Tag: ಬಿಲ್ಲು ಬಾಣ

  • ತುಂಬು ಗರ್ಭಿಣಿ ಮೇಲೆ ಬಾಣ ಬಿಟ್ಟ ದುಷ್ಕರ್ಮಿಗಳು- ಪವಾಡ ರೀತಿಯಲ್ಲಿ ಮಗು ಪಾರು!

    ತುಂಬು ಗರ್ಭಿಣಿ ಮೇಲೆ ಬಾಣ ಬಿಟ್ಟ ದುಷ್ಕರ್ಮಿಗಳು- ಪವಾಡ ರೀತಿಯಲ್ಲಿ ಮಗು ಪಾರು!

    ಲಂಡನ್: ಭಾರತೀಯ ಮೂಲದ ಗರ್ಭಿಣಿಯ ಮೇಲೆ ಲಂಡನ್ ನಲ್ಲಿ ದುಷ್ಕರ್ಮಿಗಳು ಬಿಲ್ಲು-ಬಾಣದಿಂದ ದಾಳಿ ಮಾಡಿದ ಮನಕಲಕುವ ಘಟನೆಯೊಂದು ನಡೆದಿದೆ.

    ಈ ಘಟನೆ ಸೋಮವಾರ ಸಂಜೆ ಪೂರ್ವ ಲಂಡನ್ ನ ಇಲ್ಫೋರ್ಡ್ ಪ್ರದೇಶದಲ್ಲಿ ನಡೆದಿದ್ದು, ಮೃತ ಗರ್ಭಿಣಿಯನ್ನು 35 ವರ್ಷದ ದೇವಿ ಉನ್ಮಥಲ್ಲೆಗಡೋ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹೊಟ್ಟೆಯಲ್ಲಿದ್ದ ಮಗು ಪವಾಡವೆಂಬಂತೆ ಪಾರಾಗಿದೆ.

    ಏನಿದು ಘಟನೆ?:
    ತಾವು ವಾಸಿಸುತ್ತಿದ್ದ ಪ್ರದೇಶದ ಶೆಡ್ ನಲ್ಲಿ ದುಷ್ಕರ್ಮಿಗಳು ಅಡಗಿ ಕುಳಿತಿದ್ದರು. ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ನಾನು ನನ್ನ ಪತ್ನಿ ಹಾಗೂ ಮಕ್ಕಳಿಗೆ ಎಚ್ಚರಿಕೆಯಲ್ಲಿರುವಂತೆ ಹೇಳಲು ಮನೆಗೆ ಓಡಿದೆ. ಆದ್ರೆ ಅದಾಗಲೇ ದುಷ್ಕರ್ಮಿಗಳು ಆಕೆಯ ಮೇಲೆ ಬಿಲ್ಲು-ಬಾಣ ಪ್ರಯೋಗಿಸಿದ್ದಾರೆ.

    ದುಷ್ಕರ್ಮಿಗಳು ಬಿಟ್ಟ ಬಾಣ ಆಕೆಯ ಹೃದಯ, ಕಿಬ್ಬೊಟ್ಟೆಗೆ ಚುಚ್ಚಿದ್ದು, ಗಂಭೀರ ಗಾಯಗಳಾಗಿತ್ತು. ಪರಿಣಾಮ ತೀವ್ರ ರಕ್ತಸ್ರಾವ ಉಂಟಾಗಿ ಆಕೆ ಕುಸಿದು ಬಿದ್ದಿದ್ದಳು. ಇದನ್ನು ಕಂಡು ದಂಗಾದ ನಾನು ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದೆ. ಆದ್ರೆ ಅದಾಗಲೇ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದು, ಮಗು ಅಪಾಯದಿಂದ ಪಾರಾಗಿದೆ ಅಂತ ಹೇಳಿದ್ದಾರೆ. ಆದ್ರೆ ಆಕೆಯ ಮೇಲೆ ಚುಚ್ಚಿದ್ದ ಬಾಣವನ್ನು ವೈದ್ಯರು ಹೊರತೆಗೆಯಲಿಲ್ಲ. ಯಾಕಂದ್ರೆ ಇದರಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆಗಳಿತ್ತು.

    ಸದ್ಯ ಮಗುವನ್ನು ಪತ್ನಿಯ ಹೊಟ್ಟೆಯಿಂದ ಹೊರ ತೆಗೆದು ಚಿಕಿತ್ಸೆ ನೀಡಲಾಗುತ್ತಿದ್ದು, ಮಗು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ ಅಂತ 2ನೇ ಪತಿ ಇಮ್ತಿಯಾಜ್ ಮಾಹಿತಿ ನೀಡಿದ್ದಾರೆ.

    ಸನಾ ಒಬ್ಬಳು ಒಳ್ಳೆಯ ತಾಯಿ ಹಾಗೂ ಪತ್ನಿಯಾಗಿದ್ದಾಳೆ. ನಾವಿಬ್ಬರೂ ಕಳೆದ 7 ವರ್ಷಗಳಿಂದ ಜೊತೆಯಾಗಿದ್ದೇವೆ. ಸದ್ಯ ಇದೀಗ ಪತ್ನಿ ನನ್ನ ಜೊತೆ ಇಲ್ಲವೆಂದಾಗ ನಿಜಕ್ಕೂ ನನಗೆ ಆಘಾತವಾಗಿದೆ ಅಂತ ಇಮ್ತಿಯಾಜ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇಮ್ತಿಯಾಜ್ ಕೆಲ ದೂರದಿಂದಲೇ ಕೂಗುತ್ತಾ ಬರುತ್ತಿದ್ದ ಅಂತ ಘಟನೆಯ ಬಳಿಕ ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.

    ಮೊದಲ ಪತಿಯಿಂದ್ಲೇ ಕೃತ್ಯ?:
    ದೇವಿ, 50 ವರ್ಷದ ರಾಮನ್ಡೊಗೆ ಉನ್ಮಥಲ್ಲೆಗಡೋ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ 18, 14 ಹಾಗೂ 12 ವರ್ಷದ ಮೂವರು ಮಕ್ಕಳಿದ್ದಾರೆ. ಕೆಲ ಸಮಯದ ಬಳಿಕ ರಾಮನ್ಡೊಗೆ ವಿಚ್ಚೇದನ ನೀಡಿ ಇಮ್ತಿಯಾಜ್ ಮೊಹಮ್ಮದ್ ಎಂಬಾತನನ್ನು ದೇವಿ ವರಿಸಿದ್ದರು. ಮದುವೆಯ ಬಳಿಕ ದೇವಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು, ತನ್ನ ಹೆಸರನ್ನು ಸನಾ ಮೊಹಮ್ಮದ್ ಎಂಬುದಾಗಿ ಬದಲಾಯಿಸಿಕೊಂಡಿದ್ದರು ಎಂಬುದಾಗಿ ವರದಿಯಾಗಿದೆ.

    ಸನಾ ಹಾಗೂ ಇಮ್ತಿಯಾಜ್ ದಂಪತಿ 5 ಹಾಗೂ 2 ವರ್ಷದ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಸದ್ಯ ಈಕೆ ತುಂಬು ಗರ್ಭಿಣಿಯಾಗಿದ್ದು, ಘಟನೆಯ ಬಳಿಕ ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ರಕ್ಷಿಸಲಾಗಿದೆ. ಅಲ್ಲದೇ ಮಗುವಿಗೆ ಇಬ್ರಾಹಿಂ ಎಂದು ಹೆಸರಿಡಲಾಗಿದೆ.

    ಆಕೆಯ ಮೊದಲ ಪತಿಯೇ ಈ ಕೃತ್ಯ ಎಸಗಿರುವುದಾಗಿ ಹೇಳಲಾಗುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ರಾಮನ್ಡೊಗೆ ಉನ್ಮಥಲ್ಲೆಗಡೋ ಲಂಡನ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಕ್ಷಣೆಗಾಗಿ ಶಾಲೆಗೆ ಬಿಲ್ಲು ಬಾಣವನ್ನು ಒಯ್ಯುವ ಮಕ್ಕಳು

    ರಕ್ಷಣೆಗಾಗಿ ಶಾಲೆಗೆ ಬಿಲ್ಲು ಬಾಣವನ್ನು ಒಯ್ಯುವ ಮಕ್ಕಳು

    ರಾಂಚಿ: ಜಾರ್ಖಂಡ್‍ನ ಕೈಗಾರಿಕಾ ಪಟ್ಟಣ ಜಮ್‍ಶೆಡಪುರ ಬಳಿಯ ಪೋಚ್ಪಾಣಿ ಎಂಬ ಹಳ್ಳಿಯೊಂದರಲ್ಲಿ ಶಾಲೆಗೆ ಮಕ್ಕಳು ಮಾವೋವಾದಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಲ್ಲು ಬಾಣವನ್ನು ತೆಗೆದುಕೊಂದು ಹೋಗುತ್ತಾರೆ.

    ಪೋಚ್ಪಾಣಿಯು ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದ ಗಡಿಭಾಗದಲ್ಲಿದೆ. ಇದೊಂದು ಬುಡಕಟ್ಟು ಜನಾಂಗದವರು ವಾಸಿಸುವ ಸ್ಥಳವಾಗಿದ್ದು, ಇಲ್ಲಿ ಮಾವೋವಾದಿಗಳ ಕಾಟ ತುಸು ಹೆಚ್ಚಾಗಿಯೇ ಇರುತ್ತದೆ. ಈ ಭಾಗದಿಂದ ಶಾಲೆಗೆ ಹೋಗಬೇಕು ಎಂದರೆ ದಟ್ಟ ಅರಣ್ಯವನ್ನು ದಾಟಿ ಹೋಗಬೇಕು ಅಲ್ಲಿ ಮಾವೋವಾದಿಗಳು ಇರುತ್ತಾರೆ. ಅವರ ಭಾಷೆ ನಮಗೆ ಅರ್ಥವಾಗೋಲ್ಲ. ಅವರು ಬಿಲ್ಲು ಬಾಣಕ್ಕೆ ಹೆದರುತ್ತಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

    ಮಾವೋವಾದಿಗಳು ಯಾವಾಗ ಆಕ್ರಮಣ ಮಾಡುತ್ತಾರೆ ಅಂತಾ ಗೊತ್ತಾಗಲ್ಲ. ಅವರಿಂದ ರಕ್ಷಣೆಗಾಗಿ ಈ ಭಾಗದ ಮಕ್ಕಳು ಶಾಲೆಗೆ ಹೋಗುವಾಗ ತಮ್ಮೊಡನೆ ಬಿಲ್ಲು ಬಾಣವನ್ನು ಕೊಂಡೊಯ್ಯುತ್ತಾರೆ ಎಂದು ಬುಡಕಟ್ಟಿನ ಬಾಲಕನೊಬ್ಬ ಹೇಳುತ್ತಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews