನೇಯ ಸನ್ನಿಧಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದು ಅರ್ಚನೆ ಮಾಡಿಸಿದರು. ಹರಳುಕೋಟೆ ಆಂಜನೇಯಸ್ವಾಮಿ ದೇಗುಲವು ಬಬ್ರುವಾಹನನಿಂದ ಸ್ಥಾಪಿತಗೊಂಡ ಮೂರ್ತಿ ಎಂಬ ನಂಬಿಕೆ ಇದ್ದು ಪುರಾಣ ಐತಿಹ್ಯ ಹಾಗೂ ಇತಿಹಾಸ ಇದೆ.

  • ಬಿಳಿಗಿರಿರಂಗನ ಬೆಟ್ಟದ ಪ್ರಣವಾನಂದ ಸ್ವಾಮೀಜಿ ನಿಧನ

    ಬಿಳಿಗಿರಿರಂಗನ ಬೆಟ್ಟದ ಪ್ರಣವಾನಂದ ಸ್ವಾಮೀಜಿ ನಿಧನ

    ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ ವಿಶ್ವಶಾಂತಿ ನಿಕೇತನ ಆಶ್ರಮದ ಪ್ರಣವಾನಂದ ಸ್ವಾಮೀಜಿ(84) ನಿಧನರಾಗಿದ್ದಾರೆ.

    ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಣವಾನಂದ ಸ್ವಾಮೀಜಿ ಅವರನ್ನು ಚಾಮರಾಜನಗರ ಜಿಲ್ಲಾ ಸರ್ಕಾರಿ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸ್ವಾಮೀಜಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸೇನೆಗೆ ಸ್ವದೇಶಿ ಆಧುನಿಕ ಶಸ್ತ್ರಾಸ್ತ್ರ ಹಸ್ತಾಂತರ – ಏನಿದು F-INSAS ಸಿಸ್ಟಂ? ನಿಪುಣ್‌ ಲ್ಯಾಂಡ್‌ ಮೈನ್ಸ್‌?

    ಕಳೆದ 18 ವರ್ಷಗಳಿಂದ ವಿಶ್ವಶಾಂತಿ ನಿಕೇತನ ಆಶ್ರಮದಲ್ಲಿದ್ದ ಪ್ರಣವಾನಂದ ಸ್ವಾಮೀಜಿ ಮೂಲತಃ ಉಡುಪಿ ಜಿಲ್ಲೆ ಕಟಪಾಡಿಯವರು.  ಬುಧವಾರ ಬಿಳಿಗಿರಿರಂಗನ ಬೆಟ್ಟದಲ್ಲಿ ಪ್ರಣವಾನಂದ ಸ್ವಾಮೀಜಿ ಅವರ ಅಂತ್ಯಕ್ರಿಯೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಹುಲಿಗಳ ಸಂಖ್ಯೆ ಹೆಚ್ಚಳ – ಚೆಲುವ ಚಾಮರಾಜನಗರ ಈಗ ಹುಲಿಗಳ ನಾಡು

    ಹುಲಿಗಳ ಸಂಖ್ಯೆ ಹೆಚ್ಚಳ – ಚೆಲುವ ಚಾಮರಾಜನಗರ ಈಗ ಹುಲಿಗಳ ನಾಡು

    ಚಾಮರಾಜನಗರ: ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೇ ಕಳೆದ 10 ವರ್ಷದಲ್ಲಿ 100ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಅತಿಹೆಚ್ಚು ಹುಲಿಗಳನ್ನು ಪೋಷಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ಪ್ರತಿ ವರ್ಷವೂ ಜುಲೈ 29ರ ದಿನವನ್ನು `ವಿಶ್ವಹುಲಿ’ ದಿನವನ್ನಾಗಿ ಆಚರಿಸಲಾಗುತ್ತದೆ. ಹಿಂದೆ ಹುಲಿಗಳ ಸಂರಕ್ಷಣೆ ದೊಡ್ಡ ಸವಾಲಾಗಿತ್ತು. ಆದರೀಗ ಸಂರಕ್ಷಣೆ ಉತ್ತಮವಾಗಿದ್ದು, ಹುಲಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಗಡಿಜಿಲ್ಲೆ ಚಾಮರಾಜನಗರ ಹುಲಿಗಳ ನಾಡು ಎಂದೇ ಹೆಸರು ಗಳಿಸಿದೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ NIA ಹೆಗಲಿಗೆ

    ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ಮಲೈ ಮಹದೇಶ್ವರ ವನ್ಯಜೀವಿಧಾಮವೂ ಕೆಲವೇ ದಿನಗಳಲ್ಲಿ ಹುಲಿ ಸಂರಕ್ಷಿತ ಪ್ರದೇಶ ಆಗುವ ನಿರೀಕ್ಷೆಯಿದೆ. ಬಂಡೀಪುರ ಅರಣ್ಯ ಪ್ರದೇಶವು 1973ರಲ್ಲಿ ಮೊದಲಿಗೆ ಹುಲಿ ಸಂರಕ್ಷಿತ ಅರಣ್ಯಪ್ರದೇಶವಾಗಿ ಘೋಷಣೆಯಾಯ್ತು. ಆಗ ಸಂದರ್ಭದಲ್ಲಿ 12 ಹುಲಿಗಳಷ್ಟೇ ಇತ್ತು ಎಂದು ಅಂದಾಜು ಮಾಡಲಾಗಿತ್ತು. ಕ್ರಮೇಣ ಹುಲಿಗಳ ಸಂರಕ್ಷಣೆ ಹೆಚ್ಚಾಯ್ತು.

    ಇದಿಗ ಕಳೆದ ಹುಲಿ ಗಣತಿಯ ಪ್ರಕಾರ ಸುಮಾರು 150ಕ್ಕೂ ಹೆಚ್ಚು ಹುಲಿಗಳಿರೋದು ಗೊತ್ತಾಗಿದೆ. ಅದೇ ರೀತಿ ಬಿಳಿಗಿರಿ ರಕ್ಷಿತಾರಣ್ಯದಲ್ಲೂ ಕಳೆದ ಗಣತಿಯಲ್ಲಿ 86 ಹುಲಿಗಳಿರೋದು ಕಂಡು ಬಂದಿದೆ. ಮಲೈ ಮಹದೇಶ್ವರ ವನ್ಯಜೀವಿಧಾಮದಲ್ಲಿ 15ಕ್ಕೂ ಹೆಚ್ಚು ಹುಲಿಗಳಿದ್ದು, ಇದೀಗ ಅದರ ಸಂಖ್ಯೆ 25 ರಿಂದ 30ಕ್ಕೆ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ 10 ವರ್ಷದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದರೆ, ಗಡಿ ಅರಣ್ಯದಲ್ಲಿ 250ಕ್ಕೂ ಹುಲಿಗಳಿವೆ ಎಂದು ಪ್ರಸ್ತುತ ಗಣತಿಯು ಮಾಹಿತಿ ನೀಡಿದೆ. ಅರಣ್ಯ ಇಲಾಖೆಯ ಸರಂಕ್ಷಣಾ ಕ್ರಮಗಳೂ ಹುಲಿಗಳ ಸಂಖ್ಯೆ ಹೆಚ್ಚಾಗಲೂ ಕಾರಣವಾಗಿದೆ.

    ಈ ಹಿಂದೆ ಹುಲಿಗಳ ಹಾಗೂ ವನ್ಯಜೀವಿ ಕಳ್ಳಭೇಟೆಗಾರರ ಮೇಲೆ ಇಲಾಖೆ ಸಾಕಷ್ಟು ನಿಗಾ ಇಟ್ಟಿತು. ಇದರಿಂದ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಪ್ರವಾಸೋದ್ಯಮ ಚಟುವಟಿಕೆ ಕೂಡ ಹೆಚ್ಚಾಗಿದೆ. ದೇಶ ವಿದೇಶದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಅದೇ ರೀತಿ ಕಾಡಿನ ಸಂರಕ್ಷಣೆಯಲ್ಲೂ ಹುಲಿಗಳು ಮಹತ್ವದ ಪಾತ್ರ ವಹಿಸಿದೆ. ಇದನ್ನೂ ಓದಿ: ಇಡೀ ಬಿಜೆಪಿ ಪಕ್ಷ ಹಾಳಾಗಿ ಹೋಗುತ್ತೆ, ಅಣ್ಣಪ್ಪನ ಶಾಪ ಇದೆ: ಮಹೇಶ್ ಶೆಟ್ಟಿ ತಿಮರೋಡಿ ಕಿಡಿ

    ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಪ್ರವಾಸಿಗರೂ ಫುಲ್‌ಖುಷ್ ಆಗಿದ್ದಾರೆ. ಹುಲಿಗಳ ದರ್ಶನದಿಂದ ಪುಳಕಗೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಪೋಷಣೆ ಆಗುತ್ತಿರುವುದರಿಂದ `ಹುಲಿಗಳ ನಾಡು’ ಎಂದೇ ಕರೆಸಿಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಪ್ರತ್ಯಕ್ಷ!

    ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಪ್ರತ್ಯಕ್ಷ!

    ಚಾಮರಾಜನಗರ: ವನ್ಯಜೀವಿಗಳ ಸಾಂದ್ರತೆ ಹೆಚ್ಚಾಗಿರುವ ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತೆ ಕಪ್ಪು ಚಿರತೆ ಕಾಣಿಸಿಕೊಂಡಿದೆ.

    ಹೊಳೆಮತ್ತಿ ನೇಚರ್ ಫೌಂಡೇಷನ್‍ನ ಡಾ.ಸಂಜಯ್ ಗುಬ್ಬಿ ತಂಡದವರು ಚಿರತೆ ಅಧ್ಯಯನಕ್ಕೆ ನಡೆಸಿದ್ದ ಕ್ಯಾಮೆರಾ ಟ್ರ್ಯಾಪ್‍ನಲ್ಲಿ ಚಿರತೆ ಗೋಚರವಾಗಿದೆ. ಈ ಮುನ್ನ 2020ರ ಡಿಸೆಂಬರ್ ಇದೇ ಗಂಡು ಚಿರತೆ ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಈ ಚಿರತೆಗೆ 6 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಇದನ್ನೂ ಓದಿ: ಬ್ರಿಗೇಡ್ ರೋಡ್‍ನಲ್ಲಿ ಕಟ್ಟಡದ ಮೇಲಿಂದ ಬಿದ್ದು ಯುವತಿ ಸಾವು

    ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳ ನಡುವೆ 1.6 ಕಿ.ಮೀ ಅಗಲದ ವನ್ಯಜೀವಿ ಕಾರಿಡಾರ್ ಇದೆ. ಈ ಎರಡೂ ವನ್ಯಧಾಮಗಳಲ್ಲಿ ಈ ಚಿರತೆಯ ಚಲನವಲನ ದಾಖಲಾಗಿರುವುದು ಈ ಕಾರಿಡಾರ್‍ನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಈ ವನ್ಯಜೀವಿ ಕಾರಿಡಾರ್‍ನನ್ನು ಸಂರಕ್ಷಿಸುವಂತೆ ವನ್ಯ ಜೀವಿ ತಜ್ಞರ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಫ್ರೆಂಡ್‌ ಜೊತೆ ಜ್ಯೂಸ್ ಕುಡಿಯಲು ಬಂದಿದ್ದ ಯುವತಿ ಶಾಪಿಂಗ್‌ ಮಾಲ್‌ನಿಂದ ಆಯತಪ್ಪಿ ಬಿದ್ದು ಸಾವು

  • ಮರಿ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ತಾಯಿ ಆನೆ

    ಮರಿ ಸಾವನ್ನಪ್ಪಿದ್ದಕ್ಕೆ ಕಣ್ಣೀರಿಟ್ಟ ತಾಯಿ ಆನೆ

    ಚಾಮರಾಜನಗರ: ಕಾಯಿಲೆಯಿಂದ ಬಿಳಿಗಿರಿರಂಗನ ಬೆಟ್ಟದ ಹುಲಿರಕ್ಷಿತಾರಣ್ಯದ ಕೆ.ಗುಡಿ ವಲಯದಲ್ಲಿ ಮರಿಯಾನೆ ಸಾವನ್ನಪ್ಪಿದ್ದು, ಕರುಳಬಳ್ಳಿ ಕಳೆದುಕೊಂಡು ಸ್ಥಳದಲ್ಲಿ ತಾಯಿ ಆನೆ ರೋಧಿಸಿದೆ.

    ಅರಣ್ಯದಂಚಿನ ಜಮೀನೊಂದರಲ್ಲಿ ಮರಿಯಾನೆ ಮೃತಪಟ್ಟಿದೆ. ಸ್ಥಳಕ್ಕೆ ಬಿ.ಆರ್.ಟಿ. ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದ ಆನೆ ವಿದ್ಯುತ್ ಶಾಕಿಗೆ ಬಲಿ

    ಮೃತ ಮರಿಯಾನೆಯ ಮರಣೋತ್ತರ ಪರೀಕ್ಷೆ ಕೂಡ ನಡೆಸಲಾಗಿದೆ. ಈ ವೇಳೆ ತನ್ನ ಕರುಳಬಳ್ಳಿ ಕಳೆದುಕೊಂಡು ಸ್ಥಳದಲ್ಲಿ ತಾಯಿ ಆನೆಯ ರೋಧನೆ ಕಂಡುಬಂದಿದೆ. ಇದನ್ನೂ ಓದಿ: ಬಂಡೀಪುರದಲ್ಲಿ ಹುಲಿ ಗಣತಿ ಆರಂಭ: ಲೆಕ್ಕ ಹೇಗೆ ಹಾಕುತ್ತಾರೆ? ಇಲ್ಲಿದೆ ಪೂರ್ಣ ಮಾಹಿತಿ

  • ಆಹಾರ ಅರಸಿ ನಾಡಿಗೆ ಬಂದ ಆನೆ ವಿದ್ಯುತ್ ಶಾಕಿಗೆ ಬಲಿ

    ಆಹಾರ ಅರಸಿ ನಾಡಿಗೆ ಬಂದ ಆನೆ ವಿದ್ಯುತ್ ಶಾಕಿಗೆ ಬಲಿ

    ಚಾಮರಾಜನಗರ: ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆಯೊಂದು ವಿದ್ಯುತ್ ಶಾಕಿಗೆ ಬಲಿಯಾಗಿರುವ ಘಟನೆ ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗೌಡಹಳ್ಳಿ ಗ್ರಾಮದ ಮಹಾದೇವಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಆನೆ ಮೃತಪಟ್ಟಿದೆ. ಮಹಾದೇವಪ್ಪ 3 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದು, ಬೆಳೆ ರಕ್ಷಣೆಗಾಗಿ ಸೋಲಾರ್ ಬೇಲಿ ಅಳವಡಿಸಿದ್ದಾರೆ. ಪಕ್ಕದಲ್ಲೇ ಹಾದು ಹೋಗಿದ್ದ ವೈರ್ ತುಂಡಾಗಿ ಸೋಲಾರ್ ತಂತಿ ಮೇಲೆ ಬಿದ್ದಿದ್ದು, ಆಹಾರ ಅರಸಿ ಬಂದಿದ್ದ ಕಾಡಾನೆ ಸೋಲಾರ್ ಬೇಲಿ ಮುಟ್ಟಿದ್ದೇ ತಡ ವಿದ್ಯುತ್ ಶಾಕಿಗೆ ಪ್ರಾಣಬಿಟ್ಟಿದೆ.

    ಆನೆ ಸಾವಿಗೆ ಕೆಇಬಿ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ರೈತರು ಆರೋಪಿಸಿದ್ದು, ರೈತ ಮಹಾದೇವಪ್ಪ ವಿರುದ್ಧ ಎಫ್‍ಐಆರ್ ಏನಾದರೂ ದಾಖಲಿಸಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ. ಇದನ್ನೂ ಓದಿ:  ದುಡಿದ ಹಣವನ್ನ ಲತಾ ಮಂಗೇಶ್ಕರ್ ಚಿಕಿತ್ಸೆಗೆ ಮುಡಿಪಾಗಿಟ್ಟ ಆಟೋ ಚಾಲಕ

    ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸೆಸ್ಕ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.

  • ನೀಲಿಕುರುಂಜಿ ಹೂಗಳ ಚಾದರ – ಪುಣಜನೂರು, ಬೈಲೂರಿನ ಹಸಿರಿನ ಬೆಟ್ಟಗಳು ನೀಲಿಮಯ

    ನೀಲಿಕುರುಂಜಿ ಹೂಗಳ ಚಾದರ – ಪುಣಜನೂರು, ಬೈಲೂರಿನ ಹಸಿರಿನ ಬೆಟ್ಟಗಳು ನೀಲಿಮಯ

    ಚಾಮರಾಜನಗರ: ಹಸಿರಿನಿಂದ ಕಂಗೊಳಿಸುತ್ತಿರುವ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೈಲೂರು ವಲಯಗಳ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಂಡಿದ್ದು, ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸುತ್ತಿವೆ.

    ಪ್ರತಿ 12 ವರ್ಷಗಳಿಗೊಮ್ಮೆ ಅರಳುವ “ನೀಲಿಕುರುಂಜಿ” ಹೂಗಳು ಘಟ್ಟ ಪ್ರದೇಶಗಳಲ್ಲಿ ಅರಳಿ ನಿಂತಿದ್ದು, ಹಸಿರಿನ ಬೆಟ್ಟಕ್ಕೆ ನೀಲಿ ಚಾದರ ಹೊದಿಸಿವೆ. ಅಪರೂಪದ ಜೀವ ವೈವಿಧ್ಯ ತಾಣವಾಗಿರುವ ಬಿಆರ್‍ಟಿ ಪ್ರದೇಶದಲ್ಲಿ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಡನ್ನು ಭೂ ಲೋಕದ ಸ್ವರ್ಗವಾಗಿಸುತ್ತದೆ.  ಇದನ್ನೂ ಓದಿ:  ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

    ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ದರಿಂದ ಈ ಹೂವನ್ನು ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಅಂತ ಕೇರಳ ಹಾಗೂ ತಮಿಳುನಾಡಿಗರು ಕರೆಯುತ್ತಾರೆ. ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಬೆಟ್ಟದ ಹೂ ನೀಲಿಕುರುಂಜಿ ಸೊಬಗು ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಪರಿಚಯವಾದ ಮಹಿಳೆಗಾಗಿ ಗಡಿ ದಾಟಿದ ಪಾಕ್ ಯುವಕ

  • ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ – ರಣ ಮಳೆಗೆ ತತ್ತರಿಸಿದ ಮಂಗಳೂರು, ಚಾಮರಾಜನಗರ

    ರಾಜ್ಯದಲ್ಲಿ ಮುಂದುವರಿದ ವರುಣಾರ್ಭಟ – ರಣ ಮಳೆಗೆ ತತ್ತರಿಸಿದ ಮಂಗಳೂರು, ಚಾಮರಾಜನಗರ

    ಮಂಗಳೂರು/ಚಾಮರಾಜನಗರ: ರಾಜ್ಯದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಣ ಮಳೆಗೆ ಮಂಗಳೂರು, ಚಾಮರಾಜನಗರ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಸುರಿದಿದೆ. ತಡ ರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ತಗ್ಗು ಪ್ರದೇಶಗಳಿಗೆ  ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    rain

    ನಗರದ ಅಳಕೆ, ಕುದ್ರೋಳಿ ಸೇರಿದಂತೆ ಹಲವು ತಗ್ಗು ಪ್ರದೇಶದಲ್ಲಿನ ರಸ್ತೆಗಳು ಕೆರೆಯಂತಾಗಿದೆ. ಇನ್ನು ಮಳೆಯಿಂದಾಗಿ ಜಿಲ್ಲೆಯಲ್ಲಿನ ನದಿಗಳು ಮೈದುಂಬಿ ಹರಿದಿವೆ. ಧರ್ಮಸ್ಥಳ ಬಳಿ ಹೊಳೆಯ ನೀರು ರಸ್ತೆಗೆ ಬಂದು ವಾಹನ ಸವಾರರಿಗೆ ತೊಂದರೆಯುಂಟಾಗಿದೆ. ಭಾರೀ ನೀರಿನ ಹರಿವು ಹಿನ್ನಲೆ ಉಜಿರೆ-ಧರ್ಮಸ್ಥಳ ವಾಹನ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು. ಇಂದು ಹಾಗೂ ಇನ್ನೂ 2 ದಿನ ಕೂಡ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಜನ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇದನ್ನೂ ಓದಿ: ಚಿರು ನನ್ನ ಜೀವನ, ನನ್ನ ಬೆಳಕು: ಮೇಘನಾ ರಾಜ್

    rain

    ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ಸತತ ಮಳೆ ಸುರಿದಿದೆ. ಯಳಂದೂರು ತಾಲೂಕಿನ ಬಿಳಿಗಿರಿರಂಗ ಬೆಟ್ಟದಲ್ಲಿ ಮಳೆ ನೀರು ರಸ್ತೆಯಲ್ಲೇ ಉಕ್ಕಿ ಹರಿದಿದೆ. ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.

  • ಸಫಾರಿಗೆ ಹೋದ ಪ್ರವಾಸಿಗರಿಗೆ 2 ಆನೆಗಳಿಂದ ದಾಳಿ

    ಸಫಾರಿಗೆ ಹೋದ ಪ್ರವಾಸಿಗರಿಗೆ 2 ಆನೆಗಳಿಂದ ದಾಳಿ

    – ಮೈಜುಂ ಎನಿಸುವ ವೀಡಿಯೋ

    ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರ ಮೇಲೆ ಎರಡು ಆನೆ ದಾಳಿ ಮಾಡಿದ ಘಟನೆ ನಡೆದಿದೆ.

    ಸಫಾರಿ ವಾಹನದ ಹಿಂದೆ ಒಂದು, ಮುಂದೆ ಒಂದು ಕಾಡಾನೆ ದಾಳಿ ಮಾಡಿದೆ. ಸಫಾರಿ ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಈ ಆನೆ ದಾಳಿ ಮಾಡಿದ ವೀಡಿಯೋ ಎಂಥವರನ್ನು ಒಮ್ಮೆ ಮೈಜುಂ ಎನಿಸುತ್ತದೆ.

    ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿ ಸಫಾರಿ ಜೋನ್‍ನ ಭತ್ತದ ಗದ್ದೆ ಎಂಬಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಎರಡು ಕಾಡಾನೆ ದಾಳಿ ಮಾಡಿವೆ. ಸಫಾರಿ ವಾಹನ ಚಾಲಕ ನಾಗರಾಜು ಆನೆ ದಾಳಿಗೆ ಅಂಜದೆ ನಿಧಾನವಾಗಿ ವಾಹನ ಚಲಾಯಿಸಿಕೊಂಡು ಬಂದು ಕಾಡಾನೆಗಳಿಂದ ತಪ್ಪಿಸಿಕೊಂಡಿದ್ದಾರೆ.

    ಸಫಾರಿ ವಾಹನದ ಹಿಂದೆ,ಮುಂದೆ ಆನೆ ಅಟ್ಯಾಕ್ ಮಾಡಿದ್ದು, ಹೆದರದೆ ಮುಂದೆ ಬರುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸಿ ವಾಹನ ಚಲಾಯಿಸಿದ ನಾಗರಾಜು ಕರ್ತವ್ಯ ನಿರ್ವಹಣೆಗೆ ಪ್ರವಾಸಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ನಂಬಿ ಸಫಾರಿಗೆ ಪ್ರವಾಸಿಗರು ಬರುತ್ತಾರೆ. ನಮ್ಮ ಪ್ರಾಣ ಹೋದರೂ ಕೂಡ ಪ್ರವಾಸಿಗರ ರಕ್ಷಣೆ ನಮ್ಮ ಹೊಣೆ ಎಂದು ಚಾಲಕ ನಾಗರಾಜು ಹೇಳಿದ್ದಾರೆ.

  • ಬಿಳಿಗಿರಿರಂಗನ ಬೆಟ್ಟದ ಸುತ್ತೂರು ಶಾಖಾ ಮಠಕ್ಕೆ ರಂಜನ್ ಗೊಗೊಯ್ ಭೇಟಿ

    ಬಿಳಿಗಿರಿರಂಗನ ಬೆಟ್ಟದ ಸುತ್ತೂರು ಶಾಖಾ ಮಠಕ್ಕೆ ರಂಜನ್ ಗೊಗೊಯ್ ಭೇಟಿ

    ಚಾಮರಾಜನಗರ: ನಿವೃತ್ತಿ ಅಂಚಿನಲ್ಲಿ ರಾಮ ಜನ್ಮಭೂಮಿ ಪ್ರಕರಣದ ತೀರ್ಪು ನೀಡಿ ಗಮನ ಸೆಳೆದಿದ್ದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದರು.

    ಭೇಟಿ ನೀಡಿದ ವೇಳೆ ಸುತ್ತೂರು ಮಠದಲ್ಲಿ ಆಶ್ರಯ ಪಡೆದಿರುವ ಅಸ್ಸಾಂ ರಾಜ್ಯದ ವಿದ್ಯಾರ್ಥಿನಿಯರು ರಂಜನ್ ಗೊಗೊಯ್ ಅವರನ್ನು ಬರಮಾಡಿಕೊಂಡರು. ಬಳಿಕ ಗೊಗೊಯ್ ದಂಪತಿಗೆ ಪೂರ್ಣಕುಂಭಸ್ವಾಗತ ಕೋರಲಾಯಿತು.

    ಕೆಲ ಹೊತ್ತು ಸುತ್ತೂರು ಶ್ರೀಗಳೊಂದಿಗೆ ರಂಜನ್ ಗೊಗೊಯ್ ಸಮಾಲೋಚನೆ ನಡೆಸಿದರು. ಬಳಿಕ ಅಸ್ಸಾಂ ರಾಜ್ಯದ ವಿದ್ಯಾರ್ಥಿನಿಯರು ಬಸವಣ್ಣನ ವಚನಗಳನ್ನು ಹೇಳುವ ಮೂಲಕ ರಂಜನ್ ಗೊಗೊಯ್ ಅವರ ಗಮನ ಸೆಳೆದರು.

    ಇದೇ ವೇಳೆ ಸುತ್ತೂರು ಶ್ರೀಗಳು, ಗೊಗೊಯ್ ದಂಪತಿಗೆ ಮೈಸೂರು ಪೇಟಾ ತೊಡಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿದರು.