Tag: ಬಿಲ್‌ ಬೋರ್ಡ್‌

  • ಧರೆಗುರುಳಿದ ಬೃಹತ್ ಬಿಲ್ ಬೋರ್ಡ್- ಸಾವಿನ ಸಂಖ್ಯೆ 14ಕ್ಕೆ ಏರಿಕೆ

    ಧರೆಗುರುಳಿದ ಬೃಹತ್ ಬಿಲ್ ಬೋರ್ಡ್- ಸಾವಿನ ಸಂಖ್ಯೆ 14ಕ್ಕೆ ಏರಿಕೆ

    ಮುಂಬೈ: ಬಿರುಗಾಳಿ ಸಹಿತ ಮಳೆಯಿಂದಾಗಿ ಬೃಹತ್ ಜಾಹಿರಾತು ಫಲಕ ಬಿದ್ದ ಪರಿಣಾಮ 14 ಜನ ಸಾವನ್ನಪ್ಪಿದ ಘಟನೆ ಘಾಟ್‍ಕೋಪರ್‍ನಲ್ಲಿ ನಡೆದಿದೆ. ಘಟನೆಯಲ್ಲಿ 60 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೆಟ್ರೋಲ್ ಬಂಕ್ (Petrol Bunk) ಎದುರಗಡೆ ಬೃಹತ್ ಜಾಹೀರಾತು ಫಲಕವನ್ನು (Bill Board) ನಿಲ್ಲಿಸಲಾಗಿತ್ತು. ಕಬ್ಬಿಣದ ಬಿಲ್ ಬೋರ್ಡ್ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಕಾರುಗಳ ಮೇಲೆ ಬಿದ್ದ ಪರಿಣಾಮ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಿಹಾರ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ನಿಧನ

    ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮೃತ ಕುಟುಂಬದ ಸದಸ್ಯಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮುಂಬೈನಲ್ಲಿರುವ ಎಲ್ಲಾ ಹೋಡಿರ್ಂಗ್‍ಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.

    ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯ ಸರ್ಕಾರವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಂದು ಜೈಲಿನಿಂದ ರಿಲೀಸ್‌ ಆಗಲಿದ್ದಾರೆ ರೇವಣ್ಣ

  • ಮುಂಬೈನಲ್ಲಿ ಬಿರುಗಾಳಿಗೆ ಉರುಳಿತು ಬೃಹತ್‌ ಬಿಲ್‌ ಬೋರ್ಡ್‌ – 8 ಸಾವು, 59 ಮಂದಿಗೆ ಗಾಯ

    ಮುಂಬೈನಲ್ಲಿ ಬಿರುಗಾಳಿಗೆ ಉರುಳಿತು ಬೃಹತ್‌ ಬಿಲ್‌ ಬೋರ್ಡ್‌ – 8 ಸಾವು, 59 ಮಂದಿಗೆ ಗಾಯ

    ಮುಂಬೈ: ಸೋಮವಾರ ಸಂಜೆ ಮುಂಬೈನ (Mumbai) ಘಾಟ್‌ಕೋಪರ್‌ನಲ್ಲಿ ಬಿರುಗಾಳಿಗೆ ಬೃಹತ್‌ ಜಾಹೀರಾತು ಫಲಕ (Bill Board) ಪೆಟ್ರೋಲ್‌ ಬಂಕ್‌ ಮೇಲೆ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ.

    ಅವಶೇಷಗಳ ಅಡಿಯಲ್ಲಿ 20 ಜನರು ಸಿಲುಕಿರುವ ಶಂಕೆ ಇದ್ದು 59 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೆಟ್ರೋಲ್‌ ಬಂಕ್‌ (Petrol Bunk) ಎದುರಗಡೆ ಬೃಹತ್‌ ಜಾಹೀರಾತು ಫಲಕವನ್ನು ನಿಲ್ಲಿಸಲಾಗಿತ್ತು. ಕಬ್ಬಿಣದ ಬಿಲ್‌ ಬೋರ್ಡ್‌ ಪೆಟ್ರೋಲ್‌ ಬಂಕ್‌ ಬಳಿ ನಿಂತಿದ್ದ ಕಾರುಗಳ ಮೇಲೆ ಬಿದ್ದ ಪರಿಣಾಮ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸ್ಥಳಕ್ಕೆ ಆಗಮಿಸಿ ಅವಶೇಷಗಳಡಿ ಸಿಲುಕಿರುವ ಬದುಕುಳಿದವರಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಂಕರಾಚಾರ್ಯರು ಸಂಚರಿಸಿದ್ದ ರಸ್ತೆಯಲ್ಲಿ ಮೋದಿ 6 ಕಿ.ಮೀ ರೋಡ್‌ ಶೋ – ಮಂಗಳವಾರವೇ ನಾಮಪತ್ರ ಸಲ್ಲಿಕೆ ಯಾಕೆ?

    ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾತನಾಡಿ, ಜನರನ್ನು ರಕ್ಷಿಸಲು ಆದ್ಯತೆ ನೀಡಲಾಗಿದ್ದು ಗಾಯಗೊಂಡವರಿಗೆ ಸರ್ಕಾರ ಚಿಕಿತ್ಸೆ ನೀಡಲಿದೆ. ಮೃತ ಕುಟುಂಬದ ಸದಸ್ಯಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮುಂಬೈನಲ್ಲಿರುವ ಎಲ್ಲಾ ಹೋರ್ಡಿಂಗ್‌ಗಳನ್ನು ಪರಿಶೀಲಿಸಲು ನಾನು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ.

    ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜ್ಯ ಸರ್ಕಾರವು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ.